ಪೋಸ್ಟ್‌ಗಳು

ಮಾರ್ಚ್, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭಾರತದ ಆರ್ಥಿಕತೆಯ ಬೆನ್ನೆಲುಬಾದ ಆರ್‌ಬಿಐ – ಏಪ್ರಿಲ್ 1 ಸ್ಥಾಪನಾ ದಿನಾಚರಣೆ

ಇಮೇಜ್
  ಶಿವಮೊಗ್ಗ, ಏ.1: ಭಾರತದ ಹಣಕಾಸು ವ್ಯವಸ್ಥೆಯ ಹೃದಯವಾಗಿರುವ Reserve Bank of India (ಆರ್‌ಬಿಐ) ತನ್ನ ಸ್ಥಾಪನಾ ದಿನವನ್ನು ಇಂದು ದೇಶಾದ್ಯಂತ ಆಚರಿಸಿಕೊಳ್ಳುತ್ತಿದೆ. 1935ರಲ್ಲಿ 1934ರ ಆರ್‌ಬಿಐ ಕಾಯ್ದೆಯಡಿ ಸ್ಥಾಪಿತವಾದ ಈ ಸಂಸ್ಥೆ, ದೇಶದ ಆರ್ಥಿಕ ಸ್ಥಿರತೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಆರ್‌ಬಿಐ ಪ್ರಾರಂಭದಲ್ಲಿ ಕೊಲ್ಕತ್ತಾದಲ್ಲಿ ಕಾರ್ಯನಿರ್ವಹಿಸಿ, ನಂತರ 1937ರಲ್ಲಿ ಮುಂಬೈಗೆ ಸ್ಥಳಾಂತರಗೊಂಡಿತು. 1949ರಲ್ಲಿ ರಾಷ್ಟ್ರೀಕರಣಗೊಂಡ ನಂತರ ಇದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಅಧೀನಕ್ಕೆ ಬಂತು. ಡಾ. ಬಿ ಅರ್ ಅಂಬೇಡ್ಕರ್ ಆರ್ಥಿಕ ಚಿಂತನೆಗಳ ಪ್ರಭಾವ ಆರ್‌ಬಿಐ ಸ್ಥಾಪನೆಯ ಹಿಂದೆ ಸಂವಿಧಾನ ಶಿಲ್ಪಿ ಡಾ ಬಿ ಅರ್ ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು ಮಹತ್ವದ ಪಾತ್ರವಹಿಸಿದ್ದವು. ಸಂವಿಧಾನ ಶಿಲ್ಪಿಯಾಗಿ ಪ್ರಸಿದ್ಧರಾದ ಅಂಬೇಡ್ಕರ್, ಆರ್ಥಿಕ ತಜ್ಞರಾಗಿ ಕೂಡ ಗುರುತಿಸಿಕೊಂಡಿದ್ದರು. 1923ರಲ್ಲಿ ಪ್ರಕಟವಾದ “The Problem of the Rupee: Its Origin and Its Solution” ಎಂಬ ಕೃತಿಯಲ್ಲಿ ಅವರು ಭಾರತದ ಕರೆನ್ಸಿ ವ್ಯವಸ್ಥೆಯ ದೌರ್ಬಲ್ಯಗಳನ್ನು ವಿಶ್ಲೇಷಿಸಿ, ಸ್ಥಿರ ಹಣಕಾಸು ವ್ಯವಸ್ಥೆಗೆ ಅಗತ್ಯವಾದ ಸುಧಾರಣೆಗಳನ್ನು ಸೂಚಿಸಿದ್ದರು. ಕೇಂದ್ರ ಬ್ಯಾಂಕ್ ಪರಿಕಲ್ಪನೆಗೆ ಬುನಾದಿ 1926ರಲ್ಲಿ ಸ್ಥಾಪಿಸಲಾದ ಹಿಲ್ಟನ್ ಯಂಗ್ ಆಯೋಗದ ಮೇಲೆ ಅಂಬೇಡ್ಕರ್ ಅವರ ಆಲೋಚನೆಗಳ...

ಶಿವಮೊಗ್ಗ ತುಂಗಾನಗರ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಗೈರುಹಾಜರಿ: ತಕ್ಷಣ ಕ್ರಮಕ್ಕೆ ಆಗ್ರಹ

ಇಮೇಜ್
  ಶಿವಮೊಗ್ಗ, ಮಾರ್ಚ್ 31: ಶಿವಮೊಗ್ಗ ನಗರದ 31ನೇ ವಾರ್ಡ್ ತುಂಗಾನಗರದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮುಖ್ಯ ವೈದ್ಯಾಧಿಕಾರಿ ಗೈರುಹಾಜರಿರುವುದು ಹಾಗೂ ವೈದ್ಯರ ನಿರ್ಲಕ್ಷ್ಯದಿಂದ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಮನವಿ ಸಲ್ಲಿಸಲಾಗಿದೆ. ಶಿವಮೊಗ್ಗ ಪೀಸ್ ಆರ್ಗನೈಸೇಶನ್(ರಿ) ವತಿಯಿಂದ ರಿಯಾಜ್ ಅಹಮದ್ ಅವರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಸೇವೆಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ದೂರಿದ್ದಾರೆ. ಮನವಿಯಲ್ಲಿ ತಿಳಿಸಿರುವಂತೆ, ಮುಖ್ಯ ವೈದ್ಯಾಧಿಕಾರಿ ನಿಯಮಿತವಾಗಿ ಹಾಜರಾಗದೇ ಇರುವುದರಿಂದ ಅಸಿಸ್ಟೆಂಟ್ ಸಿಬ್ಬಂದಿಗಳೇ ಕಾರ್ಯನಿರ್ವಹಿಸುತ್ತಿದ್ದು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಕೆಲವೊಮ್ಮೆ ವೈದ್ಯರು ಇದ್ದರೂ ಸಹ ರೋಗಿಗಳನ್ನು ಪರಿಶೀಲನೆ ಮಾಡದೇ ಕೇವಲ ಚೀಟಿ ಬರೆದು ಜಿಲ್ಲಾ ಮೆಗನ್ ಆಸ್ಪತ್ರೆಗೆ ಕಳುಹಿಸುವುದು ಸಾಮಾನ್ಯವಾಗಿದ್ದು, ಇದರಿಂದ ಸಾರ್ವಜನಿಕರಿಗೆ ಅನಗತ್ಯ ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಲಾಗಿದೆ. ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳಿಗೆ ವಿಶೇಷವಾಗಿ ತೊಂದರೆ ಉಂಟಾಗುತ್ತಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದ ಕಾರಣ ಬಡಜನರು ಖಾಸಗಿ ಆಸ್ಪತ್ರೆಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಸಾರ್ವಜನಿಕರಿಗೆ ಆರ್ಥಿ...

ರಕ್ತದಾನ ಅತ್ಯಂತ ಶ್ರೇಷ್ಠ ಸಮಾಜಮುಖಿ ಕಾರ್ಯ

ಇಮೇಜ್
ಶಿವಮೊಗ್ಗ: ರಕ್ತದಾನ ಮಾಡುವುದರಿಂದ ಹೃದಯಾಘಾತ ಪ್ರಮಾಣ ಕಡಿಮೆ ಆಗುವ ಜತೆಯಲ್ಲಿ ಸದಾ ಆರೋಗ್ಯದಿಂದ ಇರಲು ಸಾಧ್ಯ ಎಂದು ಜೆಸಿಐ ವಲಯ ಮಾಜಿ ಉಪಾಧ್ಯಕ್ಷ ಸತೀಶ್ ಚಂದ್ರ ಹೇಳಿದರು. ನಗರದ ಎಲ್‌ಎಲ್‌ಆರ್ ರಸ್ತೆಯಲ್ಲಿರುವ ಎಸ್‌ಎಸ್ ಎಂಟರ್‌ಪ್ರೈಸಸ್ ಆವರಣದಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ, ಪರಿಪೂರ್ಣ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ವೃತ್ತಿಯ ಜೊತೆಗೆ ಸಮಾಜ ಸೇವೆಯು ಅತಿ ಮುಖ್ಯ. ರಕ್ತದಾನ ಮಾಡುವುದು ಪುಣ್ಯದ ಕೆಲಸ. ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ರಕ್ತದ ಬೇಡಿಕೆ ಇದ್ದು, ಅವುಗಳನ್ನು ನೀಗಿಸಲು ಇಂತಹ ರಕ್ತದಾನ ಶಿಬಿರ ತುಂಬಾ ಅವಶ್ಯಕತೆ ಇದೆ ಎಂದು ತಿಳಿಸಿದರು. ಮೂಢನಂಬಿಕೆಯಿಂದ ಸಾಕಷ್ಟು ಜನ ರಕ್ತದಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ದಾನದಿಂದ ಹೊಸ ರಕ್ತ ನಮ್ಮ ದೇಹದಲ್ಲಿ ಉತ್ಪತ್ತಿಯಾಗಿ ಸದಾ ಆರೋಗ್ಯವಂತರಾಗಿರುತ್ತೇವೆ ಎಂದು ಹೇಳಿದರು. ಸ್ವಯಂಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ ಮಾಜಿ ಅಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ನಾವು ಮಾಡುವ ಪವಿತ್ರವಾದ ರಕ್ತದಾನದಿಂದ ನಾಲ್ಕು ಜನರ ಪ್ರಾಣವನ್ನು ಉಳಿಸಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬ ಯುವಜನರು ರಕ್ತದಾನ ಮಾಡುವುದರ ಮುಖಾಂತರ ಸದೃಢವಾದ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡೋಣ. ರಕ್ತದಾನದಿಂದ ಏಕಾಗ್ರತೆ ಜಾಸ್ತಿಯಾಗುತ್ತದೆ ಎಂದು ಹೇಳಿದರು. ಮೈತ್ರಿ ಮೈ ಜುವೆಲರ್ಸ್ ಸಿಇಒ ಸೆಂಥಿಲ್ ವೇಲನ್ ಮಾತನ...

ಶಿವಮೊಗ್ಗದಲ್ಲಿ ಮಕ್ಕಳಿಗಾಗಿ “ಸಮ್ಮರ್ ಕ್ಲಬ್” ಆರಂಭ – ವಿವಿಧ ಸೃಜನಾತ್ಮಕ ಚಟುವಟಿಕೆಗಳು

ಇಮೇಜ್
ಶಿವಮೊಗ್ಗ: ಬೇಸಿಗೆ ರಜೆಗಳನ್ನು ಮಕ್ಕಳಿಗೆ ಸಾರ್ಥಕವಾಗಿ ಕಳೆಯಲು ವಿನೋಬನಗರದಲ್ಲಿರುವ Pebbles Preschool ವತಿಯಿಂದ “Summer Club” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಶಿಬಿರವು ಏಪ್ರಿಲ್ 1ರಿಂದ ಏಪ್ರಿಲ್ 15ರವರೆಗೆ ನಡೆಯಲಿದೆ. 2 ರಿಂದ 10 ವರ್ಷ ವಯಸ್ಸಿನ ಮಕ್ಕಳಿಗಾಗಿ ರೂಪಿಸಲಾದ ಈ ಶಿಬಿರದಲ್ಲಿ ವಿವಿಧ ಆಕರ್ಷಕ ಚಟುವಟಿಕೆಗಳನ್ನು ಒಳಗೊಂಡಿದೆ. ಮಕ್ಕಳ ಸೃಜನಶೀಲತೆ ಮತ್ತು ಮನೋವಿಕಾಸವನ್ನು ಉತ್ತೇಜಿಸುವ ಉದ್ದೇಶದಿಂದ DIY & Crafting, STEM ಚಟುವಟಿಕೆಗಳು, Brain Gym, Photography, Fire-free Recipes, Zumba Sessions ಹಾಗೂ ಮನರಂಜನಾ ಆಟಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳು ಆಟದ ಮೂಲಕ ಕಲಿಯುವಂತೆ ವಿನ್ಯಾಸಗೊಳಿಸಿದ ಈ ಶಿಬಿರವು ಅವರ ಆತ್ಮವಿಶ್ವಾಸ, ಕಲ್ಪನೆಶಕ್ತಿ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಪ್ರಥಮ ಬ್ಯಾಚ್‌ಗೆ ಈಗಾಗಲೇ ನೋಂದಣಿ ಪ್ರಾರಂಭವಾಗಿದ್ದು, ಆಸಕ್ತ ಪೋಷಕರು ತಮ್ಮ ಮಕ್ಕಳಿಗೆ ಶೀಘ್ರದಲ್ಲೇ ಆಸನಗಳನ್ನು ಕಾಯ್ದಿರಿಸಬಹುದು ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು: 9663332210

ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿರುವ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ಗೌರವಾನ್ವಿತ ಅಧಿಕಾರಿಗಳು ಹಾಗೂ ಸಿಬ್ಬಂದಿ

ಇಮೇಜ್
2025ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿರುವ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ಗೌರವಾನ್ವಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹಾರ್ದಿಕ ಅಭಿನಂದನೆಗಳು ಶಿವಮೊಗ್ಗ ಜಿಲ್ಲೆಗೆ ಹೆಮ್ಮೆ ತರುವಂತೆ, ತಮ್ಮ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಮತ್ತು ಸಾರ್ವಜನಿಕ ಸೇವೆಯ ಮೂಲಕ ಗಮನಾರ್ಹ ಸಾಧನೆ ಮಾಡಿರುವ ಶ್ರೀ ಎಸ್. ರಮೇಶ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶ್ರೀ ಅಣ್ಣಪ್ಪ ಎನ್., ಹೆಡ್ ಕಾನ್ಸ್ಟೇಬಲ್ (71), ಹೊಳೆಹೊನ್ನೂರು ಪೊಲೀಸ್ ಠಾಣೆ, ಶ್ರೀ ರಾಘವೇಂದ್ರ ಜಿ., ಹೆಡ್ ಕಾನ್ಸ್ಟೇಬಲ್ (336), ಹಳೇನಗರ ಪೊಲೀಸ್ ಠಾಣೆ ಇವರು ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿರುವುದು ಅತ್ಯಂತ ಸಂತಸದ ಸಂಗತಿ. ಇವರ ಈ ಸಾಧನೆ ಪೊಲೀಸ್ ಇಲಾಖೆಯ ಗೌರವ ಹೆಚ್ಚಿಸುವುದರ ಜೊತೆಗೆ, ಇತರ ಸಿಬ್ಬಂದಿಗೂ ಪ್ರೇರಣೆಯಾಗುತ್ತದೆ. ಸಮಾಜದ ಶಾಂತಿ, ಭದ್ರತೆ ಮತ್ತು ನ್ಯಾಯದ ಕಾಪಾಡುವಲ್ಲಿ ಇವರ ಪಾತ್ರ ಶ್ಲಾಘನೀಯವಾಗಿದೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಈ ಮೂವರು ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಹಾರ್ದಿಕ ಶುಭಾಶಯಗಳನ್ನು ಕೋರಿರುತ್ತರೆ. ಇವರ ಮುಂದಿನ ಸೇವಾ ಜೀವನದಲ್ಲಿ ಇನ್ನಷ್ಟು ಯಶಸ್ಸುಗಳು ದೊರೆಯಲಿ ಎಂದು ಚಂದ್ರೋದಯ ಪತ್ರಿಕ ಬಳಗದಿಂದ ಹಾರೈಸುತ್ತೇವೆ.

ಸತತ ಮೂರನೇ ಬಾರಿಗೆ ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಶ್ರೀ ಆರ್.ಮೋಹನ್ ಕುಮಾರ್ ಅವಿರೋಧ ಆಯ್ಕೆ

ಇಮೇಜ್
ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘ ನಿ. ಶಿವಮೊಗ್ಗ ಈ ಸಹಕಾರಿ ಸಂಘದ 2026-2031ರವರೆಗಿನ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿಯ ಸಾಮಾನ್ಯ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಶ್ರೀ ಆರ್. ಮೋಹನ್ ಕುಮಾರ್ ರವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರು ಸ್ಥಾಪಿಸಿರುವ ಈ ಸಹಕಾರಿ ಸಂಘವು ಕಳೆದ 10 ವರ್ಷಗಳಿಂದ ಶ್ರೀ ಆರ್. ಮೋಹನ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಸರ್ಕಾರಿ ನೌಕರರಿಗೆ ಹಲವು ತರಹದ ಸಾಲ ಹಾಗೂ ಠೇವಣೆ ಸೌಲಭ್ಯಗಳನ್ನು ನೀಡುವುದರ ಮೂಲಕ ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಸಹಕಾರಿ ಸಂಘವು ಪ್ರಸಕ್ತ 80 ಕೋಟಿಗೂ ಅಧಿಕ ವಾರ್ಷಿಕ ವಹಿವಾಟನ್ನು ನಡೆಸುತ್ತಿದ್ದು. 30 ಕೋಟಿಗೂ ಅಧಿಕ ದುಡಿಯುವ ಬಂಡವಾಳವನ್ನು ಹೊಂದಿದೆ. ಕಳೆದ 5 ವರ್ಷವೂ ನಿರಂತರವಾಗಿ 01 ಕೋಟಿಗೂ ಅಧಿಕ ನಿವ್ವಳ ಲಾಭವನ್ನು ಹೊಂದುವ ಮೂಲಕ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸುವಲ್ಲಿ ಅಧ್ಯಕ್ಷರು ಪ್ರಮುಖ ಪಾತ್ರ ವಹಿಸಿರುತ್ತಾರೆ. ಕಳೆದ 35 ವರ್ಷಗಳಿಂದ ಸಂಘಟನೆಯಲ್ಲಿ ಸೇವೆ ಸಲ್ಲಿಸಿ, ಅಪಾರ ಅನುಭವವನ್ನು ಹೊಂದಿರುವ ಆರ್.ಮೋಹನ್ ಕುಮಾರ್ ರವರು ಕಳೆದ ವರ್ಷ ನಡೆದ ಸರ್ಕಾರಿ ನೌಕರರ ಸಂಘದಲ್ಲಿನ ಚುನಾವಣೆಯಲ್ಲಿಯೂ ಸಹ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿ ನೌಕರರ ಪರವಾಗ...

ಮಾನವೀಯತೆ ಮೆರೆದ ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ

ಇಮೇಜ್
  ಇಂದು ದಿನಾಂಕ 28.03.2026 ರಂದು ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿಗಳು ದ್ಯಾವನಕೆರೆ ಗ್ರಾಮಕ್ಕೆ ಬೆಳಗ್ಗೆ 8:30ಕ್ಕೆ ಭೇಟಿ ನೀಡಿ ಮಂಡಘಟ್ಟ ಪ್ರೌಢಶಾಲೆ ಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಪ್ರೀತಮ್ ಎಂಬ ವಿದ್ಯಾರ್ಥಿಯ ಮನೆಗೆ ಭೇಟಿಕೊಟ್ಟು  ನೆನ್ನೆ ದಿನ ರಾತ್ರಿ  ತಂದೆಯ ಅಕಾಲಿಕ ಮರಣದಿಂದ ದುಃಖದಲ್ಲಿರುವ  ಅವನಿಗೆ ಸಾಂತ್ವಾನವನ್ನು ಹೇಳಿ ಧೈರ್ಯವನ್ನು ತುಂಬಿರುತ್ತಾರೆ.  ಇಂದು ಎಸ್ ಎಸ್ ಎಲ್ ಸಿ ಗಣಿತ ಪರೀಕ್ಷೆ ನಡೆಯುತ್ತಿದ್ದು,  ವಿದ್ಯಾರ್ಥಿಗೆ ಮತ್ತು ಅವರ ತಾಯಿಗೆ, ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು  ಧೈರ್ಯವನ್ನು ಹೇಳಿ ಮಗುವನ್ನು ಇಲಾಖೆಯ ಜೀಪಿನಲ್ಲಿ ಆಯನೂರು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದು ತಂದೆಯ ದುಃಖದ ನಡುವೆಯೂ ಮಗುವು ಪರೀಕ್ಷೆಯನ್ನು ಬರೆಯಲು ಸಹಕರಿಸಿರುತ್ತಾರೆ.  ಮಗುವಿನ ತಾಯಿಗೆ ಈ ಸಂದರ್ಭದಲ್ಲಿ  ಸಾಂತ್ವಾನ ಮತ್ತು ಧೈರ್ಯವನ್ನು ಹೇಳಿ ಮಗುವಿನ ಮುಂದಿನ ವಿದ್ಯಾಭ್ಯಾಸಕ್ಕೆ ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ ವತಿಯಿಂದ ಅಗತ್ಯ ಸಹಕಾರ ನೀಡುವುದಾಗಿ  ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು,  ಊರಿನ ಮುಖಂಡರು ಮತ್ತು ಶಿಕ್ಷಕರು ಹಾಜರಿದ್ದರು.  ತಂದೆ ಸಾವಿನ ನಡುವೆಯೂ ಪರೀಕ್ಷೆ ಬರೆದ, ಈ ವಿದ್ಯಾರ್ಥಿಗೆ ಶ್ರೀ ಹೇಮಂತ್ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತ್...

ಎಪಿಎಂಸಿ ಆಟೋ ಚಾಲಕರು ಹಾಗೂ ಮಲೆನಾಡು ಆರ್ ಎಂ ಸಿ ಆಟೋ ಚಾಲಕರ ಸಂಘದ ವತಿಯಿಂದ ಶ್ರೀ ರಾಮನವಮಿ ಹಬ್ಬ ಆಚರಣೆ

ಇಮೇಜ್
  ಪುರಾತನವಾದ ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ ಎಪಿಎಂಸಿ ಆಟೋ ಚಾಲಕರು ಹಾಗೂ ಮಲೆನಾಡು ಆರ್ ಎಂ ಸಿ ಆಟೋ ಚಾಲಕರ ಸಂಘದ ವತಿಯಿಂದ ಈ ದಿವಸ ಪಾನಕ ಹಾಗೂ ಕೋಸಂಬರಿ ವಿತರಿಸುವುದರ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಬಂದ ಭಕ್ತರಿಗೆ ಪ್ರಸಾದ ವಿನಿಯೋಗ ವಿತರಣೆ ಕಾರ್ಯಕ್ರಮ ಏರ್ಪಡಿಸಲಾಯಿತು . ಈ ಒಂದು ಸಂದರ್ಭದಲ್ಲಿ ಪ್ರಮುಖರಾದ ಪ್ರಫುಲ್ಲ ಚಂದ್ರ ಹೆಚ್. ( ಕರ್ನಾಟಕ ನಾಡು ರಕ್ಷಣಾ ವೇದಿಕೆ ಆಟೋ ಘಟಕ ನಗರ ಅಧ್ಯಕ್ಷರು ) ಹಾಗೂ (ಮಲೆನಾಡು ಆರ್ ಎಂ ಸಿ ಆಟೋ ನಿಲ್ದಾಣದ ಅಧ್ಯಕ್ಷರು ) ಹಾಗೂ( ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ).ಚಂದ್ರಪ್ಪ ಟಿ. (ಶ್ರೀ ಆಂಜನೇಯ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷರು )( ಮಲೆನಾಡು ಆರ್ ಎಂ ಸಿ ಆಟೋ ನಿಲ್ದಾಣದ ಗೌರವಾಧ್ಯಕ್ಷರು ). ಪ್ರಕಾಶ್ ಟಿ. ನಾಗ್ಯಾ ನಾಯಕ್. ನಾಗೇಶ್. ರವಿ ಅಣ್ಣ. ಆಕಾಶ್. ಪ್ರೇಮ್ ಕುಮಾರ್. ರಂಗನಾಥ್. ಮಂಜು ನಾಯಕ್. ರವಿ. ರುದ್ರೇಶ್. ಪರಶುರಾಮ್. ಭಾಷಣ.( ಮಲೆನಾಡು ಆರ್ ಎಮ್ ಸಿ ಆಟೋ ನಿಲ್ದಾಣದ ಉಪಾಧ್ಯಕ್ಷರು ). ಯತೀಶ. ಶಿವಕುಮಾರ್. ಶ್ಯಾಮ್ ಭೋವಿ. ಹೊನ್ನಪ್ಪ. ಲೋಕೇಶ್.ಕುಮಾರ್. ಪ್ರವೀಣ. ವಿಜಯ್ ಕುಮಾರ್ (ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾ ಉಪಾಧ್ಯಕ್ಷರು ).ಹಾಗೂ ಇನ್ನಿತರ ಪ್ರಮುಖರು ಈ ಒಂದು ಅದ್ದೂರಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿಶೇಷವೇನೆಂದರೆ ಗೋಪಾಲನಗ...

ಯುವಜನರಿಗೆ ವಿಪತ್ತು ನಿರ್ವಹಣೆ ತರಬೇತಿ ಅವಶ್ಯ

ಇಮೇಜ್
ಶಿವಮೊಗ್ಗ: ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಯುವಜನರಿಗೆ ತರಬೇತಿ ನೀಡುವುದು ಅತ್ಯಂತ ಅವಶ್ಯಕ ಎಂದು ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ಹೇಳಿದರು. ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಶಿವಮೊಗ್ಗ ಜಿಲ್ಲಾ ಘಟಕ ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಂಯುಕ್ತ ಆಶಯದಲ್ಲಿ ರಾಜ್ಯ ಘಟಕ ಆಯೋಜಿಸಿದ್ದ ಕೇಂದ್ರ ಸರ್ಕಾರದ ಯೋಜನೆಯಾದ ಯುವ ಆಪತ್ ಮಿತ್ರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿ, ತುರ್ತು ಸಂದರ್ಭಗಳಲ್ಲಿ ಮನುಷ್ಯರ ಜೀವ ಉಳಿಸಲು ಪ್ರಥಮ ಚಿಕಿತ್ಸೆಯು ತುಂಬಾ ಮುಖ್ಯ. ಜನರಿಗೆ ಪ್ರಥಮ ಚಿಕಿತ್ಸೆ ಬಗ್ಗೆ ಅರಿವು ಇದ್ದಲ್ಲಿ ಅನೇಕ ಜೀವಗಳನ್ನು ಉಳಿಸಲು ಸಾಧ್ಯವಿದೆ ಎಂದು ತಿಳಿಸಿದರು. ಯುವ ಆಪತ್ ಮಿತ್ರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಶಿಬಿರ ರಾಷ್ಟ್ರೀಯ ಕಾರ್ಯಕ್ರಮ ಆಗಿದ್ದು, ಪ್ರತಿಯೊಬ್ಬರೂ ಸಂಕಷ್ಟ ಕಾಲದಲ್ಲಿ ತಮ್ಮ ಅಮೂಲ್ಯವಾದ ಜೀವವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುವುದರ ಬಗ್ಗೆ ಅಗತ್ಯವಾದ ಅಮೂಲ್ಯವಾದ ಜಾಗೃತಿ ಕಾರ್ಯಕ್ರಮ ಇದಾಗಿದೆ. ಇಂತಹ ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡಾಗ ತಾವು ತರಬೇತಿ ಪಡೆದುಕೊಂಡು ವಿಪತ್ತಿನಲ್ಲಿ ಇರುವ ಪ್ರತಿಯೊಬ್ಬರನ್ನು ಸಂರಕ್ಷಿಸುವ ಕಾರ್ಯವಾಗಬೇಕಾಗಿದೆ ಎಂದು ಹೇಳಿದರು. ವಿಪತ್ತುಗಳು ಯಾರಿಗೆ ಯಾವ ಸಂದರ್ಭದಲ್ಲಿ ಸಂಭವಿಸುತ್ತವೆ ಎಂಬುದರ ಅರಿವು ಇರುವುದಿಲ್ಲ. ನಾವುಗಳು ಸದಾ ಪರಿಣಿತರಾಗಿ ಧೈರ್ಯದಿಂದ ಇಂತಹ ಸ...

ರಸ್ತೆ ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಿ

ಇಮೇಜ್
ಶಿವಮೊಗ್ಗ: ಸಮಾಜದ ಪ್ರತಿಯೊಬ್ಬರೂ ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಟ್ರಾಫಿಕ್ ಪೊಲೀಸ್ ವೈ.ಸುರೇಶ್ ಕುಮಾರ್ ಹೇಳಿದರು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಹಾಗೂ ಜಿಲ್ಲಾ ಸಂಸ್ಥೆ ಶಿವಮೊಗ್ಗ, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬೆಂಗಳೂರು ಸಹಯೋಗದಲ್ಲಿ ಶಿವಮೊಗ್ಗ ಸ್ಕೌಟ್ಸ್ ಭವನದಲ್ಲಿ ಆಯೋಜಿಸಿದ್ದ ಯುವ ಆಪತ್ ಮಿತ್ರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಶಿಬಿರದಲ್ಲಿ ಮಾತನಾಡಿ, ಪ್ರತಿನಿತ್ಯ ರಸ್ತೆಯಲ್ಲಿ ಸಾವಿರಾರು ಜನರು ತಮ್ಮ ಅಮೂಲ್ಯವಾದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಸ್ತೆ ಅಪಘಾತಗಳನ್ನು ತಪ್ಪಿಸಲು ನಾವು ನೀವೆಲ್ಲರೂ ನಿಯಮಗಳನ್ನು ಪಾಲಿಸಲೇಬೇಕು ಎಂದು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ವ್ಹೀಲಿಂಗ್ ಮಾಡುವುದು, ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವುದು ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸುವುದರಿಂದ ಅಪಘಾತಗಳ ಪ್ರಮಾಣ ಸಂಖ್ಯೆ ಹೆಚ್ಚುತ್ತಿದೆ. ಯುವಜನರು ವಾಹನ ಓಡಿಸುವಾಗ ಏಕಾಗ್ರತೆಯಿಂದ ಎಚ್ಚರಿಕೆ ವಹಿಸಬೇಕು ಎಂದರು. ಈಗಾಗಲೇ ಶಿವಮೊಗ್ಗದಲ್ಲಿ ನಾಲ್ಕು ಸಾವಿರ ಸಿಸಿ ಕ್ಯಾಮರಾಗಳು ಚಾಲನೆಯಲ್ಲಿವೆ. ಬರುವ ದಿನಗಳಲ್ಲಿ ಹೊಸ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯವರು ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಇಂತಹ ಜಾಗೃತಿ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ತಿಳಿಸುವುದರ ಮುಖಾಂತರ ಅಪಘಾತಗಳನ್ನು ತಪ್...

ಯುವಜನರಲ್ಲಿ ಸೇವಾ ಮನೋಭಾವ ಬೆಳೆಸುವುದು ಅವಶ್ಯ

ಇಮೇಜ್
ಶಿವಮೊಗ್ಗ: ದೇಶದ ನಿಜವಾದ ಶಕ್ತಿ ಯುವಸಂಪತ್ತು. ಪರಿಣಾಮಕಾರಿಯಾಗಿ ಯುವಶಕ್ತಿ ಬಳಸಿಕೊಳ್ಳಬೇಕಿದೆ ಎಂದು ಯೋಗ ಶಿಕ್ಷಕ ಎಚ್.ಎಂ.ಚಂದ್ರಶೇಖರಯ್ಯ ಹೇಳಿದರು. ಜಿಲ್ಲಾ ಸ್ಕೌಟ್ ಭವನದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಒಂದು ವಾರದ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯಕ್ರಮದಲ್ಲಿ ಮಾತನಾಡಿ, ಯುವಜನರಿಗೆ ಯೋಗ, ಪ್ರಾಣಾಯಾಮ ಮತ್ತು ಧ್ಯಾನಗಳ ಮಹತ್ವದ ಅರಿವು ಮೂಡಿಸಬೇಕಿದೆ. ಶಿಸ್ತು, ಸಂಯಮ, ದೇಶಭಕ್ತಿ, ಸಮರ್ಪಣಾ ಮನೋಭಾವ, ತ್ಯಾಗ, ಸೇವಾ ಮನೋಭಾವನೆ, ಪ್ರಾಮಾಣಿಕತೆ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್ ಮಾತನಾಡಿ, ಯೋಗ, ಪ್ರಾಣಾಯಾಮ, ಧ್ಯಾನ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಭಾವನೆಗಳನ್ನು ಮೂಡಿಸುವುದರ ಜೊತೆಗೆ ದೇಹ, ಮನಸ್ಸು ಸದೃಢವಾಗಿ ಸದಾ ಲವಲವಿಕೆಯಿಂದ ಆರೋಗ್ಯವಂತರಾಗಿ ಇರಲು ಸಾಧ್ಯವಾಗುತ್ತದೆ. ವಿದ್ಯಾಭ್ಯಾಸದ ಜೊತೆಗೆ ಇಂತಹ ಶಿಬಿರಗಳಲ್ಲಿ ಪಾಲ್ಗೊಂಡರೆ ವಿದ್ಯಾರ್ಥಿಗಳು ಪರಿಪೂರ್ಣ ವ್ಯಕ್ತಿಗಳಾಗುತ್ತಾರೆ ಎಂದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ಅವಲಕ್ಕಿ ಮಾತನಾಡಿ, 199 ದೇಶಗಳಲ್ಲಿ ಯೋಗವನ್ನು ಎಲ್ಲಾ ದೇಶದವರು ಒಪ್ಪಿ ಯೋಗಭ್ಯಾಸ ಮಾಡುತ್ತಿದ್ದಾರೆ. ಸನಾತನ ಕಾಲದಿಂದಲೂ ಯೋಗ್ಯ ಅಭ್ಯಾಸಕ್ಕೆ ತನ್ನದೇ ಆದ ಹಿನ್ನೆಲೆ ಇದೆ ಎಂದು ತಿಳಿಸಿದರು. ರಾಜ್ಯ ಸಂಘಟನಾ ಆಯುಕ್ತರಾದ ಸುಮನ ಶೇಖರ್ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ಕಾರ್ಯಕ್ರಮಗ...

ಸತ್ತ ಮೇಲೆ ನೀಡುವ ಸೌಲಭ್ಯಗಳನ್ನು ಬದುಕಿದ್ದಾಗಲೇ ನೀಡಿ ಪತ್ರಿಕಾ ವಿತರಕರ ಒಕ್ಕೂಟ ಆಗ್ರಹ!!

ಇಮೇಜ್
  ಶಿವಮೊಗ್ಗ: ಪತ್ರಿಕಾ ವಿತರಕರಿಗೆ ಸತ್ತ ಮೇಲೆ ಅಪಘಾತ ವಿಮೆ ನೀಡುವ ಬದಲು ಇದ್ದಾಗ ಆರೋಗ್ಯ ಪರಿಹಾರ ಅಥವಾ ವಿಮೆಗಳನ್ನು ನೀಡಿ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು  ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಮಾಲತೇಶ್  ಮಾತನಾಡಿ - "ಪ್ರತಿನಿತ್ಯ ಬೆಳಗಿನ ಜಾವ ಎಲ್ಲರೂ ಏಳುವ  ಮುಂಚೆ ನಾವು ಸಮಾಜ ಮತ್ತು ಸರ್ಕಾರ, ರಾಜಕೀಯ ಗಣ್ಯರುಗಳ ಹಾಗೂ ರಾಜ್ಯ, ದೇಶ,ವಿದೇಶದ ಸುದ್ದಿಗಳನ್ನು ಹೊತ್ತು ತಂದು ಮನೆ ಮನೆ ಬಾಗಿಲಿಗೆ ತಲುಪಿಸುವ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇವೆ ನಮ್ಮ ಜೀವನ ಶೋಚನೀಯವಾಗಿದೆ. ಅದೇ ರೀತಿ ನಮ್ಮ ರಾಜ್ಯಾಧ್ಯಕ್ಷ ಶಂಭುಲಿಂಗ ರವರಿಗೆ ಜಿ. ಬಿ ಸಿಂಡ್ರೋಮ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ ಕೂಡಲೆ ಸರ್ಕಾರ ಇತ್ತ  ಪರಿಹಾರ ನೀಡಬೇಕು ಎಂದರು". ಪತ್ರಿಕ ವಿತರಕ ಸಂಘದ ಗೌರವಾಧ್ಯಕ್ಷ ಹುಲಿಗಿ ಕೃಷ್ಣ  ಮಾತನಾಡಿ, ಕನಿಷ್ಠ ಕಾರ್ಮಿಕ ಇಲಾಖೆ ಸೌಲಭ್ಯನೂ ಸಹ ನಮಗೆ ದೊರೆಯದೆ, ಅನ್ಯಾಯವಾಗಿದ್ದು ಎಲ್ಲಾ ಪತ್ರಿಕ ವಿತರಿಕರಿಗೂ ಆರೋಗ್ಯ ವಿಮೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಉಚಿತ ನೆರವಿನ  ರೀತಿಯಲ್ಲಿ ಹೊಸ ಚಿಂತನೆ ಮಾಡಿ ಪತ್ರಿಕ ವಿತರಕರ ಜೀವನ ಸ್ಪೂರ್ತಿಯಾಗಿ ಎಂದರು.  ಜಯ ಕರ್ನಾಟಕ ಜನಪರ ವೇದಿಕೆ ಶಿಕಾರಿಪುರ  ತಾಲೂಕು ಅಧ್ಯಕ್ಷ ಶಿವಯ್ಯ ಎನ್ ಶಾಸ್ತ್ರಿ ಮಾತನಾಡಿ, ಪತ್ರಿಕಾ ವಿತರಕರ ಜೀವನ ಬಹಳಷ್ಟು ಕಷ್ಟದಲ್ಲಿದ್ದು ಸರ್ಕಾರ ವಿಶೇಷವಾ...

ಮಹಿಳೆಯರ ಸಾಧನೆ ಗುರುತಿಸಿ ಗೌರವಿಸಿ

ಇಮೇಜ್
ಶಿವಮೊಗ್ಗ: ಮಹಿಳೆಯರ ಸಾಧನೆಯನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ನಾಗಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕ ಸಂದೇಶ್ ಉಪಾಧ್ಯ ಹೇಳಿದರು. ನಾಗಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸದ್ದಿಲ್ಲದೇ ಸೇವೆ ಮಾಡುತ್ತಿರುವ ಸಾಕಷ್ಟು ಜನ ಮಹಿಳೆಯರು ನಮ್ಮಲ್ಲಿ ಇರುತ್ತಾರೆ. ಅವರ ಸೇವೆ ಸಮಾಜಕ್ಕೆ ತುಂಬಾ ಅಗತ್ಯವಾಗಿರುತ್ತದೆ. ಅಂತಹ ಮಹಿಳೆಯರನ್ನು ಗುರುತಿಸಿ ಗೌರವಿಸಿದಾಗ ಸಂಸ್ಥೆಗೆ ಒಳ್ಳೆಯ ಹೆಸರು ಬರುತ್ತದೆ ಎಂದು ತಿಳಿಸಿದರು. ಮಹಿಳೆಯರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಾಗ ಅವರ ಪ್ರತಿಭೆ ಅನಾವರಣಗೊಳ್ಳುತ್ತದೆ. ಸಮಾಜಮುಖಿಯಾಗಿ ಸಹ ಬೆಳೆಯಲು ಅವಕಾಶ ದೊರಕುತ್ತದೆ. 40 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಇವರ ಸೇವೆ ಅನನ್ಯ. ಇಂಥವರ ಸಂಖ್ಯೆ ಸಮಾಜದಲ್ಲಿ ಹೆಚ್ಚಾಗಬೇಕು ಎಂದು ಹೇಳಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಒಳ್ಳೆಯ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಿದಾಗ ಸಮಾಜದಲ್ಲಿ ಅಂತಹವರ ಸೇವೆ ಇನ್ನೂ ಹೆಚ್ಚಾಗುತ್ತದೆ ಎಂದು ಹೇಳಿದರು. ಶ್ರೀ ಶಾರದಾ ಶಂಕರ ಭಜನಾ ಮಂಡಳಿ ವತಿಯಿಂದ ಶಿಕ್ಷಕಿ ರಾಜಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು. ರಾಜಲಕ್ಷ್ಮೀ ಅವರು 3000 ಮಹಿಳೆಯರಿಗೆ ಸೌಂದರ್ಯ ಲಹರಿ, ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ, ಶಿವಾನಂದ ಲಹರಿ ಸ್ತೋತ್ರಗಳನ್ನು ಹೇಳಿಕೊಟ್ಟಿದ್ದಾರೆ...

ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ವಿಜೇತ ರಾದ ವೈ ಎಸ್ ವಿ ದತ್ತ ರವರಿಗೆ ಜಿಲ್ಲಾ ಸರ್ವೋದಯ ಮಂಡಲದಿಂದ ಸನ್ಮಾನ

ಇಮೇಜ್
ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ  ಮಾಜಿ ಶಾಸಕ ಹಾಗೂ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ವಿಜೇತ ರಾದ ವೈ ಎಸ್ ವಿ  ದತ್ತ ಅವರಿಗೆ  ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಲ, ಭದ್ರಾವತಿ ಶಿವಮೊಗ್ಗ  ಆಕಾಶವಾಣಿ ಕೇಳುಗರ ಬಳಗ, ಆರ್ ಜೆ ಬಳಗ, ನನ್ನ ಕನಸಿನ ಶಿವಮೊಗ್ಗ ಸಂಸ್ಥೆಗಳ ವತಿಯಿಂದ  ಆತ್ಮೀಯವಾಗಿ ಸನ್ಮಾನಿಸಿ ಸ್ವಾಗತಿಸಲಾಯಿತು  ಈ ಸಂದರ್ಭದಲ್ಲಿ  ಮಾತನಾಡಿದ ಅವರು ಶಾಂತವೇರಿ ಗೋಪಾಲಗೌಡರು ಈ ನಾಡು ಕಂಡ ಅಪ್ರತಮ ಪ್ರಾಮಾಣಿಕ ರಾಜಕಾರಣಿ. ಕಡು ಬಡತನದಿಂದ ಸಾಲ ಸೂಲ ಮಾಡಿ  ತನ್ನ ಪ್ರಾಮಾಣಿಕ ರಾಜಕಾರಣದಿಂದ ಕಡು ಬಡವರ ಸೇವೆ ಮಾಡಿದವರು ಕಾಗೋಡು ಸತ್ಯಾಗ್ರಹದ ಹೋರಾಟದ ಮೂಲಕ ಪ್ರಸಿದ್ಧರಾಗಿ ಡಾ ರಾಮಮನೋಹರ  ಲೋಹಿಯವರ ಸಮಾಜವಾದಿ ಸಿದ್ಧಾಂತವನ್ನು ಅಪ್ಪಿಕೊಂಡು  ಶಿವಮೊಗ್ಗ ಜಿಲ್ಲೆಯನ್ನು ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು. ಶಾಂತವೇರಿ ಗೋಪಾಲಗೌಡರು ವಿಧಾನಸಭೆಯಲ್ಲಿ ಮಾತನಾಡಲು ನಿಂತರೆ ಇಡೀ ವಿಧಾನಸಭೆ ನಡುಗುತ್ತಿತ್ತು. ಅವರಂತಹ ನಿಷ್ಠಾವಂತ ಪ್ರಾಮಾಣಿಕ ರಾಜಕಾರಣಿ ಮತ್ತೆ ನೋಡಲು ಸಾಧ್ಯವಿಲ್ಲವಾಗಿದೆ. ಸರ್ಕಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಗೋಪಾಲಗೌಡರ ಹೆಸರನ್ನು ಇಟ್ಟಿರುವುದು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು. ಅವರು ಬದುಕಿದ್ದರೆ ಅವರಿಗೆ 101 ವರ್ಷ ವಯಸ್ಸು ಆಗುತ್ತಿತ್ತು ಅವರ ಹೆಸರಿನಲ್ಲಿರುವ  ಈ ಪ್ರಶಸ್ತಿ ನನಗೆ ಕೊಟ್ಟಿರುವುದನ್ನು ವಿನಮ್ರತೆಯಿಂ...

ಜೆಸಿಐ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನ ಆಚರಣೆ

ಇಮೇಜ್
ಶಿವಮೊಗ್ಗ : ಜೆಸಿಐ ಶಿವಮೊಗ್ಗ ಚಿರಂತನದ ವತಿಯಿಂದ  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಜೀವನ ಸಂಜೆ ವೃದ್ಧಾಶ್ರಮ ಗೋಪಾಳದಲ್ಲಿ ವಿಶೇಷವಾಗಿ ಆಚರಿಸಲಾಯಿತು.  ಈ ಸಂದರ್ಭದಲ್ಲಿ ವೈದ್ಯರಾದ ಪ್ರಿಯಾಂಕ ಚೌಹಾಣ್ ರವರು ಮಾತನಾಡಿ, ವೃದ್ಧಾಪ್ಯದಲ್ಲಿ ಬರಬಹುದಾದ ಸಾಮಾನ್ಯ ತೊಂದರೆಗಳು ಅದಕ್ಕೆ ಬೇಕಾದಂತಹ ಚಿಕಿತ್ಸೆಗಳನ್ನು ವಿಸ್ತಾರವಾಗಿ ತಿಳಿಸಿದರು.  ಭಾಗ್ಯಲಕ್ಷ್ಮಿ ಆಚಾರ್ ರವರು ಮಾತನಾಡಿ, ಮಹಿಳಾ ದಿನಾಚರಣೆಯನ್ನು ವೃದ್ಧಾಶ್ರಮದಲ್ಲಿ ಆಚರಿಸುವುದು ಅತ್ಯಂತ ಅರ್ಥಪೂರ್ಣ ಮತ್ತು ಮನಸಿಗೆ ಹತ್ತಿರವಾಗಿರುವ ಕಾರ್ಯವಾಗಿದೆ. ಸಮಾಜದಲ್ಲಿ ತಮ್ಮ ಜೀವನವನ್ನು ಕುಟುಂಬಕ್ಕೆ ಅರ್ಪಿಸಿದ ಅನೇಕ ವೃದ್ಧ ಮಹಿಳೆಯರು ವೃದ್ಧಾಶ್ರಮಗಳಲ್ಲಿ ವಾಸಿಸುತ್ತಿದ್ದಾರೆ. ಈ ವಿಶೇಷ ದಿನದಂದು ಅವರನ್ನು ಸ್ಮರಿಸಿ ಗೌರವಿಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.  ಸಹನ.ಇ.ವಿ. ಅವರು ಮಾತನಾಡಿ, ಪ್ರಸ್ತುತ ಹೆಣ್ಣು ಮಕ್ಕಳು ಸಾಕಷ್ಟು ಸಂಖ್ಯೆಯಲ್ಲಿ ಹೊರ ಪ್ರಪಂಚಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.  ಕಾರ್ಯಕಮ್ರದ ಅಧ್ಯಕ್ಷತೆ ವಹಿಸಿದ್ದ ಪೃಥ್ವಿ ನಾಗರಾಜ್ ಅವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಶೇಷತೆಯ ಕುರಿತು ಹೇಳಿದರು. ಈ  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೈದ್ಯರಾದ ಪ್ರಿಯಾಂಕಾ ಚೌಹಾಣ್ ಹಾಗೂ ಗೌರವಾನ್ವಿತ ಅತಿಥಿಗಳಾಗಿ ಶ್ರೀಮತಿ ಸಹನಾ.ಇ.ವಿ., ನಿವೃತ್ತ ಪ್ರಾಂಶುಪಾಲೆ  ಭಾಗ್ಯಲಕ್ಷ...

ವ್ಯಕ್ತಿಯ ದೇಹ, ಮನಸ್ಸಿನ ಧನಾತ್ಮಕ ಬದಲಾವಣೆಯೇ ಯೋಗದ ಉದ್ದೇಶ : ಹೆಚ್.ಎಂ.ಚಂದ್ರಶೇಖರಯ್ಯ

ಇಮೇಜ್
ಶಿವಮೊಗ್ಗ : ವ್ಯಕ್ತಿಯ ದೇಹ, ಮನಸ್ಸು, ಬುದ್ಧಿ ಹಾಗೂ ಅಹಂಕಾರಗಳಲ್ಲಿನ ಧನಾತ್ಮಕ ಬದಲಾವಣೆಯೇ ಯೋಗದ ಉದ್ದೇಶ ಎಂದು ಕಾರ್ಯದರ್ಶಿ ಹೆಚ್.ಎಂ.ಚಂದ್ರಶೇಖರಯ್ಯ ತಿಳಿಸಿದರು. ಶ್ರೀ ಶಿವಗಂಗಾ ಯೋಗ ಕೇಂದ್ರದ ವತಿಯಿಂದ ಕೃಷಿ ನಗರದ ಶಕ್ತಿ ಗಣಪತಿ ಯೋಗ ಶಾಖೆಯಲ್ಲಿ ಆಯೋಜಿಸಿದ್ದ ವಾರ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಣಪತಿ ಸಮೃದ್ಧತೆಯ ಸಂಕೇತ, ಸಡಗರ ಸಂಭ್ರಮದ ಸಂಕೇತ, ಸ್ಥಿತ ಪ್ರಜ್ಞತೆಯ ಸಂಕೇತ. ಈ ತತ್ವಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಈ ಭೂಮಿಯಲ್ಲಿ ನಾಲ್ಕು ದಿನ ಬದುಕಿ ಹೋಗುವುದೇ ಈ ಯೋಗದ ಉದ್ದೇಶವೆಂದು ತಿಳಿಸಿದರು.  ಇಂದು ಎಲ್ಲಿ ನೋಡಿದರೂ ಅಶಾಂತಿ, ಅಭದ್ರತೆ, ಅಪನಂಬಿಕೆ, ಭಯ ತಾಂಡವವಾಡುತ್ತಿದೆ. ಬಹುತೇಕ ಕುಟುಂಬಗಳಲ್ಲಿ ಶಾಂತಿ, ನೆಮ್ಮದಿ ಮಾಯವಾಗುತ್ತಿದೆ. ಕಾರಣ, ಮಿತಿ ಇಲ್ಲದ ಕಾಮನೆಗಳು, ಸ್ವಾರ್ಥಪರ ಚಿಂತನೆಗಳು, ಅಧಿಕಾರ, ಕೀರ್ತಿ, ಸಂಪತ್ತಿನ ಬೆನ್ನು ಹತ್ತಿರುವ ಜಗತ್ತು ಪ್ರಕ್ಷುಬ್ಧಗೊಂಡಿದೆ. ಹಿಂಸೆ,  ಯುದ್ಧಗಳಿಂದ ಜಗತ್ತು ಜರ್ಜರಿತವಾಗುತ್ತಿದೆ. ನಾವೆಲ್ಲ ಜಗತ್ತು ಬದಲಾಗಲಿ ಎಂದು ಹೇಳುತ್ತೇವೆ. ಆದರೆ ನಮ್ಮಲ್ಲಿ ಬದಲಾವಣೆಯಾಗಲಿ ಎಂದು ಯಾರೂ ಬಯಸುತ್ತಿಲ್ಲ. ಮೊದಲು ನಮ್ಮಲಿನ ಚಿಂತನೆಗಳು, ಆಲೋಚನೆಗಳು, ದುರಾಸೆಗಳು, ಹಣ, ಕೀರ್ತಿಗಾಗಿ ಬೆನ್ನು ಹತ್ತಿರುವ ವ್ಯಕ್ತಿಯ ಮನಸ್ಸು ಬದಲಾಗಬೇಕಿದೆ. ಇದು ಯೋಗದ ಅಷ್ಟಾಂಗ ಮಾರ್ಗಗಳಾದ ಆಸನ, ಪ್ರಾಣಯಾಮ ಮತ್ತು ಧ್ಯಾನಗಳಿಂದ ಮಾತ್ರ ಸಾಧ್ಯವನ್...

ರಾಜ್ಯದಲ್ಲಿ ಕಲುಷಿತ ನೀರಿನ ಆತಂಕ: ಪ್ರತಿ ಜಿಲ್ಲೆಯಲ್ಲೂ NABL ಮಾನ್ಯತೆ ಪಡೆದ ಲ್ಯಾಬ್ ಸ್ಥಾಪನೆಗೆ ಡಾ. ಧನಂಜಯ ಸರ್ಜಿ ಆಗ್ರಹ

ಇಮೇಜ್
ಬೆಂಗಳೂರು: ರಾಜ್ಯದಲ್ಲಿ ಕುಡಿಯುವ ನೀರಿನ ಗುಣಮಟ್ಟ ಕುಸಿಯುತ್ತಿದ್ದು, ಹರಡುತ್ತಿರುವ ಸಾಂಕ್ರಾಮಿಕ ರೋಗಗಳ ತಡೆಗೆ ಸರ್ಕಾರ  ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಅವರು ಸರ್ಕಾರವನ್ನು ಒತ್ತಾಯಿಸಿದರು. ಇಂದು ವಿಧಾನ ಪರಿಷತ್ತಿನಲ್ಲಿ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರಿಗೆ ಪ್ರಶ್ನೆ ಕೇಳಿದ ಅವರು, ಸಚಿವರ ಅಸ್ಪಷ್ಟ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿ ರಾಜ್ಯದ ನೀರಿನ ಭೀಕರ ವಾಸ್ತವಾಂಶಗಳನ್ನು ಅಂಕಿಅಂಶಗಳ ಸಮೇತ ಮಾತನಾಡಿದರು.       ಕೇಂದ್ರ ಆರೋಗ್ಯ ಸಚಿವಾಲಯದ ವರದಿಯನ್ನು ಉಲ್ಲೇಖಿಸಿದ ಡಾ. ಸರ್ಜಿ, "ಟೈಫಾಯಿಡ್ ಪ್ರಕರಣಗಳಲ್ಲಿ ಕರ್ನಾಟಕ ದೇಶದಲ್ಲೇ 3ನೇ ಸ್ಥಾನದಲ್ಲಿದ್ದರೆ, ಅತಿಸಾರ ಭೇದಿ ಪ್ರಕರಣಗಳಲ್ಲಿ 5ನೇ ಸ್ಥಾನದಲ್ಲಿದೆ. 2021ರಲ್ಲಿ 3.3 ಲಕ್ಷ ಅತಿಸಾರ ಭೇದಿ ಹಾಗೂ 3,021 ಟೈಫಾಯಿಡ್ ಪ್ರಕರಣಗಳು ವರದಿಯಾಗಿವೆ. ಕಳೆದ ಐದು ವರ್ಷಗಳಲ್ಲಿ 8,697 ಇಲಿ ಜ್ವರ (ಲೆಪ್ಟೊಸ್ಪೈರೋಸಿಸ್) ಪ್ರಕರಣಗಳು ದಾಖಲಾಗಿದ್ದು, ಸರಾಸರಿ ವರ್ಷಕ್ಕೆ 1,739 ಪ್ರಕರಣಗಳು ಪತ್ತೆಯಾಗುತ್ತಿರುವುದು ಆತಂಕಕಾರಿ," ಎಂದು ವಿವರಿಸಿದರು.      ನೈಟ್ರೇಟ್ ಮತ್ತು ಫ್ಲೋರೈಡ್ ಮಾಲಿನ್ಯದಲ್ಲಿ ಮುಂಚೂಣಿ: ದೇಶದ ನೈಟ್ರೇಟ್ ಮಾಲಿನ್ಯದಲ್ಲಿ ರಾಜಸ್ಥಾನ (49%) ಪ್ರಥಮ ಸ್ಥಾನದಲ್ಲಿದ್ದರೆ, ಕರ್ನಾಟಕ 48% ರೊಂದಿಗೆ ಎರಡನೇ ಸ್ಥಾನದಲ್ಲಿದೆ. ತಮಿಳುನಾಡು 37% ರಷ್ಟಿದೆ. ರಾಜ್ಯದ...

ತರೀಕೆರೆ ತಾಲೂಕಿನ 19 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬೆಂಗಳೂರಿನ ಆಕಾಶವಾಣಿ ಮುಖ್ಯಸ್ಥ ಡಾ. ಎ.ಎಸ್.ಶಂಕರ ನಾರಾಯಣ ಆಯ್ಕೆ

ಇಮೇಜ್
  ಶಿವಮೊಗ್ಗ : ಸಾಹಿತಿ ಹಾಗೂ ಬೆಂಗಳೂರು ಆಕಾಶವಾಣಿ ಮುಖ್ಯಸ್ಥರಾದ  ಡಾ. ಎ.ಎಸ್.ಶಂಕರ ನಾರಾಯಣ ರವರಿಗೆ ಈ  ಬಾರಿ ತರೀಕೆರೆ ತಾಲೂಕಿನ 19 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಲ, ಭದ್ರಾವತಿ ಶಿವಮೊಗ್ಗ  ಆಕಾಶವಾಣಿ ಕೇಳುಗರ ಬಳಗ, ಆರ್ ಜೆ ಬಳಗ, ನನ್ನ ಕನಸಿನ ಶಿವಮೊಗ್ಗ ಸಂಸ್ಥೆಗಳ ವತಿಯಿಂದ ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ  ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಎಂ.ಎನ್.ಸುಂದರರಾಜ್ ರವರು ಮಾತನಾಡಿ, ಸನ್ಮಾನಿತರಿಗೆ ಈ ಗೌರವ ಸಿಕ್ಕಿರೋದು ತುಂಬಾ ಸಂತೋಷದ ವಿಷಯ. ಅವರಿಂದ ಇನ್ನೂ ಹೆಚ್ಚಿನ ಸಾಹಿತ್ಯವನ್ನು ನಾವೆಲ್ಲ ನಿರೀಕ್ಷಿಸುತ್ತಿದ್ದೇವೆ ಎಂದು   ತಿಳಿಸಿದರು. ಜಿಲ್ಲಾ ಸರ್ವೋದಯ ಮಂಡಲದ ಅಧ್ಯಕ್ಷರಾದ ಆರ್.ಮನೋಹರ್ ಮೂಲತಃ ತರೀಕೆರೆಯವರೇ ಆದ ಶಂಕರ್ ನಾರಾಯಣ್ ತಮ್ಮ ಬರಹದ ಮೂಲಕ ಆಕಾಶವಾಣಿ ಸಂದರ್ಶನಗಳ ಮೂಲಕ ನಾಡಿಗೆ ಚಿರಪರಿಚಿತರಾಗಿದ್ದಾರೆ. ಅವರ ಸಾಹಿತ್ಯ ಸೇವೆ ಹೀಗೆಯೇ ಮುಂದುವರೆಯಲಿ ಎಂದು  ಶುಭ ಹಾರೈಸಿದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಶಂಕರ ನಾರಾಯಣ ಅವರ ಸಾಧನೆ ಸಾಕಷ್ಟು ಇದೆ. ಅವರ ಸಾಧನೆಗೆ ಸಿಕ್ಕ ಮನ್ನಣೆ ಇದು. ಅವರ ಸಾಹಿತ್ಯ ಕೃಷಿ ಇನ್ನೂ ಹೆಚ್ಚು ಹೆಚ್ಚು ಆಗಲಿ ಎಂದು ಶುಭ ಹಾರೈಸಿದರು....

ಬಿಎಸ್‌ ಪಿ ಸಂಸ್ಥಾಪಕ ಕಾನ್ಶೀರಾಮ್ ಅವರಿಗೆ ಭಾರತ ರತ್ನ: ಪಂಜಾಬ್ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಇಮೇಜ್
  ಚಂಡೀಗಢ: ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಸಂಸ್ಥಾಪಕ ಕಾನ್ಶೀರಾಮ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಪಂಜಾಬ್ ವಿಧಾನಸಭೆ ಸೋಮವಾರ ಸರ್ವಾನುಮತದಿಂದ ಅಂಗೀಕರಿಸಿದೆ. ಆದರೆ, ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರಿಗೆ ಭಾರತ ರತ್ನ ನೀಡಬೇಕೆಂಬ ಕಾಂಗ್ರೆಸ್ ತಂದಿದ್ದ ಪ್ರಸ್ತಾವನೆಯನ್ನು ಸ್ಪೀಕರ್ ನಿರಾಕರಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಬಜೆಟ್ ಅಧಿವೇಶನದ ಕೊನೆಯ ದಿನದಂದು ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಈ ನಿರ್ಣಯವನ್ನು ಮಂಡಿಸಿದರು. “ಬಾಬು ಕಾನ್ಶೀರಾಮ್ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಿದ್ಧಾಂತವನ್ನು ಮನೆಮನೆಗೆ ತಲುಪಿಸುವಲ್ಲಿ ಮತ್ತು ಸಾಮಾಜಿಕ ಸಮಾನತೆಗಾಗಿ ಶ್ರಮಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರು ಯಾವುದೇ ಆಸ್ತಿ ಅಥವಾ ಬ್ಯಾಂಕ್ ಖಾತೆ ಇಲ್ಲದೆ ಬದುಕಿದ ಪ್ರಾಮಾಣಿಕ ನಾಯಕ” ಎಂದು ಚೀಮಾ ಶ್ಲಾಘಿಸಿದರು. ಆಮ್ ಆದ್ಮಿ ಪಕ್ಷ (AAP) ತಂದ ಈ ನಿರ್ಣಯಕ್ಕೆ ಕಾಂಗ್ರೆಸ್ ಮತ್ತು ಬಿಎಸ್‌ ಪಿ ಶಾಸಕರು ಬೆಂಬಲ ಸೂಚಿಸಿದರು. ಕಾನ್ಶೀರಾಮ್ ಅವರ ನಿರ್ಣಯ ಅಂಗೀಕಾರವಾದ ಬೆನ್ನಲ್ಲೇ, ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಅವರು ಭಗತ್ ಸಿಂಗ್ ಅವರಿಗೂ ಮರಣೋತ್ತರವಾಗಿ ಭಾರತ ರತ್ನ ನೀಡುವಂತೆ ಒತ್ತಾಯಿಸಿ ನಿರ್ಣಯ ಮಂಡಿಸಲು ಅನುಮತಿ ಕೋರಿದರು. ಆದರೆ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ...

ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಶಿವಮೊಗ್ಗ ಮಾದಿಗ ಮಹಾಸಭಾ ಪ್ರತಿಭಟನೆ

ಇಮೇಜ್
ಶಿವಮೊಗ್ಗ: ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಮಹಾಸಭಾ ಜಿಲ್ಲಾ ಸಮಿತಿ ಹಾಗೂ ಜಿಲ್ಲೆಯ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಸರ್ಕಾರ ಒಳ ಮೀಸಲಾತಿ ಜಾರಿಗೆ ತಡ ಮಾಡುತ್ತಿರುವುದನ್ನು ಖಂಡಿಸಿದ ಪ್ರತಿಭಟನಾಕಾರರು ತಕ್ಷಣ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಸಂಘಟನೆಗಳ ಮುಖಂಡರು, ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಗೆ ತರುವುದು ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಪ್ರಮುಖ ಭರವಸೆಯಾಗಿದ್ದರೂ, ಇನ್ನೂ ಸ್ಪಷ್ಟ ನಿರ್ಧಾರ ಕೈಗೊಳ್ಳದೇ ಕಾಲಹರಣ ಮಾಡುತ್ತಿರುವುದು ಅಸಮಾಧಾನಕಾರಿ ಎಂದು ಆರೋಪಿಸಿದರು. ಮಾದಿಗ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ತಲತಲಾಂತರಗಳಿಂದ ಅನ್ಯಾಯ ಅನುಭವಿಸುತ್ತಿದ್ದು, ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ನೀಡಬೇಕು ಎಂಬ ಬೇಡಿಕೆಯನ್ನು ಕಳೆದ 35 ವರ್ಷಗಳಿಂದ ಹೋರಾಟದ ಮೂಲಕ ಮುಂದಿಟ್ಟುಕೊಂಡು ಬಂದಿದೆ ಎಂದು ಹೇಳಿದರು. ಈ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಕೂಡ ಮಾನ್ಯತೆ ನೀಡಿದ್ದು, 2024ರ ಆಗಸ್ಟ್ 1ರಂದು ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂಬ ಐತಿಹಾಸಿಕ ತೀರ್ಪು...

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಜಾಗತಿಕ ಗಂಭೀರ ಸಮಸ್ಯೆ : ಉಮಾ ರೆಡ್ಡಿ

ಇಮೇಜ್
ಶಿವಮೊಗ್ಗ : ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಮ್ಮ ಮುಂದೆ ಇರುವ ಗಂಭೀರ ಸಮಸ್ಯೆಯಾಗಿದೆ. ಜಾಗತಿಕವಾಗಿ, ಗೊಬ್ಬರವಾಗುವ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯಗೊಳಿಸಲಾಗುತ್ತಿದೆ. ಇದನ್ನು ಪರಿಹರಿಸುವುದು ಒಂದು ಪ್ರಮುಖ ಮತ್ತು ತುರ್ತು ಸಮಸ್ಯೆಯಾಗಿದೆ ಎಂದು  ಬೆಂಗಳೂರಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷೆ ಉಮಾ ರೆಡ್ಡಿ ತಿಳಿಸಿದರು.   ಶಿವಮೊಗ್ಗದ ಗಾಜನೂರಿನ ಸಮೀಪದಲ್ಲಿರುವ  ಎಕೊವಿನ್  ನಿಯೋಧ್ಯಂ ನವೋದ್ಯಮದ  ಮುಖ್ಯ ಪಾಲುದಾರರಾದ ಶ್ರೀಮತಿ ಸುನೀತ ಗಣೇಶ ಅಂಗಡಿಯವರ ಜೈವಿಕ ಪ್ಲಾಸ್ಟಿಕ್ ಉತ್ಪಾದನಾ ತಯಾರಿಕಾ ಘಟಕಕ್ಕೆ ಭೇಟಿ ನೀಡಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕ  ಗಣೇಶ ಅಂಗಡಿ ಇವರಿಂದ ಸನ್ಮಾನಿತರಾಗಿ ಮಾತನಾಡಿದ ಅವರು, ಇದು ಮೆಕ್ಕೆಜೋಳವನ್ನು ಬಳಸಿಕೊಂಡು ಜೈವಿಕ ವಿಘಟನೀಯ ಪ್ಲಾಸ್ಟಿಕ್ ಉತ್ಪಾದನಾ ಘಟಕವಾಗಿದೆ. ಇದು ಪ್ಲಾಸ್ಟಿಕ್‌ಗೆ ಬಾಳಿಕೆ ಬರುವ ಮತ್ತು ಆಹಾರ-ಸುರಕ್ಷಿತ ಪರ್ಯಾಯವನ್ನು ನೀಡುತ್ತದೆ. ನಮಗೆ ಪರ್ಯಾಯವಿಲ್ಲದಿದ್ದರೆ ಪ್ಲಾಸ್ಟಿಕ್ ಬಳಕೆಯನ್ನು ತಡೆಯಲು ಯಾವುದೇ ಮಾರ್ಗವಿಲ್ಲ. ದೊಡ್ಡ ಬ್ರ್ಯಾಂಡ್ ಗಳು ಸೆಣಬು ಮತ್ತು ಬಟ್ಟೆ ಚೀಲಗಳನ್ನು ಖರೀದಿಸಬಹುದಾದರೂ, ಭಾರತೀಯ ಮಾರುಕಟ್ಟೆಯ ಬಹುಭಾಗವನ್ನು ಒಳಗೊಂಡಿರುವ ಮಧ್ಯಮ ಮತ್ತು ಸಣ್ಣ ವ್ಯವಹಾರಗಳು ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತಲೇ ಇವೆ ಎಂದರು. ಪ್ಲಾಸ್ಟಿಕ್ ಮಾಲಿನ್ಯಕ್ಕೆ ಸಂಬಂಧಿಸಿ...

55ನೇ ರಾಷ್ಟ್ರೀಯ ಸುರಕ್ಷತಾ ಸಪ್ತಾಹದ ಅಂಗವಾಗಿ ಬೃಹತ್ ರಕ್ತದಾನ ಶಿಬಿರ

ಇಮೇಜ್
ರಕ್ತದಾನಕ್ಕಿಂತ ಬೇರೆ ದಾನ ಮತ್ತೊಂದು ಇಲ್ಲ ರಕ್ತದಾನ ಪವಿತ್ರದಾನ - ಸಂದೀಪ್ ಟಿ ಆರ್  ರಕ್ತದಾನ ಶ್ರೇಷ್ಠದಾನ ರಕ್ತದಾನ ಪವಿತ್ರದಾನ ರಕ್ತದಾನಕ್ಕಿಂತ ಬೇರೆ ದಾನ ಮತ್ತೊಂದಿಲ್ಲ ಎಂದು ಶಂಕರ್ ನಾರಾಯಣ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ನ ಅಭಿಯಂತರರಾದ ಸಂದೀಪ್ ಡಿಆರ್ ನುಡಿದರು ಅವರು ಜೋಗದ ಶಂಕರ್ ನಾರಾಯಣ ಕನ್ಸ್ಟ್ರಕ್ಷನ್ ಪ್ರವೇಟ್ ಲಿಮಿಟೆಡ್  ಶಿವಮೊಗ್ಗ ರೆಡ್ನ ರಕ್ತ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ  ಚಾಲನೆ  ನೀಡಿ ಮಾತನಾಡಿದರು. ಇಂದು ಸಕಾಲದಲ್ಲಿ ರಕ್ತ ಸಿಗದೇ ಸಾಕಷ್ಟು ಜನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಈ ನಿಟ್ಟಿನಲ್ಲಿ ಎಲ್ಲಾ ಯುವ ಯುವತಿಯರು ಮುಂದೆ ಬಂದು ರಕ್ತದಾನ ಮಾಡಿ ಪವಿತ್ರ ರಕ್ತದಾನಿಗಳಾಗಬೇಕೆಂದು ಕರೆ ನೀಡಿದರು 120 ಬಾರಿ ರಕ್ತದಾನ ಮಾಡಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಧರಣೇಂದ್ರ ದಿನಕರ್ ಅವರು ರಕ್ತದಾನದಿಂದ ದೀರ್ಘಾಯುಷ್ಯವುಳ್ಳವರಾಗಬಹುದು ಹಾಗೂ ಸದಾ ಆರೋಗ್ಯವಂತರಾಗಿ ಬದುಕಬಹುದು ಹಾಗೆ ಪ್ರತಿನಿತ್ಯ ನಾವು ಲವಲವಿಕೆಯಿಂದ ಇರಲು ಸಾಧ್ಯ ಎಂದು ತಿಳಿಸಿದರು   ಇದೇ ಸಂದರ್ಭದಲ್ಲಿ ಕಾರ್ಯ ನಿರ್ವಾಹಕ ಅಭಿಯಂತರರಾದ ಉಮಾಪತಿ ಅವರು ಮಾತನಾಡುತ್ತಾ ಇಂದು ಮೂಢನಂಬಿಕೆಯಿಂದ ಸಾಕಷ್ಟು ಜನ ರಕ್ತದಾನ ಮಾಡಲು ಹಿಂಜರಿಯುತ್ತಿದ್ದಾರೆ ರಕ್ತದಾನ ಮಾಡುವುದರಿಂದ ಲಾಭವೇ ಹೆಚ್ಚು ಹೊರೆತು ನಮಗೆ ಯಾರಿಗೂ ನಷ್ಟವಾಗುವುದಿಲ್ಲ ನಮ್ಮ ದೇಹ ಮನಸ್ಸು ಸದಾ ಸದೃಢವಾ...

ಪ್ಲಾಸ್ಟಿಕ್ ಬಳಕೆಯು ಆರೋಗ್ಯಕ್ಕೆ ಹಾನಿಕರ

ಇಮೇಜ್
ಶಿವಮೊಗ್ಗ: ಪ್ಲಾಸ್ಟಿಕ್ ಬಳಸುವುದು ಆರೋಗ್ಯಕ್ಕೆ ಹಾನಿಕರ. 2022ರಲ್ಲಿ ಪ್ಲಾಸ್ಟಿಕ್ ಬ್ಯಾನ್ ಆಗಿದ್ದರೂ ಕೂಡ ಜನರು ಅತಿ ಹೆಚ್ಚು ಪ್ಲಾಸ್ಟಿಕ್ ಬಳಕೆಯನ್ನು ಮಾಡಿ ಕ್ಯಾನ್ಸರ್ ರೋಗ ಮತ್ತು ಇತರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಪ್ರಾಧ್ಯಾಪಕ ಡಾ. ಪರಿಸರ ನಾಗರಾಜ್ ಹೇಳಿದರು. ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಜನರು ಜಾಗೃತರಾಗಬೇಕು. ವಿದ್ಯಾವಂತರು, ಅಧಿಕಾರಿವರ್ಗ, ಉನ್ನತ ಅಧಿಕಾರಿ ವರ್ಗದವರು, ಸಂಘ ಸಂಸ್ಥೆಗಳು ಎಲ್ಲ ಒಗ್ಗಟ್ಟಾಗಿ ಹೆಚ್ಚು ಅರಿವಿನ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಪ್ಲಾಸ್ಟಿಕ್ ನಿಂದ ಆಗುವ ಅನಾಹುತಗಳನ್ನು ತಪ್ಪಿಸುವುದಕ್ಕೆ ಸಾಕ್ಷ್ಯಚಿತ್ರಗಳ ಮುಖಾಂತರ ತಿಳಿಸಬೇಕು ಎಂದು ತಿಳಿಸಿದರು. ಜನರು ಪ್ಲಾಸ್ಟಿಕ್ ಬಾಟಲಿಯ ನೀರು ಬಳಸುವುದನ್ನು ಕಡಿಮೆ ಮಾಡಬೇಕು ಮತ್ತು ಪೇಪರ್ ಲೋಟದಲ್ಲಿ ಬಿಸಿಯಾಗಿರುವ ಯಾವುದೇ ದ್ರವ್ಯಗಳನ್ನ ಸ್ವೀಕರಿಸಬಾರದು. ಜನಗಳು ಕುಡಿಯುವ ನೀರಿನ ಬಗ್ಗೆ ತುಂಬಾ ಗಮನ ಹರಿಸಬೇಕಾಗಿದೆ. ಇವತ್ತಿನ ವಾತಾವರಣದಲ್ಲಿ ಕಲುಷಿತ ನೀರು ಹೆಚ್ಚಾಗಿರುವುದರಿಂದ ಹಾಗೂ ವಾತಾವರಣದ ವೈಪರಿತ್ಯದಿಂದ ಶುದ್ಧವಾದ ನೀರನ್ನು ಕುಡಿಯುವುದು ಕಷ್ಟವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಶುದ್ಧವಾದ ನೀರು ಕುಡಿದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾ ಗಮನಹರಿಸಬೇಕು ಎಂದು ತಿಳಿಸಿದರು. ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್ ಡಿ ಮಾತನಾಡಿ,...

ವಿಜಯರತ್ನ ಪುರಸ್ಕೃತ ಪ್ರದೀಪ್ ವಿ.ಎಲಿಗೆ ಸನ್ಮಾನ

ಇಮೇಜ್
ಶಿವಮೊಗ್ಗ: ಕನ್ನಡ ದಿನಪತ್ರಿಕೆ ವಿಜಯವಾಣಿ ನೀಡುವ ವಿಜಯರತ್ನ ಇಂಟರ್ ನ್ಯಾಷನಲ್ 2026 ಪ್ರಶಸ್ತಿ ಪುರಸ್ಕೃತ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕ ಪ್ರದೀಪ್ ವಿ.ಎಲಿ ಅವರಿಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಉದ್ಯಮದಲ್ಲಿ ಶ್ರಮ ಹಾಗೂ ಪ್ರಾಮಾಣಿಕತೆ ಇದ್ದರೆ ಅಂತರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ಸಾಧ್ಯ ಎಂದು ತಿಳಿಸಿದರು. ಉದ್ಯಮ ಕ್ಷೇತ್ರದಲ್ಲಿ ಸತತ ಪರಿಶ್ರಮ, ನಿಷ್ಠೆ ಮತ್ತು ಸಮಾಜಪರ ಬದ್ಧತೆ ಮೂಲಕ ಗಮನಾರ್ಹ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಪ್ರದೀಪ್ ವಿ.ಎಲಿ ಅವರನ್ನು “ವಿಜಯರತ್ನ” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವ್ಯವಹಾರದಲ್ಲಿ ಗುಣಮಟ್ಟ, ನಂಬಿಕೆ ಮತ್ತು ಸೇವಾ ಮನೋಭಾವವನ್ನು ಅಳವಡಿಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ ಎಂದರು. ಶಿವಮೊಗ್ಗ ಜಿಲ್ಲೆಯಲ್ಲಿ ಯುವ ಉದ್ಯಮಿಗಳ ಸಂಖ್ಯೆ ಹೆಚ್ಚಾಗಬೇಕು. ಸರ್ಕಾರದ ವತಿಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಶಿವಮೊಗ್ಗ ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕೆ ಸಂಘವು ಯುವ ಉದ್ಯಮಿಗಳಿಗೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಲಿದೆ ಎಂದು ತಿಳಿಸಿದರು. ಸನ್ಮಾನಿತ ಪ್ರದೀಪ್ ವಿ.ಎಲಿ ಮಾತನಾಡಿ, ಈ ಗೌರವ ನನ್ನ ಕುಟುಂಬ, ಸಹೋದ್ಯೋಗಿಗಳ ಆಶೀರ್ವಾದದ ಫಲ. ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರ ಕೂಡ ಇದೆ. ಮುಂದೆಯೂ ಸಮಾಜಮುಖಿ ಕಾರ್ಯ...

ಸುರೇಖ ಮುರಳೀಧರ್ ಗೆ "ಅತ್ಯುತ್ತಮ ರಾಷ್ಟ್ರೀಯ ಉಪಾಧ್ಯಕ್ಷರು" ಪ್ರಶಸ್ತಿ.

ಇಮೇಜ್
  ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನ 2025-26 ರ ಅಂತಾರಾಷ್ಟ್ರೀಯ  ಸಮ್ಮೇಳನವು ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆಯಿತು. ಆ ಸಂಧರ್ಭದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷೆಯಾಗಿ  ಸರ್ವ ಕ್ಷೇತ್ರಗಳಲ್ಲಿಯೂ ಅತ್ಯುತ್ತಮ ಸೇವೆ ಮಾಡಿದ ಸೀನಿಯರ್ ಸುರೇಖ ಮುರಳೀಧರ್ ರವರಿಗೆ  "ಅತ್ಯುತ್ತಮ ರಾಷ್ಟ್ರೀಯ ಉಪಾಧ್ಯಕ್ಷರು" ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಸೀನಿಯರ್ M. R. ಜಯೇಶ, ಶಾಸಕರಾದ ಶ್ರೀ ಕೃಷ್ಣಪ್ಪ, ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಜೆಸಿಐ ಪೂರ್ವ ರಾಷ್ಟ್ರೀಯ ಅಧ್ಯಕ್ಷರಾದ ಜೆಸಿ. TVN ಮೂರ್ತಿ, ಅವಧೂತ ಶ್ರೀ ವಿನಯ್ ಗುರುಜೀ ರವರು ಹಾಗೂ ವಿಶ್ವಾದ್ಯಂತ ಆಗಮಿಸಿದ ಸಾವಿರಾರು  ಸದಸ್ಯರು ಭಾಗವಹಿಸಿದ್ದರು. ಈ ಪ್ರಶಸ್ತಿಯು ಲಭಿಸಿರುವುದು ಸಂತಸ ಹಾಗೂ ಜವಾಬ್ದಾರಿಯನ್ನು ಹೆಚ್ಚಿಸಿದೆ. ಸಮಾಜಮುಖಿಯಾಗಿ ನಿಲ್ಲಲು ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ.  ಸಂಸ್ಥೆಯ ಆದರ್ಶ ಹಾಗೂ ತತ್ವ ಸದಾ ಮಾದರಿಯಾಗಿವೆ.  ಅತ್ಯುತ್ತಮ ಸೇವೆ ಸಲ್ಲಿಸಿ,   ಪ್ರಶಸ್ತಿಗೆ ಭಾಜನರಾಗಲು ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳು ಎಂದು ಸುರೇಖ ಮುರಳೀಧರ ಅಭಿಪ್ರಾಯ ವ್ಯಕ್ತಪಡಿಸಿದರು.

ಸೌತ್ - ವೆಸ್ಟ್ ಇಂಟರ್ ಯೂನಿವರ್ಸಿಟಿ ಮಹಿಳಾ ಕರಾಟೆ ಪಂದ್ಯಾವಳಿಗೆ ಆಯ್ಕೆ

ಇಮೇಜ್
  ಮಾರ್ಚ್ 10 ರಂದು ಧಾರವಾಡ ಕಾನೂನು ವಿಶ್ವವಿದ್ಯಾನಿಲಯ ದಲ್ಲಿ ಇಂಟರ್ ಯೂನಿವರ್ಸಿಟಿ  ಕರಾಟೆ ಪಂದ್ಯಾವಳಿ ಯಲ್ಲಿ ಶಿವಮೊಗ್ಗದ ಉಮೇಶ್ ಹಾಗೂ ಶೀಲಾವತಿ ಇವರ ಮಗಳಾದ ದೀಕ್ಷಾ . ಯು . ಅವರು CBR ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ 3ನೇ ವರ್ಷದ ಪದವಿ ಓದುತ್ತಿದ್ದು ಮತ್ತು ಸಹ್ಯಾದ್ರಿ  ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್  ಕರಾಟೆ ಅಸೋಸಿಯೇಷನ್ ನ ವಿದ್ಯಾರ್ಥಿಯದ ಇವರು -67 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಮಾರ್ಚ್ 16,17 and 18 ರಂದು ಮಧ್ಯ ಪ್ರದೇಶ ನ ಭೂಪಾಲ್ ನಲ್ಲಿ ನಡೆಯಲಿರುವ  ಸೌತ್ - ವೆಸ್ಟ್  ಇಂಟರ್ ಯೂನಿವರ್ಸಿಟಿ ಮಹಿಳಾ ಕರಾಟೆ ಪಂದ್ಯಾವಳಿಗೆ ಆಯ್ಕೆಯಾಗಿರುತ್ತಾರೆ. ಆಯ್ಕೆಯಾದಂತಹ ಕ್ರೀಡಾಪಟುವಿಗೆ ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್ ಕರಾಟೆ  ಅಸೋಸಿಯೇಷನ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯದಂತಹ ಸನ್ ಸೈ ನವೀನ್,  ಜಿಲ್ಲಾ ಉಪಾಧ್ಯಕ್ಷರಾದಂತಹ ಸನ್ ಸೈ ಸಾಧಿಕ್, ತರಬೇತಿದಾರರಾದ  ಸನ್ ಸೈ ಮಂಜುನಾಥ, ಮತ್ತು ಅಪೂರ್ವ ಮತ್ತು ಸಂಸ್ಥೆಯ ಸದಸ್ಯರು ಅವರಿಗೆ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

ಶಿವಮೊಗ್ಗದ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ನೆರವು ಕೋರಿ ಮುಖ್ಯಮಂತ್ರಿಗಳಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಮನವಿ

ಇಮೇಜ್
  ಬೆಂಗಳೂರು: ಶಿವಮೊಗ್ಗ ನಗರದ ಕ್ಯಾನ್ಸರ್ ಪೀಡಿತ ರೋಗಿಗಳ ಶಸ್ತ್ರಚಿಕಿತ್ಸೆ ಹಾಗೂ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡುವಂತೆ ಕೋರಿ ಶಿವಮೊಗ್ಗ ಶಾಸಕ ಶ್ರೀ ಎಸ್.ಎನ್. ಚನ್ನಬಸಪ್ಪ ಅವರು ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಶಿವಮೊಗ್ಗದ ಶಾಸಕರ ಕಛೇರಿಯಾದ ಕರ್ತವ್ಯ ಭವನಕ್ಕೆ ಕಳೆದ ಕೆಲವು ದಿನಗಳಿಂದ ಅನೇಕ ನಿವಾಸಿಗಳು ಭೇಟಿ ನೀಡಿ, ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ತಮ್ಮ ಕುಟುಂಬದ ಸದಸ್ಯರ ಶಸ್ತ್ರಚಿಕಿತ್ಸೆಗೆ ನೆರವಾಗುವಂತೆ ಅಹವಾಲು ಸಲ್ಲಿಸಿದ್ದರು. ಬಡ ಮತ್ತು ಮಧ್ಯಮ ವರ್ಗದ ಈ ರೋಗಿಗಳಿಗೆ ಚಿಕಿತ್ಸಾ ವೆಚ್ಚ ಭರಿಸುವುದು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ, ಶಾಸಕರು ಇಂದು ನೇರವಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದರು. "ಕ್ಯಾನ್ಸರ್ ಪೀಡಿತ ರೋಗಿಗಳ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಅವರಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯವಿದೆ. ಆದ್ದರಿಂದ 'ಮುಖ್ಯಮಂತ್ರಿ ಪರಿಹಾರ ನಿಧಿ'ಯ (CMRF) ಅಡಿಯಲ್ಲಿ ಆದ್ಯತೆಯ ಮೇರೆಗೆ ಆರ್ಥಿಕ ಸಹಾಯವನ್ನು ಮಂಜೂರು ಮಾಡಿ, ರೋಗಿಗಳ ಪ್ರಾಣ ಉಳಿಸಲು ಸಹಕರಿಸಬೇಕು" ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಸಲ್ಲಿಸಿದರು.

ಮಹಿಳೆಯರು ಸಂಘಟಿತರಾಗುವುದು ಅತ್ಯಂತ ಅವಶ್ಯ

ಇಮೇಜ್
ಶಿವಮೊಗ್ಗ: ಸಮಾಜದ ಬೆಳವಣಿಗೆಗೆ ಮಹಿಳೆಯರ ಪಾತ್ರ ದೊಡ್ಡದು. ಮಹಿಳೆಯರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು, ಆರ್ಥಿಕವಾಗಿ ಸದೃಢರಾಗಲು ಸಂಘಟಿತರಾಗುವುದು ಮುಖ್ಯ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಜಿಲ್ಲಾ ಸರ್ವೋದಯ ಮಂಡಲದಿಂದ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಸಾಧನೆ ಮಾಡಿದ ಮಹಿಳೆಯರು ಮತ್ತು ಆಕಾಶವಾಣಿ ಆರ್ ಜೆ ಬಳಗದವರನ್ನು ಸನ್ಮಾನಿಸಿ ಮಾತನಾಡಿದರು. ಹೆಣ್ಣು ಮಕ್ಕಳು ಸ್ವಾವಲಂಬಿಯಾಗಬೇಕು. ಮಹಿಳೆ ತನ್ನ ಪ್ರಯತ್ನ, ಪರಿಶ್ರಮದಿಂದ ಈಗ ಎಲ್ಲಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾಳೆ. ತಾನು ಪಡೆದುಕೊಂಡ ಶಿಕ್ಷಣದಿಂದ ಸ್ವತಂತ್ರವಾಗಿ ಜೀವನ ಮಾಡುವ ಶಕ್ತಿ ಹೊಂದಿದ್ದಾಳೆ. ಮಹಿಳೆಯರ ಅಭಿವೃದ್ಧಿ ಎಂದರೆ ಒಟ್ಟಾರೆ ಸಮಾಜದ ಅಭಿವೃದ್ಧಿ ಎಂದು ತಿಳಿಸಿದರು. ಮನೋವೈದ್ಯೆ ಕೆ.ಎಸ್.ಪವಿತ್ರ ಮಾತನಾಡಿ, ಮಹಿಳೆಯು ಆರೋಗ್ಯದಿಂದ ಇದ್ದರೆ ಮನೆಗೆ ಅಡಿಪಾಯವಿದ್ದಂತೆ. ಅವರು ಆರೋಗ್ಯದಿಂದ ಇದ್ದಷ್ಟು ಮನೆ ಸಬಲವಾಗಿರುತ್ತದೆ. ಮಹಿಳೆಯ ದೃಢಸಂಕಲ್ಪವು ಯಾವುದೇ ಸವಾಲನ್ನು ಜಯಿಸಬಹುದು ಎಂದರು. ಜಿಲ್ಲಾ ಸರ್ವೋದಯ ಮಂಡಲ ಅಧ್ಯಕ್ಷ ಆರ್.ಮನೋಹರ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆ ಕೇವಲ ಅಪರಾಧವಲ್ಲ, ಅದೊಂದು ನೈತಿಕ ಕಳಂಕ ಮತ್ತು ಸಾಂವಿಧಾನಿಕ ಅವಮಾನ ಎಂದು ಹೇಳಿದರು. ಸನ್ಮಾನಿತರಾದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಎಮಿರೇಟ್ಸ್ ಪ...

ಶಿಕ್ಷಕರಿಗೆ ಶ್ವಾನ ಕಾಯುವ ಕಾಯಕ! — ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ

ಇಮೇಜ್
ಶಿವಮೊಗ್ಗ, ಮಾರ್ಚ್ 11: ರಾಜ್ಯ ಸರ್ಕಾರ ಬೀದಿ ನಾಯಿಗಳ ನಿಯಂತ್ರಣ ಕಾರ್ಯಕ್ಕೆ ಶಾಲಾ ಶಿಕ್ಷಕರನ್ನೇ ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡುವ ನಿರ್ಧಾರ ತೆಗೆದುಕೊಂಡಿರುವುದು ಹಾಸ್ಯಾಸ್ಪದ ಹಾಗೂ ವಿಷಾದನೀಯವಾಗಿದೆ ಎಂದು ಶಿವಮೊಗ್ಗದ ಮಾಜಿ ಕಾರ್ಪೊರೇಟರ್ ಐಡಿಯಲ್ ಗೋಪಿ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈಗಾಗಲೇ ಶಿಕ್ಷಕರು ಹಲವು ಅನ್ಯ ಇಲಾಖೆಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಜನಗಣತಿ, ಜಾತಿ ಗಣತಿ, ಮತದಾರರ ಪಟ್ಟಿ ಪರಿಷ್ಕರಣೆ, ಮಕ್ಕಳಿಗೆ ಹಾಲು–ಮೊಟ್ಟೆ ವಿತರಣೆ, ಮಧ್ಯಾಹ್ನದ ಊಟ ವ್ಯವಸ್ಥೆ, ಬಾಳೆಹಣ್ಣು ವಿತರಣೆ ಸೇರಿದಂತೆ ಅನೇಕ ಕಾರ್ಯಗಳನ್ನು ಶಿಕ್ಷಕರು ನಿರ್ವಹಿಸುತ್ತಿದ್ದಾರೆ. ಇದರ ನಡುವೆಯೇ ಇದೀಗ ಬೀದಿ ನಾಯಿಗಳ ನಿಯಂತ್ರಣ ಕಾರ್ಯಕ್ಕೂ ಶಿಕ್ಷಕರನ್ನೇ ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡುವಂತೆ ಸೂಚಿಸಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. “ಮಕ್ಕಳಿಗೆ ಪಾಠ ಮಾಡುವ ಪವಿತ್ರ ಕೆಲಸವನ್ನು ಬಿಟ್ಟು ಶಿಕ್ಷಕರು ಬೀದಿ ನಾಯಿಗಳನ್ನು ಕಾಯುವ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು,” ಎಂದು ಮಾಜಿ ಕಾರ್ಪೊರೇಟರ್ ಐಡಿಯಲ್ ಗೋಪಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಶಿಕ್ಷಕರ ಕೊರತೆ ಇದ್ದು, ಇಂತಹ ಅನ್ಯ ಇಲಾಖೆಯ ಕೆಲಸಗಳನ್ನು ನಿರ್ವಹಿಸುತ್ತಾ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು ಕಷ್ಟಕರವಾಗಿದೆ. ಇದೇ ಕಾರಣದಿಂದ ಸರ್ಕಾರಿ ...

ಕಥೆಗಳು ಕಣ್ಮರೆಯಾಗುತ್ತಿದೆ - ಡಾ. ವಿಜಯಾದೇವಿ

ಇಮೇಜ್
ಶಿವಮೊಗ್ಗ: ಈ ಹೊತ್ತಿಗೆ ಮಕ್ಕಳಿಂದ ಹಿಡಿದು ಎಲ್ಲರಲ್ಲೂ  ನೈತಿಕತೆ ಪ್ರಜ್ಞೆ ಮೂಡಲು ಕಥೆಗಳು ಸಹಾಯಕವಾಗಿದೆ.ಆಧುನಿಕತೆಯಲ್ಲಿ ಕಣ್ಮರೆಯಾಗುತ್ತಿರುವುದು ದುರಂತಕ್ಕೆ ಕಾರಣವಾಗುತ್ತಿದೆ.  ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಎಮಿರೇಟ್ಸ್ ಪ್ರಾಧ್ಯಾಪಕರಾದ ಡಾ. ವಿಜಯ ದೇವಿ ಹೇಳಿದರು. ಅವರು ಇಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಭದ್ರಾವತಿ ಆಕಾಶವಾಣಿ ಕೇಂದ್ರದ ಕೇಳುಗರ ಬಳಗ, ರೇಣುಕಪ್ಪಗೌಡ ಪ್ರತಿಷ್ಠಾನ, ಜಿಲ್ಲಾ ಸರ್ವೋದಯ ಮಂಡಲ, ಕಾಲೇಜಿನ ಕನ್ನಡ ವಿಭಾಗ, ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಆರ್ ಜೆ ಗಣೇಶ್ ಕೆಂಚನಾಲ್ ಅವರ ಬಾನುಲಿಯಿಂದ 'ಕಥೆ ನಿಮ್ಮ ಜೊತೆ' ಪುಸ್ತಕವನ್ನು, ಆಕಾಶವಾಣಿ ಕೇಳುಗರೊಂದಿಗೆ ಬಿಡುಗಡೆ ಮಾಡಿ  ಮಾತನಾಡಿದರು. ಜಗತಿನಲ್ಲಿ ಜೀವಂತಿಕೆ ನಡೆಯುತ್ತಿರುವುದು ಸೃಜನಶೀಲತೆಯ ಕಾರಣದಿಂದ. ಸಾಹಿತ್ಯದ ಮೂಲ ದ್ರವ್ಯ ಗ್ರಾಮೀಣ ಬದುಕಿನಲ್ಲಿದೆ.  ಅಂತಹ ಗ್ರಾಮೀಣ ಬದುಕಿನ ಸತ್ವವು ಈ ಕತೆ ಪುಸ್ತಕದಲ್ಲಿದೆ. ನೈತಿಕ ಮೌಲ್ಯಗಳ ಅಂತಸತ್ವವವನ್ನು ಕತೆಗಳ ಮೂಲಕ ಬಿತ್ತರಿಸುವುದು ಅಗತ್ಯವಾಗಿದೆ. ಬರಹ ಕೇವಲ ಸಂತಸವನ್ನು ನೀಡುವುದಲ್ಲ. ಬದಲಿಗೆ ವೈಯಕ್ತಿಕ ಜವಾಬ್ದಾರಿ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಕಲಿಸುತ್ತದೆ. ವೃತ್ತಿಯ ಮೂಲಕ ಸಮಾಜದ ಆರೋಗ್ಯವನ್ನು ಬಯಸುವ ಆಶಯ ಬಹಳ ಮುಖ್ಯ. ಕೃತಿಯೊಂದು ಸಮಾಜದ ಮಾನವೀಯ ಮೌಲ್ಯಗಳನ್ನು ಬೆಳೆಸಿದರೆ ಅದಕ್ಕಿಂತಲೂ ಬೇರೆ ಯಾವುದೂ ಇಲ್ಲ. ಓಡುವ ಜ...

ರಸ್ತೆ ಅಪಘಾತದಲ್ಲಿ ಪತ್ರಕರ್ತ ಅನಿಲ್ ಸಾವು – ಅನಾಥರದ ಕುಟುಂಬ

ಇಮೇಜ್
ಶಿವಮೊಗ್ಗ: ಪತ್ರಕರ್ತರ ಲೋಕವನ್ನು ಬೆಚ್ಚಿಬೀಳಿಸಿದ ದುಃಖದ ಘಟನೆ ಒಂದರಲ್ಲಿ ಬಿಟಿವಿ ಶಿವಮೊಗ್ಗ ಜಿಲ್ಲಾ ವರದಿಗಾರಾಗಿದ್ದ ಅನಿಲ್ ಕುಮಾರ್ ನಾಯ್ಕ (44) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸುದ್ದಿ ಜಗತ್ತಿನಲ್ಲಿ ಸದಾ ಚುರುಕಾಗಿ ಕಾರ್ಯನಿರ್ವಹಿಸುತ್ತಿದ್ದ ಅನಿಲ್ ಅವರ ಅಕಾಲಿಕ ನಿಧನ ಕುಟುಂಬದವರನ್ನು ಮಾತ್ರವಲ್ಲ, ಪತ್ರಿಕಾ ವಲಯವನ್ನೇ ದುಃಖ ಸಾಗರದಲ್ಲಿ ಮುಳುಗಿಸಿದೆ. ಅನಿಲ್ ಅವರು ಪತ್ನಿ ಹಾಗೂ ಒಬ್ಬ ಗಂಡು ಮಗುವನ್ನು ಅಗಲಿದ್ದು, ಕುಟುಂಬವು ದುಃಖದಲ್ಲಿ ಮುಳುಗಿದೆ. ಮನೆಯ ಆಧಾರಸ್ತಂಭವಾಗಿದ್ದ ಅನಿಲ್ ಅವರ ಅಕಾಲಿಕ ಮರಣದಿಂದ ಪತ್ನಿ ಮತ್ತು ಮಗು ಅನಾಥರಂತಾಗಿರುವುದು ಮನಕಲುಕುವ ಸಂಗತಿ. ಅನಿಲ್ ಅವರು ತಮ್ಮ ವೃತ್ತಿಜೀವನವನ್ನು ಟಿವಿ9ನಲ್ಲಿ ಕ್ಯಾಮೆರಾಮನ್ ಆಗಿ ಚಿಕ್ಕಮಗಳೂರಿನಲ್ಲಿ ಆರಂಭಿಸಿದ್ದರು. ನಂತರ ಬಿಟಿವಿಯಲ್ಲಿ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸಿ ಜನಸಾಮಾನ್ಯರ ಸಮಸ್ಯೆಗಳನ್ನು ಧೈರ್ಯವಾಗಿ ಹೊರತರುತ್ತಿದ್ದರು. ಪತ್ರಿಕೋದ್ಯಮದ ಮೇಲೆ ಅಪಾರ ಪ್ರೀತಿ ಹೊಂದಿದ್ದ ಅವರು ನಂತರ ತಮ್ಮದೇ ಖಾಸಗಿ ಯೂಟ್ಯೂಬ್ ಚಾನೆಲ್ ಆರಂಭಿಸಿ ಸಮಾಜಮುಖಿ ಸುದ್ದಿಗಳನ್ನು ಜನತೆಗೆ ತಲುಪಿಸುತ್ತಿದ್ದರು. ನಿನ್ನೆ ಸಂಜೆ ತಮ್ಮ ನಿವಾಸವಾದ ಕಟ್ಟೆ ಸುಬ್ಬಣ್ಣ ಕಲ್ಯಾಣ ಮಂಟಪದ ಹತ್ತಿರದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ವಿನೋಬಾನಗರ 60 ಅಡಿ ರಸ್ತೆಯ 12ನೇ ಅಡ್ಡ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಎದುರಿನಿಂದ ಬಂದ ಬೈಕ್ ಸವಾರನ ಅಜಾ...

ದೇಶವನ್ನು ಮುನ್ನಡೆಸುವಂತಹ ನಾಯಕತ್ವ ಸಿಕ್ಕಿರುವುದು ನಮ್ಮ ಸೌಭಾಗ್ಯ

ಇಮೇಜ್
  ಶಿವಮೊಗ್ಗ : ದೇಶಕ್ಕೆ ಒಳ್ಳೆಯ ಲೀಡರ್ ಶಿಫ್ ಸಿಕ್ಕಿದೆ ಎಂದು ಎಫ್ ಐಸಿಸಿಐನ ಕರ್ನಾಟಕ ಸ್ಟೇಟ್ ಕೌನ್ಸಿಲ್‌ನ ಮೆಂಟರ್ ಹಾಗೂ ಯುಕೆ ಅಂಡ್ ಕೋನ ಫೌಂಡರ್ ಉಲ್ಲಾಸ್ ಕಾಮತ್ ಹೇಳಿದರು. ನಗರದ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಶಾಂತಲಾ ಆಟೋ ಮೇಷನ್ ಪ್ರೈವೆಟ್ ಲಿಮಿಟೆಡ್ ವತಿಯಿಂದ ಹೆಚ್ಚುವರಿಯಾಗಿ ಅಳವಡಿಸಿರುವ ಸೆಲ್ಫ್ ರಿಲಯಂಟ್ ಬ್ಲಾಕ್‌ನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ ಚೆನ್ನಾಗಿದ್ದರೆ ಪ್ರಜೆಗಳು ಚೆನ್ನಾಗಿರುತ್ತಾರೆ ಎಂದರು. ದೇಶವನ್ನು ಮುನ್ನಡೆಸುವಂತಹ ನಾಯಕತ್ವ ಸಿಕ್ಕಿರುವುದು ನಮ್ಮ ಸೌಭಾಗ್ಯ. ಉದ್ಯಮಿಗಳಿಗೆ ಈ ಹಿಂದೆ ೫ರಿಂದ ೧೦ವರ್ಷಗಳ ಟಾರ್ಗೆಟ್‌ನ್ನು ನೀಡಲಾಗುತ್ತಿತ್ತು. ಈಗ ೨೦೪೭ರ ವಿಕಸಿತ ಭಾರತ ಹೇಗಿರುಬೇಕೆಂಬ ಗುರಿಯೊಂದಿಗೆ ಮುನ್ನಡೆ ಯಲಾಗುತ್ತಿದೆ. ೨೦೩೨ ಕರ್ನಾಟಕ ಟ್ರಿಲಿಯನ್ ಡಾಲರ್ ಎಕಾನಮಿ ಆಗಲಿದೆ ಎಂದು ಹೇಳಿದರು. ಐಟಿ ಇಂಡಸ್ಟ್ರೀ ಹಾಗೂ ಎಐಗಳು ಪ್ರವಾಹದ ರೂಪದಲ್ಲಿ ಬರುತ್ತಿಲ್ಲ. ಸುನಾಮಿಯ ರೂಪದಲ್ಲಿ ಹಾದು ಹೋಗುತ್ತಿದೆ. ಇದರೊಂದಿಗೆ ಏನೆಲ್ಲಾ ಹೋಗುತ್ತವೆ ಎಂಬುದು ಗೊತ್ತಿಲ್ಲ. ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಪ್ರತಿವರ್ಷ ೨೧ ಲಕ್ಷ ಪದವೀಧರರು ಹೊರಗೆ ಬರುತ್ತಿದ್ದಾರೆ. ಅವರಿಗೆ ಉದ್ಯೋಗ ಮಾರುಕಟ್ಟೆ ಕಲ್ಪಿಸಲು ತಯಾರಿಕಾ ವಲಯವೇ ಆಧಾರ ಸ್ಥಂಭವಾಗಲಿದೆ ಎಂದು ಹೇಳಿದರು. ೪೦ ವರ್ಷಗಳ ಕಾಲ ರುದ್ರೇ ಗೌಡರು ಕೈಗಾರಿಕಾ ಕ್ಷೇತ್ರದಲ್ಲಿ ಸವೆಸಿದ ಹಾದಿಯನ್ನು ಸ್ಮ...

ಭಾರತೀಯ ಕಂಪನಿಗಳು ಜಾಗತಿಕ ಗುಣಮಟ್ಟದ ಕಂಪನಿಗಳಾಗಲಿ

ಇಮೇಜ್
ಶಿವಮೊಗ್ಗ: ಭಾರತದ ಉತ್ಪಾದನಾ ಕಂಪನಿಗಳು ಜಾಗತಿಕ ಗುಣಮಟ್ಟದ ಉತ್ಪಾದನಾ ಕಂಪನಿಗಳಾಗಿ ರೂಪುಗೊಳ್ಳಬೇಕು ಎಂದು ಕೈಗಾರಿಕೋದ್ಯಮಿ ಎಸ್.ರುದ್ರೇಗೌಡ ಹೇಳಿದರು. ಭಾರತ್ ಫ್ರಿಟ್ಜ್ ವರ್ನರ್ ಕಂಪನಿಯು ಶಿವಮೊಗ್ಗದಲ್ಲಿ ಆಯೋಜಿಸಿದ್ದ ಶಿವಮೊಗ್ಗ ಗ್ರಾಹಕರ ಸಭೆ, ಗ್ರಾಹಕರು ಮತ್ತು ಸೇವಾ ಪೂರೈಕೆದಾರರ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದ ಉತ್ಪಾದನಾ ಕಂಪನಿಗಳು ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಸೌಲಭ್ಯ ಬಳಸಿಕೊಂಡು ಜಾಗತಿಕ ಕಂಪನಿಯೊಂದಿಗೆ ಸ್ಪರ್ಧಿಸಲು ಜಾಗತಿಕ ಗುಣಮಟ್ಟದ ಉತ್ಪಾದನಾ ಕಂಪನಿಯಾಗಬೇಕು. ನಮ್ಮ ಕೆಲಸದಲ್ಲಿನ ನಿಖರತೆ ಮತ್ತು ನಾವೀನ್ಯತೆಗೆ ಬದ್ಧತೆಯೊಂದಿಗೆ ನಾವು ಪ್ರಮುಖ ಜಾಗತಿಕ ಉತ್ಪಾದನಾ ಪೂರೈಕೆದಾರರಾಗಲು ಮೂಲಸೌಕರ್ಯವನ್ನು ನಿರಂತರವಾಗಿ ಹೆಚ್ಚಿಸುತ್ತಿದ್ದೇವೆ ಎಂದು ತಿಳಿಸಿದರು. ಭಾರತ್ ಫ್ರಿಟ್ಜ್ ವರ್ನರ್ ವ್ಯವಸ್ಥಾಪಕ ನಿರ್ದೇಶಕ ರವಿ ರಾಘವನ್ ಮಾತನಾಡಿ, ಭಾರತ್ ಫ್ರಿಟ್ಜ್ ವರ್ನರ್ ಭಾರತದಲ್ಲಿ ಪ್ರಧಾನ ಕಚೇರಿ ಹೊಂದಿರುವ ಜಾಗತಿಕ ಮುಂದುವರಿದ ಉತ್ಪಾದನಾ ಕಂಪನಿಯಾಗಿದೆ. ಯಂತ್ರೋಪಕರಣಗಳು, ಉತ್ಪಾದನಾ ಪರಿಹಾರಗಳು ಮತ್ತು ತಾಂತ್ರಿಕ ನಾವೀನ್ಯತೆಗಳಲ್ಲಿ ಹೆಸರಾಗಿದೆ. ಆರು ದಶಕಗಳಿಗೂ ಹೆಚ್ಚು ಕಾಲ ಅತ್ಯುನ್ನತ ಗುಣಮಟ್ಟದ ಯಂತ್ರಗಳನ್ನು ಉತ್ಪಾದಿಸುವಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಹೇಳಿದರು. ಏರೋಸ್ಪೇಸ್, ಆಟೋಮೋಟಿವ್, ಎಲೆಕ್ಟ್ರಾನಿಕ್ಸ್ ಮತ್ತು ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸೇವೆ ಸಲ್ಲಿಸುತ...

ಮಾ.06 ರಂದು ಬೆಳಿಗ್ಗೆ 10 ಗಂಟೆಗೆ ಅಂಬೇಡ್ಕರ್ ಭವನದಲ್ಲಿ ‘ಭೀಮ ಗಾಯನ’

ಶಿವಮೊಗ್ಗ, ಮಾರ್ಚ್ 04  : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಗಾಂಧಿ, ಬುದ್ದ, ಬಸವ ವಿಚಾರಧಾರೆಗಳನ್ನು ಜನಮಾನಸದಲ್ಲಿ ಜಾಗೃತಗೊಳಿಸಲು ನಾಡಿನ ಹೆಸರಾಂತ ಹಾಗೂ ಪರಿಣಿತಿ ಹೊಂದಿದ ಪರಿಶಿಷ್ಟ ಜಾತಿಯ ಕಲಾವಿದರನ್ನೊಳಗೊಂಡ ಕಲಾತಂಡದಿAದ ‘ಭೀಮ ಗಾಯನ’ ಕಾರ್ಯಕ್ರಮವನ್ನು ಮಾ.06 ರ ಬೆಳಿಗ್ಗೆ 10 ಗಂಟೆಗೆ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದೆ.  ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ವಿವಿಧ ಇಲಾಖೆ, ಸಂಘ ಸಂಸ್ಥೆಗಳು, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದ್ದು ಅಮ್ಮ ವಸುಂಧರೆ ಕಲಾತಂಡದವರು ‘ಭೀಮ ಗಾಯನ’ ಕಾರ್ಯಕ್ರಮವನ್ನು ನಡೆಸಿಕೊಡುವರು.  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು. ಸಂಸದರು, ವಿಧಾನ ಸಭಾ ಮತ್ತು ವಿಧಾನ ಪರಿಷತ್ ಶಾಸಕರು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಿಗಳ ಅಧ್ಯಕ್ಷರು, ಜನಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿ.ಪಂ ಸಿಇಓ ಹೇಮಂತ್ ಎನ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ, ಇತರೆ ಅಧಿಕಾರಿಗಳು ಪಾಲ್ಗೊಳ್ಳುವರು. ಗಾಯನ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು ...

ಸ್ವಯಂಚಾಲಿತ ರಕ್ತಸಂಗ್ರಹ ಯಂತ್ರದ ಉದ್ಘಾಟನೆ

ಇಮೇಜ್
  ಶಿವಮೊಗ್ಗ : ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ವತಿಯಿಂದ ರೆಡ್‌ ಕ್ರಾಸ್ ಸಂಜೀವಿನಿ ರಕ್ತ ಕೇಂದ್ರಕ್ಕೆ ರೋಟರಿ ಗ್ಲೋಬಲ್ ಗ್ರಾಂಟ್ ಮೂಲಕ ಸ್ವಯಂಚಾಲಿತ ರಕ್ತ ಸಂಗ್ರಹ ಯಂತ್ರವನ್ನು ಕೊಡುಗೆಯಾಗಿ ನೀಡಿದ್ದು, ಇದರ ಉದ್ಘಾಟನಾ ಸಮಾರಂಭ ಮಾ.1ರಂದು ಬೆಳಗ್ಗೆ 11 ಗಂಟೆಗೆ ಶಿವಮೊಗ್ಗದ ಜೆಎನ್‌ಎನ್‌ಸಿಇ ಎಂಬಿಎ ಸಭಾಂಗಣದಲ್ಲಿ ನಡೆಯಲಿದೆ ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಪ್ರೊ.ಎ.ಎಸ್. ಚಂದ್ರಶೇಖರ್ ಹೇಳಿದರು. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಯಂತ್ರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ರೋಟರಿ ನಿರ್ದೇಶಕ ಕೆ.ಪಿ. ನಾಗೇಶ್, ಜಿಲ್ಲಾ ಗವರ್ನರ್ ಪಾಲಾಕ್ಷ, ಜಿಲ್ಲಾ ಚೇರ್ಮನ್ ಡಿ.ಎಸ್. ರವಿ, ಪ್ರೊ. ಎ.ಎಸ್. ಚಂದ್ರಶೇಖರ್, ಕೆ.ಪಿ. ಶೆಟ್ಟಿ, ಎಸ್.ಪಿ. ದಿನೇಶ್, ಎ.ಎನ್. ಶಾಂತರಾಜಪ್ಪ, ಆ‌ರ್. ಬಸವರಾಜಪ್ಪ ಭಾಗವಹಿಸಲಿದ್ದಾರೆ ಎಂದರು. ಕೊಡುಗೆಯಾಗಿ ನೀಡಿದ ರಕ್ತ ಸಂಗ್ರಹಣಾ ಹಾಗೂ ವಿಂಗಡಣಾ ಯಂತ್ರ ಮತ್ತು ದಾನಿಗಳ ಮಂಚದ ಬೆಲೆ 42.90 ಲಕ್ಷ ರೂ. ಆಗಿದ್ದು, ಈ ಹಣವನ್ನು ಸಂಪೂರ್ಣವಾಗಿ ಅಮೆರಿಕದ ಮೋಡೆಸ್ಟ್ ರೋಟರಿ ಕ್ಲಬ್ ಅಮೆರಿಕದ ರೋಟರಿ ಜಿಲ್ಲೆ 5220 ಹಾಗೂ ರೋಟರಿ ಪ್ರತಿಷ್ಠಾನ ನೀಡಿದೆ ಎಂದರು. ಈ ಯಂತ್ರದಿಂದ ಹಲವು ಪ್ರಯೋಜನಗಳಿದ್ದು, ಒಂದು ರಕ್ತ ಸಂಗ್ರಹಣವನ್ನು ವಿವಿಧ ಬಗೆಯಲ್ಲಿ ಸಂಗ್ರಹಿಸಬಹುದಾಗಿದೆ. ಪ್ಲೇಟೆಟ್ ಮತ್ತು ಪ್ಲಾಸ್ಮಾ ಲಭ್ಯತೆಯಲ್ಲಿ ಹೆಚ್ಚಳವಾಗಲಿದೆ. ಕ್ಯಾನ್ಸರ್, ಅಪಘಾತ ಗಳು ಹಾಗೂ ಡೆಂಗ್ಯ...

ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಅಗತ್ಯ

ಇಮೇಜ್
ಶಿವಮೊಗ್ಗ: ರಾಜ್ಯದಲ್ಲಿ 2ನೇ ಹಂತದ ನಗರಗಳಲ್ಲಿನ  ಕೈಗಾರಿಕಾ ವಸಹಾತು ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ  ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಕೆಲಸ ಸರ್ಕಾರದ ಮಟ್ಟದಿಂದ  ಆಗಬೇಕಿದೆ ಎಂದು ಬೆಂಗಳೂರಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷೆ ಉಮಾ ರೆಡ್ಡಿ ತಿಳಿಸಿದರು . ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಆಯೋಜಿಸಿದ್ದ ಸಂಸ್ಥಾಪಕರ ದಿನಾಚರಣೆ 2025 ರ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ ಎಂಎಸ್ ಎಂ ಇ ಗಳಿಗೆ  ಇನ್ನು ಹೆಚ್ಚಿನ ಪ್ರಾಮುಖ್ಯತೆ ನೀಡಿ ಪ್ರೋತ್ಸಾಹಿಸಬೇಕಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಅವಕಾಶ ಇದೆ. ಸರ್ಕಾರವು ಇದಕ್ಕೆ ಸಹಕರಿಸಬೇಕು ಎಂದು ತಿಳಿಸಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಏಪ್ರಿಲ್ 24ರಿಂದ 26ರವರೆಗೆ ಎಫ್ಕೆಸಿಸಿಐ ವತಿಯಿಂದ ಗ್ಲೋಬಲ್ ಅಗ್ರಿಟೆಕ್ ಸಮ್ಮಿಟ್ ಹಮ್ಮಿಕೊಳ್ಳಲಾಗುವುದು. ಕೃಷಿ ಮತ್ತು ಆಹಾರ ಕ್ಷೇತ್ರ ಉತ್ತೇಜಿಸಲು ಕಾರ್ಯಕ್ರಮ ಆಯೋಜಿಸಲಾಗುವುದು. ಮೇ 29ರಿಂದ 31ರವರೆಗೆ ಗ್ಲೋಬಲ್ ಎಂಎಸ್ಎಂಇ ಕಾನ್ಕ್ಲೇವ್ ಆಯೋಜಿಸಲಾಗುತ್ತಿದೆ. 400ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳನ್ನು ಏರ್ಪಡಿಸಲಾಗುತ್ತದೆ. ಇದರಲ್ಲಿ ಜಿಲ್ಲಾ ವಾಣಿಜ್ಯ  ಮತ್ತು ಕೈಗಾರಿಕಾ ಮತ್ತು ಸಂಘವು ಸಕ್ರಿಯವಾಗಿ ಭಾಗವಹಿಸಿ ಎಂದು ಕರೆ ನೀಡಿದರು.  ಶಿವಮೊಗ್ಗ ಜಿಲ್ಲಾ  ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋ...

ಸದೃಢ ಆರೋಗ್ಯಕ್ಕಾಗಿ ಪ್ರತಿದಿನ ಯೋಗಾಭ್ಯಾಸ ಅವಶ್ಯ

ಇಮೇಜ್
ಶಿವಮೊಗ್ಗ: ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಪ್ರತಿ ದಿನ ಯೋಗ ಅಭ್ಯಾಸ ಮಾಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಹೇಳಿದರು. ಶಿವಗಂಗಾ ಯೋಗಕೇಂದ್ರದ 38 ಯೋಗ ಶಾಖೆಗಳ ಶಿಕ್ಷಕರಿಗೆ ಆಯೋಜಿಸಿದ್ದ ಮಾಸಿಕ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಒತ್ತಡದ ಬದುಕಿನಿಂದ ಮುಕ್ತರಾಗಲು ಯೋಗಾಭ್ಯಾಸವು ಅತ್ಯಂತ ಮುಖ್ಯ. ಗುರುಗಳ ಮಾರ್ಗದರ್ಶನದಿಂದ ಯೋಗವನ್ನು ಕಲಿಯಬೇಕು ಎಂದರು. 30 ವರ್ಷದಿಂದ ಸಾವಿರಾರು ಜನರಿಗೆ ಉಚಿತವಾಗಿ ಯೋಗ ಅಭ್ಯಾಸ ಕಲಿಸುವ ಮೂಲಕ ಜನರ ಆರೋಗ್ಯ ಕಾಪಾಡುತ್ತಿರುವ ಶಿವಗಂಗಾ ಯೋಗಕೇಂದ್ರದ ಕಾರ್ಯ ಶ್ಲಾಘನೀಯ. ಬೃಹತ್ ಸಂಸ್ಥೆಯಾಗಿ ಬೆಳೆದಿದ್ದು, ಇದನ್ನು ಮುನ್ನಡೆಸಿಕೊಂಡು ಹೋಗಬೇಕಿರುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಡಾ. ಗಾಯತ್ರಿ ಸಜ್ಜನ್ ಮಾತನಾಡಿ, ದಿನನಿತ್ಯದ ಬದುಕಿನಲ್ಲಿ ನಾವು ಎದುರಿಸುತ್ತಿರುವ ಆತಂಕ, ಭಯ, ಒತ್ತಡ ಹಾಗೂ ಮಾನಸಿಕ ಸಮಸ್ಯೆಗಳಿಂದ ದೂರವಾಗಲು ಭಕ್ತಿಯೋಗ ತುಂಬಾ ಸಹಕಾರಿಯಾಗಿದೆ ಎಂದು ಹೇಳಿದರು. ಎಂಎಲ್‌ಸಿ ಡಾ. ಧನಂಜಯ ಸರ್ಜಿ ಮಾತನಾಡಿ, ಒತ್ತಡದ ಬದುಕಿನಲ್ಲಿ ನಿದ್ರಾಹೀನತೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆಳವಾದ ಉಸಿರಾಟ, ಗಾಢ ನಿದ್ರೆ ಮನುಷ್ಯನಿಗೆ ತೀರಾ ಅಗತ್ಯ. ಯಾಂತ್ರಿಕ ಬದುಕಿನಲ್ಲಿ ಸಿಲುಕಿರುವ ಕುಟುಂಬಗಳು ಯೋಗಾಭ್ಯಾಸದಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು. ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರಯ್ಯ, ಸಂಸ್ಥೆಯ...

ಹೋಳಿ ಹಬ್ಬದ ಶುಭಾಶಯಗಳು

 ಹೋಳಿ ಹಬ್ಬದ ಶುಭಾಶಯಗಳು  ಚಂದ್ರೋದಯ ಪತ್ರಿಕೆ ಬಳಗದಿಂದ ಶುಭಾಶಯಗಳು

ಎಚ್ಎನ್ಎಲ್ ಕೃಷಿಮೇಳ

ಇಮೇಜ್
  ಕೃಷಿ ಬಗ್ಗೆ ರೈತರ ಆಸಕ್ತಿ ಕಡಿಮೆ ಆಗಿರುವುದರಿಂದ ಕೃಷಿ ಹಿಂದೆ ಬಿದ್ದಿದೆ, ಯುವ ರೈತರು ನಗರ ಪ್ರದೇಶದ ಆಕರ್ಷಣೆ ಹಾಗೂ ನೌಕರಿಗೆ ವ್ಯಾಪರಕ್ಕೆ ಒತ್ತು ಕಒಡುವಷ್ಟು ಕೃಷಿಗೆ ಕೊಡದ ಕಾರಣ ಕೃಷಿ ಹಿನ್ನಲೆಗೆ ಬಿದ್ದಿದೆ ಎಂದು ಕಾಶಿ ಪೀಠದ ಜಗದ್ಗುರು 1008 ಡಾ.ಮಲ್ಲಿಕಾಜರ್ುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದರು ಬೇಸರ ವ್ಯಕ್ತಪಡಿಸಿದರು. ಲಿಂ.ಶ್ರೀ ಮೃತ್ಯುಂಜಯ ಶಿವಾಚಾರ್ಯ ಶ್ರೀಗಳ ಪುಣ್ಯಾರಾಧನೆ ಹಾಗೂ ಲಿಂ.ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ಪುಣ್ಯಸ್ಮರಣೆ ಅಂಗವಾಗಿ ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಕೃಷಿಮೇಳ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ನಮ್ಮ ಪೂರ್ವಜರ ಕಾಲದಲ್ಲಿ ಕೃಷಿ ಉನ್ನತ ಸ್ಥಾನ ಪಡೆದಿತ್ತು, ವ್ಯಾಪಾರ ಮಧ್ಯಮ, ನೌಕರಿ ಕೊನೆಯ ಸ್ಥಾನ ಪಡೆದಿತ್ತು, ಆದರೀಗ ವ್ಯಾಪಾರ, ಉದ್ಯೋಗ ಮೊದಲೆರಡು ಸ್ಥಾನ ಪಡೆದು ಕೃಷಿಯನ್ನು ಕೊನೆಯ ಸ್ಥಾನಕ್ಕೆ ತಳ್ಳಿದೆ ಎಂದು ಹೇಳಿದರು. ಒಂದು ಮನೆಯಲ್ಲಿ ಇಬ್ಬರು ಮಕ್ಕಳಿದ್ದು ಒಬ್ಬರು ಕೃಷಿಯನ್ನು, ಮತ್ತೊಬ್ಬರು ನೌಕರಿಯನ್ನು ಅವಲಂಬಿಸಿದ್ದರೆ, ನಾವು ನೌಕರಿ ಇರುವ ಮಗನನ್ನು ನೋಡುವ ರೀತಿಯೇ ಬೇರೆಯಾಗಿರುತ್ತದೆ. ಇದನ್ನು ಬಿಡಬೇಕು ಎಂದ ಅವರು, ಭೂಮಿ ರಾಸಾಯನಿಕ ಗೊಬ್ಬರಗಳಿಂದ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದ್ದು, ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವತ್ತ ರೈತರು ಗಮನಕೊಡಬೇಕು ಎಂದರು.  ಇದು ಹೀಗೆ ಮುಂದುವರಿದರೆ ಭವಿಷ್ಯದಲ್...