ಪೋಸ್ಟ್‌ಗಳು

ಅಕ್ಟೋಬರ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜೆಸಿಐ ಸಂಸ್ಥೆಯ ಆಡಳಿತ ನಾಯಕರು ಮತ್ತು ಸಿ.ಎ.ಪಿ.ಪಿ ತರಬೇತಿ ಕಾರ್ಯಕ್ರಮ : ಜೆಸಿಐ ನ ಶಿಸ್ತಿನ ಮತ್ತು ಪರಿಣಾಮಕಾರಿಯಾದ ಆಡಳಿತಕ್ಕೆ ಆಧಾರವಾಗಿದೆ

ಇಮೇಜ್
     ಯುವ ನಾಯಕರನ್ನು ಬೆಳೆಯಿಸುವ, ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರಲು ಬದ್ಧವಾಗಿರುವ ಅಂತರರಾಷ್ಟ್ರೀಯ ಸಂಸ್ಥೆ ಜೆಸಿಐ (ಜೂನಿಯರ್ ಚೇಂಬರ್ ಇಂಟರ್ನ್ಯಾಷನಲ್). ವಿಶ್ವದಾದ್ಯಂತ ಸಾವಿರಾರು ಸ್ಥಳೀಯ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯ ಯಶಸ್ಸು ಕೇವಲ ಸೇವಾ ಚಟುವಟಿಕೆಯಲ್ಲಿ ಮಾತ್ರವಲ್ಲ, ಬಲವಾದ ಆಡಳಿತ ಮತ್ತು ಯೋಜಿತ ನಿರ್ವಹಣೆಯಲ್ಲಿ ಸಹ ಅಡಗಿದೆ.         ಈ ಉದ್ದೇಶದಿಂದ ಜೆಸಿಐ ಸಂಸ್ಥೆ ರೂಪಿಸಿರುವ ಪ್ರಮುಖ ಮಾರ್ಗದರ್ಶಿ ಕಾರ್ಯಕ್ರಮವೇ — CAPP (Chairmanship and Parliamentary Procedure). ಇದು ಪ್ರತಿ ಘಟಕದಲ್ಲಿಯೂ ಶಿಸ್ತಿನ ಆಡಳಿತ, ಪಾರದರ್ಶಕತೆ ಮತ್ತು ಕ್ರಮಬದ್ಧ ಸಭಾ ನಿರ್ವಹಣೆಯನ್ನು ತರಲು ವಿನ್ಯಾಸಗೊಳಿಸಲಾಗಿದೆ. ಇದರ ನಿಯಮಗಳು ಜಾಗತಿಕವಾಗಿ ಮಾನ್ಯತೆ ಪಡೆದ Robert’s Rules of Order (ರಾಬರ್ಟ್ ಹೋಕ್ ನಿಯಮಗಳು) ಆಧಾರದ ಮೇಲೆ ರೂಪಿತವಾಗಿವೆ. ಸಿ.ಎ.ಪಿ.ಪಿ ಕಾರ್ಯಕ್ರಮದ ಉದ್ದೇಶ :           ಸಿ.ಎ.ಪಿ.ಪಿ ಕಾರ್ಯಕ್ರಮದ ಪ್ರಮುಖ ಗುರಿ — ಪ್ರತಿ ಜೆಸಿಐ ಸ್ಥಳೀಯ ಘಟಕವು ಸಂಘಟನೆಯ ಧ್ಯೇಯ, ದೃಷ್ಟಿಕೋನ ಮತ್ತು ಮಾನದಂಡಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವಂತೆ ಪ್ರೇರೇಪಿಸುವುದು. ಇದರಲ್ಲಿ ಮುಖ್ಯವಾಗಿ: * ಸಂಘಟನೆಯ ಯೋಜನೆ ರೂಪಿಸುವುದು ಮತ್ತು ಗುರಿ ನಿಗದಿ * ದಾಖಲೆ ಮತ್ತು ವರದಿ ನಿರ್ವಹಣೆ * ಪಾರದರ್ಶಕ ಲೆಕ್ಕಪತ್ರ ನ...

ಕನ್ನಡ ರಾಜ್ಯೋತ್ಸವ ಅಂಗವಾಗಿ ಬೈಕ್ ಜಾಥಾ ನ.2ಕ್ಕೆ

ಇಮೇಜ್
  ಶಿವಮೊಗ್ಗ: ಕನ್ನಡ ರಾಜ್ಯೋತ್ಸವ ಅಂಗವಾಗಿ ಎವಿಎಲ್‌ಜಿಐ ಸಂಸ್ಥೆ ಶಿವಮೊಗ್ಗ ವಿಂಗ್ ವತಿಯಿಂದ ನ.2ರಂದು ಬೆಳಗ್ಗೆ 10ಕ್ಕೆ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ. ವಿದ್ಯಾನಗರದಲ್ಲಿ ಬಿ.ಹೆಚ್. ರಸ್ತೆಯ ಫ್ಲೈಓವರ್ ಬಳಿಯ ಆಂಜನೇಯ ದೇವಾಲಯದಿಂದ ಬೈಕ್ ಜಾಥಾ ಹೊರಡಲಿದೆ. ಬೆಕ್ಕಿನ ಕಲ್ಮಠ, ಎಸ್‌ಪಿಎಂ ರಸ್ತೆ, ಗಾಂಧಿ ಬಜಾರ್, ಶಿವಪ್ಪನಾಯಕ ವೃತ್ತ ಮೂಲಕ ಗೋಪಿ ವೃತ್ತದಲ್ಲಿ ಸಮಾರೋಪಗೊಳ್ಳಲಿದೆ. ಬಳಿಕ ಗೋಪಿ ವೃತ್ತದಲ್ಲಿ "ಹಚ್ಚೇವು ಕನ್ನಡದ ದೀಪ" ಎಂಬ ಸಮೂಹ ಗೀತಾ ಗಾಯನ ಕಾರ್ಯಕ್ರಮ ಲಕ್ಷ್ಮೀ ಮಹೇಶ್ ನೇತೃತ್ವದಲ್ಲಿ ಆಯೋಜಿಸಲಾಗಿದೆ ಎಂದು ಎವಿಎಲ್‌ಜಿಐ ಸಂಸ್ಥೆ ಶಿವಮೊಗ್ಗ ವಿಂಗ್ ಅಧ್ಯಕ್ಷೆ ಸುಷ್ಮಾ ಅರವಿಂದ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 7204200900, 7829567944 ಸಂಪರ್ಕಿಸಬಹುದಾಗಿದೆ.

ಗಾಂಧೀಜಿ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ಇಮೇಜ್
      ಶಿವಮೊಗ್ಗ: ಮಹಾತ್ಮ ಗಾಂಧಿ ಅವರ ತತ್ವ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ಸರ್ವೋದಯ ಮಂಡಲ ರಾಜ್ಯಾಧ್ಯಕ್ಷ ಸುರೇಶ್ ಹೇಳಿದರು.       ಗಾಂಧೀಜಿಯವರ ಮಾಸ ಅಂಗವಾಗಿ ರಾಜ್ಯಾದ್ಯಂತ ಎಲ್ಲಾ ಶಾಲಾ ಕಾಲೇಜುಗಳು ಹಾಗೂ ಸಮುದಾಯ ಸಂಸ್ಥೆಗಳಲ್ಲಿ ಆಯನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಭಾಷಣ ಸ್ಪರ್ಧೆ,  ಜಾಗೃತಿ ಕಾರ್ಯಕ್ರಮ, ಚಿಂತನೆ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.       ಗಾಂಧೀಜಿ ಅವರ ತತ್ವ, ಆದರ್ಶ ಗುಣಗಳು, ತ್ಯಾಗ ಹಾಗೂ ಅಹಿಂಸಾ ಮಾರ್ಗಗಳನ್ನು ಇಂದಿನ ಯುವ ಜನತೆ, ವಿದ್ಯಾರ್ಥಿಗಳು ಅಳವಡಿಸಿಕೊಂಡರೆ ಸದೃಢವಾದ ಸಮಾಜ ನಿರ್ಮಾಣ ಮಾಡಬಹುದು. ರಾಮರಾಜ್ಯ ಆಗುವುದರಲ್ಲಿ ಸಂದೇಹವಿಲ್ಲ ಎಂದು ತಿಳಿಸಿದರು.      ಗಾಂಧೀಜಿ ಅವರ ನಡೆನುಡಿಯಿಂದ ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ಜೀವನ ಮೌಲ್ಯ ಹಾಗೂ ಸಾತ್ವಿಕ ಮನೋಭಾವ ಮೂಡುತ್ತದೆ. ಮಹಾರಾಷ್ಟ್ರದಲ್ಲಿ ಕೈದಿಯೊಬ್ಬ ಗಾಂಧೀಜಿ ಅವರ ಜೀವನ ಚರಿತ್ರೆಯಿಂದ ಪ್ರೇರಣೆಗೊಂಡು ಮನಪರಿವರ್ತನೆಯಾಗಿದ್ದ ಎಂದರು.       ಕರ್ನಾಟಕ ಸರ್ವೋದಯ ಮಂಡಲದ ಜಿಲ್ಲಾಧ್ಯಕ್ಷ ಆರ್.ಮನೋಹರ್ ಮಾತನಾಡಿ, ಗಾಂಧೀಜಿ ಅವರ ಜೀವನವು ಎಂದೆಂದಿಗೂ ಪ್ರೇರಣಾದಾಯಕ. ಅವರು ತೋರಿಸಿಕೊಟ್ಟ ಸನ್ಮಾರ್ಗದಲ್ಲಿ ನಡೆಯುವುದರಿಂದ ನಮ್ಮ ಜೀವನವನ್ನು ಹಸನು ಮಾ...

ಬ್ರಾಟ್ ಚಿತ್ರ – ಯುವಜನತೆಯ ಬಂಡಾಯಕ್ಕೆ ನೂತನ ಧ್ವನಿ!

ಇಮೇಜ್
  ವಿಮರ್ಶೆ: ಚಂದ್ರೋದಯ ಪತ್ರಿಕೆ ನಿರ್ದೇಶನ: ಶಶಾಂಕ್ ನಟರು: ಡಾರ್ಲಿಂಗ್ ಕೃಷ್ಣ, ಮಾನಿಷಾ ಕಂದ್ಕೂರು, ಅಚ್ಯುತ್ ಕುಮಾರ್, ರಮೇಶ್ ಇಂದಿರಾ ಸಂಗೀತ: ಅರ್ಜುನ್ ಜನ್ಯ ನಿರ್ಮಾಪಕರು: ಡಾಲ್ಫಿನ್ ಎಂಟರ್‌ಟೇನ್‌ಮೆಂಟ್ ಬಿಡುಗಡೆ ದಿನಾಂಕ: ಅಕ್ಟೋಬರ್ 31, 2025 🌟 ಕಥಾಸಾರಾಂಶ       ‘ಬ್ರಾಟ್’ ಎಂಬ ಶೀರ್ಷಿಕೆಯಷ್ಟೇ ಚಿತ್ರವೂ ಬಂಡಾಯಭರಿತ! ತಂದೆ-ಮಗನ ನಡುವಿನ ಮೌಲ್ಯಗಳ ಸಂಘರ್ಷವನ್ನು ಶಶಾಂಕ್ ತಮ್ಮ ವೈಶಿಷ್ಟ್ಯಪೂರ್ಣ ಶೈಲಿಯಲ್ಲಿ ತೆರೆಮಾಡಿದ್ದಾರೆ. ಕುಟುಂಬ, ಪ್ರೀತಿ, ಆತ್ಮಗೌರವ ಮತ್ತು ಯುವ ಮನಸ್ಸಿನ ಅಸಮಾಧಾನ — ಈ ಎಲ್ಲದಕ್ಕೂ ಕಥೆಯ ಮೂಲಭೂತ ಅಂಶವಿದೆ.      ಡಾರ್ಲಿಂಗ್ ಕೃಷ್ಣ ಈ ಬಾರಿ ಲವರ್ ಬಾಯ್ ಅಲ್ಲ — ಬದಲಾಗಿ “ಗ್ರೇ ಷೇಡ್” ಪಾತ್ರದಲ್ಲಿ ಪ್ರೇಕ್ಷಕರನ್ನು ಆಕರ್ಷಿಸುತ್ತಾರೆ. ಅವನ ಜೀವನದಲ್ಲಿ ತಂದೆಯ ನಿಯಮಗಳು ಮತ್ತು ಸಮಾಜದ ನಿರೀಕ್ಷೆಗಳ ನಡುವಿನ ಹೋರಾಟವೇ ಚಿತ್ರದ ಕತೆ. 🎭 ಅಭಿನಯ          ಡಾರ್ಲಿಂಗ್ ಕೃಷ್ಣ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಭಾವನಾತ್ಮಕ ದೃಶ್ಯಗಳಲ್ಲಿ ಹಾಗೂ ಆಕ್ರೋಶದ ಕ್ಷಣಗಳಲ್ಲಿ ಸಮತೋಲನ ತೋರಿಸಿದ್ದಾರೆ. ಅವರ ಹೊಸ ಲುಕ್ ಹಾಗೂ ಧೈರ್ಯಶಾಲಿ ಪಾತ್ರ ಚಿತ್ರಕ್ಕೆ ಜೀವ ತುಂಬಿದೆ. ಮಾನಿಷಾ ಕಂದ್ಕೂರು – ಹೊಸ ಮುಖವಾದರೂ ಪಾತ್ರದಲ್ಲಿ ನೈಸರ್ಗಿಕತೆಯನ್ನು ತೋರಿಸಿದ್ದಾರೆ. ಅಚ್ಯುತ್ ಕುಮಾರ್ ತಂದೆಯ ಪಾತ್ರದಲ್ಲಿ ಅತ್ಯಂತ ನಂಬಿಕೆ ಹು...

ರಫ್ತು ಮಾರುಕಟ್ಟೆಯಲ್ಲಿ ಹೆಚ್ಚಿರುವ ಅವಕಾಶ

ಇಮೇಜ್
ಶಿವಮೊಗ್ಗ: ಜಿಲ್ಲೆಯಲ್ಲಿ ಅಗತ್ಯ ಮೂಲಸೌಕರ್ಯಗಳಿದ್ದು, ಮುಂಬರುವ ದಿನಗಳಲ್ಲಿ ರಫ್ತು ಮಾರುಕಟ್ಟೆಗೆ ಹೆಚ್ಚಿನ ಅವಕಾಶಗಳಿವೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎನ್.ಹೇಮಂತ್ ಹೇಳಿದರು.      ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೆಸಿಟಿಯು ಬೆಂಗಳೂರು ಹಾಗೂ ಮಾಚೇನಹಳ್ಳಿ ಕೈಗಾರಿಕಾ ಸಂಘದ ಸಹಯೋಗದಲ್ಲಿ ಮಾಚೇನಹಳ್ಳಿ ಶಾಂತಲಾಸ್ ಸ್ಪರೋಕಾಸ್ಟ್ ಲರ್ನಿಂಗ್ ಸೆಂಟರ್‌ನಲ್ಲಿ ಏರ್ಪಡಿಸಿದ್ದ ಎಂಎಸ್‌ಎಂಇಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸುವುದು ಯೋಜನೆ ಅಡಿಯಲ್ಲಿ ರಫ್ತು ಉತ್ತೇಜನ ಮತ್ತು ಸುಗಮಗೊಳಿಸುವಿಕೆಗಾಗಿ ಒಂದು ದಿನದ ಜಾಗೃತಿ ಮೂಡಿಸುವ ಕಾರ್ಯಗಾರದಲ್ಲಿ ಮಾತನಾಡಿದರು.      ಉದ್ಯಮಕ್ಕೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಸರ್ಕಾರಗಳು ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಜನರಲ್ಲಿ ಜಾಗೃತಿ ಮೂಡಿಸಲು ವಿಶೇಷ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜನರು ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದು ತಿಳಿಸಿದರು.       ರಾಜ್ಯದ ಹಲವು ಕುಶಲಕರ್ಮಿಗಳು ತಯಾರಿಸಿರುವ ಉತ್ಪನ್ನಗಳನ್ನು ಕ್ರಾಫ್ಟ್ ಆಫ್ ಮಲ್ನಾಡ್ ಎಂಬ ಗುರುತಿನಲ್ಲಿ ಪ್ರಚಾರ ಕೈಗೊಂಡರು. ರಫ್ತು ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ಉದ್ಯಮದ ಸಾಧ್ಯತೆಗಳನ್ನು ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.       ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಜ...

ಸಾವಯವ ಕೃಷಿ ಉತ್ಪನ್ನ ಬಳಸುವುದರಿಂದ ಆರೋಗ್ಯಕರ ಜೀವನ

ಇಮೇಜ್
ಶಿವಮೊಗ್ಗ: ಸಾವಯವ ಕೃಷಿ ಉತ್ಪನ್ನಗಳನ್ನು ಬಳಸುವುದರಿಂದ ಸದಾ ಆರೋಗ್ಯವಂತರಾಗಿ ಇರುತ್ತೇವೆ. ದೇಹದಲ್ಲಿ ಯಾವುದೇ ರೀತಿ ತೊಂದರೆ ಆಗುವುದಿಲ್ಲ. ಆದರೆ ಈ ಕೃಷಿ ಉತ್ಪನ್ನಕ್ಕೆ ಸ್ವಲ್ಪ ಹೆಚ್ಚು ಸಮಯ ಬೇಕಾಗುತ್ತದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತ ವಿಶ್ವೇಶ್ವರ ಸಜ್ಜನ್ ಹೇಳಿದರು. ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಸಂಘದ ಸರ್ವಸದಸ್ಯರ ಮಹಾಸಭೆಯಲ್ಲಿ ಅವರಿಗೆ ವಿಶೇಷ ಸಾಧಕ ಪ್ರಶಸ್ತಿ ಗೌರವ ಸ್ವೀಕರಿಸಿ ಮಾತನಾಡಿದರು. ಎಲ್ಲಾ ರೈತರು ಈ ಪದ್ಧತಿ ಅಳವಡಿಸಿಕೊಂಡರೆ ನಮ್ಮ ದೇಶ ಆರೋಗ್ಯವಂತ ದೇಶವಾಗುತ್ತದೆ. ಸದೃಢ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಸಾವಯವ ಕೃಷಿಯೂ ಸಹ ಸಹಕಾರಿಯಾಗಿದೆ. ಇಂದು ಕೃಷಿ ಬದುಕಿಗೆ ಕೃಷಿ ಜೀವನಕ್ಕೆ ಬರಲು ಯುವಜನರು ಹಿಂದೇಟು ಹಾಕುತ್ತಿದ್ದಾರೆ ಎಂದು ವಿಷಾದನೀಯ ವ್ಯಕ್ತಪಡಿಸಿದರು. ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹುಲಿಕೆರೆ ಗ್ರಾಮದ ವಿಶ್ವೇಶ್ವರಯ್ಯ ಸಜ್ಜನ್ ಅವರು ಅಲ್ಪ ಜಾಗದಲ್ಲಿ, ಅಲ್ಪ ವೆಚ್ಚದಲ್ಲಿ ಹಾಗೂ ಅಲ್ಪ ನೀರಿನಲ್ಲಿ ಹೆಚ್ಚು ಬೆಳೆ ಬೆಳೆದು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ತಾವೇ ತಮ್ಮ ಬೆಳೆಗಳ ಮೌಲ್ಯವರ್ಧನೆ ಮಾಡಿ ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಿಗೂ ರಫ್ತು ಮಾಡಿ ವ್ಯವಸಾಯವನ್ನು ಲಾಭದಾಯಕ ಉದ್ಯಮ ಎಂದು ಸಾಬೀತು ಪಡಿಸಿದ್ದಾರೆ ಎಂದರು....

ಪೊಲೀಸ್ ಹೆಚ್ಚುವರಿ ಅಧೀಕ್ಷಕ ರಮೇಶ್ ಅವರಿಗೆ ಜೆ ಸಿ ಐ ವತಿಯಿಂದ ಸನ್ಮಾನ

ಇಮೇಜ್
ಹೆಚ್ಚುವರಿ ಪೊಲೀಸ್ ಅಧಿಕ್ಷಕರಾಗಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವರ್ಗಾವಣೆಯಾಗಿ ಅಧಿಕಾರವಹಿಸಿಕೊಂಡ ಶ್ರೀ ರಮೇಶ್ ಕುಮಾರ್. ನಗರದ ಜೆಸಿಐ ಶಿವಮೊಗ್ಗ ಸಹ್ಯಾದ್ರಿ. ಶಿವಮೊಗ್ಗ ಜೆ ಎ ಸಿ. ಸದಸ್ಯರು ಹಾಗೂ ಇತರೆ ಶಿವಮೊಗ್ಗ ಜೆಸಿಐ ಘಟಕದ ಪದಾಧಿಕಾರಿಗಳು ಸದಸ್ಯರು ಜಿಲ್ಲಾ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸ್ವಾಗತಿಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ. ಜೆಎಸಿ ಯ ಶಿವಮೊಗ್ಗ ರಿಜನ್ ಚೇರ್ಮನ್ ಶ್ರೀ ದೀಪು. ವೈಸ್ ಛೇರ್ಮನ್ .ಡಿಕೆ ಶೇಷಗಿರಿ.ಮಲ್ಲೇಶ್. ಜಿ ವಿಜಯ್ ಕುಮಾರ್. ಗಾರ ಶ್ರೀನಿವಾಸ್. ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಘಟಕ ದ ಅಧ್ಯಕ್ಷ  ಜಿ ಗಣೇಶ. ಹಾಗು ನವೀನ್ ತಲಾರಿ. ಮತ್ತು ಸಿರಿ ಗೌರಿ. ಉಪಸ್ಥಿತರಿದ್ದರು

ಅಪ್ಪು ಅವರು – ಎಂದಿಗೂ ಮರೆಯಾದ ನಗು, ಎಂದಿಗೂ ನಿಲ್ಲದ ಪ್ರೇರಣೆ

ಇಮೇಜ್
ಚಂದ್ರೋದಯ ಪತ್ರಿಕೆ ವಿಶೇಷ “ಅಪ್ಪು ಸ್ಮರಣೆ” ಲೇಖನ ಅವರು ಹೋದರು... ಆದರೆ ಹೃದಯದಿಂದ ಇನ್ನೂ ಹೋಗಿಲ್ಲ. ಅವರು ನಿಂತಿದ್ದರು ಬೆಳಕಿನಲ್ಲೇ, ಆದರೆ ಅವರ ಹಾದಿ ಈಗಲೂ ಸಾವಿರ ಮಂದಿಗೆ ಬೆಳಕಾಗಿದೆ. ಅವರು ನಮ್ಮ ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ — ಹೃದಯಗಳ ರಾಜ್ಯದಲ್ಲಿ ಸದಾಕಾಲ ಜೀವಂತ.  ನಗುತ ನಲಿಯುತ್ತಿದ್ದ ಅಪ್ಪು ಪುನೀತ್ ರಾಜ್‌ಕುಮಾರ್ ಅಂದರೆ ನಗುವಿನ ಪ್ರತಿರೂಪ. ಅವರ ಕಣ್ಣಲ್ಲಿ ಪ್ರೀತಿ, ಅವರ ಮಾತಿನಲ್ಲಿ ಶಕ್ತಿ, ಅವರ ನಡೆಗಳಲ್ಲಿ ವಿನಯ. ಅವರೊಂದಿಗೊಂದು ಕ್ಷಣ ಕಳೆದವರು ಹೇಳುತ್ತಾರೆ — “ಅಪ್ಪು ಸರ್‌ರನ್ನು ಒಮ್ಮೆ ಭೇಟಿಯಾದರೆ ಮನಸ್ಸೇ ಬದಲಾಗುತ್ತದೆ.” ಅವರಲ್ಲಿ ನಟನ ಕಲೆಗಿಂತಲೂ ದೊಡ್ಡದಾದ ಮನುಷ್ಯತ್ವದ ಕಲೆ ಇತ್ತು. ಜನರ ಹೃದಯ ಗೆಲ್ಲುವುದು ಅವರಿಗೆ ಪಾತ್ರದ ಕೆಲಸವಲ್ಲ — ಅದು ಅವರ ಹೃದಯದ ಧರ್ಮ.  ಸಮಾಜ ಸೇವೆಯ ಸಂತ ಅಪ್ಪು ಸರ್ ಬದುಕಿನಲ್ಲಿ ನಟರಿಗಿಂತಲೂ ಹೆಚ್ಚು ಸೇವಕರಾಗಿದ್ದರು . ಶಾಲೆಗಳಿಗೆ ದಾನ, ಆಸ್ಪತ್ರೆಗಳಿಗೆ ನೆರವು, ಅನೇಕರಿಗೆ ನಿಷ್ಕಪಟ ಸಹಾಯ — ಅದು ಅವರಿಗೆ ಜಾಹೀರಾತು ಅಲ್ಲ, ಅದು ಅವರ ಜೀವನ ಶೈಲಿ. ನೆತ್ರದಾನ ಮಾಡಿದ ಕ್ಷಣದಿಂದ ಅವರು ಮರಣಕ್ಕೂ ಅರ್ಥ ನೀಡಿದರು. ಇಂದು ಇಬ್ಬರ ಕಣ್ಣಲ್ಲಿ ಬೆಳಕು ಚೆಲ್ಲುತ್ತಿರುವ ಅಪ್ಪು — “ ಅವರು ಬದುಕಿಲ್ಲ” ಎಂದರೆ ಕಾಲದ ತಪ್ಪು; “ಅವರು ನಮ್ಮೊಳಗಿದ್ದಾರೆ” ಎಂದರೆ ಸತ್ಯ.  ಚಲನಚಿತ್ರ ಲೋಕದ ಚಿರಮನೆ “ಅಪ್ಪು”, “ಮೌರ್...

ಜೆಸಿಐ ಸದಸ್ಯರಿಂದ ರಮೇಶ್ ಕುಮಾರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಬೇಟಿ !! ಕಾರಣವೇನು !?

ಇಮೇಜ್
    ಹೆಚ್ಚುವರಿ ಪೊಲೀಸ್ ಅಧೀಕ್ಷಕರ ದ ಸುರೇಶ್ ಕುಮಾರ್ ಅವರನ್ನು ಜೆಸಿಐ ಸದಸ್ಯರು ಬೇಟಿಯಾಗಿ ಶುಭ ಕೋರಲಾಯಿತು. ಸಂಘ ಸಂಸ್ಥೆಗಳ ಕಾರ್ಯ ಚಟುವಟಿಕೆ ಬಗ್ಗೆ ಚರ್ಚಿಸಲಾಯಿತು.      ಜೆಸಿಐ ಸಂಸ್ಥೆಯ ಬಗ್ಗೆ ಸದಸ್ಯರ ಬಗ್ಗೆ ರೋಟರಿ ವಿಜಯ್ ಕುಮಾರ್ ಅವರು ಪರಿಚಯಿಸಿದರು. ನಗರದಲ್ಲಿರುವ ಜೆಸಿಐ ಘಟಕಗಳ ಬಗ್ಗೆ, ಜೆಸಿಐ ನ ಸಮಾಜಮುಖಿ ಕಾರ್ಯಗಳ ಬಗ್ಗೆ , ತರಬೇತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.      ಜೆಸಿಐ, ಪೊಲೀಸ್ ಜಿಲ್ಲಾಡಳಿತ ಮತ್ತು ವಿವಿಧ ಸಂಸ್ಥೆಗಳ ಜೊತೆ ಸೇರಿ , ಶಾಶ್ವತ ಕಾರ್ಯಕ್ರಮಗಳಾದ, ಮಕ್ಕಳಿಗೆ ತರಬೇತಿ, ಪಠ್ಯಪುಸ್ತಕ ಸಂಬಂಧಿಸಿದಂತೆ ಪ್ರತಿದಿನ ಪಾಠ ಮಾಡುವುದು. ಹೀಗೆ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಗಳ ಬಗ್ಗೆ ಹೆಚ್ಚು ಒತ್ತು ಕೊಡುವಂತಹ ಕಾರ್ಯಕ್ರಮ ಮಾಡುವುದರ ಬಗ್ಗೆ ಚರ್ಚಿಸಲಾಯಿತು.   ಈ ಸಂದರ್ಭದಲ್ಲಿ  ರೋಟರಿ ವಿಜಯಕುಮಾರ್, ಜೆಸಿ ಮಲ್ಲೇಶ್, ಜೆಸಿ ಶೇಷಗಿರಿ, ಜೆಸಿ ಗಾರಾ ಶ್ರೀನಿವಾಸ್ , ಜೆಸಿ ದೀಪಕ್, ಜೆಸಿ ಗಣೇಶ್ ಉಪಸ್ಥಿತರಿದ್ದರು.

ಸನ್ಮಾರ್ಗದಿಂದ ಸತ್ ಫಲಗಳು ದೊರೆಯುತ್ತವೆ - ಸಂತ ಶ್ರೀ ವಿಜ್ಞಾನ ದೇವ್ ಮಹಾರಾಜ್

ಇಮೇಜ್
ಸರಿಯಾದ ವಿದ್ಯೆ, ಸರಿಯಾದ ಜ್ಞಾನ, ಯೋಗ್ಯವಾದ ಮಾರ್ಗದರ್ಶನ ದಿಂದ ಪ್ರತಿಯೊಬ್ಬರ ಜೀವನ ಪಾವನವಾಗುತ್ತದೆ. ಆದ್ದರಿಂದ ಸನ್ಮಾರ್ಗ, ಒಳ್ಳೆಯ ಚಿಂತನೆ ಮತ್ತು ಉತ್ತಮ ಕಾರ್ಯ ಇವುಗಳಿಂದ ಮನುಷ್ಯನಾದವನು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸಲು ಸಾಧ್ಯ. ಇಂದು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಇಂತಹ ಒಂದು ಸತ್ಕಾರ್ಯ ನಡೆಯುತ್ತಿರುವುದಕ್ಕೆ ಕಾರಣ ಇಲ್ಲಿನ ಸದ್ಭಕ್ತರು ಮತ್ತು ಯೋಗ ಬಂಧುಗಳು. ಎಂದು ವಿಹಂಗಮ ಯೋಗ ಸಂತ ಸಮಾಜ, ವಾರಣಾಸಿಯ ಸದ್ಗುರು ಸಂತ ವಿಜ್ಞಾನ ದೇವ್ ಜಿ ಮಹಾರಾಜ್ ತಿಳಿಸಿದ್ದಾರೆ. ಅವರು ಶಿವಮೊಗ್ಗದ ಶಿವಗಂಗಾ ಯೋಗ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸತ್ಸಂಗ ಮತ್ತು ಹೋಮ ಕಾರ್ಯ ಇವುಗಳಲ್ಲಿ ಪಾಲ್ಗೊಂಡು ಭಕ್ತರಿಗೆ ಯೋಗ ಧ್ಯಾನ ಮತ್ತು ಭಕ್ತಿಯ ಸಂದೇಶವನ್ನು ನೀಡಿದರು. ಈ ಸಂದರ್ಭದಲ್ಲಿ 500ಕ್ಕೂ ಹೆಚ್ಚು ಮಂದಿ ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.  ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಡಿಎಸ್ ಅರುಣ್ ಮಾತನಾಡಿ ಶಿವಮೊಗ್ಗ ನಗರಕ್ಕೆ ಸದ್ಗುರುಗಳು ನಗರದ ಶಾಂತಿ ಮತ್ತು ಸಮೃದ್ಧಿಗೆ ಹರಸಬೇಕೆಂದು ಮನವಿ ಮಾಡಿದರು. ಶಿವಮೊಗ್ಗದ ಶಾಸಕ ಚನ್ನಬಸಪ್ಪನವರು ಅಧ್ಯಕ್ಷತೆ ವಹಿಸಿ ಇಂತಹ ಕಾರ್ಯಕ್ರಮಗಳು ನಗರದಲ್ಲಿ ಆಗಾಗ ನಡೆದರೆ ನಗರದಲ್ಲಿ ಸೌಹಾರ್ದತೆ ವಾತಾವರಣ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.  ಪ್ರಾರಂಭದಲ್ಲಿ ಶಶಿರೇಖಾ ಕೆಕೆ ಇವರಿಂದ ಪ್ರಾರ್ಥನೆ ಮತ್ತು ಜಿ ವಿಜಯ ಕುಮಾರ್ ಇವರಿಂದ ಸ್ವಾಗತ ...

ಶಾಸಕರ ಹುಟ್ಟುಹಬ್ಬಕ್ಕೆ ಜ್ಞಾನೇಶ್ವರಿ ಗೋಶಾಲೆಗೆ ಗೋವಿನ ಆಹಾರ ಸಾಮಗ್ರಿಗಳ ವಿತರಣೆ

ಇಮೇಜ್
  ಭದ್ರಾವತಿ ಶಾಸಕರಾದ ಶ್ರೀ ಸಂಗಮೇಶ್ವರ ಹುಟ್ಟು ಹಬ್ಬದ  ಸಲುವಾಗಿ ಇಂದು ಹುಣಸೂಡಿನಲ್ಲಿರುವ ಶ್ರೀ ಜ್ಞಾನೇಶ್ವರಿ ಗೋಶಾಲೆಗೆ ಅವರ ಅಭಿಮಾನಿ ಬಳಗದವರು ಹಾಗೂ ಶಿಮೊಗ್ಗ ಯುವ ಕಾಂಗ್ರೆಸ್ ಮುಖಂಡರು ಆದ ಮಧುಣ್ಣ. ಸ್ನೇಹಿತರು ಗೋಶಾಲೆಗೆ ಗೋವುಗಳಿಗೆ ಅಗತ್ಯವಾಗಿ ಬೇಕಾಗಿರುವ 20 ಚೀಲ ಹಿಂಡಿ. ಒಂದು ಚೀಲ ಬೆಲ್ಲ. ಬಾಳೆಹಣ್ಣು ಹಾಗೂ ಮೇವುಗಳನ್ನು ನೀಡಿ ಗೋಮಾತೆಯ ಆಶೀರ್ವಾದವನ್ನು ಪಡೆದುಕೊಂಡರು   ಈ ಸಂದರ್ಭದಲ್ಲಿ ಜ್ಞಾನೇಶ್ವರಿ ಗೋಶಾಲೆಯ ಉಪಾಧ್ಯಕ್ಷರಾದ ಪ್ರಶಾಂತ್ ರಾಯ್ಕರ್   ಗೋಶಾಲೆ ಆಡಳಿತ ಮಂಡಳಿಯ ಸದಸ್ಯರು. ಕಾಂಗ್ರೆಸಿನ ಮುಖಂಡರು ಪದಾಧಿಕಾರಿಗಳು ಉಪಸ್ಥಿತರಿದ್ದರು . ಇದೆ ಸಂದರ್ಭದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು

ಕಾನೂನು ನಿಯಮಗಳನ್ನು ಪಾಲಿಸಿ ಲೇವಾದೇವಿ ಮಾಡುವುದು ಅವಶ್ಯ

ಇಮೇಜ್
        ಶಿವಮೊಗ್ಗ: ದೇಶದ ಆರ್ಥಿಕತೆಗೆ ಫೈನಾನ್ಸಿಯರ‍್ಸ್ ಕೊಡುಗೆ ಅಪಾರ. ಇತ್ತೀಚೆಗೆ ಫೈನಾನ್ಸ್ ನಿರ್ವಹಣೆ ಕಾನೂನಿನಲ್ಲಿ ಸಾಕಷ್ಟು ಬದಲಾವಣೆ ಆಗಿದ್ದು, ಕಾನೂನಿನ ನಿಯಮಗಳನ್ನು ಪಾಲಿಸಿ ವ್ಯವಹಾರ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.        ನಗರದ ಕಂಟ್ರಿ ಕ್ಲಬ್‌ನಲ್ಲಿ ಅಖಿಲ ಕರ್ನಾಟಕ ಫೈನಾನ್ಸಿಯರ‍್ಸ್ ಅಸೋಸಿಯೇಷನ್ ಹಾಗೂ ಶಿವಮೊಗ್ಗ ಫೈನಾನ್ಸಿಯರ‍್ಸ್ ಅಸೋಸಿಯೇಷನ್ ಘಟಕದ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಫೈನಾನ್ಸಿಯರ್ ಸೆಮಿನಾರ್, ತೆರಿಗೆ, ಕಾನೂನು, ಲೇವಾದೇವಿ, ಚಿಟ್ಸ್ ಬಗ್ಗೆ ಮಾಹಿತಿ ಕಾರ್ಯಾಗಾರ, ಹಿರಿಯ ಲೇವಾದೇವಿಗಾರರಿಗೆ ಸನ್ಮಾನ ಮತ್ತು ಸನ್ಮಾನ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.       ಬದಲಾಗುತ್ತಿರುವ ಕಾನೂನುಗಳ ಬಗ್ಗೆ ನಿರಂತರವಾಗಿ ಮಾಹಿತಿ ಹೊಂದಿರಬೇಕು. ಅದಕ್ಕೆ ಅನುಗುಣವಾಗಿ ಲೇವಾದೇವಿ ವ್ಯವಹಾರಗಳನ್ನು ಮಾಡಬೇಕು. ಹಣಕಾಸು ಸಂಘ ಸಂಸ್ಥೆಗಳಿಂದ ಸಾಲ ತೆಗೆದುಕೊಳ್ಳುವವರು ಸರಿಯಾದ ಉದ್ದೇಶಗಳಿಗೆ ಬಳಸಿಕೊಂಡು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಇಂತಹ ಫೈನಾನ್ಸ್ ಸಂಸ್ಥೆಗಳು ಇಲ್ಲದಿದ್ದರೆ ಆರ್ಥಿಕ ವ್ಯವಹಾರ ತುಂಬಾ ಸಮಸ್ಯೆ ಆಗುತ್ತದೆ ಎಂದು ತಿಳಿಸಿದರು.       ಪೊಲೀಸ್ ಹೆಚ್ಚುವರಿ ಅಧೀಕ್ಷಕ ರಮೇಶ್ ಮಾತನಾಡಿ, ಪರವಾನಗಿ ಪಡೆಯದೆ ಲೇವಾದೇವಿ ಮಾಡಬೇಡಿ, ಕಾನೂನುಗಳನ್ನು ಪಾಲಿಸಬೇಕು...

ಕಡ್ಡಾಯವಾಗಿ ಕನ್ನಡ ಬಳಸುವಂತೆ ಒತ್ತಾಯ!!

ಇಮೇಜ್
         ವಾಣಿಜ್ಯ ಮಳಿಗೆಯ ನಾಮಫಲಕ ಜಾಹೀರಾತು ಫಲಕ ಶಾಲೆ ಮತ್ತು ಶಾಲಾ ವಾಹನಗಳಲ್ಲಿನಾ ನಾಮಫಲಕ ಆಹಾರ ಸರಬರಾಜುಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಒತ್ತಾಯಿಸಿ          ಕನ್ನಡ ನಾಡು ಭಾಷೆ ಎಂದು ಭಾಷಣದಲ್ಲಿ ಮಾತ್ರ ಬೊಗಳೆ ಬಿಡುವ ರಾಜಕಾರಣಿಗಳು ಮತ್ತು ಅದಕ್ಕೆ ತಕ್ಕಂತೆ ವರ್ತಿಸುವ ಅಧಿಕಾರಿಗಳು ಎಲ್ಲಿಯೂ ಕನ್ನಡವನ್ನು ಬಳಸುವಂತೆ ಒತ್ತಾಯ ಪಡಿಸುವುದಾಗಲಿ, ಕಾನೂನನ್ನು ಪಾಲಿಸುವುದಾಗಲಿ ಯಾವುದನ್ನು ಮಾಡದೆ ಕನ್ನಡ ಉಳಿವಿಗಾಗಿ ಪತ್ರಗಳಲ್ಲಿ ಸುತ್ತೋಲೆಗಳಲ್ಲಿ ಮಾತ್ರ ಕಾಣುವುದು ವಿಪರ್ಯಾಸದ ಸಂಗತಿಯಾಗಿದೆ           ಕನ್ನಡ ಉಳಿವಿಗಾಗಿ ಹೋರಾಟ ಮಾಡುವ ನಾಯಕರ ಮಕ್ಕಳೇ ಆಂಗ್ಲ ಶಾಲೆಗೆ ಸೇರಿಸುವುದು ತಮ್ಮ ವ್ಯವಹಾರಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಆಸ್ಪತ್ರೆಗಳಲ್ಲಿ ತಾವುಗಳೇ ಕನ್ನಡ ಬಳಕೆಯನ್ನು ಮಾಡದೆ ಕನ್ನಡ ನಾಡಿಗೆ ಕನ್ನಡದ ಜನತೆಗೆ ದ್ರೋಹ ಎಸಗುತ್ತಿದ್ದಾರೆ           ಕರ್ನಾಟಕ ಸರ್ಕಾರ ಈಗಾಗಲೇ ಕನ್ನಡ ಉಳಿವಿಗಾಗಿ ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದೆ ಅವುಗಳೆಲ್ಲವೂ ಕಾಗದಗಳಲ್ಲೇ ಉಳಿದುಹೋಗಿದೆ ಕಾನೂನಿನ ಪ್ರಕಾರ ಯಾವುದೇ ಅಂಗಡಿ ಮುಂಗಟ್ಟುಗಳ ಮುಂದೆ ಶೇಕಡ 60ರಷ್ಟು ಕನ್ನಡ ಭಾಷೆ ಹಾಗೂ ಶೇಕಡ 40ರಷ್ಟು ಅನ್ಯ ಭಾಷೆ ಬಳಸುವಂತೆ ಆದೇಶವಿದ್ದರೂ ಸಹ ಇದನ್ನು ಅನುಷ್ಠಾನ ತರಲು ಯಾವ...

ಜೆಸಿಐ ಸಪ್ತಾಹ— ಯುವ ಶಕ್ತಿ ಮತ್ತು ಸೇವಾ ಹಬ್ಬವಾಗಿ ಆಚರಣೆ

ಇಮೇಜ್
ಶಿವಮೊಗ್ಗ, ಅಕ್ಟೋಬರ್ 27:     ಜೂನಿಯರ್ ಚೇಂಬರ್ ಇಂಟರ್ನ್ಯಾಷನಲ್ (ಜೆಸಿಐ ಭಾರತ) ಸಂಸ್ಥೆ   ಮಾರ್ಗದರ್ಶನದಲ್ಲಿ ದೇಶದಾದ್ಯಂತ ಪ್ರತಿ ವರ್ಷ ಸೆಪ್ಟೆಂಬರ್ 9 ರಿಂದ 15 ರ ವರೆಗೆ ಜೆಸಿಐ ಸಪ್ತಾಹ ಈ ಬಾರಿ, ಭಾರಿ ಉತ್ಸಾಹದಿಂದ ಹಾಗೂ ಸಾಮಾಜಿಕ ಸ್ಪೂರ್ತಿಯೊಂದಿಗೆ   ನಡೆಯಿತ್ತು.    ಜೆಸಿಐ ಸಪ್ತಾಹದ ವಾರವನ್ನು ಮೆಗಾ ಸಾರ್ವಜನಿಕ ಸಂಪರ್ಕ ಮತ್ತು ಮಾರ್ಕೆಟಿಂಗ್ ಈವೆಂಟ್ ಆಗಿ ರೂಪಿಸಿ, ವಿವಿಧ ತರಬೇತಿ, ಸೇವಾ ಮತ್ತು ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಯುವ ಶಕ್ತಿಗೆ ಪ್ರೇರಣೆ ನೀಡಿದ ಜೆಸಿಐ ಸಪ್ತಾಹ     "ಲೀಡರ್‌ಶಿಪ್, ಡೆವಲಪ್‌ಮೆಂಟ್ ಅಂಡ್ ಸರ್ವಿಸ್" ಎಂಬ ಯುವ ಘೋಷಣೆಯಡಿ ಈ ವಾರದಲ್ಲಿ ಪರಿಣಾಮಕಾರಿ ಸಾರ್ವಜನಿಕ ಭಾಷಣ, ಭಾಷಣ ಕರಕುಶಲ, ವೈಯಕ್ತಿಕ ಅಭಿವೃದ್ಧಿ ತರಬೇತಿ, ಹಾಗೂ ವಲಯ ತರಬೇತುದಾರ ಕಾರ್ಯಾಗಾರವನ್ನು ನಡೆಸಲಾಯಿತು.    ದೇಶದತ್ಯಂತ ಸಾವಿರಾರು ಸದಸ್ಯರು ಹಾಗೂ ತರಬೇತಿದಾರರು ಭಾಗವಹಿಸಿ ಯುವಕರಲ್ಲಿ ಆತ್ಮವಿಶ್ವಾಸ, ನಾಯಕತ್ವ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಿದರು. ಸಾಮಾಜಿಕ ಸೇವೆ ಮತ್ತು ಜಾಗೃತಿ ಕಾರ್ಯಕ್ರಮಗಳು    ಸಪ್ತಾಹದ ಅಂಗವಾಗಿ ರಕ್ತದಾನ ಶಿಬಿರಗಳು, ಪರಿಸರ ಸಂರಕ್ಷಣಾ ಅಭಿಯಾನಗಳು, ಆರೋಗ್ಯ ತಪಾಸಣಾ ಶಿಬಿರಗಳು, ಹಾಗೂ ಶಾಲಾ ವ್ಯಕ್ತಿತ್ವ ವಿಕಸನ ತರಗತಿಗಳು.    ನಗರದ ಪ್ರಮುಖ ಸ್...

ಯೋಗ ಕ್ಷೇತ್ರದಲ್ಲಿ ಶಿವಮೊಗ್ಗ ಜಿಲ್ಲೆ ಉನ್ನತ ಸಾಧನೆ

ಇಮೇಜ್
        ಶಿವಮೊಗ್ಗ: ಜಿಲ್ಲೆಯ ಎಲ್ಲ ತಾಲೂಕು ಹಾಗೂ ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಯೋಗ ಚಟುವಟಿಕೆಗಳನ್ನು ಗಮನಿಸಿದರೆ ಭವಿಷ್ಯದಲ್ಲಿ ಶಿವಮೊಗ್ಗ ಜಿಲ್ಲೆಯು ಭಾರತದಲ್ಲಿ ಯೋಗ ಜಿಲ್ಲೆಯಾಗಿ ಗುರುತಿಸಿಕೊಳ್ಳಲಿದೆ ಎಂದು ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಹಾಲಿಸ್ಟಿಕ್, ಆರೋಗ್ಯ ಸಂಸ್ಥೆ ಅಧ್ಯಕ್ಷ, ಯುಎಸ್‌ಎ ಫ್ಲೋರಿಡಾದ ಯೋಗ ಯುನಿವರ್ಸಿಟಿ ಆಫ್ ದ ಅಮೆರಿಕಾಸ್ ಉಪಕುಲಪತಿ ಡಾ. ಯೋಗಿ ದೇವರಾಜ್ ಗುರೂಜಿ ಹೇಳಿದರು.         ಕಲ್ಲಹಳ್ಳಿ ವಿನೋಬನಗರದ ಶ್ರೀ ಶಿವಗಂಗಾ ಯೋಗ ಕೇಂದ್ರದಲ್ಲಿ ಯೋಗ ಪ್ರಶಿಕ್ಷಣಾರ್ಥಿಗಳ ತರಬೇತಿ ಮತ್ತು ಪುನಶ್ಚೇತನ ಶಿಬಿರದಲ್ಲಿ ಉಪನ್ಯಾಸ ನೀಡಿದ ಅವರು, ಡಿಸೆಂಬರ್ 6 ಮತ್ತು 7ರಂದು ಬೆಂಗಳೂರಿನಲ್ಲಿ ನಡೆಯಲಿರುವ ವಿಶ್ವ ಯೋಗ ಶೃಂಗ ಸಭೆ 2025ರಲ್ಲಿ  ಶಿವಮೊಗ್ಗ ಜಿಲ್ಲೆಯ ಯೋಗಾಸಕ್ತರು ಪಾಲ್ಗೊಳ್ಳಬೇಕು ಎಂದು ತಿಳಿಸಿದರು.               ಯೋಗ ಸಂಸ್ಥೆಗಳ ನಡುವೆ ಸಾಮರಸ್ಯ ಹೊಂದಾಣಿಕೆಯಿಂದ ಯೋಗವನ್ನು ಮನ ಮನೆಗಳಿಗೆ ತಲುಪಿಸಿ ಆರೋಗ್ಯವಂತ ಸಮಾಜ ನಿರ್ಮಿಸಲಾಗುತ್ತಿದೆ. ಶಿವಮೊಗ್ಗ ಯೋಗ ಜಿಲ್ಲೆಯಾಗಿ ಮಾರ್ಪಡಿಸಿ ಶಾಂತಿ ಸಹಬಾಳ್ವೆ ನಡೆಸಲು ಪೂರಕ ವಾತಾವರಣ ನಿರ್ಮಿಸಲಾಗುತ್ತಿದೆ. ಎಲ್ಲ ಯೋಗ ಸಂಸ್ಥೆಯವರು ಈ ದೆಸೆಯಲ್ಲಿ ಪ್ರಯತ್ನ ನಡೆಸಬೇಕು ಎಂದು ತಿಳಿಸಿದರು.        ಶ್ರೀ ಶಿವಗಂಗಾ ಯೋಗ ...

ಗಾಣಿಗ ಸಂಘದ ನಿವೇಶನಕ್ಕೆ 20 ಲಕ್ಷ ದೇಣಿಗೆ

ಇಮೇಜ್
ಶಿವಮೊಗ್ಗ: ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡ ನಿರ್ಮಿಸಲು ನಿವೇಶನಕ್ಕೆ ಶಾಸಕರ ಅನುದಾನದಿಂದ 20 ಲಕ್ಷ ರೂ. ದೇಣಿಗೆ ನೀಡಲಾಗುವುದು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.          ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ 2024-25ನೇ ಸರ್ವ ಸದಸ್ಯರ ಮಹಾಸಭೆ, ಪ್ರತಿಭಾ ಪುರಸ್ಕಾರ, ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಘಟನೆಯು ಸಂಸ್ಥೆಗೆ ಬಲ ನೀಡುತ್ತದೆ. ಸಂಸ್ಥೆಯಲ್ಲಿನ ಸದಸ್ಯರು ಸಕ್ರಿಯರಾಗಿ ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.        ಭದ್ರಾವತಿ ನಗರಸಭೆ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಸಂಘ ಸಂಸ್ಥೆಗಳು ಸದೃಢವಾಗಿರಲು ಸದಸ್ಯರ ಸಹಕಾರ ಬೇಕು. ನಾವು ಯಾವುದೇ ಹೋರಾಟ ಮಾಡಲು ಸಮಾಜ ಮುಖ್ಯ. ಎಲ್ಲರೂ ಪಕ್ಷಭೇದ ಮರೆತು ಸಮಾಜಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ತಿಳಿಸಿದರು.           ಶ್ರೀ ಬಸವೇಶ್ವರ ವೀರಶೈವ ಸಮಾಜ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಮಾತನಾಡಿ, ನಮ್ಮ ಸಮಾಜದ ಎಲ್ಲ ಒಳಪಂಗಡಗಳು ಒಟ್ಟಾಗಬೇಕು. ಗಾಣಿಗ ಸಮಾಜ ತುಂಬಾ ಬಲಿಷ್ಠವಾಗಬೇಕು. ನಮ್ಮ ಸಮಾಜದ 8 ಶಾಸಕರು, ಇಬ್ಬರು ಸಂಸದರು ಹಾಗೂ ಸಚಿವರು ಇದ್ದಾರೆ. ನಮ್ಮ ಸಮಾಜವನ್ನು ಒಗ್ಗೂಡಿಸುವ ಕೆಲಸ ಎಲ್ಲರಿಂದ ಆಗಬೇಕು ಎಂದು ಹೇಳಿದ...

ಜೆಸಿಐ ಭಾರತ— ತರಬೇತಿಗಳ ಮೂಲಕ ಯುವಶಕ್ತಿ ನಿರ್ಮಾಣ

ಇಮೇಜ್
“ನಾಯಕರು ಹುಟ್ಟುವುದಿಲ್ಲ, ಅವರನ್ನು ತರಬೇತಿ ರೂಪಿಸುತ್ತದೆ.”        ಈ ಮಾತು ಜೂನಿಯರ್ ಚೇಂಬರ್ ಇಂಟರ್ನ್ಯಾಷನಲ್ (ಜೆಸಿಐ) ಸಂಸ್ಥೆಯ ತತ್ವವನ್ನು ಅತ್ಯಂತ ಸೂಕ್ತವಾಗಿ ಪ್ರತಿಬಿಂಬಿಸುತ್ತದೆ.         ಜೆಸಿಐ ಭಾರತ ಯುವಕರಿಗೆ ನಾಯಕತ್ವ, ವ್ಯಕ್ತಿತ್ವ ವಿಕಸನ ಮತ್ತು ಸಾಮಾಜಿಕ ಬದಲಾವಣೆಯತ್ತ ದಾರಿ ತೋರಿಸುವ ವಿಶ್ವಮಟ್ಟದ ವೇದಿಕೆಯಾಗಿದೆ. ತರಬೇತಿ – ಜೆಸಿಐಯ ಹೃದಯ       ಜೆಸಿಐ ಭಾರತ ದಲ್ಲಿ ಪ್ರತಿಯೊಬ್ಬ ಸದಸ್ಯನಿಗೂ ತರಬೇತಿಯ ಮೂಲಕ ಬೆಳೆಯುವ ಅವಕಾಶ ದೊರೆಯುತ್ತದೆ. ಈ ತರಬೇತಿಗಳು ಕೆಳಗಿನ ಕೌಶಲ್ಯಗಳನ್ನು ಬೆಳೆಸುತ್ತವೆ: * ನಾಯಕತ್ವ ಮತ್ತು ಸಂವಹನ ಕೌಶಲ್ಯ * ಪ್ರಸ್ತಾವನೆ ಹಾಗೂ ಸಾರ್ವಜನಿಕ ಭಾಷಣ (ಪರಿಣಾಮಕಾರಿ ಸಾರ್ವಜನಿಕ ಭಾಷಣ) * ಸ್ಪೀಚ್ ಕ್ರಾಫ್ಟ್ ತರಬೇತಿ * ತಂಡದ ಕೆಲಸ ಮತ್ತು ಸಮಯ ನಿರ್ವಹಣೆ ತರಬೇತಿ * ವೈಯಕ್ತಿಕ ವ್ಯಕ್ತಿತ್ವ ವಿಕಸನ         ಈ ತರಬೇತಿಗಳ ಮೂಲಕ ಸದಸ್ಯರು ಕೇವಲ ಜ್ಞಾನವನ್ನಷ್ಟೇ ಅಲ್ಲ, ಆತ್ಮವಿಶ್ವಾಸ, ಧೈರ್ಯ ಮತ್ತು ಸೇವಾ ಮನೋಭಾವವನ್ನೂ ಪಡೆಯುತ್ತಾರೆ. ತರಬೇತಿದಾರರು — ನಾಯಕತ್ವದ ಶಿಲ್ಪಿಗಳು ಜೆಸಿಐ ತರಬೇತಿದಾರರು ಜೆಸಿಐ ಸಂಸ್ಥೆಯ ಬೆನ್ನೆಲುಬು.        ವಲಯ ತರಬೇತಿದಾರರು, ರಾಷ್ಟ್ರೀಯ ತರಬೇತುದಾರರು ಹಾಗು ಆಥರ್ ಗಳಾಗಿ ಅವರು ಸದಸ್ಯರಿಗೆ ಮಾರ್ಗದರ್ಶನ ನೀಡುತ್ತಾರೆ.   ...

ಬಸವಣ್ಣ ಅವರ ವಚನಗಳು ಇಂದಿಗೂ ಪ್ರಸ್ತುತ

ಇಮೇಜ್
        ಬಸವಣ್ಣ ಅವರ ವಚನಗಳು ಮತ್ತು ಕಾಯಕ ಸಂದೇಶ ಇಂದಿಗೂ ಪ್ರಸ್ತುತ ಎಂದು ಸರ್ ಎಂ.ವಿ. ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಜಿ.ಎಸ್.ಅಶೋಕ್ ಹೇಳಿದರು.          ರೋಟರಿ ಶಿವಮೊಗ್ಗ ಪೂರ್ವ ಕ್ಲಬ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವಣ್ಣ ಅವರ ವಚನಗಳು ಸಾರ್ವಕಾಲಿಕ. ಯಾವುದೇ ಜಾತಿ ಭೇದವಿಲ್ಲದೆ ಸಮಾಜದ ಏಳಿಗೆಗೆ ಶ್ರಮಿಸಿದರು. ರೋಟರಿ ಕ್ಲಬ್‌ಗಳು ಸಹ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು.           ಬಸವಣ್ಣ ಅವರ ಹಲವಾರು ವಚನಗಳನ್ನು ಪ್ರತಿನಿತ್ಯ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಪ್ರತಿಯೊಬ್ಬ ಮನುಷ್ಯನು ತನ್ನ ಕರ್ತವ್ಯ ಪ್ರಜ್ಞೆ ಮತ್ತು ಕಾಯಕವನ್ನು ಸರಿಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ. ಪ್ರತಿಯೊಬ್ಬರೂ ವಚನಗಳನ್ನು ಅಧ್ಯಯನ ಮಾಡಬೇಕು ಎಂದು ಹೇಳಿದರು.           ರೋಟರಿ ಶಿವಮೊಗ್ಗ ಪೂರ್ವ ಕ್ಲಬ್ ಅಧಕ್ಷ ಡಿ.ಕಿಶೋರ್ ಕುಮಾರ್ ಮಾತನಾಡಿ, ಬಸವಣ್ಣ ಅವರ ವಚನಗಳು ಪ್ರತಿಯೊಬ್ಬ ಯುವ ಜನತೆ ಮತ್ತು ನಾವುಗಳೆಲ್ಲರೂ ಪರಿಪಾಲಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.            ರೋಟರಿ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಆಯೋಜಿಸುವ ಜತೆಯಲ್ಲಿ ವಿವಿಧ ...

ಜೆಸಿಐ ವಾಣಿ – ನೈತಿಕತೆ ಮತ್ತು ಮಾನವೀಯತೆಯ ಮಾರ್ಗದರ್ಶಕ ದೀಪ

ಇಮೇಜ್
       ಜೂನಿಯರ್ ಚೇಂಬರ್ ಇಂಟರ್ನ್ಯಾಷನಲ್ (JCI) ವಿಶ್ವದ ಯುವ  ನಾಯಕರಿಗೆ ನೈತಿಕತೆ, ಸೇವಾ ಮನೋಭಾವ ಮತ್ತು ಜವಾಬ್ದಾರಿಯುತ ನಾಯಕತ್ವದ ಪಾಠ ನೀಡುವ ವೇದಿಕೆ.  ಇದರ ಹೃದಯದಲ್ಲಿದೆ – “ಜೆಸಿಐ  ವಾಣಿ”, ಆರು ಸಾಲುಗಳ ನಂಬಿಕೆಗಳ ಘೋಷಣೆ.  ಇವು ಕೇವಲ ಪದಗಳಲ್ಲ, ಸಮಾಜ ನಿರ್ಮಾಣದ ಮೂಲ ಮೌಲ್ಯಗಳ ಸಾರ.  1️⃣ "ದೇವರ ಮೇಲಿನ ನಂಬಿಕೆಯು ಮಾನವ ಜೀವನಕ್ಕೆ ಅರ್ಥ ಮತ್ತು ಉದ್ದೇಶವನ್ನು ನೀಡುತ್ತದೆ."       ಮಾನವನ ಜೀವನಕ್ಕೆ ನೈತಿಕ ಗುರಿ ನೀಡುವುದು ದೇವರ ಮೇಲಿನ ನಂಬಿಕೆ.  ಭಾರತದಲ್ಲಿ ಅನೇಕ ಸೇವಾ ನಾಯಕರ ಜೀವನವು ಈ ನಂಬಿಕೆಗೆ ಉದಾಹರಣೆ.  ಡಾ.  ಎ.ಪಿ.ಜೆ.  ಅಬ್ದುಲ್ ಕಲಾಂ, ಮದರ್ ತೆರೆಸಾ, ಸಂತ ಕಾಫೆ ಆಶ್ರಮದ ಅಣ್ಣ ಹಜಾರೆ — ಇವರು ಎಲ್ಲರೂ ನೈತಿಕ ನಂಬಿಕೆಯ ಆಧಾರದ ಮೇಲೆ ಕೆಲಸ ಮಾಡಿ ಕೋಟಿ ಜನರಿಗೆ  ಪ್ರೇರಣೆಯಾದರು.  ಆದರೆ ಇದೇ ದೇಶದ ಲಂಚಕೋರ ಅಧಿಕಾರಿಗಳು, ಕೇಸುಗಳಲ್ಲಿ ಸಿಕ್ಕು ಬೀಳುವ ರಾಜಕಾರಣಿಗಳು – ಇವರು ಧಾರ್ಮಿಕ ನಂಬಿಕೆಗೆ ವಿರುದ್ಧವಾದ ಬದುಕಿನ ಮಾದರಿ.  2️⃣ "ಮನುಷ್ಯನ ಸಹೋದರತ್ವವು ರಾಷ್ಟ್ರಗಳ ಸಾರ್ವಭೌಮತ್ವವನ್ನು ಮೀರಿಸುತ್ತದೆ."        ಮಾನವ ಸಹೋದರತ್ವವು ಧರ್ಮ, ಭಾಷೆ, ಜಾತಿ, ಅಥವಾ ದೇಶದ ಗಡಿಗಳನ್ನು ಮೀರುತ್ತದೆ.  2018ರ ಕೇರಳ ಪ್ರವಾಹದ ವೇಳೆ ದೇಶದ ಮೂಲೆಮೂಲೆಗಳಿಂದ ಜನರು...

ಚಿಕ್ಕ ರಂಗ ನಾಯಕ ನೀರುಗಂಟಿ ಆತ್ಮಹತ್ಯೆ : ಕಾರಣ ಸುಮಾರು ತಿಂಗಳಿನಿಂದ ವೇತನ ನೀಡದೇ ಇರುವುದು

ಇಮೇಜ್
     ವಾಲ್ಮೀಕಿ ಸಮಾಜವನ್ನು ಹತ್ತಿಕ್ಕುವ ಹಾಗೂ ತುಳಿಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ನಾನಾ ಕಾರಣಗಳಿಂದ ವಾಲ್ಮೀಕಿ ಸಮಾಜದ ರಾಜಕಾರಣಿ , ಅಧಿಕಾರಿಗಳನ್ನು,   ನೌಕರರನ್ನ ಬಲಿ ತೆಗೆದುಕೊಳ್ಳುತ್ತಿದೆ.  ಚಿಕ್ಕ ರಂಗನಾಯಕ ತಂದೆ ರಂಗನಾಯ್ಕ ಈ ವ್ಯಕ್ತಿಯು ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲೂಕಿನ ಸಂತೆಮರಳಿ ಹೋಬಳಿಯ ಹೊಂಗನೂರು ಗ್ರಾಮದ ನಿವಾಸಿಯಾಗಿದ್ದು ಹಾಗೂ ಹುಂಗನೂರು ಪಂಚಾಯತಿಯಲ್ಲಿ  ವಾಟರ್ ಮ್ಯಾನ್ ಆಗಿ ಕೆಲಸ ಮಾಡ್ತಾ ಇದ್ದು, ಪಂಚಾಯ್ತಿಯ ಸಂಬಳದಿಂದ ತನ್ನ ಸಂಸಾರವನ್ನು ನಡೆಸುತಿದ್ದರು ಸದರಿ ವ್ಯಕ್ತಿಗೆ ಪಂಚಾಯಿತಿಯಿಂದ ತಿಂಗಳ ವೇತನವನ್ನು ಕೊಡದೆ ತಿಂಗಳಾನುಗಟ್ಟಲೆಯಿಂದ ಅವರ ವೇತನವನ್ನು ಕಾಯ್ದಿರಿಸಿಕೊಂಡು, ಅವರ ಜೀವನ ನಿರ್ವಹಣೆಗೂ  ತೊಂದರೆಯನ್ನು ಮಾಡಿರುತ್ತಾರೆ ಮತ್ತು ಈ ಘಟನೆಯು ಮನ ಕಲಕುವ ಘಟನೆ ಆಗಿರುತ್ತದೆ.              ರಾಜ್ಯ ಸರ್ಕಾರದ ನಿರ್ಲಕ್ಷಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದೆ ಕೂಡಲೇ ಆತ್ಮಹತ್ಯೆಗೆ ಕಾರಣರಾದ ವ್ಯಕ್ತಿಗಳನ್ನ ಬಂಧಿಸಿ ಮತ್ತು ಅವರ ಹುದ್ದೆಯಿಂದ ಅಮಾನತ್ತುಗೊಳಿಸಬೇಕೆಂದು ವಾಲ್ಮೀಕಿ ಸಮುದಾಯ ಆಗ್ರಹಿಸುತ್ತದೆ , ಆತ್ಮಹತ್ಯೆಗೆ ಶರಣಾದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತದೆ.

ಜೆಸಿಐನಿಂದ ರಾಜಕೀಯಕ್ಕೆ: ಜೂನಿಯರ್ ಚೇಂಬರ್ ಇಂಟರ್ನ್ಯಾಷನಲ್ ಭವಿಷ್ಯದ ನಾಯಕರನ್ನು ಹೇಗೆ ರೂಪಿಸುತ್ತದೆ

ಇಮೇಜ್
          .                    ಹೆನ್ರಿ ಗಿಸೆನ್‌ಬಿಯರ್ ಜೆಸಿಐ ಸಂಸ್ಥಾಪಕ        ಜೂನಿಯರ್ ಚೇಂಬರ್ ಇಂಟರ್ನ್ಯಾಷನಲ್ (ಜೆಸಿಐ) ಒಂದು ಜಾಗತಿಕ ಸಂಸ್ಥೆಯಾಗಿದ್ದು, ಇದು 18 ರಿಂದ 40 ವರ್ಷ ವಯಸ್ಸಿನ ಯುವಜನರಿಗೆ ಅವರ ಸಮುದಾಯಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಸೃಷ್ಟಿಸಲು ಅಧಿಕಾರ ನೀಡುತ್ತದೆ. ಜೆಸಿಐ ಸ್ವತಃ ರಾಜಕೀಯೇತರ ಮತ್ತು ಧಾರ್ಮಿಕೇತರ ಸಂಘಟನೆಯಾಗಿದ್ದರೂ, ನಾಯಕತ್ವ, ಜವಾಬ್ದಾರಿ ಮತ್ತು ನಾಗರಿಕ ಕರ್ತವ್ಯ ಅಭಿವೃದ್ಧಿಪಡಿಸುವ ಅದರ ಧ್ಯೇಯವು ಅದರ ಅನೇಕ ಸದಸ್ಯರನ್ನು ಪ್ರಪಂಚದಾದ್ಯಂತ ಸಾರ್ವಜನಿಕ ಸೇವೆ ಮತ್ತು ರಾಜಕೀಯಕ್ಕೆ ಕಾಲಿಡಲು ಪ್ರೇರೇಪಿಸಿದೆ. ಜೆಸಿಐ - ನಾಯಕರಿಗೆ ತರಬೇತಿ ಜೀವಾಳ        ಜೇಸೀಸ್ ಎಂದು ಕರೆಯಲ್ಪಡುವ ಜೆಸಿಐ ಸದಸ್ಯರು ಯೋಜನೆಗಳು, ತರಬೇತಿ ಕಾರ್ಯಕ್ರಮಗಳು ಮತ್ತು ಸಮುದಾಯ ಉಪಕ್ರಮಗಳ ಮೂಲಕ ವ್ಯಾಪಕವಾದ ವೈಯಕ್ತಿಕ ಮತ್ತು ನಾಯಕತ್ವ ಅಭಿವೃದ್ಧಿಯನ್ನು ಪಡೆಯುತ್ತಾರೆ. ಈ ಅನುಭವವು ಅವರಿಗೆ ಸಂವಹನ, ತಂಡದ ಕೆಲಸ, ಸಮಸ್ಯೆ ಪರಿಹಾರ ಮತ್ತು ಸಾಮಾಜಿಕ ಜವಾಬ್ದಾರಿಯಲ್ಲಿ ನೈಜ-ಪ್ರಪಂಚದ ಕೌಶಲ್ಯಗಳನ್ನು ಒದಗಿಸುತ್ತದೆ - ಪರಿಣಾಮಕಾರಿ ರಾಜಕೀಯ ನಾಯಕತ್ವಕ್ಕೆ ಅಗತ್ಯವಾದ ಗುಣಗಳು.        ಪರಿಣಾಮವಾಗಿ, ಜೆಸಿಐ ತಮ್ಮ ರಾಷ್ಟ್ರಗಳಲ್ಲಿ ಕೆಲವು ಉನ್ನ...

ರಮೇಶ್ ಕತ್ತಿ ವಿರುದ್ಧ ಶಿವಮೊಗ್ಗ ಜಿಲ್ಲಾ ವಾಲ್ಮೀಕಿ ಮುಖಂಡರಿಂದ ದೂರು

ಇಮೇಜ್
  ಮಾಜಿ ಸಂಸದ ಬೆಲ್ಲದ ಬಾಗೇವಾಡಿಯ ರಮೇಶ ಕತ್ತಿ ತಂದೆ ವಿಶ್ವನಾಥ ಕತ್ತಿ, ಲಿಂಗಾಯತ ಜಾತಿ ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ತನ್ನ ಬೆಂಬಲಿಗರೊಂದಿಗೆ ಮಾತನಾಡುತ್ತಾ ವಾಲ್ಮೀಕಿ ಬೇಡನಾಯಕ ಜನಾಂಗವನ್ನು " ಬೇಡರ ಜಾತಿಯ ಜೊತೆ ಅವ್ಯಾಚ್ಯ ಪದ ಬಳಕೆ" ಆ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ವಾಲ್ಮೀಕಿ ಸಮಾಜಕ್ಕೆ ಅವಮಾನಿಸಿದ್ದಾನೇ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದೆ. ಆದರಿಂದ ದೇಶದಾದ್ಯಂತ ವಾಲ್ಮೀಕಿ ನಾಯಕ ಸಮುದಾಯದ ಜನರ ಮನಸ್ಸಿಗೆ ತೀವ್ರ ನೋವು ಉಂಟಾಗಿದೆ. ಅ ವಿಚಾರಕ್ಕಾಗಿ ಇಂದು ಶಿವಮೊಗ್ಗ ಜಿಲ್ಲಾ  ಎಸ್‌ಪಿ ಮಿಥನ್ ಕುಮಾರ್ ರವರಿಗೆ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ  ಅಧ್ಯಕ್ಷರಾದ ಶ್ರೀಧರ್.ಕೆ.ಆರ್, ಉಪಾಧ್ಯಕ್ಷರಾದ N.T ಲೋಕಪ್ಪ, ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷರಾದ ಎಂ.ಎಚ್.ಶೇಖರಪ್ಪ  ಚೋರಡಿ ಗ್ರಾಮ ಪಂಚಾಯಿತಿ ಸದಸ್ಯರಾದ ರಾಜೇಶ್ ಚೋರಡಿ. ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಹನುಮಂತಾಪುರ ಎಂ.ಚಂದ್ರಪ್ಪ ಹಾಗೂ ವಾಲ್ಮೀಕಿ ನಾಯಕ ಸಮಾಜದ ಮುಖಂಡರುಗಳು ಇಂದು ಶಿವಮೊಗ್ಗ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಎಸ್.ಪಿ.ಮಿಥುನ್ ಕುಮಾರ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಲಾಯಿತು. ತದನಂತರ ಮಾತನಾಡಿದ ಎಸ್‌ಪಿ ಸಾಹೇಬರು ಕಾನೂನು ರಿತ್ಯಾ ಕ್ರಮ ಜರುಗಿಸುವ ಭರವಸೆ ನೀಡಿದರು.

ಬಯಲಿಗೆ ಬಂದ ಶಾಸನ ಸಂಪತ್ತು

ಇಮೇಜ್
     ಸೊರಬ ತಾಲ್ಲೂಕಿನ ಮಾವಲಿಯ ವೀರಗಲ್ಲುಗಳು ಕರುನಾಡಿನ ಸಾಂಸ್ಕೃತಿಕ ಹಾಗೂ ಸಾಹಿತ್ಯ ವಲಯಕ್ಕೆ ನೀಡಿದ ಕೊಡುಗೆ ನಿಜಕ್ಕೂ ಸ್ಮರಣನೀಯವಾದದ್ದು. ಆದರೆ ಅಲ್ಲಿಯ ಆ ಶಾಸನ ಸಂಪತ್ತನ್ನು ಕಣ್ಣಿನಿಂದ ನೋಡಿ ಆನಂದಿಸಲು ಇತ್ತೀಚಿನ ಕನ್ನಡಾಭಿಮಾನಿಗಳಿಗೆ ಸಾಧ್ಯವಾಗಿರಲಿಲ್ಲ. ಕಾರಣ ಅವುಗಳ ಸುತ್ತಲೂ ಗಿಡಗಂಟೆಗಳು ಬೆಳೆದು ಅಲ್ಲಿಗೆ ತಲುಪಲು ಅಸಾಧ್ಯವಾಗಿತ್ತು. ಇತ್ತೀಚಿಗೆ ಅವುಗಳ ಸಂರಕ್ಷಣೆಯ ಕುರಿತು ಮುಖ್ಯಮಂತ್ರಿ ಕಛೇರಿಯಿಂದ ಪ್ರಾರಂಭವಾಗಿ ಪುರಾತತ್ವ ಇಲಾಖೆ, CS, EO ಮತ್ತು PDO ವರೆಗೂ ಮಾಹಿತಿ ವಿನಿಮಯ ನಡೆದಿತ್ತು. ಆಗ ತುಂಬು ಮಳೆಗಾಲವಿತ್ತು.         ಈಗ ಶಿವಮೊಗ್ಗ ಜಿಲ್ಲೆಯ ಮಾನ್ಯ ಜಿಲ್ಲಾಪಂಚಾಯತ್ ಕಾರ್ಯನಿರ್ವಹಾಣಾ ಅಧಿಕಾರಿಗಳ   ಯೋಜನೆಯಾದ "ನಮ್ಮಊರು- ನಮ್ಮಹೆಮ್ಮೆ" -ಕಾರ್ಯಕ್ರಮ. ಇದು  ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಯ ಗ್ರಂಥಪಾಲಕರು ಮತ್ತು ಅಲ್ಲಿನ ವಿದ್ಯಾರ್ಥಿಗಳ  ತಂಡಗಳು ಪ್ರತಿಗ್ರಾಮದ ಐತಿಹಾಸಿಕ ಸಾಂಸ್ಕೃತಿಕ ಹಾಗೂ ಪ್ರಸ್ತುತ ಆರ್ಥಿಕ ಸಮೃದ್ಧತೆಯ ಕುರಿತಾದ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸಿ ಕೃತಿ ರಚಿಸುವ ಅಧ್ಭುತ  ಕಾರ್ಯಕ್ರಮವಾಗಿದೆ. ಇದರಿಂದಾಗಿ ಪ್ರತಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಇತಿಹಾಸದ ಆಕರಗಳ ಹುಡುಕಾಟ, ಮಾಹಿತಿ ಸಂಗ್ರಹಣೆ ಮತ್ತು ಸಂರಕ್ಷಣೆಯ ಕಾರ್ಯಗಳು ಭಾರದಿಂದ ಸಾಗಿವೆ.          ನಮ್ಮ ಊರ...

ಬೆಳಗಾವಿಯಲ್ಲಿ ವಾಲ್ಮೀಕಿ ಬೇಡರ ಸಮುದಾಯದ ಕುರಿತು ರಮೇಶ ಕತ್ತಿ ನೀಡಿರುವ ಅವಹೇಳನಕಾರಿ ಹೇಳಿಕೆ : ವಿರೋಧ ವ್ಯಕ್ತ ಪಡಿಸಿದ ಸತೀಶ್ ಜಾರಕಿಹೊಳಿ ಸಚಿವರು

ಇಮೇಜ್
            ಬೆಳಗಾವಿಯಲ್ಲಿ ವಾಲ್ಮೀಕಿ ಬೇಡರ ಸಮುದಾಯದ ಕುರಿತು ರಮೇಶ ಕತ್ತಿ ಅವರು ನೀಡಿರುವ ಅವಹೇಳನಕಾರಿ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮೇಲ್ನೋಟಕ್ಕೆ ಅದು ನಿಜವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇಂತಹ ಅಸಂವೇದನಾಶೀಲ ಮಾತುಗಳು ಸಮಾಜದ ಸೌಹಾರ್ದತೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳಿಗೆ ಗಂಭೀರ ಧಕ್ಕೆ ತರುತ್ತವೆ. ಆದ್ದರಿಂದ, ಕಾನೂನಿನ ಪ್ರಕಾರ ತನಿಖೆಯನ್ನು ಕೈಗೊಂಡು ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ನಾನು ಕೂಡ ಆಗ್ರಹಿಸುತ್ತೇನೆ.         ಜಾತಿಯಂತಹ ವಿಷವನ್ನು ಬೇರುಸಹಿತ ನಿರ್ಮೂಲನೆಗೊಳಿಸಲು ತಮ್ಮ ಜೀವನವನ್ನೇ ಅರ್ಪಿಸಿದ ಮಹಾನ್ ತತ್ವಜ್ಞಾನಿಗಳು ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ “ಸಮಾನತೆ, ಮಾನವೀಯತೆ ಮತ್ತು ಸಹೋದರತೆ” ಎಂಬ ಸಿದ್ಧಾಂತಗಳೇ ನಮ್ಮ ಮಾರ್ಗ ಮತ್ತು ದಾರಿದೀಪವಾಗಬೇಕು — “ನಾ ಹೆಚ್ಚು, ನೀ ಹೆಚ್ಚು” ಎಂಬ ಜಾತಿಯ ವಿಷವಲ್ಲ.

ಡಾ. ಧ್ರುವ ದರ್ಶನ್ ಬಿ ಎಸ್ ಕೃತಕ ಬುದ್ಧಿಮತ್ತೆ ಮತ್ತು ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿ ಪಿಎಚ್‌ಡಿ ಪದವಿ ಗಳಿಸಿದ್ದಾರೆ

ಇಮೇಜ್
  ಶಿವಮೊಗ್ಗ, ಕರ್ನಾಟಕ – 2025:       ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ), ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಎಂಎಹೆಚ್‌ಇ) ಯ ಸಂಶೋಧಕರಾದ ಡಾ. ಧ್ರುವ ದರ್ಶನ್ ಬಿ ಎಸ್, ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿ ತಮ್ಮ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ) ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಶಿವಮೊಗ್ಗ ನಗರದ ಶ್ರೀ ಜೆಸಿ ಎಂ ಸಿದ್ದರಾಮ (ಜೆಸಿಐ ಶಿವಮೊಗ್ಗ ಶರಾವತಿಯ ಹಿರಿಯ ಸದಸ್ಯ, ಕುವೆಂಪು ವಿಶ್ವ ವಿದ್ಯಾನಿಲಯದ ನಿವೃತ್ತಿ ನೌಕರ) ಮತ್ತು ಶ್ರೀಮತಿ ಸರೋಜಾ (ನಿವೃತ್ತಿ ಶಿಕ್ಷಕಿ) ದಂಪತಿಗಳ ಮಗನಾಗಿದ್ದಾರೆ.       ರಕ್ತ ಪರೀಕ್ಷೆಯ ಗುಣಲಕ್ಷಣಗಳನ್ನು ಬಳಸಿಕೊಂಡು ರಕ್ತಹೀನತೆಯ ವರ್ಗೀಕರಣಕ್ಕಾಗಿ ಬುದ್ಧಿವಂತ ಕ್ಲೌಡ್ ಮಾದರಿಯನ್ನು ಅಭಿವೃದ್ಧಿಪಡಿಸುವುದು, ಆರೋಗ್ಯ ರಕ್ಷಣೆಯಲ್ಲಿ ರೋಗ ನಿರ್ಣಯದ ನಿಖರತೆಯನ್ನು ಸುಧಾರಿಸಲು ವಿವರಿಸಬಹುದಾದ ಕೃತಕ ಬುದ್ಧಿಮತ್ತೆ (AI) ಮತ್ತು ಯಂತ್ರ ಕಲಿಕೆ ತಂತ್ರಗಳನ್ನು ಸಂಯೋಜಿಸುವುದು ಅವರ ಡಾಕ್ಟರೇಟ್ ಕೆಲಸ. ಅವರ ಸಂಶೋಧನೆಯು ಐದು ಅಂತರರಾಷ್ಟ್ರೀಯ ಜರ್ನಲ್ ಪ್ರಕಟಣೆಗಳು, ಎರಡು ಸಮ್ಮೇಳನ ಪತ್ರಿಕೆಗಳು ಮತ್ತು "ಬಳಕೆದಾರರಲ್ಲಿ ರಕ್ತಹೀನತೆಯ ಡಿಫರೆನ್ಷಿಯಲ್ ಡಯಾಗ್ನೋಸಿಸ್‌ಗಾಗಿ ಸಿಸ್ಟಮ್ ಮತ್ತು ಮೆಥಡ್" (ಪೇಟೆಂಟ್ ಸಂಖ್ಯೆ 202541035665) ಎಂಬ ಶೀರ್ಷಿಕೆಯ ಪೇಟೆಂಟ್ ವ್ಯವಸ್ಥೆಯನ್ನು ನೀಡ...

ಇತ್ತೀಚಿನ ವಲಯ ಸಮ್ಮೇಳನದಲ್ಲಿ ನ್ಯಾಯಯುತತೆ ಮತ್ತು ಪಾರದರ್ಶಕತೆಯ ಬಗ್ಗೆ ಕಳವಳ : ಹಿರಿಯ ಜೆಸಿಐ ಪೂರ್ವ ವಲಯ ಅಧಿಕಾರಿ

ಇಮೇಜ್
"ವಲಯ ಸಮ್ಮೇಳನದ ಟ್ಯಾಲೆಂಟ್ ಶೋ"        ಪೂರ್ವ ವಲಯ ಉಪಾಧ್ಯಕ್ಷರು ಮತ್ತು ವಲಯ ತರಬೇತುದಾರರು ಸೇರಿದಂತೆ ವಿವಿಧ ನಾಯಕತ್ವ ಸ್ಥಾನಗಳಲ್ಲಿ ಸೇವೆ ಸಲ್ಲಿಸಿರುವ ವಕೀಲರು ಹಾಗೂ ಜೆಸಿಐ ಸಮುದಾಯದ ಹಿರಿಯ ಸದಸ್ಯರೊಬ್ಬರು,  ಇತ್ತೀಚಿನ ವಲಯ ಸಮ್ಮೇಳನದಲ್ಲಿ ನಡೆದ ಅಕ್ರಮಗಳು ಮತ್ತು ಪಾರದರ್ಶಕತೆಯ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.        ವಲಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಈ ಹಿಂದೆ ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಹಿರಿಯ ಸದಸ್ಯರು, ತರಬೇತುದಾರರು, ಸಂಸ್ಥೆಯು ಯಾವಾಗಲೂ ನ್ಯಾಯಯುತ, ಒಳಗೊಳ್ಳುವಿಕೆ ಮತ್ತು ಅರ್ಹತೆಯ ತತ್ವಗಳನ್ನು ಎತ್ತಿಹಿಡಿಯಬೇಕು ಎಂದು ಹೇಳಿದ್ದಾರೆ. ಆದಾಗ್ಯೂ, ಇತ್ತೀಚಿನ ಘಟನೆಗಳು ಹಲವಾರು ಸಕ್ರಿಯ ಮತ್ತು ಉನ್ನತ-ಕಾರ್ಯನಿರ್ವಹಿಸುವ ಸ್ಥಳೀಯ ಸಂಸ್ಥೆಗಳಲ್ಲಿ ನಿರಾಶೆಯನ್ನು ಉಂಟುಮಾಡಿವೆ ಎಂದು ವರದಿಯಾಗಿದೆ.       ಅವರ ಹೇಳಿಕೆಯ ಪ್ರಕಾರ, ವಲಯ ಕಾರ್ಯಕ್ರಮಗಳನ್ನು ಸಕ್ರಿಯವಾಗಿ ಆಯೋಜಿಸಿದ ಸ್ಥಳೀಯ ಘಟಕಗಳಲ್ಲಿ ಒಂದು ಘಟಕದ ಪ್ರಶಸ್ತಿ ಪ್ರಕ್ರಿಯೆಯಲ್ಲಿ ಕಡೆಗಣಿಸಲಾಗಿದೆ. ಮಾನ್ಯತೆ ಸ್ವಯಂ ಸೇವಕರನ್ನು ಪ್ರೇರೇಪಿಸುತ್ತದೆ ಮತ್ತು ತಳಮಟ್ಟದಲ್ಲಿ ಜೆಸಿಐ ಚಳುವಳಿಯನ್ನು ಬಲಪಡಿಸುತ್ತದೆಯಾದ್ದರಿಂದ, ಸ್ಥಳೀಯ ಸಂಸ್ಥೆಗಳ ಪ್ರಾಮಾಣಿಕ ಪ್ರಯತ್ನಗಳನ್ನು ಯಾವಾಗಲೂ ಗುರುತಿಸಬೇಕು ಎಂದು ಸದಸ್ಯರು ಒತ್ತಿ ಹೇಳಿದರು.       ಪಕ...

ಒಂದುವರೆ ಕೋಟಿ ವ್ಯವಹಾರದಲ್ಲಿ ದೋಖಾ, 11 ಜನರ ವಿರುದ್ಧ ದೂರು : ಜಾತಿ ನಿಂದನೆ, ಜೀವ ಬೆದರಿಕೆ

ಇಮೇಜ್
    ಒಂದುವರೆ ಕೋಟಿ ಹಣದ ವಿಚಾರದಲ್ಲಿ ಮಹಿಳೆಯೋರ್ವರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ, ಜಾತಿ ನಿಂದನೆ ಮತ್ತು ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಬೆದರಿಕೆ ಹಾಕಲಾಗಿದ್ದು, ಮಂದಾರ ಶಾಲೆಯ ಮಾಲಕಿ ಸೇರಿದಂತೆ 11 ಜನರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.        ಹಣದ ವ್ಯವಹಾರವನ್ನ ಬಗೆಹರಿಸಿಕೊಳ್ಳಲು  ಶಾಲೆಯ ಮಾಲೀಕರು,   ಮತ್ತೊಬ್ಬ ಸಮಾಜ ಸೇವಕಿ ವೆಂಕಟೇಶ ನಗರದಲ್ಲಿರುವ ಮನೆಗೆ ಕರೆದಿದ್ದರು. ಮನೆಗೆ ಹೋದ ಸಮಾಜ ಸೇವಕಿ ಮತ್ತು ಅವರ ಕಡೆಯವರಿಗೆ ಜಾತಿ ನಿಂದನೆ ಮಾಡಿ ಪೆಟ್ರೋಲ್ ಸುರಿದು ಹತ್ಯೆ ನಡೆಸುವ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ನೀಡಲಾಗಿದೆ.       ಮಾಹಿತಿ ಪ್ರಕಾರ ಅನುಪಿನಕಟ್ಟೆಯಲ್ಲಿರುವ ಖಾಸಗಿ ಶಾಲೆ ಅಭಿವೃದ್ಧಿ ವಿಚಾರದಲ್ಲಿ ನಡೆದ ವ್ಯವಹಾರ ಎರಡೂ ಕಡೆ ಸರಿಬಾರದ ಹಿನ್ನಲೆಯಲ್ಲಿ ಹಣದ ವಿಚಾರದಲ್ಲಿ ಜಟಾಪಟಿ ನಡೆಯುತ್ತಿದೆ. ಶಾಲೆ ಅಭಿವೃದ್ಧಿಯ ವಿಚಾರದಲ್ಲಿ ಕೋಟ್ಯಾಂತರ ರೂ ಹಣ ವ್ಯಯ ಮಾಡಲಾಗಿದೆ ಎಂದು ಒಂದಿಷ್ಟು ಜನ ಹೇಳುತ್ತಿದ್ದಾರೆ. ಆದರೆ ಶಾಲೆಯ ಮಾಲೀಕರು, ನಾನು ಹಣ ಕರ್ಚು ಮಾಡಲು ಹೇಳಿಲ್ಲ ಎಂಬುದು ಅವರ ವಾದವಾಗಿದೆ.  ವ್ಯವಹಾರ ಸರಿಬಾರದ ಕಾರಣ ಈಗ ಶಾಲೆಯ ಮಾಲೀಕರ ವಿರುದ್ಧ ಜಾತಿ ನಿಂದನೆ, ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಜೀವ ಬೆದರಿಕೆ ದೂರು ದಾಖಲಾಗಿದೆ. 

ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳನ್ನು ನಿಯಂತ್ರಿಸುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ : ಶಾಸಕ ಡಿ ಎಸ್ ಅರುಣ್

ಇಮೇಜ್
    ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮರೆಮಾಚಲು ಕರ್ನಾಟಕ ರಾಜ್ಯದ ಜನರನ್ನ ದಿಕ್ಕು ತಪ್ಪಿಸುವ ಕಾರ್ಯತಂತ್ರ ರೂಪಿಸಲು ಆರ್ ಎಸ್ ಎಸ್ ಸಂಘಟನೆಯನ್ನು ಬಳಸಿಕೊಳ್ಳುತ್ತಿದೆ. ನಿರಂತರವಾಗಿ ಕೇಳಿ ಬರುತ್ತಿರುವ ಅಧಿಕಾರ ಹಂಚಿಕೆ, ಮುಖ್ಯಮಂತ್ರಿಯ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ, ಸಚಿವರ ರಾಜೀನಾಮೆ, ಕ್ಷೇತ್ರ ಅಭಿವೃದ್ಧಿಗೆ ಮತ್ತು ಶಾಸಕರ ನಿಧಿಗೆ ಯಾವುದೇ ಅನುದಾನ ನೀಡದೆ ಹಾಗೂ ಇತ್ತೀಚೆಗೆ ನಡೆಯುತ್ತಿರುವ ಜಾತಿ ಸಮೀಕ್ಷೆಯಲ್ಲಿ ಅತಿಹೆಚ್ಚಿನ ತೊಡಕುಗಳು ಹೀಗೆ ನಿರಂತರ ಸರ್ಕಾರದ ಎಡವಟ್ಟುಗಳನ್ನು ಮರೆಮಾಚಲು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ರಾಜ್ಯ ಸರ್ಕಾರ ಯಾವುದೇ ರೀತಿಯ ನಿರ್ಬಂಧಗಳನ್ನು ಮಾಡಿದರು ಸಹ ರಾಷ್ಟ್ರೀಯ ಸ್ವಯಂಸೇವಕ ಸಂಘ ತಡೆಯುವುದಕ್ಕೂ ಸಾಧ್ಯವಿಲ್ಲ ಹಾಗೂ ನಿರಂತರ ಚಟುವಟಿಕೆಗಳನ್ನು ನಿಲ್ಲಿಸುವುದಕ್ಕೆ ಆಗುವುದಿಲ್ಲ. ಯಾಕೆಂದರೆ      ಒಂದು ಲಕ್ಷದ ಇಪ್ಪತೊಂಬತ್ತು ಸಾವಿರಕ್ಕಿಂತ ಹೆಚ್ಚು ಸೇವಾ ಕಾರ್ಯಗಳನ್ನು ನಿರಂತರವಾಗಿ ಇಡೀ ರಾಷ್ಟ್ರದಲ್ಲಿ ಮಾಡಿಕೊಂಡು ಬರುತ್ತದೆ. ಭಾರತದಲ್ಲಿ ಅಷ್ಟೇ ಅಲ್ಲದೆ ಪ್ರಪಂಚದಲ್ಲಿ ಹಲವು ಕಡೆ ಶಾಖೆಗಳನ್ನು ನಡೆಸುತ್ತಿದೆ. ಹಾಗಾಗಿ ಇಂದು ನಿಮ್ಮ ದುರಾಡಳಿತ ಭ್ರಷ್ಟಾಚಾರವನ್ನು ಮರೆಮಾಚುವುದಕ್ಕೆ ಈ ಕೆಲಸಕ್ಕೆ ಕೈ ಹಾಕಿರೋದು ನಿಮ್ಮ ದೌರ್ಭಾಗ್ಯ.       ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ರಾಜಕೀಯವನ್ನು ಹೊರತುಪಡಿಸಿ ನಿಷ್ಪಕ್ಷಪಾತವಾಗಿ ತಾಳುವ...

ಕುವೆಂಪು ವಿವಿ ನಿವೃತ್ತ ಅಧೀಕ್ಷಕ ಎಂ ಸಿದ್ದರಾಮು ಕಾಂಗ್ರೆಸ್ ಸೇರ್ಪಡೆ

ಇಮೇಜ್
   ಕುವೆಂಪು ವಿಶ್ವವಿದ್ಯಾಲಯದಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿ  ನಿವೃತ್ತಿ ಹೊಂದಿರುವ ಎಂ ಸಿದ್ದರಾಮು ಇವರು ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಆದ ಮಧು ಬಂಗಾರಪ್ಪನವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಹೊಂದಿದರು        ಅವರು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿ ಇತ್ತೀಚಿಗೆ ನಿವೃತ್ತಿ ಹೊಂದಿದ್ದು ಇವರು ಅನೇಕ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಹಾಗೂ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.      ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಆರ್ ಪ್ರಸನ್ನ ಕುಮಾರ್, ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ ರಮೇಶ್ ಶಂಕರಘಟ್ಟ, ಮಹಿಳಾ ವಿಭಾಗದ ಅಧ್ಯಕ್ಷ ಶ್ವೇತಾ ಬಂಡಿ, ಪ್ರಮುಖರಾದ ಕಲಗೋಡು ರತ್ನಾಕರ್ , ಜಿ.ಡಿ ಮಂಜುನಾಥ್ ಮತ್ತಿತರರು  ಇದ್ದರು

ರಾಜ್ಯಮಟ್ಟದ ಜೆಸಿಐ ವಲಯ ಸಮ್ಮೇಳನ 2025

ಇಮೇಜ್
   ದಿನಾಂಕ 11, 12 ಶನಿವಾರ ಮತ್ತು ಭಾನುವಾರ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆಸಿಐ ಭಾರತದ ವಲಯ 24ರ ವಲಯ-ಸಮ್ಮೇಳನ 2025 ನಡೆಯುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನ ಜೆಸಿಐ ಸದಸ್ಯರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.        ಈ ಸಮ್ಮೇಳನದ ಅಧ್ಯಕ್ಷತೆ ಜೆಸಿ ಗೌರೀಶ್ ಭಾರ್ಗವ್ ವಲಯ ಅಧ್ಯಕ್ಷ, ಮುಖ್ಯ ಅತಿಥಿಗಳಾಗಿ ಮಂಜುನಾಥ್ ಭಂಡಾರಿ ಎಂ.ಎಲ್.ಸಿ, ಉದ್ಘಾಟನೆ ಕೆ ಎಸ್ ಈಶ್ವರಪ್ಪ ಮಾಜಿ ಉಪ ಮುಖ್ಯಮಂತ್ರಿ, ಮುಖ್ಯ ಅತಿಥಿಗಳಾಗಿ ಬಿ.ವೈ ರಾಘವೇಂದ್ರ ಸಂಸದರು, ಕಾಂತೇಶ್ ಕೆ.ಇ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಮಹಾಬಲೇಶ್ವರ ಉದ್ಯಮಿ, ಮುಖ್ಯ ಭಾಷಣಕಾರರಾಗಿ ಓಂ ಗಣೇಶ್ ಉಪ್ಪುಂದ ನಟ, ಸಾಹಿತಿ ಆಗಮಿಸುತ್ತಿದ್ದಾರೆ, ಹಾಗೂ ಜೆಸಿ ವರ್ಷ ಮೆನನ್, ಜೆಸಿ ಚನ್ನವೀರೇಶ, ಜೆಸಿ ಪ್ರಭು ಹಲಗೇರಿ ಉಪಸ್ಥಿತರಿರುತ್ತಾರೆ.       ಸಮ್ಮೇಳನದಲ್ಲಿ ಮೊದಲ ದಿನ ಉದ್ಘಾಟನಾ ಕಾರ್ಯಕ್ರಮ, ವಲಯ ಅಧ್ಯಕ್ಷರ ಮೆರವಣಿಗೆ, ಪರಿಣಾಮಕಾರಿ ಭಾಷಣ ಸ್ಪರ್ಧೆ, ಟ್ಯಾಲೆಂಟ್ ಹಂಟ್, ಅವಾರ್ಡ್ ನೈಟ್, ನಡೆಯಲಿದೆ. ಎರಡನೇ ದಿನ ವಲಯ ಅಧ್ಯಕ್ಷರ ವರದಿ ಒಪ್ಪಿಸುವುದು, 2026 ರ ವಲಯ ಮಂಡಳಿಯ ಚುನಾವಣೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದಿಂದ ಸಾವಿರಾರು ಜನ ಜೆಸಿಐ ಸದಸ್ಯರು ಭಾಗವಹಿಸುತ್ತಿದ್ದಾರೆ.      ಜೆಸಿ ನವೀನ್ ಕುಮಾರ್ ಎನ್ ವಿ, ಪೂರ್ವ ವಲ...

ಇದು ಗುರುವಾಗಿ ಹೆಮ್ಮೆ ಮತ್ತು ಸಂತೋಷದಿಂದ ಹಂಚಿ ಕೊಳ್ಳ ಬೇಕಾದ ಸುದ್ದಿ

ಇಮೇಜ್
  ಮೊದಲ ಚಿತ್ರಕ್ಕೇ ಶ್ರೇಷ್ಟ ಹಿನ್ನೆಲೆಗಾಯಕಿ ರಾಜ್ಯ ಪ್ರಶಸ್ತಿಯನ್ನು ಪಡೆದ ಸಹನಾ        ನನ್ನ ಶಿಷ್ಯೆ … ಪ್ರತಿಭಾವಂತ ಗಾಯಕಿ ವಿದುಷಿ ಸಹನಾ.ಎಸ್.ಭಾರದ್ವಾಜ್‌ ʼದಂಡಿʼ ಚಿತ್ರಕ್ಕೆ ಹಾಡಿದ ʼಮುಗಿಲೆ ಮಾತಾಡುʼ ಗೀತೆಗೆ 2021-22ನೆಯ ಸಾಲಿನ ಶ್ರೇಷ್ಟ ಹಿನ್ನೆಲೆ ಗಾಯಕಿ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ.   ಅನೇಕ ಚಿತ್ರಗೀತೆಗಳ ಕುರಿತ ಪ್ರಾತ್ಯಕ್ಷಿಕೆಯ ಉಪನ್ಯಾಸಗಳಲ್ಲಿ ನನ್ನ ಜೊತೆ  ಗಾಯಕಿಯಾಗಿ ನನ್ನ ಚಿಂತನೆಗಳನ್ನು  ಕೇಳುಗರಿಗೆ ತಲುಪಿಸುವ ಮಹತ್ವದ ಕಾರ್ಯ ಮಾಡಿದ ಸಹನಾ,  ಸದಾ ನನ್ನಿಂದ ಚಿತ್ರಗೀತೆಗಳ ಇತಿಹಾಸವನ್ನು ಬಹಳ ಕುತೂಹಲದಿಂದ ಕೇಳುತ್ತಿದ್ದ, ರಾಗಗಳ ಬಳಕೆಯ ಕುರಿತು ಚರ್ಚಿಸುತ್ತಿದ್ದ ಸಹನ  ಈಗ ತಾವೇ  ಇತಿಹಾಸವನ್ನು ನಿರ್ಮಿಸಿದ್ದಾರೆ. ಏಕೆಂದರೆ ಇದು ಅವರು ಹಾಡಿದ ಮೊದಲ ಚಿತ್ರಗೀತೆ. ಮೊದಲ ಬಾಲ್‌ಗೇ ಸಿಕ್ಸರ್‌ ಎತ್ತುವ ಬ್ಯಾಟ್ಸ್‌ ಮೆನ್‌ ರೀತಿ ಮಹತ್ವದ ಸಾಧನೆಯನ್ನು ಮಾಡಿದ್ದಾರೆ.       ಸಹನಾ ತಾತ ಪಿ.ಎನ್.ಮಲ್ಹಾರಿ ರಾಯರು ಚಿತ್ರದುರ್ಗದಲ್ಲಿ ಡಿ.ಡಿ.ಪಿ.ಐ ಆಗಿದ್ದರು. ನನ್ನ ದೊಡ್ಡಪ್ಪನ ಆತ್ಮೀಯ ಮಿತ್ರರು. ಅಂದಿನಿಂದಲೂ ಅವರ ಕುಟುಂಬಕ್ಕೂ ನಮ್ಮ ಕುಟುಂಬಕ್ಕೂ ನಿಕಟವಾದ ನಂಟು. ಅವರ ತಾಯಿ ರಮಾ ಸುಬ್ರಹ್ಮಣ್ಯ ಕೂಡ ಸಂಗೀತ ವಿದ್ವಾಂಸರು. ತಂದೆ ಕೆ.ಎಸ್.ಸುಬ್ರಹ್ಮಣ್ಯ ದೂರವಾಣಿ ಇಲಾಖೆಯಲ್ಲಿ ಕೆಲಸ ಮಾಡಿದವರು. ಸಹನಾ ...

JCI - An International Platform for Young People to Lead and Serve

ಇಮೇಜ್
Shivamogga, October 5:       Junior Chamber International (JCI) is a worldwide network of young active citizens aged 18 to 40, united by a common goal of creating positive change in society. With its presence in over 100 countries, JCI offers young people the opportunity to develop leadership skills, grow professionally and contribute to their communities. Why join JCI?      Leadership Opportunities: JCI provides training and real-life platforms for young people to become confident leaders.       Personal and Professional Growth: Members sharpen skills such as communication, teamwork and entrepreneurship.         Community Service: JCI projects focus on education, the environment, health and social awareness, enabling members to make a real impact.         Global Network: Being a part of JCI connects young people with friends and professionals from all over the world. Youth Power in Action Across India,...

ಜೆಸಿಐ - ಯುವಜನರು ಮುನ್ನಡೆಸಲು ಮತ್ತು ಸೇವೆ ಸಲ್ಲಿಸಲು ಒಂದು ಅಂತಾರಾಷ್ಟ್ರೀಯ ವೇದಿಕೆ

ಇಮೇಜ್
ಶಿವಮೊಗ್ಗ, ಅಕ್ಟೋಬರ್ 5:       ಜೂನಿಯರ್ ಚೇಂಬರ್ ಇಂಟರ್ನ್ಯಾಷನಲ್ (ಜೆಸಿಐ) 18 ರಿಂದ 40 ವರ್ಷ ವಯಸ್ಸಿನ ಯುವ ಸಕ್ರಿಯ ನಾಗರಿಕರ ವಿಶ್ವಾದ್ಯಂತ ಜಾಲವಾಗಿದ್ದು, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಸೃಷ್ಟಿಸುವ ಸಾಮಾನ್ಯ ಗುರಿಯಿಂದ ಒಗ್ಗೂಡಿದೆ. 100 ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಉಪಸ್ಥಿತಿಯೊಂದಿಗೆ, ಜೆಸಿಐ ಯುವಜನರಿಗೆ ನಾಯಕತ್ವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು, ವೃತ್ತಿಪರವಾಗಿ ಬೆಳೆಯಲು ಮತ್ತು ಅವರ ಸಮುದಾಯಗಳಿಗೆ ಕೊಡುಗೆ ನೀಡಲು ಅವಕಾಶವನ್ನು ನೀಡುತ್ತದೆ. ಜೆಸಿಐಗೆ ಏಕೆ ಸೇರಬೇಕು?     ನಾಯಕತ್ವದ ಅವಕಾಶಗಳು: ಯುವಕರು ಆತ್ಮವಿಶ್ವಾಸದ ನಾಯಕರಾಗಲು ಜೆಸಿಐ ತರಬೇತಿ ಮತ್ತು ನಿಜ ಜೀವನದ ವೇದಿಕೆಗಳನ್ನು ಒದಗಿಸುತ್ತದೆ.       ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆ: ಸದಸ್ಯರು ಸಂವಹನ, ತಂಡದ ಕೆಲಸ ಮತ್ತು ಉದ್ಯಮಶೀಲತೆಯಂತಹ ಕೌಶಲ್ಯಗಳನ್ನು ಚುರುಕುಗೊಳಿಸುತ್ತಾರೆ.       ಸಮುದಾಯ ಸೇವೆ: ಜೆಸಿಐ ಯೋಜನೆಗಳು ಶಿಕ್ಷಣ, ಪರಿಸರ, ಆರೋಗ್ಯ ಮತ್ತು ಸಾಮಾಜಿಕ ಜಾಗೃತಿಯ ಮೇಲೆ ಕೇಂದ್ರೀಕರಿಸುತ್ತವೆ, ಸದಸ್ಯರು ನಿಜವಾದ ಪರಿಣಾಮ ಬೀರಲು ಅನುವು ಮಾಡಿಕೊಡುತ್ತದೆ.         ಜಾಗತಿಕ ನೆಟ್‌ವರ್ಕ್: ಜೆಸಿಐನ ಭಾಗವಾಗುವುದರಿಂದ ಯುವಜನರು ಪ್ರಪಂಚದಾದ್ಯಂತದ ಸ್ನೇಹಿತರು ಮತ್ತು ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸುತ್ತಾರೆ. ಕಾರ್ಯಪ್ರವೃತ್ತವ...

ಬರೆಯುತ್ತಾರೆ ಗಾರಾ.ಶ್ರೀನಿವಾಸ್ ಜೆಸಿಐ ಸೆನೇಟರ್. ವಿನೀತ್ ಆರ್ ಹಾಗೂ ಜೆಸಿ ಅನಿಷಾ ಕಾತರಕಿ ಅವರುಗಳಿಗೆ ಬೆಂಬಲಿಸುತ್ತೇನೆ ಯಾಕೆ ಗೊತ್ತೇ..?!

ಇಮೇಜ್
  ಬರೆಯುತ್ತಾರೆ ಗಾರಾ.ಶ್ರೀನಿವಾಸ್ ಜೆಸಿಐ ಸೆನೇಟರ್. ವಿನೀತ್ ಆರ್  ಹಾಗೂ ಜೆಸಿ ಅನಿಷಾ ಕಾತರಕಿ ಅವರುಗಳಿಗೆ ಬೆಂಬಲಿಸುತ್ತೇನೆ ಯಾಕೆ ಗೊತ್ತೇ..?!       ಕ್ಷಮಿಸಿ ಹೀಗೊಂದು ತಳಸ್ಪರ್ಶಿ ವಾಸ್ತವ ಕುರಿತು ನಮ್ಮಲ್ಲಿಯೇ ನಾವು ಅವಲೋಕನ ಮಾಡಿಕೊಳ್ಳಬೇಕಾದದ್ದು ಬಲು ಜರೂರತ್ತಿದೆ, ನಾವುಗಳು ಜೆಸಿಯಾಗಿ ಜೆಸಿಐ ಸಂವಿಧಾನವನ್ನು ನಿಜವಾಗಿಯೂ ಅನುಸರಿಸುತ್ತಿದ್ದೇವಾ..? ತರಬೇತಿಯೇ ಜೀವಾಳ ಎನ್ನುವ ಬೇಸ್ ಸ್ಟೆಪ್‌ಗಳನ್ನು ಆಸ್ವಾದಿಸಿಕೊಂಡು ಮಾನವ ಜೀವನಗಳ ವಿಕಸಿತ ವಿಸ್ತೃತಕ್ಕೆ ನಾವುಗಳು ಮುಂದಾಗಿದ್ದೇವಾ..? ಅಥವಾ ವೈಯಕ್ತಿಕವಾಗಿ ವ್ಯಕ್ತಿತ್ವ ವಿಕಸನ ಹೊಂದಿ ಮೇರೆತ್ತರದಿ ಇದ್ದೇವಾ..?!  ಜೆಸಿ ವಾಣಿಗಳಂತೆಯೇ ಜಾತಿ, ಧರ್ಮ, ರಾಜಕೀಯ ಪಕ್ಷಗಳ ಸಂಕೋಲೆಗಳ ಸಾಂಗತ್ಯದಿಂದ ದೂರ ಉಳಿದುಕೊಂಡಿದ್ದೇವಾ..? ಇಂತಿವುಗಳ ಪ್ರಶ್ನಾರ್ಥಕ ಚಿಹ್ನೆಗಳು ನಿಮ್ಮ ಮುಂದಡಿ ಮೊಹರೊತ್ತಿದ್ದೇನೆ, ಸಾಧ್ಯವಾದರೆ ನೀವುಗಳೇ ಉತ್ತರವನ್ನು ಕಂಡುಕೊಂಡು ಫಲಿತಾಂಶದ ಶೇಕಡವಾರು ಲೆಕ್ಕಚಾರಗಳನ್ನು ಹಾಕಿಕೊಳ್ಳಿ ಎನ್ನುವುದು ಈ ಸಧ್ಯದ ಅಂಬೋಣ,      ನೋಡಿ ನನಗ್ಯಾವ ಕೇಮಿಲ್ಲದೆ ಇಲ್ಲಿ ಉಲ್ಲೇಖಿಸಲಾಗುತ್ತಿಲ್ಲ, ಅಥವಾ ಯಾವ ಅತ್ಯುನ್ನತ ಶಾಸನವಾದ ನಾಯಕರಂತೆ ಅನುಕರಣೀಯವಾಗಿ ವರ್ತಿಸುತ್ತಿಲ್ಲ, ಜೆಸಿ ಸದಸ್ಯತ್ವ ಎಂದೊಡೆ ಎಲ್ಲರೊಳಂದಾಗುವ ಜ್ಞಾನದ ಚಿಲುಮೆ ಅಂದುಕೊಂಡಿದ್ದೆ, ಜಗದ ಭೂಪಟವನ್ನು ಪರಿಚಯಿಸುವ ಹಾಗೂ ಅವರವರ ಮನಸಿನ ಏಕತ...