ಮಾನವೀಯತೆ ಮೆರೆದ ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ

 


ಇಂದು ದಿನಾಂಕ 28.03.2026 ರಂದು ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿಗಳು ದ್ಯಾವನಕೆರೆ ಗ್ರಾಮಕ್ಕೆ ಬೆಳಗ್ಗೆ 8:30ಕ್ಕೆ ಭೇಟಿ ನೀಡಿ ಮಂಡಘಟ್ಟ ಪ್ರೌಢಶಾಲೆ ಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಪ್ರೀತಮ್ ಎಂಬ ವಿದ್ಯಾರ್ಥಿಯ ಮನೆಗೆ ಭೇಟಿಕೊಟ್ಟು  ನೆನ್ನೆ ದಿನ ರಾತ್ರಿ  ತಂದೆಯ ಅಕಾಲಿಕ ಮರಣದಿಂದ ದುಃಖದಲ್ಲಿರುವ  ಅವನಿಗೆ ಸಾಂತ್ವಾನವನ್ನು ಹೇಳಿ ಧೈರ್ಯವನ್ನು ತುಂಬಿರುತ್ತಾರೆ. 

ಇಂದು ಎಸ್ ಎಸ್ ಎಲ್ ಸಿ ಗಣಿತ ಪರೀಕ್ಷೆ ನಡೆಯುತ್ತಿದ್ದು,  ವಿದ್ಯಾರ್ಥಿಗೆ ಮತ್ತು ಅವರ ತಾಯಿಗೆ, ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು  ಧೈರ್ಯವನ್ನು ಹೇಳಿ ಮಗುವನ್ನು ಇಲಾಖೆಯ ಜೀಪಿನಲ್ಲಿ ಆಯನೂರು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದು ತಂದೆಯ ದುಃಖದ ನಡುವೆಯೂ ಮಗುವು ಪರೀಕ್ಷೆಯನ್ನು ಬರೆಯಲು ಸಹಕರಿಸಿರುತ್ತಾರೆ. 

ಮಗುವಿನ ತಾಯಿಗೆ ಈ ಸಂದರ್ಭದಲ್ಲಿ  ಸಾಂತ್ವಾನ ಮತ್ತು ಧೈರ್ಯವನ್ನು ಹೇಳಿ ಮಗುವಿನ ಮುಂದಿನ ವಿದ್ಯಾಭ್ಯಾಸಕ್ಕೆ ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ ವತಿಯಿಂದ ಅಗತ್ಯ ಸಹಕಾರ ನೀಡುವುದಾಗಿ  ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು,  ಊರಿನ ಮುಖಂಡರು ಮತ್ತು ಶಿಕ್ಷಕರು ಹಾಜರಿದ್ದರು.

 ತಂದೆ ಸಾವಿನ ನಡುವೆಯೂ ಪರೀಕ್ಷೆ ಬರೆದ, ಈ ವಿದ್ಯಾರ್ಥಿಗೆ ಶ್ರೀ ಹೇಮಂತ್ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತ್ ಶಿವಮೊಗ್ಗ, ಶ್ರೀ ಮಂಜುನಾಥ್ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ, ಇವರು ಸಾಂತ್ವಾನವನ್ನು ತಿಳಿಸಿ ಮಗುವಿನ ಮುಂದಿನ ಭವಿಷ್ಯಕ್ಕೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿರುತ್ತಾರೆ.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ