ಭಾರತೀಯ ಕಂಪನಿಗಳು ಜಾಗತಿಕ ಗುಣಮಟ್ಟದ ಕಂಪನಿಗಳಾಗಲಿ


ಶಿವಮೊಗ್ಗ: ಭಾರತದ ಉತ್ಪಾದನಾ ಕಂಪನಿಗಳು ಜಾಗತಿಕ ಗುಣಮಟ್ಟದ ಉತ್ಪಾದನಾ ಕಂಪನಿಗಳಾಗಿ ರೂಪುಗೊಳ್ಳಬೇಕು ಎಂದು ಕೈಗಾರಿಕೋದ್ಯಮಿ ಎಸ್.ರುದ್ರೇಗೌಡ ಹೇಳಿದರು.

ಭಾರತ್ ಫ್ರಿಟ್ಜ್ ವರ್ನರ್ ಕಂಪನಿಯು ಶಿವಮೊಗ್ಗದಲ್ಲಿ ಆಯೋಜಿಸಿದ್ದ ಶಿವಮೊಗ್ಗ ಗ್ರಾಹಕರ ಸಭೆ, ಗ್ರಾಹಕರು ಮತ್ತು ಸೇವಾ ಪೂರೈಕೆದಾರರ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದ ಉತ್ಪಾದನಾ ಕಂಪನಿಗಳು ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಸೌಲಭ್ಯ ಬಳಸಿಕೊಂಡು ಜಾಗತಿಕ ಕಂಪನಿಯೊಂದಿಗೆ ಸ್ಪರ್ಧಿಸಲು ಜಾಗತಿಕ ಗುಣಮಟ್ಟದ ಉತ್ಪಾದನಾ ಕಂಪನಿಯಾಗಬೇಕು. ನಮ್ಮ ಕೆಲಸದಲ್ಲಿನ ನಿಖರತೆ ಮತ್ತು ನಾವೀನ್ಯತೆಗೆ ಬದ್ಧತೆಯೊಂದಿಗೆ ನಾವು ಪ್ರಮುಖ ಜಾಗತಿಕ ಉತ್ಪಾದನಾ ಪೂರೈಕೆದಾರರಾಗಲು ಮೂಲಸೌಕರ್ಯವನ್ನು ನಿರಂತರವಾಗಿ ಹೆಚ್ಚಿಸುತ್ತಿದ್ದೇವೆ ಎಂದು ತಿಳಿಸಿದರು.

ಭಾರತ್ ಫ್ರಿಟ್ಜ್ ವರ್ನರ್ ವ್ಯವಸ್ಥಾಪಕ ನಿರ್ದೇಶಕ ರವಿ ರಾಘವನ್ ಮಾತನಾಡಿ, ಭಾರತ್ ಫ್ರಿಟ್ಜ್ ವರ್ನರ್ ಭಾರತದಲ್ಲಿ ಪ್ರಧಾನ ಕಚೇರಿ ಹೊಂದಿರುವ ಜಾಗತಿಕ ಮುಂದುವರಿದ ಉತ್ಪಾದನಾ ಕಂಪನಿಯಾಗಿದೆ. ಯಂತ್ರೋಪಕರಣಗಳು, ಉತ್ಪಾದನಾ ಪರಿಹಾರಗಳು ಮತ್ತು ತಾಂತ್ರಿಕ ನಾವೀನ್ಯತೆಗಳಲ್ಲಿ ಹೆಸರಾಗಿದೆ. ಆರು ದಶಕಗಳಿಗೂ ಹೆಚ್ಚು ಕಾಲ ಅತ್ಯುನ್ನತ ಗುಣಮಟ್ಟದ ಯಂತ್ರಗಳನ್ನು ಉತ್ಪಾದಿಸುವಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಹೇಳಿದರು.

ಏರೋಸ್ಪೇಸ್, ಆಟೋಮೋಟಿವ್, ಎಲೆಕ್ಟ್ರಾನಿಕ್ಸ್ ಮತ್ತು ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸೇವೆ ಸಲ್ಲಿಸುತ್ತಿದ್ದೇವೆ. ನಿರ್ಣಾಯಕ ಉದ್ಯಮ ಸವಾಲುಗಳನ್ನು ನಾವೀನ್ಯತೆ ಅವಕಾಶಗಳಾಗಿ ಪರಿವರ್ತಿಸುತ್ತೇವೆ. ಹೆಚ್ಚುವರಿಯಾಗಿ ನಮ್ಮ ಗ್ರಾಹಕ-ಕೇಂದ್ರಿತ ವಿಧಾನವು ಸೂಕ್ತವಾದ ಪರಿಹಾರಗಳಿಗೆ ಆದ್ಯತೆ ನೀಡುತ್ತದೆ ಎಂದು ತಿಳಿಸಿದರು.

ಭಾರತ್ ಫ್ರಿಟ್ಜ್ ವರ್ನರ್ ಸಂಸ್ಥೆಯ ಸತೀಶ್ ಮೇಸ್ತಾ, ನಿಖಿಲ್ ನಾಗರಾಜ್, ಪ್ರೇಮ್‌ಕುಮಾರ್, ಬಿ.ಮನು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ಪ್ರಮುಖರಾದ ಮಹೇಂದ್ರಪ್ಪ, ಚಂದ್ರಶೇಖರ್, ಡಿ.ಜಿ.ಬೆನಕಪ್ಪ, ಶಶಿಧರ್, ದಿವೇಕರ್, ಹರ್ಷ ಇತರರಿದ್ದರು.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ