ಪೋಸ್ಟ್‌ಗಳು

ಮೇ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪರವಾನಗಿ ಇಲ್ಲದ ರಸಗೊಬ್ಬರ ದಾಸ್ತಾನು ಜಪ್ತಿ : ಚಿತ್ರದುರ್ಗ

ಇಮೇಜ್
  ಪರವಾನಿಗೆ ಇಲ್ಲದ ರಸಗೊಬ್ಬರ ದಾಸ್ತಾನು ಮಳಿಗೆ ಮೇಲೆ ಕೃಷಿ ಇಲಾಖೆಯ ಬೆಂಗಳೂರು ಹಾಗೂ ಚಿತ್ರದುರ್ಗ ಜಾರಿದಳ ವಿಭಾಗದವರು ಮಂಗಳವಾರ ದಾಳಿ ನಡೆಸಿ ದಾಸ್ತಾನನ್ನು ಜಪ್ತಿ ಮಾಡಿದ್ದಾರೆ. ಸಾರ್ವಜನಿಕ ದೂರಿನ ಮೇರೆಗೆ ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಹೋಬಳಿಯ ದೊಡ್ಡ ಆಲದಘಟ್ಟ ಗ್ರಾಮದಲ್ಲಿ ಬೆಂಗಳೂರು ಜಾರಿದಳ ವಿಭಾಗದ ಜಂಟಿ ಕೃಷಿ ನಿರ್ದೇಶಕ ಸಿ.ವಿದ್ಯಾನಂದ, ಉಪ ಕೃಷಿ ನಿರ್ದೇಶಕ ಟಿ.ಎನ್.ಅಶೋಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಗ್ರಾಮದ ಕೆ.ಬಿ.ನಟರಾಜ್ ಇವರ ಮಳಿಗೆಯನ್ನು ತನಿಖೆ ಮಾಡಿದ ಸಂದರ್ಭದಲ್ಲಿ ಅನಧಿಕೃತವಾಗಿ ರಸಗೊಬ್ಬರ (ಎಂ.ಸಿ.ಎಫ್ ಸಂಸ್ಥೆಯ) 391 ಚೀಲಗಳು ಹಾಗೂ 20:20:0:13 ಕಾಂಪ್ಲೆಕ್ಸ್ ರಸಗೊಬ್ಬರ (ಎಂ.ಸಿ.ಎಫ್ ಸಂಸ್ಥೆಯ) 272 ಚೀಲಗಳು ಹಾಗೂ ಮೆಕ್ಕೆಜೋಳ ಬಿತ್ತನೆ ಬೀಜದ ದಾಸ್ತಾನು ಒಟ್ಟು 16.76 ಕ್ವಿಂಟಾಲ್‍ನಷ್ಟು ದಾಸ್ತಾನನ್ನು ಶೇಖರಿಸಿ ಯಾವುದೇ ಮಾರಾಟ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಮಾರಾಟ ಮಾಡುತ್ತಿರುವುದು ಕಂಡುಬಂದಿದ್ದು, ಈ ದಾಸ್ತಾನನ್ನು ರಸಗೊಬ್ಬರ ಹಾಗೂ ಬಿತ್ತನೆ ಬೀಜದ ನಿಯಮಾವಳಿಗಳು ಹಾಗೂ ಅಗತ್ಯ ವಸ್ತುಗಳ ಅಧಿನಿಯಮ-1955ರ ಉಲ್ಲಂಘನೆಯಾಗಿರುವ ಮೇರೆಗೆ ಈ ದಾಸ್ತಾನನ್ನು ಮಹಜರ್ ಮೂಲಕ ಪಂಚರ ಸಮಕ್ಷಮದಲ್ಲಿ ಜಪ್ತು ಮಾಡಲಾಯಿತು ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ (ಜಾರಿದಳ) ಜೆ.ಉಲ್ಫತ್ ಜೈಬಾ ತಿಳಿಸಿದ್ದಾರೆ. ರಸಗೊಬ್ಬರ ಮತ್ತು ಬಿತ್ತನೆ ಬೀಜದ ಮಾದರಿಗಳನ್ನು ಸಂಗ್ರಹಿಸಿ, ಗುಣಮಟ್...

ಎಲ್ಲಾ ಮೋಟಾರ್ ಬೈಕ್ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ : ಬಳ್ಳಾರಿ ಎಸ್ ಪಿ

ಇಮೇಜ್
ಜಿಲ್ಲೆಯಲ್ಲಿ ಎಲ್ಲಾ ಮೋಟಾರ್ ಬೈಕ್ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಶೋಭಾರಾಣಿ ವಿ.ಜೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಭಾರತೀಯ ಮೋಟಾರು ವಾಹನ ಕಾಯ್ದೆ 1989 ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮ ಪ್ರಕಾರ ಪ್ರತಿಯೊಬ್ಬ ಮೋಟಾರ್ ಸೈಕಲ್ ವಾಹನ ಸವಾರ  ಹಾಗೂ ಹಿಂಬದಿ ಸವಾರನು ತಮ್ಮ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ರಸ್ತೆ ಅಪಘಾತಗಳಲ್ಲಿ ತಲೆಗೆ ತೀವ್ರಗಾಯಗಳಾಗಿ ಸಾವಿಗೀಡಾಗಿರುತ್ತಿರುವುದು ಕಂಡುಬರುತ್ತಿದ್ದು, ಹಾಗಾಗಿ ಪ್ರತಿಯೊಬ್ಬ ಸಾರ್ವಜನಿಕರು ವಾಹನ ಚಲಾಯಿಸುವಾಗ ಸವಾರ ಮತ್ತು ಹಿಂಬದಿ ಸವಾರ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ವಾಹನ ಚಲಾಯಿಸುವ ತಮ್ಮ ಕುಟುಂಬದ ಎಲ್ಲಾ ಸದಸ್ಯರು, ಶಾಲಾ-ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಡ್ಡಾಯವಾಗಿ ಐ.ಎಸ್.ಐ ಮಾರ್ಕ್ ಹೊಂದಿದ ಹೆಲ್ಮೆಟ್ ‌ನ್ನು ಧರಿಸಬೇಕು. ಮುಖ್ಯವಾಗಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಅನುಸರಿಸಬೇಕು. ಪ್ರಸ್ತುತ ಜಿಲ್ಲೆಯ ಎಲ್ಲಾ ಸಾರ್ವಜನಿಕ ರಸ್ತೆಯಲ್ಲಿ ಪೊಲೀಸ್ ಇಲಾಖೆಯಿಂದ ಈ ಬಗ್ಗೆ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದ್ದು, ಒಂದು ವೇಳೆ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನಿನನ್ವಯ ಪ್ರಕರಣ ದಾಖಲಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳ...

ಒಂದು ಗೋವಿನ ವೀರಮರಣ ಶಾಸನ : ರಮೇಶ್ ಹಿರೇಜಾಂಬುರ್

ಇಮೇಜ್
ಕರ್ನಾಟಕದ ಇತಿಹಾಸದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಗೋವುಗಳ ರಕ್ಷಣೆಗಾಗಿ ತಮ್ಮ ಪ್ರಾಣ ಕಳೆದುಕೊಂಡು ವೀರ ಸ್ವರ್ಗ ಸೇರಿದ ಮಹಾ ವೀರರ ಶಾಸನ ಸಾಹಿತ್ಯ ಇಂದಿಗೂ ಹೇರಳವಾಗಿ ದೊರೆಯುತ್ತದೆ. ಗೋವುಗಳನ್ನು ಶಾಸನಗಳಲ್ಲಿ ತುರುಗಳು , ಕವಿಲೆ ಎಂಬ ಹೆಸರಿನಿಂದ ಕರೆಯಲಾಗಿದ್ದು, ಇತಿಹಾಸ ಅಧ್ಯಯನದಲ್ಲಿ ಗೋರಕ್ಷಣೆ ಕುರಿತಾದ ಶಾಸನಗಳಿಗೆ ತುರುಗೋಳ್ ಶಾಸನ ಎಂದು ಕರೆಯಲಾಗಿದೆ.  ಗೋಗ್ರಹಣ ಎಂಬ ಪದ ಹಾಗೂ ವಿಚಾರವನ್ನು ಮಹಾಭಾರತದ ವಿರಾಟಪರ್ವದಲ್ಲಿ ಪ್ರಸ್ತಾಪವಾಗಿದೆ. ಉತ್ತರಕುಮಾರ ಮತ್ತು ಬೃಹನ್ನಳೆ (ಅರ್ಜುನ)ಯರ ಸನ್ನಿವೇಶ ನೆನಪಾಗುತ್ತದೆ. ಗೋಗ್ರಹಣ ಅಥವಾ ತುರುಕಾಳಗವು ಪ್ರಮುಖವಾಗಿ ಎರಡು ಕಾರಣಗಳಿಗಾಗಿ ನಡೆದಿರುತ್ತದೆ. ರಾಜಕೀಯ ಕಾರಣ ಹಾಗೂ ಕೇವಲ ಕಳ್ಳತನಕ್ಕಾಗಿ ನಡೆದ ಕದನವಾಗಿದೆ.  ಗೋವುಗಳು ಒಂದು ಪ್ರದೇಶದ ಜೀವಧನವಾಗಿದ್ದು ಸಂಪತ್ತಿನ ಪ್ರತಿರೂಪವಾಗಿದ್ದವು. ಅವುಗಳನ್ನು ಅಪಹರಿಸಿ ತರುವುದು ಅಪಹರಿಸುವ ಅರಸರು ಅಥವಾ ನಾಯಕರಿಗೆ ಪ್ರತಿಷ್ಠೆಯ ವಿಷಯವಾಗಿತ್ತು. ಹಾಗೆಯೇ ಅಪಹರಿಸಲು ಬಂದವರನ್ನು ಸೆದೆ ಬಡಿದು ಗೋವುಗಳನ್ನು ಬಿಡಿಸಿ ರಕ್ಷಿಸುವುದೂ ವೀರತನವಾಗಿತ್ತು, ಇದಲ್ಲದೆ ಕೆಲವರು ಕಳ್ಳತನ ಮಾಡಿ ವಯಕ್ತಿಕವಾಗಿ ಸಿರಿವಂತರಾಗಲು ಗೋವುಗಳನ್ನು ಅಪಹರಿಸಲು ಮುಂದಾಗುತ್ತಿದ್ದರು. ಇಂತಹ ಸಂದರ್ಭಗಳಲ್ಲಿಯೂ ಗೋವುಗಳನ್ನು ರಕ್ಷಿಸಲು ವೀರರು ತಮ್ಮ ಪ್ರಾಣ ಕೊಡಲು ಹಿಂಜರಿಯುತ್ತಿರಲಿಲ್ಲ. ಇಂತಹ ಸಾವಿರ ಸಾವಿರ ತುರುಕಾಳಗಗಳು ಕರ್ನಾಟಕದ ಬಹುಭಾಗದಲ್...

ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾಗಿ ಶ್ರೀ ಅನಿಲ್ ಕುಂಬ್ಳೆ ನೇಮಕ

ಇಮೇಜ್
  ಅರಣ್ಯ ಮತ್ತು ಪರಿಸರ ಸಂರಕ್ಷಣೆಯ ಹಿತಾಸಕ್ತಿಯಿಂದ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ, ಖ್ಯಾತ ಕ್ರಿಕೆಟಿಗ ಮತ್ತು ಮಾಜಿ ಭಾರತ ತಂಡದ ನಾಯಕರಾದ ಶ್ರೀ ಅನಿಲ್ ಕುಂಬ್ಳೆ ಅವರನ್ನು ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾಗಿ ನಾಮ ನಿರ್ದೇಶಿಸಲು ನಿರ್ಧರಿಸಿದ್ದರೆ. ಶ್ರೀ ಕುಂಬ್ಳೆ ಅವರು ಇತ್ತೀಚೆಗೆ ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ವನ್ಯಜೀವಿಗಳ ಮೇಲಿನ ಅಪಾರ ಕಾಳಜಿ, ಅರಣ್ಯದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅವರು ಹೊಂದಿರುವ ಖ್ಯಾತಿಯಿಂದಾಗಿ ಅವರು ಈ ಜವಾಬ್ದಾರಿಗೆ ಅತ್ಯಂತ ಸೂಕ್ತ ವ್ಯಕ್ತಿಯಾಗಿದ್ದಾರೆ. ಅವರು ಯಾವುದೇ ಸಂಭಾವನೆ ಪಡೆಯದೇ, ಸಂಪೂರ್ಣವಾಗಿ ಸಮಾಜಮುಖಿ ಉದ್ದೇಶದಿಂದ ಈ ಸೇವೆಗಾಗಿ ಸಮ್ಮತಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಕರ್ನಾಟಕ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಈ ನಿರ್ಧಾರದಿಂದ ನಮ್ಮ ರಾಜ್ಯದ ಅರಣ್ಯ ಸಂರಕ್ಷಣೆ, ವನ್ಯಜೀವಿ ರಕ್ಷಣೆ ಮತ್ತು ಪರಿಸರ ಜಾಗೃತಿಗೆ ಹೊಸ ದಿಕ್ಕು ಮತ್ತು ಚೈತನ್ಯ ದೊರೆಯಲಿದೆ ಎಂದಿದ್ದಾರೆ.

ಅಸ್ಸಾಂ ನ ಕೈಗಾರಿಕ ಸಚಿವ ಬಿಮಲ್ ಬೋರಾ ಮಂಜುನಾಥ್ ಮನೆಗೆ ಭೇಟಿ

ಇಮೇಜ್
  ಪೆಹಲ್ಗಾಮ್ ನಲ್ಲಿ ಉಗ್ರರ ಗುಂಡಿಗೆ ಹತ್ಯೆಯಾದ ಶಿವಮೊಗ್ಗದ ವಿಜಯನಗರದಲ್ಲಿರುವ  ಮಂಜುನಾಥ್ ಅವರ ಮನೆಗೆ ಅಸ್ಸಾಂ ಬಿಜೆಪಿ ಸರ್ಕಾರದ ಕೈಗಾರಿಕ ಸಚಿವ ಬಿಮಲ್ ಬೋರಾ ಅವರೊಂದಿಗೆ ಅರುಣ್ ಡಿ ಎಸ್ ಭೇಟಿ ನೀಡಿ ಸಾಂತ್ವಾನ ಹೇಳಿದರು. ಈ ವೇಳೆ ಪತ್ನಿ ಆರ್.ಪಲ್ಲವಿಗೆ  ಅಸ್ಸಾಂ ಸರ್ಕಾರ 5 ಲಕ್ಷ ರೂ. ಚೆಕ್ ಮತ್ತು ಸರ್ಕಾರದ ಪತ್ರವನ್ನ‌ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀ.ಜಗದೀಶ್ ಎನ್.ಕೆ ರವರು ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಹರಿಕೃಷ್ಣ ಶ್ರೀ ಮಾಲತೇಶ್ ಅವರು ಹಾಗೂ ಬಿಜೆಪಿ ಜಿಲ್ಲಾ ಖಜಾಂಚಿ ಶ್ರೀ ಎನ್. ಡಿ.ಸತೀಶ್ ಅವರು  ಉಪಸ್ಥಿತರಿದ್ದರು.

ಜೆಸಿಐ ಭಾರತದ ವಲಯ ಕಾರ್ಯಕ್ರಮದಲ್ಲಿ ಅಣ್ಣಾಮಲೈ

ಇಮೇಜ್
ಪೆರುಂಡುರೈನಲ್ಲಿ ನಡೆದ ಜೆಸಿಐ ಇಂಡಿಯಾ ವಲಯ 17 ರ ಮಧ್ಯವಾರ್ಷಿಕ ಸಮ್ಮೇಳನ 2025 ರಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ಜೂನಿಯರ್ ಚೇಂಬರ್ ಇಂಟರ್ನ್ಯಾಷನಲ್ (ಜೆಸಿಐ) 18 ರಿಂದ 40 ವರ್ಷ ವಯಸ್ಸಿನ ಯುವ, ಸಕ್ರಿಯ ನಾಗರಿಕರ ಜಾಗತಿಕ ಸಂಘಟನೆಯಾಗಿದ್ದು, ಅವರ ಸಮುದಾಯಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಸೃಷ್ಟಿಸಲು ಬದ್ಧವಾಗಿದೆ.   ಭಾರತದ ಇಂದಿನ ಯುವಕರು ವಿಮರ್ಶಾತ್ಮಕ ಚಿಂತನೆ, ಸ್ಥಿತಿಸ್ಥಾಪಕತ್ವ ಮತ್ತು ಬೆಳೆಯುತ್ತಿರುವ ಅಪಾಯದ ಹಸಿವನ್ನು ಹೊಂದಿದ್ದು, ಪರಿವರ್ತನಾತ್ಮಕ ನಾಯಕತ್ವದ ಲಕ್ಷಣಗಳಾಗಿವೆ. ಅಂತಹ ಗುಣಗಳೊಂದಿಗೆ, ನಮ್ಮ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕಲ್ಪನೆಯ ಭವಿಷ್ಯದ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಜೆಸಿಐ ನ ಸಕ್ರಿಯ ನಾಗರಿಕರು  ಪ್ರಮುಖ ಪಾತ್ರ ವಹಿಸುತ್ತಾರೆ ಎಂಬ ವಿಶ್ವಾಸ ನಮಗಿದೆ. ಪೆರುಂಡುರೈನಲ್ಲಿ ನಡೆದ ಜೆಸಿಐ (ಜೂನಿಯರ್ ಚೇಂಬರ್ ಇಂಟರ್ನ್ಯಾಷನಲ್, ಇಂಡಿಯಾ) ಜೆಸಿಐ ಭಾರತ  ವಲಯ 17, 2025 ರ ಅರೆ-ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ. ಜೆಸಿಐ 18 ರಿಂದ 40 ವರ್ಷದೊಳಗಿನ ಯುವ, ಕ್ರಿಯಾಶೀಲ ವ್ಯಕ್ತಿಗಳ ಜಾಗತಿಕ ಸಂಘಟನೆಯಾಗಿದ್ದು, ಅವರು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಸೃಷ್ಟಿಸಲು ಕೆಲಸ ಮಾಡುತ್ತಿದ್ದಾರೆ.  ಇಂದಿನ ಭಾರತೀಯ ಯುವಕರು, ನಾವೀನ್ಯತೆಯನ್ನು ಹೊಂದಿರುವ, ತಮ್ಮ ಕೌಶಲ್ಯಗಳನ...

ಲಾಹೋರ್‌ನಲ್ಲಿ ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯನ್ನು ಭಾರತ ತಟಸ್ಥಗೊಳಿಸಿದೆ

ಇಮೇಜ್
  ಮೇ 7–8, 2025 ರ ರಾತ್ರಿ ಉತ್ತರ ಮತ್ತು ಪಶ್ಚಿಮ ಭಾರತದಾದ್ಯಂತ ಹಲವಾರು ಭಾರತೀಯ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು ಸೇರಿದಂತೆ ಪಾಕಿಸ್ತಾನದ ತೀವ್ರತರವಾದ ಕ್ರಮಗಳ ಸರಣಿಗೆ ಪ್ರತಿಕ್ರಿಯೆಯಾಗಿ, ಭಾರತೀಯ ಸಶಸ್ತ್ರ ಪಡೆಗಳು ಸಂಘಟಿತ ಮತ್ತು ಪ್ರಮಾಣಾನುಗುಣ ಪ್ರತಿ-ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಭಾರತವು ಹಲವಾರು ಸ್ಥಳಗಳಲ್ಲಿ ಪಾಕಿಸ್ತಾನದ ವಾಯು ರಕ್ಷಣಾ ರಾಡಾರ್‌ಗಳು ಮತ್ತು ವ್ಯವಸ್ಥೆಗಳನ್ನು ನಿರ್ದಿಷ್ಟವಾಗಿ ಗುರಿಯಾಗಿಸಿ ತಟಸ್ಥಗೊಳಿಸಿದೆ ಎಂದು ಭಾರತೀಯ ರಕ್ಷಣಾ ಸಚಿವಾಲಯ ದೃಢಪಡಿಸಿತು, ಈ ದಾಳಿಗಳಲ್ಲಿ ಲಾಹೋರ್‌ನಲ್ಲಿನ ವಾಯು ರಕ್ಷಣಾ ವ್ಯವಸ್ಥೆಯು ಗಮನಾರ್ಹ ಬಲಿಪಶುವಾಗಿದೆ. ನಿನ್ನೆ ತಡರಾತ್ರಿ, ಪಾಕಿಸ್ತಾನವು ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲುಧಿಯಾನ, ಆದಂಪುರ, ಭಟಿಂಡಾ, ಚಂಡೀಗಢ, ನಲ್, ಫಲೋಡಿ, ಉತ್ತರಲೈ ಮತ್ತು ಭುಜ್‌ಗಳಲ್ಲಿ ಡ್ರೋನ್‌ಗಳು ಮತ್ತು ಕ್ಷಿಪಣಿಗಳೊಂದಿಗೆ ಮಿಲಿಟರಿ ಗುರಿಗಳನ್ನು ಗುರಿಯಾಗಿಸಲು ಪ್ರಯತ್ನಿಸಿತು, ಆದರೆ ಭಾರತದ ಇಂಟಿಗ್ರೇಟೆಡ್ ಕೌಂಟರ್ ಯುಎಎಸ್ ಗ್ರಿಡ್ ಮತ್ತು ಎಸ್ -400 ಪ್ಲಾಟ್‌ಫಾರ್ಮ್ ಸೇರಿದಂತೆ ಸುಧಾರಿತ ವಾಯು ರಕ್ಷಣಾ ವ್ಯವಸ್ಥೆಗಳಿಂದ ಸಂಪೂರ್ಣವಾಗಿ ವಿಫಲವಾಯಿತು.  ಭಾರತದ ವಿವಿಧ ಸ್ಥಳಗಳಲ್ಲಿ ತಡೆಹಿಡಿಯಲಾದ ಪಾಕಿಸ್ತಾನಿ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಅವಶೇಷಗಳನ್ನು ವಶಪಡಿಸಿಕೊ...

ಗೋಪಾಳದ ಡಿವಿಜಿ ವೃತ್ತದಲ್ಲಿರುವ ಗ್ರಾಮಠಾಣಾ ಭೂಮಿ ಕಬಳಿಕೆ : ವಶಪಡಸಿಕೊಂಡು ಸಮುದಾಯ ಭವನ ನಿರ್ಮಾಣ ಮಾಡಲು ಲೀಸ್ ಬೇಸ್ ನಲ್ಲಿ ಮಂಜೂರಾತಿಗೆ ಕುಳುವ ಯುವ ಸೇನೆ ಆಗ್ರಹ

ಇಮೇಜ್
  ಶಿವಮೊಗ್ಗ : ಗೋಪಾಳದ ಡಿವಿಜಿ ವೃತ್ತದಲ್ಲಿರುವ ಸರ್ವೇ ನಂಬರ್ ೧ ರಲ್ಲಿ ಗ್ರಾಮ ಠಾಣಾ ಜಮೀನು ೩೮.೦೦ ಗುಂಟೆ ಹಾಗೂ ಇದಕ್ಕೆ ಹೊಂದಿಕೊಂಡಂತೆ ಇರುವ ಸುಮಾರು ೪.೦೦ ಎಕರೆ ಸೆಟ್ಲೆಮೆಂಟ್ ಭೂ ಪ್ರದೇಶವನ್ನು ಕಬಳಿಸಲು ಮುಂದಾಗಿರುವ ಖಾಸಗಿ ವ್ಯಕ್ತಿಗಳ ಮೇಲೆ ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಹಾಗೂ ಸದರಿ ಭೂ ಪ್ರದೇಶವನ್ನು ಜಿಲ್ಲಾಡಳಿತವು ವಶಪಡಿಸಿಕೊಂಡು ಕುಳುವ ಸಮುದಾಯಕ್ಕೆ ಸಮುದಾಯ ಭವನ ನಿರ್ಮಾಣ ಮಾಡಲು ೯೦ ವರ್ಷದ ಅವಧಿಗೆ ಲೀಸ್ ಬೇಸ್‌ನಲ್ಲಿ ಮಂಜೂರು ಮಾಡಿಕೊಡಬೇಕೆಂದು ಕುಳುವ ಯುವ ಸೇನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಲಾಗಿದೆ   ಈ ಸಂದರ್ಭದಲ್ಲಿ ಮನವಿಯಲ್ಲಿ ವಿವರಿಸಿದಂತೆ ಕುಳುವ ಯುವ ಸೇನೆಯು ಈ ಭೂ ಪ್ರದೇಶವು  ಶಿವಮೊಗ್ಗ ಪ್ರಸ್ತುತ ನಗರ ಹಾಗೂ ಅಂದಿನ ಗೋಪಾಳ ಗ್ರಾಮದ ಗಾಡಿಕೊಪ್ಪ ಪಂಚಾಯ್ತಿ ವ್ಯಾಪ್ತಿಯಲ್ಲಿದ್ದ  ಗ್ರಾಮದಲ್ಲಿನ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಾಗಿದ್ದ ಈ ಗ್ರಾಮ ಠಾಣಾ ಜಮೀನು ಇದೀಗ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿದ್ದ ಸದರಿ ಜಮೀನಿಗೆ ಪೋರ್ಜರಿ ದಾಖಲಾತಿಗಳನ್ನು ಸೃಷ್ಠಿಸಿ ಭೂ ಕಬಳಿಕೆಯಾಗಿದ್ದು ಸದರಿ ಜಮೀನು ಭೂ ಪ್ರದೇಶವನ್ನು ಶಿವಮೊಗ್ಗ ತಹಶಿಲ್ದಾರ್ ಹಾಗೂ ಡಿಡಿಎಲ್‌ಆರ್, ಎಡಿಎಲ್‌ಆರ್‌ರವರುಗಳು ಖುದ್ದು ಸ್ಥಳ ಗುರುತಿಸಿ ವಶಕ್ಕೆ ಪಡೆಯಲು ಜಿಲ್ಲಾಡಳಿತ ಈ ಕೂಡಲೇ ಆದೇಶಿಸಬೇಕು ಹಾಗೂ ಭೂ ಕಬಳಿಕೆಯ ಜಾಲದಲ್ಲಿದ್ದವರ ಮೇಲೆ ಗುಂಡಾಕಾಯ್ದೆಯಡಿ ಕೇಸು ದಾಖಲಿಸಿ, ನಕಲಿ ದಾಖಲೆಗಳ...