ಪೋಸ್ಟ್‌ಗಳು

ಸೆಪ್ಟೆಂಬರ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪರಿಸರ ಸಂರಕ್ಷಣೆ ಮಾಡಲು ಪ್ರಬಲ ಇಚ್ಛಾ ಶಕ್ತಿ ಬೇಕು : ಡಾ. ಶುಭಾ ಮರವಂತೆ

ಇಮೇಜ್
  ಪರಿಸರ ಸಂರಕ್ಷಣೆ ಮಾಡಲು ಪ್ರಬಲ ಇಚ್ಛಾ ಶಕ್ತಿ ಬೇಕು : ಡಾ. ಶುಭಾ ಮರವಂತೆ        ರೋಟರಿ ಉತ್ತರ 3182 ಹಾಗೂ ಅಂತಾರಾಷ್ಟ್ರೀಯ ರೋಟರಿ ಮೊಡೆಷ್ಟೋ ಯುನೈಟೆಡ್ ಸ್ಟೇಟ್ಸ್ ನ  ಆಶ್ರಯದಲ್ಲಿ ರೋಟರಿ ಕ್ಲಬ್ ಕೈಗೊಂಡ ತುಂಗಾ ಮೇಲ್ದಡೆ ಜೀವ ವೈವಿಧ್ಯ ಅರಣ್ಯ ಯೋಜನೆಯಲ್ಲಿ ಅಧಿಕಾರಿಗಳನ್ನು ತರಬೇತಿ ನೀಡುವ ಒಂದು ದಿನದ ಕಾರ್ಯಾಗಾರವನ್ನು ರೋಟರಿ ಬ್ಲಡ್ ಬ್ಯಾಂಕ್ ನಲ್ಲಿ ಏರ್ಪಡಿಸಲಾಗಿದ್ದು, ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಯಾದ ಡಾ. ಶುಭಾ ಮರವಂತೆಯವರು,  " ಪಶ್ಚಿಮಘಟ್ಟಗಳ ಸಮೃದ್ಧಿ ಜೀವ ವೈವಿಧ್ಯತೆಯ ಕಕ್ಷೆ ನಮ್ಮ ಶಿವಮೊಗ್ಗ ಜಿಲ್ಲೆಯು ಪರಿಸರ ಸಂರಕ್ಷಣೆಯ ವಿಷಯದಲ್ಲಿ ತುಂಬಾ ಅಪಾಯದಲ್ಲಿದೆ. ನಿರಂತರ ಕಾಡು ನಾಶದಿಂದಾಗಿ  ಪರಿಸದ ಜೀವ ಸಂಕುಲಗಳು ಅಳಿವಿನ ಅಂಚಿಗೆ ತಲುಪಿವೆ.  ಮನುಷ್ಯನ ಸ್ವಾರ್ಥ, ದುರಾಸೆಗಳಿಂದಾಗಿ ಅತಿಯಾದ ಹವಾಮಾನ ವೈಪರಿತ್ಯಗಳನ್ನು ಎದುರಿಸುತ್ತಿದ್ದೇವೆ. ಇಂದು ಪರಿಸರ ಉಳಿಸಿಕೊಳ್ಳುವ ಬಹುದೊಡ್ಡ ಹೊಣೆಗಾರಿಕೆಗೆ ನಾವು ಮುಂದಾಗಬೇಕಿದೆ. ಅದಕ್ಕಾಗಿ ನಮಗೆ ಪ್ರಬಲ ಇಚ್ಛಾ ಶಕ್ತಿ ಬೇಕಾಗುತ್ತದೆ " ಎಂದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಉತ್ತರದ ಅಧ್ಯಕ್ಷರಾದ ಶ್ರೀ ಆರ್.ಬಸವರಾಜಪ್ಪನವರು " ತುಂಗಾ ಮೇಲ್ದಡೆ ಯೋಜನೆಯ ಪರಿಸರವನ್ನು ಜೀವ ವೈವಿಧ್ಯತೆಯ ತಾಣವಾಗಿ ರೂಪಿಸಲು ನಾ...

ಜೆಸಿಐ ಸೆನೆಟರ್ ವಿನೀತ್ ಆರ್ ಅವರ ಸ್ಪೂರ್ತಿದಾಯಕ ಜೆಸಿಐ ಪ್ರಯಾಣ :

ಇಮೇಜ್
 ಜೆಸಿಐ ಸೆನೆಟರ್ ವಿನೀತ್ ಆರ್ ಅವರ ಸ್ಪೂರ್ತಿದಾಯಕ ಜೆಸಿಐ ಪ್ರಯಾಣ :        ಜೆಸಿಐ ಸೆನೆಟರ್ ವಿನೀತ್ ಆರ್ ಪ್ರಯಾಣ, ಬೆಳವಣಿಗೆ ಮತ್ತು ನಾಯಕತ್ವದ ಒಂದೊಂದೇ ಮೆಟ್ಟಲು ಅತ್ತುತ್ತ ಸಾಗಿದ್ದಾರೆ. 2012 ರಲ್ಲಿ  ಜೂನಿಯರ್ ಜೇಸಿಯಾಗಿ ಮೈಸೂರಿನಲ್ಲಿ ನಡೆದ ಜಾಸ್ಮಿನ್ ತರಬೇತಿ ಕಾರ್ಯಗಾರದಿಂದ ಮೊದಲ ಪ್ರಯಾಣ ಆರಂಭಿಸಿದ್ದಾರೆ, ಅವರು ಸಂಸ್ಥೆಯ ಶ್ರೇಣಿಗಳ ಮೂಲಕ ಸ್ಥಿರವಾಗಿ ಏರಿ ಜೆಸಿಐ ಭಾರತದಲ್ಲಿ ಗೌರವಾನ್ವಿತ ನಾಯಕರಾಗುತ್ತಿದ್ದಾರೆ.     ಅವರ ಅಧಿಕೃತ ಜೆಸಿಐ ಪ್ರಯಾಣವು 2017 ರಲ್ಲಿ ಜೆಸಿಐ ಶಿಕಾರಿಪುರ ಚಂದನ್‌ಗೆ ಸೇರಿದಾಗ ಪ್ರಾರಂಭವಾಯಿತು. ಸೇವೆಯ ಉತ್ಸಾಹ ಮತ್ತು ನಾಯಕತ್ವದ ನೈಸರ್ಗಿಕ ಪ್ರತಿಭೆಯೊಂದಿಗೆ, ಅವರು ಬೇಗನೆ ತಮ್ಮ ಗೆಳೆಯರ ವಿಶ್ವಾಸವನ್ನು ಗಳಿಸಿದರು. 2020 ರಲ್ಲಿ, ಅವರು ಜೆಸಿಐ ಶಿಕಾರಿಪುರ ಚಂದನ್‌ನ ಕಾರ್ಯದರ್ಶಿಯಾಗಿ ತಮ್ಮ ಮೊದಲ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡರು, ದೊಡ್ಡ ಸಾಧನೆಗಳಿಗೆ ವೇದಿಕೆಯನ್ನು ಸಿದ್ಧಪಡಿಸಿದರು.     2024 ರ ಹೊತ್ತಿಗೆ, ಅವರು ಜೆಸಿಐ ಶಿಕಾರಿಪುರ ಚಂದನ್‌ನ ಅಧ್ಯಕ್ಷರಾಗಿ ಆಯ್ಕೆಯಾದಾಗ ಅವರ ನಾಯಕತ್ವದ ಗುಣಗಳನ್ನು ಮತ್ತೊಮ್ಮೆ ಗುರುತಿಸಲಾಯಿತು. ಅವರ ಅಧಿಕಾರಾವಧಿಯು ಪರಿಣಾಮಕಾರಿ ಉಪಕ್ರಮಗಳು, ತರಬೇತಿ ಕಾರ್ಯಕ್ರಮಗಳು ಮತ್ತು ಬಲವಾದ ಸಮುದಾಯಗಳನ್ನು ನಿರ್ಮಿಸುವ ಬದ್ಧತೆಯಿಂದ ಗುರುತಿಸಲ್ಪಟ್ಟಿತು.  ಈ ಉನ್ನತ ಪಥವನ್ನು ಮುಂ...

ಮಲೆಮಹದೇಶ್ವರ ವನ್ಯಧಾಮದಲ್ಲಿ ಗಂಧದ ಮರ ಸಾಗಾಟ, ತಮಿಳುನಾಡು ವ್ಯಕ್ತಿಯ ಬಂಧನ

ಇಮೇಜ್
ಹನೂರು: ಮಲೆಮಹದೇಶ್ವರ ವನ್ಯಧಾಮದಲ್ಲಿ ಶ್ರೀಗಂಧದ ಮರ ಕಡಿದು ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ದಿನದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತಮಿಳುನಾಡಿನ ಇಬ್ಬರನ್ನು ಅರಣ್ಯಾಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಪ್ರಕರಣ 1: ಶನಿವಾರ ಬೆಳಿಗ್ಗೆ ಮಲೆಮಹದೇಶ್ವರ ವನ್ಯಧಾಮದ ಕೊಕ್ಬರೆ ಗಸ್ತಿನ ದೊಡ್ಡಬರೆಹಳ್ಳದ ಸಮೀಪದ ಮೀಸಲು ಅರಣ್ಯ ಪ್ರದೇಶದಲ್ಲಿ ಒಬ್ಬ ಬಾಲಕ ಹಾಗೂ ಇಬ್ಬರು ವ್ಯಕ್ತಿಗಳು ಸೇರಿ ಶ್ರೀಗಂಧದ ಮರ ಕಡಿದು ಅದನ್ನು ಎರಡು ತುಂಡುಗಳನ್ನಾಗಿ ಮಾಡುತ್ತಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಬಾಲಕ ಸಿಕ್ಕಿಬಿದ್ದಿದ್ದಾನೆ. ಆತನಿಂದ 62 ಕೆ.ಜಿ ಶ್ರೀಗಂಧದ 02 ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಾಲಕನ ಜೊತೆಗಿದ್ದ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಚಿನ್ನ ಸೆಲಂ ತಾಲ್ಲೂಕಿನ ಪೆರುಮಾಳ್ ಮತ್ತು ಮುರುಗನ್ ಪರಾರಿಯಾಗಿದ್ದು, ಬಾಲಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣ 2: ಮಹದೇಶ್ವರ ವನ್ಯಧಾಮದ ಮಹದೇಶ್ವರ ಬೆಟ್ಟ ವನ್ಯಜೀವಿ ವಲಯದ ಕೊಕ್ಬರೆ ಗಸ್ತಿನ ಆನೆತಲೆದಿಂಬದ ಬಳಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ತಮಿಳುನಾಡಿನ ಸೇಲಂ ಜಿಲ್ಲೆಯ ಆತೂರು ತಾಲ್ಲೂಕಿನ ನೈಯ್ಯಮಲೈ ಗ್ರಾಮದ ಸೆಡೆಯಾನ್ ಎಂಬ ವ್ಯಕ್ತಿಯನ್ನು ಶನಿವಾರ ಸಂಜೆ ಬಂಧಿಸಿದ್ದಾರೆ. ಪಾದಯಾತ್ರೆಯಲ್ಲಿ ಅನುಮಾನಸ್ಪದವಾಗಿ ಬರುತ್ತಿದ್ದ ವ್ಯಕ್ತಿಯನ್ನು ತಡೆದು ತಪಾಸಣೆ ಮಾಡಿದಾಗ ಆತನ ಬ್ಯಾಗಿನಲ್ಲಿ 11.7...

ಇಂದು ಮುಂಜಾನೆ ಹಿರಿಯ ಪತ್ರಿಕಾ ವಿತರಕರರಾದ ಜಿ ದೇವರಾಜ ಶೆಟ್ಟಿ ನಿಧನ

ಇಮೇಜ್
 ಇಂದು ಮುಂಜಾನೆ ಹಿರಿಯ ಪತ್ರಿಕಾ ವಿತರಕರರಾದ ಜಿ ದೇವರಾಜ ಶೆಟ್ಟಿ ನಿಧನರಾಗಿದ್ದಾರೆ ಸುಮಾರು 50 ವರ್ಷದಿಂದ ಪೇಪರ್ ಸ್ಟಾಲ್ ಮತ್ತು ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸುವರು ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷರಾದ ಎನ್, ಮಾಲತೇಶ್, ಉಪಾಧ್ಯಕ್ಷರಾದ ರಾಮು ಜಿ, ನಾಗಭೂಷಣ್, , ಪ್ರಧಾನ ಕಾರ್ಯದರ್ಶಿಯಾದ ಮುಕ್ತಾ ರ್ ಹಮದ್( ನಜೀರ್, ಹುಲಿಗಿ ಕೃಷ್ಣ, ಪರಶುರಾಮ್, ಮಲ್ಲಿಕಾರ್ಜುನ್, ಗಜೇಂದ್ರ, ವಿನಯ್ ವಾಲಿ, ರಾಜ ವರ್ಮ ಜೈನ್,ಹರ್ಷ, ಪಾರ್ಥಿಬನ್ , ಯುವರಾಜ್, ಉಮೇಶ್, ಸತೀಶ್, ಯೋಗೇಶ್, ಮಂಜುನಾಥ್, ಪ್ರವೀಣ, ಪ್ರಾಣೇಶ್, ಮೌಲಾನಾ, ಪ್ರಶಾಂತ್  ವಿಳಾಸ : ಶ್ರೀ ಗುರುದತ್ತ ನಿಲಯ, ಸಾನ್ವಿ ಲೇಔಟ್ , ಬೊಮ್ಮನಕಟ್ಟೆ ಸೆಕೆಂಡ್ ಮೇನ್ ರೋಡ್ , ಋತು ಮೆಡಿಕಲ್ ಕೆಳಗೆ ಶಿವಮೊಗ್ಗ

ದಾರ್ಶನಿಕ ನಾಯಕ - ಜೆಸಿಐ ಸೆನೆಟರ್ ವಿನೀತ್ ಆರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು

ಇಮೇಜ್
 ಶಿಕಾರಿಪುರ, ಸೆಪ್ಟೆಂಬರ್ 22: ಶಿಕಾರಿಪುರದ ಮನೆಮಗ, ಅಸಾಧಾರಣ ಪ್ರತಿಭೆ ಮತ್ತು ಸ್ಪೂರ್ತಿದಾಯಕ ಸಾಧನೆಗಳ ವ್ಯಕ್ತಿ, ಜೆಸಿಐ ಸೆನೆಟರ್ ವಿನೀತ್ ಆರ್ ಅವರ ಹುಟ್ಟುಹಬ್ಬದ ಸಂಭ್ರಮ. ವಿನೀತ್ ಸ್ನೇಹಿತರು ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜೆಸಿಐ ಸೆನೆಟರ್ ವಿನುತ್ ಆರ್ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಪ್ರತಿ ನಿತ್ಯ ಸಾವಿರಾರು ಮಕ್ಕಳಿಗೆ ವಿದ್ಯಾದಾನ, ಅನ್ನದಾನ ಅವರ ಸಂಸ್ಥೆಯಲ್ಲಿ ನಡೆಯುತ್ತಲೇ ಇರುತ್ತದೆ. ಹಾಗಾಗಿ ವಿಶೇಷವಾಗಿ ತರಬೇತಿ ಕಾರ್ಯಕ್ರಮ ಆಯೋಜನೆ ಮೂಲಕ ಜೆಸಿಐ ಸೆನೆಟರ್ ವಿನೀತ್ ಆರ್ ಅವರ ಹುಟ್ಟು ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸುತ್ತಿರುವ ಬಗ್ಗೆ ಅವರ ಸ್ನೇಹಿತರಾದ ಜೆಸಿಐ ಶಿಕಾರಿಪುರ ಚಂದನ ಸಂಸ್ಥೆಯ ಅಧ್ಯಕ್ಷ ಜೆಸಿ ಪ್ರಶಾಂತ ಪ್ರತಿಬಿಂಬ ತಿಳಿಸಿದ್ದಾರೆ. ಸ್ಫೂರ್ತಿ ನೀಡುವ ಶಿಕ್ಷಕ : ಆಂಗ್ಲ ಭಾಷೆಯಲ್ಲಿ ಗೌರವಾನ್ವಿತ ಉಪನ್ಯಾಸಕ ಮತ್ತು ಪ್ರತಿಷ್ಠಿತ ಅಕ್ಷರ ವಸತಿ ಶಾಲೆ ಮತ್ತು ಪಿಯು ವಿಜ್ಞಾನ ಕಾಲೇಜಿನ ಆಡಳಿತ ಮುಖ್ಯಸ್ಥರಾಗಿರುವ ವಿನೀತ್ ಆರ್ ಅವರು ಯುವ ಮನಸ್ಸುಗಳನ್ನು ಪೋಷಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಗುಣಮಟ್ಟದ ಶಿಕ್ಷಣದ ಬಗೆಗಿನ ಅವರ ಬದ್ಧತೆಯು ಅವರನ್ನು ಯಶಸ್ಸಿಗೆ ಶ್ರಮಿಸುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕ ಬೆಳಕಾಗಿ ಮಾಡಿದೆ.   ತರಬೇತುದಾರ ಮತ್ತು ಪ್ರೇರಕ ಭಾಷಣಗಾರ :  ವೃತ್ತಿಪರ ವ್ಯಕ್ತಿತ್ವ ಅಭಿವೃದ್ಧಿ ತರಬೇತುದಾರರಾಗಿ, ಅವರು ಅಸಂಖ್...

ಬರೆಯುತ್ತಾರೆ ಗಾರಾ.ಶ್ರೀನಿವಾಸ್ " ನೀವೊಬ್ಬರು ಕಾಮನ್ ಜೇಸಿಯಷ್ಟೆ "

ಇಮೇಜ್
ಬರೆಯುತ್ತಾರೆ ಗಾರಾ.ಶ್ರೀನಿವಾಸ್ " ನೀವೊಬ್ಬರು ಕಾಮನ್ ಜೇಸಿಯಷ್ಟೆ " ಇಲ್ಯಾರು ಪ್ರಬುದ್ದರಲ್ಲ, ಅಪ್ರಬುದ್ದರೂ ಅಲ್ಲ, ಹೆನ್ರಿಗೀಸನ್ ಬಿಯರ್ ಅಂತೂ ನೀವ್ಯಾರಲ್ಲ,  ಸಂವಿಧಾನ ನೀವು ಖಂಡಿತವಾಗಿ ರಚಿಸಿದ್ದಲ್ಲ, ಮಿಸೌರಿನಲ್ಲಿ ಜನ್ಮಿಸಿದ ಜ್ಞಾನದ ಪಥವಿದು, ನಿಮ್ಮನೆ ಹಿತ್ತಲ ಇಕ್ಕೆಲದೊಳು ಹುಟ್ಟಿದ ಕಳೆಯಲ್ಲ, ಜಾತಿ, ಮತ, ಪಂಥ, ತೊಳೆದ ನಾಯಕತ್ವದ ದೀವಿಗೆ, ಭಾಷೆಗಳು ಅಮುಖ್ಯ, ಸಮುದಾಯಗಳ ಸೇವೆಯೇ ಮುಖ್ಯ, ಇದೊಂದು ಜೆಸಿಐ ಚಳುವಳಿ, ಪ್ರತಿ ಜೆಸಿಗದು ಬಳುವಳಿ, ಇಲ್ಯಾಕೆ ಗ್ರೂಪಿಸಂ, ಕ್ಯಾಸ್ಟಿಸಂ, ಪಾಲಿಟಿಕ್ಸ್ ಇಸಂಗಳು, ಮೊದಲು ವಿದ್ಯಾರ್ಥಿಗಳಾಗಿ, ಕಲಿತು ಕಲೆತು ಕಲಿಸಿ, ಲಭಿಸಿದ ಜೆಸಿಐ ಅರ್ಹತಾ ಟ್ರೈನಿಂಗ್ ಸರ್ಟಿಫಿಕೇಟ್ ಗಳು  ಮ್ಯೂಸಿಯಂ ಪ್ರದರ್ಶನಕ್ಕಿಟ್ಟ ಸ್ತಂಭಿತ ಸ್ಲೇಟುಗಳಲ್ಲ, ಇಲ್ಲಿವರೆಗೂ ಲೆಕ್ಕವಿಟ್ಟರೆ ಕಾರ್ಪೋರೆಟ್ ಟ್ರೈನರ್ ಆಗ್ಲಿಲ್ಲ, ಇಲ್ಲಿ ಅರ್ಹತೆ ಗಿಟ್ಟಿಸಿಕೊಂಡವರು ಅಲ್ಯಾಕೆ ಕಳ್ಕೊಂಡ್ರು, ಎಲ್ಲಾ ಕಲಿತವರೆಂದು ಬೀಗದೆ ನೊಗ ಕಟ್ಟಿದ ಎತ್ತುಗಳಾಗಿ, ಜೋನ್ಕಾನ್ ಎಲೆಕ್ಷನ್ ಒಂದು ಟಾಸ್ಕ್  ಎಂದೇ ಭಾವಿಸಿ, ಒಟ್ಟು ಸಮಾಜದ ಸಮಾಜಮುಖಿಯೊಳು ಸಾಧಿಸದವರು, ಜೆಸಿಐನೊಳು ಅಧಿಕಾರವಿಡಿದು ಶಾಸನಗೈಯಲಾರರು..?! ಇಂದಾದರೂ .... ಕಾಮನ್ ಜೆಸಿಗಳಿಗೆ ಜಗದ ಭೂಪಟವ ಪರಿಚಯಿಸಿ, ಯಾವುದೇ ಅಧಿಕಾರದಂದಣವಿಲ್ಲದೆ ಚಲಿಸುವ ನೈಜತೆ  ತಿಳಿಸಿ, ಅವರೊಳಗಿನ ಜ್ಞಾನ, ರಚನಾತ್ಮಕತೆ, ವಹಿವಾಟುವಿನ ವಿಸ್ತೃತತೆ, ಜೆಸಿಗಳಿಗೆ ಗೊತ್...

ಅಂತರರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ ಆಯೋಜಿಸಿದ್ದ ವೈದ್ಯರ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಡಾ ಪ್ರಭಾ ಮಲ್ಲಿಕಾರ್ಜುನ್ ಸಂಸದರು, ದಾವಣಗೆರೆ

ಇಮೇಜ್
ಶಿವಮೊಗ್ಗದ ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ಅಂತರರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ ಆಯೋಜಿಸಿದ್ದ ವೈದ್ಯರ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಡಾ ಪ್ರಭಾ ಮಲ್ಲಿಕಾರ್ಜುನ್ ಸಂಸದರು, ದಾವಣಗೆರೆ ಐಎಲ್ ವೈಎಫ್ (lLYF)ವೀರಶೈವ ಲಿಂಗಾಯತ ಸಮುದಾಯದೊಳಗೆ ನಾಯಕತ್ವ, ಉದ್ಯಮಶೀಲತೆ ಮತ್ತು ಆರ್ಥಿಕ ಸಬಲೀಕರಣವನ್ನು ಬೆಳೆಸಲು ಬದ್ಧವಾಗಿರುವ ಪ್ರಗತಿಪರ ವೇದಿಕೆಯಾಗಿದೆ  ಪ್ರಮುಖ ನೆಟ್‌ವರ್ಕಿಂಗ್ ವೇದಿಕೆಗಳು ಮತ್ತು ವಿವಿಧ ವಲಯ, ನಿರ್ದಿಷ್ಟ ಆವಿಷ್ಕಾರಗಳ ಮೂಲಕ, ILYF ಹೆಚ್ಚಿನ ಪರಿಣಾಮವನ್ನು ಸಾಧಿಸುವಲ್ಲಿ ವೃತ್ತಿಪರರು ಮತ್ತು ವ್ಯಾವಹಾರಿಕವಾಗಿ ನಾಯಕರನ್ನು ಬೆಂಬಲಿಸುವುದನ್ನು ಮುಂದುವರೆಸಿದೆ ಎಂಬುದು ನಿಜಕ್ಕೂ ಶ್ಲಾಘನೀಯ. ಸುದೀರ್ಘ 12 ವರ್ಷಗಳಿಂದಲೂ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ತಿಳಿದು ಸಂತೋಷವಾಯಿತು. ಇಂದು Doctor preneur Summit 2025 ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದು ಸಂತಸ ತಂದಿದೆ. ಇದು ವೈದ್ಯಕೀಯದ ವಿಜ್ಞಾನವನ್ನು ಮಾತ್ರವಲ್ಲ. ಅದರ ಮೂಲಕ ಸಂಘಟನೆಗೆ‌ ಒತ್ತು‌ ನೀಡುವುದಾಗಿದೆ. ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದ ಶ್ರೀ ಡಾ.ಶರಣ ಪ್ರಕಾಶ್ ಪಾಟೀಲ್ ,ಶಿವಮೊಗ್ಗ ಸಂಸದರಾದ ಶ್ರೀ ಬಿ.ವೈ.ರಾಘವೇಂದ್ರ, ಶಾಸಕರಾದ ಶ್ರೀ ಚನ್ನಬಸಪ್ಪ,ಪರಿಷತ್ ಸದಸ್ಯರಾದ ಶ್ರೀ ಡಾ.ಧನಂಜಯ ಸರ್ಜಿ ಹಾಗೂ ಐಎಲ್ ವೈಎಫ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜೆಸಿಐ ಸಪ್ತಾಹ 6ನೇ ದಿನದ ಕಾರ್ಯಕ್ರಮ

ಇಮೇಜ್
ನಗರದ ಆರ್ ಎಂ ಎಲ್ ನಗರ, ಆಲ್ ಮೊಹಮ್ಮದ್ ಬಿಎಡ್ ಕಾಲೇಜು ನಲ್ಲಿ  ಜೆಸಿಐ ಶಿವಮೊಗ್ಗ ಶಾಶ್ವತಿ ಘಟಕ ದಿಂದ ಆಯೋಜನೆ ಮಾಡಲಾಗಿತ್ತು. ಜೆಸಿಐ ವೀಕ್ 2025ರ ಆರುನೇ ದಿನದ ಅಂಗವಾಗಿ, “Global Record Challenge” ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಭಾಗವಾಗಿ, ಇನ್ವೆಟ್ ಫೋಕಸ್ ಅಡಿಯಲ್ಲಿ 18ರಿಂದ 40 ವರ್ಷದೊಳಗಿನ ಯುವಕರಿಗೆ ಜೆಸಿಐ ಸಂಸ್ಥೆಯ ಪರಿಚಯ ನೀಡಲಾಯಿತು. ನಾಯಕತ್ವ ಹಾಗೂ ವ್ಯಕ್ತಿತ್ವ ವಿಕಾಸದ ಅವಕಾಶಗಳ ಬಗ್ಗೆ ಮಾಹಿತಿ ನೀಡಿ, ಯುವಕರಲ್ಲಿ ಜಾಗೃತಿ ಮೂಡಿಸಲಾಯಿತು. ಕಾಲೇಜು ವಿದ್ಯಾರ್ಥಿಗಳಿಗೆ ಜೆಸಿಐ ಸಂಸ್ಥೆಯ ಮೌಲ್ಯಗಳು, ಚಟುವಟಿಕೆಗಳು ಹಾಗೂ ಸದಸ್ಯತ್ವದ ಲಾಭಗಳ ಕುರಿತು ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳ ಮಾಹಿತಿಗಳನ್ನು ಸಂಗ್ರಹಿಸಿ, ಭವಿಷ್ಯದಲ್ಲಿ ಅವರನ್ನು ಜೆಸಿಐ ಕುಟುಂಬಕ್ಕೆ ಸೇರಿಸಿಕೊಳ್ಳುವ ಪ್ರೇರಣೆ ನೀಡಲಾಯಿತು. ವಿಶೇಷ ಧನ್ಯವಾದಗಳು: ಆಲ್ ಮೊಹಮ್ಮದ್ ಬಿಎಡ್ ಕಾಲೇಜಿನ ಪ್ರಾಂಶುಪಾಲರಾದ ಮೋಹನ್ ಸರ್ ಮತ್ತು ಆಡಳಿತ ಮಂಡಳಿಗೆ, ಜೆಸಿಐ ಶಿವಮೊಗ್ಗ ಶಾಸ್ವತಿ ಸಂಸ್ಥೆಯ ಅಧ್ಯಕ್ಷರಾದ ಜೆಸಿ ಶಿಲ್ಪ ಸತೀಶ್   ಕಾರ್ಯಕ್ರಮದ ಬೆಂಬಲಕ್ಕಾಗಿ ಧನ್ಯವಾದಗಳನ್ನೂ ಪತ್ರಿಕೆ ಮೂಲಕ ತಿಳಿಸಿರುತ್ತಾರೆ.

ಕ್ಷುಲಕ ಕಾರಣ ಶಿಕಾರಿಪುರದಲ್ಲಿ ಚಾಕು ಇರಿತ !!

ಇಮೇಜ್
    ಶುಕ್ರವಾರ ರಾತ್ರಿ ಶಿಕಾರಿಪುರ ತಾಲೂಕು, ನಳಿನಕೊಪ್ಪ ಗ್ರಾಮದಲ್ಲಿ ಕ್ಷುಲಕ ಕಾರಣಕ್ಕೆ ಪ್ರಾರಂಭವಾದ ಗಲಾಟೆ. ಇಂದು ಶಿಕಾರಿಪುರ ನಗರದ ಸರ್ಕಾರಿ ಆಸ್ಪತ್ರೆಯ ಎದುರಿಗೆ ಅದೇ ಗ್ರಾಮದ ಕೆಲವರು ಮದ್ಯ ಮಾತಿನ ಚಕಮಕಿಯಲ್ಲಿ  ಚಾಕು ಇರಿದಿದ್ದಾರೆ.  ಕುತ್ತಿಗೆಗೆ ಎದೆ ಭಾಗಗಳಿಗೆ ಇರಿದಿದ್ದು, ಒಬ್ಬನ ಸ್ಥಿತಿ ಚಿಂತ ಜನಕವಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ ಎಂದು ಶಿಕಾರಿಪುರ ವರದಿಗಾರರು ತಿಳಿಸಿದ್ದಾರೆ.

ಹೊಸಮನೆ ಹಾಗೂ ಶರಾವತಿ ನಗರ ಬಡಾವಣೆಯ ರಸ್ತೆಗಳಿಗೆ ಹಂಪ್ಸ್ ನಿರ್ಮಿಸಲು ಮಹಾನಗರ ಪಾಲಿಕೆ ಆಯುಕ್ತರಿಗೆ ಒತ್ತಾಯ : ಮಾಜಿ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್

ಇಮೇಜ್
         ಹೊಸಮನೆ  ಹಾಗೂ ಶರವತಿನಗರ ಬಡಾವಣೆಯ ರಸ್ತೆಗಳಿಗೆ ಹಂಪ್ಸ್ ಗಳನ್ನು ನಿರ್ಮಿಸುವುದು ಅತ್ಯವಶ್ಯಕವಾಗಿದ್ದು, ಸುಮಾರು ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು. ಈಗಾಗಲೇ ಕಳೆದ ಕೆಲವು ತಿಂಗಳ ಹಿಂದೆ ಹೊಸಮನೆ ಮತ್ತು ಶರಾವತಿ ನಗರಕ್ಕೆ ಹಾದು ಹೋಗುವ ಚಾನೆಲ್ ಪಕ್ಕದ ರಸ್ತೆ  ನಾಗಪ್ಪ ದೇವಸ್ಥಾನದ ಹತ್ತಿರ ಎರಡು ಪ್ರತ್ಯೇಕ ಅಪಘಾತಗಳು ಸಂಭವಿಸಿ ಓರ್ವ  ವಿದ್ಯಾರ್ಥಿಯು ಮರಣ ಹೊಂದಿದ್ದು, ಮತ್ತೊಬ್ಬ ಯುವಕನು  ಚಿಂತಾಜನಕ ಸ್ಥಿತಿಯಲ್ಲಿ  ಇಂದಿಗೂ ಇದ್ದು ಹೊಸಮನೆ ಹಾಗೂ ಶರಾವತಿ ನಗರ ಬಡಾವಣೆಯ ರಸ್ತೆಗಳು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗಿದ್ದು. ಈ ರಸ್ತೆಗಳಲ್ಲಿ ಕೆಲ ವಾಹನ ಸವಾರರು ರಭಸವಾಗಿ ವಾಹನಗಳನ್ನು ಚಲಿಸುತ್ತಿದ್ದು, ಅಪಘಾತಗಳು ಸಂಭವಿಸಿ, ಶಾಲಾ ಮಕ್ಕಳು ಹಿರಿಯ ನಾಗರಿಕರು ರಸ್ತೆಯಲ್ಲಿ ಓಡಾಡುವುದಕ್ಕೆ ಭಯಪಡುತ್ತಿದ್ದು,  ಇದರಿಂದ  ಈ ಭಾಗದ ನಾಗರಿಕರು ದಿನನಿತ್ಯ ತೊಂದರೆಯನ್ನು ಅನುಭವಿಸುತ್ತಿದ್ದು.           ಹಲವು ಬಾರಿ ಸ್ಮಾರ್ಟ್ ಸಿಟಿ ಯೋಜನೆಗೆ  ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದು ಮನವಿ ಮಾಡಿದರು. ಸ್ಮಾರ್ಟ್ ಸಿಟಿ ಅಧಿಕಾರಿಗಳು ನಮ್ಮ ಯೋಜನೆಯಲ್ಲಿ ರಸ್ತೆಗಳಿಗೆ  ಹಂಪ್ಸ್ ಗಳನ್ನು ಹಾಕಿಸಲು ನಿರ್ದೇಶನ ಇರುವುದಿಲ್ಲ  ಎಂದು ಸಬೂಬು ಹೇಳಿದ್ದು. ಸ್ಮಾರ್ಟ್ ಸಿಟಿ ...

ಆರೋಗ್ಯವೇ ಭಾಗ್ಯ, ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ : ಜೆಸಿಐ ಶಿವಮೊಗ್ಗ ಭವನ ಅಧ್ಯಕ್ಷರು ಜೆಸಿ ರೇಖಾ ರಂಗನಾಥ್

ಇಮೇಜ್
  ಶಿವಮೊಗ್ಗ: ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸದೃಢವಾಗುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು.       ಜೆಸಿಐ ಸಪ್ತಾಹದ ಅಂಗವಾಗಿ ನಗರದ ನೆಹರು ಕ್ರೀಡಾಂಗಣದಲ್ಲಿ ಜೆಸಿ ಸದಸ್ಯರಿಗೆ ಹಾಗೂ ಸದಸ್ಯರಲ್ಲದವರಿಗೆ ವಲಯದ ಎಲ್ಲ ಜೆಸಿಐಗಳಿಂದ ಆಯೋಜಿಸಿದ್ದ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡೆಯು ಮನುಷ್ಯನ ಮನಸ್ಸನ್ನು ವಿಕಸನಗೊಳಿಸುತ್ತದೆ ಹಾಗೂ ನಮ್ಮಲ್ಲಿ ಜೀವನೋತ್ಸಾಹವನ್ನು ತುಂಬುತ್ತದೆ. ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಸದೃಢತೆ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.       ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಪ್ರತಿನಿತ್ಯ 24 ಗಂಟೆಗಳಲ್ಲಿ ಒಂದು ಗಂಟೆಯಾದರೂ ಸಹ ನಮ್ಮ ಆರೋಗ್ಯಕ್ಕಾಗಿ ಸಮಯ ಮೀಸಲಿಡಬೇಕು. ಇದರಿಂದ ಸದಾ ನಾವು ಆರೋಗ್ಯದಿಂದ ಇರುತ್ತೇವೆ ಎಂದು ಹೇಳಿದರು.      ಜೆಸಿಐ ವಲಯ ಅಧ್ಯಕ್ಷ ಗೌರೀಶ್ ಭಾರ್ಗವ್ ಮಾತನಾಡಿ, ಕ್ರೀಡೆ ಪರಸ್ಪರರಲ್ಲಿ ಸ್ನೇಹ ವಿಶ್ವಾಸ ಪ್ರೀತಿಯನ್ನು ವೃದ್ಧಿಸುತ್ತದೆ. ನಮ್ಮ ಜೆಸಿ ಸಂಸ್ಥೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಆಟಗಾರರು ಸಹ ಇದ್ದಾರೆ. ಇಂತಹ ಕ್ರೀಡೆಗಳಿಂದ ಅವರಿಗೆ ಉತ್ಸಾಹ ಮೂಡುತ್ತದೆ. ಪ್ರತಿಯೊಬ್ಬ ಸದಸ್ಯರು ಕುಟುಂಬ ಸಮೇತರಾಗಿ ಭಾಗವಹಿಸಿ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದು ತಿಳಿ...

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ವಿಜೃಂಭಣೆಯಿಂದ ಆಚರಣೆ: ಗುರುದತ್ತ ಹೆಗಡೆ

ಇಮೇಜ್
ಶಿವಮೊಗ್ಗ, ಸೆಪ್ಟಂಬರ್.18  ಅ.7 ರಂದು ನಗರದಲ್ಲಿ ನಡೆಯುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಈ ವರ್ಷ ಕಲಾ ತಂಡದ ಮೆರವಣಿಗೆಯೊಂದಿಗೆ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.  ಗುರುವಾರ ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಯಂತಿ ಎಲ್ಲಿ ಆಚರಣೆ ಮಾಡಬೇಕೆಂಬ ಗೊಂದಲ ಬೇಡ, ಸಮಾಜದ ಮುಖಂಡರೆಲ್ಲಾ ಸೇರಿ ಇಲಾಖೆಯ ಅಧಿಕಾರಿಯೊಂದಿಗೆ ಚರ್ಚಿಸಿ ನಿರ್ಧಾರ ಮಾಡಿ, ಅದರಂತೆ ಜಿಲ್ಲಾಡಳಿತ ಜಯಂತಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತದೆ ಎಂದರು. ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಲಿದ್ದು, ಸಂಚಾರಕ್ಕೆ ಮತ್ತು ಮೆರವಣಿಗೆಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಗೆ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗುತ್ತದೆ. ಮೆರವಣಿಗೆಯಲ್ಲಿ ಹೊರಡುವ ಭಾವಚಿತ್ರಕ್ಕೆ ಹೂವಿನ ಹಾಗೂ ತೋರಣದ ಅಲಂಕಾರ ಮಹಾನಗರ ಪಾಲಿಕೆ ಮಾಡಲಿದ್ದು, ಜಯಂತಿ ಮುಗಿದ ಬಳಿಕ ಊಟ ಹಾಗೂ ಉತ್ತಮವಾದ ಕುಡಿಯುವ ನೀರಿನ ವ್ಯವಸ್ಥೆ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯಿಂದ ಮಾಡಲಾಗುತ್ತದೆ ಎಂದು ತಿಳಿಸಿದರು.  ಜಯಂತಿ ದಿನದಂದು ವಿದ್ಯಾನಗರದ ಬಳಿ ಇರುವ ವಾಲ್ಮೀಕಿ ವೃತ್ತಕ್ಕೆ...

ನರೇಂದ್ರ ಮೋದಿ ಅವರ ಜನ್ಮದಿನದಂದು ರಕ್ತದಾನ ಶಿಬಿರವನ್ನು ಆಯೋಜಿಸಲಿದೆ ಬಿಜೆಪಿ ಯುವ ಘಟಕ ಶಿಕಾರಿಪುರ ಮಂಡಲ

ಇಮೇಜ್
ಶಿವಮೊಗ್ಗ, ಸೆಪ್ಟೆಂಬರ್ 16, 2025 – ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಜನ್ಮದಿನದಂದು ಬಿಜೆಪಿ ಯುವ ಮೋರ್ಚಾ, ಶಿಕಾರಿಪುರ ಮಂಡಲವು ವಿಶೇಷ ರಕ್ತದಾನ ಶಿಬಿರವನ್ನು ಆಯೋಜಿಸಲು ಸಜ್ಜಾಗಿದೆ. ಈ ಕಾರ್ಯಕ್ರಮವು ಪ್ರಧಾನ ಮಂತ್ರಿಯವರ ಸೇವೆ ಮತ್ತು ರಾಷ್ಟ್ರಕ್ಕೆ ಅವರ ಬದ್ಧತೆಯನ್ನು ಸಾಮಾಜಿಕ ಉದ್ದೇಶದ ಮೂಲಕ ಆಚರಿಸುವ ಗುರಿಯನ್ನು ಹೊಂದಿದೆ. ರಕ್ತದಾನ ಶಿಬಿರವು ಸೆಪ್ಟೆಂಬರ್ 17, 2025 ರಂದು ಮಂಗಳವಾರ ಶಿವಮೊಗ್ಗದ ಮಂಗಳ ಭವನದಲ್ಲಿ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 3:00 ರವರೆಗೆ ನಡೆಯಲಿದೆ. ಶಿವಮೊಗ್ಗ ಜಿಲ್ಲೆಯ ಬಿಜೆಪಿ ನಾಯಕರು ಮತ್ತು ಪಕ್ಷದ ಕಾರ್ಯಕರ್ತರ ಬೆಂಬಲದೊಂದಿಗೆ, ಬಿಜೆಪಿ ಕರ್ನಾಟಕ ರಾಜ್ಯ ಅಧ್ಯಕ್ಷ ಮತ್ತು ಶಿಕಾರಿಪುರದ ಶಾಸಕ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಈ ಕಾರ್ಯಕ್ರಮವು ಬಿಜೆಪಿಯ ಸಮುದಾಯ ಸೇವೆಗೆ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ನಾಗರಿಕರು, ವಿಶೇಷವಾಗಿ ಯುವಕರು ಮಾನವೀಯ ಪ್ರಯತ್ನಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿಸುತ್ತದೆ ಎಂದು ಪಕ್ಷದ ಪ್ರತಿನಿಧಿಗಳು ಹೇಳಿದ್ದಾರೆ.  ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದರಾದ ಬಿ ವೈ ರಾಘವೇಂದ್ರ ಸೇರಿದಂತೆ ಪ್ರಮುಖ ನಾಯಕರು ಮತ್ತು ಇತರ ಹಿರಿಯ ಬಿಜೆಪಿ ನಾಯಕರು ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದ್ದಾರೆ. ರಕ್ತದಾನ ಶಿಬಿರಕ್ಕೆ ಕೊಡುಗೆ ನೀಡಲು ಸಾರ್ವಜನಿಕರು ಮತ್ತು ಪಕ್ಷದ ಸದಸ್ಯರಿಗೆ ಸಂ...

KPTCL DEA ವೃತ್ತ ಸಮಿತಿ, ಶಿವಮೊಗ್ಗ ವತಿಯಿಂದ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ರವರ 164 ನೇ ಜನ್ಮ ದಿನಾಚರಣೆ

ಇಮೇಜ್
     ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಡಿಪ್ಲೊಮಾ ಇಂಜಿನಿಯರ್ಸ್ ಅಸೋಸಿಯೇಶನ್ (KPTCL DEA)ವೃತ್ತ ಸಮಿತಿ, ಶಿವಮೊಗ್ಗ ವತಿಯಿಂದ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ರವರ 164 ನೇ ಜನ್ಮ ದಿನಾಚರಣೆಯನ್ನು ಶಿವಮೊಗ್ಗ ನಗರದ ಕರ್ನಾಟಕ ಸಂಘದ ಬಳಿ ಇರುವ ಸರ್ ಎಂ ವಿಶ್ವೇಶ್ವರಯ್ಯ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಯಿತು.       ಈ ಸಂದರ್ಭದಲ್ಲಿ ಕೆಪಿಟಿಸಿಎಲ್/ಮೆಸ್ಕಾಂ ನ DEA ನ ಉಪಾಧ್ಯಕ್ಷರಾದ ಶ್ರೀ ಎಂ ನವೀನ್ ಕುಮಾರ್, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಸತೀಶ್, ಶ್ರೀ ರವಿ ಎ ಎಸ್ ಮತ್ತು ಶಿವಮೊಗ್ಗ ವೃತ್ತ ಸಮಿತಿಯ ಉಪಾಧ್ಯಕ್ಷರಾದ ಶ್ರೀ ರವಿಕುಮಾರ್ ಡಿ ಬಿ, ಕಾರ್ಯದರ್ಶಿ ಶ್ರೀ ನಂಜುಂಡ ಕೆ ಸಿ, ಖಜಾಂಚಿಯವರಾದ ಶ್ರೀ ಸಂತೋಷ್ ಕುಮಾರ್, ನಿರ್ದೇಶಕರಾದ ಜಗದೀಶ್ ಹಾಗೂ ಶಿವಮೊಗ್ಗ ವೃತ್ತದ ಎಲ್ಲಾ ಡಿಪ್ಲೊಮಾ ಇಂಜಿನಿಯರ್ ಸದಸ್ಯರುಗಳು ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಪತ್ತು ನಿರ್ವಹಣೆ ಮತ್ತು ಪ್ರಾಥಮಿಕ ಚಿಕಿತ್ಸೆ ಬಗ್ಗೆ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾರ್ಯಗಾರ

ಇಮೇಜ್
  ದಿನಾಂಕ 10 ಸೆಪ್ಟೆಂಬರ್ 2025 ರಂದು ಜೆಸಿಐ ಶಿವಮೊಗ್ಗ ಚಿರಂತನ ವತಿಯಿಂದ ಜೆಸಿಐ ಸಪ್ತಾಹ 2025ರ ತರಬೇತಿ ದಿನದ ಪ್ರಯುಕ್ತ ಶ್ರೀ ಜಗದ್ಗುರು ಐಟಿಐ ಕಾಲೇಜ್, ಶಿವಮೊಗ್ಗ ಇಲ್ಲಿ ಡಾ. ವಿ ಎಲ್ ಎಸ್ ಕುಮಾರ್ ರವರಿಂದ ವಿಪತ್ತು ನಿರ್ವಹಣೆ ಮತ್ತು ಪ್ರಾಥಮಿಕ ಚಿಕಿತ್ಸೆ ಬಗ್ಗೆ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾರ್ಯಗಾರ ತರಬೇತಿಯನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಗಾರದಲ್ಲಿ ಭಾಗವಹಿಸಿದ ಮಕ್ಕಳಿಗೆ ಸಿಪಿಆರ್, ಪ್ರಾಥಮಿಕ ಚಿಕಿತ್ಸೆ ಬಗ್ಗೆ ಹಾಗೂ ವಿಪತ್ತು ನಿರ್ವಹಣೆ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ನಾವುಗಳು ಹೇಗೆ ಕಾರ್ಯ ನಿರ್ವಹಿಸ ಬೇಕೆಂಬುದು ರ ಬಗ್ಗೆ ಕಾರ್ಯಗಾರ ತರಬೇತಿಯನ್ನು ನೀಡಲಾಯಿತು. ಈ ತರಬೇತಿ ಕಾರ್ಯಗಾರದ ಅಧ್ಯಕ್ಷತೆಯನ್ನು ಜೆಸಿಐ ಶಿವಮೊಗ್ಗ ಚಿರಂತನಾದ ಅಧ್ಯಕ್ಷರಾದ ರುದ್ರೇಶ್ ಕೋರಿ ರವರು ವಹಿಸಿದ್ದರು ಕಾರ್ಯದರ್ಶಿಯಾದ ವೈಷ್ಣವಿ ಚಂದನ್ ರವರು, ಕಾರ್ಯಕ್ರಮ ನಿರ್ದೇಶಕರಾದ ಮಮತಾ ರವರು ಜಗದ್ಗುರು ಐಟಿಐ ಕಾಲೇಜಿನ ಅಧ್ಯಕ್ಷರಾದ ವಿಜ್ಞೇಶ್ವರ ಸೊಲ್ಲಾಪುರವರು ಹಾಗೂ ಪ್ರಭಾರ ಪ್ರಾಂಶುಪಾಲರಾದ ಪರಮೇಶ್ವರ್ ಸರ್ ರವರು ಉಪಸ್ಥಿತರಿದ್ದರು.

ಜೆಸಿಐ ಸಪ್ತಾಹ 2025 ಸೆಪ್ಟಂಬರ್ 9 ರಿಂದ ಚಾಲನೆ : ಜೆಸಿಐ ಸೆನೆಟರ್ ಸಿಎ ಗೌರೀಶ್ ಭಾರ್ಗವ

ಇಮೇಜ್
ಜೆಸಿಐ  ಭಾರತ - ವಲಯ 24, ನಾಯಕತ್ವ, ಕಲಿಕೆ, ಕ್ರೀಡೆ, ವ್ಯವಹಾರ ಮತ್ತು ಸಮುದಾಯದ ಪ್ರಭಾವದ ಒಂದು ವಾರದ ಹಬ್ಬವಾದ ಜೆಸಿಐ ಸಪ್ತಾಹ 2025 ರ ಭವ್ಯ ಆಚರಣೆಯನ್ನು ಹೆಮ್ಮೆಯಿಂದ ಆಚರಿಸುತ್ತಿದೆ. ಈ ವರ್ಷದ ಜೆಸಿಐ ಸಪ್ತಹ ದ ವಿಷಯ " ಪ್ರಿಜಂ ". 📅 ದಿನ 1: ಧ್ವಜಾರೋಹಣ ದಿನ ಏಕತೆ ಮತ್ತು ಬದ್ಧತೆಯನ್ನು ಸಂಕೇತಿಸುವ ಪತ್ರಿಕಾಗೋಷ್ಠಿ ಮತ್ತು ಧ್ವಜಾರೋಹಣ ಸಮಾರಂಭದೊಂದಿಗೆ ವಾರವು ಪ್ರಾರಂಭವಾಗುತ್ತದೆ. 📅 ದಿನ 2: ತರಬೇತಿ ದಿನ  ಕೌಶಲ್ಯ ಆಧಾರಿತ ಕಾರ್ಯಾಗಾರಗಳು ಯುವಕರನ್ನು ಜ್ಞಾನ ಮತ್ತು ಜೀವನ ಕೌಶಲ್ಯಗಳೊಂದಿಗೆ ಸಬಲೀಕರಣಕ್ಕಾಗಿ. 📅 ದಿನ 3: ಕ್ರೀಡೆ ಮತ್ತು ಸ್ವಾಸ್ಥ್ಯ ದಿನ ಉಚಿತ ಆರೋಗ್ಯ ತಪಾಸಣಾ ಶಿಬಿರದೊಂದಿಗೆ ಒಳಾಂಗಣ ಮತ್ತು ಹೊರಾಂಗಣ ಆಟಗಳು.  📅 ದಿನ 4: ವ್ಯಾಪಾರ ಮತ್ತು JCOM ದಿನ ವ್ಯಾಪಾರ ಪ್ರದರ್ಶನ, ವ್ಯಾಪಾರ ರೀಲ್ ಮ್ಯಾರಥಾನ್, ಸ್ಪೂರ್ತಿದಾಯಕ  ಭಾಷಣ ಮತ್ತು ವ್ಯಾಪಾರ ನೆಟ್‌ವರ್ಕಿಂಗ್ ಸಭೆಯೊಂದಿಗೆ ಯುವಕರಲ್ಲಿ ಉದ್ಯಮಶೀಲತೆ ಬೆಳೆಸುವುದು. 📅 ದಿನ 5: ಮಾನವ ಕರ್ತವ್ಯಗಳು ಮತ್ತು ಅರ್ಜಿ ದಿನ 1. ಮಾನವ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಸಾರ್ವಜನಿಕ ಜಾಗೃತಿ (ಬೀದಿ ನಾಟಕಗಳು, ಕರಪತ್ರಗಳು). 2. ಅರ್ಜಿ ಸಹಿ ಅಭಿಯಾನ 3. ಸಾರ್ವಜನಿಕ ಧ್ವನಿಗಳು ಮತ್ತು ಜಾಗೃತಿಯೊಂದಿಗೆ ರೀಲ್‌ಗಳು. 📅 ದಿನ 6: ಅತಿದೊಡ್ಡ ಯುವ ಆಹ್ವಾನ ಅಭಿಯಾನ 1. ಸದಸ್ಯರು ಸ್ನೇಹಿತರು, ಕುಟುಂಬ, ಸಹೋದ್ಯೋಗಿಗಳನ್ನು ಆಹ್ವಾನಿಸುತ್...

ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಸಿಎಂ

ಇಮೇಜ್
 ಬ್ರಹ್ಮ ಶ್ರೀ ನಾರಾಯಣ ಗುರುಗಳ ಚಿಂತನೆ, ಹೋರಾಟಗಳ ಉದ್ದೇಶವನ್ನು ಜನರು ಅರ್ಥೈಸಿಕೊಳ್ಳಬೇಕಿದೆ. ನಾರಾಯಣ ಗುರುಗಳು ಯಾವುದೇ ಒಂದು ಸಮುದಾಯ, ಜಾತಿಗೆ ಮೀಸಲಾಗದೇ, ಇಡೀ ಸಮಾಜದ ಆಸ್ತಿಯಾಗಿದ್ದಾರೆ. ಸಮಾಜದಲ್ಲಿರುವ ಜಾತಿವ್ಯವಸ್ಥೆ, ಮೂಢನಂಬಿಕೆ, ಅಂಧಶ್ರದ್ಧೆಯ ವಿರುದ್ಧ ಹೋರಾಟ ನಡೆಸಿದರು. ನಾರಾಯಣ ಗುರುಗಳು’ ವಿದ್ಯೆಯಿಂದ ಸ್ವತಂತ್ರರಾಗಿರಿ’ ಎಂಬ ಮಾತನ್ನು ಪ್ರತಿಪಾದಿಸಿದರು, ಇತಿಹಾಸದಲ್ಲಿ ನಮ್ಮ ಸಮಾಜದಲ್ಲಿ ಅನಕ್ಷರತೆಯಿತ್ತು, ಈಗ ಪರಿಸ್ಥಿತಿ ಕೊಂಚ ಸುಧಾರಿಸಿದೆ.  ದೇವಸ್ಥಾನಕ್ಕೆ ಪ್ರವೇಶ ದೊರೆಯದಿದ್ದರೆ, ದೇವಸ್ಥಾನವೇ ನಿಮ್ಮ ಬಳಿ ಕರೆತರಲು ಪ್ರಯತ್ನಿಸಿ ಎಂದು ನಾರಾಯಣಗುರುಗಳು ತಿಳಿಸಿದ್ದರು. ನಾರಾಯಣ ಗುರುಗಳ ಕಾಲಮಾನದಲ್ಲಿ ಕೇರಳದಲ್ಲಿ ಶೂದ್ರವರ್ಗದವರನ್ನು ತುಚ್ಛವಾಗಿ ಕಾಣುವ ಪರಿಸ್ಥಿತಿಯಿತ್ತು. ಪರ್ಯಾಯ ವ್ಯವಸ್ಥೆಯನ್ನು ನಾರಾಯಣ ಗುರುಗಳು ಹುಡುಕಿದರು. ಅವರು ಮೊದಲನೇ ದೇವಸ್ಥಾನ ಕಟ್ಟಿದ್ದು 1885ರಲ್ಲಿ. ಅಲ್ಲಿಂದೀಚೆಗೆ 150ಕ್ಕೂ ಹೆಚ್ಚು ದೇವಸ್ಥಾನಗಳನ್ನು ಕಟ್ಟಿದರು. ಮೇಲ್ಜಾತಿಯವರೇ   ಪೂಜಾರಿಗಳಾಗಬೇಕೆಂದು ದೇವರು ಹೇಳಿಲ್ಲ. ಪೂಜಾರಿಗಳಾದವರಿಗೆ ತರಬೇತಿ ಕೊಡುವ ವ್ಯವಸ್ಥೆಯನ್ನು ಕೂಡ ಮಾಡುತ್ತಾರೆ. ಒಂದು ಜಾತಿ, ಒಂದು ಮತ, ಒಂದು ದೇವರು ಎಂಬ ಮಾತುಗಳನ್ನು ಅವರು ಹೇಳಿದರು. ನಮಗೆ ದೊರೆತಿರುವ ಸ್ವಾತಂತ್ರ್ಯ ಯಶಸ್ವಿಯಾಗಬೇಕಾದರೆ ಶಕ್ತಿ ಇಲ್ಲದವರನ್ನು ಶಕ್ತಿಯುತರಾಗಿಸಬೇಕು. ಆಗ ಮಾತ್ರ ನಿಜವಾದ ಸ್ವಾತ...