ಪೋಸ್ಟ್‌ಗಳು

ಏಪ್ರಿಲ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭವ್ಯೋನ್ನತಿ" ಬೆಳವಣಿಗೆ ಮತ್ತು ಅಭಿವೃದ್ಧಿ ಸಮ್ಮೇಳನ : ಜೆಸಿಐ ಭಾರತ

ಇಮೇಜ್
.     ಜೆಸಿಐ ಭಾರತ ವಲಯ 24ರ ವಲಯ ಮಟ್ಟದ ಕಾರ್ಯಕ್ರಮ, ಬೆಳವಣಿಗೆ ಮತ್ತು ಅಭಿವೃದ್ಧಿ ಸಮ್ಮೇಳನ (ಗ್ರೌತ್ ಅಂಡ್ ಡೆವಲಪ್ಮೆಂಟ್ ಕಾನ್ಫರೆನ್ಸ್ ) ನಗರದ ಅಡಿಕೆ ಮಂಡಿ ಕ್ಲಬ್ ನಲ್ಲಿ ಆತಿಥ್ಯ ಘಟಕ ಜೆಸಿಐ ಹೊಸನಗರ ಡೈಮಂಡ್ ಶನಿವಾರ 3ನೇ ತಾರೀಖು ಮೇ ತಿಂಗಳ ಶಿವಮೊಗ್ಗದ ಅಡಿಕೆ ಮಂಡಿ ಕ್ಲಬ್ ನಲ್ಲಿ ಆಯೋಜಿಸುತ್ತಿದೆ.        ಕಾರ್ಯಕ್ರಮದ ವಿಶೇಷ ,  ಮುಖ್ಯ ಆಕರ್ಷಣೆ ಜೆಫ್ಎಸ್ ರವಿಶಂಕರ್ ಅವರು. ಜೆಸಿಐ ಭಾರತದ ಆಡಳಿತ ಮಂಡಳಿಯ ಛೇರ್ಮನ್. ಜೆಸಿಐ ಭಾರತದಲ್ಲಿ ಸಾಕಷ್ಟು ನಾಯಕರನ್ನು ಸಿದ್ಧಪಡಿಸಿರುತ್ತಾರೆ. ಜೆಸಿಐ ಭಾರತದ  ಭೀಷ್ಮ ಎಂದರೆ ತಪ್ಪಾಗಲಾರದು.         ಬೆಳವಣಿಗೆ ಮತ್ತು ಅಭಿವೃದ್ಧಿ ಎಂದರೆ, ಘಟಕಗಳಲ್ಲಿ ಸದಸ್ಯರ ನೋಂದಣಿ ಹೆಚ್ಚಿಸಿಕೊಳ್ಳುವುದು. ಜೆಸಿಗಳಿಂದ ನಾನ್ ಜಿಸಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಅನುದಾನ ಕ್ರೂಡಿಕರ್ಣ ಮಾಡುವುದು. ಈ ಅನುದಾನವನ್ನು ನೇರವಾಗಿ ಜೆಸಿಐ ಭಾರತದ ಕಛೇರಿಯ ಖಾತೆಗೆ ಹಾಕಿ, ಅಲ್ಲಿಂದ ವಿದ್ಯಾರ್ಥಿಗಳ ಖಾತೆಗೆ ವಿದ್ಯಾರ್ಥಿವೇತನ ರೂಪದಲ್ಲಿ ಅನುದಾನ ಬಳಕೆಯಾಗುತ್ತದೆ.         ಒಂದು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆಯುವುದು ಬೆಳವಣಿಗೆಯಾಗಿದೆ, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ  ವಿದ್ಯಾರ್ಥಿವೇತನ ಒದಗಿಸುವುದು ಜೆಸಿಐ ಭಾರತದ ಅಭಿವೃದ್ಧಿಯಾಗಿದೆ. ಹೆನ್ರಿ ಗಿಸೆನ್‌...

ಊಹಾಪೋಹದ ಸುದ್ದಿಗಳಿಂದ ಎಚ್ಚರಿಕೆಯಿಂದಿರುವಂತೆ ಮಾಜಿ ಸೈನಿಕರಿಗೆ ಸೂಚನೆ

ಇಮೇಜ್
   ಇತ್ತಿಚೀನ ದಿನಗಳಲ್ಲಿ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗೆ ಕೆಲವು ಖಾಸಗಿ ವ್ಯಕ್ತಿಗಳು ಮತ್ತು ಕೆಲವೊಂದು ಸಂಘ-ಸಂಸ್ಥೆಗಳು ಆಮಿಷಗಳನ್ನು ನೀಡಿ ನಮ್ಮ ಸಂಘಕ್ಕೆ ನೋಂದಣಿಯಾದರೆ ನಿಮ್ಮ ಎಲ್ಲ ಕುಂದುಕೊರತೆಗಳನ್ನು ಬಗೆಹರಿಸಿ ಕೊಡುತ್ತೇವೆ, ಜಮೀನು ಮಂಜೂರಾತಿ ಮಾಡಿಸಿಕೊಡುತ್ತೇವೆ ಎಂಬಿತ್ಯಾದಿ ಸುಳ್ಳು ಭರವಸೆಗಳನ್ನು ನೀಡುತ್ತಿರುವುದಾಗಿ ಹಾಗೂ ಚೀಟಿ ಮತ್ತು ಫೈನಾನ್ಸ್ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವಂತೆ ಒತ್ತಡವನ್ನು ಹಾಕುತ್ತಿದ್ದಾರೆಂಬ ಮಾಹಿತಿಯು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಛೇರಿಯ ಗಮನಕ್ಕೆ ಬಂದಿರುತ್ತದೆ.  ಇಂತಹ ಅಮಿಷಗಳಿಗೆ ಕಿವಿಗೊಡಬಾರದೆಂದು ಹಾಗೂ ಖಾಸಗೀ ಯೂಟ್ಯೂಬ್, ಇನ್ ಸ್ಟಾಗ್ರಾಮ್, ವಾಟ್ಸಪ್ ಗ್ರೂಪ್, ಫೇಸ್‌ಬುಕ್ ಪೇಜ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಬರುವಂತಹ ಮಾಜಿ ಸೈನಿಕರ ಪಾಲಿಸಿಗಳ ಹೆಚ್ಚಿನ ಪತ್ರಗಳು ಕೂಡ ನಕಲಿಯಾಗಿರುತ್ತವೆಯೆಂದು ಹಾಗೂ ಮಾಜಿ ಸೈನಿಕರುಗಳಿಗೆ ಪಾಲಿಸಿ/ದಾಖಲೆಗಳ ಯಾವುದೇ ರೀತಿಯ ಅನುಮಾನಗಳಿದ್ದರೆ ನೇರವಾಗಿ ಸೈನಿಕ ಕಛೇರಿಗೆ ಸಂಪರ್ಕಿಸಿ ಸ್ಪಷ್ಟಿಕರಣವನ್ನು ಪಡೆಯಬೇಕೆಂದು ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಜೆಸಿಐ ಶಿವಮೊಗ್ಗ ರಾಯಲ್ಸ್ ಘಟಕದಿಂದ ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದಲ್ಲಿ ಆರೋಗ್ಯ ತಪಾಸಣಾ ಶಿಬಿರ

ಇಮೇಜ್
  ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಚಾಲಕರಿಗೆ  ನಿರ್ವಾಹಕರಿಗೆ ಪ್ರಯಾಣಿಕರಿಗೆ ಉಚಿತವಾಗಿ ಮಧುಮೇಹ ಮತ್ತು ರಕ್ತ ಒತ್ತಡದ ಪರೀಕ್ಷಾ ಶಿಬಿರವನ್ನು ಸಂಸ್ಥೆಯ ಅಧ್ಯಕ್ಷರಾದ ಜೆಸಿ ಸ್ಮಿತಾ ಮೋಹನ್ ಅವರು ಮತ್ತು ಅವರ ಪದಾಧಿಕಾರಿಗಳು ಆಯೋಜಿಸಿದ್ದರು. ರಾಷ್ಟ್ರೀಯ ನಿರ್ದೇಶಕರಾದ ಜೆಸಿ ಅನುಷ ಗೌಡ ಉದ್ಘಾಟಿಸಿದರು, ಜೆಸಿ ಪ್ರಮೋದ್, ಜೆಸಿ ಸುದರ್ಶನ್, ವಲಯ ಉಪಾಧ್ಯಕ್ಷರು, ಜೆಸಿ ನವೀನ್ ಕುಮಾರ್ ಎನ್ ವಿ ವಲಯ ಸಂಯೋಜಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜೆಸಿ ಮೋಹನ್ ಜೇಕಾಂ ಚೇರ್ಮನ್  ಉಪಸ್ಥಿತರಿದ್ದರು.

ವಿಶ್ವ ಹಿಂದೂ ಪರಿಷತ್ ನಿಂದಾ ಉಷಾ ನರ್ಸಿಂಗ್ ಹೋಂ ವೃತ್ತದಲ್ಲಿ ಪ್ರತಿಭಟನೆ

ಇಮೇಜ್
ವಿಶ್ವ ಹಿಂದೂ ಪರಿಷತ್ ನಿಂದಾ ಉಷಾ ನರ್ಸಿಂಗ್ ಹೋಂ ವೃತ್ತದಲ್ಲಿ ಪ್ರತಿಭಟನೆ. ವಾಸುದೇವ್ ಅಧ್ಯಕ್ಷರು, ಅರುಣ್ ಡಿ ಎಸ್, 

ಆತ್ಮವಿಶ್ವಾಸ ವೃದ್ಧಿಸುವ ಸಂವಹನ ಕೌಶಲ್ಯ : ಜೆಸಿಐ ಭಾರತ

ಇಮೇಜ್
ಶಿವಮೊಗ್ಗ: ಪರಿಣಾಮಕಾರಿ ಭಾಷಣೆ ಕಲೆಯು ಆತ್ಮವಿಶ್ವಾಸ ವೃದ್ಧಿಸುವ ಜತೆಯಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಿಸಿಕೊಳ್ಳುವಲ್ಲಿ ಸಹಕಾರಿಯಾಗುತ್ತದೆ ಎಂದು ಬೌದ್ಧಿಕ ಆಸ್ತಿ ಹಕ್ಕುಗಳ ವಕೀಲೆ ಸಾಧ್ವಿ ಸಿ.ಕಾಂತ್ ಹೇಳಿದರು. ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಮತ್ತು ಜೆಸಿಐ ಶಿವಮೊಗ್ಗ ಕಾಮರ್ಸ್ ವತಿಯಿಂದ ಸಾನ್ವಿ ರೆಸಾರ್ಟ್ ನಲ್ಲಿ ಆಯೋಜಿಸಿದ್ದ ಪರಿಣಾಮಕಾರಿ ಭಾಷಣ ಕಲೆ ಹಾಗೂ ವ್ಯಕ್ತಿತ್ವ ನಿರ್ಮಾಣ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಉತ್ತಮ ಮಾತಿನ ಕೌಶಲದಿಂದ ಎಲ್ಲರ ಮನಸ್ಸನ್ನು ಗೆಲ್ಲುವುದರ ಜತೆಯಲ್ಲಿ ಅನೇಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು. ಪ್ರತಿಯೊಬ್ಬರೂ ಜೀವನದಲ್ಲಿ ಗುರಿಯ ಸ್ಪಷ್ಟತೆ ಹೊಂದಿರಬೇಕು. ಸಂವಹನ ಕೌಶಲ್ಯ ಹಾಗೂ ಆತ್ಮವಿಶ್ವಾಸ ಹೊಂದುವುದರಿಂದ ಗುರಿ ಸಾಧಿಸಲು ಸಾಧ್ಯವಿದೆ. ನಿರಂತರವಾಗಿ ಪರಿಶ್ರಮ ವಹಿಸಿ ಮುನ್ನಡೆಬೇಕು. ಜೆಸಿಐ ಆಯೋಜಿಸುವ ಇಂತಹ ಶಿಬಿರಗಳಲ್ಲಿ ಯುವಜನರು ಹೆಚ್ಚು ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು. ಅಂತರಾಷ್ಟ್ರೀಯ ತರಬೇತುದಾರ ಉಡುಪಿಯ ವೇಣುಗೋಪಾಲ್ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ, ಪಾರಿತೋಷಕ ನೀಡಿ ಗೌರವಿಸಿದರು. ವಲಯ ತರಬೇತುದಾರ ಚಂದ್ರಶೇಖರ್ ಮಾತನಾಡಿ ಕಾರ್ಯಕ್ರಮ ನಡೆಸಲು ಪೂರ್ವತಯಾರಿ, ಉದ್ಯೋಗ ಅವಕಾಶ ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂದು ತಿಳಿಸಿದರು. ಜೆಸಿಐ ಶಿವಮೊಗ್ಗ ಕಾಮರ್ಸ್ ಅಧ್ಯಕ್ಷೆ ನಿವೇದಿತಾ ವಿಕಾ...

ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ, ಶಿವಮೊಗ್ಗದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥ್ ರಾವ್ ಸಾವು

ಇಮೇಜ್
 ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಶಿವಮೊಗ್ಗದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥ್ ರಾವ್ ಸಾವನ್ನಪ್ಪಿದ್ದಾರೆ. ನಗರದ ವಿಜಯನಗರದ ನಿವಾಸಿ. ವಿಜಯ ನಗರ,  ಶಿವಮೊಗ್ಗ , ಮಂಜುನಾಥ್ ಮನೆ     ಮಂಜುನಾಥ್‌ ಅವರು ಪತ್ನಿ ಮತ್ತು ಪುತ್ರನೊಂದಿಗೆ ಏ.19ರಂದು ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದರು. ಇವತ್ತು ಕಾ‍ಶ್ಮೀರದ ಪಾಲಗಾಂನಲ್ಲಿ ಬೆಲ್ ಪೂರ್ ಅಂಗಡಿ ಬಳಿ ಭಯೋತ್ಪದನಾ ದಾಳಿ ನಡೆದಿದ್ದು, ಈ ವೇಳೆ ಮಂಜುನಾಥ್‌ ಮೃತಪಟ್ಟಿದ್ದಾರೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.

ಅನ್ಯಾಯಕ್ಕೊಳಗಾದ ವ್ಯಕ್ತಿಗೆ ನ್ಯಾಯ ಕೊಡಿಸಲು ಬದ್ಧ : ಸಿಎಂ ಸಿದ್ದು

ಇಮೇಜ್
         ಬೆಂಗಳೂರಿನ ಸಿವಿ ರಾಮನ್ ನಗರದಲ್ಲಿ ವಾಹನ ಟಚ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡಿಗ ವಿಕಾಸ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿರುವ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್, ನಂತರ ಜಾಲತಾಣದಲ್ಲಿ ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಕನ್ನಡಿಗರ ಸ್ವಾಭಿಮಾನ ಕೆಣಕುವ ದುಷ್ಟತನ ಮೆರೆದಿದ್ದಾರೆ. ಕನ್ನಡಿಗರು ಮಾತೃ ಭಾಷೆಯ ಬಗ್ಗೆ ಅಭಿಮಾನ ಹೊಂದಿರುವವರೇ ಹೊರತು ದುರಭಿಮಾನಿಗಳಲ್ಲ. ಭಾಷೆಯ ವಿಚಾರಕ್ಕೆ ವಿನಾಕರಣ ಇತರರ ಮೇಲೆ ಹಲ್ಲೆ ಮಾಡುವ ಅಥವಾ ನಿಂದಿಸುವ ಸಣ್ಣತನ ಕನ್ನಡಿಗರದ್ದಲ್ಲ.       ದೇಶದ ಮೂಲೆ ಮೂಲೆಗಳಿಂದ ಬಂದು ಇಲ್ಲಿ ನೆಲೆಸಿರುವ ಪ್ರತಿಯೊಬ್ಬರನ್ನು ಗೌರವದಿಂದ ಕಾಣುತ್ತಿರುವ, ಅವರನ್ನೂ ಕನ್ನಡಿಗರೇ ಎಂದು ಪ್ರೀತಿಸುವ ಸಂಸ್ಕೃತಿ ಕನ್ನಡ ಮಣ್ಣಿನದ್ದು. ಇದಕ್ಕೆ ಇತಿಹಾಸ ಸಾಕ್ಷಿ.         ರಾಷ್ಟ್ರೀಯ ಮಾಧ್ಯಮಗಳು ತಮ್ಮ ಜವಾಬ್ದಾರಿ ಮತ್ತು ವೃತ್ತಿಧರ್ಮ ಮರೆತು ಯಾರೋ ಒಬ್ಬ ಮಾಡಿದ ಆಧಾರ ರಹಿತ ಆರೋಪವನ್ನು ಹಿಡಿದುಕೊಂಡು ಇಡೀ ಕರ್ನಾಟಕದ ಘನತೆಗೆ ಮಸಿಬಳಿಯುವ ಕೆಲಸವನ್ನು ಮಾಡಿದ್ದು ನಿಜಕ್ಕೂ ವಿಷಾದನೀಯ. ಇದರಿಂದ ಪ್ರತಿಯೊಬ್ಬ ಕನ್ನಡಿಗನ ಮನಸಿಗೆ ಘಾಸಿಯಾಗಿದೆ.       ಕನ್ನಡಿಗರು ಉದ್ವೇಗ ಅಥವಾ ಪ್ರಚೋದನೆಗಳಿಗೆ ಒಳಗಾಗಿ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು. ಕನ್ನಡಿಗರಿಂದ ಆಯ್ಕೆಯಾದ...

ಎನ್ ರವಿಕುಮಾರ್ ಟೆಲೆಕ್ಸ್ ಅವರಿಗೆ ಕಾಸರಗೋಡು ಪತ್ರಕರ್ತರ ಸಂಘದ "ಹವ್ವಾ ಹಸನ್ ಫೌಂಡೇಶನ್ ಅಬ್ದುಲ್ಲ ಮಾದುಮೂಲೆ ದತ್ತಿ ಪ್ರಶಸ್ತಿ "

ಇಮೇಜ್
         ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ಪ್ರಸಕ್ತ ಸಾಲಿನ  ರಾಜ್ಯಮಟ್ಟದ  "ಹವ್ವಾ ಹಸನ್ ಫೌಂಡೇಶನ್ ಅಬ್ದುಲ್ಲ ಮಾದುಮೂಲೆ ದತ್ತಿ ಪ್ರಶಸ್ತಿ " ಗೆ   ಶಿವಮೊಗ್ಗದ ಹಿರಿಯ ಪತ್ರಕರ್ತ, ಶಿವಮೊಗ್ಗ ಟೆಲೆಕ್ಸ್ ಕನ್ನಡ ದಿನಪತ್ರಿಕೆ ಸಂಪಾದಕರಾದ ಎನ್. ರವಿಕುಮಾರ್ ( ಟೆಲೆಕ್ಸ್ ) ಅವರನ್ನು ಆಯ್ಕೆ ಮಾಡಲಾಗಿದೆ.      ಕರ್ನಾಟಕದ ಪತ್ರಿಕೋದ್ಯಮದಲ್ಲಿ ಎನ್ .ರವಿಕುಮಾರ್ ಅವರ ವೃತ್ತಿಪರತೆ, ಸಾಮಾಜಿಕ ಸೌಹಾರ್ದತೆ ಮತ್ತು  ವೈಚಾರಿಕತೆಯ ಪ್ರತಿಪಾದನೆಯನ್ನು ಗುರುತಿಸಿ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘವು, ಈ ವರ್ಷದ  "ಹವ್ವಾ ಹಸನ್ ಫೌಂಡೇಶನ್ ಅಬ್ದುಲ್ಲ ಮಾದುಮೂಲೆ ದತ್ತಿ ಪ್ರಶಸ್ತಿ " ಗೆ   ಎನ್. ರವಿಕುಮಾರ್ ಅವರನ್ನು ಆಯ್ಕೆ ಮಾಡಿದ್ದು,  ಪ್ರಶಸ್ತಿಯು ನಗದು, ಮತ್ತು ಪ್ರಶಸ್ತಿ ಫಲಕ , ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.         ಮೇ.೩ ರಂದು  ಸ್ವಾಗತ ಸಮಿತಿ ಅಧ್ಯಕ್ಷರಾದ ಕೆ.ಕೆ ಶೆಟ್ಟಿಕುತ್ತಿಕಾರ್ ಅವರ ಅಧ್ಯಕ್ಷತೆಯಲ್ಲಿ ಕಾಸರಗೋಡಿನ ಸೀತಾಂಗೋಳಿ ಎಲೈನ್ಸ್ ಸಭಾಂಗಣದಲ್ಲಿ ನಡೆಯಲಿರುವ  ಸಮಾರಂಭದಲ್ಲಿ ಗಡಿನಾಡು ಪ್ರದೇಶಾಭಿವೃದ್ದಿ  ಪ್ರಾಧಿಕಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ  ಪ್ರಶಸ್ತಿಪ್ರದಾನ ಮಾಡಲ...

ಏಪ್ರಿಲ್ 25ಕ್ಕೆ ದಾಸರಹಳ್ಳಿ ಚಿತ್ರ ಬಿಡುಗಡೆ- ಆಟೋ ಪೋಸ್ಟರ್ ಪ್ರಚಾರಕ್ಕೆ ಚಾಲನೆ

ಇಮೇಜ್
 ಏಪ್ರಿಲ್ 25ಕ್ಕೆ ದಾಸರಹಳ್ಳಿ ಚಿತ್ರ ಬಿಡುಗಡೆ- ಆಟೋ ಪೋಸ್ಟರ್ ಪ್ರಚಾರಕ್ಕೆ ಚಾಲನೆ        ಶಿವಮೊಗ್ಗದ ಉತ್ಸಾಹಿ ಯುವ ತರುಣ, ಉದ್ಯಮಿ, ನಿರ್ಮಾಪಕ  ಪಿ ಉಮೇಶ್ ರವರು ನಿರ್ಮಾಣದಲ್ಲಿ  ಸಿದ್ದಗೊಂಡಿರುವ "ದಾಸರಹಳ್ಳಿ" ಚಲನಚಿತ್ರವು ಇದೇ ತಿಂಗಳು 25ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುತ್ತಿದ್ದು ಚಿತ್ರದ ಜಾಹಿರಾತು ಪ್ರಚಾರಕ್ಕಾಗಿ  ಇಂದು ಆಟೋ ರಿಕ್ಷಾ ಪೋಸ್ಟರ್  ಗಳಿಗೆ  ಸಹಕಾರಿ ಕ್ಷೇತ್ರದ ಧುರೀಣ ಯುವ ಮುಖಂಡ ಕೆ ರಂಗನಾಥ್ ರವರು  ಆಟೋರಿಕ್ಷಾ ಗೆ ಪೋಸ್ಟರ್ ಹಚ್ಚುವ ಮೂಲಕ ಚಾಲನೆ ನೀಡಿದರು ಚಿತ್ರವು ಯಶಸ್ವಿಯಾಗಲೆಂದು  ಶುಭ ಹಾರೈಸಿದ್ದಾರೆ.

ನಗರದ ಹೋಟೆಲ್ ರಾಯಲ್ ಆರ್ಕಿಡ್ ನಲ್ಲಿ ವಲಯ 24, ಜೆಸಿಐ ಭಾರತದ ಭಾಷಣ ಕಲೆ (ಸ್ಪೀಚ್ ಕ್ರಾಫ್ಟ್) ತರಬೇತಿ ಕಾರ್ಯಗಾರ ಆಯೋಜನೆ

ಇಮೇಜ್
  ದಿನಾಂಕ 18-04-2025 ಶುಕ್ರವಾರ ನಗರದ ಹೋಟೆಲ್ ರಾಯಲ್ ಆರ್ಕಿಡ್ ನಲ್ಲಿ ವಲಯ 24, ಜೆಸಿಐ ಭಾರತದ ಭಾಷಣ ಕಲೆ (ಸ್ಪೀಚ್ ಕ್ರಾಫ್ಟ್) ತರಬೇತಿ ಕಾರ್ಯಗಾರವನ್ನು ಜೆಸಿಐ ಶಿವಮೊಗ್ಗ ಚಿರಂತನ ಘಟಕದ ಅಧ್ಯಕ್ಷರಾದ ಜೆಸಿ ರುದ್ರೇಶ್ ಕೋರಿ ಹಾಗೂ ಪದಾಧಿಕಾರಿಗಳು ಆಯೋಜಿಸಿರುತ್ತದೆ. ಈ ತರಬೇತಿ ಕಾರ್ಯಗಾರವನ್ನು ವಲಯ ಅಧ್ಯಕ್ಷರಾದ ಜೆಸಿ ಗೌರೀಶ್ ಭಾರ್ಗವ್ ಉದ್ಘಾಟಿಸಲಿದ್ದಾರೆ.  ಮುಖ್ಯ ತರಬೇತುದಾರರಾಗಿ ರಾಷ್ಟ್ರೀಯ ತರಬೇತುದಾರ ಜೆಸಿ ಸುಧಾಕರ್ ಕಾರ್ಕಳ, ಸಹ ತರಬೇತುದಾರರಾಗಿ ಜೆಸಿ ಮಂಜುನಾಥ್ ಬಳ್ಳುಳ್ಳಿ, ಜೆಸಿ ನರೇಶ್ ಬಿ ಆಗಮಿಸುತ್ತಿದ್ದಾರೆ. ವಿಶೇಷವೆಂದರೆ ಈ ಮೂರು ಜನ ಪ್ರಮಾಣಿಕರಿಸಿದ (ಸರ್ಟಿಫೈಡ್) ರಾಷ್ಟ್ರೀಯ ತರಬೇತುದರಾಗಿರುತ್ತಾರೆ.  ಈ ತರಬೇತಿ ಕಾರ್ಯಗಾರಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಅಭ್ಯರ್ಥಿಗಳು ಬರುತ್ತಿದ್ದು. ಎಲ್ಲರೂ ಜೆಸಿಐ ನ ಸದಸ್ಯರಾಗಿದ್ದು ಎರಡು ವರ್ಷ ನಿರಂತರ ಸದಸ್ಯತ್ವ ಹೊಂದಿದ್ದು, ಪರಿಣಾಮಕಾರಿ ಸಾರ್ವಜನಿಕ ಭಾಷಣ (ಎಫೆಕ್ಟಿವ್ ಪಬ್ಲಿಕ್ ಸ್ಪೀಕಿಂಗ್) ಮತ್ತು ಅಧ್ಯಕ್ಷಸ್ಥಾನ ಮತ್ತು ಸಂಸದೀಯ ಕಾರ್ಯವಿಧಾನ ( ಚರ್ಮನ್ ಶಿಪ್ ಅಂಡ್ ಪಾರ್ಲಿಮೆಂಟರಿ ಪ್ರೊಸೀಜರ್) ಈ ಎರಡು ತರಬೇತಿಯಲ್ಲಿ ಉತ್ತೀರ್ಣರಾಗಿ ಪ್ರಾಮಾಣಿಕರಿಸಬೇಕಾಗಿರುತ್ತದೆ. ಜೆಸಿಐ ವಲಯ ತರಬೇತಿದಾರರಾಗಲು ಬಾಷಣ ಕಲೆ (ಸ್ಪೀಚ್ ಕ್ರಾಫ್ಟ್) ಕಡ್ಡಾಯವಾಗಿ ತರಬೇತಿ ಪಡೆದಿರಬೇಕಾಗಿರುತ್ತದೆ. ಈ ಕಾರ್ಯಕ್ರಮ ವಲಯ ಮಟ್ಟದ ತರಬೇತಿ ಕಾರ್ಯಕ್ರಮವಾಗಿದ್ದು, ...

ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯ ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಒಳ ಮೀಸಲಾತಿ ಕುರಿತು ಜಾಗೃತಿ ಸಭೆ

ಇಮೇಜ್
  ದಿನಾಂಕ 16/04/2025 ರಂದು ಒಳಮೀಸಲಾತಿಗೆ ಆಗ್ರಹಿಸಿ ಕ್ರಾಂತಿಕಾರಿ ರಥಯಾತ್ರೆಯು ಇಂದು ಶಿವಮೊಗ್ಗ ನಗರಕ್ಕೆ ಆಗಮಿಸಿದ್ದು ಹೊಸಮನೆ ಬಡಾವಣೆಯ ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಒಳ ಮೀಸಲಾತಿ ಕುರಿತು ಜಾಗೃತಿ ಸಭೆ ನಡೆಸಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಭಾಸ್ಕರ್ ಪ್ರಸಾದ್ ರವರು ನಾಗಮೋಹನ್ ದಾಸ್ ಆಯೋಗಕ್ಕೆ ಮಾಹಿತಿ ಒದಗಿಸಲು ಜಾತಿ ಗಣತಿಗೆ ಸಮೀಕ್ಷೆಗೆ ಬಂದಾಗ ಮಾದಿಗ ಎಂದೇ ಬರೆಸಿ ಎಂದು ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಯುವಕರ ಸೇವಾ ಸಮಿತಿ ಅಧ್ಯಕ್ಷರಾದ ಸತೀಶ್ ಕೆ.ಉಪಾಧ್ಯಕ್ಷರಾದ ರಾಮ್ ಕುಮಾರ್ ಆರ್ ಜಿಲ್ಲಾ ಆದಿಜಾಂಬವ ಸಂಘದ ಅಧ್ಯಕ್ಷರಾದ ಎ ಕೆ ಅಣ್ಣಪ್ಪ ಮುಖಂಡರಾದ ಶಿವಲಿಂಗಪ್ಪ ಹಾಗೂ ಒಳಮೀಸಲಾತಿ ಹೋರಾಟಗಾರರಾದ ಪ್ರಭುರಾಜ್,ಸುರೇಶ್ ಮಳಲಿಯಪ್ಪ ಹಾಗೂ ಕೆಪಿಸಿ ಪ.ಜಾತಿ ಹಾಗೂ ಪ.ವರ್ಗದ ನೌಕರ ಸಂಘದ  ಕೇಂದ್ರ ಸಮಿತಿ ಮಾಜಿ ಅಧ್ಯಕ್ಷರಾದ ಹೆಚ್ ಆರ್ ಮಲ್ಲಿಕಾರ್ಜುನ ಸ್ವಾಮಿ.ಮುಖಂಡರಾದ  ಗೋಪಾಲಕೃಷ್ಣ ,ಸುನಿಲ್ ಎನ್.ಅನುಪ್ ವಿ.ಮಧುಸೂಧನ್.ರವಿ.ಶಿವು ಪ್ರಸಾದ್.ನಾಗರಾಜ್. ಕಿಶೋರ್ ಕುಮಾರ್ ಜಿ.ಕಿರಣ ಎಂ ಎ.ನರೇಶ್.ಎನ್ ರಾಮಕೃಷ್ಣ.ಅನಿಲ್.ಆರ್.ಯೋಗೇಶ್ ಆರ್. ಶಿವು. ಹೇಮಂತ್.ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು ಕ್ರಾಂತಿಕಾರಿ ರಥಯಾತ್ರೆಯ  ಹೋರಾಟಗಾರಿಗೆ ಸನ್ಮಾನ ಮಾಡಿ ಶುಭ ಹಾರೈಸಿದರು.ಪ್ರಾಧ್ಯಾಪಕರಾದ ರಘು ಮಲ್ಲಣ್ಣ ನವರು ಪ್ರಾಸ್ತಾ...

ಜೆಸಿ ಪ್ರೀಮಿಯರ್ ಲೀಗ್ ಕಪ್ ಕ್ರೀಡೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು : ಜೆಸಿ ಚಂದ್ರಹಾಸ್ ಅಧ್ಯಕ್ಷರು , ಜೆಸಿಸ್ ಸ್ಪೋರ್ಟ್ ಅಂಡ್ ಕಲ್ಚರಲ್ ಕ್ಲಬ್, ಶಿವಮೊಗ್ಗ

ಇಮೇಜ್
ನಗರದ ಝೋನ್ ಸ್ಪೋರ್ಟ್ಸ್ ನಲ್ಲಿ ಬೋಸ್ ಕ್ರಿಕೆಟ್ ಪಂದ್ಯಾವಳಿ ಅಸೋಸಿಯೇಶನ್ ಆಫ್ ಝೋನ್ 24 ಜೆಸಿಐ ಭಾರತದಿಂದ ಯಶಸ್ವಿಯಾಗಿ ಜರಗಿತ್ತು . ಒಟ್ಟು 20 ತಂಡಗಳು ರಾಜ್ಯದ ಮೂಲೆ ಮೂಲೆಗಳಿಂದಲೂ ಬಂದಿದ್ದವು. ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಪ್ರಥಮ ಬಹುಮಾನ ಪಡೆಯಿತು. ಜೆಸಿಐ ಹೊಸನಗರ ಡೈಮಂಡ್ ಎಮ್ ಸಿಸಿ ದ್ವಿತೀಯ ಬಹುಮಾನ ಪಡೆಯಿತು. ಜೆಸಿಐ ಶಿವಮೊಗ್ಗ ವಿವೇಕ್ ತೃತೀಯ ಬಹುಮಾನ ಪಡೆಯಿತು.  ಶಾಸಕರದ ಚನ್ನಬಸಪ್ಪನವರು ಕಾರ್ಯಕ್ರಮವನ್ನು ಉದ್ಘಾಟಿಸಿದರು, ಡಿ ಎಸ್ ಅರುಣ್, ಕಾಂತೇಶ್ ಕೆ ಈ, ಗೌರಿಶ್ ಭಾರ್ಗವ್, ಮತ್ತು ಅನುಷ್ ಗೌಡ ಅತಿಥಿಗಳಾಗಿ ಉಪಸ್ಥಿತರಿದ್ದರು. ಜೆಸಿ ಚಂದ್ರ ಶೆಟ್ಟಿ, ಅಧ್ಯಕ್ಷತೆ ವಹಿಸಿದ್ದರು.  ಜೆಸಿ ಹಿರಿಯರು ಕಿರಿಯರು ಎಲ್ಲರೂ ಸೇರಿಕೊಂಡು ಮಾಸ್ತ್ ಮಜಾ ಮಾಡುತ್ತಾ ಕ್ರೀಡಾಸಕ್ತಿಯನ್ನು ತೋರಿಸಿದರು.  ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ದಾನಿಗಳು ಟೀಮ್ ನ ಮಾಲೀಕರಿಗೆ, ಎಲ್ಲಾ ತಂಡಗಳಿಗೂ ಎಲ್ಲಾ ಜೆಸಿ ಮಿತ್ರರಿಗೂ, ಕ್ಲಬ್ ನಾ ಅಧ್ಯಕ್ಷರಾದ ಜೆಸಿ ಚಂದ್ರಹಸ್ ಶೆಟ್ಟಿ ಅವರು ತುಂಬು ಹೃದಯದ ಧನ್ಯವಾದಗಳು ತಿಳಿಸಿರುತ್ತಾರೆ.

1344 ವರ್ಷಗಳ ಪುರಾತನ ಬಾದಾಮಿ ಚಲುಕ್ಯರ ಒಂದನೇ ವಿಕ್ರಮಾದಿತ್ಯನ ಶಿಲಾ ಶಾಸನ ಪತ್ತೆ

ಇಮೇಜ್
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಮಾದಾಪುರ ಗ್ರಾಮದ ಕೆರೆಯಲ್ಲಿ ಸ್ಥಳೀಯರು ಜೆಸಿಬಿ ಯಂತ್ರದ ಮೂಲಕ ಮಣ್ಣನ್ನು ತೆಗೆಯುವಾಗ ಶಾಸನ ಕಂಡು ಬಂದಿದ್ದು  ಈ ಸ್ಥಳಕ್ಕೆ ಭೇಟಿ ಕೊಟ್ಟು ಕ್ಷೇತ್ರ ಕಾರ್ಯ ಕೈಗೊಂಡು ಬಾದಾಮಿ ಚಲುಕ್ಯರ ಶಿಲಾ ಶಾಸನ ಎಂದು ತಿಳಿಸಿದರು. ಈ ಶಾಸನವು ಐದು ಆಡಿ ಉದ್ದವಿದ್ದು ಹಳೆಗನ್ನಡದ 17 ಸಾಲು ಶಾಸನವನ್ನು ಒಳಗೊಂಡಿದೆ. ಇದು ಕ್ರಿಶ. 7ನೇ ಶತಮಾನದ ಬಾದಾಮಿ ಚಲುಕ್ಯರ ಒಂದನೇ ವಿಕ್ರಮಾದಿತ್ಯನ (ಕ್ರಿ.ಶ.654-681) ಕಾಲದ ಶಾಸನವಾಗಿದೆ. ಒಂದನೇ ವಿಕ್ರಮಾದಿತ್ಯನು ರಾಜ್ಯವಾಳುತ್ತಿದ್ದಾಗ ಅವನ ಅಧಿಕಾರಿ ಸಿಂಘವೆಣ್ಣನು ಬಳ್ಳಾವಿ ನಾಡನ್ನು ಆಳುತ್ತಿದ್ದಾಗ ಪೂರ್ವ ಮರ್ಯಾದೆಯಿಂದ ಪ್ರಜೆಗಳಿಗಾಗಿ ಊರ ಮೇಲಿನ ಕೆಲವು ತೆರಿಗೆಗಳನ್ನು ಮನ್ನಾ ಮಾಡಿರುವುದನ್ನು ಹಾಗೂ ಕೆರೆಯನ್ನು ನಿರ್ಮಿಸಿದ ಓಜರಿಗೆ ಆರು ಮತ್ತರು ಭೂಮಿಯನ್ನು ದಾನ ನೀಡಿರುವುದನ್ನು ಹಾಗೂ ಈ ಭೂಮಿಯು ಬಳ್ಳಾವಿ ಎಪ್ಪತ್ತರ ಒಕ್ಕಲುಗಳಿಗೆ ಸಲ್ಲುತ್ತೆಂದು ಉಲ್ಲೇಖಿಸಲಾಗಿದೆ. ಈ ಶಾಸನ ಶೋಧನೆಯಿಂದ ಬಳ್ಳಾವಿ ಎಪ್ಪತ್ತು ಎಂಬ 70 ಗ್ರಾಮಗಳಿದ್ದ ಆಡಳಿತ ವಿಭಾಗದ ಪ್ರಾಚಿನತೆಯನ್ನು ಹಾಗೂ ಈ ಶಾಸನವು 1344 ವರ್ಷಗಳ ಪುರಾತನವಾದದ್ದು ಎಂದು ತಿಳಿಸುತ್ತದೆ. ಈ ಶಾಸನದ ಮುಂಭಾಗ ಹಾಗೂ ಹಿಂಭಾಗದಲ್ಲಿ ಕ್ರಿ.ಶ.17ನೇ ಶತಮಾನದಲ್ಲಿ ಅಪೂರ್ಣ ಉಬ್ಬು ಶಿಲ್ಪವಿದೆ. ಶಾಸನವನ್ನು ಓದಿಕೊಟ್ಟ ಪ್ರೋ.ಶ್ರೀನಿವಾಸ ಪಾಡಿಗರ, ರಮೇಶ ಹಿರೆಜಂಬೂರು ಕ್ಷೇತ್ರ ಕಾರ್ಯದಲ್ಲಿ ಸಹಕರಿಸಿದ ಡಾ.ರವಿಕ...

ಅತ್ಯಾಚಾರ ಆರೋಪಿಗೆ ಪೊಲೀಸರಿಂದ ಎನ್‌ಕೌಂಟರ್‌ಗೆ ಬಲಿ

ಇಮೇಜ್
  5 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ನಂತರ ಕೊಲೆ ಮಾಡಿದ ಪ್ರಕರಣ ಸಂಬಂಧ ಬಿಹಾರ ಮೂಲದ ಆರೋಪಿಯು ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ. ಆರೋಪಿ ರಕ್ಷಿತ್ ಕಾಂತಿ ಎಂಬಾತ ಪೊಲೀಸರ ಗುಂಡೇಟಿಗೆ ಮಟ್ಯಾಶ್ ಆಗಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ಅವನನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಎಸ್ಕೆಪ್ ಆಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಮೇಲೆ ಫೈರಿಂಗ್ ಮಾಡಿದ್ದು, ಎದೆಗೆ ಗುಂಡು ತಗುಲಿ ಸ್ಥಳದಲ್ಲೇ ಪ್ರಾಣ ಪಕ್ಷಿ ಹಾರಿಹೋಗಿದೆ.      ಇತ್ತ ಘಟನೆಯಲ್ಲಿ ಒಬ್ಬ ಪಿಎಸ್‌ಐ ಮತ್ತು ಇಬ್ಬರು ಸಿಬ್ಬಂದಿಗೆ ಗಾಯಗಳಾಗಿದ್ದು, ಸದ್ಯ ಗಾಯಾಳುಗಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.     ಆರೋಪಿಯು ಬಾಲಕಿಗೆ ಚಾಕ್ಲೀಟ್ ಆಸೆ ತೋರಿಸಿ ಕಿಡ್ನಾಪ್ ಮಾಡಿ ಬಳಿಕ ಅತ್ಯಾಚಾರ ಮಾಡಿದ್ದಾನೆ. ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಘಟನೆ ಖಂಡಿಸಿ ಬಾಲಕಿಯ ಪೋಷಕರು ಹಾಗೂ ಸ್ಥಳೀಯರು ಹುಬ್ಬಳ್ಳಿಯ ಅಶೋಕ್ ನಗರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದು, ಆತನನ್ನು ಎನ್‌ಕೌಂಟರ್ ಮಾಡುವಂತೆ ಆಗ್ರಹಿಸಿದ್ದರು

ನಗರದ ಹೋಟೆಲ್ ಶುಭಂ ನಲ್ಲಿ ಜೇಸಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಉದ್ಘಾಟನೆ

ಇಮೇಜ್
      ಜೆಸಿಐ ಭಾರತ ವಿಶಾಲವಾದ ಸದಸ್ಯತ್ವವನ್ನು ದೇಶದ ಮೂಲೆ ಮೂಲೆಯಲ್ಲಿ ಹೊಂದಿದೆ. ಶಿವಮೊಗ್ಗ ನಗರದಲ್ಲಿ 10 ರಿಂದ 15 ಜೆಸಿಐ ಘಟಕಗಳಿವೆ 400 ರಿಂದ 500 ಜನ ನಗರದಲ್ಲಿ ಜೆಸಿ ಸದಸ್ಯರಿದ್ದಾರೆ. ಜೆಸಿಸ್ ಸ್ಫೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ನಲ್ಲಿ ಜೆಸಿಐ ಘಟಕಗಳಲ್ಲಿ ನೊಂದಣಿ ಆಗಿರುವ ಸದಸ್ಯರಿಗೆ ಮಾತ್ರ ಕ್ಲಬ್ ಸದಸ್ಯರಾಗಲು ಅವಕಾಶವಿರುತ್ತದೆ.     ಈ ಕ್ಲಬ್ ನಲ್ಲಿ ಮುಖ್ಯವಾಗಿ ಶುಭಂ ಹೋಟೆಲ್ ನ ಜೆಸಿ ಚಂದ್ರಹಾಸ್ ಅಧ್ಯಕ್ಷರಾಗಿ, ಜೆಸಿ ಕಿಶೋರ್ ನೆಪ್ಚೂನ್ ಉಪಾಧ್ಯಕ್ಷರಾಗಿ, ಜೆಸಿ ಸುದರ್ಶನ್ ಕಾರ್ಯದರ್ಶಿಯಾಗಿ, ಮತ್ತು ಇತರ 13 ಮಂದಿ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಜೆಸಿಐ ಸದಸ್ಯರುಗಳು ನಿರ್ದೇಶಕರಾಗಿ ನೇಮಕವಾಗಿರುತ್ತಾರೆ. ಜೆಸಿಐ ಹಿರಿಯರನ್ನು ಸಲಹ ಕಮಿಟಿಯಲ್ಲಿ ತೆಗೆದುಕೊಳ್ಳಲಾಗಿರುತ್ತದೆ.    ಕ್ಲಬ್ ನ ಉದ್ದೇಶ ಮಲೆನಾಡ ಕ್ರೀಡೆ ಮತ್ತು ಸಾಂಸ್ಕೃತಿಕ ಕಲೆಗಳನ್ನು ವಿಶ್ವದ ಮೂಲೆ ಮೂಲೆಗೂ ತಲುಪಿಸುವುದಾಗಿದೆ.      ಜೆಸಿಐ ಭಾರತದ ವಲಯ 24ರ ಅಧ್ಯಕ್ಷರಾದ ಜೆಸಿಐ ಸೆನೇಟರ್ ಸಿಎ ಗೌರೀಶ್ ಭಾರ್ಗವವರು ಕಾರ್ಯಕ್ರಮವನ್ನು ಉದ್ಘಾಟಿಸಿದರು, ಜೆಸಿಐ ಭಾರತ ದ ರಾಷ್ಟ್ರೀಯ ಪೂರ್ವ ಉಪಾಧ್ಯಕ್ಷರಾದ ಎಸ್ ವಿ ಶಾಸ್ತ್ರಿ, ವಲಯದ ಪೂರ್ವ ಅಧ್ಯಕ್ಷರಾದ ಜೆಸಿ ವಸಂತ್ ಕುಮಾರ್, ಜೆಸಿ ಪುಷ್ಪ ಶೆಟ್ಟಿ ಇತರ ಹಿರಿಯರು  ಜೆಸಿಸ್ ಸ್ಪೋರ್ಟ್ಸ್ ಅಂಡ್ ಕಲ್ಚರ್ ಕ್ಲಬ್ ನಾ ಬ್ಯಾನರ್ ಮ...

ಶಿವಮೊಗ್ಗ ಸ್ಮಾರ್ಟ್ ಸಿಟಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಇಮೇಜ್
  ಸ್ಮಾರ್ಟ್ ಸಿಟಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಊರೆಲ್ಲಾ ಕೊಳ್ಳೆ ಹೊಡೆದ ನಂತರ ಕೋಟೆ ಬಾಗಿಲು ಮುಚ್ಚಿದ ಹಾಗೆ, ಈ ರೈಡ್ ನಡೆದಿದೆ. ಇನ್ನೇನು  ಸ್ಮಾರ್ಟ್ ಸಿಟಿ ಕ್ಲೋಸ್ ಆಗಿತ್ತೆ ಎಂಬ ಬೆನ್ನಲ್ಲೇ ಭ್ರಷ್ಟನ ಭೇಟೆಯನ್ನ‌ ಲೋಕಾಯುಕ್ತ ಮಾಡಿದೆ.  ಸ್ಮಾರ್ಟ್ ಸಿಟಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಕೃಷ್ಣಪ್ಪ ಎಂಬುವರು ಒ ಅಂಡ್ ಎಂ ಬಿಲ್ ಪಾಸ್ ಮಾಡಲು ಗುತ್ತಿಗೆದಾರನ ಬಳಿ ಹಣದ ಬೇಡಿಕೆಯಿಟ್ಟ ಬೆನ್ನಲ್ಲೇ ಅಸಮಾಧಾನಗೊಂಡ ಗುತ್ತಿಗೆದಾರರು ಲೋಕಾಯುಕ್ತರಿಗೆ ದೂರು ನೀಡಿದ್ದರು.  ದೂರು ನೀಡಿದ ಬೆನ್ನಲ್ಲೇ ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿ ನೇತೃತ್ವದಲ್ಲಿ ದಳಿ ನಡೆದಿದೆ.

ತೇಜಸ್ವಿ ಕೊನೆಯ ದಿನ, ಏನಾಯ್ತ? / Tejaswi's last day, what happened?

ಇಮೇಜ್
ದಿನಾಂಕ 5/04/2007, ಗುರುವಾರದಂದು ತೇಜಸ್ವಿರವರು ನಮ್ಮನ್ನು ಅಗಲಿದ ದಿನ. ಅವರ ಆ ದಿನ ಹೀಗೆ ಕೊನೆಯಾಗಿತ್ತು. ಅಂದು ತೇಜಸ್ವಿ ಕಾರಿನಲ್ಲಿ ತಮ್ಮ ಮೊಮ್ಮಗಳಾದ ವಿಹಾಳನ್ನೂ ಜೊತೆಗೆ ಕರೆದುಕೊಂಡು ಮೂಡಿಗೆರೆ ಪಟ್ಟಣಕ್ಕೆ ಹೊರಟರು. ಅಲ್ಲಿ ತಮ್ಮ ತೋಟದ ಕೆಲಸಗಾರರಿಗೆ ಬಟವಾಡೆ ಮಾಡಲು ಬ್ಯಾಂಕ್ ನಲ್ಲಿ ಒಂದಷ್ಟು ಕೆಲಸ ಮುಗಿಸಿಕೊಂಡು, ತಮ್ಮ ನೆಚ್ಚಿನ ಬಿರಿಯಾನಿ ಕಟ್ಟಿಸಿಕೊಂಡು ಮನೆಗೆ ಹಿಂತಿರುಗಿ ಬರುವಾಗ, ಟಿ.ವಿ.ರಿಪೇರಿ ಅಂಗಡಿಯ ಸುರೇಂದ್ರ ಎಂಬುವವರು ತೇಜಸ್ವಿಯವರನ್ನು ಅಂಗಡಿಗೆ ಕರೆದರಂತೆ.ಅವರು "ಸಾರ್, ಕುವೆಂಪುರವರ ವಿಶ್ವಮಾನವ ಸಂದೇಶವನ್ನು ನಿಮ್ಮ ಬಾಯಲ್ಲೇ ಕೇಳಬೇಕೆಂದಿದ್ದೆ.ಇವತ್ತು ಹೇಳಿ ಸಾರ್" ಅಂದರಂತೆ. ತೇಜಸ್ವಿ ರವರು ವಿವರವಾಗಿ ವಿಶ್ವಮಾನವ ಸಂದೇಶವನ್ನು ಹೇಳಿದರಂತೆ. ಅಂಗಡಿಯವರು "ಸಾರ್, ನನ್ನ ಬಹು ದಿನದ ಆಸೆ ಇಂದು ಪೂರೈಸಿತು" ಎಂದು ತೃಪ್ತಿ ಪಟ್ಟು ಕೊಂಡರಂತೆ. ನಂತರ ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಮನೆಗೆ ಬಂದ ತೇಜಸ್ವಿ ರವರು ತಮ್ಮ ಮನೆಯವರೊಂದಿಗೆ ಸಂಭಾಷಿಸುತ್ತ ಬಿರಿಯಾನಿ ತಿಂದು ಸಂತೋಷ ಪಟ್ಟರು. ಊಟವಾದ ನಂತರ ಏನಾಯ್ತು ಎನ್ನುವುದನ್ನ ರಾಜೇಶ್ವರಿ ತೇಜಸ್ವಿ ರವರ ಮಾತಿನಲ್ಲೇ ತಿಳಿಯೋಣ. "ನಾನೇನೋ ಚೆನ್ನಾಗಿ ಊಟ ಮಾಡಿರುವೆನೆಂದು" ಹೇಳುತ್ತಾ ಹೋದರು. “ಆ ಕೂಡಲೇ ಆಕಾಶದೆತ್ತರಕ್ಕೆ ಬೆಳೆದ ದೊಡ್ಡ ಮರವೊಂದು ಬಿದ್ದ ಸದ್ದಾಯಿತು. ‘ಅಯ್ಯೋ...! ನಿಮ್ಮಣ್ಣ ಬಿದ್ದರೆಂದು ಕಾಣುತ್ತೆ ಕಣೆ ಈ...

ಮಾನ್ಯ ಮುಖ್ಯ ಮಂತ್ರಿಗಳ ಪದಕ ಪಡೆದು ಬಂದ ದಾವಣಗೆರೆ ಜಿಲ್ಲೆಯ ಅಧಿಕಾರಿ ಸಿಬ್ಬಂದಿಗಳಿಗೆ ಡಾ. ರವಿಕಾಂತೇಗೌಡ ಐಪಿಎಸ್ ರವರು ಕಛೇರಿಯಲ್ಲಿ ಅಭಿನಂದಿಸಿದರು

ಇಮೇಜ್
 ದಿನಾಂಕ: 02-04-2025 ರಂದು ಬೆಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯ ಮಂತ್ರಿಗಳ ಪದಕ ಪಡೆದು ಬಂದ ದಾವಣಗೆರೆ ಜಿಲ್ಲೆಯ ಅಧಿಕಾರಿ ಸಿಬ್ಬಂದಿಗಳಿಗೆ ಡಾ. ರವಿಕಾಂತೇಗೌಡ ಐಪಿಎಸ್ ರವರು ಕಛೇರಿಯಲ್ಲಿ ಅಭಿನಂದಿಸಿದರು. ಚಂದ್ರೋದಯ ಪತ್ರಿಕೆ  ನವೀನ್ ತಲಾರಿ, ವ್ಯವಸ್ಥಾಪಕ ಸಂಪಾದಕರು

ಜೆಸಿಐ ಶಿವಮೊಗ್ಗ ಶಾಶ್ವತಿ ಮತ್ತು ಶಾಶ್ವತಿ ಮಹಿಳಾ ವೇದಿಕೆಯಿಂದ ಮಧುರ ಪ್ಯಾರಡೈಸ್ ನಲ್ಲಿ ಮಹಿಳಾ ದಿನಾಚರಣೆ ಹಾಗೂ ಯುಗಾದಿ ಹಬ್ಬದ ಸಂಭ್ರಮ

ಇಮೇಜ್
ಜೆಸಿಐ ಶಿವಮೊಗ್ಗ ಶಾಶ್ವತಿ ಮತ್ತು ಶಾಶ್ವತಿ ಮಹಿಳಾ ವೇದಿಕೆಯಿಂದ ಮಧುರ paradise ನಲ್ಲಿ ಮಹಿಳಾ ದಿನಾಚರಣೆ ಹಾಗೂ ಯುಗಾದಿ ಹಬ್ಬದ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಾಟಕ ಏಕಪಾತ್ರ ಅಭಿನಯ ಫ್ಯಾಷನ್ ಶೋ ಮೊದಲಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಅಧ್ಯಕ್ಷರಾದ ಡಾಕ್ಟರ ಶಾಂತ ಸುರೇಂದ್ರ ಅತಿಥಿಗಳಾಗಿ ವಿಜಯಲಕ್ಷ್ಮಿ ಪಾಟೀಲ್ ಪ್ರೇಮಾ ಚಂದ್ರಶೇಖರ್ ಮೊದಲಾದವರಿದ್ದರು.   ಮಹಿಳೆ ಹೋರಾಟ ಮಾಡಬೇಕೆಂದರೆ ತುಂಬಾ ಕಲಿಯಬೇಕೆಂದು ಇಲ್ಲ ಓಬವ್ವ ಏನು ಕಲಿತಿರಲಿಲ್ಲ ಅವರ ಹೆಸರು ಅಮರವಾಗಿ ಉಳಿಯಿತು ಕಿತ್ತೂರಾಣಿ ಚೆನ್ನಮ್ಮ ಹೋರಾಟದಲ್ಲಿ ದೊಡ್ಡ ವಿಶ್ವಕ್ಕೆ ದಾಖಲೆ ಮಾಡಿದರು ಹಾಗೆ ಚಿಕ್ಕ ವಯಸ್ಸಿನಲ್ಲಿ ಅಮೆರಿಕದ ಮೋ ಲಾಲ ಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ಮಾಡಿದ್ದರು ಮಹಿಳೆ ಸಂತೋಷದಿಂದ ಇರಬೇಕೆಂದರೆ ವಿಶ್ವದಲ್ಲಿ ಮಹಿಳೆಯರಿಗೆ ಗಣ್ಯ ಸ್ಥಾನ ಬೇಕು ಎಂದು ಅಧ್ಯಕ್ಷರ ನುಡಿಯಲ್ಲಿ ಹೇಳಲಾಯಿತು

ವಿಯೆಟ್ನಾಂನ ಡಾನಾಂಗ್‌ನಲ್ಲಿ 29 ನೇ ಜೆಸಿಐ ಏಷ್ಯನ್ ಪೆಸಿಫಿಕ್ ಪ್ರದೇಶ ಸಮ್ಮೇಳನ (ASPAC) ಸೆನೆಟ್ ಗಾಲ್ಫ್ ಇನ್ವಿಟೇಷನಲ್‌ನಲ್ಲಿ ಜೆಸಿಐ ಇಂಡಿಯಾ /JCI India at 29th JCI Asian Pacific Area Conference (ASPAC) Senate Golf Invitational in Danang, Vietnam

ಇಮೇಜ್
JCI India proudly participated in the 29th JCI Asian Pacific Area Conference Senate Golf Invitational held in Danang, Vietnam from March 23-25, 2025. The event brought together JCI leaders for networking, collaboration and leadership discussions. JCI is a growing organization of young people in India and around the world. JCI provides opportunities that empower its members to develop into proactive leaders in the communities around them.  Led by National President JFS Ankur Jhunjhunwala, the delegation included esteemed leaders like JFS Advocates Rekesh Sharma, JFS Ravi Shankar S, JFS Anirudh Sistla, JFJ Dr. N B Harshvardhan Reddy and JFS Bharat N Acharya. The event, which included strategic interactions and a golf tournament, fostered strong relationships among JCI members. JFS Jhunjhunwala emphasized JCI India’s leadership and commitment to global partnerships. JCI India expresses gratitude to JCI Vietnam and JCI Danang for their hospitality and looks forward to future collaborat...