ಕ್ರಿಯೆಟಿವ್ ಬ್ರೈನ್ ಅಕಾಡೆಮಿ ಶಿಬಿರದಲ್ಲಿ ಆಹಾರ ಮೇಳ : ಮಕ್ಕಳಿಂದ ಖಾದ್ಯಗಳ ವ್ಯಾಪಾರ ಬಲು ಜೋರು
ಮಕ್ಕಳ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಪ್ರಾರಂಭವಾಗಿದೆ. ಮಕ್ಕಳನ್ನು ಈ ಬೇಸಿಗೆಯಲ್ಲಿ ಆ್ಯಕ್ಟಿವ್ ಆಗಿರಿಸಲು ಎಲ್ಲೆಡೆ ಬೇಸಿಗೆ ಶಿಬಿರಗಳು ಪ್ರಾರಂಭವಾಗಿವೆ. ಅದರಂತೆ ಗೋಪಾಳದ ವನಸಿರಿ ಪಾಕ್೯ ಹತ್ತಿರದಲ್ಲಿರುವ ಕ್ರಿಯೇಟಿವ್ ಬ್ರೈನ್ ಅಕಾಡೆಮಿ ವತಿಯಿಂದ ಪ್ರಪ್ರಥಮ ಬಾರಿಗೆ 2025ರ ಮಾಚ್೯ 20ರಿಂದ ಮೊದಲ ಬ್ಯಾಚ್ ಆರಂಭವಾಗಿದ್ದು, ಪ್ರತಿನಿತ್ಯವೂ ಮಕ್ಕಳಿಗೆ ಭಗವದ್ಗೀತೆ, ನೃತ್ಯ, ನಾಟಕ, ಪೇಂಟಿಂಗ್, ಕ್ರಾಫ್ಟ್ ನ ಜೊತೆಜೊತೆಗೆ ಮಕ್ಕಳ ಬುದ್ಧಿ ಚುರುಕುಗೊಳಿಸುವ ಚಟುವಟಿಕೆಗಳನ್ನು ಮಾಡಿಸಲಾಗುತ್ತಿದೆ. ಶಿಬಿರವು ಇದಷ್ಟಕ್ಕೆ ಸೀಮಿತವಾಗಿರದೇ, ಇಂದು ಶಿಬಿರದಲ್ಲಿ ವ್ಯಾಪಾರ ವ್ಯವಹಾರದ, ನಗದು ಚಟುವಟಿಕೆಗಳನ್ನು ಮಕ್ಕಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಆಹಾರ ಮೇಳ ಆಯೋಜಿಸಿದ್ದು ವಿಶೇಷ. ಮನೆಯಲ್ಲಿ ಪೋಷಕರು ತಯಾರಿಸಿದ ರುಚಿ-ಶುಚಿಯಾದ ರೊಟ್ಟಿ-ಪಲ್ಯ, ಪಲಾವ್, ಜಾಮೂನು, ಗೋಲಿಬಜೆ, ಫ್ರೈಡ್ ರೈಸ್, ಮಸಾಲ ಮಂಡಕ್ಕಿ, ಪಕೋಡ ಹೀಗೆ ಹಲವು ಖಾದ್ಯಗಳನ್ನು ಅತಿ ದರದಲ್ಲಿ ಮಕ್ಕಳು ವ್ಯಾಪಾರ ಮಾಡಿ ಎಲ್ಲರ ಗಮನ ಸೆಳೆದರು. ನಗುಮುಖದಿಂದ ಉಣಬಡಿಸುವ ಮಕ್ಕಳ ಕೈಯಲ್ಲಿ ಖಾದ್ಯಗಳು ಅದರ ರುಚಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದು, ಬಂದಂತಹ ಪೋಷಕರು ಮಕ್ಕಳ ಬಳಿ ಖಾದ್ಯಗಳನ್ನು ಹಣ ನೀಡಿ ಕೊಂಡು ಭಕ್ಷ್ಯಗಳನ್ನು ಸವಿದರು. ಈ ಮೂಲಕ ಶಿಬಿರದಲ್ಲಿ ಮಕ್ಕಳಿಗೆ ಮಾರುಕಟ್ಟೆಯ ವ್ಯವಹಾರದ ಜ್ಞಾನ ನೀಡಲಾಯಿತು. ಹೀಗೆ ಮೊದಲ ಪ್ರಯತ್ನದಲ್ಲೇ ಕ್ರಿಯೇಟಿವ್ ಬ...