ಕಥೆಗಳು ಕಣ್ಮರೆಯಾಗುತ್ತಿದೆ - ಡಾ. ವಿಜಯಾದೇವಿ


ಶಿವಮೊಗ್ಗ: ಈ ಹೊತ್ತಿಗೆ ಮಕ್ಕಳಿಂದ ಹಿಡಿದು ಎಲ್ಲರಲ್ಲೂ  ನೈತಿಕತೆ ಪ್ರಜ್ಞೆ ಮೂಡಲು ಕಥೆಗಳು ಸಹಾಯಕವಾಗಿದೆ.ಆಧುನಿಕತೆಯಲ್ಲಿ ಕಣ್ಮರೆಯಾಗುತ್ತಿರುವುದು ದುರಂತಕ್ಕೆ ಕಾರಣವಾಗುತ್ತಿದೆ.  ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಎಮಿರೇಟ್ಸ್ ಪ್ರಾಧ್ಯಾಪಕರಾದ ಡಾ. ವಿಜಯ ದೇವಿ ಹೇಳಿದರು. ಅವರು ಇಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಭದ್ರಾವತಿ ಆಕಾಶವಾಣಿ ಕೇಂದ್ರದ ಕೇಳುಗರ ಬಳಗ, ರೇಣುಕಪ್ಪಗೌಡ ಪ್ರತಿಷ್ಠಾನ, ಜಿಲ್ಲಾ ಸರ್ವೋದಯ ಮಂಡಲ, ಕಾಲೇಜಿನ ಕನ್ನಡ ವಿಭಾಗ, ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಆರ್ ಜೆ ಗಣೇಶ್ ಕೆಂಚನಾಲ್ ಅವರ ಬಾನುಲಿಯಿಂದ 'ಕಥೆ ನಿಮ್ಮ ಜೊತೆ' ಪುಸ್ತಕವನ್ನು, ಆಕಾಶವಾಣಿ ಕೇಳುಗರೊಂದಿಗೆ ಬಿಡುಗಡೆ ಮಾಡಿ  ಮಾತನಾಡಿದರು.

ಜಗತಿನಲ್ಲಿ ಜೀವಂತಿಕೆ ನಡೆಯುತ್ತಿರುವುದು ಸೃಜನಶೀಲತೆಯ ಕಾರಣದಿಂದ. ಸಾಹಿತ್ಯದ ಮೂಲ ದ್ರವ್ಯ ಗ್ರಾಮೀಣ ಬದುಕಿನಲ್ಲಿದೆ.  ಅಂತಹ ಗ್ರಾಮೀಣ ಬದುಕಿನ ಸತ್ವವು ಈ ಕತೆ ಪುಸ್ತಕದಲ್ಲಿದೆ. ನೈತಿಕ ಮೌಲ್ಯಗಳ ಅಂತಸತ್ವವವನ್ನು ಕತೆಗಳ ಮೂಲಕ ಬಿತ್ತರಿಸುವುದು ಅಗತ್ಯವಾಗಿದೆ. ಬರಹ ಕೇವಲ ಸಂತಸವನ್ನು ನೀಡುವುದಲ್ಲ. ಬದಲಿಗೆ ವೈಯಕ್ತಿಕ ಜವಾಬ್ದಾರಿ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಕಲಿಸುತ್ತದೆ. ವೃತ್ತಿಯ ಮೂಲಕ ಸಮಾಜದ ಆರೋಗ್ಯವನ್ನು ಬಯಸುವ ಆಶಯ ಬಹಳ ಮುಖ್ಯ. ಕೃತಿಯೊಂದು ಸಮಾಜದ ಮಾನವೀಯ ಮೌಲ್ಯಗಳನ್ನು ಬೆಳೆಸಿದರೆ ಅದಕ್ಕಿಂತಲೂ ಬೇರೆ ಯಾವುದೂ ಇಲ್ಲ. ಓಡುವ ಜಗತ್ತಿನಲ್ಲಿ ಬುದ್ದಿವಂತಿಕೆ ಮತ್ತು ಮಾನವೀಯತೆಗಳು ಮುಖ್ಯವಾಗುತ್ತವೆ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಖ್ಯಾತ ಮನೋವೈದ್ಯ ಕೆ.ಎಸ್ ಪವಿತ್ರ ಮಾತನಾಡಿ ಜನಪದರ ಕತೆಗಳು ಮಾನಸಿಕ ಮತ್ತು ಸಾಮಾಜಿಕ ಆರೋಗ್ಯಕ್ಕೆ ಪೂರಕವಾದುದು. ಕೇಳುವುದರ ಮೂಲಕ ಹೊಸದೊಂದು ಸನ್ನಿವೇಶ ತಂದು ಹೇಳಬಹುದು ಆದರೆ ಬರಹ ಸವಾಲಿನದು. ಅದನ್ನು ಗಣೇಶ ಕೆಂಚನಾಲ ಕೇಳುಗರ ಮೂಲಕ ಸಾಧ್ಯವಾಗಿಸಿದ್ದಾರೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಗಣೇಶ ಕೆಂಚನಾಲ ಕಥೆ ಕಟ್ಟುವ ಕಾರ್ಯಕ್ರಮ ಆಕಾಶವಾಣಿ ಕೇಂದ್ರದಿಂದ 2023 ರಿಂದ ಆರಂಭವಾಗಿದ್ದು ಈ ವರೆಗೆ ಸುಮಾರು ನೂರು ಕತೆಗಳು ಬಿತ್ತರಗೊಂಡಿವೆ. ಎಲ್ಲವೂ ಪುಸ್ತಕ ರೂಪದಲ್ಲಿ ತರಲಾಗುವುದು. ಕಥೆಗಳು ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸುತ್ತವೆ ಎಂದರು. ಯುವಜನತೆ ಒಳ್ಳೆಯದನ್ನು ಕೇಳುವ, ನೋಡುವ, ಓದುವ ಕೆಲಸದಲ್ಲಿ ನಿರತರಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ  ಶಶಿಧರ ಎಸ್ ವಹಿಸಿದ್ದರು. ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಬಸವರಾಜ ನೆಲ್ಲಿಸರ, ಕೇಳುಗ ಬಳಗದ ಸಂಚಾಲಕರಾದ 

ಜಿ ವಿಜಯಕುಮಾರ, ಆರ್ ಮನೋಹರ, ಕನ್ನಡ ವಿಭಾಗದ ಮುಖ್ಯಸ್ಥ ರವಿ ಎನ್., ಪ್ರಾಧ್ಯಾಪಕರಾದ  ಕೆ.ಪಿ ಪವಿತ್ರ, ಡಾ. ಚಿಕ್ಕ ಹೆಗಡೆ, ಮಂಜುಳ, ಶ್ವೇತ ಉಪಸ್ಥಿತಿ ಇದ್ದರು. ಶ್ರೀಮತಿ ನಂದಿನಿ ನಿರೂಪಿಸಿ, ಡಾ. ಮಂಜುನಾಥ ಪ್ರಾರ್ಥಿಸಿ, ಡಾ. ಅಣ್ಣಪ್ಪ ಎನ್. ಮಳೀಮಠ್ ವಂದಿಸಿದರು. ಆಕಾಶವಾಣಿ ಆರ್ ಜೆ ಬಳಗ ಸೇರಿದಂತೆ ಆಕಾಶವಾಣಿ ಕೇಳುಗರು, ಸಾಹಿತ್ಯಾಸಕ್ತರು. ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದ್ದರು.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ