ಪೋಸ್ಟ್‌ಗಳು

ಏಪ್ರಿಲ್, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕುವೆಂಪು ವಿಶ್ವವಿದ್ಯಾನಿಲಯದಿಂದ ಐಜಿಪಿ ಹರ್ಷ ಪಿ.ಎಸ್ ಅವರಿಗೆ ಪಿಎಚ್‌ಡಿ ಪದವಿ ಘೋಷಣೆ

ಇಮೇಜ್
  ಶಿವಮೊಗ್ಗ, ಏಪ್ರಿಲ್ 27 :ಕುವೆಂಪು ವಿಶ್ವವಿದ್ಯಾನಿಲಯವು ಪೊಲೀಸ್ ಮಹಾನಿರೀಕ್ಷಕರಾದ ಹರ್ಷ ಪಿ.ಎಸ್ ಅವರಿಗೆ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದಲ್ಲಿನ ಸಂಶೋಧನೆಗಾಗಿ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ) ಪದವಿಯನ್ನು ಘೋಷಿಸಿದ್ದು, ಮೇ. 06 ರಂದು ಪಿ.ಹೆಚ್.ಡಿ. ಪ್ರದಾನ ಮಾಡಲಿದೆ. ಕುವೆಂಪು ವಿಶ್ವವಿದ್ಯಾನಿಲಯದ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದ ಪ್ರಾಧ್ಯಾಪಕ ಡಾ. ವಿಜಯ ಕುಮಾರ್ ಅವರ ಮಾರ್ಗದರ್ಶನದಲ್ಲಿ ಹರ್ಷ ಪಿ.ಎಸ್ ಅವರು ಐದು ವರ್ಷಗಳ ಕಾಲ ಕ್ಷೇತ್ರ ಆಧಾರಿತ ಅಧ್ಯಯನವನ್ನು ನಡೆಸಿದ್ದಾರೆ. "ನಾಗರಹೊಳೆ, ಬಂಡೀಪುರ ಮತ್ತು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿಗಳ ಜನಸಂಖ್ಯೆಯ ಸ್ಥಿರತೆಯ ಕುರಿತು ಒಂದು ಅಧ್ಯಯನ, ಮಾನವ-ಹುಲಿ ಸಂಘರ್ಷಕ್ಕೆ ವಿಶೇಷ ಉಲ್ಲೇಖದೊಂದಿಗೆ" ಎಂಬ ಶೀರ್ಷಿಕೆಯ ಅವರ ಡಾಕ್ಟರೇಟ್ ಪ್ರಬಂಧವು ಈ ಸಂರಕ್ಷಿತ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ಕ್ಯಾಮೆರಾ ಟ್ರ್ಯಾಪಿಂಗ್ ಮತ್ತು ವಿವರವಾದ ಸಂಘರ್ಷ ತಾಣಗಳ ವಿಶ್ಲೇಷಣೆ ಸೇರಿದಂತೆ ತೀವ್ರವಾದ ಕ್ಷೇತ್ರಕಾರ್ಯವನ್ನು ಆಧರಿಸಿದೆ. ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಔಪಚಾರಿಕವಾಗಿ ಅನುಮೋದಿಸಿ ಪದವಿ ನೀಡಿದೆ. ಮೇ 6, 2026 ರಂದು ನಡೆಯಲಿರುವ ಕುವೆಂಪು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭದಲ್ಲಿ ಪಿಎಚ್‌ಡಿ ಪ್ರಮಾಣಪತ್ರ ನೀಡಲಾಗುವುದು.

ವಿಶ್ವ ಐಪಿ ದಿನ 2026: ಕ್ರೀಡಾ ನಾವೀನ್ಯತೆಗೆ 'ರೆಡಿ, ಸೆಟ್, ಇನ್ನೋವೇಟ್' ಶಕ್ತಿ

ಇಮೇಜ್
– ಲೇಖಕರು: ಅಡ್ವೋಕೇಟ್ ಸಾಧ್ವಿ ಸಿ. ಕಾಂತ್, ಎಸ್.ಸಿ.ಕೆ & ಅಸೋಸಿಯೇಟ್ಸ್, ಶಿವಮೊಗ್ಗ ಪ್ರತಿ ವರ್ಷ ಏಪ್ರಿಲ್ 26 ರಂದು ಆಚರಿಸಲಾಗುವ 'ವಿಶ್ವ ಬೌದ್ಧಿಕ ಆಸ್ತಿ ದಿನ' (World IP Day) ಕೇವಲ ಕಾನೂನು ಕ್ಯಾಲೆಂಡರ್‌ನ ದಿನಾಂಕವಲ್ಲ, ಬದಲಿಗೆ ಸಂಕೀರ್ಣ ಕಾನೂನು ಚೌಕಟ್ಟುಗಳು ಮತ್ತು ಸೃಷ್ಟಿಕರ್ತರ ನಡುವಿನ ಅಂತರವನ್ನು ಕಡಿಮೆ ಮಾಡುವ ಜಾಗತಿಕ ವೇದಿಕೆಯಾಗಿದೆ. 2026ರ "ಐಪಿ ಮತ್ತು ಕ್ರೀಡೆಗಳು: ರೆಡಿ, ಸೆಟ್, ಇನ್ನೋವೇಟ್" ಎಂಬ ಥೀಮ್, ಕ್ರೀಡಾ ಪ್ರಪಂಚದ ಗಡಿಗಳನ್ನು ವಿಸ್ತರಿಸುವ ತೆರೆಯ ಹಿಂದಿನ ನಾವೀನ್ಯಕಾರರನ್ನು (ಎಂಜಿನಿಯರ್‌ಗಳು, ವಿನ್ಯಾಸಕರು ಮತ್ತು ಉದ್ಯಮಿಗಳನ್ನು) ಆಚರಿಸುತ್ತದೆ. ಈ ಜಾಗತಿಕ ಸಂಭಾಷಣೆಯು ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿದೆ; ಏಕೆಂದರೆ, ನಮ್ಮ ದೇಶವು ಸಾಂಪ್ರದಾಯಿಕ 'ಏಕ-ಕ್ರೀಡಾ' ರಾಷ್ಟ್ರದ ಹಣೆಪಟ್ಟಿ ಕಳಚಿ, ಹೊಸ ಫ್ರ್ಯಾಂಚೈಸಿ ಲೀಗ್‌ಗಳು ಮತ್ತು ಐತಿಹಾಸಿಕ ಒಲಿಂಪಿಕ್ ಸಾಧನೆಗಳೊಂದಿಗೆ ಬೃಹತ್ ಕ್ರೀಡಾ ಪುನರುಜ್ಜೀವನವನ್ನು ಕಾಣುತ್ತಿದೆ. ಭಾರತೀಯ ಕ್ರೀಡೆಯ ಭವಿಷ್ಯವು ಕೇವಲ ಆಟಗಾರರ ಪ್ರತಿಭೆಯಿಂದ ಮಾತ್ರವಲ್ಲ, ಅದನ್ನು ಬೆಂಬಲಿಸುವ ದೃಢವಾದ ತಾಂತ್ರಿಕ, ವಾಣಿಜ್ಯ ಮತ್ತು ಐಪಿ ಮೂಲಸೌಕರ್ಯದಿಂದ ನಿರ್ಧರಿಸಲ್ಪಡುತ್ತದೆ ಎಂಬುದಕ್ಕೆ ಈ ವರ್ಷದ ಥೀಮ್ ಒಂದು ಆಚರಣೆ ಹಾಗೂ ಕಾರ್ಯತಂತ್ರದ ಎಚ್ಚರಿಕೆಯ ಗಂಟೆಯಾಗಿದೆ. ಭಾರತೀಯ ಕ್ರೀಡಾಪಟುಗಳಿಗೆ, ಬೌದ್ಧಿಕ ಆಸ್ತಿಯು ಮೈದಾನದ ಹೊರಗಿನ ಅ...

ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಎಸ್‌ಸಿಐ ಕೊಡುಗೆ ಅಪಾರ

ಇಮೇಜ್
ಶಿವಮೊಗ್ಗ: ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಸಂಸ್ಥೆಯು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸುತ್ತಿದೆ ಎಂದು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷ ಎಂ.ಆರ್.ಜಯೇಶ್ ಹೇಳಿದರು. ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಶಿವಮೊಗ್ಗ ಸಂಧ್ಯಾಯಾನ ಲೀಜನ್ ವತಿಯಿಂದ ಆಯೋಜಿಸಿದ್ದ 2026-27ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿರುವ ಅಂತರಾಷ್ಟ್ರೀಯ ಮಟ್ಟದ ಸಂಸ್ಥೆ ಇದಾಗಿದೆ. ದೇಶ ವಿದೇಶಗಳಲ್ಲಿ ಶಾಖೆಗಳನ್ನು ಹೊಂದಿದ್ದು, 5000ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ ಎಂದು ತಿಳಿಸಿದರು. 40 ವರ್ಷ ಮೇಲ್ಪಟ್ಟವರು ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಸೇರಬಹುದು. ಸಮಾಜದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಬಹುದು. ಹೆಚ್ಚು ಸೇವಾ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಬೇಕು ಎಂದು ಹೇಳಿದರು. ಸೀನಿಯರ್ ಸೆನೆಟರ್ ಡಾ. ಎಸ್.ವಿ.ಶಾಸ್ತ್ರಿ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಶಾಖೆಗಳನ್ನು ಆರಂಭಿಸಬೇಕು. ಮುಂದಿನ ಪೀಳಿಗೆಗೆ ಉತ್ತಮ ಸಮಾಜ ನಿರ್ಮಾಣ ಮಾಡಬೇಕು. 17 ವರ್ಷದ ಹಿಂದೆ ಮೊದಲ ಬಾರಿ ಎಸ್‌ಸಿಐ ಘಟಕ ಸ್ಥಾಪನೆ ಮಾಡಲಾಗಿತ್ತು ಎಂದು ತಿಳಿಸಿದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಹಿರಿಯರ ಅನುಭವ ಮತ್ತು ಮಾರ್ಗದರ...

ಪ್ರಾಣಿಗಳ ಆರೈಕೆ ಕಾರ್ಯ ಶ್ಲಾಘನೀಯ

ಇಮೇಜ್
ಶಿವಮೊಗ್ಗ: ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿರುವ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದು ಮಾಜಿ ಗೃಹ ಸಚಿವ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಜೆಸಿಐ ತೀರ್ಥಹಳ್ಳಿ, ಕಾಳಿಕಾಂಬ ಮಾರುತಿ ಸರ್ವಿಸ್ ಸೆಂಟರ್, ಅನಂತ ಆಯುರ್ವೇದ ಟ್ರಸ್ಟ್ ಹಿರೇಸರ ಹಾಗೂ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ತೀರ್ಥಹಳ್ಳಿ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಜಾನುವಾರು ಕುಡಿಯುವ ನೀರಿನ ಟ್ಯಾಂಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೇಸಿಗೆ ಕಾಲಕ್ಕೆ ಪಶುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿರುವುದು ಬಹಳ ಪ್ರಶಂಸನೀಯ ಕಾರ್ಯವಾಗಿದೆ. ಗೋವುಗಳ ಆಶೀರ್ವಾದ ಸಂಘ ಸಂಸ್ಥೆಗಳ ಮೇಲೆ ಸದಾ ಇರುತ್ತದೆ ಎಂದು ತಿಳಿಸಿದರು. ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್ ನಾರಾಯಣ್ ರಾವ್ ಮಾತನಾಡಿ, ಜೆಸಿಐ ತೀರ್ಥಹಳ್ಳಿ ಸಂಸ್ಥೆಯು ಯುವಜನರಲ್ಲಿ ಹಾಗೂ ಸಮಾಜದಲ್ಲಿ ಉತ್ತಮ ಬದಲಾವಣೆಗಳನ್ನು ತರುವುದರಲ್ಲಿ ಯಶಸ್ವಿಯಾಗಿದೆ. ಕಾರ್ಯಕ್ರಮದ ನಿರ್ದೇಶಕ ರಾಜೇಂದ್ರ ಆಚಾರ್ಯ ಉತ್ತಮ ಕೆಲಸ ಮಾಡುತ್ತಿದ್ದು, ಸಮಾಜಕ್ಕೆ ನಿರಂತರವಾಗಿ ಉತ್ತಮ ಕೊಡುಗೆಗಳನ್ನು ನೀಡಬೇಕು ಎಂದು ಹೇಳಿದರು. ಅನಂತ ಆಯುರ್ವೇದ ಟ್ರಸ್ಟ್ ಸಂಸ್ಥಾಪಕ ಡಾ. ಸಮೇಧ ಕಟ್ಟೆ ಮಾತನಾಡಿ, ಜನರಿಗೆ ಆಯುರ್ವೇದ ಎಂದರೆ ಕೇವಲ ಗಿಡಮೂಲಿಕೆ ಎಂದು ಭಾವಿಸಿದ್ದಾರೆ. ಆದರೆ ಆಯುರ್ವೇದದಲ್ಲಿ ಹಲವು ಖನಿಜ ಸಂಪತ್ತುಗಳನ್ನು ಸಹ ಸಂಸ್ಕರಿಸಿ ಉಪಯೋಗಿಸುತ್ತೇವೆ ಎಂದು ತಿಳಿಸಿದರು. ಜೆಸಿಐ ತೀ...

ದೈವಾರಾಧನೆಯಿಂದ ಮನಸ್ಸಿಗೆ ನೆಮ್ಮದಿ

ಇಮೇಜ್
ಶಿವಮೊಗ್ಗ: ದೈವರಾದನೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುವುದರ ಜೊತೆಗೆ ಭಕ್ತಿಯಿಂದ ಪೂಜಿಸಿದಾಗ ಸಕಲ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಗುರು ಸಂದೇಶ ಉಪಾಧ್ಯ ಹೇಳಿದರು. ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ ನಾಗ ಕ್ಷೇತ್ರದಲ್ಲಿ ಸಮಿತಿಯ ವತಿಯಿಂದ ನಾಲ್ಕು ದಿನ ಹಮ್ಮಿಕೊಳ್ಳಲಾದ ಬ್ರಹ್ಮ ಕಲಶೋತ್ಸವ. ಕುಲ ದೇವತಾ ಪ್ರಾರ್ಥನೆ, ಗುರು ಗಣಪತಿ ಪೂಜೆ, ಕಲಾ ತತ್ವ ಹೋಮ, ಆದಿ ವಾಸ ಹೋಮ, ಬ್ರಹ್ಮ ಕುಂಭಾಭಿಷೇಕ ಮತ್ತು ಸಾಮೂಹಿಕ ಆಶ್ಲೇಷ ಬಲಿ  ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿ ವರ್ಷ ನಮ್ಮಲ್ಲಿ ಸಮಿತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಬಡಾವಣೆಯಲ್ಲಿರುವ ಭಕ್ತರು ಮತ್ತು ಭಜನಾ ಮಂಡಳಿಯ ಸದಸ್ಯರು ಸಂಪೂರ್ಣ ಸಹಕಾರ ನೀಡುತ್ತ ಬಂದಿದ್ದಾರೆ. ಇದರಿಂದ ಭಕ್ತರಿಗೆ ಆತ್ಮ ಸಂತೋಷ ಹಾಗೂ ದೈವಭಕ್ತಿ ವೃದ್ಧಿಸುವುದರ ಜೊತೆಗೆ ಕಷ್ಟ ಕಾರ್ಪಣ್ಯಗಳು ದೂರವಾಗುತ್ತವೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ರಾಮಲಿಂಗಪ್ಪ ಮಾತನಾಡಿ, ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ ವಿಶೇಷವಾದ ಮಹಿಮೆ ಇರುವ ಸ್ಥಳವಾಗಿದೆ. ಎಲ್ಲಾ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರುತ್ತದೆ ಎಂದರು. ನಾಗಸುಬ್ರಹ್ಮಣ್ಯನ ಕೃಪೆಯಿಂದ ನಾಲ್ಕು ದಿನವೂ ಭಕ್ತರು ನಿರಂತರವಾಗಿ ಆಗಮಿಸಿ ದೇವರ ಸೇವೆಯಲ್ಲಿ ಪ...

ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಾಂಸ್ಕೃತಿಕ–ಸಾಹಿತ್ಯ ಪರಿಷತ್ತಿನ ಪತ್ರಿಕಾಗೋಷ್ಠಿ

ಇಮೇಜ್
 ಶಿವಮೊಗ್ಗ, ಏಪ್ರಿಲ್ 23: ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ, ವಿಶೇಷವಾಗಿ ಸರ್ಕಾರಿ ಸೇವಾ ವಲಯದಲ್ಲಿ ಒತ್ತಡ (Stress) ಹೆಚ್ಚುತ್ತಿರುವ ಹಿನ್ನೆಲೆ, ನೌಕರರ ಮಾನಸಿಕ ಆರೋಗ್ಯ ಕಾಪಾಡಿ ಅವರ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಮತ್ತು ಸಾಹಿತ್ಯ ಪರಿಷತ್ ವಿವಿಧ ಚಟುವಟಿಕೆಗಳನ್ನು ಕೈಗೊಂಡಿದೆ ಎಂದು ಶಿವಮೊಗ್ಗ ಜಿಲ್ಲಾ ಘಟಕ ತಿಳಿಸಿದೆ. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ ಪದಾಧಿಕಾರಿಗಳು, ನೌಕರರ ಜೀವನದಲ್ಲಿ ಕೇವಲ ಆಡಳಿತಾತ್ಮಕ ಕೆಲಸಗಳಷ್ಟೇ ಅಲ್ಲದೆ, ಅವರಲ್ಲಿರುವ ಅಡಗಿದ ಕಲಾ ಮತ್ತು ಸಾಹಿತ್ಯ ಪ್ರತಿಭೆಗಳನ್ನು ಹೊರತರುವ ಅಗತ್ಯವಿದೆ ಎಂದು ಹೇಳಿದರು. ಸಾಂಸ್ಕೃತಿಕ ಹಾಗೂ ಸಾಹಿತ್ಯ ಚಟುವಟಿಕೆಗಳು ಒತ್ತಡ ನಿವಾರಣೆಗೆ ಸಹಕಾರಿಯಾಗುವುದರ ಜೊತೆಗೆ ನೌಕರರ ಸೃಜನಶೀಲತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಧಾರವಾಡದಲ್ಲಿ ರಾಜ್ಯಮಟ್ಟದ ಸಮ್ಮೇಳನ ಪರಿಷತ್ ವತಿಯಿಂದ 2026ರ ಏಪ್ರಿಲ್ 26ರಂದು ಧಾರವಾಡದ ವಿದ್ಯಾವರ್ಧಕ ಭವನದ ಪಾಟೀಲ ಪುಟ್ಟಪ್ಪ ಮಹಾ ವೇದಿಕೆಯಲ್ಲಿ ರಾಜ್ಯಮಟ್ಟದ ಭವ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಜೊತೆಗೆ ಸಾಂಸ್ಕ...

ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಸಿಗೆ ಶಿಬಿರ ಸಹಕಾರಿ

ಇಮೇಜ್
ಶಿವಮೊಗ್ಗ: ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಲು ಬೇಸಿಗೆ ಶಿಬಿರ ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಸಾಗರ ಘಟಕದ ಸತೀಶ್‌ಕುಮಾರ್ ಹೇಳಿದರು. ಸಾಗರ ತಾಲೂಕಿನ ಹೆಗ್ಗೋಡು ಸಮೀಪದ ನಂದಿಗೋಡಿನಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ಮೊಬೈಲ್, ಟಿವಿಗೆ ದಾಸರಾಗಿರುವ ಮಕ್ಕಳನ್ನು ಹೊರ ತರುವುದು ಕಷ್ಟ. ಆದರೆ ಐದು ದಿನ ಮಕ್ಕಳಿಗೆ ಸಾಹಸ ಕ್ರೀಡೆ, ಈಜು, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮಕ್ಕಳ ಸರ್ವೋತ್ತಮ ಅಭಿವೃದ್ದಿಗೆ ಪೂರಕವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ತಿಳಿಸಿದರು. ಮಕ್ಕಳು ತಂದೆ ತಾಯಿಯಿಂದ ದೂರವಾಗಿ ಪರಿಚಯವೇ ಇಲ್ಲದವರೊಂದಿಗೆ ಸಂತೋಷದಿಂದ ಕಾಲ ಕಳೆಯುವ ಅವಕಾಶ ಮಾಡಿಕೊಟ್ಟೆವು. ಅದರ ಸದುಪಯೋಗ ಚೆನ್ನಾಗಿ ಆಗಿದೆ. ಆರು ದಿನ ಮಕ್ಕಳನ್ನು ಉತ್ತಮವಾಗಿ ನೋಡಿಕೊಳ್ಳಲು ಎಲ್ಲರ ಸದಸ್ಯರ ಸಹಕಾರ ಕಾರಣ ಎಂದು ಹೇಳಿದರು. ರಾಜ್ಯ ಘಟಕದ ಚೇರ್ಮನ್ ಸುದರ್ಶನ್ ಪೈ ಮಾತನಾಡಿ, ಯೂತ್ ಹಾಸ್ಟೆಲ್ಸ್ ಎಲ್ಲ ತರಹದ ಸಮಾಜಮುಖಿ ಕಾರ್ಯಕ್ರಮಗಳನ್ನು ದೇಶಾದ್ಯಂತ ನೆರವೇರಿಸುತ್ತಿದೆ. ಮಕ್ಕಳ ಬೀಸಿಗೆ ಶಿಬಿರ ಯಶಸ್ವಿಯಾಗಿ ನೆರವೇರಿಸಿದ ಸಾಗರ ಘಟಕದ ಎಲ್ಲಾ ಸದಸ್ಯರಿಗೂ ಅಭಿನಂದನೆ ಎಂದು ತಿಳಿಸಿದರು. ರಾಷ್ಟ್ರೀಯ ಉಪಾಧ್ಯಕ್ಷ ರವಿಕುಮಾರ್, ಪುರುಷೋತ್ತಮ್, ರಾಜ್ಯ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್, ಜಯರಾಮ್ ಪೂಜಾರಿ, ಎಸ್.ಎಸ್.ವಾಗೇಶ್, ಸುವರ್ಣ, ಮಲ್ಲಿಕಾರ್ಜುನ ಕಾನೂರ್, ರಾಜು ಅವರು ಭಾಗವಹಿ...

ಶಿವಮೊಗ್ಗ ಟ್ರಾಫಿಕ್ ಸಮಸ್ಯೆ ಸರಿಪಡಿಸಲು ಮನವಿ

ಇಮೇಜ್
ಶಿವಮೊಗ್ಗ: ಟ್ರಾಫಿಕ್ ಸಮಸ್ಯೆ ಸರಿಪಡಿಸುವಂತೆ ಹಾಗೂ ಸೈಬರ್ ಅಪರಾಧಗಳ ನಿಯಂತ್ರಣ ಸಂಬಂಧಿಸಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಅವರೊಂದಿಗೆ ಸಮಾಲೋಚನೆ ನಡೆಸಿದರು. ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಪ್ರಮುಖ ಸಮಸ್ಯೆ, ಟ್ರಾಫಿಕ್ ಸಮಸ್ಯೆ, ಡಿಜಿಟಲ್ ಅರೆಸ್ಟ್, ಸೈಬರ್ ಅಪರಾಧ, ಸಾರ್ವಜನಿಕ ಸುರಕ್ಷತೆ, ಮಾದಕ ದ್ರವ್ಯ ಸಂಬಂಧಿತ ಅಪರಾಧ, ಕಾನೂನುಬಾಹಿರ ಚಟುವಟಿಕೆ, ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಆದ್ಯತೆ ಮೇರೆಗೆ ಮಾಡುವುದು ಇನ್ನೂ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಶಿವಮೊಗ್ಗ ನಗರದ ಸಾಗರ ರಸ್ತೆ, ಆಟೋ ಕಾಂಪ್ಲೆಕ್ಸ್ ಹಾಗೂ ಕಲ್ಲೂರು ಮಂಡ್ಲಿ ಕೈಗಾರಿಕಾ ಪ್ರದೇಶಗಳಲ್ಲಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ರಾಷ್ಟ್ರೀಯ ಹೆದ್ದಾರಿ ಯೋಜನೆಯ ಭಾಗವಾಗಿರುವ ಶಿವಮೊಗ್ಗ-ಮಾಚೇನಹಳ್ಳಿ ರಸ್ತೆಯ ನಿರ್ಮಾಣ ಸಮಸ್ಯೆಗಳು ಇದ್ದು, ಸಂಚಾರ ದಟ್ಟಣೆ ಮತ್ತು ಸುರಕ್ಷತಾ ಅಪಾಯಗಳನ್ನು ಉಂಟುಮಾಡಿದೆ. ಸಂಚಾರ ಸಮಸ್ಯೆ ಸರಿಪಡಿಸಲು ಪೊಲೀಸ್ ಇಲಾಖೆ, ಎನ್‌ಎಚ್‌ಎಐ ಸಮನ್ವಯದ ಅಗತ್ಯವಿದೆ ಎಂದು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮಾತನಾಡಿ, ಜಿಲ್ಲೆಗಳಿಗೆ ಕೈಗಾರಿಕೆಗಳಿಗೆ ಬಂಡವಾಳ ಹರಿದು ಬರಲು ಕಾನೂನು ಮತ್ತು ಸುವ್ಯವಸ್ಥೆ ಬಲಪಡಿಸುವ...

ಭದ್ರಾವತಿ ತಾಲ್ಲೂಕಿನಲ್ಲಿ ಅಕ್ರಮ ಮಣ್ಣು–ಮರಳು ದಂಧೆ – ಅಧಿಕಾರಿಗಳ ಮೌನಕ್ಕೆ ಜನರ ಆಕ್ರೋಶ

ಇಮೇಜ್
ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನಲ್ಲಿ ಅಕ್ರಮ ಮಣ್ಣು–ಮರಳು ದಂಧೆ – ಅಧಿಕಾರಿಗಳ ಮೌನಕ್ಕೆ ಜನರ ಆಕ್ರೋಶ ಶಿವಮೊಗ್ಗ, ಏಪ್ರಿಲ್ 22: ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಅಕ್ರಮವಾಗಿ ಮಣ್ಣು ಮತ್ತು ಮರಳು ಸಾಗಾಟ ಹಾಗೂ ಮಾರಾಟ ಜೋರಾಗಿ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ವಿಶೇಷವಾಗಿ ಅಂತರಗಂಗೆ ಸುತ್ತಮುತ್ತಲಿನ ಕೆರೆ ಪ್ರದೇಶಗಳಲ್ಲಿ ಯಾವುದೇ ಪರವಾನಿಗೆ ಇಲ್ಲದೆ, ನಿಯಮಗಳನ್ನು ಉಲ್ಲಂಘಿಸಿ ಮಣ್ಣು ತೆಗೆಯಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗ್ರಾಮಸ್ಥರ ಪ್ರಕಾರ, ಈ ಅಕ್ರಮ ಚಟುವಟಿಕೆಗಳು ರಾಜಕೀಯ ಆಶ್ರಯದಲ್ಲಿ ನಡೆಯುತ್ತಿವೆ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ತಿಳಿದಿದ್ದರೂ ಮೌನ ವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರಿ ಸಂಬಳ ಪಡೆಯುವ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಸ್ಥಳೀಯರು ಜಿ.ಪಿ.ಎಸ್ (GPS) ಫೋಟೋಗಳು ಮತ್ತು ಸಾಕ್ಷ್ಯಾಧಾರಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ. ಇದರಿಂದಾಗಿ ಪರಿಸರ ಹಾನಿ, ಜಲಮೂಲಗಳ ನಾಶ ಮತ್ತು ಭೂಮಿ ಕುಸಿತದಂತಹ ಸಮಸ್ಯೆಗಳು ಉಂಟಾಗುವ ಭೀತಿ ವ್ಯಕ್ತವಾಗಿದೆ. ಜನರು ತಕ್ಷಣವೇ ಜಿಲ್ಲಾಡಳಿತ ಹಾಗೂ ಗಣಿಗಾರಿಕೆ ಮತ್ತು ಭೂವಿಜ್ಞಾನ ಇಲಾಖೆಯು ಈ ಪ್ರಕರಣವನ...

ಸೌರಮಾನ ಯುಗಾದಿ ಹಾಗೂ ಅಂಬೇಡ್ಕರ್ ಜಯಂತಿ ಪ್ರಯುಕ್ತ, ನಿರಾಶ್ರಿತರ ಕೇಂದ್ರದಲ್ಲಿ ಸಾಂತ್ವನ ಹಾಗೂ ಮನೋರಂಜನಾ ಕಾರ್ಯಕ್ರಮ

ಇಮೇಜ್
  ಕಾರ್ಯಕ್ರಮವನ್ನು ಕಲಗೋಡ ರತ್ನಾಕರ್ ಹಾಗೂ ರತ್ನಾಕುಮಾರಿ ಅವರು ಗಿಡ ನೆಡುವ ಮೂಲಕ ಉದ್ಘಾಟಿಸಿದರು. ನಂತರ ಸಮಿತಿಯ ಅಧ್ಯಕ್ಷರಾದ ಕಲಾವಿದ ಮತ್ತು ಕಲಗೋಡ ರತ್ನಾಕರ್ ಅವರು ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಶ್ರೀ ನಾರಾಯಣ ಗುರು ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರತ್ನಾಕರ್ ಅವರು ನಿರಾಶ್ರಿತರ ಕೇಂದ್ರದ ಕಾರ್ಯವೈಖರಿಯನ್ನು ಪ್ರಶಂಸಿಸಿದರು. ಎನ್.ಡಿ. ಸತೀಶ್ ಅವರು ನಿರಾಶ್ರಿತರಿಗೆ ಸಾಂತ್ವನದ ಮಾತುಗಳ ಮೂಲಕ ಧೈರ್ಯ ತುಂಬಿದರು. ಪರಿಸರ ಕಾರ್ಯಕರ್ತ ತ್ಯಾಗರಾಜ್ ಅವರು ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಕಿರು ಪರಿಚಯ ನೀಡಿದರು. ಭದ್ರಾವತಿ ವಾಸು ಮತ್ತು ತಂಡದವರಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಿಗೆ ಶ್ರೀ ನಾರಾಯಣ ಗುರು ಅವರ ಪುಸ್ತಕಗಳನ್ನು ವಿತರಿಸಲಾಯಿತು. ಜೊತೆಗೆ ನಿರಾಶ್ರಿತರಿಗೆ ಹಣ್ಣುಗಳನ್ನು ಹಂಚಲಾಯಿತು. ಕಾರ್ಯಕ್ರಮದ ಅಂಗವಾಗಿ ಸಮಿತಿಯ ಅಧ್ಯಕ್ಷರು ಸಹ ಗಾಯನ ಮಾಡುವ ಮೂಲಕ ನಿರಾಶ್ರಿತರಿಗೆ ಮನೋರಂಜನೆ ನೀಡಿದರು. ಈ ಕಾರ್ಯಕ್ರಮದ ಯಶಸ್ಸಿಗೆ ಗೌರವಧ್ಯಕ್ಷರು ಭದ್ರಾವತಿ ವಾಸುದೇವನ್, ಉಪಾಧ್ಯಕ್ಷರು ಶಿವಾನಂದ,ಪ್ರಧಾನ ಕಾರ್ಯದರ್ಶಿ ಕೆ. ಶಿವಕುಮಾರ್,ಖಜಾಂಚಿ ಪ್ರಕಾಶ  ಎ,ಸಂಘಟನಾ ಕಾರ್ಯದರ್ಶಿ ಕನಕರಾಜು, ಸಹ ಕಾರ್ಯದರ್ಶಿ ಕುಮಾರ್, ಸುಬ್ರಮಣ್ಯ,ನಿರ್ದೇಶಕರುಗಳಾದ ತಂಗಪ್ಪನ್,ಅನಿಲ್, ಮುರುಳಿಧರನ್,ಕೆ. ರಾಘವೇಂದ್ರ ಸೇರಿದಂತೆ...

ಬಸವ ಜಯಂತಿ ಅಂಗವಾಗಿ ಬಸವ ಕೇಂದ್ರದಲ್ಲಿ ರಕ್ತದಾನ ಶಿಬಿರ. ಬಸವ ಕೇಂದ್ರದ ಶ್ರೀಗಳಿಂದ ರಕ್ತದಾನಕ್ಕೆ ಚಾಲನೆ

ಇಮೇಜ್
ಎಲ್ಲಾ ದಾನಗಳಿಗಿಂತ ಪವಿತ್ರವಾದದ್ದು ರಕ್ತದಾನ, ರಕ್ತದಾನ ಮಾಡುವುದರಿಂದ ನಮ್ಮ ದೇಹ, ಮನಸ್ಸು ಹಾಗೂ ಆರೋಗ್ಯ ಸದೃಢವಾಗಿರುತ್ತದೆ ಎಂದು ಪೂಜ್ಯ ಶ್ರೀ  ಮ. ನಿ. ಪ್ರ. ಡಾ.ಬಸವ ಮರುಳಸಿದ್ದ ಸ್ವಾಮಿಗಳು ನುಡಿದರು. ಅವರು ಇಂದು ಬೆಳಿಗ್ಗೆ ಬಸವ ಕೇಂದ್ರದಲ್ಲಿ ಬಸವ ಜಯಂತಿ ಅಂಗವಾಗಿ  ಬಸವ ಕೇಂದ್ರ,  ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ,  ಅಕ್ಕನ ಬಳಗ,  ಕದಳಿ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು, 26ನೇ ಬಾರಿ ರಕ್ತದಾನ ಮಾಡುವುದರ ಮುಖಾಂತರ ಶಿಬಿರಕ್ಕೆ ಚಾಲನೆ ನೀಡಿದರು. ನಿರಂತರವಾಗಿ ರಕ್ತದಾನ ಮಾಡುವುದರಿಂದ ಒಳ್ಳೆಯ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಹಾಗೂ ರಕ್ತದಾನದಿಂದ ಸಾಕಷ್ಟು ಜನರ ಪ್ರಾಣವನ್ನು ಉಳಿಸಿರುವ ಪುಣ್ಯ ನಮಗೆ ಲಭಿಸುತ್ತದೆ ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡುವುದರ ಮುಖಾಂತರ ಸದೃಢವಾದ ಸಮಾಜವನ್ನು ನಿರ್ಮಾಣ ಮಾಡೋಣ ಎಂದು ಕರೆ ನೀಡಿದರು ಇದೇ ಸಂದರ್ಭದಲ್ಲಿ ಶಿವಮೊಗ್ಗ ಬಸವೇಶ್ವರ ವೀರಶೈವ ಲಿಂಗಾಯಿತ ಸೇವಾ ಸಂಘದ ಅಧ್ಯಕ್ಷರಾದ ಎಸ್ ಎಸ್ ಜ್ಯೋತಿಪ್ರಕಾಶ್. ಬಳ್ಳಕೆರೆ ಸಂತೋಷ್. ಎಸ್ ಪಿ ದಿನೇಶ್. ಎಚ್ ಸಿ ಯೋಗೇಶ್. ರಾಜ್ಯಾಧ್ಯಕ್ಷರಾದ ಷಡಕ್ಷರಿ.. ಡಾಕ್ಟರ್ ಧನಂಜಯ ಸರ್ಜಿ. ಜಿ ವಿಜಯಕುಮಾರ್. ಮಹಾಸಭಾ ಅಧ್ಯಕ್ಷರು ರುದ್ರಮುನಿ ಸಜ್ಜನ್. ರಾಜಶೇಖರ್. ಮಲ್ಲಿಕಾರ್ಜುನ್ ಕಾನೂರ್. ಕೆ ಆರ್ ಸೋಮನಾಥ್. . ಬಸವ ಕೇಂದ್ರದ ಅಧ್ಯಕ್ಷರಾದ ಜಿ ...

ಅಭಿಮಾನಿಗಳ ಮನ ಗೆಲ್ಲುತ್ತಿರುವ ಸುಮಿತ್ ಗಾಯನ

ಇಮೇಜ್
ಶಿವಮೊಗ್ಗ: ಯುವ ಪ್ರತಿಭಾವಂತ ಗಾಯಕ ಶಿವಮೊಗ್ಗದ ಆರ್.ಸುಮಿತ್ ಧ್ವನಿಯಲ್ಲಿ ಶಿಖಂಡಿ ಚಿತ್ರದ ಮೊದಲ ಹಾಡು ಎ2 ಮ್ಯೂಸಿಕ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಶಿವಮೊಗ್ಗದ ಯುವ ಪ್ರತಿಭಾವಂತ ಗಾಯಕ ಆರ್.ಸುಮಿತ್ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಬಹು ನಿರೀಕ್ಷಿತ ಶಿಖಂಡಿ ಚಿತ್ರದ ಮೊದಲ ಹಾಡು ಎ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಸಂಗೀತಾಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಶಿವಮೊಗ್ಗದ ಯುವಕ ಆರ್.ಸುಮಿತ್ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಚಿತ್ರದ ನಿರ್ಮಾಪಕರಾಗಿ ಪೋಲ ಪ್ರವೀಣ್ ಕುಮಾರ್, ನಿರ್ದೇಶಕರಾಗಿ ವಿ.ಗುರುಮೂರ್ತಿ, ಸಹ ನಿರ್ದೇಶಕರಾಗಿ ಜಿ.ಎಂ.ದಯಾಶಂಕರ್ ಕಾರ್ಯನಿರ್ವಹಿಸಿದ್ದಾರೆ. ಕೆಜಿಎಫ್ ಸಾಹಿತಿ ಕಿನ್ನಲ್ ರಾಜ್ ಹಾಡಿನ ಸಾಹಿತ್ಯ ರಚಿಸಿದ್ದಾರೆ. ಶಿವಮೊಗ್ಗದ ಪ್ರತಿಭೆ ಆರ್.ಸುಮಿತ್ ಜಿಲ್ಲೆಯ ಗಾಯಕ ಮೆಲೋಡಿ ರಮೇಶ್ ಅವರ ಪುತ್ರರಾಗಿದ್ದು, ಈ ಹಾಡಿನ ಮೂಲಕ ಸಿನಿ ಸಂಗೀತ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ಜನರಿಗೆ ಹೆಮ್ಮೆಯ ವಿಷಯವಾಗಿದೆ. ಹಾಡಿನಲ್ಲಿ ಗಾಯಕ ಆರ್.ಸುಮಿತ್ ಅವರೊಂದಿಗೆ ಮಾದೇವ ಹಾಡಿನ ಖ್ಯಾತಿಯ ಹಿನ್ನಲೆ ಗಾಯಕಿ ಸ್ನೇಹಾ ರಾಘವನ್ ಸಹ ತಮ್ಮ ಮಧುರ ಧ್ವನಿ ನೀಡಿದ್ದಾರೆ. ಇಬ್ಬರ ಗಾಯನ ಹಾಡಿನ ಮೆಲೋಡಿಯನ್ನು ಮತ್ತಷ್ಟು ಮನಮುಟ್ಟುವಂತೆ ಮಾಡಿದೆ. ಮುಖ್ಯ ಪಾತ್ರಗಳಲ್ಲಿ ಯ...

ಶಿವಮೊಗ್ಗದಲ್ಲಿ ಸ್ಮಾರ್ಟ್ ಸೊಸೆಯಂದಿರು ಚಿತ್ರೀಕರಣ

ಇಮೇಜ್
ಶಿವಮೊಗ್ಗ: ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರ ಆಗಲಿರುವ “ಸ್ಮಾರ್ಟ್ ಸೊಸೆಯಂದಿರು” ಸರಣಿಯ ವಿಶೇಷ ಸಂಚಿಕೆಗಳನ್ನು ಏಪ್ರಿಲ್ 14ರಿಂದ 17ರವರೆಗೆ ಶಿವಮೊಗ್ಗ ಜಿಲ್ಲೆಯ ವಿವಿಧ ಕಡೆಗೆ ಚಿತ್ರೀಕರಣ ನಡೆಸಲಾಯಿತು. ಸ್ಮಾರ್ಟ್ ಸೊಸೆಯಂದಿರು ಕಾರ್ಯಕ್ರಮವು ಅತ್ತೆ ಮತ್ತು ಸೊಸೆ ನಡುವಿನ ಮಧುರ ಬಾಂಧವ್ಯಗಳನ್ನು ಬೆಸೆಯುವ ಒಂದು ಪ್ರಯತ್ನವಾಗಿ ರೂಪುಗೊಂಡಿದೆ. ಚಂದನ ವಾಹಿನಿಯ ತಂಡ ಮನೆ ಮನೆಗಳಿಗೆ ಭೇಟಿ ನೀಡಿ ಅತ್ತೆ ಮತ್ತು ಸೊಸೆಯಂದಿರ ನಡುವಿನ ಸಂಬಂಧಗಳ ಕುರಿತು ಮಾತುಕತೆ, ಆಟ ಹಾಗೂ ಹಾಡುಗಳೊಂದಿಗೆ ಚಿತ್ರೀಕರಣ ನಡೆಸಿದೆ. ಸಂಚಿಕೆಯಲ್ಲಿ ಪಾಲ್ಗೊಂಡವರಿಗೆ ಅಭಿನಂದನಾ ಪತ್ರವನ್ನು ನೀಡಲಾಗುತ್ತದೆ ಎಂದು ಕಾರ್ಯಕ್ರಮದ ನಿರ್ಮಾಪಕ ಎಂ.ಜಿ.ಗೋವಿಂದರಾಜು ಮಾಹಿತಿ ನೀಡಿದರು. ಸ್ಮಾರ್ಟ್ ಸೊಸೆಯಂದಿರು ಶಿವಮೊಗ್ಗದ ವಿಶೇಷ ಸಂಚಿಕೆಗಳ ನಿರ್ಮಾಣದಲ್ಲಿ ನಿರೂಪಕರಾಗಿ ರಾಜಶೇಖರ್.ಎಚ್, ಛಾಯಾಗ್ರಾಹಕರಾಗಿ ಎಸ್.ಲೋಕಾಭಿರಾಮನ್ ಮತ್ತು ಮನೋಜ್ ಆರ್, ಧ್ವನಿಗ್ರಹಣದಲ್ಲಿ ಎಂ.ಮಾರಪ್ಪ ಮತ್ತು ಎಂ.ಬಾಲಚಂದ್ರ ಮತ್ತು ಕಾರ್ಯಕ್ರಮದ ಪರಿಕಲ್ಪನೆ ಹಾಗೂ ನಿರ್ಮಾಪಕರಾಗಿ ಎಂ.ಜಿ.ಗೋವಿಂದರಾಜು ಪಾಲ್ಗೊಂಡು ಯಶಸ್ವಿಯಾಗಿ 10 ಸಂಚಿಕೆಗಳನ್ನು ಪೂರೈಸಿದ್ದಾರೆ. ಈ ಸಂಚಿಕೆಗಳು ಶೀಘ್ರದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9.30ಕ್ಕೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ರಕ್ತಕ್ಕೆ ಪರ್ಯಾಯ ವ್ಯವಸ್ಥೆಯಿಲ್ಲ, ರಕ್ತದಾನ ಅತ್ಯಂತ ಶ್ರೇಷ್ಠದಾನ : ಡಿವೈಎಸ್ ಪಿ ಸಂಜೀವ್ ಕಮಾರ್

ಇಮೇಜ್
ಶಿವಮೊಗ್ಗ : ತಾಂತ್ರಿಕ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಅದೃಷ್ಟವಂತರು. ಇಂದಿನ ವಿಜ್ಞಾನ ತಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಆದರೆ ಇದುವರೆವಿಗೂ ರಕ್ತಕ್ಕೆ ಪರ್ಯಾಯ ವ್ಯವಸ್ಥೆ ದೊರಕಿಲ್ಲ. ರಕ್ತದಾನ ಶ್ರೇಷ್ಠದಾನ ಎಂದು ಡಿವೈಎಸ್ ಪಿ ಸಂಜೀವ್ ಕುಮಾರ್ ಹೇಳಿದರು. ರಾಷ್ಟ್ರೀಯ ಶಿಕ್ಷಣ ಸಮಿತಿ, ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ, ರೋಟರಿ ಕ್ಲಬ್, ಶಿವಮೊಗ್ಗ ಜ್ಯುಬಿಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಯುವ ರೆಡ್ ಕ್ರಾಸ್ ಘಟಕ ಜವಾಹರಲಾಲ್ ನೆಹರು  ತಾಂತ್ರಿಕ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಇಂದು ಜೆ. ಎನ್.ಎನ್.ಸಿ. ಕಾಲೇಜಿನ ಲೈಬ್ರೆರಿ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ-2027 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಉತ್ತಮವಾದ ವಿಚಾರಗಳ ಕಡೆಗೆ ಗಮನ ಹರಿಸಬೇಕು. ಮತ್ತು ಭರಿಸುವ ಹಾಗೂ ದೇಹಕ್ಕೆ ಹಾನಿಕಾರಕವಾಗುವ ವಸ್ತುಗಳಿಂದ ದೂರ ಉಳಿದು, ರಸ್ತೆ ಸುರಕ್ಷಿತ ವಾಹನ ಚಾಲನೆಗೆ ಹೆಚ್ಚಿನ ಮಹತ್ವ ನೀಡಿದಾಗ, ಸಮಾಜ ಸುರಕ್ಷಿತವಾಗಿರಲು ಸಹಕಾರಿ. ಸ್ವಂತ ಉದ್ಯಮ ಸ್ಥಾಪಿಸಿ, ಉದ್ಯೋಗ ದಾತರಾಗಿ. ಆದಾಯ ಪಡೆಯುವುದಕ್ಕಿಂತ, ನೀಡುವುದರಲ್ಲಿ ಹೆಚ್ಚಿನ ಸಂತೋಷವಿದೆ. ವಿದ್ಯಾವಂತರು ಕೃಷಿ ಚಟುವಟಿಗಳಲ್ಲಿ ತಾಂತ್ರಿಕ ನೆರವು ನೀಡಿ ಆರ್ಥಿಕವಾಗಿ ದೇಶ ಸದೃಡವಾಗಲು ಶ್ರಮಿಸಿ ಎಂದು ಎಂದು ಕಿವಿ ಮಾತು ಹೇಳಿದರು. ರಾಷ್ಟ್ರೀಯ ಶಿಕ್ಷಣ ಸಮಿತಿಯ ನಿರ್ದೇಶಕರಾ...

ಬೈಪಾಸ್ ರಸ್ತೆಯಲ್ಲಿ ಅಪಘಾತ

ಇಮೇಜ್
  ಮೂಖ-ಮೂಖಿ ಕಾರುಗಳು ಅಪಘಾತ,  ತುಂಗಾನಗರ ಪೋಲಿಸ್ ಠಾಣೆಯ ವ್ಯಾಪ್ತಿ, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.  

ಶಿವಮೊಗ್ಗ ಜಿಲ್ಲೆಯಲ್ಲಿ ಮರಳು–ಮಣ್ಣು ಕಳ್ಳ ಸಾಗಾಟ: ಅಧಿಕಾರಿಗಳ ಜಾಣ ಕುರುಡು ಪ್ರದರ್ಶನದ ವಿರುದ್ಧ ಗ್ರಾಮಸ್ಥರ ಆಕ್ರೋಶ

ಇಮೇಜ್
  ಶಿವಮೊಗ್ಗ, ಏಪ್ರಿಲ್ 14: ಜಿಲ್ಲೆಯಾದ್ಯಂತ, ವಿಶೇಷವಾಗಿ ಶಿವಮೊಗ್ಗ ತಾಲ್ಲೂಕಿನಲ್ಲಿ ಮರಳು ಮತ್ತು ಮಣ್ಣು ಕಳ್ಳ ಸಾಗಾಟದ ಅಕ್ರಮ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ನಾರಾಯಣಪುರದಿಂದ ಯಡವಲ ಹಾಗೂ ತ್ಯಜವಳ್ಳಿ ಗ್ರಾಮಗಳ ವ್ಯಾಪ್ತಿಯ ಕೆರೆಗಳಲ್ಲಿಯೂ ಅಕ್ರಮವಾಗಿ ಮಣ್ಣು ತೆಗೆದುಕೊಳ್ಳುವ ಕಾರ್ಯ “ಲಾಠಿ ಕಾರ್ಯಕ್ರಮ” ಎಂಬಂತೆ ನಿರ್ಬಂಧವಿಲ್ಲದೆ ಮುಂದುವರಿಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಗ್ರಾಮಸ್ಥರು, ವಿದ್ಯಾವಂತರು ಹಾಗೂ ಸಾಮಾಜಿಕ ಕಾರ್ಯಕರ್ತರು ಈ ವಿಚಾರದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO), ಬೀಟ್ ಪೊಲೀಸ್ ಸಿಬ್ಬಂದಿ, ಖನಿಜ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ತಾಲ್ಲೂಕು ಮತ್ತು ಜಿಲ್ಲಾಡಳಿತ—all ಸೇರಿ “ಜಾಣ ಕುರುಡು” ಪ್ರದರ್ಶನ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಸಮಸ್ಯೆಯ ಸ್ವರೂಪ ಕೆರೆಗಳು, ಹೊಳೆಗಳು ಮತ್ತು ಕೃಷಿ ಭೂಮಿಯಿಂದ ಅನಧಿಕೃತವಾಗಿ ಮಣ್ಣು, ಮರಳು ತೆಗೆದುಕೊಳ್ಳಲಾಗುತ್ತಿದೆ ರಾತ್ರಿಯ ವೇಳೆಯಲ್ಲಿ ಟ್ರ್ಯಾಕ್ಟರ್ ಮತ್ತು ಲಾರಿಗಳ ಮೂಲಕ ಸಾಗಾಟ ಯಾವುದೇ ಪರವಾನಗಿ ಅಥವಾ ನಿಯಮ ಪಾಲನೆ ಇಲ್ಲದೆ ಕಾರ್ಯಾಚರಣೆ ಪರಿಸರ ಮತ್ತು ಜಲಮೂಲಗಳ ಮೇಲೆ ಭಾರಿ ಹಾನಿ ಪರಿಣಾಮಗಳು ಕೆರೆಗಳ ಆಳ ಮತ್ತು ರಚನೆ ಹಾನಿಗೊಳಗಾಗುತ್ತಿದ್ದು, ನೀರಿನ ಸಂಗ್ರಹ ಸಾಮರ್ಥ್ಯ ಕುಸಿತ ಭೂಗರ್ಭ ಜಲಮಟ್ಟ ಕುಸಿತದ ಭೀತಿ ಕೃಷಿಗೆ ನೀರಿನ ಕೊರತೆ ರ...

ನೇರ, ನಿರ್ಭಯ ವ್ಯಕ್ತಿತ್ವದ ಪತ್ರಕರ್ತ ಕಾಮ್ರೇಡ್ ಎಂ. ಲಿಂಗಪ್ಪ

ಇಮೇಜ್
  ಶಿವಮೊಗ್ಗ: ನೇರ, ನಿರ್ಭಯ ವ್ಯಕ್ತಿತ್ವದ ಪತ್ರಕರ್ತ ಕಾಮ್ರೇಡ್ ಎಂ. ಲಿಂಗಪ್ಪ – ಗಣ್ಯರಿಂದ ಭಾವಪೂರ್ಣ ನಮನಗಳು ಶಿವಮೊಗ್ಗ, ಏಪ್ರಿಲ್ 09: ಸಮಾಜದ ನೋವು, ಸಂಕಷ್ಟಗಳನ್ನು ತನ್ನ ಮನಸ್ಸಿನೊಳಗೆ ಹೊತ್ತುಕೊಂಡು, ನೇರವಾಗಿ ಸತ್ಯವನ್ನು ಹೇಳುವ ಧೈರ್ಯ ಹೊಂದಿದ್ದ ಅಪರೂಪದ ಪತ್ರಕರ್ತರಾಗಿದ್ದರು ಕಾಮ್ರೇಡ್ ಎಂ. ಲಿಂಗಪ್ಪ. ಅವರ ಜೀವನವೇ ಹೋರಾಟ, ಅವರ ಮಾತೇ ನ್ಯಾಯದ ಘೋಷಣೆ – ಇಂತಹ ಮಹಾನ್ ವ್ಯಕ್ತಿತ್ವವನ್ನು ಸ್ಮರಿಸುವ ಕ್ಷಣವು ಅಲ್ಲಿ ನೆರೆದ ಪ್ರತಿಯೊಬ್ಬರ ಕಣ್ಣುಗಳಲ್ಲಿ ತೇವ ತುಂಬಿಸಿತು. ನಗರದ ಶ್ರೀ ಕಲಾ ಕೌಶಲ್ಯ ಅಭಿವೃದ್ದಿ ಕೇಂದ್ರದ ಆವರಣದಲ್ಲಿ, ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ ವತಿಯಿಂದ ಆಯೋಜಿಸಲಾದ ಪ್ರಶಸ್ತಿ ಸಮಾರಂಭವು ಕೇವಲ ಗೌರವ ಕಾರ್ಯಕ್ರಮವಲ್ಲ, ಅದು ಒಂದು ಸ್ಮೃತಿ ಯಾತ್ರೆಯಂತಾಗಿತ್ತು. ಲಿಂಗಪ್ಪರ ನೆನಪುಗಳು, ಅವರ ಧೈರ್ಯ, ಅವರ ನಿಷ್ಠೆ – ಪ್ರತಿಯೊಂದು ಮಾತಿನಲ್ಲೂ ಜೀವಂತವಾಗಿದ್ದವು. ಅಕ್ಷರ ಎಜುಕೇಶನ್ ಟ್ರಸ್ಟ್ ಸಂಸ್ಥಾಪಕ ಡಿ. ರವಿಕುಮಾರ್ ಮಾತನಾಡುತ್ತಾ, “ಲಿಂಗಪ್ಪ ಅವರು ಕೇವಲ ಪತ್ರಕರ್ತರಲ್ಲ, ಅವರು ಸಮಾಜದ ಹೃದಯದ ಧ್ವನಿಯಾಗಿದ್ದರು. ಅವರ ಬರಹಗಳಲ್ಲಿ ನೋವು ಇತ್ತು, ಅವರ ಮಾತುಗಳಲ್ಲಿ ನಿಷ್ಠೆ ಇತ್ತು. ಸತ್ಯಕ್ಕಾಗಿ ಅವರು ಯಾವತ್ತೂ ಹಿಂದೆ ಸರಿಯಲಿಲ್ಲ,” ಎಂದು ಭಾವುಕರಾಗಿ ನುಡಿದರು. ಹಿಂದುಳಿದ ವರ್ಗಗಳ ಜಾಗೃತಿ ಸಮಿತಿಯ ಸಂಚಾಲಕ ಆರ್.ಟಿ. ನಟರಾಜ್ ಅವರು ತಮ್ಮ ದಶಕಗಳ ಸ್ನೇಹವನ್ನು ನೆನೆದು, “ಲಿಂಗಪ್ಪ ಅ...

ಶಿವಮೊಗ್ಗದಲ್ಲಿ ರೇಷ್ಮೆ ಇಲಾಖೆಯಿಂದ ಪರಿಸರ ನಾಶ

ಇಮೇಜ್
  ಶಿವಮೊಗ್ಗದಲ್ಲಿ ರೇಷ್ಮೆ ಇಲಾಖೆಯ ಮುಂದೆ ಇರುವ ಮರಗಳನ್ನು ಕಡಿಯುತ್ತಿರುವ ಘಟನೆ ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ. ಸರ್ಕಾರಿ ಇಲಾಖೆಗಳು ಜನರಿಗೆ ಮಾದರಿಯಾಗಬೇಕು; ಆದರೆ ಇಂತಹ ಕ್ರಮಗಳು ಪರಿಸರ ಸಂರಕ್ಷಣೆಯ ವಿರುದ್ಧವಾಗಿವೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮರಗಳು ಕೇವಲ ಹಸಿರು ಸೌಂದರ್ಯವಷ್ಟೇ ಅಲ್ಲ, ಅವು ಗಾಳಿ ಶುದ್ಧೀಕರಣ, ತಾಪಮಾನ ನಿಯಂತ್ರಣ ಹಾಗೂ ಜೀವ ವೈವಿಧ್ಯ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇಂತಹ ಮರಗಳನ್ನು ಅನಾವಶ್ಯಕವಾಗಿ ಕಡಿಯುವುದರಿಂದ ನಗರದಲ್ಲಿ ತಾಪಮಾನ ಹೆಚ್ಚಳ, ಮಾಲಿನ್ಯ ಹೆಚ್ಚಳ ಹಾಗೂ ಪರಿಸರ ಸಮತೋಲನಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಸರ್ಕಾರದ ವಿವಿಧ ಇಲಾಖೆಗಳಿಗೆ ಪರಿಸರ ಸಂರಕ್ಷಣೆಯ ಜವಾಬ್ದಾರಿ ಇದೆ. ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮರಗಳ ಸಂರಕ್ಷಣೆ, ಹೊಸ ಸಸಿ ನೆಡುವುದು ಹಾಗೂ ಹಸಿರು ವಲಯ ವಿಸ್ತರಣೆ ಮಾಡುವ ಕಾರ್ಯಗಳಿಗೆ ಆದ್ಯತೆ ನೀಡಬೇಕು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮರಗಳ ಕಡಿತಕ್ಕೆ ಸ್ಪಷ್ಟನೆ ನೀಡಬೇಕು ಹಾಗೂ ಅಗತ್ಯವಿದ್ದರೆ ಪರ್ಯಾಯವಾಗಿ ಹೆಚ್ಚಿನ ಮರಗಳನ್ನು ನೆಡುವ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಪರಿಸರ ಉಳಿಸುವ ಕಾರ್ಯದಲ್ಲಿ ಸರ್ಕಾರವೂ ಜನರೊಂದಿಗೆ ಕೈಜೋಡಿಸಬೇಕು. - ನವೀನ್ ತಲಾರಿ, ವ್ಯವಸ್ಥಾಪಕ ಸಂಪಾದಕ,  ಚಂದ್ರೋದಯ ಪತ್ರಿಕೆ

ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಲು ಬೇಸಿಗೆ ಶಿಬಿರ ಸಹಕಾರಿ

ಇಮೇಜ್
ಶಿವಮೊಗ್ಗ: ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆ ಬೆಳೆಸುವಲ್ಲಿ ಹಾಗೂ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಬೇಸಿಗೆ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ನವುಲೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮುಖ್ಯಸ್ಥೆ , ರಾಜ ಯೋಗಿನಿ ಬ್ರಹ್ಮಕುಮಾರಿ ಸ್ವಾತಿ ಹೇಳಿದರು. ನವುಲೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಕ್ಕಳಿಗೆ ಆಯೋಜಿಸಿರುವ ವ್ಯಕ್ತಿತ್ವ ವಿಕಸನ ಬೇಸಿಗೆ ಶಿಬಿರದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವ್ಯಕ್ತಿತ್ವ ವಿಕಸನ ಶಿಬಿರವು ಮಕ್ಕಳ ವ್ಯಕ್ತಿತ್ವ ಬೆಳವಣಿಗೆ, ನಡವಳಿಕೆ, ಭಾವನೆ ಮತ್ತು ವರ್ತನೆಗಳನ್ನು ರೂಪಿಸುವ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದರು. ಆತ್ಮವಿಶ್ವಾಸ, ಭಾವನಾತ್ಮಕ ಬುದ್ಧಿವಂತಿಕೆ, ಸಹಾನುಭೂತಿ ಮತ್ತು ಸಂವಹನ ಕೌಶಲ್ಯಗಳನ್ನು ನಿರ್ಮಿಸುವುದು ಶಿಬಿರದಲ್ಲಿ ಸೇರಿವೆ. ಸುರಕ್ಷಿತ ಬಾಂಧವ್ಯ ಬೆಳೆಸುವುದು, ಸಾಮಾಜಿಕ ಕೌಶಲ್ಯ, ಸಕಾರಾತ್ಮಕ ಬಲವರ್ಧನೆ ಒದಗಿಸುವುದು, ಮುಕ್ತ ಸಂವಹನ ಮತ್ತು ಮುಕ್ತ ಆಟಕ್ಕೆ ಅವಕಾಶ ನೀಡುವುದು ಸೇರಿವೆ ಎಂದು ಹೇಳಿದರು. ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ಶಿಬಿರ ಪೂರಕವಾಗಿದೆ. ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಬೇಸಿಗೆ ಶಿಬಿರದ ಪ್ರಯುಕ್ತ ಮಕ್ಕಳಿಗೆ ಯೋಗ, ಚಿತ್ರಕಲೆ, ನೈತಿಕ ಶಿಕ್ಷಣ, ನೆನಪಿನ ನಿರ್ವಹಣೆ, ಆರೋಗ್ಯ, ಶ್ಲೋಕ ವಚನ  ಹಾಗೂ ಇನ್ನಿತರ  ವಿಷಯಗಳ ಬಗ್ಗೆ ವ್ಯಕ್ತಿತ್ವ ವಿಕಸನ ಶಿಬಿರ ಏರ್ಪಡಿಸಲಾಗಿದೆ. ಭಾಗವಹ...

ಗುರುವಾರ ಶಿವಮೊಗ್ಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆ

ಇಮೇಜ್
  ಶಿವಮೊಗ್ಗ, ಏಪ್ರಿಲ್ 07: ಸಮಾಜದ ನಾಡಿಮಿಡಿತ, ಸತ್ಯದ ದಾರಿಯಲ್ಲಿ ಅಚಲವಾಗಿ ನಡೆದವರನ್ನು ಸ್ಮರಿಸುವುದು ನಮ್ಮ ಸಂಸ್ಕೃತಿಯ ಮಹತ್ವದ ಭಾಗ. ಅದೇ ಪರಂಪರೆಯನ್ನು ಮುಂದುವರಿಸುತ್ತಾ, ಹಿರಿಯ ಪತ್ರಕರ್ತರು, ಸಮಾಜಮುಖಿ ಚಿಂತಕರು ಹಾಗೂ ಹೋರಾಟಗಾರರಾಗಿದ್ದ ದಿವಂಗತ ಕಾಮ್ರೇಡ್ ಎಂ ಲಿಂಗಪ್ಪ ಅವರ ಸ್ಮರಣಾರ್ಥವಾಗಿ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುವ ಸಾರ್ಥಕ ಪ್ರಯತ್ನವನ್ನು ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ ಕೈಗೊಂಡಿದೆ ಎಂದು ಸಂಘಟನೆಯ ಅಧ್ಯಕ್ಷ ಗಾರಾ ಶ್ರೀನಿವಾಸ್ ತಿಳಿಸಿದ್ದಾರೆ. ಏಪ್ರಿಲ್ 9ರಂದು ಸಂಜೆ 5 ಗಂಟೆಗೆ ಶಿವಮೊಗ್ಗ ನಗರದ ಆರ್‌ಟಿಓ ಕಚೇರಿ ರಸ್ತೆಯಲ್ಲಿರುವ ಶ್ರೀ ಕಲಾ ಕೌಶಲ್ಯ ಅಭಿವೃದ್ದಿ ಕೇಂದ್ರದ ಆವರಣದಲ್ಲಿ ನಡೆಯಲಿರುವ ಈ ಪ್ರಶಸ್ತಿ ಪ್ರದಾನ ಸಮಾರಂಭವು ಕೇವಲ ಒಂದು ಕಾರ್ಯಕ್ರಮವಲ್ಲ — ಅದು ಒಂದು ಸಂವೇದನಾತ್ಮಕ ಸ್ಮರಣೆಯ ಕ್ಷಣ, ಒಂದು ಪ್ರೇರಣೆಯ ಹಬ್ಬ, ಒಂದು ಮೌಲ್ಯಗಳ ಮೆರಗು. ಕಾಮ್ರೇಡ್ ಎಂ ಲಿಂಗಪ್ಪ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಅಚ್ಚಳಿಯ ಗುರುತು ಮೂಡಿಸಿದ ಮಹನೀಯರು. ನೇರ ಮತ್ತು ನಿರ್ಭೀತಿಯ ಧ್ವನಿಯಾಗಿ, ಸತ್ಯದ ಪರವಾಗಿ ಅಚಲವಾಗಿ ನಿಂತ ಅವರ ವ್ಯಕ್ತಿತ್ವವು ಇಂದಿಗೂ ಹಲವರಿಗೆ ದಾರಿದೀಪವಾಗಿದೆ. 96ನೇ ವಯಸ್ಸಿನವರೆಗೂ ಪತ್ರಿಕಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಕೊನೆಯ ಕ್ಷಣದವರೆಗೂ ದೀನ ದಲಿತರು, ಶೋಷಿತರು, ಕಾರ್ಮಿಕರು ಮತ್ತು ರೈತರಿಗೆ ಧ್ವನಿಯಾಗಿದ್ದರು. ಅ...

ಸಂಗೀತ ಜೀವನೋತ್ಸಾಹ ಮೂಡಿಸುವುದರ ಜೊತೆಗೆ. ಖಿನ್ನತೆಯನ್ನು ಕಡಿಮೆ ಮಾಡುತ್ತದೆ

ಇಮೇಜ್
ಶಿವಮೊಗ್ಗ:  ತಂತ್ರಜ್ಞಾನ ಯುಗದಲ್ಲಿ ನಮ್ಮ ವೃತ್ತಿಯ ಜೊತೆಗೆ ಸಂಗೀತವಿರಬೇಕು. ಸಂಗೀತದಿಂದ ಖಿನ್ನತೆ ದೂರವಾಗುತ್ತದೆ ಹಾಗೂ ಜೀವನೋತ್ಸಾಹ ಮೂಡುತ್ತದೆ. ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಆರ್.ಮಂಜುನಾಥ್ ಹೇಳಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಶಿವಮೊಗ್ಗ ಶಿಕ್ಷಕರ ಗಾಯನ ವೇದಿಕೆಯಿಂದ ಆಯೋಜಿಸಿದ್ದ ಗಾಯನ ಸಮ್ಮಿಲನ 2 ಕಾರ್ಯಕ್ರಮದಲ್ಲಿ ಮಾತನಾಡಿ, ಸುಮಧುರವಾದ ಸಂಗೀತ ಆಲಿಸುವಿಕೆಯು ಮನಸ್ಸನ್ನು ಮುದ ಗೊಳಿಸುವದರ ಜೊತೆಗೆ ಸಂತೋಷಗೊಳಿಸುತ್ತದೆ. ಸಂಗೀತ ಕಲಿಯುವುದರಿಂದ ಏಕಾಗ್ರತೆ ಮತ್ತು ಕ್ರಿಯಾಶೀಲತೆ ವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಶಿಕ್ಷಕರು ಕಾಲಕಾಲಕ್ಕೆ ಈ ರೀತಿ ಕಾರ್ಯಕ್ರಮಗಳನ್ನು ಆಯೋಜಿಸಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಚಿತ್ರಗೀತೆ, ಭಾವಗೀತೆ ಹಾಗೂ ಜಾನಪದ ಗೀತೆಗಳನ್ನು ಹಾಡಬೇಕು. ಇಂತಹ ಸಾಂಸ್ಕೃತಿಕ ವೇದಿಕೆಗಳು ಅತ್ಯಂತ ಅವಶ್ಯಕ ಎಂದರು. ಸಂಗೀತ ಆಸಕ್ತರು ಗುರುಗಳ ಮಾರ್ಗದರ್ಶನದಲ್ಲಿ ನಿರಂತರ ಅಭ್ಯಾಸ ಮಾಡಬೇಕು. ಜೀವನ ಸುಂದರಗೊಳಿಸಲು ಸಂಗೀತ ನೆರವಾಗುತ್ತದೆ ಎಂದು ಹೇಳಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಸಂಗೀತ ಆಲಿಸುವುದರಿಂದ ಮನಸ್ಸು ಸಂತಸಗೊಂಡು ಒತ್ತಡಮುಕ್ತರಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಸಂಗೀತ ಮನುಷ್ಯನ ಮನಸ್ಸಿಗೆ ಮತ್ತು ತರುವ ದಿವ್ಯ ಔಷದ. ಸಂಗೀತಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಎಂದು ತಿಳಿ...

ಶ್ರೀ ಬಸವೇಶ್ವರ ಸ್ವಾಮಿ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿ ಮಹಾ ರಥೋತ್ಸವ

ಇಮೇಜ್
  ಶ್ರೀ ಅಕ್ಕನ ಹುಣ್ಣಿಮೆಯ ಪ್ರಯುಕ್ತ  ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘ ದ ವತಿಯಿಂದ  ಶ್ರೀ ಬಸವೇಶ್ವರ ಸ್ವಾಮಿ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮತ್ತು ಮಹಾಪೂಜೆ ಕಾರ್ಯಕ್ರಮ ನೆರವೇರಿತು ಹಾಗೆ ಶರಬಿ ಗುಗ್ಗುಳ ಮತ್ತು ಕೆಂಡದಾರ್ಚನೆ ಕಾರ್ಯಕ್ರಮದೊಂದಿಗೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಓಕಳಿ ಮತ್ತು ರಾಜಭೀದಿ ಉತ್ಸವ ನೆರವೇರಿತು ಮೆರವಣಿಗೆಯಲ್ಲಿ  ಶ್ರೀ ಅಕ್ಕಮಹಾದೇವಿಯ ಭಾವಚಿತ್ರದ ಉತ್ಸವ ನೆರವೇರಿತು ಹಾಗೆ ಬಸವೇಶ್ವರ ಸ್ವಾಮಿ ರಥೋತ್ಸವದಲ್ಲಿ ದಿವಂಗತ ಉಡುಗಣಿ ಶೇಖರಪ್ಪ ಮತ್ತು ಮಕ್ಕಳು ಪಾನಕ ಸೇವೆ ನೆರವೇರಿಸಿದರು ಕೋಸಂಬರಿ ಸೇವೆಯನ್ನು ದಿವಂಗತ ಬಿಜಿ ಮಲ್ಲೇಶಪ್ಪ ಹಾಗೂ ದೇವಂಗತ ಬಿಜಿ ಗಂಗಾಧರಪ್ಪ ಮಕ್ಕಳು ದಿವಂಗತ ಎಸ್ ಪಿ ಶಾಂತಪ್ಪ ಮತ್ತು ಮಕ್ಕಳು ಇವರುಗಳು ನೆರವೇರಿಸಿ ಕೊಟ್ಟರು ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್ ಎಸ್ ಜ್ಯೋತಿಪ್ರಕಾಶ್. ನಿರ್ದೇಶಕರಾದ ಪಿ ರುದ್ರೇಶ್. ಮಹೇಶ್ ಮೂರ್ತಿ. ಮರುಳೆಶ್. ಹೆಚ್ ವಿ ಮಹೇಶ್ವರಪ್ಪ. ಶಿವಾನಂದ್. ಮಹೇಶ್ವರಪ್ಪ ಹಾಗೂ ಸಂಘದ ಪದಾಧಿಕಾರಿಗಳು ಹಾಗೂ ರುದ್ರಪ್ಪ ಚಿಲೂರು  ಸಮಾಜದ ಭಕ್ತರು ಉಪಸ್ಥಿತರಿದ್ದರು ಕಾರ್ಯಕ್ರಮದ ನಂತರ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಯಿತು

ಇಂದಿನ ಒತ್ತಡದ ಬದುಕಿಗೆ ಆರೋಗ್ಯಪೂರ್ಣ ನಿತ್ಯ ಧ್ಯಾನದ ಅವಶ್ಯಕತೆ.... ಶ್ರೀ ಎಸ್ ಎಸ್ ಜ್ಯೋತಿಪ್ರಕಾಶ್

ಇಮೇಜ್
  ಇಲ್ಲಿನ   ವಿನೋಬನಗರ -ಕಾಶಿಪುರದ ಕಲ್ಲಳ್ಳಿ  ಶ್ರೀ ಶಿವಗಂಗಾ ಯೋಗ ಕೇಂದ್ರದ  ಪಿರಮಿಡ್ ನಲ್ಲಿ ಶ್ರೀ ಹಾಲಯ್ಯ ವಿರಕ್ತ ಮಠ ರವರ ನೇತೃತ್ವದಲ್ಲಿ ಜರುಗಿದ ಧ್ಯಾನ ಕಾರ್ಯಕ್ರಮದಲ್ಲಿ  ರಾಘವ ಶಾಖೆಯ ಯೋಗ ಅಭ್ಯಾಸಿಗಳೊಂದಿಗೆ ಭಾಗವಹಿಸಿ ಯೋಗ ಕೇಂದ್ರದ ಟ್ರಸ್ಟಿ ಎಸ್.ಎಸ್. ಜ್ಯೋತಿಪ್ರಕಾಶ್ ರವರು ಮಾತನಾಡಿದರು  ಅನುಭವ ಪಡೆದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ ಪ್ರಸ್ತುತ ಸನ್ನಿವೇಶದಲ್ಲಿ ಪ್ರತಿಯೊಬ್ಬರಿಗೂ  ಧ್ಯಾನ ಮತ್ತು ಯೋಗದ ಅವಶ್ಯಕತೆ ಇದೆ. ಮಕ್ಕಳು ವಿದ್ಯಾರ್ಥಿಗಳು ವೃತ್ತಿಪರರು ವ್ಯಾಪಾರಸ್ಥರು ಕೈಗಾರಿಕೋದ್ಯಮಿಗಳು ತಮ್ಮ ಕೆಲಸ ಕಾರ್ಯದ ಜೊತೆಗೆ ಆರೋಗ್ಯವನ್ನು  ಕಾಪಾಡಿಕೊಂಡು ತಮ್ಮ ಕ್ಷೇತ್ರದಲ್ಲಿ  ಯಶಸ್ವಿಯಾಗಲು ಮನಸು ಶಾಂತಿಯಿಂದ  ಉಲ್ಲಾಸದಿಂದ ಇರುವುದು ಬಹು ಮುಖ್ಯ. ದಿನನಿತ್ಯವೂ ಧ್ಯಾನ ಯೋಗ ದಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಲು ಸ್ವಲ್ಪ ಸಮಯ ಮೀಸಲಾಗಿಡಬೇಕು ಮತ್ತು ಮಕ್ಕಳಿರುವಾಗಲೇ ಈ ಅಭ್ಯಾಸವನ್ನು ರೂಡಿಸುವುದು ಪೋಷಕರ ಕರ್ತವ್ಯ ಎಂದರು  ಶ್ರೀ ಹಾಲಯ್ಯ ವಿರಕ್ತಮಠ ರವರುಮಾತನಾಡುತ್ತಾ ನೂರಕ್ಕೂ ಹೆಚ್ಚು ಧ್ಯಾನ ಪದ್ಧತಿಗಳಿವೆ, ಆನಪಾನಸತಿ ಧ್ಯಾನದ ಸರಳ ವಿಧಾನವನ್ನು ತಿಳಿಸಿ, ಯೋಗಾಚಾರ್ಯ ಶ್ರೀ ಸಿ. ವಿ.ರುದ್ರಾರಾರಾಧ್ಯರ  ನೇತೃತ್ವದಲ್ಲಿ ನಿರ್ಮಾಣವಾಗಿರುವ ಪಿರಮಿಡ್ ಧ್ಯಾನಕ್ಕೆ ಪೂರಕವಾಗಿದೆ ಎಂದು ತಿಳಿಸಿದರು.  ಇದೆ ಸಂದರ್ಭದಲ್ಲಿ...

ಪ್ರತಿ ನಿತ್ಯ ವ್ಯಾಯಾಮ ಮಾಡುವುದರಿಂದ ಸದೃಢ ಆರೋಗ್ಯ

ಇಮೇಜ್
ಶಿವಮೊಗ್ಗ: ಆಪದ್ ಮಿತ್ರ ಸ್ವಯಂ ಸೇವಕರು ದೈಹಿಕವಾಗಿ ಸಧೃಡವಾಗಿರಲು ಏರೋಬಿಕ್ಸ್ ವ್ಯಾಯಾಮ ತುಂಬಾ ಸಹಕಾರಿ ಎಂದು ಏರೋಬಿಕ್ಸ್ ತರಬೇತುದಾರರಾದ ಸುನೀತಾ ಚೇತನ್ ಹೇಳಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ರಾಜ್ಯ ಸಂಸ್ಥೆ, ಶಿವಮೊಗ್ಗ ಜಿಲ್ಲಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಗ್ನಿ ಮತ್ತು ತುರ್ತು ಸೇವಾ ಇಲಾಖೆ, ಪೊಲೀಸ್ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಸ್ಕೌಟ್ ಭವನದಲ್ಲಿ ಜಿಲ್ಲೆಯ ವಿವಿಧ ಪ್ರಥಮದರ್ಜೆ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಯುವ ವಿಪತ್ತು ಮಿತ್ರ ತರಬೇತಿಯಲ್ಲಿ ಮಾತನಾಡಿದರು. ಏರೋಬಿಕ್ಸ್ ವ್ಯಾಯಾಮ ಎಂದರೆ ಆಮ್ಲಜನಕವನ್ನು ಸರಿಯಾಗಿ ಬಳಸುತ್ತ ಹೃದಯ ಮತ್ತು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುವ ದೈಹಿಕ ಚಟುವಟಿಕೆ. ಇದು ತೂಕ ಇಳಿಕೆ, ಬಲವರ್ಧನೆ ಮತ್ತು ಧೀರ್ಘಕಾಲದ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ನಡೆಯುವುದು, ಜಾಗಿಂಗ್, ಈಜು, ಸೈಕ್ಲಿಂಗ್ ಮತ್ತು ಜುಂಬಾ ( ನೃತ್ಯ ) ಜನಪ್ರಿಯ ವ್ಯಾಯಾಮವಾಗಿದೆ ಎಂದು ತಿಳಿಸಿದರು. ಪ್ರತಿದಿನ 30 ನಿಮಿಷ ಕಾಲ ಮಾಡಿದರೆ  ಸದೃಢ ಆರೋಗ್ಯ ಹೊಂದಬಹುದು ಎಂದು ಸಲಹೆ ನೀಡಿದರು. ಶಿಬಿರಾರ್ಥಿಗಳಿಗೆ ಬಿಗಿತ ಮತ್ತು ಸಡಿಲಿಕೆ, ಬಾಗುವಿಕೆ, ಶಾಡೋ ಬಾಕ್ಸಿಂಗ್, ಹೈ ನೀಸ್, ಫ್ರಂಟ್ ಕಿಕ್ಸ್, ಸೈಡ್ ಟೋ ಟಚ್ ಮತ್...