ಶಿವಮೊಗ್ಗದಲ್ಲಿ ಮಕ್ಕಳಿಗಾಗಿ “ಸಮ್ಮರ್ ಕ್ಲಬ್” ಆರಂಭ – ವಿವಿಧ ಸೃಜನಾತ್ಮಕ ಚಟುವಟಿಕೆಗಳು


ಶಿವಮೊಗ್ಗ: ಬೇಸಿಗೆ ರಜೆಗಳನ್ನು ಮಕ್ಕಳಿಗೆ ಸಾರ್ಥಕವಾಗಿ ಕಳೆಯಲು ವಿನೋಬನಗರದಲ್ಲಿರುವ Pebbles Preschool ವತಿಯಿಂದ “Summer Club” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಶಿಬಿರವು ಏಪ್ರಿಲ್ 1ರಿಂದ ಏಪ್ರಿಲ್ 15ರವರೆಗೆ ನಡೆಯಲಿದೆ.

2 ರಿಂದ 10 ವರ್ಷ ವಯಸ್ಸಿನ ಮಕ್ಕಳಿಗಾಗಿ ರೂಪಿಸಲಾದ ಈ ಶಿಬಿರದಲ್ಲಿ ವಿವಿಧ ಆಕರ್ಷಕ ಚಟುವಟಿಕೆಗಳನ್ನು ಒಳಗೊಂಡಿದೆ. ಮಕ್ಕಳ ಸೃಜನಶೀಲತೆ ಮತ್ತು ಮನೋವಿಕಾಸವನ್ನು ಉತ್ತೇಜಿಸುವ ಉದ್ದೇಶದಿಂದ DIY & Crafting, STEM ಚಟುವಟಿಕೆಗಳು, Brain Gym, Photography, Fire-free Recipes, Zumba Sessions ಹಾಗೂ ಮನರಂಜನಾ ಆಟಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮಕ್ಕಳು ಆಟದ ಮೂಲಕ ಕಲಿಯುವಂತೆ ವಿನ್ಯಾಸಗೊಳಿಸಿದ ಈ ಶಿಬಿರವು ಅವರ ಆತ್ಮವಿಶ್ವಾಸ, ಕಲ್ಪನೆಶಕ್ತಿ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರಥಮ ಬ್ಯಾಚ್‌ಗೆ ಈಗಾಗಲೇ ನೋಂದಣಿ ಪ್ರಾರಂಭವಾಗಿದ್ದು, ಆಸಕ್ತ ಪೋಷಕರು ತಮ್ಮ ಮಕ್ಕಳಿಗೆ ಶೀಘ್ರದಲ್ಲೇ ಆಸನಗಳನ್ನು ಕಾಯ್ದಿರಿಸಬಹುದು ಎಂದು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು: 9663332210

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ