ಶಿವಮೊಗ್ಗದಲ್ಲಿ ಭೂ ಮಾಫಿಯಾ, ರೌಡಿಗಳಿಗೆ ಫಂಡಿಂಗ್, ಸಮಗ್ರ ತನಿಖೆಗೆ ಟಾಸ್ಕ್ ಪೋರ್ಸ್ ಸಮಿತಿ ರಚಿಸಲು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಒತ್ತಾಯ
ಶಿವಮೊಗ್ಗ ನಗರದಲ್ಲಿ ಲ್ಯಾಂಡ್ ಲಿಟಿಗೇಶನ್ (ಭೂ ಮಾಫಿಯಾ) ನಾಗರೀಕ ಆತಂಕವನ್ನು ಹುಟ್ಟು ಹಾಕುತ್ತಿದೆ, ದುರ್ಬಲ ವರ್ಗದವರ ಸ್ವಾಧೀನಾನುಭವದ ಸ್ವತ್ತುಗಳು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಯ ಸ್ವತ್ತುಗಳು, ತಾಲ್ಲೂಕಿನ ಮೀಸಲು ಭೂಮಿಗಳಾದ ದನಕ್ಕೆ ಮುಪತ್ತು, ಗ್ರಾಮ ಠಾಣಾ, ಕೆರೆ ಜಾಗಗಳು, ಸ್ಮಶಾನಗಳು, ವಾರಸುದಾರರಿಲ್ಲದ ವ್ಯತ್ಯಾಸದ ವಿಸ್ತೀರ್ಣದ ಭೂಮಿ, ಸರಕಾರಿ ಪಡೆ ಭೂ ಪ್ರದೇಶಗಳು ಇದೀಗ ಅನಾಹುತಕಾರಿ ಜಾಲಗಳ ಭೂ ಕಬಳಿಕೆಗೆ ಒಳಗಾಗುತ್ತಿರುವುದು ಹಾಡು ಹಗಲೇ ದರೋಡೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣವು ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಗುರುದತ್ ಹೆಗಡೆ ಅವರ ಗಮನಕ್ಕೆ ತರಬಯಸುತ್ತದೆ. ಟಾಸ್ಕ್ ಪೋರ್ಸ್ ಸಮಿತಿ ರಚಿಸಲು ಒತ್ತಾಯ : ಶಿವಮೊಗ್ಗದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ನಗರ ಹಾಗೂ ತಾಲ್ಲೂಕಿನ ನಾಡ ಕಛೇರಿ, ತಾಲ್ಲೂಕು ಕಛೇರಿಯ ಅಧಿಕಾರಿಗಳು, ಸರ್ವೇ ಇಲಾಖೆಯ ಇಲಾಖಾಧಿಕಾರಿಗಳಲ್ಲಿ ಒಂದಷ್ಟು ಜವಾಬ್ದಾರಿಯುತ ಕೆಲ ರಜಸ್ವ, ಗ್ರಾಮ ಲೆಕ್ಕಿಗ ಅಧಿಕಾರಿಗಳೇ ಶಾಮೀಲು ಆಗಿರುವುದರಿಂದಲೇ ಇಂತಹದೊಂದು ಬಹುದೊಡ್ಡ ಭೂ ಕಬಳಿಕೆ ಆಗುತ್ತಿದೆ ಎಲ್ಲಿ ನೋಡಿದರು ಬೇಲಿ ಸುತ್ತಿ, ಇದು ತಮ್ಮ ಆಸ್ತಿ ಎಂದು ನೇರವಾಗಿಯೇ ನಾಮಫಲಕಗಳನ್ನು ಹಾಕಿಕೊಂಡಿರುವುದು ಅಚ್ಚರಿಯಾಗಿದೆ, ಇದರಿಂದ ಶಿವಮೊಗ್ಗ ತಾಲ್ಲೂಕು ಕೆರೆಗಳ ವಿಸ್ತೀರ್ಣ ಕಡಿತವಾಗಿದೆ, ಹಲವೆಡೆ ಕೆರೆಕಟ್ಟೆ, ಗೋಮಾಳ, ಜಮೀನು ಕರಾಬು, ಸರಕಾರಿ ಪಡೆ ಜಮೀನುಗಳೇ ಮಂಗ...