ಪೋಸ್ಟ್‌ಗಳು

ಜನವರಿ, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಲೆಕ್ಕಾಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ

ಇಮೇಜ್
  ಶಿವಮೊಗ್ಗ: ಶಿಕಾರಿಪುರದಲ್ಲಿ ಖಾತೆ ಬದಲಾಯಿಸಿಕೊಡಲು ಒಂದು ಲಕ್ಷ ರೂ. ಲಂಚ ಪಡೆಯುವಾಗ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ವಿಠ್ಠಲ ಕೋಲ್ಹರ ಲಂಚ ಪಡೆದ ಗ್ರಾಮ ಲೆಕ್ಕಾಧಿಕಾರಿ. ಖಾತಾ ಮಾಡಿಕೊಡಲು 1 ಲಕ್ಷ ರೂ. ಹಣ ಸ್ವೀಕರಿಸುವಾಗ ಲೋಕಯುಕ್ತ ಪೊಲೀಸರು ಬಂಧಿಸಿದ್ದಾರೆ. ಶಿಕಾರಿಪುರ ತಾಲೂಕಿನ ಚಿಕ್ಕಬಂಜೂರಿನಲ್ಲಿರುವ ಜಮೀನಿನ ಖಾತೆ ಮಾಡಿಸಲು ಶಿಕಾರಿಪುರದ ತಾಲೂಕು ಕಚೇರಿಯ ಕಂದಾಯ ಇಲಾಖೆಗೆ ಜಮೀನಿನ ಮಾಲೀಕಿ ಜಕ್ರಿಯಾ ಬೇಗ್ ಎಂಬುವರು ಅವರಿಂದ ನಾಲ್ಕು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.  ಜಕ್ರಿಯಾ ಬೇಗ್ ಅವರಿಗೆ 4 ಲಕ್ಷ ಕೊಡಲು ಮನಸ್ಸಿಲ್ಲದ ಕಾರಣ ಲೋಕಾಯುಕ್ತರನ್ನ ಭೇಟಿ ನೀಡಿದ್ದರು. ಇಂದು ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ ಕೊಲ್ಹರ 1 ಲಕ್ಷ ರೂ. ಸ್ವೀಕರಿಸುವಾಗ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಿದೆ.

ಸಾರ್ಥಕ ಸೇವೆ ಸಲ್ಲಿಸಿದ ವೃತ್ತಿಪರರಿಗೆ ರೋಟರಿಯಿಂದ ವಿಶೇಷ ವೃತ್ತಿ ಸೇವಾ ಪ್ರಶಸ್ತಿ ಪ್ರದಾನ

ಇಮೇಜ್
ಶಿವಮೊಗ್ಗ: ರೋಟರಿ ಸಂಸ್ಥೆಯು ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸುವ ಜತೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಇತರರಿಗೂ ಪ್ರೇರಣೆಯಾಗುತ್ತದೆ ಎಂದು ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್ ಹೇಳಿದರು. ವೃತ್ತಿಯಲ್ಲಿ ಸಾರ್ಥಕ ಸೇವೆ ಸಲ್ಲಿಸಿದ ವಿವಿಧ ಕ್ಷೇತ್ರದಲ್ಲಿ ವೃತ್ತಿಪರರಿಗೆ ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ವತಿಯಿಂದ ವಿಶೇಷ ಸಾಧಕರಿಗೆ ವೃತ್ತಿ ಸೇವಾ ಪ್ರಶಸ್ತಿ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಯುವಜನರಿಗೆ ಸಾಧನೆ ಮಾಡಲು ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಸಿಗುತ್ತದೆ ಎಂದು ತಿಳಿಸಿದರು. ವೃತ್ತಿಪರ ಸೇವಾ ನಿರ್ದೇಶಕ ಡಿ.ಕೆ.ಶೇಷಗಿರಿ ಮಾತನಾಡಿ, ವೃತ್ತಿ ಮತ್ತು ಕೌಶಲ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದ ಹಾಗೆ. ಅಂತರಾಷ್ಟ್ರೀಯ ಸಂಸ್ಥೆಯು ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಉತ್ತಮ ಕಾರ್ಯ ಎಂದು ತಿಳಿಸಿದರು. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಎಚ್.ಸುರೇಶ್, ನಂಜುಂಡ, ಅರಸು ನಾಯಕ್, ನಾಗರಾಜ, ಮೈಲಾರಿ, ಜಯಪಾಲ್, ಜಫ್ರುಲ್ಲಾ ಖಾನ್, ಪ್ರಹ್ಲಾದ್, ಮಂಜುನಾಥ್ ಅವರಿಗೆ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನಮ್ಮನ್ನು ಗುರುತಿಸಿ ಸನ್ಮಾನಿಸಿರುವುದು ಬಹಳ ಸಂತಸದ ಸಂಗತಿ ಎಂದು ಸನ್ಮಾನಿತರು ಅನಿಸಿಕೆ ವ್ಯಕ್ತಪಡಿಸಿದರು. ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಡಿ.ಕಿಶ...

ಇನ್ನರ್ವೆಲ್ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಮಾನವೀಯ ಸೇವೆಗಳು

ಇಮೇಜ್
ಇನ್ನರ್ ವೀಲ್ ಕ್ಲಬ್ ಆಫ್ ಶಿವಮೊಗ್ಗ ಈಸ್ಟ್ ವತಿಯಿಂದ 29 ಜನವರಿ 2026 ರಂದು ಜಿಲ್ಲಾ ಅಧ್ಯಕ್ಷೆಯ ಅಧಿಕೃತ ಭೇಟಿ ಕಾರ್ಯಕ್ರಮವನ್ನು ಅಂತರರಾಷ್ಟ್ರೀಯ ಇನ್ನರ್ ವೀಲ್ ದಿನಾಚರಣೆಯೊಂದಿಗೆ ಸಂಯೋಜಿಸಿ ಆಯೋಜಿಸಲಾಯಿತು. ಇನ್ನರ್ ವೀಲ್ ಒಂದು ಅಂತರರಾಷ್ಟ್ರೀಯ ಮಹಿಳಾ ಸೇವಾ ಸಂಘಟನೆಯಾಗಿದ್ದು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈ ಸಂದರ್ಭದಲ್ಲಿ ಅಗತ್ಯವಿರುವ ವ್ಯಕ್ತಿಗೆ ಒಂದು ಹಿಯರಿಂಗ್ ಎಯ್ಡ್ ದಾನ ಮಾಡಲಾಯಿತು ಹಾಗೂ ರೋಟರಿ ಶಾಲೆಗೆ ನಲಿ-ಕಲಿ ಮೇಜುಗಳಿಗಾಗಿ 20 ಕುರ್ಚಿಗಳನ್ನು ವಿತರಿಸಲಾಯಿತು. ಜೊತೆಗೆ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ “ಮೊಬೈಲ್ ಫೋನ್ ಇಲ್ಲದ ಒಂದು ದಿನ” ಎಂಬ ವಿಷಯದ ಮೇಲೆ “ಯೂತ್ ಅನ್ಪ್ಲಗ್” ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿ ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದ ಉದ್ದೇಶ ವಿದ್ಯಾರ್ಥಿಗಳಲ್ಲಿ ಚಿಂತನಾ ಶಕ್ತಿ, ಬರವಣಿಗೆ ಕೌಶಲ್ಯ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವುದಾಗಿತ್ತು. ಕಾರ್ಯಕ್ರಮಕ್ಕೆ ಜಿಲ್ಲಾ 318ರ ಅಧ್ಯಕ್ಷೆ ಶ್ರೀಮತಿ ಶಬರಿ ಕಡಿದಾಳ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಕ್ಲಬ್ ಆಫ್ ಶಿವಮೊಗ್ಗ ಈಸ್ಟ್‌ನ ಅಧ್ಯಕ್ಷೆ ಶ್ರೀಮತಿ ವೀಣಾ ಸುರೇಶ್, ಕಾರ್ಯದರ್ಶಿ ಶ್ರೀಮತಿ ಶಿಲ್ಪಾ ಗೋಪಿನಾಥ್, ಖಜಾಂಚಿ ಶ್ರೀಮತಿ ಶ್ವೇತಾ ಆಶಿತ್, ಸಂಪಾದಕಿ ವಿಜಯಶ್ರೀ, ಎಲ್ಲಾ ಕ್ಲಬ್ ಸದಸ್ಯರು, ಪೂರ್ವ ಜಿಲ್ಲಾ ಅ...

ಬದುಕಿನ ಮೌಲ್ಯಗಳನ್ನು ಕಲಿಸುವ ಸಂಸ್ಥೆ ಜೆಸಿಐ

ಇಮೇಜ್
ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ಪರಿಪೂರ್ಣ ವ್ಯಕ್ತಿತ್ವ ರೂಪಿಸುವಲ್ಲಿ ಹಾಗೂ ನಾಯಕತ್ವ ಬೆಳೆಸುವಲ್ಲಿ ಜೆಸಿಐ ಸಂಸ್ಥೆಯ ತರಬೇತಿ ಮಹತ್ತರ ಪಾತ್ರ ವಹಿಸುತ್ತದೆ ನುರಿತ ವಲಯ ತರಬೇತುದಾರ ಪ್ರವೀಣ್ ದೇಶಪಾಂಡೆ ಹೇಳಿದರು. ಜಿಲ್ಲಾ ಪಂಚಾಯಿತಿ, ಸಹ್ಯಾದ್ರಿ ಕಲಾ ಕಾಲೇಜು ಶಿವಮೊಗ್ಗ ಹಾಗೂ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಹಯೋಗದೊಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಬದುಕಿನ ಮೌಲ್ಯಗಳನ್ನು, ಸಂಸ್ಕಾರಗಳನ್ನು ಹಾಗೂ ಶಿಸ್ತುಬದ್ಧ ಜೀವನ ಮತ್ತು ಕೌಶಲ್ಯಗಳನ್ನು ಜೆಸಿಐ ಕಲಿಸುತ್ತದೆ. ಜೆಸಿಐ ಸಂಸ್ಥೆ ವ್ಯಕ್ತಿತ್ವ ವಿಕಸನಗೊಳಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಂಡು ಮುನ್ನಡೆಯಬೇಕು. ನಿಮ್ಮ ಇಷ್ಟದ ಕ್ಷೇತ್ರದಲ್ಲಿ ಹಂತ ಹಂತವಾಗಿ ಪ್ರಗತಿ ಸಾಧಿಸಬೇಕು. ಸಮಾಜಕ್ಕೆ ನಿಮ್ಮದೇ ಆದ ಕೊಡುಗೆ ನೀಡಬೇಕು. ಜೆಸಿಐ ಸಂಸ್ಥೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ ಎಂದರು. ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಬಿ.ಎನ್.ಸಂತೋಷ್ ಕುಮಾರ್ ಮಾತನಾಡಿ, ತರಬೇತಿಗಳಿಂದ ವಿದ್ಯಾರ್ಥಿಗಳಲ್ಲಿ ವಿಶೇಷ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಮುಂದಿನ ಕಾರ್ಯಕ್ಷೇತ್ರ ವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಜೆಸಿಐ ಸಂಸ್ಥೆಯ ಮೂಲಕ ನಿರಂತರವಾಗಿ ಸಮಾಜಮುಖಿ ಸೇವಾ ಕಾರ್ಯ ನಡೆಸುವ ಜತೆಯಲ್ಲಿ ಯುವಜನರಿಗೆ ತರಬೇತಿ ನೀಡಲಾಗುತ್ತಿದೆ. ಇದರಿಂದ ವೃತ್ತಿ ಕ್ಷೇತ್ರದಲ್ಲಿ ಯ...

ಬಾಲ್ಯ ವಿವಾಹ ತಡೆ ಕಾಯ್ದೆ, 2006 ರ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ

ಇಮೇಜ್
  ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಶಿವಮೊಗ್ಗ ಇವರ ವತಿಯಿಂದ, ಬಾಲ್ಯ ವಿವಾಹ ತಡೆ ಕಾಯ್ದೆ, 2006 ರ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಶಿವಮೊಗ್ಗದ ಹೊಳೆ ಬೆನವಳ್ಳಿ ಗ್ರಾಮದಲ್ಲಿ ನಡೆಸಲಾಯಿತು. ಈ ಜಾಗೃತಿ ಅಭಿಯಾನದ ವಿಷಯವಾಗಿ ಉಪನ್ಯಾಸ ನೀಡಲು ಅವಕಾಶ ಕಲ್ಪಿಸಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಶಿವಮೊಗ್ಗ ಜಿಲ್ಲೆ, ಗೌರವಾನ್ವಿತ ನ್ಯಾಯಾಧೀಶರಾದ ಮಾನ್ಯ ಸಂತೋಷ್.M.S ಅವರಿಗೆ ಅವಕಾಶಕ್ಕೆ ಧನ್ಯವಾದಗಳು , ಹಾಗೆಯೇ ಆಸಕ್ತಿಯಿಂದ ಪಾಲ್ಗೊಂಡು, ಕಾರ್ಯಕ್ರಮ ನೆನಪಿನಲ್ಲುಳಿಯುವಂತೆ  ಸಹಕಾರ ನೀಡಿದ P.D.O ನಟರಾಜ್ ಮತ್ತು ತಂಡಕ್ಕೆ, ಗ್ರಾ. ಪಂ. ಅಧ್ಯಕ್ಷರು ಬಸವರಾಜಪ್ಪರವರಿಗೆ, ಹೊಳೆಬೆನವಳ್ಳಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವರ್ಗ, ಮಕ್ಕಳು, ಗ್ರಾಮಸ್ಥರು, ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತರುಗಳಿಗೆ ಧನ್ಯವಾದಗಳು ವಕೀಲರಾದ ಜೆಸಿ ಸ್ವಾತಿ ಅವರು ತಿಳಿಸಿರುತ್ತಾರೆ. 

ವಿಶ್ವಾದ್ಯಂತ ರೋಟರಿ ಸಂಸ್ಥೆಯಿಂದ ಮನುಕುಲದ ಸೇವೆ

ಇಮೇಜ್
ಶಿವಮೊಗ್ಗ: ವಿಶ್ವದ ಎಲ್ಲ ಕಡೆಗಳಲ್ಲಿ ರೋಟರಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಸಮಾಜಮುಖಿ ಕಾರ್ಯಗಳ ಜತೆಯಲ್ಲಿ ಮನುಕುಲದ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದು ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಹೇಳಿದರು. ಶ್ರೀಲಂಕಾ ದೇಶದಲ್ಲಿ ಅಲ್ಲಿನ ರೋಟರಿ ಕ್ಲಬ್ ಹಾಗೂ ರೋಟರಿ ಶಿವಮೊಗ್ಗ ಪೂರ್ವ ಕ್ಲಬ್‌ಗಳ ಅಂತರಾಷ್ಟ್ರೀಯ ಮಟ್ಟದ ಸ್ನೇಹಮಿಲನ ಹಾಗೂ ಅವರವರ ಕ್ಲಬ್‌ಗಳ ಕುರಿತು ವಿಚಾರ ವಿನಿಮಯ ಮಾಡಿಕೊಂಡು ಧ್ವಜಗಳನ್ನು ಹಸ್ತಾಂತರಿಸಿ ಮಾತನಾಡಿ, ರೋಟರಿ ಸಂಸ್ಥೆಯು ಸೇವಾ ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿದೆ ಎಂದು ತಿಳಿಸಿದರು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ರೋಟರಿ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಶಾಲೆ ಮಕ್ಕಳಿಗೆ ಅಗತ್ಯವಿರುವ ವಸ್ತುಗಳನ್ನು ಕೊಡುಗೆಯಾಗಿ ನೀಡುತ್ತಿದೆ. ಆರೋಗ್ಯ ಶಿಬಿರಗಳನ್ನು ನಡೆಸುತ್ತಿದೆ ಎಂದರು. ಶ್ರೀಲಂಕಾ-ಮಾಲ್ಡೀವ್ಸ್ ರೋಟರಿ ಸದಸ್ಯ ರಮೇಶ್ ಮಾತನಾಡಿ, ಅಂತರಾಷ್ಟ್ರೀಯ ಭೇಟಿ ಹಾಗೂ ಕಾರ್ಯಕ್ರಮಗಳಿಂದ ಕ್ಲಬ್‌ಗಳ ಕಾರ್ಯಯೋಜನೆ ಹಾಗೂ ಸೇವಾಕಾರ್ಯಗಳ ಮಾಹಿತಿ ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು. ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ಶೇಷಗಿರಿ ಡಿ.ಕೆ. ಮಾತನಾಡಿ, ಅಂತರಾಷ್ಟ್ರೀಯ ಧ್ವಜ ಹಸ್ತಾಂತರ ಹಾಗೂ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಸಂಸ್ಥೆಗಳನ್ನು ಬಲಪಡಿಸುವುದರ ಜತೆ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ತ...

ಕೃಷಿ ವಿವಿಯಲ್ಲಿ ರೇಂಜರ್, ರೋವರ್ ಘಟಕ ಉದ್ಘಾಟನೆ

ಇಮೇಜ್
ಶಿವಮೊಗ್ಗ: ಕೃಷಿ ವಿಶ್ವವಿದ್ಯಾಲಯದಲ್ಲಿ ರೇಂಜರ್, ರೋವರ್ ಘಟಕ ಘಟಕ ಸ್ಥಾಪನೆ ಆಗುತ್ತಿರುವುದು ವಿಶೇಷ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಅರ್.ಸಿಂಧಿಯಾ ಹೇಳಿದರು. ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಅಡಿಯಲ್ಲಿ ರೇಂಜರ್ ಮತ್ತು ರೋವರ್ ಘಟಕ ಉದ್ಘಾಟಿಸಿ ಮಾತನಾಡಿ, ಕೃಷಿ ವಿವಿಯ ಪರಿಸರ ಹೊಸ ಕಲಿಕೆಯ ಅನುಭವ ನೀಡುತ್ತದೆ. ಕೃಷಿ ವಿವಿಯಲ್ಲಿ ಕ್ಯಾಂಪ್ ಆಯೋಜಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು. ಕುಲಸಚಿವ ಡಾ. ಕೆ.ಸಿ.ಶಶಿಧರ ಮಾತನಾಡಿ, ಕೃಷಿ ವಿವಿಗಳಲ್ಲಿ ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಈಗಾಗಲೇ ಪಠ್ಯದಲ್ಲಿ ಇವೆ. ಅದೇ ಮಾದರಿಯಲ್ಲಿ ರೇಂಜರ್ ಮತ್ತು ರೋವರ್ ಸೇರಿಸಲು ಸಾಧ್ಯ. ಈ ಬಗ್ಗೆ ಪ್ರಯತ್ನ ಮಾಡಲಾಗುವುದು ಎಂದರು. ಕುಲಪತಿ ಡಾ. ಆರ್.ಸಿ.ಜಗದೀಶ ಮಾತನಾಡಿ, ನಾಯಕತ್ವ ಗುಣ ಬೆಳಸುವಲ್ಲಿ ರೇಂಜರ್ ಮತ್ತು ರೋವರ್ ಅತ್ಯುತ್ತಮ ಪಾತ್ರ ವಹಿಸಲಿದೆ. ನಮ್ಮ ವಿದ್ಯಾರ್ಥಿಗಳಿಗೆ ಇಂತಹ ಅವಕಾಶ ಕೊಡಬೇಕು ಎನ್ನುವದೇ ನನ್ನ ಗುರಿ ಎಂದರು. ರೋವರ್ ಘಟಕದ ಮುಖ್ಯಸ್ಥರಾಗಿ ಡಾ. ಸತೀಶ್ ವೈ ಹಾಗೂ ರೇಂಜರ್ ಘಟಕದ ಮುಖ್ಯಸ್ಥರಾಗಿ ಡಾ. ಬಸಮ್ಮ ಆಲದ ಕಟ್ಟಿ ಅವರನ್ನು ವಿಶ್ವವಿದ್ಯಾಲಯ ನೇಮಕ ಮಾಡಿತು. ಬಸಮ್ಮ ಕಾರ್ಯಕ್ರಮ ಸಂಘಟಿಸಿದರು. ಡಾ. ಹೇಮ್ಲಾನಾಯಕ್, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಶಿವಮೊಗ್...

ಕೈಗಾರಿಕೆ, ತರಬೇತಿ ಸಂಸ್ಥೆಗಳ ನಡುವೆ ನೇರ ಸಂಬಂಧವಿರಲಿ

ಇಮೇಜ್
ಶಿವಮೊಗ್ಗ: ಕೌಶಲ್ಯಗಳ ಅಸಮಾನತೆಯಿಂದ ಉದ್ಯೋಗ ಭರ್ತಿ ಮಾಡುವುದು ಸವಾಲಿನ ಕೆಲಸವಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋ ಕಾಸ್ಟ್  ಸಭಾಂಗಣದಲ್ಲಿ  ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಅಧಿಕಾರಿಗಳು, ಜಿಲ್ಲೆಯ ಎಲ್ಲ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಏರ್ಪಡಿಸಿದ್ದ ಕೌಶಲ್ಯ ಅಂತರ ಅಧ್ಯಯನ, ವಿವಿಧ ಉದ್ಯಮ ಹಾಗೂ ಕೈಗಾರಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗಿರುವ ವಿವಿಧ ಕೌಶಲ್ಯಗಳ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಂತ್ರಿಕ ಜ್ಞಾನ ಮತ್ತು ಉದ್ಯೋಗದ ಅವಶ್ಯಕತೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು  ಕೌಶಲ್ಯ ಅವಶ್ಯಕ. ಉದ್ಯೋಗದಾತರು ನಿರೀಕ್ಷಿಸುವ ಕೌಶಲ್ಯಗಳು ಮತ್ತು ಉದ್ಯೋಗಿಗಳು ಹೊಂದಿರುವ ನಿಜವಾದ ಕೌಶಲ್ಯಗಳ ನಡುವಿನ ಅಸಮಾನತೆ ಇದ್ದು, ಕೌಶಲ್ಯ ಕಲಿಯಲು ಪ್ರೋತ್ಸಾಹಿಸಬೇಕಿದೆ ಎಂದು ತಿಳಿಸಿದರು. ವೃತ್ತಿಗಳನ್ನು ಗುರಿಯಾಗಿಸಿ ಮತ್ತು ಅವರಿಗೆ ಅಗತ್ಯವಾದ ತರಬೇತಿ ಒದಗಿಸಬೇಕು. ಉದ್ಯೋಗಗಳಿಗೆ ಸಂಬಂಧಿಸಿದ ಉದ್ಯಮದ ಅವಶ್ಯಕತೆಗಳನ್ನು ಪೂರೈಸುವ ಸಾಮರ್ಥ್ಯಗಳಿಗೆ ಒತ್ತು ನೀಡಬೇಕು. ಪಠ್ಯಕ್ರಮವನ್ನು ನವೀಕರಿಸಲು ಮತ್ತು ಪ್ರಾಯೋಗಿಕ ತರಬೇತಿಯನ್ನು ನೀಡಲು ಉದ್ಯಮ ಸಮೂಹಗಳನ್ನು ಬಳಸುವುದು ಇಂದಿನ ಅತ್ಯವಶ್ಯಕವಾಗಿದೆ ಎಂದರು. ಕೈಗಾರಿಕೆಗಳಲ್ಲಿ ಕಾರ್ಮಿಕರ ಕೊರತೆ ಇದೆ ಎಂಬುದು  ರಹಸ್ಯವಲ್ಲ....

ವಿದ್ಯಾರ್ಥಿಗಳಿಂದ ಅತ್ಯುತ್ತಮ ಬ್ಯಾಂಡ್ ಪ್ರದರ್ಶನ

ಇಮೇಜ್
ಶಿವಮೊಗ್ಗ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಮಲ್ನಾಡ್ ಓಪನ್ ಗ್ರೂಪ್ ವತಿಯಿಂದ ಜಿಲ್ಲಾ ಸ್ಕೌಟ್ ಭವನದ ಆವರಣದಲ್ಲಿ 77ನೇ ಗಣರಾಜ್ಯೋತ್ಸವ ಅಂಗವಾಗಿ ದೆಹಲಿಯಲ್ಲಿ ನಡೆಯುವ ರೀತಿ ಮಾದರಿಯ 'ಬೀಟಿಂಗ್ ದ ರಿಟ್ರೀಟ್' ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ವಿನಯ್ ಕಠಾರೆ ಅವರು ಅಮರ್ ಜವಾನ್‌ಗೆ ಗೌರವ ಸಲ್ಲಿಸಿದರು. 25ನೇ ವರ್ಷದ ರಿಟ್ರೀಟ್ ಕಾರ್ಯಕ್ರಮದ ಆಯೋಜನೆ ಮಾಡಿದ್ದ ಮಲ್ನಾಡ್ ಓಪನ್ ಗ್ರೂಪ್‌ನ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಶಾಲೆಯ 60 ವಿದ್ಯಾರ್ಥಿಗಳ ತಂಡ ಅತ್ಯುತ್ತಮ ಬ್ಯಾಂಡ್ ಪ್ರದರ್ಶನ ನೀಡಿತು. ಸಾಂದೀಪನಿ ಶಾಲೆಯ ವಿದ್ಯಾರ್ಥಿಗಳು ಉತ್ತಮವಾಗಿ ದೈಹಿಕ ಕವಾಯತು ಪ್ರದರ್ಶಿಸಿದರು. ಮೇರಿ ಇಮಾಕ್ಯುಲೇಟ್ ಹಿರಿಯ ಪ್ರಾಥಮಿಕ ಶಾಲೆ ಗೈಡ್ ವಿದ್ಯಾರ್ಥಿನಿಯರು ದೇಶಭಕ್ತಿ ಗೀತೆಗೆ ನೃತ್ಯ ಪ್ರದರ್ಶಿಸಿದರು. ರೇಡಿಯೋ ಶಿವಮೊಗ್ಗ 90.8 ಎಫ್.ಎಂನ ಆರ್.ಜೆ.ಅರ್ಪಿತ ಅವರ ಮುಂಗೋಳಿ ಕೂಗ್ಯಾವೋ, ಪರಿಸರ ಪರಿಚಯ, ಬ್ಯುಜಿನೆಸ್ ಬಝ್ ಕಾರ್ಯಕ್ರಮಗಳ ವಿಶೇಷ ಕಾಳಜಿಯನ್ನು ಗುರುತಿಸಿ ಸನ್ಮಾನಿಸಲಾಯಿತು. ಮಲ್ನಾಡ್ ಓಪನ್ ಗ್ರೂಪ್‌ನ ಸ್ವಯಂ ಸೇವಕ ಚಂದನ್.ಕೆ.ಎಂ, ರಾಷ್ಟ್ರೀಯ ಟೆಕ್ವಾಂಡೋ ರೆಫರಿ ಆಗಿರುವ ನವೀ.ಡಿ.ಸಿ, ಕರಾಟೆಯಲ್ಲಿ ಸಾಧನೆ ಮಾಡಿರುವ ಶೃತಿ.ಪಿ, ಗ್ರೂಪ್ ಹಿರಿಯ ಸದಸ್ಯ ಉಮೇಶ್.ಹೆಚ್.ವಿ, 25 ವರ್ಷ ಶಿಕ್ಷಕ ಸೇವೆ ಗುರುತಿಸಿ ಸ್ವಾಮಿ ವಿವೇಕಾಂದ ಶಾಲೆಯ ದೈಹಿಕ ಶಿಕ್ಷಕ ಜಯದೇವ್.ಹೆಚ್.ಎನ್ ಅವರ...

ಮಧ್ಯ ರಸ್ತೆಯಲ್ಲಿ ಹೊತ್ತಿ ಉರಿದ ಹೊಸನಗರದಿಂದ ಬೆಂಗಳೂರಿಗೆ ತೆರಳುತಿದ್ದ ಖಾಸಗಿ ಬಸ್

ಇಮೇಜ್
  ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ–ಹೊಸನಗರ ತಾಲೂಕಿನ ಗಡಿ ಭಾಗದಲ್ಲಿ ಸಂಭವಿಸಿದೆ. ಅರಸಾಳು ಮತ್ತು ಸುಡೂರು ಗ್ರಾಮಗಳ ಮಧ್ಯೆ ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಹೊಸನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ‘ಶ್ರೀ ಅನ್ನಪೂರ್ಣೇಶ್ವರಿ’ ಎಂಬ ಖಾಸಗಿ ಬಸ್‌ನಲ್ಲಿ ಈ ಘಟನೆ ನಡೆದಿದೆ. ಚಾಲಕ ಸೇರಿದಂತೆ ಸುಮಾರು 40 ಜನ ಪ್ರಯಾಣಿಕರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು.ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡುದನ್ನು ಗಮನಿಸಿದ ಚಾಲಕ, ತಕ್ಷಣವೇ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆಸಿ ಬಸ್ ನಿಲ್ಲಿಸಿದ್ದಾನೆ. ಈ ವೇಳೆ ಗದ್ದಲ ಉಂಟಾಗಿ ಕೆಲವರು ಬಸ್‌ನಿಂದ ಜಿಗಿದು ರಕ್ಷಣೆ ಪಡೆದಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಚಲಿಸುತಿದ್ದ ಬಸ್ಸಿನಲ್ಲಿ ಮೊದಲು ಸುಟ್ಟ ವಾಸನೆ ಬರುತಿದ್ದು ಕೆಲಕ್ಷಣಗಳಲ್ಲೇ ಕೆಲವರು ಕಿರುಚುವ ಧ್ವನಿ‌ಕೇಳಿಸಿದೆ ಆ ನಂತರ ಎಕ್ಸಿಟ್ ಡೋರ್ ಮೂಲಕ ಹೊರಗೆ ಬಂದೆವು ಎನ್ನುತ್ತಾರೆ. ಘಟನೆಯಲ್ಲಿ ಒಟ್ಟು ಮೂವತ್ತು ಜನರಿಗೆ ಗಾಯಗಳಾಗಿದ್ದು , ಎಂಟಕ್ಕೂ ಹೆಚ್ಚು ಜನರಿಗೆ ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪ್ರಯಾಣಿಕರ ಲಗೇಜ್ ಗಳು ಬೆಂಕಿಗೆ ಅಹುತಿಯಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ಅಂಬುಲೆನ್ಸ್ ಹಾಗೂ ಪೊಲೀಸರು ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ...

ರೋಟರಿ ಕ್ಲಬ್ ಶಿವಮೊಗ್ಗ ಮಿಡ್ ಟೌನ್ ಗೆ ಪಬ್ಲಿಕ್ ಇಮೇಜ್ ಪ್ರಶಸ್ತಿ

ಇಮೇಜ್
ಶಿವಮೊಗ್ಗ: ಹಾಸನದಲ್ಲಿ ಆಯೋಜಿಸಿದ್ದ ರೋಟರಿ ಜಿಲ್ಲೆ3182ರ ಸ್ಪಂದನಾ ಜಿಲ್ಲಾ ಸಮ್ಮೇಳನದಲ್ಲಿ ರೋಟರಿ ಕ್ಲಬ್ ಆಫ್ ಶಿವಮೊಗ್ಗ ಮಿಡ್‌ಟೌನ್ ಸಂಸ್ಥೆಗೆ ಪಬ್ಲಿಕ್ ಇಮೇಜ್ ಪ್ರಶಸ್ತಿ ಲಭಿಸಿದೆ. 84 ಕ್ಲಬ್‌ಗಳ ಪೈಕಿ ರೋಟರಿ ಕ್ಲಬ್ ಆಫ್ ಶಿವಮೊಗ್ಗ ಮಿಡ್‌ಟೌನ್ ಗೌರವಾನ್ವಿತ ಪ್ರಶಸ್ತಿ ಪಡೆದುಕೊಂಡಿದೆ. ಕ್ಲಬ್‌ನಲ್ಲಿ ಒಟ್ಟು 181 ಯೋಜನೆಗಳು ನಡೆದಿದ್ದು, ಅವುಗಳಲ್ಲಿ 113  ಪಬ್ಲಿಕ್ ಇಮೇಜ್ ಯೋಜನೆಗಳಾಗಿವೆ. ರೋಟರಿ ಕ್ಲಬ್ ಆಫ್ ಶಿವಮೊಗ್ಗ ಮಿಡ್‌ಟೌನ್ ಅಧ್ಯಕ್ಷ ಹರ್ಷ ಕಾಮತ್ ಮಾತನಾಡಿ, ರೋಟರಿ ಸಂಸ್ಥೆ ವತಿಯಿಂದ ಸಲ್ಲಿಸಿದ ಮನುಕುಲದ ಮಾನವೀಯ ಸೇವೆಗಳಿಗೆ ಸಂದ ಪ್ರಶಸ್ತಿ ಇದಾಗಿದೆ ಎಂದು ಹೇಳಿದರು. ಸ್ನೇಹ, ಸೇವೆ ಹಾಗೂ ಪರಸ್ಪರ ಪ್ರೀತಿ, ಓಡನಾಟಗಳಿಗಾಗಿ ರೋಟರಿ ಸಂಸ್ಥೆ ಸ್ಥಾಪಿತವಾಗಿದ್ದು, ಈವರೆಗೂ ಪ್ರಪಂಚದಲ್ಲಿ ಸಾಕಷ್ಟು ವಿಶೇಷ ಸೇವಾ ಕಾರ್ಯಗಳನ್ನು ಮಾಡುವುದರ ಮುಖಾಂತರ  ಮುಂಚೂಣಿಯಲ್ಲಿದೆ. ರೋಟರಿ ಕ್ಲಬ್ ಮಿಡ್‌ಟೌನ್ ಸಂಸ್ಥೆ ಹಲವಾರು ಚಟುವಟಿಕೆಗಳ ಮೂಲಕ ವಿಶೇಷವಾಗಿ ತನ್ನದೇ ಆದ ಛಾಪು ಮೂಡಿಸಿದೆ.  ನಮ್ಮ ಕ್ಲಬ್‌ನ ಎಲ್ಲ ಸದಸ್ಯರ ಸಹಕಾರದಿಂದ ಪ್ರಶಸ್ತಿ ಲಭಿಸಿದೆ. ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಈ ಪ್ರಶಸ್ತಿಗಳನ್ನು ರೋಟರಿ ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ಅವರು ಹಾಗೂ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ವಿತರಿಸಿದರು. ಮೇನಕಾ ಜಗದೀಶ್, ಉಜ್ವಲಾ ರವಿ, ರಾಜೇಂದ್ರ ...

ವಿಕಸಿತ ಭಾರತದೆಡೆಗೆ ಸದೃಢ ಹೆಜ್ಜೆ

ಇಮೇಜ್
ಶಿವಮೊಗ್ಗ: ಭಾರತವು ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ ಕಾರ್ಯಕ್ರಮಗಳಿಂದ ವಿಕಸಿತ ಭಾರತ ಆಗುತ್ತಿದ್ದು, ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗುವತ್ತ ಮುನ್ನುಗುತ್ತಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆವರಣದಲ್ಲಿ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸದಲ್ಲಿ  ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಉತ್ತಮ ಸಂವಿಧಾನ ಭಾರತ ದೇಶದಲ್ಲಿ ರಚನೆಯಾಗಿದ್ದು, ಈ ದಿನ ಭಾರತದ ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವ ಆಡಳಿತವನ್ನು ಆಚರಿಸುತ್ತದೆ. ವೈವಿಧ್ಯತೆಯಲ್ಲಿ ಏಕತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ. ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ‍್ಯದ ತತ್ವಗಳನ್ನು ಬಲಪಡಿಸುವ ದಿನವಾಗಿದೆ ಎಂದು ತಿಳಿಸಿದರು. ಸಂಘದ ಮಾಜಿ ಅಧ್ಯಕ್ಷ ಕೆ.ವಿ.ವಸಂತ್‌ಕುಮಾರ್ ಮಾತನಾಡಿ, ದೇಶದ ಐಕ್ಯತೆ, ಏಕತೆ ಮತ್ತು ಅಖಂಡತೆ ಬಗ್ಗೆ, ದೇಶದ ಅಭಿವೃದ್ದಿಯಲ್ಲಿ ನಮ್ಮ ಜವಾಬ್ದಾರಿ ಕರ್ತವ್ಯಗಳನ್ನು ನಿರ್ವಹಿಸುವ ಬಗ್ಗೆ ಜನತೆಯ ಸಹಕಾರದ ಪ್ರಾಮುಖ್ಯತೆ ತಿಳಿಸಿದರು. ಸಂಘದ ಮಾಜಿ ಅಧ್ಯಕ್ಷ ಜೆ.ಆರ್.ವಾಸುದೇವ ಮಾತನಾಡಿ, ದೇಶದಲ್ಲಿ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರ ಹೆಚ್ಚಿನ ಸಾಧನೆ ಮಾಡುತ್ತಿದೆ. ಪ್ರಜೆಗಳಾದ ನಾವು ಸಂವಿಧಾನದ ಹಕ್ಕು, ಜವಾಬ್ದಾರಿಯನ್ನು ಅರಿಯುವಲ್ಲಿ ನಾವು ತುಂಬಾ ಹಿಂದಿದ್ದೇವೆ. ದೇಶದ ಅಭಿವೃದ್ಧಿಯಲ್ಲಿ...

ವಿಶ್ವದ ಎಲ್ಲ ರಾಷ್ಟ್ರಗಳಿಗೂ ಮಾದರಿ ನಮ್ಮ ಸಂವಿಧಾನ

ಇಮೇಜ್
ಶಿವಮೊಗ್ಗ: ಭಾರತದ ಸಂವಿಧಾನ ಎಲ್ಲ ರಾಷ್ಟ್ರಗಳಿಗೂ ಮಾದರಿಯಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಹೇಳಿದರು. ನಗರದ ಸ್ಕೌಟ್ಸ್ ಭವನದ ಆವರಣದಲ್ಲಿ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಂವಿಧಾನದ ಆಶಯದಂತೆ ನಾವೆಲ್ಲರೂ ನಡೆದುಕೊಳ್ಳಬೇಕು. ನಮ್ಮ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಇಂದಿಗೂ ಸಹ ತುಂಬಾ ಪ್ರಸ್ತುತವಾಗಿದೆ. ನಮ್ಮ ದೇಶಕ್ಕಾಗಿ ದುಡಿದ ಮಹನೀಯರನ್ನು ಸದಾ ಸ್ಮರಿಸಬೇಕು ಎಂದು ತಿಳಿಸಿದರು. ಆಯುಕ್ತ ಕೆ.ರವಿ ಮಾತನಾಡಿ, ಮಕ್ಕಳಲ್ಲಿ ರಾಷ್ಟ್ರ ಪ್ರೇಮ ಹಾಗೂ ಇತಿಹಾಸದ ಬಗ್ಗೆ ಅರಿವು ಮೂಡಿಸುವ ಅಗತ್ಯತೆ ಇದೆ. ನಮ್ಮ ರಾಷ್ಟ್ರ ಸುವ್ಯವಸ್ಥಿತವಾಗಿ ಆಡಳಿತ ನಡೆಯುತ್ತಿದೆ. ಇದಕ್ಕೆ ನಮ್ಮ ದೇಶದ ಸಂವಿಧಾನವೇ ಕಾರಣ. ಎಲ್ಲರೂ ಸಂವಿಧಾನವನ್ನು ಗೌರವಿಸೋಣ ಎಂದು ತಿಳಿಸಿದರು. ಸಮಾರಂಭದಲ್ಲಿ ಮಕ್ಕಳಿಂದ ಪೆರೇಡ್ ಹಾಗೂ ಕವಾಯತು ನಡೆಯಿತು. ಸಮಾರಂಭದಲ್ಲಿ ಸ್ಕೌಟ್ಸ್ ಆಯುಕ್ತ ಎಸ್.ಜಿ.ಆನಂದ್, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಗೈಡ್ ಆಯುಕ್ತೆ ಲಕ್ಷ್ಮೀ ಕೆ.ರವಿ, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರಯ್ಯ, ಜಂಟಿ ಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ರಾಜೇಶ್ ಅವಲಕ್ಕಿ, ದೊರೆ, ಚೇತನ್ ರಾಯನಹಳ್ಳಿ, ಪರಮೇಶ್ವರ್, ಚುಡಾಮಣಿ ಪವಾರ್, ರುದ್ರಪ್ಪ ಚೀಲೂರ್, ಚಂದ್ರಶೇಖರ್, ಕೃಷ್ಣ...

ಗಣರಾಜ್ಯೋತ್ಸವ-ಭಾರತೀಯರೆಲ್ಲರೂ ಹೆಮ್ಮೆ ಪಡಬೇಕಾದ ದಿನ : ಮಧು ಬಂಗಾರಪ್ಪ

ಇಮೇಜ್
ಶಿವಮೊಗ್ಗ, ಜ.26 ಈ ದಿನ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡಬೇಕಾದ ದಿನ. ಇಂದು ವಿಶ್ವದ ಶ್ರೇಷ್ಠ ಸಂವಿಧಾನವು ಜಾರಿಗೆ ಬಂದ ಪವಿತ್ರ ದಿನವಾಗಿದ್ದು "ನಮ್ಮ ದೇಶ, ನಮ್ಮ ಸಂವಿಧಾನ ನಮ್ಮದೇ ಆಡಳಿತ" ಎಂದು ನಾವು ಸ್ವಾಭಿಮಾನದಿಂದ ಬದುಕಲು ಕಾರಣರಾದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಕೃತಜ್ಞತಾ ಪೂರ್ವಕ ನಮನಗಳು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು. ನಗರದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವ ಸಂದೇಶ ನೀಡಿದರು.  ಈ ನಿಟ್ಟಿನಲ್ಲಿ ಸಂವಿಧಾನದ ಮಹತ್ವವನ್ನು ಅರಿತ ನಮ್ಮ ಸರ್ಕಾರವು ರಾಜ್ಯದ ಒಂದು ಕೋಟಿಗೂ ಹೆಚ್ಚು ಮಕ್ಕಳು ಪ್ರತಿದಿನ ಶಾಲೆಯಲ್ಲಿ 'ಸಂವಿಧಾನದ ಪೀಠಿಕೆ'ಯನ್ನು ಓದುತ್ತಿದ್ದಾರೆ. ಎಳೆಯ ವಯಸ್ಸಿನಲ್ಲೇ ಮಕ್ಕಳಲ್ಲಿ ಸಂವಿಧಾನದ ಮೌಲ್ಯಗಳನ್ನು ಬೆಳಸುವುದು ನಮ್ಮ ಉದ್ದೇಶ ಹಾಗೂ ಇದು ಅವಶ್ಯಕತೆಯೂ ಹೌದು ಎಂದರು.  ಕರ್ನಾಟಕದ ಮತ್ತು ಭಾರತದ ಭೂಪಟದಲ್ಲಿ ಶಿವಮೊಗ್ಗಕ್ಕೆ ತನ್ನದೇ ಆದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವಿದ್ದು ರಾಷ್ಟ್ರಕವಿ ಕುವೆಂಪು ಅವರು ವಿಶ್ವಮಾನವ ಸಂದೇಶವನ್ನು ಸಾರಿದ್ದು ಇದೇ ಮಣ್ಣಿನಿಂದ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿಯವರು ಸಾಹಿತ್ಯ ಲೋಕದಲ್ಲಿ ಹೊಸ 'ಅಲೆ ಎಬ್ಬಿಸಿದ್ದು ಇಲ್ಲಿ...

ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಣೆ

ಇಮೇಜ್
ಇಂದು ಶಿವಮೊಗ್ಗ ನಗರದ ಶಿವಪ್ಪ ನಾಯಕ ಪ್ರತಿಮೆಯ ಸಮೀಪದಲ್ಲಿರುವ ಪಾವನ ಕನ್ನಡ ದಿನಪತ್ರಿಕೆ ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾ ಘಟಕದ ಕಚೇರಿಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಜನಮನ ರಕ್ಷಣಾ ವೇದಿಕೆ ರಾಜ್ಯ ಸಂಘಟನೆಯ ರಾಜ್ಯಾಧ್ಯಕ್ಷರಾದ ಕೆ. ಜನಾರ್ಧನ ಸಾಲಿಯಾನ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಿಕಾ ವಿತರಕರ ಜಿಲ್ಲಾ ಘಟಕದ ಅಧ್ಯಕ್ಷರಾದ ಎನ್. ಮಾಲತೇಶ್ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ರಾಮು ಜಿ, ಸಂಘಟನಾ ಕಾರ್ಯದರ್ಶಿ ಪರಶುರಾಮ್ ರಾವ್ (ಭದ್ರಾವತಿ), ನಿರ್ದೇಶಕರಾದ ಹರ್ಷ ಎನ್.ಆರ್, ಸದಸ್ಯರಾದ ಯೋಗೇಶ್ ಪಿ, ದುರ್ಘೋಜಿ, ಪ್ರಾಣೇಶ್, ಧನಂಜಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅದೇ ರೀತಿ ಕನ್ನಡ ರಕ್ಷಣಾ ವೇದಿಕೆ – ಜನಮನ ರಾಜ್ಯ ಸಂಘಟನೆಯ ಜಿಲ್ಲಾ ಉಸ್ತುವಾರಿಗಳಾದ ಕಿರಣ್ ಕೆ, ಉಪಾಧ್ಯಕ್ಷರಾದ ವೀಣಾ ಎಚ್, ಸುಮಾ ಕೆ.ಎಸ್, ಪುಷ್ಪಾ ಎ, ರಾಮು ವಿ, ಸಂಗೇಶ್ವರ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗಣರಾಜ್ಯೋತ್ಸವದ ಮಹತ್ವವನ್ನು ಸ್ಮರಿಸಿ, ದೇಶದ ಸಂವಿಧಾನ ಮೌಲ್ಯಗಳನ್ನು ಕಾಪಾಡುವ ಸಂಕಲ್ಪವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು.

ಭದ್ರಾವತಿಯಲ್ಲಿ ಡಬಲ್ ಮರ್ಡರ್ ರಹಸ್ಯ ಬಯಲು! 24 ಗಂಟೆಗಳಲ್ಲಿ ಆರೋಪಿಯ ಬಂಧನ!!

ಇಮೇಜ್
ಭದ್ರಾವತಿ ನಗರದ ಹಳೆನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವೃದ್ಧ ದಂಪತಿಯ ಅನುಮಾನಾಸ್ಪದ ಸಾವಿನ ಪ್ರಕರಣ ಡಬಲ್ ಮರ್ಡರ್ ಆಗಿರುವುದು ಬೆಳಕಿಗೆ ಬಂದಿದೆ. ಪ್ರಕರಣ ದಾಖಲಾದ 24 ಗಂಟೆಗಳೊಳಗೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭೂತನಗುಡಿ ನಿವಾಸಿಗಳಾದ ಚಂದ್ರಪ್ಪ ಹಾಗೂ ಜಯಮ್ಮ ತಮ್ಮ ಮನೆಯಲ್ಲೇ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆರಂಭದಲ್ಲಿ ಅನುಮಾನಾಸ್ಪದ ಸಾವು ಎಂದು ಯುಡಿಆರ್ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಮೃತರ ಪುತ್ರ ವಿಶ್ವನಾಥ್ ಜಿ.ಸಿ. ನೀಡಿದ ಮರುದೂರು ಪ್ರಕರಣಕ್ಕೆ ತಿರುವು ನೀಡಿತು. ಜನವರಿ 19ರಂದು ಮೃತರ ಮನೆಗೆ ಭೇಟಿ ನೀಡಿದ್ದ ಚಿಕ್ಕಪ್ಪನ ಮಗ ಜಿ.ಪಿ. ಮಲ್ಲೇಶ್ ಆರೋಗ್ಯ ವಿಚಾರಿಸಿದ್ದಾಗಿ ಹೇಳಿದ್ದರೂ, ನಂತರ ಸಾವಿನ ವಿಷಯ ತಿಳಿದರೂ ಶವ ನೋಡಲು ಬರದೇ ಇರುವುದು ಹಾಗೂ ಮನೆಯಲ್ಲಿದ್ದ ಚಿನ್ನಾಭರಣಗಳು ಕಾಣೆಯಾಗಿರುವುದು ಪೊಲೀಸರ ಸಂಶಯಕ್ಕೆ ಕಾರಣವಾಯಿತು. ತನಿಖೆ ಗಟ್ಟಿಗೊಳಿಸಿದ ಹಳೆನಗರ ಪೊಲೀಸರು, ಜಿ.ಪಿ. ಮಲ್ಲೇಶ್ (44) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಆತ ಹಣದ ಆಸೆಯಿಂದಾಗಿ, ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧ ದಂಪತಿಗೆ ಪ್ರೋಪೊಫಾಲ್ ಇಂಜೆಕ್ಷನ್ ನೀಡಿ ಹತ್ಯೆ ಮಾಡಿದ್ದಾಗಿ ಶಾಕ್‌ಗೊಳಿಸುವ ಹೇಳಿಕೆ ನೀಡಿದ್ದಾನೆ. ಮೃತದೇಹದ ಮೇಲಿದ್ದ ಹಾಗೂ ಮನೆಯ ಅಲಮಾರಿಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿರುವುದನ್ನೂ ಆತ ಒಪ್ಪಿಕೊಂಡಿದ್ದಾನೆ. ಶಿವಮೊಗ್ಗ ಜಿಲ್ಲಾ ಪೊ...

'301 ವೀಣಾ ನಾದ ಝೇಂಕಾರ'

ಇಮೇಜ್
        ಶಿವಮೊಗ್ಗದ ಶ್ರೀ ಸರಸ್ವತಿ ಸಂಗೀತ ವಿದ್ಯಾಲಯದ ರಜತ ಮಹೋತ್ಸವದ ಅಂಗವಾಗಿ, ಸುಶ್ರಾವ್ಯ ಸಂಗೀತ ವಿದ್ಯಾಲಯ ಹಾಗೂ ಶ್ರೀ ಸಾಯಿಶಕ್ತಿ ಸಂಗೀತ ವಿದ್ಯಾಲಯಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ 'ವೀಣಾ ತ್ರಿಶತೋತ್ಸವ' ಕಾರ್ಯಕ್ರಮವನ್ನು ಮೈಸೂರು ರಾಜವಂಶಸ್ಥರು ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೊಂದಿಗೆ ಉದ್ಘಾಟಿಸಲಾಯಿತು.      ಒಂದೇ ವೇದಿಕೆಯಲ್ಲಿ '301 ವೀಣಾ ನಾದ ಝೇಂಕಾರ' (301 Veena Nada Jhankara) ಮೊಳಗಿದ್ದು ನಿಜಕ್ಕೂ ರೋಮಾಂಚನಕಾರಿ ಮತ್ತು ಕಿವಿಗೆ ಇಂಪಾದ ಅನುಭವವಾಗಿತ್ತು. ನಮ್ಮ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಉಳಿಸಿ, ಬೆಳೆಸುತ್ತಿರುವ ಈ ಸಂಸ್ಥೆಗಳ ಕಾರ್ಯ ಶ್ಲಾಘನೀಯ.       ಈ ಸಂದರ್ಭದಲ್ಲಿ ಶ್ರೀ ಡಿ. ಎಸ್. ಅರುಣ್ ವಿಧಾನ ಪರಿಷತ್ ಸದಸ್ಯರು, ಡಾ. ಧನಂಜಯ್ ಸರ್ಜಿ ವಿಧಾನ ಪರಿಷತ್ ಸದಸ್ಯರು, ಶಿವಮೊಗ್ಗ ನಗರದ ಶಾಸಕರಾದ ಎಸ್. ಏನ್ ಚೆನ್ನಬಸಪ್ಪ, ಶ್ರೀ ಕೆ. ಬಿ. ಪ್ರಸನ್ನ ಕುಮಾರ್ ಮಾಜಿ ಶಾಸಕರು, ಶ್ರೀಮತಿ ರೇವತಿ ಕಾಮತ್, ಶ್ರೀ ಉಮೇಶ್ ಹಾಲಾಡಿ ಸೇರಿದಂತೆ ವೇದಿಕೆ ಮೇಲೆ ಗಣ್ಯರು ಉಪಸ್ಥಿತರಿದರು.

ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳಿಗೆ ರಾಷ್ಟ್ರಪತಿ ಪುರಸ್ಕಾರ ಪ್ರಶಸ್ತಿ

ಇಮೇಜ್
ಶಿವಮೊಗ್ಗ: ಬೆಳಗಾವಿಯಲ್ಲಿ ಏರ್ಪಡಿಸಿದ್ದ ಜಾಂಬುರೇಟ್ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಗಳಿಗೆ ಪಿಜಿಆರ್ ಸಿಂಧ್ಯಾ ಅವರು ರಾಷ್ಟ್ರಪತಿ ಪುರಸ್ಕಾರ ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಿದರು.        ಮಲ್ನಾಡ್ ಓಪನ್ ಗ್ರೂಪ್ ವತಿಯಿಂದ ಲೀಡರ್ ಟ್ರೈನರ್ ಎ.ವಿ.ರಾಜೇಶ್ ಅವರ ಮಾರ್ಗದರ್ಶನದಲ್ಲಿ ರೋವರ್ ವಿಭಾಗದ ಪೃಥ್ವಿ ಗಿರಿಮಾಜಿ, ರೇಣುಕಯ್ಯ, ಗೈಡ್ ವಿಭಾಗದಲ್ಲಿ ಸುಶ್ಮಿತಾ ರಾಷ್ಟ್ರಪತಿ ಪುರಸ್ಕಾರ ಪ್ರಶಸ್ತಿ ಪತ್ರ ಪಡೆದಿದ್ದಾರೆ. ಸಿಹಿಮೊಗೆ ಓಪನ್ ಗ್ರೂಪ್ ವತಿಯಿಂದ ಲೀಡರ್ ಟ್ರೈನರ್ ಗೈಡ್ ಕಾತ್ಯಾಯಿನಿ ಅವರ ಮಾರ್ಗದರ್ಶನದಲ್ಲಿ ಗೈಡ್ ಅಲ್ಮಾಜ್ ಮತ್ತು ಎ.ಸಿಂಚನಾ ಅವರು ಪ್ರಶಸ್ತಿ ಪತ್ರ ಪಡೆದಿದ್ದಾರೆ.       ಪ್ರಶಸ್ತಿ ಪತ್ರ ಪುರಸ್ಕೃತರಿಗೆ ಜಿಲ್ಲಾ ಸಂಸ್ಥೆ ವತಿಯಿಂದ ಅಭಿನಂದಿಸಲಾಯಿತು. ಸ್ಕೌಟ್ಸ್ ಮತ್ತು ಗೈಡ್ಸ್ ನ ಪ್ರತಿಷ್ಠಿತ ಉನ್ನತ ಪ್ರಶಸ್ತಿ ಪಡೆದ ಮಕ್ಕಳಿಗೆ ಸನ್ಮಾನಿಸಲಾಯಿತು. ಪ್ರಶಸ್ತಿ ಪತ್ರವು ರಾಷ್ಟ್ರಪತಿ ದ್ರೌಪದಿ ಮುರ್ಮು ಸಹಿ ಮಾಡಿರುತ್ತಾರೆ.       ಇದೇ ಸಂದರ್ಭದಲ್ಲಿ ನಾಯಕಿ ತರಬೇತಿ ಪಡೆದಿರುವ ಹೇಮಲತಾ ಅವರನ್ನು ಸನ್ಮಾನಿಸಲಾಯಿತು. ಪಿಜಿಆರ್ ಸಿಂಧ್ಯಾ ಅವರು ಶಿವಮೊಗ್ಗ ದಿನವನ್ನು ಉದ್ಘಾಟಿಸಿ ಜಿಲ್ಲೆಯ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು.       ಸಮಾರಂಭದಲ್ಲಿ ಕೇಂದ್ರ ಸ್ಥಾನಿಕ ಆಯುಕ್ತ ...

ರಕ್ತದಾನ ಮಾಡುವುದರಿಂದ ಸದೃಢ ಆರೋಗ್ಯ

ಇಮೇಜ್
ಶಿವಮೊಗ್ಗ: ಜಿಲ್ಲೆಯ ಕೈಗಾರಿಕಾ ಕ್ಷೇತ್ರಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡರ ಕೊಡುಗೆ ಅಪಾರ ಎಂದು ಶಿವಮೊಗ್ಗ-ಭದ್ರಾವತಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ಡಿ.ಜಿ.ಬೆನಕಪ್ಪ ಹೇಳಿದರು.       ಶಾಂತಲಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್.ರುದ್ರೇಗೌಡ ಹಾಗೂ ಮಲ್ನಾಡ್ ಅಲಾಯ್ಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ವೈ.ವಿ.ಮಧುಕರ ಜೋಯ್ಸ್ ಅವರ ಜನ್ಮದಿನದ ಪ್ರಯುಕ್ತ ಶಿವಮೊಗ್ಗ-ಭದ್ರಾವತಿ ಕೈಗಾರಿಕೆಗಳ ಸಂಘ ಮಾಚೇನಹಳ್ಳಿಯಲ್ಲಿ ರೆಡ್ ಕ್ರಾಸ್ ಸಂಜೀವಿನಿ ರಕ್ತನಿಧಿ, ಶಿವಮೊಗ್ಗ ಮಿಡ್ ಟೌನ್ ರೋಟರಿ ರಕ್ತನಿಧಿ ಹಾಗೂ ಸುಬ್ಬಯ್ಯ ಆಸ್ಪತ್ರೆ ರಕ್ತನಿಧಿ ಸಹಕಾರದೊಂದಿಗೆ ಆಯೋಜಿಸಿದ್ದ “ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ”ದಲ್ಲಿ ಮಾತನಾಡಿದರು.      ಎಸ್.ರುದ್ರೇಗೌಡ ಹಾಗೂ ಮಧುಕರ್ ಜೋಯಿಸ್ ಅವರು ದಾನಿಗಳು ಹಾಗೂ ಕೈಗಾರಿಕಾ ಉದ್ಯಮಿಗಳಾಗಿದ್ದಾರೆ. ಸಾಕಷ್ಟು ಜನರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.       ನಮ್ಮ ವೃತ್ತಿಯ ಜೊತೆಗೆ ಸಮಾಜ ಸೇವೆಯು ಅತಿ ಮುಖ್ಯ. ವಿಶೇಷ ದಿನಗಳಂದು ರಕ್ತದಾನ ಶಿಬಿರ ಆಯೋಜಿಸುವುದರಿಂದ ಸಾಕಷ್ಟು ಅನುಕೂಲವಾಗುತ್ತದೆ. ತುರ್ತು ಸಂದರ್ಭದಲ್ಲಿ ಇರುವವರಿಗೆ ರಕ್ತ ದೊರೆಯಲು ಸಹಕಾರಿಯಾಗುತ್ತದೆ. ರಕ್ತದಾನ ಮಾಡುವುದರಿಂದ ನಮ್ಮ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಸದಾ ಆರೋಗ್ಯದಿಂದ ಇರುತ್ತೇವೆ. ಇನ್ನೊಬ್ಬರ ಪ್ರಾಣ ಉಳಿಸಿದ ತೃಪ್ತಿ ಸಿ...

ನೂತನ ಜಿಲ್ಲಾ ವರಿಷ್ಠಾಧಿಕಾರಿ ನಿಖಿಲ್ ರವರಿಗೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್. ಜಿಲ್ಲಾ ಸಂಸ್ಥೆ ಹಾಗೂ ಸ್ಥಳಿಯ ಸಂಸ್ಥೆ ವತಿಯಿಂದ ಅಭಿನಂದನೆ

ಇಮೇಜ್
      ನೂತನ ಜಿಲ್ಲಾ ವರಿಷ್ಟಾದಿ ಕಾರಿಗಳಾಗಿ ಶಿವಮೊಗ್ಗಕ್ಕೆ ಆಗಮಿಸಿ  ಅಧಿಕಾರ ವಹಿಸಿಕೊಂಡ  ನಿಖಿಲ್  ಸರ್. ರವರಿಗೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆ ವತಿಯಿಂದ ಆತ್ಮೀಯವಾಗಿ ಅಭಿನಂದಿಸಿ ಗೌರವಿಸಲಾಯಿತು ಇದೇ ಸಂದರ್ಭದಲ್ಲಿ ಇದೇ ತಿಂಗಳು ದಿನಾಂಕ 10 ಮತ್ತು 11ರಂದು. ಸ್ಕೌಟ್ಸ್ ಅಂಡ್ ಗೈಡ್ಸ್ ನ  ಶತಮಾನೋತ್ಸವ ಹಾಗೂ ಜಿಲ್ಲಾ ಮಟ್ಟದ ರ್ಯಾಲಿ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಆಮಂತ್ರಣ ಪತ್ರಿಕೆ ನೀಡಿ ವಿನಂತಿಸಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಪ್ರಧಾನ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್. ಕೇಂದ್ರ ಸ್ಟಾನಿಕ ಆಯುಕ್ತರುಗಳಾದ .. ಜಿ ವಿಜಯಕುಮಾರ್. ಕೆ ರವಿ. ಎಸ್ ಜಿ ಆನಂದ್. ಮಲ್ಲಿಕಾರ್ಜುನ ಖಾನೂರ್. ಜಿಲ್ಲಾ ಕಾರ್ಯದರ್ಶಿ ಕೆ ವಿ ಚಂದ್ರಶೇಖರಯ್ಯ ಜಿಲ್ಲಾ ಖಜಾಂಚಿ. ಚೂಡಾಮಣಿ ಈ ಪವಾರ್. ಜಿಲ್ಲಾ ತರಬೇತಿ ಆಯುಕ್ತರನಾದ ಚಂದ್ರಶೇಖರಯ್ಯ  ಕೃಷ್ಣ ಸ್ವಾಮಿ. ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್  ಚಟುವಟಿಕೆಗಳ ಬಗ್ಗೆ  ತಿಳಿಸಿ ಮಕ್ಕಳಿಗೆ ರಸ್ತೆ ಅಪಘಾತ ಹಾಗೂ ಕಾನೂನಿನ ಬಗ್ಗೆ ಅರಿವು ಮೂಡಿಸಲು ಕೇಳಿಕೊಳ್ಳಲಾಯಿತು

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಶತಮಾನೋತ್ಸವ ಜ. 10, 11ಕ್ಕೆ

ಇಮೇಜ್
ಶಿವಮೊಗ್ಗ: ನಗರದ ಜಿಲ್ಲಾ ಸ್ಕೌಟ್ ಭವನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಜನವರಿ 10 ಮತ್ತು 11ರಂದು ಶಿವಮೊಗ್ಗ ಜಿಲ್ಲಾ ಸಂಸ್ಥೆ ಶತಮಾನೋತ್ಸವ, ಟಿ.ವಿ.ನಾರಾಯಣ ಶಾಸ್ತ್ರಿಗಳ ಜನ್ಮ ಶತಮಾನೋತ್ಸವ ಸ್ಮರಣಾರ್ಥ ಜಿಲ್ಲಾ ಮಟ್ಟದ ಸ್ಕೌಟ್ಸ್-ಗೈಡ್ಸ್ ಮತ್ತು ರೋವರ್ಸ್-ರೇಂಜರ್ಸ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಜನವರಿ 10ರಂದು ಸಂಜೆ 4.30ಕ್ಕೆ ಜಿಲ್ಲಾ ಮುಖ್ಯ ಆಯುಕ್ತೆ ಶಕುಂಲತಲಾ ಚಂದ್ರಶೇಖರ್ ರ‍್ಯಾಲಿ ಧ್ವಜಾರೋಹಣ ನೆರವೇರಿಸುವರು. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಪಥ ಸಂಚಲನಕ್ಕೆ ಚಾಲನೆ ನೀಡುವರು. ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್ ಭಾಗವಹಿಸುವರು. ಜನವರಿ ಸಂಜೆ 6.30ಕ್ಕೆ ಶತಮಾನೋತ್ಸವ ಹಾಗೂ ಜಿಲ್ಲಾಮಟ್ಟದ ರ‍್ಯಾಲಿ ಉದ್ಘಾಟನಾ ಸಮಾರಂಭವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸುವರು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಅಧ್ಯಕ್ಷತೆ ವಹಿಸುವರು. ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ, ಶಾಸಕ ಎಸ್.ಎನ್.ಚನ್ನಬಸಪ್ಪ, ಗೋಪಾಲಕೃಷ್ಣ ಬೇಳೂರು, ಎಂಎಲ್‌ಸಿ ಡಿ.ಎಸ್.ಅರುಣ್ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭಾಗವಹಿಸುವರು. ಜನವರಿ 10ರ ರಾತ್ರಿ 9ಕ್ಕೆ ಭವ್ಯ ಶಿಬಿರಾಗ್ನಿ ಕಾರ್ಯಕ್ರಮವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಕಾರ್ಯದರ್ಶಿ ಕೆ.ಗಂಗಪ್ಪ ಗೌಡ ನಡೆಸಿಕೊಡುವರು. ಜನವರಿ 11ರ ಬೆಳಗ್ಗೆ 9.30ಕ್ಕೆ ಕೌಶಲ್ಯ ದರ್ಶನ ಕಾರ್ಯಕ್...

ಮರೆತು ಹೋದ ದೀಪ: ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ ಫಾತಿಮಾ ಶೇಖ್

ಇಮೇಜ್
  – ಶಿಕ್ಷಣವೇ ಮುಕ್ತಿ ಎಂಬ ಕ್ರಾಂತಿಕಾರಿ ಹೆಜ್ಜೆಯ ಕಥೆ              ಇಂದಿನ ಭಾರತದಲ್ಲಿ ಹೆಣ್ಣುಮಕ್ಕಳ ಶಿಕ್ಷಣ, ಸಮಾನತೆ, ಸಾಮಾಜಿಕ ನ್ಯಾಯ ಎಂಬ ಪದಗಳು ಸಾಮಾನ್ಯವಾಗಿ ಕೇಳಿಬರುತ್ತಿವೆ. ಆದರೆ ಈ ಹೋರಾಟದ ಬೇರುಗಳು ಎಲ್ಲಿ ನೆಲೆಯೂರಿವೆ ಎಂದು ಪ್ರಶ್ನಿಸಿದರೆ, ಇತಿಹಾಸದ ಪುಟಗಳಲ್ಲಿ ಅನೇಕ ಮರೆತಿಹೋದ ಮುಖಗಳು ಕಾಣಿಸುತ್ತವೆ. ಆ ಪೈಕಿ ಪ್ರಮುಖವಾಗಿ ನೆನಪಿಸಿಕೊಳ್ಳಬೇಕಾದ ಹೆಸರು ಫಾತಿಮಾ ಶೇಖ್ (1831–1900ರ ದಶಕ) — ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ, ಸಾಮಾಜಿಕ ಅಸಮಾನತೆಗಳ ವಿರುದ್ಧ ಶಿಕ್ಷಣವನ್ನು ಆಯುಧವನ್ನಾಗಿಸಿಕೊಂಡ ಕ್ರಾಂತಿಕಾರಿ ಮಹಿಳೆ. ಶಿಕ್ಷಣವೇ ಅಪರಾಧವಾಗಿದ್ದ ಕಾಲ         19ನೇ ಶತಮಾನದಲ್ಲಿ ಮಹಿಳೆಯರಿಗೆ, ಅದರಲ್ಲೂ ದಲಿತರು ಮತ್ತು ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳಿಗೆ ಶಿಕ್ಷಣ ಎಂದರೆ ಪಾಪವೆನ್ನುವ ಸಮಾಜವಿತ್ತು. ಹೆಣ್ಣು ಓದಿದರೆ ಮನೆ ಹಾಳಾಗುತ್ತದೆ, ಜಾತಿ ಕೆಡುತ್ತದೆ, ಧರ್ಮ ಅಪಾಯಕ್ಕೆ ಸಿಲುಕುತ್ತದೆ ಎಂಬ ಅಂಧನಂಬಿಕೆಗಳು ಆಳವಾಗಿ ಬೇರೂರಿದ್ದ ಕಾಲ ಅದು. ಇಂತಹ ಕತ್ತಲೆಯ ಯುಗದಲ್ಲಿ, ದೀಪದಂತೆ ಬೆಳಗಿದವರು ಫಾತಿಮಾ ಶೇಖ್. ಉಸ್ಮಾನ್ ಶೇಖ್ ಮತ್ತು ಫಾತಿಮಾ ಶೇಖ್ – ಕ್ರಾಂತಿಯ ಮನೆಯೊಂದು         ಪುಣೆಯಲ್ಲಿ ಜನಿಸಿದ ಫಾತಿಮಾ ಶೇಖ್ ಅವರಿಗೆ ವಿದ್ಯಾಭ್ಯಾಸದ ಪ್ರೇರಣೆ ನೀಡಿದವರು ಅವರ ಸಹೋದರ ಉಸ್ಮಾನ್ ಶೇಖ್. ಸಮಾಜ...

ತಂತ್ರಜ್ಞಾನದಲ್ಲಿ ಹೊಸ ಅಧ್ಯಾಯ: ಕರ್ನಾಟಕ ಮತ್ತು ಪೆನಾಂಗ್ ಸಹಯೋಗ

ಇಮೇಜ್
        ಮಲೇಷ್ಯಾದ ಪೆನಾಂಗ್‌ನ ಉನ್ನತ ಮಟ್ಟದ ನಿಯೋಗವು ಕ್ವಾಂಟಮ್ ತಂತ್ರಜ್ಞಾನ ಪ್ರಗತಿಯಲ್ಲಿ ಕರ್ನಾಟಕದೊಂದಿಗೆ ಸಹಕರಿಸಲು ಆಸಕ್ತಿ ಹೊಂದಿದೆ. ಸಂಭಾವ್ಯ ಪಾಲುದಾರಿಕೆಯು ಶಿಕ್ಷಣ, ಸಂಶೋಧನೆ ಮತ್ತು ಕೈಗಾರಿಕಾ ಸಿನರ್ಜಿಗಳ ಮೇಲೆ ಕೇಂದ್ರೀಕರಿಸುತ್ತದೆ, ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್‌ಗಳಲ್ಲಿ ಎರಡೂ ಪ್ರದೇಶಗಳ ನಾಯಕತ್ವವನ್ನು ಹೆಚ್ಚಿಸುತ್ತದೆ. ಉಪಮುಖ್ಯಮಂತ್ರಿ ಜಗದೀಪ್ ಸಿಂಗ್ ಡಿಯೋ ನೇತೃತ್ವದ ಮಲೇಷ್ಯಾದ ಪೆನಾಂಗ್‌ನ ಉನ್ನತ ಮಟ್ಟದ ನಿಯೋಗವು ಕ್ವಾಂಟಮ್ ತಂತ್ರಜ್ಞಾನದ ಪ್ರಗತಿಗಾಗಿ ಕರ್ನಾಟಕದೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ತೀವ್ರ ಆಸಕ್ತಿಯನ್ನು ವ್ಯಕ್ತಪಡಿಸಿದೆ. ಕ್ವಾಂಟಮ್ ಮೆಕ್ಯಾನಿಕ್ಸ್ ಕ್ಷೇತ್ರದಲ್ಲಿ ಶೈಕ್ಷಣಿಕ ಏಕೀಕರಣ, ಸಂಶೋಧನಾ ಮೂಲಸೌಕರ್ಯ ಮತ್ತು ಉದ್ಯಮದ ಬೆಳವಣಿಗೆಯ ಮೇಲೆ ಸಹಕರಿಸಲು ಎರಡೂ ಪ್ರದೇಶಗಳು ಗುರಿಯನ್ನು ಹೊಂದಿವೆ.        ವಿಕಾಸ್ ಸೌಧದಲ್ಲಿ ನಡೆದ ಸಭೆಯ ನಂತರ ಕರ್ನಾಟಕದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಬೋಸೆರಾಜು ಈ ಬೆಳವಣಿಗೆಯನ್ನು ಬಹಿರಂಗಪಡಿಸಿದರು. 'ತ್ಯಾಜ್ಯದಿಂದ ಸಂಪತ್ತಿಗೆ' ನೀರು ನಿರ್ವಹಣಾ ಯೋಜನೆ ಸೇರಿದಂತೆ ಸುಸ್ಥಿರ ಅಭಿವೃದ್ಧಿ ಮತ್ತು ತಂತ್ರಜ್ಞಾನ ನಾವೀನ್ಯತೆಗಳಲ್ಲಿ ಕರ್ನಾಟಕದ ಉಪಕ್ರಮಗಳನ್ನು ಚರ್ಚೆಗಳು ಒತ್ತಿಹೇಳಿದವು.         ಪೆನಾಂಗ್ ನಿಯೋಗವು ಕರ್ನಾಟಕದ ಉಪಕ್ರಮಗಳನ್ನು ಶ್ಲಾಘಿಸಿತು ...

ಒಕ್ಕಲಿಗರ ಮಹಿಳಾ ವೇದಿಕೆಯಿಂದ ಮಲೆನಾಡು ಮೇಳ ಜನವರಿ 7ಕ್ಕೆ

ಇಮೇಜ್
ಶಿವಮೊಗ್ಗ: ಪಂಪ ನಗರದಲ್ಲಿರುವ ಜಿಲ್ಲಾ ಒಕ್ಕಲಿಗರ ಮಹಿಳಾ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಜನವರಿ 7ರಂದು ಬೆಳಗ್ಗೆ 9.30ಕ್ಕೆ ಮಲೆನಾಡು ಮೇಳ ಆಯೋಜಿಸಲಾಗಿದೆ. ವಿದ್ಯಾ ನಾಗೇಶ್, ಪ್ರಭಾ ಶ್ರೀನಾಥ್ ಅವರು ಮಲೆನಾಡು ಮೇಳ ಉದ್ಘಾಟಿಸುವರು. ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ  ರಮೇಶ್ ಹೆಗಡೆ ಅಧ್ಯಕ್ಷತೆ ವಹಿಸುವರು. ಕಾರ್ಯನಿರ್ವಾಹಕ ಅಭಿಯಂತರ ಬಿ.ಇ.ವಿರೇಂದ್ರ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಉಪಸ್ಥಿತರಿರುವರು. ಜಿಲ್ಲಾ ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷೆ ಪ್ರೇಮಾ ವೆಂಕಟೇಶ್, ಕಾರ್ಯದರ್ಶಿ ಕಾವ್ಯ ಸತೀಶ್, ಖಜಾಂಚಿ ಸೌರಭ ಹರ್ಷ ಹಾಗೂ ಸಂಘದ ಸದಸ್ಯನಿಯರು ಉಪಸ್ಥಿತರಿರುವರು. ಕಾಂಚಿಪುರಂನಿಂದ ಬರುತ್ತಿರುವ ರೇಷ್ಮೆ ಸೀರೆಗಳ ನೇರ  ಮಾರಾಟ, ಫ್ಯಾನ್ಸಿ ಸೀರೆಗಳು, ಡ್ರೆಸ್, ಬೆಡ್ ಲೈನರ್, ಗೃಹಪಯೋಗಿ ವಸ್ತುಗಳು, ಅಲಂಕಾರಿಕ ಸಾಮಾಗ್ರಿಗಳು, ಮನೆಯಲ್ಲಿ ತಯಾರಿಸಿದ ರುಚಿಕರ ಸಸ್ಯಾಹಾರಿ ಹಾಗೂ ಮಾಂಸಾಹಾರಿ ತಿನಿಸುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಹಳೆಯ ಝರಿ ಸೀರೆಯನ್ನು ಒಳ್ಳೆಯ ಬೆಲೆಯಲ್ಲಿ ತೆಗೆದುಕೊಳ್ಳಲಾಗುವುದು. ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುತ್ತಿರುವ ಮಹಿಳಾ ಉದ್ಯಮಿಗಳನ್ನು ಹುರಿದುಂಬಿಸಲು ಪ್ರತಿ ವರ್ಷ ಮೇಳ ಆಯೋಜಿಸಲಾಗುತ್ತಿದೆ ಎಂದು ಸ್ಟಾಲ್ ನಿರ್ವಾಹಕರಾದ ಅಂಜು ಸುರೇಶ್ ಹಾಗೂ ಸುಪ್ರಿಯಾ ರಾಮಪ್ಪ ತಿಳಿಸಿದ್ದಾರೆ. ಹೆಚ್ಚಿನ ಮಾಹ...

ರಾಜಕೀಯದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ ತೃಪ್ತಿ

ಇಮೇಜ್
ಶಿವಮೊಗ್ಗ: ರಾಜಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದ್ದೇನೆ ಎಂದು ಮಾಜಿ ಶಾಸಕ ಬಿ.ಸ್ವಾಮಿರಾವ್ ಹೇಳಿದರು. ಕರ್ನಾಟಕ ಸಂಘ ಮತ್ತು ವಿಕಾಸರಂಗ ಸಂಯುಕ್ತವಾಗಿ ಕೀರ್ತಿಶೇಷ ಕೆ.ಸಿ.ಪ್ರಭಾಕರ್ ಸ್ಮರಣಾರ್ಥ ಕರ್ನಾಟಕ ಸಂಘದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಹೊಸನಗರ ಕ್ಷೇತ್ರದ ಏಳು ಚುನಾವಣೆಗಳಲ್ಲಿ ನಾನು ಸೋತಿದ್ದು, ಮೂರು ಚುನಾವಣೆಗಳಲ್ಲಿ ಗೆದ್ದು ಶಾಸಕನಾಗಿ ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದ್ದೇನೆ. ನಮ್ಮ ಕಾರ್ಯಕ್ಕೆ ಕರ್ನಾಟಕ ಸಂಘ ಮತ್ತು ವಿಕಾಸ ರಂಗ ಸಂಸ್ಥೆಗಳು ಸನ್ಮಾನಿಸುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು. ವಿದ್ಯಾರ್ಥಿ ದೆಸೆಯಲ್ಲಿ ಜ್ಞಾನ ನೀಡಿದ್ದು ಕರ್ನಾಟಕ ಸಂಘ. ನಮ್ಮ ಜ್ಞಾನದಾಹವನ್ನು ತೀರಿಸಿ ಜ್ಞಾನಮಾರ್ಗಕ್ಕೆ ಕರೆದುಕೊಂಡು ಹೋದ ಕರ್ನಾಟಕ ಸಂಘ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಹೆಸರು ಮಾಡಿದ ವಿಕಾಸರಂಗ ಜಂಟಿಯಾಗಿ ಸನ್ಮಾನಿಸುತ್ತಿರುವುದು ನನ್ನ ಜೀವಮಾನದ ಪ್ರಮುಖ ಘಟನೆಯಾಗಿದೆ ಎಂದು ಹೇಳಿದರು. ಹಿರಿಯ ವಕೀಲ ಬಿ.ಎನ್.ಕೃಷ್ಣಮೂರ್ತಿ, ವೈದ್ಯ ಡಾ. ಚಿಕ್ಕಸ್ವಾಮಿ ಮತ್ತು ಪ್ರೊ. ಎಸ್.ಪಂಚಾಕ್ಷರಿ ಅವರನ್ನು ಸನ್ಮಾನಿಸಲಾಯಿತು. ಬಿ.ಎನ್.ಕೃಷ್ಣಮೂರ್ತಿ ಮಾತನಾಡಿ, ವೃತ್ತಿಜೀವನದ ಆರಂಭದಲ್ಲಿ ಇದ್ದಂತಹ ಪರಿಸ್ಥಿತಿ ಈಗ ಸಮಾಜದಲ್ಲಿ ನೋಡಲು ಸಾಧ್ಯವಿಲ್ಲ. ತನ್ನನ್ನು ತಿದ್ದಿ ಒಬ್ಬ ವಕೀಲನನ್ನಾಗಿ ಮಾಡಿದ ಎಸ್.ನರಸಿಂಹಮೂರ್ತಿ ಅವರನ್ನು ಸದಾ ಸ್ಮರಿಸುತ್ತೇನೆ ಎಂದರು. ಡಾ. ಚ...

ದೇಶದ ರಕ್ಷಣೆ, ಸ್ವಸ್ಥ ಸಮಾಜ, ಭಾರತದ ಭವ್ಯಭವಿಷ್ಯಕ್ಕಾಗಿ ಮಾದಕವಸ್ತು ಮುಕ್ತಗೊಳಿಸಿ : ಪ್ರಭುಲಿಂಗ ಕವಳಿಕಟ್ಟಿ

ಇಮೇಜ್
ಶಿವಮೊಗ್ಗ : ಜನವರಿ 06 : ದೇಶದ ರಕ್ಷಣೆ, ಸ್ವಸ್ಥ ಸಮಾಜ ನಿರ್ಮಾಣ, ಭಾರತದ ಭವ್ಯಭವಿಷ್ಯಕ್ಕಾಗಿ ಮಾದಕ ವಸ್ತುಗಳ ವ್ಯಸನ, ಮಾರಾಟ ಮತ್ತು ಕಳ್ಳಸಾಗಾಣೆ ವಿರುದ್ಧ ಜನಜಾಗೃತಿಗೊಳಿಸಲು ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಂಕಲ್ಪ ಮಾಡುವಂತೆ ನೂತನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು. ಅವರು ಇಂದು ಪರಿವರ್ತನಾ ಟ್ರಸ್ಟ್, ಬೆಂಗಳೂರು, ಜಿಲ್ಲಾಡಳಿತ, ರೋಟರಿ ಸಂಸ್ಥೆ ಶಿವಮೊಗ್ಗದ ವಿವಿಧ ವಲಯಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಡ್ರಗ್ಸ್  ಮುಕ್ತ ಕರ್ನಾಟಕ ಜನಜಾಗೃತಿ ವಾಹನಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಸಹಜ ಕುತೂಹಲದಿಂದ ನಿಧಾನವಾಗಿ ಆರಂಭಗೊಳ್ಳುವ ಮಾದಕ ವಸ್ತುಗಳ ಸೇವನೆ, ಕೊನೆಯಲ್ಲಿ ಚಟವಾಗಿ ಪರಿಣಮಿಸಲಿದೆ. ಇದರಿಂದಾಗಿ ಅಸಂಖ್ಯಾತ ಯುವಕ-ಯುವತಿಯರು ತಮಗೆ ಅರಿವಿಲ್ಲದೆಯೆ ಅಮೂಲ್ಯವಾದ ಭವಿಷ್ಯವನ್ನು ಯಾತನಾಮಯವಾಗಿಸಿಕೊಳ್ಳುತ್ತಿದ್ದಾರೆ ಎಂದರು. ಮನೋರಂಜನೆ, ಹವ್ಯಾಸಿ ಕ್ಲಬ್  ಗಳು, ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಅಭಿವೃದ್ದಿಯಾದಂತೆ ಪರಿಸರದ ಮೇಲೆ ಆಗಿರುವ ಪ್ರಭಾವ, ಅದರ ಪರಿಣಾಮಗಳು ಗೋರವಾಗಿವೆ. ಇಂದಿನ ಯುವ ಪೀಳಿಗೆ ಮಾದಕ ವಸ್ತುಗಳ ಮೋಹಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆ ಕ್ರಮ ಅಗತ್ಯವಾಗಿದೆ. ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳದೆ ಇರುವಂತೆ ಯುವಕರ ಗಮನ ಕೇಂದ್ರೀಕರಿಸಬೇಕಾದ ಅಗತ್ಯವಿದೆ. ನೈತಿಕ ಸ್ವಭಾವವೂ ಬದಲಾಗದಂತೆ ನೋಡಿಕೊಳ್ಳಬೇಕಾದ ಅಗತ್ಯ ...

ಸಂಗೀತ ಕಲಿಯುವುದರಿಂದ ಏಕಾಗ್ರತೆ ವೃದ್ಧಿ

ಇಮೇಜ್
  ಶಿವಮೊಗ್ಗ: ಒತ್ತಡದ ಕಾರ್ಯ ಹಾಗೂ ಜೀವನಶೈಲಿಯಿಂದ ಹೊರಬರಲು ಸಂಗೀತ ಆಲಿಸುವಿಕೆ ಮತ್ತು ಕಲಿಕೆಯು ಸಹಕಾರಿಯಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಆರ್.ಮಂಜುನಾಥ್ ಹೇಳಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಶಿವಮೊಗ್ಗ ಶಿಕ್ಷಕರ ಗಾಯನ ವೇದಿಕೆಯಿಂದ ಆಯೋಜಿಸಿದ್ದ ಗಾಯನ ಸಮ್ಮಿಲನ 1 ಕಾರ್ಯಕ್ರಮದಲ್ಲಿ ಮಾತನಾಡಿ, ಸುಮಧುರವಾದ ಸಂಗೀತ ಆಲಿಸುವಿಕೆಯು ಮನಸ್ಸನ್ನು ಸಂತೋಷಗೊಳಿಸುತ್ತದೆ. ಸಂಗೀತ ಕಲಿಯುವುದರಿಂದ ಏಕಾಗ್ರತೆ ಮತ್ತು ಕ್ರಿಯಾಶೀಲತೆ ವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಶಿಕ್ಷಕರು ಕಾಲಕಾಲಕ್ಕೆ ಈ ರೀತಿ ಕಾರ್ಯಕ್ರಮಗಳನ್ನು ಆಯೋಜಿಸಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಚಿತ್ರಗೀತೆ, ಭಾವಗೀತೆ ಹಾಗೂ ಜಾನಪದ ಗೀತೆಗಳನ್ನು ಹಾಡಬೇಕು. ಇಂತಹ ಸಾಂಸ್ಕೃತಿಕ ವೇದಿಕೆಗಳು ಅತ್ಯಂತ ಅವಶ್ಯಕ ಎಂದರು. ರಾಗರಂಜಿನಿ ಟ್ರಸ್ಟ್ ಸ್ವರ ಸಂಯೋಜಕ ಪ್ರಹ್ಲಾದ್ ದೀಕ್ಷಿತ್ ಮಾತನಾಡಿ, ಸಂಗೀತ ಆಸಕ್ತರು ಗುರುಗಳ ಮಾರ್ಗದರ್ಶನದಲ್ಲಿ ನಿರಂತರ ಅಭ್ಯಾಸ ಮಾಡಬೇಕು. ಜೀವನ ಸುಂದರಗೊಳಿಸಲು ಸಂಗೀತ ನೆರವಾಗುತ್ತದೆ ಎಂದು ಹೇಳಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಸಂಗೀತ ಆಲಿಸುವುದರಿಂದ ಮನಸ್ಸು ಸಂತಸಗೊಂಡು ಒತ್ತಡಮುಕ್ತರಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಎಸ್.ಆರ್.ಮಂಜುನಾಥ್, ಪ್ರಹ್ಲಾದ್ ದೀಕ್ಷಿತ್ ಹಾಗೂ ಜಿ.ವಿಜಯಕುಮಾರ್ ಅವರನ್ನು ಸ...

ಯೋಧರು ಭಾರತೀಯ ಯುವಪೀಳಿಗೆಗೆ ಪ್ರೇರಣೆ

ಇಮೇಜ್
ಶಿವಮೊಗ್ಗ: ದೇಶಕ್ಕಾಗಿ ಸೇವೆ ಸಲ್ಲಿಸುವ ಯೋಧರು ಭಾರತೀಯ ಯುವಪೀಳಿಗೆಗೆ ಪ್ರೇರಣೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು. ನವುಲೆಯ ಇಂದಿರಾಗಾಂಧಿ ಬಡಾವಣೆ ನಿವಾಸಿಗಳ ಸಂಘದಿಂದ ಆಯೋಜಿಸಿದ್ದ 8ನೇ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿ, ಯೋಧರನ್ನು ಸನ್ಮಾನಿವುಸುದು ನನಗೆ ಸಿಕ್ಕಿರುವ ಭಾಗ್ಯ. ಯುವಜನರು ದೇಶಕ್ಕಾಗಿ ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ರಾಷ್ಟ್ರಭಕ್ತರ ಬಳಗದ ಯುವ ಮುಖಂಡ ಕೆ.ಇ.ಕಾಂತೇಶ್ ಮಾತನಾಡಿ, ಸಾರ್ವಜನಿಕ ಸಮಸ್ಯೆಗಳು ಹಾಗೂ ಬಡಾವಣೆಗಳ ಅಭಿವೃದ್ಧಿಗೆ ಸದಾ ಪ್ರಾಮಾಣಿಕವಾಗಿ ಶ್ರಮಿಸುವುದರ ಮುಖಾಂತರ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಭರವಸೆ ನೀಡಿದರು. ಪಾಲಿಕೆ ಮಾಜಿ ಸದಸ್ಯ ವಿಶ್ವಾಸ್ ಮಾತನಾಡಿ, ಅತಿ ಹೆಚ್ಚು ಅನುದಾನ ತಂದಿರುವುದರಲ್ಲಿ ನಮ್ಮ ಬಡಾವಣೆ ಮುಂಚೂಣಿಯಲ್ಲಿದ್ದು, ಬಡಾವಣೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಸಹ ಅದರ ಪರಿಹಾರಕ್ಕೆ ಸಾರ್ವಜನಿಕರ ಜೊತೆ ಕೈಜೋಡಿಸುತ್ತೇನೆ ಎಂದು ನುಡಿದರು. ಕರ್ನಾಟಕ ರಾಜ್ಯ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಯುವ ಕಾಂಗ್ರೆಸ್ ಮುಖಂಡ ಚೇತನ್.ಕೆ ಮಾತನಾಡಿ, ಬಡಾವಣೆ ನಿವಾಸಿಗಳಲ್ಲಿ ಹೆಚ್ಚಿನವರು ಹಿರಿಯರೇ  ಇದ್ದು, ಅವರು ಬಡಾವಣೆಯ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಅಭಿನಂದನೀಯ ಎಂದರು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಯೋಧರಾದ ನಾಯ್ಕ್ ಪ್ರವೀಣ್ ಕುಮಾರ್ (ಇಎಂಇ...

ಯುವಜನರಲ್ಲಿ ನಾಯಕತ್ವ ಗುಣ ಬೆಳೆಸುವ ಜೆಸಿಐ ಸಂಸ್ಥೆ

ಇಮೇಜ್
  ಶಿವಮೊಗ್ಗ: ಯುವಜನರು ಜೆಸಿಐ ಸಂಸ್ಥೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ತಮ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ಭರತ್ ಎನ್ ಆಚಾರ್ಯ ಹೇಳಿದರು. ಜೆಸಿಐ ಶಿವಮೊಗ್ಗ ರಾಯಲ್ಸ್ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಯುವ ಜನರಿಗೆ ಜೆಸಿಐ ಸಂಸ್ಥೆ ಅತ್ಯುತ್ತಮ ಸಂಸ್ಥೆಯಾಗಿದ್ದು, ಯುವ ನಾಯಕರನ್ನು ಸಮಾಜಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು. ವಲಯ 24ರ ಅಧ್ಯಕ್ಷ ಸಿ.ಎ.ಮಧುಸೂದನ್ ನಾವಡ ಮಾತನಾಡಿ,  ಜೋನ್ 24ಕ್ಕೆ ಸುವರ್ಣ ಕಾಲ ಇದಾಗಿದ್ದು, ಕರ್ನಾಟಕದ ಭರತ್ ಎನ್.ಆಚಾರ್ಯ ಅವರು ನಮ್ಮ ರಾಷ್ಟ್ರೀಯ ನಾಯಕನಾಗಿದ್ದು, ಅನುಷ್ ಗೌಡ ಅವರು ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಹೇಳಿದರು. ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸುವುದರ ಜೊತೆಗೆ ಸಂಸ್ಥೆಗೆ ಸಮರ್ಪಕವಾಗಿ ಸೇವೆ ಸಲ್ಲಿಸಲು ಅತ್ಯುತ್ತಮ ಅವಕಾಶವನ್ನು ನೀಡಿವೆ. ಯುವಜನತೆಯನ್ನು ತೊಡಗಿಸಿಕೊಳ್ಳುವ ಮೂಲಕ, ಅವರಿಗೆ ಜೀವನದಲ್ಲಿ ಬೆಳೆಯಲು ವಿವಿಧ ಅವಕಾಶಗಳನ್ನು ಕಲ್ಪಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಈ ದಿಕ್ಕಿನಲ್ಲಿ ಸಂಘಟನೆಯೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸುವುದು ನಮಗೆ ಅಪಾರ ಸಂತೋಷ ಹಾಗೂ ಗೌರವದ ವಿಷಯವಾಗಿದೆ ಎಂದು ತಿಳಿಸಿದರು. ವಲಯ ಉಪಾಧ್ಯಕ್ಷ ಅಮೃತ್ ಸಿ ಮಾತನಾಡಿ, ಯುವಜನತೆ ಹೆಚ್ಚಿನ ಸಂಖ್ಯೆಯಲ...

ಸಾವಿತ್ರಿಬಾಯಿ ಫುಲೆ: ಅಕ್ಷರದ ದೀಪ ಬೆಳಗಿಸಿದ ಅವ್ವ - Savitribai Phule: The Mother Who Lit the Lamp of Letters

ಇಮೇಜ್
  ಸಾವಿತ್ರಿಬಾಯಿ ಫುಲೆ: ಅಕ್ಷರದ ದೀಪ ಬೆಳಗಿಸಿದ ಅವ್ವ ವಿಶೇಷ ಅಂಕಣ : ನವೀನ್ ತಲಾರಿ (ಕನ್ನಡ / english)          ಒಂದು ಕಾಲದಲ್ಲಿ ಮಹಿಳೆಗೆ ಅಕ್ಷರವೇ ಅಪರಾಧವಾಗಿದ್ದ ಸಮಾಜದಲ್ಲಿ, ಕೈಯಲ್ಲಿ ಪುಸ್ತಕ ಹಿಡಿದು, ಹೃದಯದಲ್ಲಿ ಧೈರ್ಯ ತುಂಬಿಕೊಂಡು ಹೊರಟ ಹೆಣ್ಣುಮಗಳು ಸಾವಿತ್ರಿಬಾಯಿ ಫುಲೆ. ಅವರು ಕೇವಲ ಶಿಕ್ಷಕಿ ಅಲ್ಲ; ಅವರು ಒಂದು ಚಳವಳಿ, ಒಂದು ಯುಗ, ಒಂದು ಜೀವಂತ ಚೇತನ.        ಇಂದು ನಾವು ಡಿಜಿಟಲ್ ಭಾರತ, ಮಹಿಳಾ ಸಬಲೀಕರಣ, ಶಿಕ್ಷಣ ಕ್ರಾಂತಿ ಎಂದು ಮಾತನಾಡುತ್ತಿರುವಾಗ, ಆ ಎಲ್ಲದ ಬೇರುಗಳಲ್ಲಿ ಮೌನವಾಗಿ ನಿಂತಿರುವ ಹೆಸರು – ಸಾವಿತ್ರಿಬಾಯಿ ಫುಲೆ. ಕಲ್ಲು-ಕೆಸರಿನ ನಡುವೆ ಹುಟ್ಟಿದ ಶಿಕ್ಷಣ ಕ್ರಾಂತಿ        1848ರಲ್ಲಿ ಪುಣೆಯ ಭಿಡೇವಾಡಾದಲ್ಲಿ ಬಾಲಕಿಯರಿಗಾಗಿ ಶಾಲೆ ಆರಂಭಿಸುವುದು ಅಂದಿನ ಸಮಾಜಕ್ಕೆ ಸವಾಲಾಗಿತ್ತು. ಶಾಲೆಗೆ ಹೋಗುವ ಮಾರ್ಗದಲ್ಲಿ ಸಾವಿತ್ರಿಬಾಯಿಯ ಮೇಲೆ ಕಲ್ಲು, ಮಣ್ಣು, ಕೆಸರು ಎಸೆಯಲಾಗುತ್ತಿತ್ತು. ಆದರೆ ಅವರು ಹಿಂದಿರುಗಲಿಲ್ಲ. ತಮ್ಮ ಸೀರೆಯನ್ನು ಬದಲಿಸಿಕೊಂಡು ಮತ್ತೆ ಶಾಲೆಗೆ ಹೋಗುತ್ತಿದ್ದರು.         ಅದು ಕೇವಲ ಹಠವಲ್ಲ – ಅದು ಮುಂದಿನ ತಲೆಮಾರಿನ ಭವಿಷ್ಯದ ಮೇಲಿನ ತಾಯಿ ಹೃದಯದ ನಂಬಿಕೆ.          ಇಂದು ಗ್ರಾಮೀಣ ಭಾರತದಲ್ಲಿ ಹೆಣ್ಣುಮಕ್ಕಳು ಶಾಲೆಗೆ ಹೋಗುವ...

Bhima Koregaon Battle: Not a Military Conflict, a Fight for Human Respect "Hidden Historical Chapter of Dalit Resistance"

ಇಮೇಜ್
"Special Column - Naveen Talari"        Bhima Koregaon, January 1 Bhima Koregaon, a village on the banks of the Bhima River near Pune. The victory pillar standing here is not just a stone monument; it is a symbol of the solid resistance, self-respect and human respect of India's Dalit history.        The Battle of Bhima Koregaon, which took place on January 1, 1818, is generally recorded in history books as part of the Second Anglo-Peshwe War. But the social and humanitarian significance of this war has been deliberately hidden for decades. This war was not for the British Empire; it was a fight for the self-respect of the Mahar community, which had been oppressed for centuries.   Peshwa rule and caste oppression       In the early 18th century, the Peshwa rule in Maharashtra had complete control not only over politics but also over the social system. In the Brahminical system based on scripture, the untouchables were not even ...