ತರೀಕೆರೆ ತಾಲೂಕಿನ 19 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬೆಂಗಳೂರಿನ ಆಕಾಶವಾಣಿ ಮುಖ್ಯಸ್ಥ ಡಾ. ಎ.ಎಸ್.ಶಂಕರ ನಾರಾಯಣ ಆಯ್ಕೆ

 


ಶಿವಮೊಗ್ಗ : ಸಾಹಿತಿ ಹಾಗೂ ಬೆಂಗಳೂರು ಆಕಾಶವಾಣಿ ಮುಖ್ಯಸ್ಥರಾದ  ಡಾ. ಎ.ಎಸ್.ಶಂಕರ ನಾರಾಯಣ ರವರಿಗೆ ಈ  ಬಾರಿ ತರೀಕೆರೆ ತಾಲೂಕಿನ 19 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಲ, ಭದ್ರಾವತಿ ಶಿವಮೊಗ್ಗ  ಆಕಾಶವಾಣಿ ಕೇಳುಗರ ಬಳಗ, ಆರ್ ಜೆ ಬಳಗ, ನನ್ನ ಕನಸಿನ ಶಿವಮೊಗ್ಗ ಸಂಸ್ಥೆಗಳ ವತಿಯಿಂದ ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ  ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಎಂ.ಎನ್.ಸುಂದರರಾಜ್ ರವರು ಮಾತನಾಡಿ, ಸನ್ಮಾನಿತರಿಗೆ ಈ ಗೌರವ ಸಿಕ್ಕಿರೋದು ತುಂಬಾ ಸಂತೋಷದ ವಿಷಯ. ಅವರಿಂದ ಇನ್ನೂ ಹೆಚ್ಚಿನ ಸಾಹಿತ್ಯವನ್ನು ನಾವೆಲ್ಲ ನಿರೀಕ್ಷಿಸುತ್ತಿದ್ದೇವೆ ಎಂದು   ತಿಳಿಸಿದರು.

ಜಿಲ್ಲಾ ಸರ್ವೋದಯ ಮಂಡಲದ ಅಧ್ಯಕ್ಷರಾದ ಆರ್.ಮನೋಹರ್ ಮೂಲತಃ ತರೀಕೆರೆಯವರೇ ಆದ ಶಂಕರ್ ನಾರಾಯಣ್ ತಮ್ಮ ಬರಹದ ಮೂಲಕ ಆಕಾಶವಾಣಿ ಸಂದರ್ಶನಗಳ ಮೂಲಕ ನಾಡಿಗೆ ಚಿರಪರಿಚಿತರಾಗಿದ್ದಾರೆ. ಅವರ ಸಾಹಿತ್ಯ ಸೇವೆ ಹೀಗೆಯೇ ಮುಂದುವರೆಯಲಿ ಎಂದು  ಶುಭ ಹಾರೈಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಶಂಕರ ನಾರಾಯಣ ಅವರ ಸಾಧನೆ ಸಾಕಷ್ಟು ಇದೆ. ಅವರ ಸಾಧನೆಗೆ ಸಿಕ್ಕ ಮನ್ನಣೆ ಇದು. ಅವರ ಸಾಹಿತ್ಯ ಕೃಷಿ ಇನ್ನೂ ಹೆಚ್ಚು ಹೆಚ್ಚು ಆಗಲಿ ಎಂದು ಶುಭ ಹಾರೈಸಿದರು. 

ಇದೇ ಸಂದರ್ಭದಲ್ಲಿ ನನ್ನ ಕನಸಿನ ಶಿವಮೊಗ್ಗ ವೇದಿಕೆಯ ಎನ್.ಗೋಪಿನಾಥ್, ಆಕಾಶವಾಣಿ ಕೇಳುಗರ ಬಳಗದ ಚಿಕ್ಕಪ್ಪ ರಾಮೇಶ್ವರ, ಆಕಾಶವಾಣಿ  ಆರ್ ಜೆ ಗಳಾದ ಗಣೇಶ್ ಕೆಂಚನಾಳ, ಸರ್ವೋದಯ ಮಂಡಲದ ಬಸವರಾಜಪ್ಪ, ರುದ್ರಪ್ಪ ಚೀಲೂರ್,  ಪ್ರೊಫೆಸರ್ ಸತ್ಯನಾರಾಯಣ, ಬಿಂದು ವಿಜಯ ಕುಮಾರ ಉಪಸ್ಥಿತರಿದ್ದರು.

ತರೀಕೆರೆ ತಾಲೂಕಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ದೊರೆತಿರುವುದು ಸೌಭಾಗ್ಯ. ತಮ್ಮ ಅಧಿಕಾರ ಅವಧಿಯಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಗೆ ಹೆಚ್ಚು ಒತ್ತು ನೀಡುತ್ತೇನೆ.  

- ಡಾ. ಎ.ಎಸ್.ಶಂಕರ ನಾರಾಯಣ, ಬೆಂಗಳೂರಿನ ಆಕಾಶವಾಣಿ ಮುಖ್ಯಸ್ಥ 

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ