ಪೋಸ್ಟ್‌ಗಳು

ಡಿಸೆಂಬರ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭೀಮಾ ಕೋರೆಗಾಂವ್ ಯುದ್ಧ: ಒಂದು ಸೇನಾ ಸಂಘರ್ಷವಲ್ಲ, ಮಾನವ ಗೌರವ(Respect)ಕ್ಕಾಗಿ ನಡೆದ ಹೋರಾಟ

ಇಮೇಜ್
  "ಮರೆಮಾಚಲ್ಪಟ್ಟ ದಲಿತ ಪ್ರತಿರೋಧದ ಐತಿಹಾಸಿಕ ಅಧ್ಯಾಯ" "ವಿಶೇಷ ಅಂಕಣ - ನವೀನ್ ತಲಾರಿ"        ಭೀಮಾ ಕೋರೆಗಾಂವ್, ಜನವರಿ 1: ಪುಣೆಯ ಸಮೀಪ ಭೀಮಾ ನದಿಯ ತೀರದಲ್ಲಿರುವ ಒಂದು ಗ್ರಾಮ—ಭೀಮಾ ಕೋರೆಗಾಂವ್. ಇಲ್ಲಿ ನಿಂತಿರುವ ವಿಜಯಸ್ತಂಭ ಕೇವಲ ಕಲ್ಲಿನ ಸ್ಮಾರಕವಲ್ಲ; ಅದು ಭಾರತದ ದಲಿತ ಇತಿಹಾಸದ ಘನವಾದ ಪ್ರತಿರೋಧ, ಸ್ವಾಭಿಮಾನ ಮತ್ತು ಮಾನವ ಗೌರವದ ಸಂಕೇತವಾಗಿದೆ.          ಜನವರಿ 1, 1818ರಂದು ನಡೆದ ಭೀಮಾ ಕೋರೆಗಾಂವ್ ಯುದ್ಧವನ್ನು ಇತಿಹಾಸ ಪುಸ್ತಕಗಳು ಸಾಮಾನ್ಯವಾಗಿ ಎರಡನೇ ಆಂಗ್ಲ–ಪೇಶ್ವೆಗಳ ಯುದ್ಧದ ಭಾಗವೆಂದು ಮಾತ್ರ ದಾಖಲಿಸಿವೆ. ಆದರೆ ಈ ಯುದ್ಧದ ಸಾಮಾಜಿಕ ಹಾಗೂ ಮಾನವೀಯ ಅರ್ಥವನ್ನು ದಶಕಗಳ ಕಾಲ ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ. ಈ ಯುದ್ಧವು ಬ್ರಿಟಿಷ್ ಸಾಮ್ರಾಜ್ಯಕ್ಕಾಗಿ ಅಲ್ಲ; ಅದು ಶತಮಾನಗಳ ಕಾಲ ದಮನಕ್ಕೊಳಗಾದ ಮಹಾರ್ ಸಮುದಾಯದ ಸ್ವಾಭಿಮಾನಕ್ಕಾಗಿ ನಡೆದ ಹೋರಾಟವಾಗಿತ್ತು. ಪೇಶ್ವಾ ಆಡಳಿತ ಮತ್ತು ಜಾತಿ ದಮನ 18ನೇ ಶತಮಾನದ ಆರಂಭದಲ್ಲಿ ಮಹಾರಾಷ್ಟ್ರದಲ್ಲಿ ಪೇಶ್ವಾ ಆಡಳಿತವು ರಾಜಕೀಯದಷ್ಟೇ ಅಲ್ಲ, ಸಾಮಾಜಿಕ ವ್ಯವಸ್ಥೆಯ ಮೇಲೂ ಸಂಪೂರ್ಣ ಹಿಡಿತ ಹೊಂದಿತ್ತು. ಬ್ರಾಹ್ಮಣೀಯ ಶಾಸ್ತ್ರಾಧಾರಿತ ವ್ಯವಸ್ಥೆಯಲ್ಲಿ ಅಸ್ಪೃಶ್ಯರನ್ನು ಮಾನವರೆಂದು ಕೂಡ ಪರಿಗಣಿಸಲಾಗುತ್ತಿರಲಿಲ್ಲ. ಅಸ್ಪೃಶ್ಯರು: "ಬೆನ್ನಿಗೆ ಜಾಡು ಒರೆಸಲು ಪೊರಕೆ ಕಟ್ಟಿಕೊಳ್ಳಬೇಕಿತ್ತು" "ಕುತ್ತಿಗೆಗೆ ಉಗ...

ಶಿವಮೊಗ್ಗ ಡಿಸಿ, ಎಸ್ಪಿ ವರ್ಗಾವಣೆ

ಇಮೇಜ್
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.  ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ ಗುರುದತ್ತ ಹೆಗಡೆ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಪ್ರಸ್ತುತ ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಭುಲಿಂಗ ಕವಲಿಕಟ್ಟಿ ಅವರನ್ನು ನಿಯೋಜಿಸಿದೆ.        ಜಿಲ್ಲಾಧಿಕಾರಿಯಾಗಿರುವ ಗುರುದತ್ತ ಹೆಗಡೆ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ಸ್ಟೇಟ್‌ ಮೆಡಿಕಲ್‌ ಸಪ್ಲೈ ಕಾರ್ಪೊರೇಷನ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಿ ಡಿಪಿಎಆರ್‌ ಆದೇಶದಲ್ಲಿ ತಿಳಿಸಲಾಗಿದೆ. ಎಸ್ಪಿ ವರ್ಗಾವಣೆ:      ಶಿವಮೊಗ್ಗ ಜಿಲ್ಲಾ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಅವರ ವರ್ಗಾವಣೆಯಾಗಿದೆ. ಜಿಲ್ಲೆಯ ನೂತನ ವರಿಷ್ಠಾಧಿಕಾರಿಯಾಗಿ ಬಿ.ನಿಖಿಲ್‌ ಅವರನ್ನು ಸರ್ಕಾರ ನೇಮಕ ಮಾಡಿದೆ.      ಜಿ.ಕೆ.ಮಿಥುನ್‌ ಕುಮಾರ್‌ ಅವರು 2022ರ ಅಕ್ಟೋಬರ್‌ 5ರಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರನ್ನು ಬೆಂಗಳೂರು ನಗರದ ಈಶಾನ್ಯ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.      ಕೋಲಾರ ಜಿಲ್ಲೆಯ ರಕ್ಷಣಾಧಿಕಾರಿಯಾಗಿರುವ ...

ಸರ್ಕಾರಿ ಶಾಲೆಗಳ ಸುಧಾರಣೆಗೆ ಕಂಪನಿಗಳ ಸಿಎಸ್‌ಆರ್ ಫಂಡ್ ಬಳಕೆಯಾಗಲಿ

ಇಮೇಜ್
ಶಿವಮೊಗ್ಗ: ಗ್ರಾಮೀಣ ಪ್ರದೇಶ ಮಕ್ಕಳು ಕೀಳರಿಮೆಯಿಂದ ಹೊರಬರಲು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಮೂಲಸೌಕರ್ಯಗಳನ್ನು ಹೆಚ್ಚಿಸುವುದು ಅಗತ್ಯ ಎಂದು ಜಿಲ್ಲಾ ಸರ್ವೋದಯ ಮಂಡಳಿ ಮಾಜಿ ಅಧ್ಯಕ್ಷ ಭಗವಂತ ರಾವ್ ಹೇಳಿದರು.      ಕರ್ನಾಟಕ ಸರ್ವೋದಯ ಮಂಡಲ ಶಿವಮೊಗ್ಗ ಜಿಲ್ಲಾ ಘಟಕ ರಾಜ್ಯಾದ್ಯಂತ ಎಲ್ಲ ಶಾಲಾ ಕಾಲೇಜುಗಳು ಹಾಗೂ ಸಮುದಾಯ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳುತ್ತಿರುವ ಗಾಂಧಿ ಚಿಂತನೆ  ಕುರಿತು ಜಾಗೃತಿ, ಸಂವಾದ ಭಾಷಣ ಸ್ಪರ್ಧೆ ಕಾರ್ಯಕ್ರಮದ ಅಂಗವಾಗಿ ಮಾಚೇನಹಳ್ಳಿಯ ತುಂಗಾಭದ್ರಾ ಪ್ರೌಢಶಾಲೆ ಶಾಲೆ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಖಾಸಗಿ ಕಂಪನಿಗಳು ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ನಿಧಿಯನ್ನು ಸರ್ಕಾರಿಗಳ ಶಾಲೆಗಳ ಸುಧಾರಣೆಗೆ ಬಳಸುವ ಅಗತ್ಯವಿದೆ ಎಂದು ತಿಳಿಸಿದರು.       ಎಲ್ಲಾ ವೃತ್ತಿಗಳು ಸಮಾನ ಮೌಲ್ಯ ಹೊಂದಿವೆ. ಶ್ರಮದಾಯಕ ಜೀವನವು ಬದುಕಲು ಯೋಗ್ಯವಾದ ಜೀವನವಾಗಿದೆ. ಸರ್ಕಾರದ ಪ್ರಗತಿಯ ಪ್ರಯೋಜನಗಳು ಸಮಾಜದ ಬಡಜನರಿಗೆ ತಲುಪಬೇಕು. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿ ಸಮಾಜವನ್ನು ಸುಧಾರಿಸಲು ಮತ್ತು ಕಂಪನಿಗಳಿಗೆ ಸಕಾರಾತ್ಮಕ ಇಮೇಜ್ ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದರು.        ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಸೋಮಶೇಖರ್, ಸರ್ವೋದಯ ಮಂಡಳಿ ಉದ್ಡೇಶ ಸಾಮಾಜಿಕ ನ್ಯಾಯ, ಸಮಾನತೆ ಮ...

ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು ಅವರ ಕೊಡುಗೆ ಅಪಾರ : ಶಾಂತಾ ಶೆಟ್ಟಿ

ಇಮೇಜ್
ಶಿವಮೊಗ್ಗ:  ಸಾಹಿತ್ಯ ಕ್ಷೇತ್ರಗಳಲ್ಲಿ ರಾಷ್ಟ್ರಕವಿ ಕುವೆಂಪು ರವರ  ಕೊಡುಗೆ ಅವಿಸ್ಮರಣೀಯ ಎಂದು  ಕರ್ನಾಟಕ ಸುಗಮ ಸಂಗೀತ ಪರಿಷತ್ತು ,  ಚಿರಂತನ ಯೋಗ ಹಾಗೂ ಸಂಗೀತ ಟ್ರಸ್ಟಿನ ಅಧ್ಯಕ್ಷೆ ಶಾಂತ ಎಸ್ ಶೆಟ್ಟಿ  ಹೇಳಿದರು.      ಅವರು ಇಂದು ಕುವೆಂಪುರಂಗ ಮಂದಿರದ ಆವರಣದಲ್ಲಿ ರಾಷ್ಟ್ರಕವಿ ರಸ ಋಷಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾ ಘಟಕ ಹಾಗೂ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾದ ಗೀತಾ ಹಾಗೂ ಕವಿತೆ ನಮನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಕುವೆಂಪು ಅವರ ಕ್ರಾಂತಿಕಾರಿ ಗೀತೆಗಳು ಹಾಗೂ  ನಾಡಗೀತೆ ಇಂದಿಗೂ ಸಹ ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಯಶಸ್ವಿಯಾಗಿವೆ ಹಾಗೆ ಅವರ ಒಂದೊಂದು ಗೀತೆಗಳು ಸಹ ಇಂದು ಅತ್ಯಂತ ಪ್ರಸ್ತುತವಾಗಿದೆ ಎಂದರು. ಹಾಗೆಯೇ  ಈ ನಾಡು ಕಂಡ ಒಬ್ಬ ಶ್ರೇಷ್ಠ ಗಾಯಕ ಸಿ ಅಶ್ವಥ್ ಅವರ ಜನ್ಮದಿನವೂ ಕೂಡ. ಅವರ ಕನ್ನಡವೇ ಸತ್ಯ ಹಾಗೂ ಭಾವಗೀತೆ ಅನೇಕ ಗೀತೆಗಳು ವಿಶ್ವಮಟ್ಟದಲ್ಲಿ ಪ್ರಸಿದ್ಧಿಯಾಗಿವೆ ಎಂದರು.  ಕನ್ನಡ ಸಾರಸ್ವತ  ಲೋಕದ ಮೇರು ಸಾಹಿತಿ ಹಾಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಸೃಜನಶೀಲತೆಯನ್ನು ಮೆರೆಯುವಾಗ ಎಲ್ಲಿಯೂ ಸಾಮಾಜಿಕ ನೆಲಗಟ್ಟಿನ ಚಿಂತನೆಗಳನ್ನು ಕಡೆಗಣಿಸದ ವಿಶ್ವ ಮಾನವ ಎಂದರು.  ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ...

ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಧ್ಯಾನ ಕಲಿಕೆ ಸಹಕಾರಿ

ಇಮೇಜ್
ಶಿವಮೊಗ್ಗ: ಸಾರ್ವಜನಿಕರ ಒಳಿತಿಗಾಗಿ, ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ದೇಶಾದ್ಯಂತ ಧ್ಯಾನ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ಅಂತರಾಷ್ಟ್ರೀಯ ಧ್ಯಾನ ತರಬೇತುದಾರ ಡಾ. ಅಯ್ಯಪ್ಪ ಪಿಂಡಿ ಹೇಳಿದರು. ವಿಶ್ವ ಧ್ಯಾನ ದಿನದ ಅಂಗವಾಗಿ ಪೆಸಿಟ್ ಕಾಲೇಜಿನ ಸಭಾಂಗಣದಲ್ಲಿ ಪಿಎಸ್‌ಎಸ್‌ಎಂ, ಪಿರಮಿಡ್ ವರ್ಲ್ಡ್ ಫೌಂಡೇಷನ್, ಪ್ರೇರಣಾ ಎಜುಕೇಷನಲ್ ಆಂಡ್ ಸೋಶಿಯಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶಿವಮೊಗ್ಗ ನಾದ ಧ್ಯಾನ ಚಕ್ರ 7 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಯಾವುದೇ ಕಾರ್ಯಕ್ರಮದ ಯಶಸ್ಸಿಗೆ ಸಾರ್ವಜನಿಕರ ಸಹಕಾರ ಮುಖ್ಯ. ಧ್ಯಾನ ಕಾರ್ಯಕ್ರಮಕ್ಕೆ ಐದು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿರುವುದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿ ಎಂದು ತಿಳಿಸಿದರು. ಶಿವಮೊಗ್ಗ ನಾದ ಧ್ಯಾನ ಚಕ್ರ ಕಾರ್ಯಕ್ರಮ ನಡೆಸಲು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಉಚಿತವಾಗಿ ಪ್ರೇರಣಾ ಸಭಾಂಗಣ ನೀಡಿರುವುದು ವಿಶೇಷವಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಎಂದರು. ಶಾಂತಲಾ ಸ್ಪೇರೋಕಾಸ್ಟ್ ಶಾಂತಲಾ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಡಿ.ಎಸ್.ಚಂದ್ರಶೇಖರ್ ದಂಪತಿಗೆ ಸನ್ಮಾನಿಸಲಾಯಿತು. ನಂತರ ಡಿ.ಎಸ್.ಚಂದ್ರಶೇಖರ್ ಮಾತನಾಡಿ, 25 ವರ್ಷದಿಂದ ಪ್ರಾಣಾಯಾಮ ಮಾಡುತ್ತಿದ್ದು, ವಿಶೇಷ ಅನುಭವ ನೀಡುತ್ತದೆ. ಧ್ಯಾನದಿಂದ ನಮ್ಮ ದೇಹದ ಪ್ರತಿಯೊಂದು ಅಂಗಾಂಗಗಳು ಆರೋಗ್ಯದಿಂದ ಇರುತ್ತವೆ. ಪ್ರತಿ ದಿನ 20 ನಿಮಿಷ ಧ್...

ಧ್ಯಾನದ ಆಚರಣೆಯಿಂದ ಆರೋಗ್ಯದಲ್ಲಿ ಧನಾತ್ಮಕ ಬದಲಾವಣೆ

ಇಮೇಜ್
ಶಿವಮೊಗ್ಗ: ಆನಾಪಾನಸತಿ ಧ್ಯಾನ ಅಂದರೆ ನಮ್ಮ ದೇಹದ ಒಳಗೆ ಸಹಜವಾಗಿ ಬರುವ ಉಸಿರು ಮತ್ತು ದೇಹದಿಂದ ಹೊರಗೆ ಹೋಗುವ ಸಹಜವಾದ ಉಸಿರನ್ನು ಗಮನಪೂರ್ವಕವಾಗಿ ಬಹುಎಚ್ಚರಿಕೆಯಿಂದ ಅರಿಯುವುದು ಎಂದು ವಿರಕ್ತಮಠದ ಹಾಲಯ್ಯ ಹೇಳಿದರು. ಶಿವಗಂಗಾ ಯೋಗಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಆನಾಪಾನಸತಿ ಧ್ಯಾನ ಪದ್ಧತಿಯು ಈಗಲೂ ಸಹ ಹಲವಾರು ಧ್ಯಾನ ಕ್ರಮಗಳಿಗೆ ಮೊದಲ ಮೆಟ್ಟಿಲಾಗಿದೆ. ಧ್ಯಾನದಲ್ಲಿ 112ಕ್ಕಿಂತಲೂ ಜಾಸ್ತಿ ವಿಧಾನಗಳು ಇವೆ ಎಂದು ತಿಳಿಸಿದರು. ಗೌತಮ ಬುದ್ಧ ಸಂಶೋಧಿಸಿದ ಹೊಸ ಧ್ಯಾನದ ದಾರಿ ಎಂದರೆ ಅದು ವಿಪಶ್ಯನ. ವಿಪಶ್ಯನ ಎನ್ನುವುದು ಪಾಳಿ ಶಬ್ಧದ ಮೂಲ ರೂಪ. ಪಶ್ಯನ ಎಂದರೆ ನೋಡುವುದು ವಿಪಶ್ಯನ ಅಂದ್ರೆ ವಿಶೇಷವಾಗಿ ನೋಡುವುದು. ನಮ್ಮ ದೇಹದಲ್ಲಿ ಉಂಟಾಗುವ ಸಂವೇದನೆಗಳನ್ನ ನಿರಂತರವಾಗಿ ಗಮನಪೂರ್ವಕವಾಗಿ ದೃಷ್ಟ ಭಾವದಿಂದ ಗಮನಿಸುವುದೇ ಆಗಿದೆ. ಅದನ್ನು ವಿಪಶ್ಯನ ಧ್ಯಾನ ಎನ್ನುತ್ತಾರೆ ಎಂದರು. ಧ್ಯಾನ ಮಾಡುವುದರಿಂದ ನಮ್ಮ ಮನೋಮಂದಿರದ ಆಳದಲ್ಲಿ ಹುದುಗಿರುವ ಎಲ್ಲ ತರದ ಮನೋಕ್ಲೇಶಗಳು, ಭ್ರಾಂತಿಗಳು, ಅಸುರಿ ಗುಣಗಳು ಮಾಯವಾಗುತ್ತ ಬೇರು ಸಮೇತ ಹೊರಗೆ ಬರುತ್ತವೆ. ಅಂದರೆ ನಮ್ಮ ಮನಸ್ಸು ಸಂಪೂರ್ಣವಾಗಿ ನಿರ್ಮಲವಾಗುತ್ತದೆ. ತನ್ಮೂಲಕ ನಮ್ಮ ದೇಹದ ಮತ್ತು ಮನಸ್ಸಿನ ಮೇಲಾಗುವ ಕಾಯಿಲೆಗಳ ಪ್ರಭಾವವು ಕಡಿಮೆಯಾಗುತ್ತದೆ. ನಮ್ಮ ಆರೋಗ್ಯ ಸಹಜವಾಗಿ ಸುಧಾರಣೆಯಾಗುತ್ತದೆ. ಎಲ್ಲ ತರದ ಮನೋದೈಹಿಕ ಕಾಯಿಲೆಗಳು ಮನೋ ಮೂಲ ಹೊಂದಿರುವ ತೊಂದರೆಗಳ...

ಆಭರಣ ಜ್ಯೂವೆಲರ್ಸ್ ಸಂಸ್ಥೆಯಿಂದ ನಕ್ಷತ್ರ ತಯಾರಿಕೆ ಸ್ಪರ್ಧೆ ಯಶಸ್ವಿ

ಇಮೇಜ್
ಶಿವಮೊಗ್ಗ: ದಿ ಒರಿಜಿನಲ್ ಆಭರಣ ಜ್ಯುವೆಲ್ಲರ್ಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಆಭರಣ ಕ್ರಿಸ್‌ಮಸ್ ನಕ್ಷತ್ರ ತಯಾರಿಕೆ ಸ್ಪರ್ಧೆ ಕಾರ್ಯಕ್ರಮವನ್ನು ಯೇಸುವಿನ ಪವಿತ್ರ  ಹೃದಯ ಪ್ರಧಾನಾಲಯದ ಉಪ ಗುರು ಫಾದರ್ ಜಾನ್ಸನ್ ಆರ್ ಹಾಗೂ ಮೇರಿ ಸ್ಯಾಂತೋಮ್ ಫಾದರ್ ಸಾಜನ್ ಉದ್ಘಾಟಿಸಿದರು. ನಕ್ಷತ್ರ ತಯಾರಿಕೆ ಸ್ಪರ್ಧೆಗೆ 50 ಜನ ಭಾಗವಹಿಸಿ 25 ಸಾಂಪ್ರದಾಯಿಕ ನಕ್ಷತ್ರಗಳನ್ನು ತಯಾರಿಕೆ ಮಾಡಿದ್ದರು. ಪ್ರಥಮ, ದ್ವಿತೀಯ ಮತ್ತು ತೃತಿಯ ಬಹುಮಾನ ವಿತರಿಸಲಾಯಿತು. ಭಾಗವಹಿಸಿದವರಿಗೆ ಎಲ್ಲರಿಗೂ ಹಬ್ಬದ ಉಡುಗೊರೆ ಗಿಫ್ಟ್ ವೊಚರ್ ಕೊಡುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.

ಸಮಾಜಮುಖಿ ಸೇವೆಯೇ ರೋಟರಿ ಆಶಯ

ಇಮೇಜ್
ಶಿವಮೊಗ್ಗ: ರೋಟರಿ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುವ ಜತೆಯಲ್ಲಿ ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಸೇವೆಯೊಂದಿಗೆ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಪ್ರೋತ್ಸಾಹಿಸುತ್ತದೆ ಎಂದು ರೋಟರಿ ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ಹೇಳಿದರು.       ಶಿವಮೊಗ್ಗ ನಗರದಲ್ಲಿ ರೋಟರಿ ಜಿಲ್ಲೆ 3182ರ ಆಶ್ರಯದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಅವರ ಆತಿಥ್ಯದಲ್ಲಿ ಪಿಇಎಸ್ ಕಾಲೇಜು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಮಲೆನಾಡು ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.       ರೋಟರಿ ಎಂದರೆ ಕೇವಲ ಸಭೆ ಅಥವಾ ಯೋಜನೆಗಳು ಅಲ್ಲ. ಶಿಸ್ತಿನ ಜೀವನ, ಸೇವಾಭಾವ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುವ ವಿಶೇಷ ಸಂಸ್ಥೆ. ನಾಲ್ಕು ಜಿಲ್ಲೆಗಳ 87 ಕ್ಲಬ್‌ಗಳ ಸದಸ್ಯರು ಒಂದೇ ವೇದಿಕೆಯಲ್ಲಿ ಸೇರಿ ಕ್ರೀಡೋತ್ಸವ ಯಶಸ್ವಿಗೊಳಿಸಿರುವುದು ರೋಟರಿ ಬಂಧುತ್ವದ ಜೀವಂತ ಸಾಕ್ಷಿ ಎಂದು ತಿಳಿಸಿದರು.        ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ಕ್ರೀಡೆಯನ್ನು ಕೇವಲ ಪದಕ, ಬಹುಮಾನ ಅಥವಾ ಸ್ಪರ್ಧೆ ಮಿತಿಗೆ ಸೀಮಿತಗೊಳಿಸದೆ, ಆರೋಗ್ಯಕರ ಜೀವನಶೈಲಿಯ ಅವಿಭಾಜ್ಯ ಅಂಗವಾಗಿ ನೋಡಬೇಕು. ನಿಯಮಿತ ವ್ಯಾಯಾಮ, ಕ್ರೀಡಾಸಕ್ತಿ ಮತ್ತು ಶಿಸ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅವಶ್ಯ. ಈ ಮೌಲ್ಯಗಳನ್ನು ರೋಟರಿ ಕ್ರೀಡೆಗಳ ಮೂಲಕ ಜನರಿಗೆ ತಲುಪಿಸುತ್ತಿರುವುದು ಶ್...

ಜೆಸಿಐ ಶಿವಮೊಗ್ಗ ಸ್ಟಾರ್ಸ್‌ಗೆ ಹೆಮ್ಮೆಯ ಕ್ಷಣ

ಇಮೇಜ್
2026ರ ಅಧ್ಯಕ್ಷೆ ಜೆಸಿ ಪ್ರಿಯಾಂಕಾ, ಕಾರ್ಯದರ್ಶಿ ಜೆಸಿ ಪೂಜಾ ಆಕುಲ್ ಅವರಿಗೆ ಹೃದಯಪೂರ್ವಕ ಅಭಿನಂದನೆ ಜೆನಿಯರ್ ಚೇಂಬರ್ ಇಂಟರ್‌ನ್ಯಾಷನಲ್ (ಜೆಸಿಐ) ಶಿವಮೊಗ್ಗ ಸ್ಟಾರ್ಸ್ ಸಂಸ್ಥೆಗೆ 2026ನೇ ಸಾಲು ಒಂದು ಹೆಮ್ಮೆಯ ಹಾಗೂ ಐತಿಹಾಸಿಕ ಕ್ಷಣವನ್ನು ತಂದಿದೆ. 2026ರ ಅಧ್ಯಕ್ಷರಾಗಿ ಜೆಸಿ ಪ್ರಿಯಾಂಕಾ ಹಾಗೂ ಕಾರ್ಯದರ್ಶಿಯಾಗಿ ಜೆಸಿ ಪೂಜಾ ಆಕುಲ್ ಅವರು ಆಯ್ಕೆಯಾಗಿರುವುದು ಸಂಸ್ಥೆಯ ಸದಸ್ಯರಲ್ಲಿ ಅಪಾರ ಸಂತಸ ಮತ್ತು ಉತ್ಸಾಹವನ್ನು ಮೂಡಿಸಿದೆ. ಇದು ಕೇವಲ ಎರಡು ವ್ಯಕ್ತಿಗಳ ವೈಯಕ್ತಿಕ ಸಾಧನೆಯಷ್ಟೇ ಅಲ್ಲ, ಸಂಪೂರ್ಣ JCI ಶಿವಮೊಗ್ಗ ಸ್ಟಾರ್ಸ್ ಕುಟುಂಬಕ್ಕೆ ಹೆಮ್ಮೆಯ ಅಧ್ಯಾಯವಾಗಿದೆ. ತಮ್ಮ ನಿರಂತರ ಶ್ರಮ, ಬದ್ಧತೆ, ತ್ಯಾಗ ಮತ್ತು ಮೌನ ಸೇವೆಯ ಮೂಲಕ ಈ ಸ್ಥಾನವನ್ನು ತಲುಪಿರುವ ನಾಯಕಿಯರ ಪ್ರಯಾಣವು ಯುವ ನಾಯಕತ್ವಕ್ಕೆ ಪ್ರೇರಣೆಯಾಗಿದೆ. ಈ ಸಂದರ್ಭದಲ್ಲಿ ಜೆಸಿ ನವೀನ್ ಕುಮಾರ್ ಎನ್ ವಿ, IPP – JCI ಶಿವಮೊಗ್ಗ ಸ್ಟಾರ್ಸ್, ಹಿಂದಿನ ವಲಯಾಧಿಕಾರಿ – ವಲಯ 24, JCI ಇಂಡಿಯಾ ಅವರು ಮಾತನಾಡಿ, “ಜೆಸಿ ಪ್ರಿಯಾಂಕಾ ಮತ್ತು ಜೆಸಿ ಪೂಜಾ ಆಕುಲ್ ಅವರ ನಾಯಕತ್ವವು ಸಂಸ್ಥೆಯಲ್ಲಿ ವಿಶ್ವಾಸ, ಏಕತೆ ಮತ್ತು ಗುರಿಯನ್ನು ಮತ್ತಷ್ಟು ಬಲಪಡಿಸಲಿದೆ. ಇವರ ಕಾರ್ಯಾವಧಿ JCI ಶಿವಮೊಗ್ಗ ಸ್ಟಾರ್ಸ್ ಇತಿಹಾಸದಲ್ಲಿ ಅರ್ಥಪೂರ್ಣ ಮತ್ತು ಸ್ಮರಣೀಯ ಅಧ್ಯಾಯವಾಗಲಿದೆ ಎಂಬ ನಂಬಿಕೆ ನನಗಿದೆ” ಎಂದು ತಿಳಿಸಿದರು. ಮುಂದುವರಿದು ಅವರು, “ಸವಾಲುಗಳಲ್ಲಿ ದೃಢತೆ, ಕಾರ್ಯದಲ್ಲಿ ಜ್ಞಾ...

ಯೋಗ, ಧ್ಯಾನದ ಅಭ್ಯಾಸದಿಂದ ನೆಮ್ಮದಿಯುತ ಜೀವನ

ಇಮೇಜ್
ಶಿವಮೊಗ್ಗ: ಕುಟುಂಬದ ಶಾಂತಿ, ನೆಮ್ಮದಿ ಜತೆಯಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಮಾಡಲು ಯೋಗ ಮತ್ತು ಧ್ಯಾನ ಪ್ರಕ್ರಿಯೆ ಸಹಕಾರಿಯಾಗುತ್ತದೆ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಹೇಳಿದರು.        ಅಂತರಾಷ್ಟ್ರೀಯ ಯೋಗ ಧ್ಯಾನ ದಿನಾಚರಣೆ ಅಂಗವಾಗಿ ಶಿವಗಂಗಾ ಯೋಗ ಕೇಂದ್ರ ಕೃಷಿ ನಗರ, ಎಲ್‌ಬಿಎಸ್ ನಗರ, ಅಶ್ವತ್ಥ್ ನಗರಗಳ ಯೋಗಶಾಖೆಗಳಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.        ಬಹುತೇಕ ರಾಷ್ಟ್ರಗಳ ಜನಸಂಖ್ಯೆಯಲ್ಲಿ ಮೂರನೇ ಒಂದು ಭಾಗ ಅಶಕ್ತತೆ, ಒತ್ತಡ, ಘರ್ಷಣೆ, ಹಿಂಸೆ, ಅನಿಶ್ಚಿತತೆ ಮತ್ತು ಭಾವನಾತ್ಮಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಯೋಗ, ಧ್ಯಾನಗಳ ಆಚರಣೆಯಿಂದ ಪ್ರತಿಯೊಬ್ಬ ವ್ಯಕ್ತಿಯ ದೇಹ, ಮನಸ್ಸು, ಬುದ್ಧಿ ಚಿತ್ತಗಳಲ್ಲಿ ಪ್ರೀತಿ, ಪ್ರೇಮ, ಸ್ನೇಹ, ಸಹಬಾಳ್ವೆ, ನಂಬಿಕೆ ಮತ್ತು ಜೀವನಕ್ಕೆ ಅಗತ್ಯವಿರುವ ಎಲ್ಲ ಮೌಲ್ಯಗಳನ್ನು ಒಗ್ಗೂಡಿಸುತ್ತದೆ ಎಂದು ತಿಳಿಸಿದರು.           ಶಿವಗಂಗಾ ಯೋಗಕೇಂದ್ರವು ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯ ಅವರ ನೇತೃತ್ವದ ತಂಡ ಕಾರ್ಯೋನ್ಮುಖರಾಗಿರುವುದು ಶ್ಲಾಘನೀಯ ಎಂದು ಹೇಳಿದರು.         ವಿರಕ್ತ ಮಠದ ಹಾಲಯ್ಯ ಮಾತನಾಡಿ, ಧ್ಯಾನದಿಂದ ನಮ್ಮ ದೇಹದಲ್ಲಿ ಆಗುವ ಸೂಕ್ಷ್ಮ ಬದಲಾವಣೆಗಳನ್ನು ವೈಜ್ಞಾನಿಕವಾಗಿ ವಿವರಿಸಿದರು. ಶಿವಗಂಗಾ ಯೋಗಕೇಂದ್ರದ ಕಾರ್ಯಾಧ್ಯಕ್ಷ ಡ...

ಪಲ್ಸ್ ಪೊಲಿಯೋ ಲಸಿಕೆ ಕಡ್ಡಾಯವಾಗಿ ಹಾಕಿಸಿ

ಇಮೇಜ್
ಶಿವಮೊಗ್ಗ: ಐದು ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೊಲಿಯೋ ಲಸಿಕೆ ಹಾಕಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.     ಅಂತರಾಷ್ಟ್ರೀಯ ಪಲ್ಸ್ ಪೊಲಿಯೋ ದಿನ ಆಗಿದ್ದರಿಂದ ರಾಜೇಂದ್ರ ನಗರದ ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ವತಿಯಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನೆರೆ ರಾಷ್ಟ್ರಗಳಲ್ಲಿ ಪಲ್ಸ್ ಪೋಲಿಯೋ ಹೆಚ್ಚಾಗಿರುವುದರಿಂದ ನಮ್ಮ ಭಾರತ ದೇಶದಲ್ಲಿ ಪ್ರತಿಯೊಬ್ಬ ಐದು ವರ್ಷದ ಮಕ್ಕಳು ಕಡ್ಡಾಯವಾಗಿ ಪಲ್ಸ್ ಪೋಲಿಯೋ ಹಾಕಿಸಬೇಕು ಎಂದು ತಿಳಿಸಿದರು.       ನಮ್ಮ ದೇಶ ಪಲ್ಸ್ ಪೋಲಿಯೋ ಮುಕ್ತವಾಗಿದ್ದರೂ ಕೂಡ ಮುಂಜಾಗ್ರತಾ ಕ್ರಮವಾಗಿ ಐದು ವರ್ಷದೊಳಗಿನ  ಮಕ್ಕಳಿಗೆ ತೊಂದರೆಯಾಗದಂತೆ ಪಲ್ಸ್ ಪೋಲಿಯೋ ಹಾಕಿಸಿಕೊಳ್ಳಬೇಕು ಎಂದರು.       ರೋಟರಿ ಕ್ಲಬ್ ಶಿವಮೊಗ್ಗ ಪೂರ್ವದ ಅಧ್ಯಕ್ಷ ಕಿಶೋರ್ ಕುಮಾರ್.ಡಿ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಆದ್ದರಿಂದ ಐದು ವರ್ಷದ ಒಳಗಿನ ಮಕ್ಕಳು ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.       ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಮಕ್ಕಳು ದೇಶದ ಆಸ್ತಿ. ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು.      ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಡಾ. ಧನಂಜಯ ರ...

ಆನಾಪಾನಸತಿ ಧ್ಯಾನ ಪದ್ಧತಿಯು ಸರಳ ಮತ್ತು ಪರಿಣಾಮಕಾರಿ

ಇಮೇಜ್
    ಧ್ಯಾನಗಳಲ್ಲಿ ಸರಳವಾಗಿ ಪರಿಣಾಮಕಾರಿ ಆಗಿರುವುದು ಆನಾಪಾನಸತಿ ಧ್ಯಾನ ಪದ್ಧತಿ ಎಂದು ಧ್ಯಾನ ತರಬೇತಿದಾರ ಡಾ. ಅಯ್ಯಪ್ಪ ಪಿಂಡಿ ಹೇಳಿದರು. ರಾಜೇಂದ್ರ ನಗರದ ರೋಟರಿ ಶಾಲೆ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ವಯಸ್ಸಿನ, ಸಮಯದ ಯಾವುದೇ ನಿರ್ಬಂಧ ಇಲ್ಲದೆ ಎಲ್ಲಾ ಕಾಲಗಳಲ್ಲಿಯೂ ಮಾಡಲು ಸಾಧ್ಯ. ಒಮ್ಮೆ ಉಚಿತವಾಗಿ ಕಲಿತು ಜೀವಮಾನಪೂರ್ತಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಕೇವಲ ಶ್ವಾಸ ಗಮನಿಸುವ ಮೂಲಕ ಮನಸ್ಸನ್ನು ಶಾಂತವಾಗಿ ಇರಿಸಲು ಹಾಗೂ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ನೆಮ್ಮದಿಯ ಜೀವನವನ್ನು ನಡೆಸಲು ಸಹಕಾರಿಯಾಗುತ್ತದೆ ಎಂದರು. ಪ್ರಸ್ತುತ ಜೀವನಶೈಲಿ ಜನರ ಮಾನಸಿಕ ಸ್ವಾಸ್ಥ್ಯವನ್ನು ಕೆಡಿಸಿ ರೋಗಗಳಿಗೆ ಕಾರಣವಾಗಿದೆ. ಕಡಿಮೆ ವಯಸ್ಸಿನಲ್ಲೇ ಅನಾರೋಗ್ಯ ಎದುರಿಸುತ್ತಿದ್ದಾರೆ. ಜನರ, ಸಮಾಜದ ಹಾಗೂ ಪ್ರಪಂಚದ ಆರೋಗ್ಯಕ್ಕಾಗಿ ನಾವೆಲ್ಲರೂ ಧ್ಯಾನಯುಕ್ತ ಜೀವನ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ದೊಡ್ಡವೀರಪ್ಪ ಮಾತನಾಡಿ, ಪೊಲಿಯೋ ರೋಗ ನಿರ್ಮೂಲನೆ ಮಾಡುವ ಉದ್ದೇಶದಿಂದ ಪಲ್ಸ್ ಪೊಲಿಯೋ ಲಸಿಕಾ ಅಭಿಯಾನ ನಡೆಸಲಾಗುತ್ತಿದೆ. ಈ ಕಾರ್ಯದಲ್ಲಿ ರೋಟರಿ ಸಂಸ್ಥೆಯ ಪಾತ್ರ ಮಹತ್ತರವಾಗಿದೆ ಎಂದರು.       ಕಾರ್ಯಕ್ರಮದ...

ಒತ್ತಡ ಜೀವನಶೈಲಿಯಿಂದ ಹೊರಬರಲು ಧ್ಯಾನ ಸಹಕಾರಿ

ಇಮೇಜ್
      ಶಿವಮೊಗ್ಗ: ನಮ್ಮ ದೈನಂದಿನ ಜೀವನದ ಒತ್ತಡದಿಂದ ಹೊರಬರಲು ಧ್ಯಾನ ಸಹಕಾರಿಯಾಗುತ್ತದೆ. ಒತ್ತಡ ನಿರ್ವಹಣೆ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.       ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಅಂತರಾಷ್ಟ್ರೀಯ ಕೇಂದ್ರದ ಸಹಯೋಗದೊಂದಿಗೆ ಸಂಘದ ಶಾಂತಲಾ ಸ್ಪೇರೋಕಾಸ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಧ್ಯಾನ, ಒತ್ತಡ ನಿರ್ವಹಣೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಗಾರದಲ್ಲಿ ಮಾತನಾಡಿದರು.         ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು, ವೃತ್ತಿಪರರು ದಿನನಿತ್ಯದ ಒತ್ತಡದ ಜೀವನದಿಂದ ಹೊರಬಂದು ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಪ್ರಾಣಾಯಾಮ, ಧ್ಯಾನ ಅಭ್ಯಾಸ ಮಾಡಬೇಕು. ಆಧ್ಯಾತ್ಮಿಕ ಪ್ರೇರಣಾತ್ಮಕ ಲಯಬದ್ಧ ಉಸಿರಾಟದಿಂದ ಶ್ವಾಸಕೋಶದ ಮೂಲಕ ಒತ್ತಡ ನಿರ್ವಹಿಸಬಹುದು ಎಂದು ತಿಳಿಸಿದರು.         ಸಂಪನ್ಮೂಲ ವ್ಯಕ್ತಿ ರವಿಶಂಕರ್ ಗುರೂಜಿ ಅವರ ಆಪ್ತ ಸಹಾಯಕ ಕೃಷ್ಣ ಜಿ ಮಾತನಾಡಿ, ಧ್ಯಾನ, ಪ್ರಾಣಯಾಮ, ಲಯಬದ್ಧ ಉಸಿರಾಟದಿಂದ ಒತ್ತಡ ನಿರ್ವಹಣೆಯನ್ನು ಹೇಗೆ ಮಾಡಿಕೊಳ್ಳಬೇಕು ಹಾಗೂ ತಮ್ಮ ಮಾನಸಿಕ ಆರೋಗ್ಯವನ್ನು ಹೇಗೆ ಸಮತೋಲನದಿಂದ ನಿರ್ವಹಣೆ ಮಾಡಿಕೊಳ್ಳಬೇಕು ಎಂಬುದನ್ನು ಚಟ...

ಸುಪ್ರೀಂ ಕೋರ್ಟ್‌ನ ಹೊಸ ಅರಾವಳಿ ವ್ಯಾಖ್ಯಾನವು ರಾಜಸ್ಥಾನದಾದ್ಯಂತ ಬೃಹತ್ ಪ್ರತಿಭಟನೆಗಳಿಗೆ ನಾಂದಿ ಹಾಡಿದೆ

ಇಮೇಜ್
  ಜೈಪುರ, ಡಿಸೆಂಬರ್ 21, 2025 — ಸುಪ್ರೀಂ ಕೋರ್ಟ್ ಅರಾವಳಿ ಬೆಟ್ಟಗಳ ಹೊಸ ವ್ಯಾಖ್ಯಾನವನ್ನು ಅಂಗೀಕರಿಸಿದ ನಂತರ ರಾಜಸ್ಥಾನದಲ್ಲಿ ವ್ಯಾಪಕ ಅಶಾಂತಿ ಭುಗಿಲೆದ್ದಿದ್ದು, ಈ ಬದಲಾವಣೆಯು ದಶಕಗಳ ಪರಿಸರ ರಕ್ಷಣೆಯನ್ನು ಹಾಳುಮಾಡುತ್ತದೆ ಎಂದು ಭಯಪಡುವ ಗ್ರಾಮಸ್ಥರು, ಪರಿಸರವಾದಿಗಳು ಮತ್ತು ಬುಡಕಟ್ಟು ಸಮುದಾಯಗಳಿಂದ ಪ್ರತಿಭಟನೆಗಳು ಭುಗಿಲೆದ್ದಿವೆ.        ಪರಿಷ್ಕೃತ ವ್ಯಾಖ್ಯಾನವು ಅರಾವಳಿ ಶ್ರೇಣಿಯ ಕಾನೂನು ವರ್ಗೀಕರಣವನ್ನು ಸ್ಥಳೀಯ ಭೂಪ್ರದೇಶದಿಂದ ಕನಿಷ್ಠ 100 ಮೀಟರ್ ಎತ್ತರದಲ್ಲಿರುವ ಭೂರೂಪಗಳಿಗೆ ಸೀಮಿತಗೊಳಿಸುತ್ತದೆ, ಇದು ಹಿಂದೆ ಬಳಸಲಾಗಿದ್ದ ವಿಶಾಲ ಮಾನದಂಡಗಳಿಂದ ಬದಲಾವಣೆಯಾಗಿದೆ. ಈ ವ್ಯಾಖ್ಯಾನವು ಬೆಟ್ಟ ಶ್ರೇಣಿಯ 90% ವರೆಗೆ ಕಾನೂನು ರಕ್ಷಣೆಗಳಿಂದ ಹೊರಗಿಡಬಹುದು ಎಂದು ವಿಮರ್ಶಕರು ಎಚ್ಚರಿಸಿದ್ದಾರೆ, ಇದು ಪ್ರದೇಶದ ದೊಡ್ಡ ಭಾಗಗಳಲ್ಲಿ ಪರಿಸರ ರಕ್ಷಣೆಯನ್ನು ಪರಿಣಾಮಕಾರಿಯಾಗಿ ದುರ್ಬಲಗೊಳಿಸುತ್ತದೆ.     ಗ್ರಾಮಗಳಿಂದ ರಾಜಧಾನಿಗಳಿಗೆ ಹರಡಿದ ಪ್ರತಿಭಟನೆಗಳು ಭಿಲ್ವಾರಾ, ಉದಯಪುರ ಮತ್ತು ಜೈಪುರ ಸೇರಿದಂತೆ ಜಿಲ್ಲೆಗಳ ಗ್ರಾಮಸ್ಥರು ಬೀದಿಗಿಳಿದು, ಪ್ರದರ್ಶನಗಳು ಮತ್ತು ದಿನವಿಡೀ ಉಪವಾಸಗಳನ್ನು ನಡೆಸಿ ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.  ದಕ್ಷಿಣ ರಾಜಸ್ಥಾನದ ಬುಡಕಟ್ಟು ನಾಯಕರು, ವಿಶೇಷವಾಗಿ ಅರಾವಳಿಗಳನ್ನು ತಮ್ಮ ಸಂಸ್ಕೃತಿ, ಗುರುತು ಮತ್ತು ಜೀವನೋಪಾಯದ ಅತ್ಯ...

ನಾಯಕತ್ವ ಗುಣ ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಮಹತ್ತರ ಪಾತ್ರ

ಇಮೇಜ್
ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಸಹಕಾರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಹೇಳಿದರು.          ಸಹ್ಯಾದ್ರಿ ಪ್ರೌಢಶಾಲೆ 2025-26ನೇ ಸಾಲಿನ ವಿದ್ಯಾರ್ಥಿ ಸಂಘ ಮತ್ತು ಇಂಟರಾಕ್ಟ್ ಕ್ಲಬ್ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಅವರ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ ಎಂದು ತಿಳಿಸಿದರು.            ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಧನಂಜಯ.ಬಿ.ಆರ್ ಮಾತನಾಡಿ, ಪಠ್ಯದ ಜತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳುವುದು ಮುಖ್ಯ. ಮಕ್ಕಳು ಉತ್ತಮ ಸಾಧನೆ ಮಾಡಲು ನಿರಂತರ ಪರಿಶ್ರಮ ವಹಿಸಬೇಕು. ಶಿಕ್ಷಕರ ಮಾರ್ಗದರ್ಶನ ಪಾಲನೆ ಮಾಡಿದಾಗ ಯಶಸ್ಸು ಸಾಧ್ಯ ಎಂದು ಹೇಳಿದರು.        ಶ್ರೀನಿಧಿ ಎಜುಕೇಶನ್ ಸೊಸೈಟಿ ಅಧ್ಯಕ್ಷ  ಡಾ. ಕಡಿದಾಳ್ ಗೋಪಾಲ್ ಮಾತನಾಡಿ, ಶಿಕ್ಷಣ ಸಂಸ್ಥೆ ಬೆಳೆಯುವಲ್ಲಿ ಪೋಷಕರು, ಶಿಕ್ಷಕರು ಹಾಗೂ ಮಕ್ಕಳ ಪಾತ್ರ ಬಹಳ ಮುಖ್ಯ. ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸುವುದಲ್ಲದೆ ಶಾಲೆಗೆ ಬಂದು ಮಕ್ಕಳ ಚಟುವಟಿಕೆಗಳ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.         ಸಮುದಾಯ ಸೇವೆಗಳ ನಿರ್ದೇಶಕ ಜಿ.ವಿಜಯಕುಮಾರ್ ಮಾತನಾಡಿ, ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸ...

ರೇಬೀಸ್ ನಿರ್ಲಕ್ಷ್ಯ ಬೇಡ, ಮುನ್ನೆಚ್ಚರಿಕೆ ವಹಿಸಿ

ಇಮೇಜ್
ಶಿವಮೊಗ್ಗ: ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಿರ್ಲಕ್ಷ್ಯ ಬೇಡ ಎಂದು ವೈದ್ಯ ಡಾ. ಅರವಿಂದ್ ಹೇಳಿದರು.        ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಾಯಿ ಕಡಿತ ಮಾರಣಾಂತಿಕ ಆಗಬಹುದು. ಕಡಿತಕ್ಕೆ ಒಳಗಾದ ವ್ಯಕ್ತಿಗಳು ತಕ್ಷಣ ಗಾಯವನ್ನು ನೀರು ಹಾಗೂ ಸಾಬೂನಿನಿಂದ 15 ನಿಮಿಷ ತೊಳೆಯಬೇಕು. ಮನೆಯಲ್ಲೇ ಇರುವ ಡೆಟಾಲ್ ಹಾಗೂ ಅಯೋಡಿನ್ ಅಂತ ಆಂಟಿಸೆಪ್ಟಿಕ್ ಹಚ್ಚಬೇಕು. ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ ರೇಬಿಸ್ ಲಸಿಕೆ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.        ಕಡಿತಕ್ಕೆ ಒಳಗಾದ ವ್ಯಕ್ತಿ ವೈದ್ಯರ ನಿರ್ದೇಶನದ ಮೇರೆಗೆ ಹಾಗೂ ತೀವ್ರ ಕಡಿತದ ಸಂದರ್ಭದಲ್ಲಿ ಗಾಯಕ್ಕೆ ರೇಬಿಸ್ ಇಮ್ಯೂನೋ ಗ್ಲೋಬಿಲಿನ್ ಕೊಡಬೇಕು. ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂದು ಹೇಳಿದರು.        ನಾವು ಸಾಕಿದ ಪ್ರಾಣಿಗಳಿಗೆ ರೇಬೀಸ್ ಇಂಜೆಕ್ಷನ್ ಕೊಡಿಸಿದರೂ ಸಹ ಅದು ಕಚ್ಚಿದಾಗ ನಾವು ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳುವುದು ತುಂಬಾ ಅಗತ್ಯ. ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ಒಂದು ವರ್ಷದೊಳಗಿನ ಮಕ್ಕಳು ಮತ್ತು ವಯಸ್ಕರು ಸಹ ರೇಬಿಸ್ ವಿರುದ್ಧದ ಲಸಿಕೆ ತೆಗೆದುಕೊಳ್ಳಬಹುದು. ಸಾಕು ನಾಯಿಗಳಿಗೆ ತಪ್ಪದೇ ಚುಚ್...

ಕೃಷಿ ಪ್ರವಾಸೋದ್ಯಮಕ್ಕೆ ಜಿಲ್ಲೆಯಲ್ಲಿದೆ ಹೆಚ್ಚಿನ ಅವಕಾಶ: ಡಾ. ಆರ್.ಸಿ.ಜಗದೀಶ್

ಇಮೇಜ್
      ಶಿವಮೊಗ್ಗ: ಕೃಷಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಕುರಿತಂತೆ ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ್ ಅವರೊಂದಿಗೆ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಹಾಗೂ ನಮ್ಮ ಕನಸಿನ ಶಿವಮೊಗ್ಗ ಸಂಸ್ಥೆ ಪದಾಧಿಕಾರಿಗಳು ಸಮಾಲೋಚನೆ ನಡೆಸಿದರು.          ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಕಾರ್ಯದರ್ಶಿ ಎನ್.ಗೋಪಿನಾಥ್ ಮಾತನಾಡಿ, ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣವು ಪರಿಸರ, ಗ್ರಾಮೀಣ ಮತ್ತು ಕೃಷಿ ಪ್ರವಾಸೋದ್ಯಮದ ಅರಿವು ಮೂಡಿಸುವ ಜತೆಯಲ್ಲಿ ಕೃಷಿ ಕ್ಷೇತ್ರದ ಅರಿವು ವಿಸ್ತಾರ ಮಾಡುವಲ್ಲಿ ಮಹತ್ತರ ಸ್ಥಳವಾಗಿದೆ. ಪ್ರತಿಯೊಬ್ಬರೂ ಭೇಟಿ ನೀಡಬಹುದಾದ ಸ್ಥಳವಾಗಿದೆ. ಕೃಷಿ ಪ್ರವಾಸೋದ್ಯಮಕ್ಕೆ ವಿಶ್ವವಿದ್ಯಾಲಯದಿಂದ ಪೂರಕ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.       ಇರುವಕ್ಕಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ್ ಮಾತನಾಡಿ, ಶಿವಮೊಗ್ಗ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಮಲೆನಾಡಿಗೆ ಸಂಬಂಧಿಸಿದಂತೆ ವಿಶೇಷ ಪ್ರಾಕೃತಿಕ ಸಂಪತ್ತು ಹೊಂದಿರುವ ಪ್ರದೇಶವಾಗಿದೆ. ಪಶ್ಚಿಮಘಟ್ಟ ಪ್ರದೇಶ ಹೊಂದಿರುವುದರಿಂದ ಪರಿಸರ ಪ್ರವಾಸಕ್ಕೆ ಅತ್ಯಂತ ಸೂಕ್ತ ಪ್ರದೇಶವಾಗಿದ...

ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಪ್ರೋತ್ಸಾಹ ಅವಶ್ಯಕ

ಇಮೇಜ್
ಶಿವಮೊಗ್ಗ: ಮಹಿಳೆಯರು ಆರ್ಥಿಕವಾಗಿ ಸದೃಢರಾಗಿ ಆತ್ಮವಿಶ್ವಾಸದಿಂದ ಜೀವನದಲ್ಲಿ ಮುನ್ನಡೆಯಬೇಕು. ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಅವಶ್ಯಕ ಎಂದು ಆಭರಣ ಜ್ಯೂವೆಲ್ಲರಿ ಶಿವಮೊಗ್ಗ ಶಾಖೆ ವ್ಯವಸ್ಥಾಪಕ ಗಣಪತಿ ಶೆಣೈ ಹೇಳಿದರು.         ನಗರದ ಪೆಸಿಟ್ ಕಾಲೇಜಿನ ಪ್ರೇರಣ ಸಭಾಂಗಣದಲ್ಲಿ ಎರಡು ದಿನ ಆಯೋಜಿಸಿರುವ ಇನ್ನರ್ ವ್ಹೀಲ್ ಜಿಲ್ಲಾ ಸಮಾವೇಶದಲ್ಲಿ ವ್ಯಾಪಾರ ಮಳಿಗೆ ಹಾಗೂ ಪ್ರದರ್ಶನ ಮಳಿಗೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ, ಮಹಿಳೆಯರು ವ್ಯವಹಾರದಲ್ಲಿ ಅಭಿವೃದ್ಧಿ ಹೊಂದಲು ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.         ಇನ್ನರ್‌ವ್ಹೀಲ್ ಜಿಲ್ಲಾ ಚೇರ್ಮನ್ ಶಬರಿ ಕಡಿದಾಳ್ ಮಾತನಾಡಿ, ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗದೆ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕು. ಸಂಘ ಸಂಸ್ಥೆಗಳಲ್ಲಿ ಪಾಲ್ಗೊಳ್ಳುವುದರ ಜತೆಗೆ ಆರ್ಥಿಕವಾಗಿ ಸಬಲರಾಗಬೇಕು. ಪರಸ್ಪರ ಒಡನಾಟ ಹೆಚ್ಚುತ್ತದೆ. ಅವರ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದು ಹೇಳಿದರು.        ಎಂಟು ಜಿಲ್ಲೆಗಳಿಂದ ಮಹಿಳಾ ಉದ್ಯಮಿಗಳು ಆಗಮಿಸಿದ್ದು, ಅವರ ವ್ಯಾಪಾರ ವಹಿವಾಟು ಅತ್ಯುತ್ತಮವಾಗಿ ನಡೆಯುವುದರ ಮುಖಾಂತರ ಅವರಿಗೆ ಪ್ರೋತ್ಸಾಹಿಸಬೇಕು. ನಗರದ ಉದ್ಯಮಿಗಳ ಸಹಕಾರದಿಂದ ಜಿಲ್ಲಾ ಸಮಾವೇಶ ಯಶಸ್ವಿಯಾಗಲಿದೆ ಎಂದು ತಿಳಿಸಿದರು.         ಡಾ. ಕಡಿದಾಳ್...

ಗಣೇಶ್‌ಬಿಳಿಗಿ ಅವರಿಗೆ ರಾಷ್ಟ್ರಕವಿ ಕುವೆಂಪು ಸದ್ಭಾವನ ರಾಜ್ಯ ಪ್ರಶಸ್ತಿ.

ಇಮೇಜ್
ಶಿವಮೊಗ್ಗ :  ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್ ಶಿವಮೊಗ್ಗ ತಾಲ್ಲೂಕ್ ಪಂಚಾಯತ್ ತೀರ್ಥಹಳ್ಳಿ, ಗ್ರಾಮ ಪಂಚಾಯಿತಿ ಹಣಗೆರೆ, ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ,ಪತಂಜಲಿ ಕರ್ನಾಟಕ ಜಾನಪದ ಕಲಾ ಕೇಂದ್ರ, ಸಂಜೀವಿನಿ ಸ್ವಸಹಾಯ ಸಂಘಗಳ ಒಕ್ಕೂಟ, ಧರ್ಮಸ್ಥಳ ಸ್ವಸಹಾಯ ಸಂಘಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಕಾಶಕರು ಮತ್ತು ಸಂಪಾದಕರು ಕ್ರಾಂತಿಕಿಡಿ ಪತ್ರಿಕೆ ಹಾಗೂ ಗಣೇಶ್ ಗ್ರಾಫಿಕ್ಸ್ ನ ಮಾಲೀಕರು ಸಮಾಜ ಸೇವಕರು ಆದ ಶ್ರೀ ಗಣೇಶ್ ಬಿಳಗಿಯವರಿಗೆ ಮುದ್ರಣ ಪತ್ರಿಕೋದ್ಯಮ ಮತ್ತು ಸಮಾಜಸೇವಾ ಕ್ಷೇತ್ರದಲ್ಲಿ ಎಲೆಮರೆಯ ಕಾಯಿಯಂತೆ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ರಾಷ್ಟ್ರಕವಿ ಕುವೆಂಪು ಸದ್ಭಾವನಾ ರಾಜ್ಯ ಪ್ರಶಸ್ತಿಯನ್ನು ನೀಡಲಾಯಿತು. ಈ ಪ್ರಶಸ್ತಿಯನ್ನು ಪಡೆದ ಗಣೇಶ ಬಿಳಗಿ ಯವರನ್ನು ಕೃಷಿಕ ಸಮಾಜದ ರಾಜ್ಯಾಧ್ಯಕ್ಷರಾದ ನಗರದ ಮಹದೇವಪ್ಪನವರು ಪತ್ರಿಕಾ ಕಚೇರಿಗೆ ಭೇಟಿ ನೀಡಿ ಗಣೇಶ ಅವರನ್ನು ಶಾಲು ಹೊದಿಸಿ ಸನ್ಮಾನ ಮಾಡಿ ಅಭಿನಂದಿಸಿದರು. 

ಕನ್ನಡ ಮಾಧ್ಯಮದಲ್ಲಿ ಓದಿದ್ದವರು ಇಂದು ಸಮಾಜದಲ್ಲಿ ಮಂಚೂಳಿಯಲ್ಲಿದ್ದಾರೆ

ಇಮೇಜ್
  ಶ್ರೀಮತಿ ಕೆ.ಎಸ್ ಗೀತಾ : ತಾವು ಶಿವಮೊಗ್ಗ ತಾಲ್ಲೂಕಿನ ಒಂದು ಪುಟ್ಟ ಶಾಲೆ ಆಡಿನಕೊಟ್ಟಿಗೆಯಲ್ಲಿ ಸಾಮಾನ್ಯ ಶಿಕ್ಷಕಿ. ನನ್ನಂತಹವರನ್ನು ಇಂದು ಕರೆಸಿ ಸನ್ಮಾನಿಸುತ್ತಿರುವುದು ನನಗೆ ತುಂಬ ಸಂತೋಷವನ್ನುಂಟು ಮಾಡಿದೆ. ಅದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಶಿಕ್ಷಕಿ ಕೆ.ಎಸ್.ಗೀತಾ ತಿಳಿಸಿದ್ದಾರೆ. ಅವರು ಸಹ್ಯಾದ್ರಿ ಲಲಿತ ಕಲಾ ಅಕಾಡೆಮಿ ವತಿಯಿಂದ ರಾಜ್ಯೋತ್ಸವದ ಪ್ರಯುಕ್ತ ವನಿತಾ ವಿದ್ಯಾಲಯದಲ್ಲಿ  ನಡೆದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.        ರಾಜ್ಯೋತ್ಸವದ ಮಹತ್ವದ ಬಗ್ಗೆ ಎಂ ಎನ್ ಸುಂದರ್ ರಾಜ್ ಅವರು ತಿಳಿಸುತ್ತಾ, ಕನ್ನಡ ಮಾಧ್ಯಮದಲ್ಲಿ ಓದಿ ನೂರಾರು ಗೌರವ ಡಾಕ್ಟರೇಟ್ ಗಳಿಸಿ, ಭಾರತರತ್ನ ಪ್ರಶಸ್ತಿಯನ್ನು ಪಡೆದ ಸಿ.ಎನ್.ಆರ್.ರಾವ್ ಬಗ್ಗೆ ನಾವೆಲ್ಲ ಅಭಿಮಾನ ಹೊಂದಬೇಕು ಎಂದು ಹೇಳಿದರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿ. ವಿಜಯಕುಮಾರ್ ಅವರು ಮಾತನಾಡಿ ಕನ್ನಡ ನಿತ್ಯೋತ್ಸವವಾಗಿ ಆಚರಿಸಬೇಕೆಂದು ಕರೆನೀಡಿದರು.      ಪ್ರಾರಂಭದಲ್ಲಿ ಹರಿಪ್ರಸಾದ್ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು. ಮೊದಲು ಶಾಲಾ ಮಕ್ಕಳಿಂದ ಪ್ರಾರ್ಥನೆ ನಡೆಯಿತು. ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇದನ್ನು ಹರಿಪ್ರಸಾದ್ ನಡೆಸಿಕೊಟ್ಟರು.ವಿಜೇತ ಮಕ್ಕಳಿಗೆ ಜಿಲ್ಲಾ ಸರ್ವೋದಯ ಮಂಡಳಿ ಅಧ್ಯಕ್ಷ ಮನೋಹರ್ ಬಹುಮಾನ ವಿತರಿಸಿ, ಮಕ್ಕಳಲ್ಲಿ ಸ್ಫರ್ಧಾ ಮನೋಭಾವ ಬೆಳೆಯಲ...

ಕ ರ ವೇ ಜನ ಮನ ರಾಜ್ಯ ಹೋರಾಟ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ

ಇಮೇಜ್
  ಶಿವಮೊಗ್ಗ  ದಿನಾಂಕ 11.12.2025ರ  ಗುರುವಾರದಂದು ಕರ್ನಾಟಕ ರಕ್ಷಣಾ ವೇದಿಕೆ ಜನ ಮನ ರಾಜ್ಯ ಹೋರಾಟ ಸಂಘಟನೆ  ನೂತನ ಪದಾಧಿಕಾರಿಗಳ ಆಯ್ಕೆ ಈ ಸಂಘಟನೆಯಲ್ಲಿ ರಾಜ್ಯಾಧ್ಯಕ್ಷರಾಗಿ ಜನಾರ್ದನ್ ಶಾಲಿಯಾನ. ಕೆ. ಪ್ರಧಾನ ಕಾರ್ಯದರ್ಶಿಯಾಗಿ ಏನ್ ಮಾಲತೇಶ್  ಖಜಾಂಚಿಯಾಗಿ ಸಿದ್ದಣ್ಣನವರು. ಉಪಾಧ್ಯಕ್ಷರಾಗಿ ಯಶವಂತ್, ಎಸ್. ಸಂಘಟನೆ ಅಧ್ಯಕ್ಷರಾಗಿ ಅರುಣ್ ಕುಮಾರ್ ಎಂ. ಹಾಗೂ ಜಿಲ್ಲಾಧ್ಯಕ್ಷರಾಗಿ ಪ್ರಫುಲಚಂದ್ರ ಎಚ್. ಪ್ರಧಾನ ಕಾರ್ಯದರ್ಶಿಯಾಗಿ ರಾಮು ಜಿ. ಉಪಾಧ್ಯಕ್ಷರಾಗಿ ಮಂಜುನಾಥ್ ಎ. ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಲತೇಶ್  ಎನ್. ಸಂಘಟನೆ ಅಧ್ಯಕ್ಷರಾಗಿ ಸಂಗಮೇಶ್ ಈ. ಸಹ ಕಾರ್ಯದರ್ಶಿಯಾಗಿ ಯೋಗೇಶ್ ಎಲ್. ಗೌರವಾಧ್ಯಕ್ಷರಾಗಿ ಅಶೋಕ್ ಎಸ್,ಆರ್. ಹಾಗೂ ಮಹಿಳಾ ಜಿಲ್ಲಾ ಘಟಕ ಅಧ್ಯಕ್ಷರಾಗಿ ಸುಮಾ ಕೆ ಎಸ್. ಗೌರವಾಧ್ಯಕ್ಷರಾಗಿ ಡಾಕ್ಟರ್ ವೀಣಾ ಮೇಡಂ ಎಚ್. ಕಾರ್ಯದರ್ಶಿಯಾಗಿ ಪುಷ್ಪ ಒಡೆಯರ್ ಎ ಮತ್ತು ನಗರಾಧ್ಯಕ್ಷರಾಗಿ ರಾಮಣ್ಣ ರಾಗಿಗುಡ್ಡ. ಸಂಘಟನೆ ಅಧ್ಯಕ್ಷರಾಗಿ ಮಂಜು ನಾಯಕ್ ಎಸ್. ಪ್ರಧಾನ ಕಾರ್ಯದರ್ಶಿಯಾಗಿ ಪಾರ್ಥಿಬನ್ ಪಿ. ಉಪಾಧ್ಯಕ್ಷರಾಗಿ ಮನು ಕುಮಾರ್ ಎಂ ಸಹ ಕಾರ್ಯದರ್ಶಿಯಾಗಿ ಪ್ರೇಮ್ ಕುಮಾರ್ ಎಂ. ಗೌರವಾಧ್ಯಕ್ಷರಾಗಿ ರಾಮು ಎಚ್ ರವರನ್ನು ಈ ಒಂದು ಸಂಘಟನೆಗೆ ಆತ್ಮೀಯವಾಗಿ ಸೇರ್ಪಡೆಗೊಳಿಸಲಾಯಿತು. ವಿಧ ಜಿಲ್ಲೆಯ ಸಂಘಟನೆಗಾಗಿ ಸಂಪರ್ಕಿಸಿ 9901826004

ಸಾಧಕ ಮಹಿಳಾ ಉದ್ಯಮಿ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಇಮೇಜ್
ಶಿವಮೊಗ್ಗ: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ವತಿಯಿಂದ ಸಾಧಕ ಮಹಿಳಾ ಉದ್ಯಮಿ  ಪ್ರಶಸ್ತಿ ಸ್ವೀಕರಿಸಿದ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕಿ ಡಾ. ಲಕ್ಷ್ಮೀದೇವಿ ಗೋಪಿನಾಥ್  ಮತ್ತು ಸದಸ್ಯೆ ಮಧುಮಿತ ಅವರಿಗೆ ಶಿವಮೊಗ್ಗ ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.         ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಮಹಿಳಾ ಉದ್ಯಮಿಗಳ ಸಂಖ್ಯೆ ಹೆಚ್ಚಾಗಬೇಕು. ಸರ್ಕಾರದ ವತಿಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಈ ದಿಸೆಯಲ್ಲಿ ಶಿವಮೊಗ್ಗ ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕೆ ಸಂಘವು ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಲು ಬದ್ಧವಾಗಿದೆ ಎಂದು ತಿಳಿಸಿದರು.         ಲಕ್ಷ್ಮೀದೇವಿ ಗೋಪಿನಾಥ್ ಅವರಿಗೆ ಹಿಂದೆಯು ಸಹ ರಾಜ್ಯ ಮತ್ತು ಕೇಂದ್ರ ಸರ್ಕಾರದ ವತಿಯಿಂದ ಅನೇಕ ಮಹಿಳಾ ಉದ್ಯಮಿ ಪ್ರಶಸ್ತಿಯು ದೊರಕಿದೆ. ಮಧುಮಿತ ಅವರು ಹೋಟೆಲ್ ಉದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರ ಈ ಸಾಧನೆ ಯುವ ಮಹಿಳಾ ಉದ್ಯಮಿಗಳಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.           ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಸಹ ಕಾರ್ಯದರ್ಶಿ ಕೆ.ಎಸ್.ಸುಕುಮಾರ್, ಖಜ...

ನಗರದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ

ಇಮೇಜ್
  ಶಿವಮೊಗ್ಗ: ನಗರದ ಆರ್‌ಟಿಓ ಕಚೇರಿ ರಸ್ತೆಯ ಕಲಾ ತರಬೇತಿ ಸಂಸ್ಥೆಯಲ್ಲಿ ಸ್ಥಳೀಯ ಎನ್‌ಜಿಓಗಳ ಪದಾಧಿಕಾರಿಗಳು,  ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಸರಳ ಮತ್ತು ಸಾರ್ಥಕವಾಗಿ ಆಚರಿಸಲಾಯಿತು.        ಕಾರ್ಯಕ್ರಮದಲ್ಲಿ ಬೆಳೆಯುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡಿ, ಹೆಚ್ಚಿನ ಸಂಖ್ಯೆಯಲ್ಲಿ ಜನಸೇವಾ ಸಂಸ್ಥೆಗಳು ಬೆಳೆದುಬರಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು. ನಗರದಲ್ಲಿನ ಸ್ವಚ್ಛತೆ, ಆರೋಗ್ಯ ಹಾಗೂ ಪರಿಸರ ಸಂರಕ್ಷಣೆ ಕ್ಷೇತ್ರಗಳಲ್ಲಿ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಸದಸ್ಯರು ಚರ್ಚಿಸಿದರು.         ಯುವಜನರಲ್ಲಿ ಹೆಚ್ಚುತ್ತಿರುವ ನಶೆ ಪ್ರವೃತ್ತಿಯನ್ನು ತಡೆಗಟ್ಟುವ ಬಗ್ಗೆ ತೀವ್ರ ಕಾಳಜಿ ವ್ಯಕ್ತಪಡಿಸಲಾಯಿತು. “ನಶೆ ಮುಕ್ತ ಯುವಜನ ನಿರ್ಮಾಣಕ್ಕಾಗಿ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳು, ವಿಸ್ತೃತ ಪ್ರಚಾರ, ಶಾಲಾ–ಕಾಲೇಜು ಮಟ್ಟದ ಚಟುವಟಿಕೆಗಳು ಅಗತ್ಯ” ಎಂದು ಸಭೆಯಲ್ಲಿ ಮನವಿ ಮುಂದಿಡಲಾಯಿತು.         ಈ ಸಂದರ್ಭದಲ್ಲಿ ಕೆ.ಸಿ. ಬಸವರಾಜ್ (ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ), ನಟರಾಜ್ (ಕಲಾ ಸಂಸ್ಥೆ), ಇಂದೂಧರ್ (ಮಾನಸ ಸಂಸ್ಥೆ), ಈಶ್ವರಪ್ಪ (ಸ್ಥಳೀಯ ಸಂಸ್ಥೆ), ಹನುಮಂತಯ್ಯ (ಆಸರೆ ಸಂಸ್ಥೆ), ಮಂಜುನಾಥ್ (ನೇಸರ ಸಂಸ್ಥೆ), ಸವಿತಾ (ಪೂಜಾ ಚಾರಿಟೇಬಲ್ ಟ್ರಸ್ಟ್), ನವೀನ್ ತಲಾರಿ (ಭೂಮಿ ಸಂಸ್ಥೆ–...

ಜೈಲು ಸುಧಾರಣಾ ವರದಿಗಳು ಧೂಳು ತಿನ್ನುತ್ತಿವೆ, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಬೆಳಗಾವಿ ವಿಧಾನ ಪರಿಷತ್‌ನಲ್ಲಿ ಸರ್ಕಾರಕ್ಕೆ ಚಾಟಿ ಬೀಸಿದ ಡಾಕ್ಟರ್ ಧನಂಜಯ್ ಸರ್ಜಿ

ಇಮೇಜ್
  ಬೆಳಗಾವಿ : ಧೂಳು ತಿಂತಿವೆ ಜೈಲು ಸುಧಾರಣೆ ಮತ್ತು ವರದಿಗಳು, 2014 ರಿಂದ 2024ರ ವರದಿಗಳು ಮೂಲೆಗುಂಪು ಎನ್ನುವ ಅಡಿಬರಹದ ಪತ್ರಿಕಾ ವರದಿಗಳು ಜೈಲು ಸುಧಾರಣೆಯ ಕುರಿತ ಸರ್ಕಾರದ ನಿರ್ಲಕ್ಷ ಹಾಗೂ ಆಡಳಿತಾತ್ಮಕ ವ್ಯಫಲ್ಯವನ್ನು ಎತ್ತಿ ತೋರಿಸುತ್ತದೆ ಸರ್ಕಾರವು ತನ್ನ ವಿಫಲತೆಯನ್ನು ಮರೆಮಾಚಲು ಸಮಿತಿಯ ಮೇಲೊಂದು ಸಮಿತಿ ನೇಮಕ ಮಾಡುವುದನ್ನು ಬಿಟ್ಟು ಈಗಾಗಲೇ ಸರ್ಕಾರವು ಬಂಧಿಖಾನೆಗಳ ಸುಧಾರಣೆ ಕುರಿತು ನೇಮಕ ಮಾಡಿರುವ ಸಮಿತಿಗಳ ವರದಿಗಳನ್ನು ಅದರಲ್ಲಿನ ಶಿಫಾರಸ್ಸುಗಳನ್ನು ಕಾಲಮಿತಿಯಲ್ಲಿ ಅನುಷ್ಠಾನ ಮಾಡಿ ಕಾರ್ಯರೂಪಕ್ಕೆ ತರಬೇಕು ಹಾಗೂ ಹೊಸ ಸಮಿತಿ ರಚಿಸಿ ತನ್ನ ತಪ್ಪನ್ನು ಮರೆಮಾಚಿ, ಜನರಿಂದ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಕೈಬಿಡಬೇಕೆಂದು ಸದನದಲ್ಲಿ ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಸರ್ಕಾರಕ್ಕೆ ಚಾಟಿ ಬೀಸಿದರೆ.          ಒಂದೆಡೆ ಜೈಲಲ್ಲಿ ನಿಯಮ ಮೀರಿ ಮಾಂಸಾಹಾರ ಮದ್ಯ-ಸಿಗರೇಟು ಅಷ್ಟೇ ಅಲ್ಲದೇ ಗಾಂಜಾ - ಮೊಬೈಲ್ ಫೋನ್‌ಗಳು ಖೈದಿಗಳಿಗೆ ದೊರೆಯುತ್ತಿದ್ದು "ಖೈದಿಗಳಿಗೆ ರಾಜಾತಿಥ್ಯ'ದ ವಿಚಾರ ಜಗತ್ ಜಾಹಿರವಾಗಿ, ರಾಜ್ಯ ಸರ್ಕಾರದ ವೈಫಲ್ಯತೆ ಸಾಮಾಜಿಕ ಜಾಲತಾಣ ಮತ್ತು ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗಿಡಾಗಿದೆ. ಅದರೆ ಜೈಲುಗಳ ಸುಧಾರಣೆಗೆ ಸರ್ಕಾರವೇ ನೇಮಕಮಾಡಿದ ಸಮಿತಿಗಳು ವರದಿ ನೀಡಿ ವರ್ಷಗಳೇ ಕಳೆದರೂ ಸರ್ಕಾರದ ಕಪಾಟಿನಲ್ಲಿ ಧೂಳು ತಿನ್ನುತ್ತಿವೆ ಎಂದು ಪತ್ರಿಕೆಯಲ್ಲಿ ವರದಿಯಾಗಿವೆ....

ಪ್ರತಿಯೊಬ್ಬರಿಗೂ ಎಲ್ಲ ಹಕ್ಕುಗಳು ದೊರಕುವುದು ಮುಖ್ಯ

ಇಮೇಜ್
  ಶಿವಮೊಗ್ಗ: ಪ್ರತಿಯೊಬ್ಬ ಮನುಷ್ಯ ಸಮಾನವಾಗಿ ಸದೃಢವಾಗಿ ಬದುಕಬೇಕು. ಎಲ್ಲ ಹಕ್ಕುಗಳು ಮಾನವ ಹಕ್ಕುಗಳು. ಪ್ರತಿಯೊಬ್ಬ ಮನುಷ್ಯನು ನೆಮ್ಮದಿಯಿಂದ ಬದುಕಬೇಕು. ಅದೇ ವಿಶ್ವ ಮಾನವ ಹಕ್ಕುಗಳ ಮೂಲ ಉದ್ದೇಶ ಎಂದು ಉಪಪ್ರಧಾನ ಕಾನೂನು ನೆರವು ಅಭಿರಕ್ಷಕಿ ಇ.ಡಿ.ಅಶ್ವಿನಿ ಹೇಳಿದರು.            ನಗರದ ಅನನ್ಯ ರೆಸಿಡೆನ್ಸಿಯಲ್ ಪಬ್ಲಿಕ್ ಸ್ಕೂಲ್‌ನಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕರ್ನಾಟಕ ಮಾನವ ಹಕ್ಕುಗಳ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.          ಪ್ರತಿಯೊಬ್ಬರೂ ಹಕ್ಕುಗಳ ಬಗ್ಗೆ ಅರಿತುಕೊಳ್ಳಬೇಕು. ಇನ್ನೊಬ್ಬರಿಗೆ ತೊಂದರೆ ಉಂಟು ಮಾಡಿ ಮಾನವನ ಹಕ್ಕುಗಳನ್ನು ಉಲ್ಲಂಘಿಸಿದರೆ ಶಿಕ್ಷೆಗೆ ಒಳಪಡಬೇಕಾಗುತ್ತದೆ. ಮಕ್ಕಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇದರ ಬಗ್ಗೆ ಸರ್ಕಾರವು ಹೆಚ್ಚು ನಿಗಾ ವಹಿಸಿದೆ. ಆದರಿಂದ ಮಕ್ಕಳು ಈ ಕಾನೂನುಗಳನ್ನು ಅರಿತುಕೊಳ್ಳಬೇಕು ಎಂದು ಕರೆ ನೀಡಿದರು.          ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ ಮಾತನಾಡಿ, ಜಾಗೃತಿ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳ ಜೀವನದಲ್ಲಿ ಬೆಳಕು ಚೆಲ್ಲುವುದರ ಜೊತೆಗೆ ಅನಾ...

2025 ರ ಜೆಸಿಐ ವಿಶ್ವ ಸಮ್ಮೇಳನದಲ್ಲಿ ಮಿಂಚಿದ ಜೆಸಿಐ ಭಾರತ

ಇಮೇಜ್
  ಟುನಿಸ್, ಟುನೀಶಿಯಾ: ಜೆಸಿಐ ಇಂಡಿಯಾ, ಜೆಸಿಐ ವಿಶ್ವ ಕಾಂಗ್ರೆಸ್ 2025 ರಲ್ಲಿ ಅಸಾಧಾರಣ ಉಪಸ್ಥಿತಿಯನ್ನು ಗುರುತಿಸಿತು, ಜಾಗತಿಕ ವೇದಿಕೆಯಲ್ಲಿ ದೇಶದ ನಾಯಕತ್ವ ಶಕ್ತಿ ಮತ್ತು ಯುವ ಅಭಿವೃದ್ಧಿ ಶ್ರೇಷ್ಠತೆಯನ್ನು ಹೆಮ್ಮೆಯಿಂದ ಪ್ರದರ್ಶಿಸಿತು. ರಾಷ್ಟ್ರೀಯ ಅಧ್ಯಕ್ಷ ಜೆಸಿ ಅಂಕುರ್ ಜುನ್ಜುನ್ವಾಲಾ ನೇತೃತ್ವದ 83 ಸದಸ್ಯರ ನಿಯೋಗವು ವಿವಿಧ ಅಂತರರಾಷ್ಟ್ರೀಯ ವೇದಿಕೆಗಳು, ಸ್ಪರ್ಧೆಗಳು ಮತ್ತು ಸಹಯೋಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಪ್ರಪಂಚದಾದ್ಯಂತದ ನಾಯಕರಿಂದ ಮೆಚ್ಚುಗೆಯನ್ನು ಗಳಿಸಿತು.           ಭಾರತದ ಪ್ರದರ್ಶನವು ಹಲವಾರು ಪ್ರಮುಖ ವಿಭಾಗಗಳಲ್ಲಿ ಎದ್ದು ಕಾಣುತ್ತದೆ. ಜೆಸಿಐ ಇಂಡಿಯಾ ಫುಟ್ಬಾಲ್ ತಂಡವು ವಿಶ್ವ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಗಮನಾರ್ಹ ಶಕ್ತಿ ಮತ್ತು ತಂಡದ ಕೆಲಸದೊಂದಿಗೆ ಸ್ಪರ್ಧಿಸಿತು, ಅವರ ಕ್ರೀಡಾ ಮನೋಭಾವಕ್ಕಾಗಿ ಮೆಚ್ಚುಗೆಯನ್ನು ಗಳಿಸಿತು. ನಾಯಕತ್ವ ಅಭಿವೃದ್ಧಿಯಲ್ಲಿ, ಪ್ರತಿಷ್ಠಿತ ಮೆಂಟರ್-ಮೆಂಟಿ ಕಾರ್ಯಕ್ರಮದಲ್ಲಿ ಭಾರತೀಯ ಭಾಗವಹಿಸುವವರನ್ನು ಅತ್ಯುತ್ತಮ ಮೆಂಟಿ - ಜಾಗತಿಕ ವಿಜೇತ ಎಂದು ಘೋಷಿಸಿದಾಗ ಭಾರತವು ಪ್ರಮುಖ ಮೈಲಿಗಲ್ಲನ್ನು ಸಾಧಿಸಿತು, ಇದು ದೇಶದ ಬಲವಾದ ಮಾರ್ಗದರ್ಶನ ಪರಿಸರ ವ್ಯವಸ್ಥೆಯನ್ನು ಒತ್ತಿಹೇಳುತ್ತದೆ.          ಗೌರವಗಳಿಗೆ ಹೆಚ್ಚುವರಿಯಾಗಿ, ಬಹು ಭಾರತೀಯ ಸದಸ್ಯರು ಮತ್ತು ಸ್ಥಳೀಯ ಸಂಸ್ಥೆಯ ಅಧ್ಯಕ್ಷರನ್ನು ಸ...

🇮🇳 India Shines at JCI World Congress 2025 in Tunisia Indian Delegation Earns Global Recognition Across Multiple Categories

ಇಮೇಜ್
Tunis, Tunisia: JCI India marked an extraordinary presence at the JCI World Congress 2025 , proudly showcasing the nation’s leadership strength and youth development excellence on the global stage. The 83-member delegation, led by National President Jc Ankur Jhunjhunwala , participated in various international forums, competitions, and collaborative events, earning appreciation from leaders across the world.           India’s performance stood out in several key segments. The JCI India Football Team competed with remarkable energy and teamwork in the World Football Championship, earning admiration for their sportsmanship. In leadership development, India achieved a major milestone as an Indian participant was declared Best Mentee – Global Winner in the prestigious Mentor–Mentee Program, underscoring the country’s strong mentoring ecosystem.         Adding to the honors, multiple Indian members and Local Organization Presidents were recogn...

ಆಳ್ವಾಸ್ ಸಾಂಸ್ಕೃತಿಕ ವೈಭವ ಡಿಸೆಂಬರ್ 15ಕ್ಕೆ

ಇಮೇಜ್
ಶಿವಮೊಗ್ಗ: ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ವೈಭವ 2025ರ ಅದ್ಭುತ ಕಾರ್ಯಕ್ರಮದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.           ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಆಳ್ವಾಸ್ ನುಡಿಸಿರಿ ವಿರಾಸತ್ ಶಿವಮೊಗ್ಗ ಜಿಲ್ಲಾ ಘಟಕದಿಂದ ಆಯೋಜಿಸಿರುವ ಆಳ್ವಾಸ್ ನುಡಿಸಿರಿ  ಸಾಂಸ್ಕೃತಿಕ ವೈಭವ 2025 ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.         ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಡಿಸೆಂಬರ್ 15ರಂದು ಸಂಜೆ 5.30ರಿಂದ  ಅಲ್ಲಮ ಪ್ರಭು ಬಯಲು ಫ್ರೀಡಂ ಪಾರ್ಕ್ ನಲ್ಲಿ ಕಲೆ, ಸಂಗೀತ, ನೃತ್ಯ, ಯಕ್ಷಗಾನ ಸಂಸ್ಕೃತಿ ಅನಾವರಣಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 300 ವಿದ್ಯಾರ್ಥಿ ಕಲಾವಿದರಿಂದ 3 ಗಂಟೆ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ ಎಂದು ಹೇಳಿದರು.           ಪದವೀಧರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್, ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ ಕುಮಾರ್, ಶ್ರೀ ಬಸವೇಶ್ವರ ಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಬಳ್ಳೆಕೆರೆ ಸಂತೋಷ್,  ಜಿಲ್ಲಾ ವಾಣಿಜ್ಯ ಮತ್ತು...

ಗುಡ್ ಲಕ್ ಆರೈಕೆ ಕೇಂದ್ರ ಕ್ಕೆ ಒಂದು ಲಕ್ಷ ರೂ ದೇಣಿಗೆ : ಹೇಮಾ ಬಿಜಿ ಗೋಣೂರು

ಇಮೇಜ್
    ದಾನ  ನಮ್ಮನ್ನು ಸದಾ ಕಾಪಾಡುತ್ತದೆ. ದಾನದಿಂದ ಮನಸ್ಸಿಗೆ ತೃಪ್ತಿ : ಹೇಮಾ ಬಿಜಿ ಗೋಣೂರು      ನಾವು ಮಾಡಿದ ಸೇವೆ ದಾನ ಧರ್ಮ ನಮಗೆ ಒಂದಲ್ಲ ಒಂದು ರೀತಿಯಿಂದ ನಮ್ಮ ಕುಟುಂಬವನ್ನು ಕಾಪಾಡುತ್ತದೆ ದಾನದಿಂದ ತೃಪ್ತಿ ಸಿಗುತ್ತದೆ ಎಂದು. ಸಾಗರದ ಹೇಮಾ ಬಿಜಿ ಗೋಣೂರು ಅಭಿಮತ ವ್ಯಕ್ತ ಪಡಿಸಿದರು. ಅವರು ಈ ದಿನ ನಗರದ ಗುಡ್ ಲಕ್ ಆರೈಕೆ ಕೇಂದ್ರ ಅನಾಥಾಶ್ರಮ ದಲ್ಲಿ ಆಶ್ರಮದ ಕಟ್ಟಡ ಕಾಮಗಾರಿಗೆ 1 ಲಕ್ಷ  ರೂ ದೇಣಿಗೆ ನೀಡಿ   ಮಾತನಾಡಿದರು ದಾನಿಗಳ ಕೈ ಯಾವತ್ತು ಸೋಲುವುದಿಲ್ಲ ನಾವು ಮಾಡಿದ ದಾನದಿಂದ ಅದರ ನಾಲ್ಕು ಪಟ್ಟು ಫಲ ನಮಗೆ ಲಭಿಸಿದೆ ಮನುಕುಲದ ಸೇವೆಗಳನ್ನು ಮಾಡುತ್ತಿರುವ ಸಂಸ್ಥೆಗಳಿಗೆ ಮಾತ್ರ ನಮ್ಮ ಕುಟುಂಬದವರು ದಾನವನ್ನು ಮಾಡುತ್ತಾ ಬಂದಿದ್ದೇವೆ ಈಗಾಗಲೇ ಅಂದರ ವಿಕಾಸ ಕೇಂದ್ರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅನಾಥಾಶ್ರಮಗಳಿಗೆ ಈಗ ಈ ಗುಡ್ ಲಕ್ ಆರೈಕೆ ಕೇಂದ್ರಕ್ಕೆ ದೇಣಿಗೆ ನೀಡಿದ್ದೇವೆ ಆರೈಕೆ ಕೇಂದ್ರದ ಚಟುವಟಿಕೆಗಳನ್ನ ಗಮನಿಸಿ ಅವರು ಮಾಡುತ್ತಿರುವ ಗುಡ್ ಲಕ್ ಆರೈಕೆ ಕೇಂದ್ರದ ನಿಸ್ವಾರ್ಥ ಮಾನವೀಯ ಸೇವೆಗಳು ಸಮಾಜಕ್ಕೆ ಮಾದರಿಯಾಗಿದೆ ಅನಾಥರ  ಬುದ್ಧಿಮಾಂದ್ಯ ರ ಹಾಗೂ ಅಶಕ್ತರ ಆರೈಕೆ ಮಾಡುವ ಕೆಲಸ ಸಾಮಾನ್ಯ ವಾದುದಲ್ಲ. ನಾವು ವಿದೇಶದಲ್ಲಿ ವಾಸಿಸಿದರು ಸಹ ವರ್ಷಕ್ಕೆ ಒಂದು ಬಾರಿ ಬಂದಾಗ ಈ ರೀತಿಯ ಮಾನವೀಯ ಸೇವೆಗಳಿಗೆ ಕೈಜೋಡಿಸುತ್ತೇವೆ ಹಾಗೆ ಸರಿಯಾದ ಫಲಾನುಭವಿಗಳನ್...

ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಯಿಂದ ಆರ್ಥಿಕ ಅಭಿವೃದ್ಧಿಗೆ ಅನುಕೂಲ

ಇಮೇಜ್
ಶಿವಮೊಗ್ಗ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣಾ ಕ್ರಮಗಳಿಂದ ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಹಾಯಕವಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.         ನಗರದ ಕಂಟ್ರಿ ಕ್ಲಬ್‌ನಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಶಿವಮೊಗ್ಗ-ಭದ್ರಾವತಿ ಕೈಗಾರಿಕಾ ಸಂಘ, ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ವತಿಯಿಂದ ಆಯೋಜಿಸಿದ್ದ ಬ್ಯಾಂಕಿಂಗ್ ಕ್ಷೇತ್ರದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.          ಆರ್ಥಿಕ ಸುಧಾರಣಾ ಯುಗದಲ್ಲಿ ಬ್ಯಾಂಕಿಂಗ್ ಕ್ಷೇತ್ರವು ಸಾಕಷ್ಟು ಬದಲಾವಣೆ ಕಂಡಿದೆ. ಸಾಂಪ್ರದಾಯಿಕ  ಬ್ಯಾಂಕಿಂಗ್‌ನಿಂದ ಬದಲಾಗಿ ತಾಂತ್ರಿಕ ಮೇಲ್ದರ್ಜೆಗೆ ಪರಿವರ್ತನೆಯಾಗಿದೆ. ಇಂದು ಬ್ಯಾಂಕಿಂಗ್ ವಲಯದಲ್ಲಿ ಸಾಲ ಪಡೆಯಲು ಬ್ಯಾಂಕ್‌ಗೆ ಹೋಗುವ ಅವಶ್ಯಕತೆ ಇಲ್ಲ. ನಮ್ಮ ಬ್ಯಾಂಕ್ ನಮ್ಮ ಬ್ಯಾಂಕಿಂಗ್ ಕಾನ್ಸೆಪ್ಟ್ ಪ್ರಾರಂಭವಾಗಿ ಕುಳಿತಲ್ಲೇ ಸಾಲ ಪಡೆಯಬಹುದು. ಠೇವಣಿ ಇಡಬಹುದು, ಎಲ್ಲಾ ರೀತಿಯ ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡಬಹುದು ಎಂದು ತಿಳಿಸಿದರು.        ಡಿ.ಜಿ.ಬೆನಕಪ್ಪ ಮಾತನಾಡಿ, ಡಿಜಿಟಲ್ ಮೊಬೈಲ್ ಬ್ಯಾಂಕಿಂಗ್ ಕ್ರಾಂತಿಕಾರ ಬ್ಯಾಂಕಿಂಗ್ ಸುಧಾರಣೆಯಾಗಿದೆ. ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಎಂದು ತಿಳಿಸಿದರು. ಬ್ಯಾಂಕಿಂಗ್ ಉತ್ಪನ್ನಗಳು, ಜಾಗತಿಕ ಮಾರುಕಟ್ಟೆ...

ಯೋಗಾಚಾರ್ಯ ಶ್ರೀ ಸಿ.ವಿ. ರುದ್ರಾರಾಧ್ಯರಿಗೆ ಗೌರವ ಡಾಕ್ಟರೇಟ್ ಮತ್ತು ವಿಶ್ವಯೋಗಿ ಪ್ರಶಸ್ತಿ ಪ್ರದಾನ

ಇಮೇಜ್
      ಡಾ. ಬಾಬು ರಾಜೇಂದ್ರ ಪ್ರಸಾದ್ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್, ಯುನಿವರ್ಸಿಟಿ ಆಫ್ ಅಗ್ರಿಕಲ್ಚರ್ ಸೈನ್ಸ್, ಬೆಂಗಳೂರು ಇಲ್ಲಿ ದಿನಾಂಕ  6 ಮತ್ತು, 7  2025 ರಂದು ನೆರವೇರಿದ ಗ್ಲೋಬಲ್ ಯೋಗಾ ಸಮಿಟ್ ಅಂತರಾಷ್ಟ್ರೀಯ ಯೋಗ ಸಮ್ಮೇಳನ ದಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರ, ಶಿವಮೊಗ್ಗ ದ ಕಾರ್ಯಾಧ್ಯಕ್ಷರಾದ ಯೋಗಾಚಾರ್ಯ ಶ್ರೀ ಸಿ.ವಿ. ರುದ್ರಾರಾಧ್ಯರು ಸುಮಾರು 50 ವರ್ಷಗಳಿಂದ ಯೋಗ ಕ್ಷೇತ್ರಕ್ಕೆ ಸಲ್ಲಿಸಿದ ಉಚಿತ ಸೇವೆಯನ್ನು ಗುರುತಿಸಿ ವಿಶ್ವಯೋಗಿ ಪ್ರಶಸ್ತಿಯನ್ನು  ನೀಡಲಾಯಿತು. ಮತ್ತು ಯೋಗ ಯುನಿವರ್ಸಿಟಿ ಆಫ್ ಅಮೆರಿಕಾಸ್ ನ ಆಡಳಿತ ಮಂಡಳಿ ಅವರು ಯೋಗಾಚಾರ್ಯರು ಜೀವಮಾನದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಘಟಿಕೋತ್ಸವದಲ್ಲಿ *ಗೌರವ ಡಾಕ್ಟರೇಟ್ ಪದವಿ* ಪ್ರಧಾನ ಮಾಡಿ ಗೌರವಿಸಲಾಯಿತು.        ಸಮಾರಂಭದಲ್ಲಿ ಯುನಿವರ್ಸಿಟಿ ಪರವಾಗಿ ಡಾ. ದೇವರಾಜ್ ಗುರೂಜಿ, ಡಾ. ನಾಗೇಶ್, ಸಾಧು-ಸಂತರು, ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಕೆ ಎಸ್ ಈಶ್ವರಪ್ಪ , ಕೆ ಇ ಕಾಂತೇಶ್ ಉಪಸ್ಥಿತರಿದ್ದರು.        ಈ ಸಂದರ್ಭದಲ್ಲಿ ಯೋಗ ಕೇಂದ್ರದ ಅಧ್ಯಕ್ಷರಾದ ಶ್ರೀ ಎಸ್ ರುದ್ರೆ ಗೌಡರು , ಖಜಾಂಚಿ ಹೊಸ ತೋಟ ಸೂರ್ಯನಾರಾಯಣ, ಕಾರ್ಯದರ್ಶಿ ಚಂದ್ರಶೇಖರಯ್ಯ  ಮತ್ತು ಟ್ರಸ್ಟ್ ಸದಸ್ಯರು  ಹಾಗೂ ಪೋಷಕ ಸಮಿತಿ ಸದಸ್ಯರಾದ ಡಾ ಧನಂಜಯ ಸರ್ಜಿ  , ಜಿ....

ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಅರಿವು ಮೂಡಿಸಿಕೊಳ್ಳಿ

ಇಮೇಜ್
      ಶಿವಮೊಗ್ಗ: ಜೀವ ರಕ್ಷಿಸುವ ಕೌಶಲ್ಯವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳುವುದು ಅತ್ಯಂತ ಅವಶ್ಯಕ ಎಂದು ದೈವಜ್ಞ ಮಹಿಳಾ ಮಂಡಳಿ ಶಿವಮೊಗ್ಗ ಅಧ್ಯಕ್ಷೆ ಸೀಮಾ ಸದಾನಂದ್ ಹೇಳಿದರು.       ದೈವಜ್ಞ ಕಲ್ಯಾಣ ಮಂದಿರದಲ್ಲಿ ದೈವಜ್ಞ ಮಹಿಳಾ ಮಂಡಳಿಯಿಂದ ಆಯೋಜಿಸಿದ್ದ “ಜೀವ ಸುರಕ್ಷತೆ” ತಿಳುವಳಿಕೆ ಕಾರ್ಯಕ್ರಮದ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬುದನ್ನು ಅರಿತುಕೊಳ್ಳಬೇಕು. ಹೃದಯ ಸಂಬಂಧಿತ ಕಾಯಿಲೆ ಎದುರಾದಾಗ ಮುಂಜಾಗ್ರತೆ ವಹಿಸಬೇಕು. ಪ್ರತಿಯೊಬ್ಬರೂ ಆರೋಗ್ಯದ ಅರಿವು ಹೊಂದಬೇಕು ಎಂದು ತಿಳಿಸಿದರು.          ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆ ಕಾರ್ಯದರ್ಶಿ ಡಾ. ಕೆ.ಎಸ್.ಶುಭ್ರತಾ, ಸಂಪನ್ಮೂಲ ವ್ಯಕ್ತಿ ಡಾ. ಶ್ವೇತಾ ಬಾದಾಮಿ ಅವರು ಹೃದಯ ಸ್ತಂಭನವಾದಾಗ ಹೇಗೆ ಜೀವ ರಕ್ಷಿಸಬಹುದು ಎಂಬ ವಿಷಯವನ್ನು ಸವಿಸ್ತಾರವಾಗಿ ತಿಳಿಸಿದರು.          ದೈವಜ್ಞ ಮಹಿಳಾ ಮಂಡಳಿ ಶಿವಮೊಗ್ಗ ಕಾರ್ಯದರ್ಶಿ ವಾಣಿ ಪ್ರವೀಣ್ ಮಾತನಾಡಿ, ಸಿಪಿಆರ್ ಅರಿವು ಕಾರ್ಯಕ್ರಮಗಳಿಂದ ಜನರಲ್ಲಿ ಆರೋಗ್ಯ ಜಾಗೃತಿ ಮೂಡುತ್ತದೆ. ಸಿಪಿಆರ್ ಪ್ರಕ್ರಿಯೆ ಕಲಿಯುವುದರಿಂದ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.          ದೈವಜ್ಞ ಮಹಿಳಾ ಮಂಡಳಿ ಶಿವಮೊಗ್ಗ ಉಪಾಧ್ಯಕ್ಷೆ ಪ್ರೇಮಾ ರಮೇಶ್, ...

ರಾಜ್ಯ ವಿಮಾ ನಿಗಮದ ಉಪ ಪ್ರಾದೇಶಿಕ ಕಚೇರಿ ತೆರೆಯುವಂತೆ ಮನವಿ

ಇಮೇಜ್
ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ನೌಕರರ ರಾಜ್ಯ ವಿಮಾ ನಿಗಮದ ಉಪ ಪ್ರಾದೇಶಿಕ ಕಚೇರಿಯ ಕರ್ನಾಟಕ ವಿಭಾಗ ತೆರೆಯುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಆಗ್ರಹಿಸಿದರು.          ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಇಎಸ್‌ಐಸಿ ಪ್ರಾದೇಶಿಕ ಕಚೇರಿ ಹುಬ್ಬಳ್ಳಿ ಸಂಯುಕ್ತ ಸಹಭಾಗಿತ್ವದಲ್ಲಿ ಸಂಘದ ಶಾಂತಲಾ ಸ್ಪೇರೋಕ್ಯಾಸ್ಟ್ ಸಭಾಂಗಣದಲ್ಲಿ “ಇಎಸ್‌ಐಸಿ ಎಸ್‌ಪಿಆರ್‌ಇಇ 2025 ಕಾರ್ಯಕ್ರಮ” ಯೋಜನೆ ಅಡಿಯಲ್ಲಿ ಆಯೋಜಿಸಿದ್ದ ಸಾಮಾಜಿಕ ಭದ್ರಾತಾ ಸೌಲಭ್ಯ ವಿಸ್ತರಣಾ ಅರಿವು ಕಾರ್ಯಾಗಾರದಲ್ಲಿ ಮಾತನಾಡಿದರು.        ಪ್ರಸ್ತುತ ನೌಕರರ ರಾಜ್ಯ ವಿಮಾನ ನಿಗಮದ ಹುಬ್ಬಳ್ಳಿ ಕೇಂದ್ರವು ಶಿವಮೊಗ್ಗ, ಭದ್ರಾವತಿ, ದಾವಣಗೆರೆ, ಚಿತ್ರದುರ್ಗ ಮತ್ತು ಹರಿಹರ ಕಚೇರಿ ಕೇಂದ್ರಗಳ ವ್ಯಾಪ್ತಿ ಹೊಂದಿದೆ. ಈ ವ್ಯಾಪ್ತಿ ಪ್ರದೇಶದಲ್ಲಿ 2,80,000  ನೋಂದಾಯಿತ ಕಾರ್ಮಿಕರು ಮತ್ತು 5670 ನೊಂದಾಯಿತ ಮಾಲೀಕರಿದ್ದಾರೆ. ಹುಬ್ಬಳ್ಳಿ ಕೇಂದ್ರವು ಮೇಲ್ಕಂಡ ವ್ಯಾಪ್ತಿ ಪ್ರದೇಶಗಳಿಂದ ಅತ್ಯಂತ ದೂರವಾಗಿದೆ ಎಂದು ತಿಳಿಸಿದರು.         ಕಾರ್ಮಿಕರಿಗೆ ಕೆಲಸ ಕಾರ್ಯಗಳಿಗೆ ಹುಬ್ಬಳ್ಳಿಗೆ ಭೇಟಿ ನೀಡಲು ತುಂಬಾ ಅನಾನುಕೂಲವಾಗಿದೆ. ಆದ್ದರಿಂದ ಶಿವಮೊಗ್ಗ ನಗರಕ್ಕೆ ಉಪ ಪ್ರಾದೇಶಿಕ ಕಚೇರಿ ಮಂಜೂರು ಮಾಡಬೇಕು. ನೌಕರರ ರಾಜ್ಯ ವಿಮಾ ನಿಗಮವು ರಾಗಿಗುಡ್...

ಕ್ರೀಡೆಯಿಂದ ದೈಹಿಕ ಸಾಮಾರ್ಥ್ಯ ವೃದ್ಧಿ

ಇಮೇಜ್
ಶಿವಮೊಗ್ಗ: ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಖಿನ್ನತೆ ದೂರವಾಗುವುದರ ಜೊತೆಗೆ ದೈಹಿಕ ಸಾಮರ್ಥ್ಯ ವೃದ್ಧಿ ಹಾಗೂ  ಉಲ್ಲಾಸ ಹೆಚ್ಚುತ್ತದೆ ಎಂದು ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್ ಹೇಳಿದರು.        ನಗರದ ಮೌಂಟ್ ಕಾರ್ಮೆಲ್ ಸ್ಕೂಲ್ ಕ್ರೀಡಾಂಗಣದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ  ಆಯೋಜಿಸಿದ್ದ ವಲಯ ಹನ್ನೊಂದರ ವಲಯ ಮಟ್ಟದ ರೋಟರಿ ಕ್ರೀಡೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.        ರೋಟರಿ ಸಂಸ್ಥೆ ಸ್ನೇಹ, ಪ್ರೀತಿ, ಸೇವೆಯ ಜೊತೆಗೆ ಸದಸ್ಯರಲ್ಲಿ ಪರಸ್ಪರ ಒಡನಾಟ ಹೆಚ್ಚಿಸುವುದಕ್ಕಾಗಿ ಇಂತಹ ಕ್ರೀಡೆಗಳನ್ನು ವಲಯ ಮಟ್ಟದಲ್ಲಿ ಆಯೋಜಿಸಲಾಗಿದೆ. ಇಲ್ಲಿ ವಿಜೇತರಾದವರಿಗೆ ಜಿಲ್ಲಾಮಟ್ಟದಲ್ಲಿ ಸ್ಪರ್ಧಿಸಲು ಅವಕಾಶ ಇರಲಿದೆ. ನಮ್ಮ ಜಿಲ್ಲೆಯಲ್ಲಿಯೂ ಸಹ ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಪಟುಗಳು ಇದ್ದಾರೆ. ಕ್ರೀಡಾಪಟುಗಳಿಗೆ ವಿಶೇಷವಾದ ಸ್ಥಾನಮಾನಗಳು ಇದೆ. ಪ್ರತಿಭೆಯನ್ನು ಅನಾವರಣ ಮಾಡಲು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.      ವಲಯ ಹನ್ನೊಂದರ ಸಹಾಯಕ ಗವರ್ನರ್ ಲಕ್ಷ್ಮಣ್ ಗೌಡ ಗೌಡ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯ ಅಲ್ಲ, ಭಾಗವಹಿಸಿಕೆ ಮುಖ್ಯ ಆಗುತ್ತದೆ. ಮಾನವೀಯ ಸಂಬಂಧಗಳನ್ನು ಬೆಸೆಯುತ್ತದೆ ಎಂದು ಹೇಳಿದರು.     ರೋಟರಿ ಜಿಲ್ಲಾ ಕ್ರೀಡಾ ಚೇರ್ಮನ್ ರವಿ ...

ಸಮಾಜ ಸೇವೆಯಿಂದ ಸಂತೃಪಿ: ಕೆ. ಈ. ಕಾಂತೇಶ್

ಇಮೇಜ್
         ರೋಟರಿ ಜ್ಯೂಬಿಲಿ ಸಂಸ್ಥೆಯು ಪಾರದರ್ಶಕವಾಗಿ ಸೇವೆಯಲ್ಲಿ ತೊಡಗಿಸಿಕೊಂಡಿ ದ್ದು  ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಒತ್ತು ನೀಡಿ ಗ್ರಾಮಾಂತರ ಶಾಲೆಗಳಿಗೆ ಅನೇಕ ಸೌಲಭ್ಯ ಒದಗಿಸುತ್ತಿರುವುದು ಶ್ಲಾಘನೀಯ ಎಂದು ರೋಟರಿ ಶಿವಮೊಗ್ಗ ಜ್ಯುಬಿಲಿ ಕ್ಲಬ್ ವಾರದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.                 ಪೋಲಿಯೊ ಲಸಿಕೆ ಅಭಿಯಾನದಿಂದ ಈ ಮಾರಕ ಕಾಯಿಲೆಯನ್ನು ಪ್ರಪಂಚದದಂತ್ಯ ನಿರ್ಮೂಲ ಮಾಡಿದ ಹೆಗ್ಗಳಿಕೆ ರೋಟರಿ ಸಂಸ್ಥೆಗೆ ಸಲ್ಲಬೇಕು. ಸ್ವಾಹಿತ ಮೀರಿದ ಸೇವೆಯಿಂದ ಇಂದು ವಿಶ್ವದಲ್ಲಿ ಶಾಂತಿ ನೆಲೆಸಲು ಶ್ರಮಿಸುತ್ತಿದೆ, ಎಂದು ತಿಳಿಸುತ್ತಾ ರೋಟರಿ ಮಿತ್ರರು ಒಂದು ಶಕ್ತಿ ಎಂದು ಅಬಿಪ್ರಾಯ ಪಟ್ಟರು.          ರೋಟರಿ ಜ್ಯುಬಿಲಿ ಕ್ಲಬ್ ಅಧ್ಯಕ್ಷ ರೊ ಬಿ.ಎಸ್.ಅಶ್ವಥ್ ರವರು ಮಾತನಾಡಿ ಶ್ರೀಗಂಧ ಸಂಸ್ಥೆಯನ್ನು ಸ್ಥಾಪಿಸಿ ಅನೇಕ ಧಾರ್ಮಿಕ ಮತ್ತು ಸಮಾಜಮುಖಿ ಕಾರ್ಯಗಳನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕೆ.ಇ.ಕಾಂತೇಶ್ ರವರು ಸಮಾಜ ಸೇವೆಗೆ ಮನ್ನಣೆಗೆ ಪಾತ್ರರಾಗಿದ್ದು ನಗರದ ಮನೆ ಮಾತಾಗಿದ್ದಾರೆ ಎಂದು ತಿಳಿಸುತ್ತಾ,  ಗೋಸಂರಕ್ಷಣೆ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು  ಗೋವರ್ಧನ ಟ್ರಸ್ಟ್ ಮೂಲಕ ಸಹಾಯ ಗೋಶಾಲೆಗಳಿಗೆ ಸಹಾಯ ನೀಡುವುದಲ್ಲದೆ ಜನರಲ್...

ಇನ್ನರ್‌ವ್ಹೀಲ್ ಪೂರ್ವದಿಂದ ಗರ್ಭಕಂಠ ಕ್ಯಾನ್ಸರ್ ಜಾಗೃತಿ

ಇಮೇಜ್
      ಶಿವಮೊಗ್ಗ: ಮಕ್ಕಳಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಜಾಗೃತಿ ಮೂಡಿಸುವ ಆಶಯದಿಂದ ಇನ್ನರ್‌ವ್ಹೀಲ್ ಕ್ಲಬ್ ಆಫ್ ಶಿವಮೊಗ್ಗ ಪೂರ್ವ ವತಿಯಿಂದ ಜ್ಞಾನದೀಪ ಶಾಲೆ, ಓಪನ್ ಮೈಂಡ್ ಶಾಲೆ ಮತ್ತು ಜೈನ್ ಪಬ್ಲಿಕ್ ಶಾಲೆಗಳಲ್ಲಿ ಎಚ್‌ಪಿವಿ ಲಸಿಕಾ ಶಿಬಿರ ನಡೆಸಲಾಯಿತು.        ಸರ್ಜಿ ಆಸ್ಪತ್ರೆಯ ಶಿಶುರೋಗ ತಜ್ಞ ಡಾ. ಪ್ರಸಾದ್, ಶಿಶುರೋಗ ತಜ್ಞೆ ಡಾ. ಶಮಿತಾ ಅವರು ಲಸಿಕೆಯ ಮಹತ್ವ ಹಾಗೂ ಗರ್ಭಕಂಠದ ಕ್ಯಾನ್ಸರ್ ತಡೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಿದರು. ಪ್ರತಿ ವರ್ಷ 1,20,000 ಮಹಿಳೆಯರು ಈ ರೋಗಕ್ಕೆ ಒಳಗಾಗುತ್ತಿದ್ದು, ಜಾಗೃತಿ ಮತ್ತು ಸರಿಯಾದ ಸಮಯದಲ್ಲಿ ಚಿಕಿತ್ಸೆ ಇಲ್ಲದೆ 85,000 ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಎಚ್‌ಪಿವಿ ಲಸಿಕೆ ಪಡೆಯುವುದರಿಂದ ಈ ಕ್ಯಾನ್ಸರ್ ಅನ್ನು ಬಹಳ ಮಟ್ಟಿಗೆ ತಡೆಗಟ್ಟಬಹುದು ಎಂದು ತಿಳಿಸಿದರು.          ಇನರ್‌ವೀಲ್ ಕ್ಲಬ್ ಈ ಜೀವ ರಕ್ಷಕ ಲಸಿಕೆಯನ್ನು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಬದ್ಧವಾಗಿದೆ. 9–14 ವರ್ಷದ ಮಕ್ಕಳಿಗೆ 2 ಡೋಸ್, 15–26 ವರ್ಷ ವಯಸ್ಸಿನವರಿಗೆ 3 ಡೋಸ್ ಹೆಣ್ಣುಮಕ್ಕಳು ಮತು ಗಂಡುಮಕ್ಕಳು ಲಸಿಕೆ ಪಡೆಯಬೇಕು. ಎಚ್‌ಪಿವಿ ವೈರಸ್ ಹರಡುವಿಕೆ ಸಾಮಾನ್ಯವಾಗಿ ಪುರುಷರಿಂದ ಆಗುತ್ತದೆ. ಶೇ. 32 ಪುರುಷರು ಮತ್ತು ಶೇ. 12 ಮಹಿಳೆಯರು ಎಚ್‌ಪಿವಿ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ...

ರಕ್ತದಾನ ಅತ್ಯಂತ ಶ್ರೇಷ್ಠದಾನ. ರಕ್ತದಾನಿಗಳನ್ನ ಗುರುತಿಸಿ ಗೌರವಿಸುವುದು ಸಂಘ ಸಂಸ್ಥೆಗಳ ಆದ್ಯ ಕರ್ತವ್ಯ : ಜಿ ವಿಜಯಕುಮಾರ್

ಇಮೇಜ್
      ಎಲ್ಲಾ ದಾನಗಳಿಗಿಂತ ರಕ್ತದಾನ ಅತ್ಯಂತ ಶ್ರೇಷ್ಠದಾನ ಇಂದು ಸಾಕಷ್ಟು ರಕ್ತದ ಕೊರತೆ ಇರುವುದರಿಂದ ಯುವಕರು ರಕ್ತದಾನ ಮಾಡಲು ಮುಂದಾಗಬೇಕು ರಕ್ತದಾನ ಮಾಡುವುದರಿಂದ ಸದೃಢವಾದ ಆರೋಗ್ಯದ ಜೊತೆಗೆ ಹೃದಯಾಘಾತದ ಪ್ರಮಾಣ ಕಡಿಮೆಯಾಗುತ್ತದೆ ಅಲ್ಲದೆ ಸದಾ ಲವಲವಿಕೆಯಿಂದ ಆರೋಗ್ಯವಂತರಾಗಿ ಬದುಕುತ್ತೇವೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್ ನುಡಿದರು        ಅವರು ಇಂದು ಬೆಳಿಗ್ಗೆ ಬೊಮ್ಮನಕಟ್ಟೆಯ ಇನ್ನೋವೇಟಿವ್ ಕಿಡ್ಡೋಸ್ ಪ್ರಿ ಸ್ಕೂಲ್ ವತಿಯಿಂದ ಆವರಣದಲ್ಲಿ ಹಮ್ಮಿಕೊಳ್ಳಲಾದ ಸ್ವಯಂ ಪ್ರೇರಿತ ರಕ್ತದಾನ ಚಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು ಇಂದು ಸಕಾಲದಲ್ಲಿ ರಕ್ತ ಸಿಗದೇ ಸಾಕಷ್ಟು ಜನ ತಮ್ಮ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಯುವಕರು ಮೂಢನಂಬಿಕೆಯಿಂದ ಹೊರಬಂದು ರಕ್ತದಾನ ಮಾಡುವುದರ ಮುಖಾಂತರ ಸಮಾಜದಲ್ಲಿ ಪವಿತ್ರವಾದ ದಾನಿಗಳಾಗಬೇಕೆಂದು ಕರೆ ನೀಡಿದರು ಇದೇ ಸಂದರ್ಭದಲ್ಲಿ 108 ಬಾರಿ ರಕ್ತದಾನ ಮಾಡಿದ ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆಯ ನಿರ್ದೇಶಕರಾದ ಶ್ರೀಯುತ ಮಧುಸೂದನ್ ಜೆಕೆ ಯವರಿಗೆ ಇನ್ನೋವೇಟಿವ್ ಕಿಡ್ಡೋಸ್ ಪ್ರೀ ಸ್ಕೂಲ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿ ಗೌರವಿಸಲಾಯಿತು ಸನ್ಮಾನವನ್ನು ಸ್ವೀಕರಿಸಿದ ರಕ್ತದಾನಿ ಮಧುಸೂದನ್ ಅವರು ಮಾತನಾಡುತ್ತಾ ಸಮಾಜದಲ್ಲಿ ನಿಜವಾದ ದಾನಿಗಳು ರಕ್ತದಾನಿಗಳು ರ...

ಶಿವಮೊಗ್ಗದಲ್ಲಿ ಮಾನವ ಬಂಧುತ್ವ ವೇದಿಕೆಯ ವತಿಯಿಂದ ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಣೆ

ಇಮೇಜ್
        ಶಿವಮೊಗ್ಗ: ನಗರದಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ಸರ್ವೋದಯ ವ್ಯಸನ ಮುಕ್ತ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನವನ್ನು ಶ್ರದ್ಧಾ ಪೂರ್ವಕವಾಗಿ ಆಚರಿಸಲಾಯಿತು.        ಸರ್ವೋದಯ ವ್ಯಸನ ಮುಕ್ತ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನವ ಬಂಧುತ್ವ ವೇದಿಕೆಯ ಸಂಚಾಲಕರಾದ ನವೀನ್ ತಲಾರಿ ಅಧ್ಯಕ್ಷತೆ ವಹಿಸಿದರು. ಕೇಂದ್ರದ ಮುಖ್ಯಸ್ಥ ಪ್ರಶಾಂತ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಆರಂಭಗೊಂಡು ಸುಮಾರು 50ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.          ಕಾರ್ಯಕ್ರಮದಲ್ಲಿ ಮಾತನಾಡಿದ ನವೀನ್ ತಲಾರಿಯವರು, “ಅಂಬೇಡ್ಕರ್ ಅವರು ಕಡಿದ ಹಾದಿ, ಅವರು ಕಟ್ಟಿಕೊಟ್ಟ ಸಂವಿಧಾನ ಹಾಗೂ ಸಮಾನತೆಯ ತತ್ವಗಳು ಇಂದಿಗೂ ಸಮಾಜಕ್ಕೆ ದಾರಿ ದೀಪವಾಗಿವೆ,” ಎಂದು ತಿಳಿಸಿದರು. ಅವರು ಅಂಬೇಡ್ಕರ್ ಬೋಧನೆಗಳ ಅಗತ್ಯತೆಯನ್ನು ಯುವ ಪೀಳಿಗೆಗೆ ತಿಳಿಸುವುದು ಕಾಲದ ಅವಶ್ಯಕತೆ ಎಂದೂ ಹೇಳಿದರು.       ಮುಖ್ಯ ಅತಿಥಿಯಾಗಿ ಮಾತನಾಡಿದ ಪ್ರಶಾಂತ್ ಅವರು, “ಅಂಬೇಡ್ಕರ್ ಅವರ ಜೀವನ ಚರಿತ್ರೆ, ಅವರ ತ್ಯಾಗ, ಜ್ಞಾನಪಿಪಾಸೆ ಮತ್ತು ಸಮಾಜ ಪರಿವರ್ತನೆಯ ದೃಷ್ಟಿಕೋನ ಪ್ರತಿಯೊಬ್ಬರಿಗೂ ಪ್ರೇರಣಾದಾಯಕ,” ಎಂದರು.       ಈ ಸಂದರ್ಭದಲ್ಲಿ ಸರ್ವೋದಯ ವ್ಯಸನ ಮುಕ್ತ ಕೇಂದ್ರದ ಸಿಬ್ಬಂದಿ, ಮಾನವ ಬಂಧುತ್ವ ವೇದಿಕೆಯ ಪದಾಧ...

ಇನ್ನರ್‌ವ್ಹೀಲ್ ಕ್ಲಬ್‌ಗಳಿಂದ ಜಾಗೃತಿ ವಾಕಥಾನ್

ಇಮೇಜ್
  ಶಿವಮೊಗ್ಗ: ಮಹಿಳೆಯರ ಮೇಲಿನ ಹಿಂಸಾಚಾರದ ವಿರುದ್ಧ ಶಿವಮೊಗ್ಗ ನಗರದ ಐದು ಇನ್ನರ್‌ವ್ಹೀಲ್ ಕ್ಲಬ್‌ಗಳಿಂದ ಸ್ಟೆಪ್ ಅಪ್ ಮತ್ತು ಸ್ಪೀಕ್ ಔಟ್ ವಿಷಯದಡಿ “ಯುನೈಟ್ ಆಂಡ್ ಆರೇಂಜ್ ದಿ ವರ್ಲ್ಡ್” ಸಾರ್ವಜನಿಕ ಜಾಗೃತಿ ರ‍್ಯಾಲಿ ವಾಕಥಾನ್ ಆಯೋಜಿಸಲಾಗಿತ್ತು.       ಮಹಿಳೆಯರ ಮೇಲಿನ ಹಿಂಸಾಚಾರದ ವಿರುದ್ಧ ಧ್ವನಿ ಎತ್ತಲು, ಸಮಾಜದ ಕಲ್ಯಾಣ ಕಾಪಾಡಲು ಮತ್ತು ಮಹಿಳೆಯರು ಗೌರವಯುತ ಜೀವನ ನಡೆಸುವಂತೆ ರಕ್ಷಣೆಯನ್ನು ಖಚಿತಪಡಿಸಲು ಉಪ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.        ಮಹಿಳೆ ಒಂಟಿಯಾಗಿ ಓಡಾಡದ ಪರಿಸ್ಥಿತಿ ಇದೆ. ದರೋಡೆ, ಆತ್ಯಾಚಾರಗಳು ಹೆಚ್ಚಾಗುತ್ತಿವೆ. ಇದಕ್ಕೆ ಪರಿಹಾರವಾಗಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮಹಿಳೆಯರಿಗೆ ಸೂಕ್ತ ರೀತಿ ಭದ್ರತೆ ನೀಡುವಂತೆ ಮನವಿ ಮೂಲಕ ಆಗ್ರಹಿಸಲಾಯಿತು.         ವಾಕಥಾನ್ ನಗರದ ಸಹ್ಯಾದ್ರಿ ಶಾಲೆಯಿಂದ ಆರಂಭಗೊಂಡು ಜಾಗೃತಿ ಸಂದೇಶದ ಘೋಷಣೆಗಳನ್ನು ಸಾರಲಾಯಿತು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಾಕಥಾನ್ ಸಮಾರೋಪಗೊಂಡಿತು. ಮಹಿಳೆಯರ ಮೇಲಿನ ಹಿಂಸಾಚಾರ ತಡೆಗಟ್ಟುವ ಅಗತ್ಯ ಹೇಳುವ ಬೀದಿನಾಟಕವನ್ನು ಬಿಎಸ್‌ಎಸ್ ಸರ್ಜಿ ನರ್ಸಿಂಗ್ ವಿದ್ಯಾರ್ಥಿಗಳು ಪ್ರದರ್ಶಿಸಿದರು.        ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್, ಪಿಡಿಸಿ ವಾರಿಜಾ ಜಗದೀಶ್, ಭಾರತಿ ಚಂದ್ರಶೇಖರ್, ಇನ್ನರ...