ಪೋಸ್ಟ್‌ಗಳು

ಭಾವಪೂರ್ಣ ಶ್ರದ್ಧಾಂಜಲಿ

ಇಮೇಜ್
             ಎಂ. ಕೆ. ಸುರೇಶ್ ಕುಮಾರ್ (ಚಾಲುಕ್ಯ ಸೂರಿ)  ಶಿವಮೊಗ್ಗ ಸಿಟಿ ಕೋ-ಆಪರೇಟಿವ್ ಬ್ಯಾಂಕ್‌ನ ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕರು, ಮಾಜಿ ನಗರಸಭಾ ಅಧ್ಯಕ್ಷರು, ಕೋಟೆ ಮಾರಿಕಾಂಬ ದೇವಸ್ಥಾನ ಸಮಿತಿಯ ಉಪಾಧ್ಯಕ್ಷರು, ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ಸಮಿತಿಯ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಎಂ. ಕೆ. ಸುರೇಶ್ ಕುಮಾರ್ (ಚಾಲುಕ್ಯ ಸೂರಿ) ಅವರು ಇಂದು ದೈವಾಧೀನರಾದ ಸುದ್ದಿ ಅತ್ಯಂತ ದುಃಖವನ್ನುಂಟು ಮಾಡಿದೆ. ಸಾರ್ವಜನಿಕ ಜೀವನದಲ್ಲಿ ತಮ್ಮ ಸೇವೆ, ಸಾಮಾಜಿಕ ಕಳಕಳಿ ಹಾಗೂ ನಾಯಕತ್ವದ ಮೂಲಕ ಅವರು ಸಮಾಜಕ್ಕೆ ನೀಡಿದ ಕೊಡುಗೆ ಸದಾ ಸ್ಮರಣೀಯವಾಗಿರುತ್ತದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರು, ಬಂಧು-ಬಳಗ ಹಾಗೂ ಅಪಾರ ಸ್ನೇಹಿತರಿಗೆ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ. ಓಂ ಶಾಂತಿ.

ರನ್ ಮಲೆನಾಡು–2026: ಆರೋಗ್ಯ, ಪರಿಸರ ಮತ್ತು ಸಮಾಜಮುಖಿ ಚಿಂತನೆಗೆ ಹೆಜ್ಜೆ ಹಾಕುವ ಓಟ

ಇಮೇಜ್
  ಶಿವಮೊಗ್ಗ, ಜುಲೈ 5: ಯುವಕರಲ್ಲಿ ಆರೋಗ್ಯಕರ ಜೀವನಶೈಲಿ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವ ಉದ್ದೇಶದಿಂದ ಡಾ. ಶರತ್ ಮರಿಯಪ್ಪ ಫೌಂಡೇಶನ್ ವತಿಯಿಂದ "ರನ್ ಮಲೆನಾಡು–2026" ಕಾರ್ಯಕ್ರಮವನ್ನು ಜುಲೈ 5ರಂದು ಬೆಳಿಗ್ಗೆ 6 ಗಂಟೆಗೆ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ 3 ಕಿ.ಮೀ., 5 ಕಿ.ಮೀ., 10 ಕಿ.ಮೀ. ಹಾಗೂ 20 ಕಿ.ಮೀ. ವಿಭಾಗಗಳಲ್ಲಿ ಓಟ ನಡೆಯಲಿದ್ದು, ವಿವಿಧ ವಯೋಮಾನದ ಸ್ಪರ್ಧಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ವಿಜೇತರಿಗೆ ನಗದು ಬಹುಮಾನ, ಪದಕ ಹಾಗೂ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಕಾರ್ಯಕ್ರಮದ ಧ್ಯೇಯವಾಕ್ಯ "ಪ್ರಕೃತಿಗಾಗಿ ಓಟ – ಆರೋಗ್ಯಕ್ಕಾಗಿ ಓಟ – ಉತ್ತಮ ನಾಳೆಗಾಗಿ ಓಟ" ಎಂಬುದಾಗಿದ್ದು, ಆರೋಗ್ಯಕರ ಸಮಾಜ ನಿರ್ಮಾಣದ ಜೊತೆಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ವೈಯಕ್ತಿಕ ಓಟದ ಜೊತೆಗೆ ದಂಪತಿ ಓಟ ಹಾಗೂ ಹೋಮ್‌ಮೇಕರ್ಸ್‌ ಓಟಕ್ಕೂ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಎಲ್ಲ ವಿಭಾಗದ ನಾಗರಿಕರು ಭಾಗವಹಿಸಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ. ನೋಂದಣಿ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯುತ್ತಿದ್ದು, ಪೋಸ್ಟರ್‌ನಲ್ಲಿರುವ QR ಕೋಡ್ ಸ್ಕ್ಯಾನ್ ಮಾಡಿ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ 89713 97714, 88923 25558, 86604 61910 ಸಂಖ್ಯೆಯನ್ನು ಸಂಪರ್ಕ...

40 ವರ್ಷ ಮೇಲ್ಪಟ್ಟ JCI ಸದಸ್ಯರಿಗೆ JAC ಸೇರ್ಪಡೆ ಕಡ್ಡಾಯ; ತಪ್ಪು ಮಾಹಿತಿಯಿಂದ ಸದಸ್ಯರಲ್ಲಿ ಗೊಂದಲ – ಅಧಿಕೃತ ಸುತ್ತೋಲೆ ಸ್ಪಷ್ಟನೆ

ಇಮೇಜ್
  ಶಿವಮೊಗ್ಗ: 40 ವರ್ಷ ವಯಸ್ಸು ಪೂರ್ಣಗೊಳಿಸಿರುವ JCI India ಸಕ್ರಿಯ ಸದಸ್ಯರು (Active Members) ಕಡ್ಡಾಯವಾಗಿ JCI Alumni Club India (JAC) ಗೆ ಸದಸ್ಯತ್ವ ವರ್ಗಾವಣೆ ಮಾಡಿಕೊಳ್ಳಬೇಕು ಎಂದು JCI India ಕಾರ್ಯದರ್ಶಿ ಜನರಲ್ ಬೆನೆಡಿಕ್ಟ್ ಕೆ.ಎಂ. ಹೊರಡಿಸಿರುವ ಅಧಿಕೃತ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲ ಸ್ಥಳೀಯ ಘಟಕಗಳಿಗೆ (Local Organizations) ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. JCI India ನಿಯಮಾವಳಿಗಳ ಪ್ರಕಾರ, ಸಕ್ರಿಯ ಸದಸ್ಯತ್ವದ ಗರಿಷ್ಠ ವಯೋಮಿತಿ 40 ವರ್ಷವಾಗಿದೆ. ಈ ವಯಸ್ಸು ಮೀರಿದ ಸದಸ್ಯರು Active Membership ಮುಂದುವರಿಸಲು ಅವಕಾಶವಿಲ್ಲ. ಆದ್ದರಿಂದ 40 ವರ್ಷ ಮೀರಿರುವ ಸದಸ್ಯರನ್ನು ಅಗತ್ಯ ಶುಲ್ಕ ಹಾಗೂ ನಿಗದಿತ ಪ್ರಕ್ರಿಯೆಯ ಮೂಲಕ JCI Alumni Club India (JAC)ಗೆ ವರ್ಗಾವಣೆ ಮಾಡಬೇಕಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಕೆಲವು ಸ್ಥಳೀಯ ಘಟಕಗಳಲ್ಲಿ ಈ ನಿಯಮದ ಕುರಿತು ಸದಸ್ಯರಿಗೆ ಸಂಪೂರ್ಣ ಮಾಹಿತಿ ತಲುಪದಿರುವುದು ಹಾಗೂ ವಿವಿಧ ರೀತಿಯ ತಪ್ಪು ಮಾಹಿತಿ ಹರಿದಾಡುತ್ತಿರುವ ಕಾರಣ ಅನೇಕ 40 ವರ್ಷ ಮೇಲ್ಪಟ್ಟ ಸದಸ್ಯರಲ್ಲಿ ಗೊಂದಲ ಉಂಟಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕೆಲವು ಸದಸ್ಯರು Active Membership ಮುಂದುವರಿಸಬಹುದು ಎಂಬ ನಂಬಿಕೆಯಲ್ಲಿ ಇದ್ದರೆ, ಇನ್ನೂ ಕೆಲವರಿಗೆ JAC ಸದಸ್ಯತ್ವದ ಪ್ರಯೋಜನಗಳ ಬಗ್ಗ...

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಇಮೇಜ್
ಶಿವಮೊಗ್ಗ, ಜುಲೈ 2: ಅಜ್ಜಿ ಹತ್ಯೆ ಪ್ರಕರಣದ ಆರೋಪಿಯನ್ನು ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಗೆ ಪೊಲೀಸರು ಗುಂಡು ಹಾರಿಸಿ ವಶಕ್ಕೆ ಪಡೆದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯ ಗುನ್ನೆ ಸಂಖ್ಯೆ 236/2026ರಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 103(1) ಅಡಿಯಲ್ಲಿ ದಾಖಲಾಗಿರುವ ಪ್ರಕರಣದ ಆರೋಪಿ **ಕಿಶೋರ್ (26)**ನನ್ನು ಬಂಧಿಸಲು ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಾಜಪೇಯಿ ಬಡಾವಣೆಗೆ ತೆರಳಿದ್ದರು. ಈ ವೇಳೆ ಆರೋಪಿ ಕಿಶೋರ್‌ಗೆ ಶರಣಾಗುವಂತೆ ಪೊಲೀಸರು ಎಚ್ಚರಿಕೆ ನೀಡಿದರು. ಆದರೆ ಆತ ತನ್ನ ಬಳಿಯಿದ್ದ ಚಾಕುವಿನಿಂದ ಪೊಲೀಸ್ ಸಿಬ್ಬಂದಿ ಗಣೇಶ್ (CPC-1070) ಅವರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದನೆಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಹಾಗೂ ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ ದೊಡ್ಡಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಮೊದಲು ಒಂದು ಸುತ್ತು ಗುಂಡನ್ನು ಗಾಳಿಯಲ್ಲಿ ಹಾರಿಸಿ ಎಚ್ಚರಿಕೆ ನೀಡಿದರು. ಆದರೂ ಆರೋಪಿ ಶರಣಾಗದ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತು ಗುಂಡನ್ನು ಆರೋಪಿಯ ಎಡ ಕಾಲಿಗೆ ಹಾರಿಸಿ ವಶಕ್ಕೆ ಪಡೆದರು. ಬಳಿಕ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಲಾಗಿದ್ದು, ಗಾಯಗೊಂಡ ಪೊಲೀಸ್ ಸಿಬ್ಬಂದಿ ಗಣೇಶ್ ಹಾಗೂ ಆರೋಪಿ ಕಿಶೋರ್ ಅವರನ್ನು ಇಲಾಖೆಯ ವ...

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಇಮೇಜ್
ಫೋಟೋ ಕ್ರೆಡಿಟ್ : AI ಆಪ್  ಶಿವಮೊಗ್ಗ, ಜುಲೈ 1: ನಗರದ ಮಿಳಘಟ್ಟ ವಾರ್ಡಿನ ಆನಂದರಾವ್ ಬಡಾವಣೆಯಲ್ಲಿ ಬುಧವಾರ ಸಂಜೆ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಗಾಂಜಾ ಚಾಳಿಯ ವಿರುದ್ಧ ಪೊಲೀಸರಿಗೆ ದೂರು ನೀಡಲು ತೆರಳುತ್ತಿದ್ದ ವೃದ್ಧೆಯನ್ನು ಆಕೆಯ ಮೊಮ್ಮಗನೇ ಸೈಜುಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಆನಂದರಾವ್ ಬಡಾವಣೆಯ ತಖ್ವಾ ಮಸೀದಿ ಸಮೀಪದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮೃತ ವೃದ್ಧೆಯು ತನ್ನ ಮೊಮ್ಮಗ ಕಿಶೋರ್‌ನ ಗಾಂಜಾ ವ್ಯಸನ ಮತ್ತು ಚಟುವಟಿಕೆಗಳ ಬಗ್ಗೆ ಹಲವು ಬಾರಿ ಪೊಲೀಸರಿಗೆ ದೂರು ನೀಡುತ್ತಿದ್ದರೆಂದು ಸ್ಥಳೀಯರು ತಿಳಿಸಿದ್ದಾರೆ. ಬುಧವಾರ ಸಂಜೆ ಸಹ ದೂರು ನೀಡಲು ಹೊರಟಿದ್ದ ವೇಳೆ, ಕಿಶೋರ್ ಅಜ್ಜಿಯೊಂದಿಗೆ ವಾಗ್ವಾದ ನಡೆಸಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹಲ್ಲೆಯಿಂದ ವೃದ್ಧೆ ಕೆಳಗೆ ಬಿದ್ದ ಬಳಿಕ, ಆಕೆಯ ತಲೆಯ ಮೇಲೆ ಸೈಜುಕಲ್ಲು ಎತ್ತಿಹಾಕಿ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆಯೇ ಎಂಬ ಬಗ್ಗೆ ಅಧಿಕೃತ ಮಾಹಿತಿ ನಿರೀಕ್ಷೆಯಲ್ಲಿದೆ. ಮುಖ್ಯವಾಗಿ , ಮಿಳಘಟ್ಟ ಪ್ರದೇಶದಲ್ಲಿ ಗಾಂಜಾ ಮಾರಾಟ ಮತ್ತು ವ್ಯಸನ ಹೆಚ್ಚುತ್ತಿರುವ ಬಗ್ಗೆ ಈ ಹಿಂದೆಯೇ ಸ್ಥಳೀಯರು ಪೊಲೀಸ್ ಇಲಾಖೆಗೆ ಹಲವು ಬಾರಿ...

ರಕ್ತದಾನ ಜೀವದಾನ; ಆರೋಗ್ಯವಂತರು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿ – ಡಾ. ಪೃಥ್ವಿ

ಇಮೇಜ್
  ಶಿವಮೊಗ್ಗ, ಜೂನ್ 30: ಆರೋಗ್ಯವಾಗಿರುವ ಪ್ರತಿಯೊಬ್ಬರೂ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದು ಮೆಟ್ರೋ ಆಸ್ಪತ್ರೆಯ ತಜ್ಞ ವೈದ್ಯ ಡಾ. ಪೃಥ್ವಿ ಹೇಳಿದರು. ನಗರದ ಹೋಟೆಲ್ ಶುಭಂ ಆವರಣದಲ್ಲಿ ಜೆಸಿಐ ಶಿವಮೊಗ್ಗ ವಿವೇಕ್ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಕ್ತದಾನವು ಜೀವದಾನದ ಸಮಾನವಾಗಿದೆ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಒಬ್ಬ ದಾನಿ ನೀಡುವ ಒಂದು ಯೂನಿಟ್ ರಕ್ತವು ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ ಸೇರಿದಂತೆ ಹಲವು ತುರ್ತು ಪರಿಸ್ಥಿತಿಗಳಲ್ಲಿ ಅಮೂಲ್ಯವಾದ ಜೀವಗಳನ್ನು ಉಳಿಸಲು ನೆರವಾಗುತ್ತದೆ ಎಂದು ತಿಳಿಸಿದರು. ಇಂದು ರಕ್ತದಾನ ಮಾಡುತ್ತಿರುವ ಪ್ರತಿಯೊಬ್ಬ ದಾನಿಯೂ ಸಮಾಜಕ್ಕೆ ಮಾದರಿಯಾಗಿದ್ದು, ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಚಳವಳಿಯಲ್ಲಿ ಪಾಲ್ಗೊಳ್ಳಬೇಕು. ರಕ್ತದಾನಿಗಳ ನಿಸ್ವಾರ್ಥ ಸೇವೆ ಅತ್ಯಂತ ಶ್ಲಾಘನೀಯವಾಗಿದ್ದು, ಆರೋಗ್ಯವಂತರಾದ ಎಲ್ಲರೂ ನಿಯಮಿತವಾಗಿ ರಕ್ತದಾನ ಮಾಡುವ ಸಂಕಲ್ಪ ಮಾಡಬೇಕು. ನಮ್ಮ ಒಂದು ಸಣ್ಣ ಸೇವೆ ಮತ್ತೊಬ್ಬರ ಬದುಕಿಗೆ ದೊಡ್ಡ ಆಶಾಕಿರಣವಾಗಬಹುದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಶಿವಮೊಗ್ಗ ವಿವೇಕ್ ಅಧ್ಯಕ್ಷೆ ವಿಜಯಲಕ್ಷ್ಮಿ ವಹಿಸಿದ್ದರು. ಈ ಸಂದರ್ಭದಲ್ಲಿ ವಲಯ–24ರ ಜೆಡ್‌ವಿಪಿ ಜೆಸಿಐ ಸೆನೆಟರ್ ಗಣೇಶ್ ಪೈ, ಜೆಎಸಿ ಜೆವಿಸಿ ಉದಯ್ ಕಡಂಬ, ಜೆಸಿಐ ನೀಡ್ ಬ್ಲಡ್ ಕಾಲ್ ಕೋ-ಆರ್ಡಿನೇಟರ...