ದೇಶವನ್ನು ಮುನ್ನಡೆಸುವಂತಹ ನಾಯಕತ್ವ ಸಿಕ್ಕಿರುವುದು ನಮ್ಮ ಸೌಭಾಗ್ಯ

 


ಶಿವಮೊಗ್ಗ : ದೇಶಕ್ಕೆ ಒಳ್ಳೆಯ ಲೀಡರ್ ಶಿಫ್ ಸಿಕ್ಕಿದೆ ಎಂದು ಎಫ್ ಐಸಿಸಿಐನ ಕರ್ನಾಟಕ ಸ್ಟೇಟ್ ಕೌನ್ಸಿಲ್‌ನ ಮೆಂಟರ್ ಹಾಗೂ ಯುಕೆ ಅಂಡ್ ಕೋನ ಫೌಂಡರ್ ಉಲ್ಲಾಸ್ ಕಾಮತ್ ಹೇಳಿದರು.

ನಗರದ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಶಾಂತಲಾ ಆಟೋ ಮೇಷನ್ ಪ್ರೈವೆಟ್ ಲಿಮಿಟೆಡ್ ವತಿಯಿಂದ ಹೆಚ್ಚುವರಿಯಾಗಿ ಅಳವಡಿಸಿರುವ ಸೆಲ್ಫ್ ರಿಲಯಂಟ್ ಬ್ಲಾಕ್‌ನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ ಚೆನ್ನಾಗಿದ್ದರೆ ಪ್ರಜೆಗಳು ಚೆನ್ನಾಗಿರುತ್ತಾರೆ ಎಂದರು.

ದೇಶವನ್ನು ಮುನ್ನಡೆಸುವಂತಹ ನಾಯಕತ್ವ ಸಿಕ್ಕಿರುವುದು ನಮ್ಮ ಸೌಭಾಗ್ಯ. ಉದ್ಯಮಿಗಳಿಗೆ ಈ ಹಿಂದೆ ೫ರಿಂದ ೧೦ವರ್ಷಗಳ ಟಾರ್ಗೆಟ್‌ನ್ನು ನೀಡಲಾಗುತ್ತಿತ್ತು. ಈಗ ೨೦೪೭ರ ವಿಕಸಿತ ಭಾರತ ಹೇಗಿರುಬೇಕೆಂಬ ಗುರಿಯೊಂದಿಗೆ ಮುನ್ನಡೆ ಯಲಾಗುತ್ತಿದೆ. ೨೦೩೨ ಕರ್ನಾಟಕ ಟ್ರಿಲಿಯನ್ ಡಾಲರ್ ಎಕಾನಮಿ ಆಗಲಿದೆ ಎಂದು ಹೇಳಿದರು.

ಐಟಿ ಇಂಡಸ್ಟ್ರೀ ಹಾಗೂ ಎಐಗಳು ಪ್ರವಾಹದ ರೂಪದಲ್ಲಿ ಬರುತ್ತಿಲ್ಲ. ಸುನಾಮಿಯ ರೂಪದಲ್ಲಿ ಹಾದು ಹೋಗುತ್ತಿದೆ. ಇದರೊಂದಿಗೆ ಏನೆಲ್ಲಾ ಹೋಗುತ್ತವೆ ಎಂಬುದು ಗೊತ್ತಿಲ್ಲ. ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಪ್ರತಿವರ್ಷ ೨೧ ಲಕ್ಷ ಪದವೀಧರರು ಹೊರಗೆ ಬರುತ್ತಿದ್ದಾರೆ. ಅವರಿಗೆ ಉದ್ಯೋಗ ಮಾರುಕಟ್ಟೆ ಕಲ್ಪಿಸಲು ತಯಾರಿಕಾ ವಲಯವೇ ಆಧಾರ ಸ್ಥಂಭವಾಗಲಿದೆ ಎಂದು ಹೇಳಿದರು.

೪೦ ವರ್ಷಗಳ ಕಾಲ ರುದ್ರೇ ಗೌಡರು ಕೈಗಾರಿಕಾ ಕ್ಷೇತ್ರದಲ್ಲಿ ಸವೆಸಿದ ಹಾದಿಯನ್ನು ಸ್ಮರಿಸಿದ ಅವರು, ಉದ್ಯೋಗದಾತ ಆಗಿ ಯಶಸ್ವಿಯಾಗಿ ರುವುದು ಬಹಳ ವಿರಳ. ಆದರೆ ಅದಕ್ಕೆ ಅಪವಾದ ಎಂಬಂತೆ ರುದ್ರೇಗೌಡರು ವಿಭಿನ್ನ ಸಂಸ್ಥೆಗಳನ್ನು ಸ್ಥಾಪಿಸಿ ಸಾವಿರಾರು ಮಂದಿಗೆ ಉದ್ಯೋಗದಾತ ಆಗಿರುವುದು ಶ್ಲಾಘನೀಯ ಎಂದರು.

ಮಕಿನೋ ಇಂಡಿಯಾ ಸಂಸ್ಥೆಯ ಅಧ್ಯಕ್ಷ ರಾಘವ ಬಾಂಡ್ಯ ಮಾತ ನಾಡಿ, ತಯಾರಿಕಾ ವಲಯದಲ್ಲಿ ಚೀನಾ ದೊಂದಿಗಿನ ಸ್ಪರ್ಧೆ ಹಾಗೂ ಉದ್ಯಮ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ದಿ ಯ ಅಗತ್ಯತೆಯ ಬಗ್ಗೆ ಒತ್ತಿ ಹೇಳಿದರು.

ಸಮಾರಂಭದಲ್ಲಿ ಮಾಜಿ ಶಾಸಕ ಹಾಗೂ ಕೈಗಾರಿಕೋದ್ಯಮಿ ಎಸ್.ರುದ್ರೇ ಗೌಡ, ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಡಿಜಿಎಂ ಆರ್. ದೇವ ರಾಜ್, ಕೈಗಾರಿಕೋದ್ಯಮಿಗಳಾದ  ಡಿ.ಎಸ್.ಚಂದ್ರಶೇಖರ್, ಚಂದ್ರಶೇಖರ್, ಬಿಎಫ್ ಡಬ್ಲೂನ ವ್ಯವಸ್ಥಾಪಕ ನಿರ್ದೇಶಕ ರವಿ ರಾಘವನ್, ಬೆಳಗಾಂನ ಆರ್‌ಎಫ್‌ಸಿ ಟೆಕ್ನಾಲಜಿಸ್‌ನ ಎಂ.ಡಿ. ಮಧು ಹಶೀಕರ್ ಇತರರು ಉಪಸ್ಥಿತರಿದ್ದರು.

೧೯೮೪ರಲ್ಲಿ ಈ ಪ್ರದೇಶದಲ್ಲಿ ಯಾವುದೇ ಮೂಲಭೂತ ಸೌಕರ್ಯವಿರಲಿಲ್ಲ. ಸಾರಿಗೆ ಸಂಪರ್ಕವಿರಲಿಲ್ಲ. ಚಾನಲ್‌ನಿಂದ ಮೋಟಾರ್ ಮೂಲಕ ನೀರು ತರಬೇಕಾಗಿತ್ತು. ಬೋರ್‌ವೆಲ್‌ನಲ್ಲಿ ನೀರಿಲ್ಲದೇ ಸಾಕಷ್ಟು ಕಷ್ಟ ಅನುಭವಿಸಿದ ನೆನಪು ಇದೆ. ಇಂದು ಈ ಮಟ್ಟದಲ್ಲಿ ನಮ್ಮ ಸಂಸ್ಥೆ ಬೆಳೆದಿರುವುದು ಎಲ್ಲರ ಕಠಿಣ ಪರಿಶ್ರಮದಿಂದ.

- ಎಸ್.ರುದ್ರೇಗೌಡ

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ