ಪೋಸ್ಟ್‌ಗಳು

ನವೆಂಬರ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಣ್ಣಿನ ದೃಷ್ಟಿ ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕ

ಇಮೇಜ್
ಶಿವಮೊಗ್ಗ: ಸಕ್ಕರೆ ಕಾಯಿಲೆಯಿಂದ ನಿಮ್ಮ ದೃಷ್ಟಿ ಹಾನಿಯಾಗದಂತೆ ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು.      ನಗರದ ಆದರ್ಶ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ವತಿಯಿಂದ ಲಕ್ಷ್ಮೀದೇವಿ ಚಿಟ್ಟ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಡಯಾಬಿಟಿಸ್ ಸಂಬಂಧಿತ ಕಣ್ಣಿನ ರೆಟಿನಾ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಉತ್ತಮ ಜೀವನಶೈಲಿ ರೂಢಿಸಿಕೊಳ್ಳಬೇಕು. ಪೂರಕವಾದ ಆಹಾರಕ್ರಮವನ್ನು ಪಾಲಿಸಬೇಕು ಎಂದು ತಿಳಿಸಿದರು.        ಆದರ್ಶ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ರೆಟಿನಾ ತಜ್ಞೆ ಡಾ. ದೀಪಾ ಎಂ.ಜೆ. ಮಾತನಾಡಿ, ದೀರ್ಘಕಾಲದ ಸಕ್ಕರೆ ಕಾಯಿಲೆಯಿಂದ ಕಣ್ಣಿನ ರೆಟಿನಾದ ರಕ್ತನಾಳಗಳು ಹಾನಿಗೊಳ್ಳುತ್ತವೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ದೃಷ್ಟಿ ಹಾನಿಯಾಗಬಹುದು ಅಥವಾ ಕುರುಡುತನ ಉಂಟಾಗಬಹುದು ಎಂದು ಹೇಳಿದರು.       ಟೈಪ್ 1 ಅಥವಾ ಟೈಪ್ 2 ಡಯಾಬಿಟಿಸ್ ಇರುವವರಿಗೆ, ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿದ್ದರೆ, ಬಿಪಿ ನಿಯಂತ್ರಣದಲ್ಲಿ ಇಲ್ಲದಿದ್ದರೆ, ದೀರ್ಘಕಾಲದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರೆ, ಧೂಮಪಾನಿಗಳು ಮತ್ತು ರಕ್ತದಲ್ಲಿ ಕೊಬ್ಬಿನಾಂಶ ಇದ್ದರೆ ಅಪಾಯ ಹೆಚ್ಚಿರುತ್ತದೆ ಎಂದರು.    ...
ಇಮೇಜ್
  ಬೆಂಗಳೂರಿನ ನಗರ ಜಿಲ್ಲೆ, ಆನೇಕಲ್ ತಾಲ್ಲೂಕಿನ, ಅಭಿಲೇಖಾಲಯ (ರೆಕಾರ್ಡ್ ರೂಮ್ಸ್) ಕಾರ್ಯಾಲಯದ ಕೆಲವು ಸಿಬ್ಬಂದಿಗಳು ಭೂಗಳ್ಳರ ಜೊತೆ ಶಾಮೀಲಾಗಿ ನಕಲಿ ದಾಖಲಾತಿಗಳನ್ನು ಸೇರಿಸಿ ಸರ್ಕಾರಿ ಜಮೀನುಗಳ  ಕಬಳಿಕೆಗೆ ಸಹಕರಿಸಿರುವುದು ಕಂಡುಬಂದಿದ್ದು, ಒಟ್ಟು 16 ಸರ್ಕಾರಿ ನೌಕರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ ಜಗದೀಶ ಅವರು ತಿಳಿಸಿದ್ದಾರೆ.          ಉಪ ತಹಸಿಲ್ದಾರರಾದ ಚಂದ್ರಶೇಖರ್ ಬಿ.ಕೆ,  ಶಿರಸ್ತೇದಾರರಾದ ಮಾರುತಿ ಪ್ರಸಾದ್,  ದಿನಕರನ್ ಜಿ, ಲೋಕೇಶ್ ಎಸ್, ಪ್ರಥಮ ದರ್ಜೆ ಸಹಾಯಕರಾದ ಮಹೇಶ್, ಮಂಗಳ, ನಾರಾಯಣ, ದ್ವಿತೀಯ ದರ್ಜೆ ಸಹಾಯಕರಾದ ಕೆ ರಾಘವೇಂದ್ರ, ಮಂಜುನಾಥ್ ಎಂ ವಿ, ಡಿ ದರ್ಜೆ ನೌಕರರಾದ  ಕಲ್ಪನಾ ಪಿ, ಮಂಜುನಾಥ್, ಶೋಭಾ ಎನ್, ಪ್ರವೀಣ್, ಮುನಿರಾಜು, ಮಂಜುಳಮ್ಮ ಮತ್ತು ಮೀನಾಕ್ಷಿ ಅವರುಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.         ಈ ಪ್ರದೇಶದ ಸರ್ಕಾರಿ ಜಮೀನುಗಳ ಮೂಲ ಮಂಜೂರಾತಿ ಕಡತಗಳು, ದರಖಾಸ್ತು ವಹಿ, ಸಾಗುವಳಿ ಚೀಟಿಗಳು, ಸಾಗುವಳಿ ಚೀಟಿ ವಿತರಣಾ ವಹಿ, ಮಂಜೂರಿ ನಡವಳಿ ವಹಿ, ಇನಾಂ ಡಿಸಿ ಆದೇಶದ ಕಡತಗಳು, ಭೂ ಸುಧಾರಣೆ (LRF) ಮೂಲ ಕಡತಗಳು, ಐ.ಎಲ್. ಆರ್.ಆರ್ ವಹಿಗಳು, ಖೇತುವಾರು, ಸೂಡು ಪಹಣಿಗಳು, ಕೈಬರಹ ಪಹಣಿಗಳು ಹಾಗೂ ಇತರೆ ದಾಖಲೆಗಳಲ್ಲಿ ತೊಟ್ಟಿ (ನಕಲಿ) ದಾಖಲಾತಿಗಳ...

ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವ ವತಿಯಿಂದ ಸೋಗಾನೆ ಸರ್ಕಾರಿ ಶಾಲೆ ಗೆ ಗೃಹ ಉಪಯೋಗಿ ವಸ್ತುಗಳ ದೇಣಿಗೆ

ಇಮೇಜ್
      ಸರ್ಕಾರಿ ಶಾಲೆಗಳು ಸರ್ವತೋಮುಖವಾಗಿ ಅಭಿವೃದ್ಧಿ ಸಂಘ ಸಂಸ್ಥೆಗಳ ಸಹಕಾರ ಅಗತ್ಯ ಎಂದು ಇನ್ನರ್ ವೀಲ್ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ವೀಣಾ ಸುರೇಶ್ ಅವರು ನುಡಿದರು ಅವರು ಇಂದು ಸೋಗಾನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಗತ್ಯವಾಗಿ ಬೇಕಾಗಿದ್ದ ಕುಕ್ಕರ್ ಗಳು ಹಾಗೂ ಇಡ್ಲಿ ಪಾತ್ರೆಗಳು ಮತ್ತು ಗೃಹ ಉಪಯೋಗಿ ವಸ್ತುಗಳನ್ನು ಇನ್ನರ್ ವೀಲ್ ಸದಸ್ಯ ಜ್ಯೋತಿ ಬೆನಕಪ್ಪನವರ  ಮುಖಾಂತರ ಮುಖಾಂತರ ಶಾಲೆಗೆ  ನೀಡಿದರು ಇದೇ ಸಂದರ್ಭದಲ್ಲಿ ಜ್ಯೋತಿ ಬೆನಕಪ್ಪನವರು ಮಾತನಾಡುತ್ತಾ ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ಪ್ರತಿಭೆಗಳು ಇರುತ್ತದೆ ಅವರುಗಳಿಗೆ ನಮ್ಮಂತ ಸಂಘ ಸಂಸ್ಥೆಗಳಿಂದ ನೆರವು ಸಿಕ್ಕಾಗ ಅವರ ವಿದ್ಯಾಭ್ಯಾಸ ಇನ್ನಷ್ಟು ಉನ್ನತ ಮಟ್ಟದಲ್ಲಿ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ಇನ್ನರ್ ವೀಲ್  ಶಿವಮೊಗ್ಗ ಪೂರ್ವದ ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್  ಮಾತನಾಡುತ್ತಾ ಇನ್ನರ್ ವೀಲ್ ಕ್ಲಬ್ ವತಿಯಿಂದ. ಈ ವರ್ಷ ವಿಡಿ  ಸಾಕಷ್ಟು ಸಮುದಾಯ ಸೇವೆಗಳನ್ನು ಮನುಕುಲದ ಸೇವೆಗಳನ್ನು ಮಾಡುತ್ತಾ ಬಂದಿದ್ದೇವೆ ಸ್ನೇಹ ಪ್ರೀತಿ ಜೊತೆಗೆ ಸೇವೆಗೆ ಹೆಚ್ಚು ಮಹತ್ವವನ್ನು ನಮ್ಮ ಅಂತರಾಷ್ಟ್ರೀಯ ಇನ್ನರ್ ವೀಲ್ ಸಂಸ್ಥೆ  ಯ ಮೂಲ ಉದ್ದೇಶವಾಗಿದೆ ಎಂದು ನುಡಿದರು. ರಾಜ್ಯ ಸರ್ಕಾರಿ ಸಂಘದ ಉಪಾಧ್ಯಕ್ಷರಾದ ಸುಮತಿ ಕುಮಾರಸ್ವಾಮಿ ಅವರು ಮಾತನಾಡಿ ಗ್ರಾಮಾಂತರ ಶಾಲೆಗಳಿಗೆ ಸರ್ಕಾರ...

ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ನಿಕುಂಜ ಹೆಚ್ ಪಿ ಇವನು ಕಂಚಿನ ಪದಕ

ಇಮೇಜ್
       ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯಿಂದ ಬೆಳಗಾಂನಲ್ಲಿ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ  ನಿಕುಂಜ  ಹೆಚ್ ಪಿ ಇವನು ಕಂಚಿನ ಪದಕವನ್ನು ಪಡೆದಿರುತ್ತಾರೆ.          ಶಿವಮೊಗ್ಗ ನಗರದ ವಕೀಲರಾದ ಪ್ರವೀಣ್ ಕುಮಾರ್ ಎಚ್ ಬಿ ಮತ್ತು ಪವಿತ್ರ ಇವರ ಸುಪುತ್ರನಾಗಿರುತ್ತಾನೆ.        ಶಿವಮೊಗ್ಗದ ಸರ್ ಎಂ ವಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ಯನ್ನು ವ್ಯಾಸಂಗ ಮಾಡುತ್ತಿದ್ದಾನೆ.       ನಮ್ಮ ಶಿವಮೊಗ್ಗ ಸ್ಕೇಟಿಂಗ್ ಅಕಾಡೆಮಿಯ ಎಂ ರವಿ ಇವರ ಪ್ರಶಿಕ್ಷಣಾರ್ಥಿಯಾಗಿದ್ದು ವಿಶ್ವಾಸ್ ಮತ್ತು ಆತೀಶ್ ಇವರ ಮಾರ್ಗದರ್ಶನದಲ್ಲಿ ಈ ಉತ್ತಮ ಪ್ರದರ್ಶನವನ್ನು ನೀಡಿರುತ್ತಾನೆ.

ಕಂಬನಿಯ ವಿದಾಯ

ಇಮೇಜ್
         ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ (IAS Officer Mahantesh Bilagi)  ಕಾರು ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಹಾಂತೇಶ್ ಬಿಳಗಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಮಹಾಂತೇಶ್ ಸೋದರರಾದ ಶಂಕರ ಬೀಳಗಿ ಹಾಗೂ ಈರಣ್ಣ ಶಿರಸಂಗಿ ಮೃತರು. ಸಂಬಂಧಿಕರ ವಿವಾಹ ಕಾರ್ಯಕ್ರಮಕ್ಕೆಂದು ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ  ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ.       ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್​​ ಬಳಿ ಈ ದುರ್ಘಟನೆ ಸಂಭವಿಸಿದೆ.  ಏಕಾಏಕಿ ಅಡ್ಡ ಬಂದ ನಾಯಿಯನ್ನು ಉಳಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ KA 04, NC 7982 ಸಂಖ್ಯೆಯ ಇನ್ನೋವಾ ಕಾರು ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.      1974ರ ಮಾರ್ಚ್ 27ರಂದು ಜನಿಸಿದ್ದ ಮಹಾಂತೇಶ್ ಬೀಳಗಿ ಅವರು 2012ರ ಕರ್ನಾಟಕ ಕೇಡರ್​ನ IAS ಅಧಿಕಾರಿಯಾಗಿದ್ದು, ಪ್ರಸ್ತುತ ಅವರು ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.       ಮಹಾಂತೇಶ್ ಬೀಳಗಿ ಅವರು ಬೆಸ್ಕಾಂ ಎಂಡಿ ಸಹ ಆಗಿದ್ದರು. ಅಲ್ಲದೇ ದಾವಣಗೆರೆ, ಉಡುಪಿ ಸೇರಿದಂತೆ ಕರ್ನಾಟಕದ ಬೇರೆ ಬೇರೆ ಕಡೆ ...

ಕರ್ನಾಟಕ ಮಾದರ ಮಹಾಸಭಾ (ರಿ ) ಶಿವಮೊಗ್ಗ ಜಿಲ್ಲಾ ಪೂರ್ವಭಾವಿ ಸಭೆ

ಇಮೇಜ್
      ಶಿವಮೊಗ್ಗ ನಗರದ ಮಧುರ ಪ್ಯಾರಡೈಸ್ ಸಭಾಂಗಣದಲ್ಲಿ ಶ್ರೀ ಹೆಚ್ ಆಂಜನೇಯ ನವರು (ಕಾರ್ಯಕಾರಿ ಸಮಿತಿ ಸದಸ್ಯರು) ಜಿ. ಎಸ್ ಮಂಜುನಾಥ್ (ಆದಿ ಜಾಂಬವ ಅಭಿರುದ್ದಿ ನಿಗಮ ಅಧ್ಯಕ್ಷರು) ಚಂದ್ರುಶೇಖರ್ (ಮಾಜಿ ಸಂಸದರು) ಗುರುಮೂರ್ತಿ ( ಕರ್ನಾಟಕ ದಲಿತ ಸಂಘರ್ಷ ಸಮಿತಿ)       ಡಾ! ಶ್ರೀನಿವಾಸ್ ಕರಿಯಣ್ಣ ಈ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮುಕಾಂತರ ಉದ್ಘಾಟಿಸಿದರು. ಈ ಸದರ್ಭದಲ್ಲಿ ಸಮಾಜದ ಮುಖಂಡರುಗಳಾದ. ರಮೇಶಣ್ಣ (ಹೊಳೆಹೊನ್ನೂರು), ತೇಜಸ್ ರಾಮಚಂದ್ರ , ಸಮಾಜದ ಮುಖಂಡರು ಮಂಜುನಾಥ್ ಎಸ್ ( ಕೆ.ಪಿ.ಸಿ.ಸಿ. ರಾಜ್ಯ ಸಂಚಾಲಕರು. ಹಾಗೂ ರಾಜ್ಯಾಧ್ಯಕ್ಷರು ಮಾದಿಗ ಸಮಾಜ ಜನಾಪುರ ಭದ್ರಾವತಿ)       ಲಕ್ಷ್ಮಣ್. ಕೆ (ಆಶ್ರಯ ಸಮಿತಿ ಸದಸ್ಯರು) ಸುನೀಲ್. ಏನ್( ಮಾದಿಗ ಸಮಾಜದ ನಗರ ಅಧ್ಯಕ್ಷರು.  ಕಾರ್ಮಿಕ ವಿಭಾಗದ ಜಿಲ್ಲಾ ಉಪಾಧ್ಯಕ್ಷರು), ರಾಮ್ ಕುಮಾರ್. ಆರ್ ( ಕಾರ್ಮಿಕರ ವಿಭಾಗದ ಜಿಲ್ಲಾ ಅಧ್ಯಕ್ಷರು ಕಾಂಗ್ರೆಸ್), ಸತೀಶ್ ಕೆ ( ಅಂಬೇಡ್ಕರ್ ಸಮುದಾಯ ಭವನದ ಅಧ್ಯಕ್ಷರು) ಅನುಪ್ ವಿ ( ವಾರ್ಡ್ ಅಧ್ಯಕ್ಷರು  ಕಾಂಗ್ರೆಸ್. ಹೊಸಮನೆ ಶಿವಮೊಗ್ಗ) ನಿರಂಜನ್ ಮೂರ್ತಿ. ಆರ್. ಕೆ. ವಕೀಲರು ಹಾಗೂ ಸಮಾಜದ ಯುವ ನಾಯಕರು. ಶ್ರೀಧರ್ ಎಲ್ ( ಪರಿಶಿಷ್ಟ ಜಾತಿ ಪಂಗಡದ ಜಿಲ್ಲಾ ಉಪಾಧ್ಯಕ್ಷರು), ಯೋಗೇಶ್ ವೈ.( ಕಾರ್ಮಿಕ ವಿಭಾಗ ಜಿಲ್ಲಾ ಪ್ರದಾನ ಕಾರ್ಯದರ್ಶಿ) ನವೀನ್ ಎಲ್ ( ವಾರ್ಡ್ ಅಧ್ಯಕ್...

ಮಾನವೀಯ ಮೌಲ್ಯ ಅಳವಡಿಸಿಕೊಳ್ಳುವುದು ಅವಶ್ಯ

ಇಮೇಜ್
ಶಿವಮೊಗ್ಗ: ಮಾನವೀಯ ಮೌಲ್ಯಗಳು ವ್ಯಕ್ತಿಗೆ ಶಾಂತಿ ಮತ್ತು ತೃಪ್ತಿದಾಯಕ ಜೀವನ ನಡೆಸಲು ಸಹಕಾರ ಒದಗಿಸುತ್ತದೆ. ಜೀವನದಲ್ಲಿ ಪ್ರತಿಯೊಬ್ಬರೂ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಲೇಖಕ ಡಾ. ರಾಜೇಂದ್ರ ಬುರುಡಿಕಟ್ಟಿ ಹೇಳಿದರು.         ಗೋಪಾಲಗೌಡ ಬಡಾವಣೆಯಲ್ಲಿ ಏರ್ಪಡಿಸಿದ್ದ ಫ್ರೆಂಡ್ ಸೆಂಟರ್ 59ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಸಹಾನುಭೂತಿ, ಪ್ರಾಮಾಣಿಕತೆ, ನ್ಯಾಯ, ಸಮಾನತೆ, ಕರುಣೆ ಮತ್ತು ಸಮಾಜದ ಒಳಿತಿಗಾಗಿ ಜೀವನದಲ್ಲಿ ಮಾನವೀಯ ಮೌಲ್ಯಗಳು ಮುಖ್ಯವಾಗಿದೆ. ಎಲ್ಲರ ಅಭಿಪ್ರಾಯಗಳನ್ನು ಗೌರವಿಸುವುದು ಮತ್ತು ಸ್ವೀಕರಿಸುವುದು. ಇತರರಿಗೆ ಸಹಾಯ ಮಾಡಲು ಮುಂದಾಗುವುದು. ಒಟ್ಟಾಗಿ ಕೆಲಸ ಮಾಡುವುದು. ಸಾಮರಸ್ಯದಿಂದ ಬದುಕಲು ಪ್ರಯತ್ನಿಸುವುದು ಅಗತ್ಯ ಎಂದು ತಿಳಿಸಿದರು.         ಇದೇ ಸಂದರ್ಭದಲ್ಲಿ ನೂತನ ಕಾರ್ಯಕಾರಿ ಮಂಡಳಿಯ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಅತ್ಯುತ್ತಮ ನೂತನ ಸದಸ್ಯರಿಗೆ ಮತ್ತು ಅತ್ಯುತ್ತಮ ಸಹಕಾರಿ ಪ್ರಶಸ್ತಿ ತೆಗೆದುಕೊಂಡವರಿಗೆ ಅಭಿನಂದನೆ ಸಲ್ಲಿಸಲಾಯಿತು.          ಎಸ್ ಎಸ್ ಎಲ್ ಸಿ ಯಲ್ಲಿ ಹೆಚ್ಚಿನ ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡಿ  ಗೌರವಿಸಲಾಯಿತು. ಫ್ರೆಂಡ್ಸ್ ಸೆಂಟರ್ ಏಳಿಗೆಗಾಗಿ ಶ್ರಮಿಸಿದ ಎಲ್ಲ ಪೂರ್ವಧ್ಯಕ್ಷರುಗಳಿಗೆ  ಅಭಿನಂದನೆ...

ಶಿವಮೊಗ್ಗ ನಗರದ ಶ್ರೀ ಮೈಲಾರೇಶ್ವರ ಸನ್ನಿಧಿಯಲ್ಲಿ ನವೆಂಬರ್ 26, 27ರಂದು ಕಾರ್ತಿಕ ದೀಪೋತ್ಸವ

ಇಮೇಜ್
  ಶಿವಮೊಗ್ಗ ನಗರದ ಶ್ರೀ ಮೈಲಾರೇಶ್ವರ ಸನ್ನಿಧಿಯಲ್ಲಿ ಸುಬ್ರಹ್ಮಣ್ಯ ಸೃಷ್ಟಿಯ ಪ್ರಯುಕ್ತ ನವೆಂಬರ್ 26, 27ರಂದು ಕಾರ್ತಿಕ ದೀಪೋತ್ಸವ 26ನೇ ಬುಧವಾರ ಬೆಳಿಗ್ಗೆ 9:00 ಗಂಟೆಯಿಂದ ಬಂಡರ   ಕುಟ್ಟುವುದು ಹಾಗೂ ಬೀಸುವ ಕಾರ್ಯಕ್ರಮ ಇರುತ್ತದೆ ಮಡಿಯಿಂದ  ಕಾರ್ಯಕ್ರಮಕ್ಕೆ ಭಾಗವಹಿಸಿ 27ರ ಗುರುವಾರ ಸಂಜೆ ಪೂಜಾ ಕಾರ್ಯಕ್ರಮ ಹಾಗೂ ಬಂಡರ ಮತ್ತು ಪ್ರಸಾದ ವಿತರಣೆ ಮಾಡಲಾಗುತ್ತದೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ ಶ್ರೀ ಮೈಲಾರೇಶ್ವರ ದೇವಸ್ಥಾನದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಶ್ರೀ ಏಳು ಕೋಟಿ ಗೊರವರು ತಿಳಿಸಿದ್ದಾರೆ

ಅದ್ಧೂರಿಯಾಗಿ ಯಕ್ಷಗಾನ ಪ್ರದರ್ಶನ

ಇಮೇಜ್
ಶಿವಮೊಗ್ಗ: ಶ್ರೀ ಬ್ರಹ್ಮಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿ ಮಾರಣಕಟ್ಟೆ ಅವರ ಸಂಯೋಜನೆ ಮತ್ತು ನಿರ್ದೇಶನದಲ್ಲಿ ಅದ್ಧೂರಿಯಾಗಿ ಯಕ್ಷಗಾನ ಪ್ರದರ್ಶನ ನಡೆಯಿತು.         ಹಳ್ಳಿ ಹೆಬ್ಬಾಗಿಲು ಮನೆಯಲ್ಲಿ ಪ್ರತಿವರ್ಷ ನಿಷ್ಠೆಯ ಪರಂಪರೆಯೊಂದಿಗೆ ಆಯೋಜಿಸಲಾಗುವ ಪಾರಂಪರಿಕ ಕಟ್ಟು ಕಟ್ಟಳೆ ಯಕ್ಷಗಾನ ಆಟ ನಡೆಸಲಾಯಿತು. ಹಳ್ಳಿ ಹೆಬ್ಬಾಗಿಲು ಮನೆ ಕೊಡುಗೆ ಅಪಾರವಾಗಿದ್ದು, ಕರ್ನಾಟಕದ ಯಕ್ಷಗಾನ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಅವರು ನಿರಂತರವಾಗಿ ಶ್ರದ್ಧೆ ಮತ್ತು ನಿಷ್ಠೆಯನ್ನು ತೋರಿಸಿದ್ದಾರೆ ಎಂಬುದನ್ನು ವಿಶೇಷವಾಗಿ ಸ್ಮರಿಸಲಾಯಿತು.        ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಏರ್‌ಬೈಲ್ ಆನಂದ ಶೆಟ್ಟಿ ಮತ್ತು ಯಳಬೇರು ಶೇಖರ ಶೆಟ್ಟಿ ಅವರನ್ನು ವಿಶೇಷ ಗೌರವಾರ್ಥವಾಗಿ ಸನ್ಮಾನಿಸಲಾಯಿತು.         ಇದೇ ಸಂದರ್ಭದಲ್ಲಿ ಹಳ್ಳಿ ಹೆಬ್ಬಾಗಿಲು ಮನೆ ಕುಟುಂಬದ ಹಿರಿಯ ಸದಸ್ಯರಾದ ಶೇಖರ ಶೆಟ್ಟಿ, ಸುಧಾರಾಮ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಅಶೋಕ್ ಶೆಟ್ಟಿ, ರವಿ ಶೆಟ್ಟಿ ಮತ್ತು ಜಯಶೀಲ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಹಾಜರಾಗಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದರು.

ಶಿವಮೊಗ್ಗ ಕೇಂದ್ರ ಕಾರಾಗೃಹ ಕ್ಯಾಂಟೀನ್ ನಲ್ಲಿ ಭಾರಿ ಅಕ್ರಮ

ಇಮೇಜ್
  ಬಾಳೆಗೊನೆ ಮೂಲಕ ಗಾಂಜಾ–ಸಿಗರೇಟ್ ಅಕ್ರಮ ಸಾಗಣೆಗೆ ಯತ್ನ !!? ಶಿವಮೊಗ್ಗ: ನಗರ ಕೇಂದ್ರ ಕಾರಾಗೃಹಕ್ಕೆ ಆಟೋ ಮೂಲಕ ಬರುತ್ತಿರುವ ಬಾಳೆಗೊನೆಗಳ ಸರಕು ಈಗ ಗಂಭೀರ ಅನುಮಾನಕ್ಕೆ ಕಾರಣವಾಗಿದೆ. ಸುಮಾರು 750ಕ್ಕೂ ಹೆಚ್ಚು ಕೈದಿಗಳು ಇರುವ ಈ ಜೈಲಿನಲ್ಲಿ, ಬಾಳೆಗೊನೆಗಳಲ್ಲೇ ಗಾಂಜಾ, ಸಿಗರೇಟ್, ತಂಬಾಕು ಪದಾರ್ಥಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಆರೋಪ ಸ್ಥಳೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.           ಜೈಲು ಆವರಣಕ್ಕೆ ಸಾಮಾನ್ಯ ಸಾರ್ವಜನಿಕರ ವಾಹನಗಳಿಗೆ ಪ್ರವೇಶವಿಲ್ಲದಿದ್ದರೂ, ಈ ಸಂದರ್ಭದಲ್ಲ ಆಟೋಗಳು ನಿರ್ಬಂಧವಿಲ್ಲದೆ ಒಳಗೆ ಹೋಗುತ್ತಿರುವುದು ಪ್ರಕ್ರಿಯೆಯ ದುರುಪಯೋಗ ಎಂಬ ಅನುಮಾನಕ್ಕೆ ಕಾರಣವಾಗಿದೆ. NDPS ಕಾಯಿದೆ ಮತ್ತು ಇತರೆ ಕಾನೂನು ಉಲ್ಲಂಘನೆ        ಅಕ್ರಮವಾಗಿ ಗಾಂಜಾ ಅಥವಾ ಇತರೆ ನಾರ್ಕೋಟಿಕ್ ಪದಾರ್ಥಗಳು ಜೈಲಿಗೆ ತಲುಪಿಸಿದರೆ, ಕೆಳಗಿನ ಪ್ರಮುಖ ಕಾಯಿದೆಗಳ ಗಂಭೀರ ಉಲ್ಲಂಘನೆ ಆಗುತ್ತದೆ: 1) NDPS ಕಾಯಿದೆ – 1985 (Narcotic Drugs and Psychotropic Substances Act) ಸೆಕ್ಷನ್ 20(b) – ಗಾಂಜಾ ಸಾಗಣೆ, ಸಂಗ್ರಹಣೆ ಅಥವಾ ವಿತರಣೆ ಕ್ರಿಮಿನಲ್ ಅಪರಾಧ ಸೆಕ್ಷನ್ 25 – ವಾಹನವೋ, ಸರಕುಮಾಲವೋ ಅಕ್ರಮ ವಸ್ತು ಸಾಗಣೆಗೆ ಬಳಸಿದರೆ ವಾಹನ–ಸರಕು ಜಪ್ತಿ ಸೆಕ್ಷನ್ 29 – ಸಂಚು ರೂಪಿಸುವುದು, ಸಹಕರಿಸುವುದು, ನೆರವು ನೀಡುವುದಕ್ಕೂ ಜೈಲು ಶಿಕ್ಷೆ ...

ಶಬರಿಮಲೆ‌ ಯಾತ್ರೆಯಿಂದ ಸಕಲ ಇಷ್ಟಾರ್ಥ ಸಿದ್ಧಿ

ಇಮೇಜ್
ಶಿವಮೊಗ್ಗ: ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಭಕ್ತರನ್ನು ಹೊಂದಿರುವ ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ಪ್ರತಿ ವರ್ಷ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಭಕ್ತರು ಶಬರಿಮಲೆ ಯಾತ್ರೆ ಸಂದರ್ಭದಲ್ಲಿ ಸ್ವಚ್ಛತೆ  ಕಾಪಾಡಿಕೊಳ್ಳುವುದರ ಜೊತೆಗೆ ಆರೋಗ್ಯದ ಬಗ್ಗೆಯೂ ಸಹ ಕಾಳಜಿ ವಹಿಸಬೇಕು ಎಂದು ಗುರುಸ್ವಾಮಿ ಪಿ.ಹರೀಶ್ ಮೊದಲಿಯಾರ್ ಹೇಳಿದರು. 38 ಬಾರಿ ಶಬರಿಮಲೆ ಯಾತ್ರೆ ಕೈಗೊಂಡು ಯಶಸ್ವಿಯಾಗಿ ಪೂರೈಸಿ 28 ಜನರ ತಂಡದೊಂದಿಗೆ ಶಬರಿಮಲೆ ಯಾತ್ರೆಗೆ ರಾಮಣ್ಣ ಶ್ರೇಷ್ಠಿ ಪಾರ್ಕ್  ಸಾರ್ವಜನಿಕ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಯಾತ್ರಾರ್ಥಿಗಳಿಗೆ ಶುಭ ಹಾರೈಸಿ, ನಿರಂತರವಾಗಿ ಭಕ್ತರು ಯಾತ್ರೆ  ಕೈಗೊಳ್ಳಬೇಕು ಎಂದು ತಿಳಿಸಿದರು. 50ಕ್ಕೂ ಹೆಚ್ಚು ಬಾರಿ ಶಬರಿಮಲೆ ಯಾತ್ರೆ ಯಶಸ್ವಿಯಾಗಿ ಪೂರೈಸಿದ ಮಣ್ಣುನಾಡರ್,  ಬಿ ಪೂಸ್ವಾಮಿ,  ಪಿ ಹರೀಶ್ ಅವರನ್ನು  ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಸನ್ಮಾನಿಸಿದರು. ಜಿ.ವಿಜಯಕುಮಾರ್ ಮಾತನಾಡಿ, ಶಬರಿಮಲೆ ಯಾತ್ರೆಯಿಂದ ಮನಸ್ಸಿಗೆ ಶಾಂತಿ ನೆಮ್ಮದಿ, ನಮ್ಮ ಬೇಡಿಕೆಗಳು  ಇಷ್ಟಾರ್ಥಗಳು ಸಿದ್ಧಿಯಾಗುವುದರ ಜೊತೆಗೆ ವೃತವನ್ನು ಮಾಡುವುದರಿಂದ ಸರ್ವರಿಗೂ ಒಳಿತಾಗುತ್ತದೆ. ಆಧ್ಯಾತ್ಮಿಕ ಹಾದಿಯಲ್ಲಿ ಸಾಗಲು ಈ ಯಾತ್ರೆಯೂ ಬಹಳ ಉಪಯುಕ್ತ ಎಂದರು. ಶಬರಿಮಲೆ ಯಾತ್ರೆಯಲ್ಲಿ ಪ್ರಮುಖರಾದ  ಸೇಲ್ವರಾಜ್ ಸುರೇಶ್, ಆದರ್ಶ,  ಪಿ ಬದ್ರಿನಾಥ್,  ಮಲ್ಲಿಕಾರ್ಜು...

ರೋಟರಿ ಶಿವಮೊಗ್ಗ ಪೂರ್ವ ವಲಯಮಟ್ಟದ ಚಾಂಪಿಯನ್

ಇಮೇಜ್
ಶಿವಮೊಗ್ಗ: ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆಯು ವಲಯ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನ.23ರಂದು ಶೃಂಗೇರಿಯಲ್ಲಿ ಆಯೋಜಿಸಿರುವ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಗೆ ಆಯ್ಕೆಯಾಗಿದೆ.        ರೋಟರಿ ಕ್ಲಬ್ ಕೋಣಂದೂರು ವತಿಯಿಂದ ಕೋಣಂದೂರಿನ ವಿನಾಯಕ ಮಾಂಗಲ್ಯ ಮಂದಿರದಲ್ಲಿ ಆಯೋಜಿಸಿದ್ದ ರೋಟರಿ ಕಲೋತ್ಸವ 2025 ಗಾನ, ನೃತ್ಯ, ಕಲರವ ಸಂಬಂಧಿಸಿದ ವಲಯ 11ರ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆಯು ವಲಯಮಟ್ಟದ ಚಾಂಪಿಯನ್ ಆಗಿದೆ.         ಜನಪದ ಗೀತೆಯಲ್ಲಿ ಶೈಲಜಾ ತಿರುಮಲೇಶ್ ಪ್ರಥಮ ಸ್ಥಾನ, ಸೋಲೋ ಡ್ಯಾನ್ಸ್ ನಲ್ಲಿ ಶಶಿಕಾಂತ್ ನಾಡಿಗ್ ಪ್ರಥಮ ಸ್ಥಾನ, ಸೋಲೋ ಡ್ಯಾನ್ಸ್ ಆನೆಟ್‌ನಲ್ಲಿ ಕೀರ್ತನಾ ಪ್ರಥಮ ಸ್ಥಾನ, ಯುಗಳ ಗೀತೆಯಲ್ಲಿ ಜಿ.ವಿಜಯಕುಮಾರ್ ಮತ್ತು ಶೈಲಜಾ ತಿರುಮಲೇಶ್ ಪ್ರಥಮ ಸ್ಥಾನ, ಏಕವ್ಯಕ್ತಿ ಅಭಿನಯ ಸ್ಪರ್ಧೆಯಲ್ಲಿ ಡಾ. ಅರುಣ್ ಪ್ರಥಮ ಸ್ಥಾನ, ಗ್ರೂಪ್ ಡ್ಯಾನ್ಸ್ ನಲ್ಲಿ ಕ್ಲಬ್ ದ್ವಿತೀಯ ಸ್ಥಾನ ಪಡೆದುಕೊಂಡಿದೆ.        ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಅಧ್ಯಕ್ಷ ಡಿ.ಕಿಶೋರ್‌ಕುಮಾರ್, ಕಾರ್ಯದರ್ಶಿ ಡಾ. ಧನಂಜಯ ರಾಂಪುರ, ಡಾ. ಅರುಣ್, ಶಶಿಕಾಂತ್ ನಾಡಿಗ್, ಜಿ.ವಿಜಯಕುಮಾರ್, ಸತೀಶ್ ಚಂದ್ರ, ಬಿಂದು ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.        ಕೋಣಂದೂ...

ಗುಡ್‌ಲಕ್ ಆರೈಕೆ ಕೇಂದ್ರದ ಕಾರ್ಯ ಶ್ಲಾಘನೀಯ

ಇಮೇಜ್
ಶಿವಮೊಗ್ಗ: ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗುಡ್‌ಲಕ್ ಆರೈಕೆ ಕೇಂದ್ರದ ಕಾರ್ಯ ಶ್ಲಾಘನೀಯ ಎಂದು ರೋಟರಿ ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ಹೇಳಿದರು.       ಗುಡ್‌ಲಕ್ ಆರೈಕೆ ಕೇಂದ್ರದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸೇವಾ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿ, ಅಶಕ್ತರು, ಅನಾಥರು ಹಾಗೂ ಹಿರಿಯರನ್ನು ಆರೈಕೆ ಮಾಡಿ ಪೋಷಿಸುವ ಕಾರ್ಯ ನಡೆಯುತ್ತಿದೆ. ಇದರಿಂದ ನಮ್ಮ ಜೀವನದಲ್ಲಿ ಪುಣ್ಯ ಪ್ರಾಪ್ತಿ ಜೊತೆಗೆ ನೆಮ್ಮದಿ ಸಿಗುತ್ತದೆ ಎಂದು ತಿಳಿಸಿದರು.        ಇಂದು ಮಾನವೀಯ ಸಂಬಂಧಗಳು ಕಡಿಮೆಯಾಗುತ್ತಿವೆ. ಆಧುನಿಕ ಯುಗದಲ್ಲಿ ಮಾನವೀಯ ಮೌಲ್ಯಗಳು ಕಳೆದುಕೊಳ್ಳುತ್ತಿದ್ದೇವೆ. ರೋಟರಿ ಸಂಸ್ಥೆಗಳ ಮುಖಾಂತರ ಪ್ರಪಂಚಾದ್ಯಂತ ಮಾನವೀಯ ಸೇವೆಗಳು ನಿರಂತರವಾಗಿ ನಡೆದು ಬರುತ್ತಿವೆ. ಅದರಲ್ಲೂ ಇಂತಹ ಅನಾಥ ಆರೈಕೆ ಕೇಂದ್ರಗಳಿಗೆ ಮಾಡಿದ ದಾನದಿಂದ ಅದರ ಹತ್ತು ಪಟ್ಟು ಲಾಭ ಫಲಿಸುತ್ತದೆ ತಿಳಿಸಿದರು.           ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ ಗುಡ್‌ಲಕ್ ಆರೈಕೆ ಕೇಂದ್ರದ ಸೇವೆಗಳ ಬಗ್ಗೆ ಶ್ಲಾಘಿಸಿದರು. ರೋಟರಿ ಉತ್ತರ ಸದಸ್ಯ ದತ್ತಾತ್ರಿ ಅವರು ಆರೈಕೆ ಕೇಂದ್ರಕ್ಕೆ 25,000 ರೂ. ಬೆಲೆ ಬಾಳುವ ಯುಪಿಎಸ್ ಬ್ಯಾಟರಿ ಸಂಪೂರ್ಣ ಸೆಟ್ ದೇಣಿಗೆ ನೀಡಿದರು.         ಗುಡ್‌ಲಕ್ ಆರೈಕೆ ಕೇಂದ್ರದ ಅಧ್ಯಕ್ಷ ಯು.ರವೀಂದ್ರನ...

ರೋಟರಿ ವಲಯ ಮಟ್ಟದ. ರೋಟರಿ ಕಲೋತ್ಸವ 2025 ಕಾರ್ಯಕ್ರಮದಲ್ಲಿ ಕರೋನ ಬಗ್ಗೆ ವಿಶೇಷ ಜಾಗೃತಿ

ಇಮೇಜ್
      ರೋಟರಿ ವಲಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಕಲೋತ್ಸವದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ರೊಟೇರಿಯನ್ ಹಾಗೂ ಇನ್ನರ್ ವೀಲ್ ಸದಸ್ಯನಿಯರಿಂದ ಕರೋನಾ ಬಗ್ಗೆ ಸಾರ್ವಜನಿಕರಿಗೆ ಹಾಗೂ ಸದಸ್ಯರಿಗೆ ಕಿರು ಪ್ರಹಸನದ ಮುಖಾಂತರ ಜಾಗೃತಿಯನ್ನು ಮೂಡಿಸಿ ಮಾಹಿತಿ ನೀಡಲಾಯಿತು. ಈ ಕಿರು ಪ್ರಹಸನದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ  ಅಧ್ಯಕ್ಷರಾದ ನೆಪ್ಚೂನ್ ಕಿಶೋರ್   ಮಾಜಿ ಅಧ್ಯಕ್ಷರಾದ ಜಿ ವಿಜಯಕುಮಾರ್. ಡಾಕ್ಟರ್ ಅರುಣ್. ಸುಮತಿ ಕುಮಾರಸ್ವಾಮಿ. ಅರುಣ್ ದೀಕ್ಷಿತ್. ಡಾಕ್ಟರ್ ಅವಿನಾಶ್. ಬಿಂದು ವಿಜಯ ಕುಮಾರ್. ಡಾಕ್ಟರ್ ಧನಂಜಯ ರಾಂಪುರ. ವೀಣಾ ಕಿಶೋರ್. ಗಿರಿಜಾ ರಾಂಪುರ. ಹಾಗು ಮಕ್ಕಳು ಅಭಿನಯಸಿ ಅಪಾರ ಜನ ಮೆಚ್ಚುಗೆಗೆ ಪಾತ್ರರಾದರು.

ಗಾಂಧೀಜಿ ಮತ್ತು ವಿನೋಬಾಬಾವೆ ಇವರ ಸಾಧನೆ ಅಗಣಿತ _ ಎಮ್ ಏನ್ ಸುಂದರ್ ರಾಜ್

ಇಮೇಜ್
      ನಾವೀಗ ರಾಷ್ಟ್ರಪಿತ ಗಾಂಧೀಜಿ ಸ್ವಾತಂತ್ರಕ್ಕೋಸ್ಕರವಾಗಿ ಹೋರಾಡಿದ ಅನೇಕ ಮಹನೀಯರು ಭೂದಾನದ ಹರಿಕಾರ ವಿನೋಬಾ ಬಾವೆ ಮುಂತಾದವರನ್ನು ಮರೆಯುತ್ತಿದ್ದೇವೆ ಇದು ಸರ್ವತ ಒಳ್ಳೆಯದಲ್ಲ ಈ ಮಹನೀಯರುಗಳು ದೇಶದ ಸ್ವಾತಂತ್ರ್ಯಕ್ಕೆ ಮತ್ತು ಒಗ್ಗಟ್ಟಿಗೆ ಅನೇಕ ಮಹತ್ತರ ಕೆಲಸಗಳನ್ನು ಮಾಡಿ ತಮ್ಮ ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ ಅವರೆಲ್ಲರನ್ನ ಸ್ಮರಿಸುವ ಮತ್ತು ಅವರು ತೋರಿದ ಹಾದಿಯಲ್ಲಿ ನಡೆಯುವ ಕಾರ್ಯ ಮುಂದಿನ ಯುವ ಜನಾಂಗಕ್ಕೆ ಆಗಬೇಕಿದೆ ಎಂದು ಸಾಹಿತಿ ಎಂ ಎನ್ ಸುಂದರರಾಜ್ ತಿಳಿಸಿದ್ದಾರೆ        ಅವರು ಗೋಪಾಳ ದ ರಾಮಕೃಷ್ಣ ಶಾಲೆಯ ಆವರಣದಲ್ಲಿ ನಡೆದ ಜಿಲ್ಲಾ ಸರ್ವೋದಯ ಮಂಡಲ ಏರ್ಪಡಿಸಿದ್ದ ಪ್ರಬಲ ಭಾಷಣ ಸ್ಪರ್ಧೆಯಲ್ಲಿ ಉದ್ಘಾಟಕರಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.        ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸರ್ವೋದಯ ಮಂಡಲದ ಅಧ್ಯಕ್ಷ ಮನೋಹರ್ ಮಾತನಾಡಿ ಮುಂದೆಯೂ ಸಹ ಇಂತಹ ಅನೇಕ ಕಾರ್ಯಕ್ರಮಗಳನ್ನು ಜಿಲ್ಲಾದ್ಯಂತ ಏರ್ಪಡಿಸಿ ಗಾಂಧೀಜಿಯವರ ತತ್ವಗಳನ್ನು ಪ್ರಚಾರ ಮಾಡಲಾಗುವುದು ಎಂದು ತಿಳಿಸಿದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಕಾರ್ಯದರ್ಶಿ ಜಿ ವಿಜಯಕುಮಾರ್ ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿ ಹೇಳಿದರು ಕಾರ್ಯಕ್ರಮದಲ್ಲಿ ಅಂಜನ್ ರಾಮ್ ತಿವಾರಿ ಮತ್ತು ಆರತಿ ತಿವಾರಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರಾದ ತೀರ್ಥೇಶ್ ಅವರು  ಎಲ್ಲರನ್ನು ಸ್ವಾಗತಿ...

*ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ. ಕಾರ್ತಿಕ ದೀಪ ವೈಭವ

ಇಮೇಜ್
       ಕಾರ್ತಿಕ ದೀಪ ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರಕುವುದರ ಜೊತೆಗೆ ನಮ್ಮ ಕಷ್ಟಗಳು ಪರಿಹಾರವಾಗುತ್ತದೆ ಎಂದು ನಾಗಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾದ ಸಂದೇಶ್ ಉಪಾಧ್ಯ ತಿಳಿಸಿದರು ಅವರು ಕಾರ್ತಿಕ ದೀಪ ವೈಭವದ ಅಂಗವಾಗಿ ಸ್ವಾಮಿ ವಿವೇಕಾನಂದ ಬಡಾವಣೆಯ  ನಾಗ ಸುಬ್ರಮಣ್ಯ ದೇವಸ್ಥಾನ ದಲ್ಲಿ ಹಮ್ಮಿಕೊಳ್ಳಲಾದ ಕಾರ್ತಿಕ ದೀಪ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ದೀಪೋತ್ಸವದಲ್ಲಿ. ಋಗ್ವೇದ ಯಜುರ್ವೇದ ಸಾಮವೇದ ಅಥರ್ವಣ ವೇದ. ಶಾಸ್ತ್ರ ಸಂಗೀತ ಅಷ್ಟಕ ಭಜನೆ. ಹೋಮ ಹವನಗಳು ಪ್ರಸಾದ ವಿತರಣೆ ಕಾರ್ಯಕ್ರಮ ನಾಲ್ಕು ದಿನಗಳ ಕಾಲ ನಡೆಯುತ್ತದೆ ಈ- ಕಾರ್ಯಕ್ರಮದಲ್ಲಿ ಭಕ್ತರು ಹಾಗೆ ಪ್ರತಿದಿನ ಸಂಜೆ 7 ಗಂಟೆಯಿಂದ 8. 15 ರವರೆಗೆ  ಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ ಎಂದು ನುಡಿದರು.. ಈ ದಿನದ ಕಾರ್ಯಕ್ರಮದಲ್ಲಿ ಸಾಕಷ್ಟು ಜನ ಭಕ್ತರು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ  ಸ್ವಾಮಿಯ ಕೃಪೆಗೆ ಪಾತ್ರರಾದರು . ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ         ಜೀ ವಿಜಯಕುಮಾರ್. ಶ್ರೀಮತಿ ಬಿಂದು ವಿಜಯ ಕುಮಾರ್. ಹಾಗೂ ನಾಗಸಬ್ರಹ್ಮಣ್ಯ ದೇವಸ್ಥಾನದ ಸಮಿತಿಯ ಪದಾಧಿಕಾರಿಗಳು ಭಕ್ತ ಮಹಾಶಯರು ಉಪಸ್ಥಿತರಿದ್ದರು

ಮನುಕುಲದ ಸೇವೆಯಲ್ಲಿ ಮುಂಚೂಣಿಯಲ್ಲಿದೆ ರೋಟರಿ ಸಂಸ್ಥೆ

ಇಮೇಜ್
ಶಿವಮೊಗ್ಗ: ಮನುಕುಲದ ಸೇವೆಯಲ್ಲಿ ಮುಂಚೂಣಿಯಲ್ಲಿ ಸಂಸ್ಥೆ ರೋಟರಿ. ವಿಶ್ವಾದ್ಯಂತ 206 ದೇಶಗಳಲ್ಲಿ ಜಾತಿ, ಮತ, ಧರ್ಮ ಬೇಧವಿಲ್ಲದೇ ಸೇವಾ ಕಾರ್ಯಗಳನ್ನು ನಡೆಸುತ್ತಿದೆ ಎಂದು ನಿಯೋಜಿತ ಜಿಲ್ಲಾ ಗವರ್ನರ್ ರವಿಶಂಕರ್ ದಾಕೋಜು ಹೇಳಿದರು. ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ಸಾರಥ್ಯದಲ್ಲಿ ನಗರದ ಶಿವಮೊಗ್ಗ ಅರೆಕಾನಟ್ ಮರ್ಚೆಂಟ್ಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ರೋಟರಿ ದತ್ತಿನಿಧಿ ಮತ್ತು ಪೊಲಿಯೋ ಪ್ಲಸ್ ಕುರಿತ ಸಮೃದ್ಧಿ 2025 ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ರೋಟರಿ ಫೌಂಡೇಷನ್‌ಗೆ ನೀಡಿದ ದೇಣಿಗೆಯು ವಿಶ್ವದ ಮನುಕುಲದ ಸೇವೆಗೆ ವಿನಿಯೋಗಿಸಲಾಗುತ್ತದೆ. ಪಾರದರ್ಶಕತೆಯಿಂದ ಹಣದ ಉಪಯೋಗ ಮಾಡಲಾಗುತ್ತದೆ. ದೇಣಿಗೆ ನೀಡಿದ ಹಣ ಕೆಲ ವರ್ಷಗಳಲ್ಲಿ ಪುನಃ ಸಮುದಾಯ ಯೋಜನೆಗಳಿಗೆ ಸಿಗುತ್ತದೆ. ರೋಟರಿ ಫೌಂಡೇಷನ್‌ಗೆ ಕೋಟ್ಯಂತರ ರೂ. ದೇಣಿಗೆ ನೀಡಲಾಗಿದೆ ಎಂದು ತಿಳಿಸಿದರು. ಬಡತನದಲ್ಲಿರುವ ಸಮುದಾಯದ ಮಕ್ಕಳ ವಿದ್ಯಾಭ್ಯಾಸ ಮತ್ತು ಪರಿಸರ ಸಂರಕ್ಷಣೆ ಸೇರಿದಂತೆ ಸಮಾಜಮುಖಿ ಕಾರ್ಯಗಳಿಗೆ ದೇಣಿಗೆ ಬಳಸಲಾಗುತ್ತಿದೆ. ಸಿದ್ದಾರ್ಥ ಸ್ಮರಣಾರ್ಥ ದತ್ತಿನಿಧಿ ಸ್ಥಾಪಿಸಿ 45 ಲಕ್ಷ ರೂ. ಹೊಂದಿಸಲಾಗಿದೆ ಎಂದು ಹೇಳಿದರು. ನಿಯೋಜಿತ ಜಿಲ್ಲಾ ಗವರ್ನರ್ ರವಿಶಂಕರ್ ದಾಕೋಜು ಅವರು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ 100 ಕೋಟಿ ರೂ. ದೇಣಿಗೆ ನೀಡಿದ್ದು, ಪ್ರಸ್ತುತ ವಾಸದ ಮನೆ ಹೊಂದಿದ್ದೇನೆ. ಈವರೆಗೂ ಗಳಿಸಿದ ಹಣವನ್ನು ಉತ್ತಮ ಉದ್ದೇಶಕ್ಕೆ ನೀಡಿದ್...

ಮಗುವಿನ ಬೆಳವಣಿಗೆಗೆ ಪೌಷ್ಟಿಕ ಆಹಾರ ಸೇವನೆ ಅಗತ್ಯ

ಇಮೇಜ್
ಶಿವಮೊಗ್ಗ: ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಅತ್ಯಗತ್ಯವಾಗಿದ್ದು, ಮಗುವಿನ ಬೆಳವಣಿಗೆಗೂ ಪೌಷ್ಟಿಕಾಂಶ ಅತಿ ಮುಖ್ಯವಾಗಿ ಸಹಕಾರಿಯಾಗುತ್ತದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಬಸವರಾಜ್ ಬಿ ಹೇಳಿದರು. ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಹೊಸಮನೆ ಬಡಾವಣೆಯಲ್ಲಿರುವ ಅಂಗನವಾಡಿಯಲ್ಲಿ ಗರ್ಭಿಣಿಯರಿಗೆ ಪೌಷ್ಟಿಕಾಂಶ ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪೌಷ್ಟಿಕವಾದ ಆಹಾರವನ್ನು ತೆಗೆದುಕೊಳ್ಳುವುದರ ಜೊತೆಗೆ ಸ್ವಚ್ಛತೆ ಹಾಗೂ ವ್ಯಾಯಾಮ ಅತ್ಯಂತ ಅಗತ್ಯವಾಗಿರುತ್ತದೆ ಎಂದು ತಿಳಿಸಿದರು. ಗರ್ಭಿಣಿಯರು ಪೌಷ್ಟಿಕಾಂಶವಾದ ಆಹಾರವನ್ನು ತೆಗೆದುಕೊಳ್ಳುವುದರಿಂದ ಎದೆಹಾಲಿನಲ್ಲಿ ಕೊರತೆ ಇರುವುದಿಲ್ಲ. ತಾಯಿಯ ಮಡಿಲು ಎಂಬ ಕಾರ್ಯಕ್ರಮದ ಅಡಿಯಲ್ಲಿ ರೋಟರಿ ಸಂಸ್ಥೆಯು ಹಲವಾರು ಕಾರ್ಯಕ್ರಮಗಳನ್ನು ಮತ್ತು ಜಾಗೃತಿ ಶಿಬಿರಗಳನ್ನು ಆಯೋಜನೆ ಮಾಡುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ವಲಯ ಸೇನಾನಿ ಕಿರಣ್ ಕುಮಾರ್ ಜಿ ಮಾತನಾಡಿ,  ರೋಟರಿ ಸಂಸ್ಥೆಯು ಅನೇಕ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಆರೋಗ್ಯಕರ ಸಮಾಜದ ನಿರ್ಮಾಣಕ್ಕಾಗಿ ನಿಸ್ವಾರ್ಥವಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯದರ್ಶಿ ಜಯಶೀಲಶೆಟ್ಟಿ, ಬಲರಾಮ್, ಧರ್ಮೇಂದ್ರ ಸಿಂಗ್, ಈಶ್ವರ್ ಬಿವಿ, ಮೋಹನ್, ರಾಜೇಶ್ವರಿ ಸಿಂಗ್ ಹಾಗೂ ಸರ್ಕಾರಿ ...

ಪರಿಸರ ಸಂರಕ್ಷಣೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಿ

ಇಮೇಜ್
ಶಿವಮೊಗ್ಗ : ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಂಡು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಬೆಂಗಳೂರಿನ ಉದ್ಯಮಿ ಹಾಗೂ ರೋಟರಿ ಜಿಲ್ಲೆ 3192ರ ನಿಯೋಜಿತ ಜಿಲ್ಲಾ ಗವರ್ನರ್ ರವಿಶಂಕರ್ ದಾಕೋಜು ಹೇಳಿದರು. ರೋಟರಿ ಸಂಸ್ಥೆಗೆ 100 ಕೋಟಿ ರೂ. ದಾನ ಮಾಡಿರುವ ಹಿನ್ನೆಲೆಯಲ್ಲಿ ರೋಟರಿ ಸಮೃದ್ಧಿ ಕಾರ್ಯಾಗಾರ, ದತ್ತಿನಿಧಿ ಸಮಾವೇಶದಲ್ಲಿ ಸದಸ್ಯರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಹವಾಮಾನ ವೈಪರೀತ್ಯದಿಂದ ಮಾನವನ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ನಮ್ಮ ಮುಂದಿನ ಪೀಳಿಗೆ ಅನುಭವಿಸದಿರಲಿ ಎಂಬ ಸದುದ್ದೇಶದಿಂದ ಕೆರೆಗಳ ಪುನರುಜ್ಜೀವನ ಮತ್ತು ಲಕ್ಷಾಂತರ ಸಸಿಗಳನ್ನು ನೆಡುವುದರ ಮುಖಾಂತರ ಬರಡು ಭೂಮಿಯನ್ನು ಸಮೃದ್ಧ ಕಾಡನ್ನಾಗಿ ಪರಿವರ್ತಿಸಲು ರೋಟರಿ ಸಂಸ್ಥೆ ಜೊತೆಗೆ ಕೈಜೋಡಿಸಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು. ಮುಂದಿನ ಪೀಳಿಗೆ ತಾವು ಮಾಡದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸಬಾರದು. ಆದ್ದರಿಂದ ಪ್ರತಿಯೊಬ್ಬರು. ಪರಿಸರ ಸಂರಕ್ಷಣೆಯಲ್ಲಿ ಪ್ರಾಮಾಣಿಕವಾಗಿ ಕೈಜೋಡಿಸಬೇಕು ಎಂದು ಹೇಳಿದರು. ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಡಿ.ಕಿಶೋರ್ ಕುಮಾರ್, ಕಾರ್ಯದರ್ಶಿ ಡಾ. ಧನಂಜಯ ರಾಂಪುರ, ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ, ಸಮಾವೇಶದ ಅಧ್ಯಕ್ಷ ಚಂದ್ರಹಾಸ್ ಪಿ ರಾಯ್ಕರ್, ಮಾಜಿ ಜಿಲ್ಲಾ ಗವರ್ನರ್ ಸಾಂಬಶಿವ ರಾವ್ ಪತಿಬಂದ್ಲ, ಡಾ. ನಾರಾಯಣ್, ಡಾ. ವಿನಯಕುಮಾರ್, ರಾಜಾರಾಮ್ ಭಟ್ ಬಿ,  ಡಿ.ಎಸ್.ರವಿ,...

ಕೇಂದ್ರ ಸಚಿವರಿಗೆ ಎಚ್‌ಡಿಕೆಗೆ ಐಐಎಫ್‌ನಿಂದ ಜ್ಞಾಪನಾ ಪತ್ರ

ಇಮೇಜ್
ಶಿವಮೊಗ್ಗ: ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಕೇಂದ್ರ ಉಕ್ಕು ಕೈಗಾರಿಕೆಗಳ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ದಿ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ವತಿಯಿಂದ ಜ್ಞಾಪನ ಪತ್ರ ಸಲ್ಲಿಸಲಾಯಿತು. ಬಿ2ಬಿ ವಹಿವಾಟುಗಳ ಅಡಿಯಲ್ಲಿ ಸರಬರಾಜು ಮಾಡಲಾದ ಎರಕಹೊಯ್ದ ಕಬ್ಬಿಣದ ಗುಣಮಟ್ಟ ನಿಯಂತ್ರಣ ಆದೇಶದಿಂದ (ಕ್ಯೂಸಿಒ) ವಿನಾಯಿತಿ ನೀಡುವ ಬಗ್ಗೆ ಜ್ಞಾಪನ ಪತ್ರವನ್ನು ಹಸ್ತಾಂತರಿಸಿ ಮನವಿ ಮಾಡಿದರು. ಇತ್ತೀಚಿನ ಕೇಂದ್ರ ಸರ್ಕಾರದ (ಕ್ಯೂಸಿಒ) ನೀತಿಯಿಂದ ಎಂಎಸ್‌ಎಂಇ ಫೌಂಡ್ರಿ ಕೈಗಾರಿಕೆಗಳಿಗೆ ಆಗುತ್ತಿರುವ ತೊಂದರೆ, ಬಿಐಎಸ್ ಅಧಿಕಾರಿಗಳಿಂದ ಕಿರುಕುಳ, ರೆಡ್ ಟೇಪಿಸಂ, ಅಸಮರ್ಪಕ ವಿಳಂಬ, ಆರ್ಥಿಕ ಹೊರೆ, ಅಗತ್ಯ ಪರೀಕ್ಷಾ ಸೌಲಭ್ಯಗಳ ಕೊರತೆ, ವ್ಯಾಪಾರ ನಷ್ಟ ಇತ್ಯಾದಿ ಪರಿಣಾಮಗಳ ಬಗ್ಗೆ ಮನವರಿಕೆ ಮಾಡಲಾಯಿತು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ವಿಷಯದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕೈಗಾರಿಕೆಗಳಿಗೆ ಅನುಕೂಲವಾಗುವಂತೆ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಐಐಎಫ್ ಮಾಜಿ ಅಧ್ಯಕ್ಷ ಡಿ.ಎಸ್.ಚಂದ್ರಶೇಖರ್, ಖಜಾಂಚಿ ಮುತ್ತುಕುಮಾರ್, ಐಐಎಫ್‌ನ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಪಳನಿಮುರುಗನ್, ಐಐಎಫ್‌ನ ದಕ್ಷಿಣ ಪ್ರಾಂತ್ಯ ಮಾಜಿ ಅಧ್ಯಕ್ಷ ಡಿ.ಜಿ.ಬೆನಕಪ್ಪ, ಐಐಎಫ್ ಕೊಯಮತ್ತೂರು ಅಧ್ಯಾಯದ ಅಧ್ಯಕ್ಷ ವೇಲುಸಾಮಿ, ಐಐಎಫ್ ಸದಸ್ಯ ಸೆಂಥಿಲ್ ಕುಮಾರ್, ಜೆಡಿಎಸ್ ಶಿವಮೊಗ್ಗ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ...

ಕನಕ (ತಿಮ್ಮಪ್ಪ ನಾಯಕ) ಜಯಂತಿ

ಇಮೇಜ್
 ಕನಕ ದಾಸರು (ತಿಮ್ಮಪ್ಪ ನಾಯಕ) ಕರ್ನಾಟಕದ ಒಬ್ಬ ಪ್ರಮುಖ ಹರಿದಾಸರು, ಸಂತ ಕವಿ, ತತ್ವಜ್ಞಾನಿ ಮತ್ತು ಸಮಾಜ ಸುಧಾರಕರು. ಅವರು ದಾಸ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಮತ್ತು ಅವರ ಕೀರ್ತನೆಗಳು ಹಾಗೂ ಉಗಾಭೋಗಗಳು ಕರ್ನಾಟಕ ಸಂಗೀತದ ಅವಿಭಾಜ್ಯ ಅಂಗವಾಗಿವೆ.  ಜೀವನ ಮತ್ತು ಹಿನ್ನೆಲೆ ಜನನ: ಕನಕದಾಸರು 1508 ಅಥವಾ 1509 ರಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲ್ಲೂಕಿನ ಬಾಡ ಎಂಬ ಹಳ್ಳಿಯಲ್ಲಿ ಜನಿಸಿದರು. ಪೋಷಕರು: ಇವರ ತಂದೆ ಬೀರಪ್ಪ ಮತ್ತು ತಾಯಿ ಬಚ್ಚಮ್ಮ ಮೂಲ ಹೆಸರು: ಅವರ ಮೂಲ ಹೆಸರು ತಿಮ್ಮಪ್ಪ ನಾಯಕ. ಅವರು ಬಾಡದ ಸ್ಥಳೀಯ ಮುಖ್ಯಸ್ಥರಾಗಿದ್ದರು ಮತ್ತು ಯೋಧರಾಗಿಯೂ ಸೇವೆ ಸಲ್ಲಿಸಿದ್ದರು. ದಾಸರಾಗಿದ್ದು: ಒಂದು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ನಂತರ ಪವಾಡ ಸದೃಶವಾಗಿ ಗುಣಮುಖರಾದ ನಂತರ, ಅವರು ತಮ್ಮ ಲೌಕಿಕ ಜೀವನವನ್ನು ತ್ಯಜಿಸಿ ಆಧ್ಯಾತ್ಮಿಕ ಹಾದಿಯನ್ನು ಹಿಡಿದರು. ಗುರುಗಳು: ಅವರು ಪ್ರಸಿದ್ಧ ವಿದ್ವಾಂಸ ಮತ್ತು ಸಂತ ವ್ಯಾಸತೀರ್ಥರ ಶಿಷ್ಯರಾದರು ಮತ್ತು ಕನಕ ದಾಸ ಎಂಬ ಹೆಸರನ್ನು ಪಡೆದರು.  •ಸಾಹಿತ್ಯ ಕೃತಿಗಳು ಕನಕದಾಸರು ತಮ್ಮ ಕೃತಿಗಳಲ್ಲಿ ಸರಳವಾದ ಕನ್ನಡ ಭಾಷೆಯನ್ನು ಬಳಸಿದ್ದಾರೆ ಮತ್ತು ಭಕ್ತಿ, ಸಾಮಾಜಿಕ ಸಮಾನತೆ ಹಾಗೂ ನೈತಿಕ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ. ಅವರ ಪ್ರಮುಖ ಕೃತಿಗಳು:  ಮೋಹನತರಂಗಿಣಿ ನಳಚರಿತ್ರೆ ರಾಮಧಾನ್ಯ ಚರಿತೆ ಹರಿಭಕ್ತಿಸಾರ  ಇದಲ್ಲದೆ, ಅವರು ಹಲವಾರು ಕೀ...

ಸಮಾಜಕ್ಕೆ ಪ್ರೇರಣೆಯಾಗಿರುವ ಸೇವಾಸಂಸ್ಥೆ ರೋಟರಿ

ಇಮೇಜ್
ಶಿವಮೊಗ್ಗ: ಸೇವಾ ಮನೋಭಾವ ಬೆಳೆಸುವಲ್ಲಿ ರೋಟರಿ ಸಂಸ್ಥೆಯು ಸಮಾಜಕ್ಕೆ ಪ್ರೇರಣೆಯಾಗಿದೆ. ಸೇವೆ ಎಂಬುದು ಯಾವುದೇ ಅಪೇಕ್ಷೆ ಇಲ್ಲದೆ ಅಗತ್ಯ ಇರುವವರಿಗೆ ಸಹಕಾರ ನೀಡುವುದಾಗಿದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಬಸವರಾಜ್ ಬಿ ಹೇಳಿದರು. ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ವಿನೋಬನಗರದ ಸರ್ಕಾರಿ ಪ್ರೌಢಶಾಲೆಗೆ ಉಚಿತವಾಗಿ ಕಲರ್ ಪ್ರಿಂಟರ್ ಕೊಡುಗೆ ನೀಡಿ ಮಾತನಾಡಿ, ಸೇವಾ ಸಂಸ್ಥೆಗಳಲ್ಲಿ ರೋಟರಿ ಸಂಸ್ಥೆ ವಿಶ್ವದಲ್ಲಿ ಅತ್ಯಂತ ದೊಡ್ಡ ಸಂಸ್ಥೆಯಾಗಿದೆ. ಈ ಸಂಸ್ಥೆಯಲ್ಲಿರುವ ಎಲ್ಲ ಸದಸ್ಯರು ದಾನಿಗಳೇ ಎಂದು ತಿಳಿಸಿದರು. ಜಿಲ್ಲಾ ಕಾರ್ಯಕ್ರಮ ಶಿಕ್ಷಣದ ಅಡಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಗ್ರಾಮಾಂತರ ಪ್ರದೇಶದಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಸಂಸ್ಥೆಯ ಸಹಕಾರವನ್ನು ನೀಡುತ್ತ ಬರುತ್ತಿದ್ದೇವೆ. ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಯು ಹಗಲಿರುಳು ಶ್ರಮಿಸುತ್ತಿದೆ. ಈ ಸೇವಾ ಮನೋಭಾವವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮುಂದಿನ ದಿನಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲೆಯ ಮುಖ್ಯ ಉಪಾಧ್ಯಾಯಿನಿ ಶಕುಂತಲಾ ಮಾತನಾಡಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನಿಸ್ವಾರ್ಥ ಸೇವೆಯ ಬಗ್ಗೆ ಪ್ರಶಂಶಿಸಿದರು. ಈ ಸಂಸ್ಥೆಯು 16 ವರ್ಷದಿಂದ ಶಾಲೆಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಅವರ ಸಂಸ್ಥೆಗೆ...

ಮಕ್ಕಳಲ್ಲಿ ಸಮಾಜಮುಖಿ ಸೇವಾ ಮನೋಭಾವ ಬೆಳೆಸಿ

ಇಮೇಜ್
ಶಿವಮೊಗ್ಗ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಯಲ್ಲಿ ಸಮಾಜಮುಖಿ ಸೇವಾ ಮನೋಭಾವವನ್ನು ಬಾಲ್ಯದಿಂದಲೇ ಬೆಳೆಸಬೇಕು ಎಂದು ಗುಡ್ ಲಕ್ ಆರೈಕೆ ಕೇಂದ್ರದ ಅಧ್ಯಕ್ಷ, ರೋಟರಿ ಮಾಜಿ ಸಹಾಯಕ ಗವರ್ನರ್ ಯು.ರವೀಂದ್ರನಾಥ್ ಐತಾಳ್ ಹೇಳಿದರು. ಗುಡ್ ಲಕ್ ಆರೈಕೆ ಕೇಂದ್ರದಲ್ಲಿ ಜ್ಞಾನದೀಪ ಶಾಲೆಯ ಮಕ್ಕಳಿಂದ ಪ್ಲಾಸ್ಟಿಕ್ ಮುಕ್ತ ಹಾಗೂ ಸ್ವಚ್ಛತಾ ಕಾರ್ಯಕ್ರಮ ಮತ್ತು ಗುಡ್ ಲಕ್ ಆರೈಕೆ ಕೇಂದ್ರದ ಆಶ್ರಮವಾಸಿಗಳ ಜೊತೆಗೆ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಪರಿಪೂರ್ಣತೆಯನ್ನು ಹೊಂದಬೇಕಾದರೆ ಇಂತಹ ಹಲವಾರು ಆಶ್ರಮಗಳಿಗೆ ಭೇಟಿ ನೀಡಿ ಅವರ ಬದುಕು ಸಾಧನೆ ಮತ್ತು ಅವರ ಸಂಕಷ್ಟದಲ್ಲಿ ಪಾಲ್ಗೊಳ್ಳುವುದರಿಂದ ನಮಗೆ ಪುಣ್ಯ ಲಭಿಸುತ್ತದೆ ಇದರಿಂದ ಹಲವಾರು ವಿದ್ಯಾರ್ಥಿಗಳ ಮನೋಸ್ಥಿತಿ ಬದಲಾವಣೆ ಆಗುತ್ತದೆ. ಸ್ವಚ್ಛತೆ ನಮ್ಮ ದಿನನಿತ್ಯದ ಅವಿಭಾಜ್ಯ ಅಂಗವಾಗಬೇಕು. ಮಕ್ಕಳು ಪ್ಲಾಸ್ಟಿಕ್ ಮುಕ್ತ ಹಾಗೂ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದರು. ಜ್ಞಾನದೀಪ ಶಾಲೆಯಿಂದ ಗುಡ್ ಲಕ್ ಆರೈಕೆ ಕೇಂದ್ರಕ್ಕೆ 10 ಫ್ಯಾನ್ ಹಾಗೂ ಧ್ವನಿವರ್ಧಕ ಮತ್ತು ಹಲವಾರು ಅಗತ್ಯ ಸಾಮಗ್ರಿಗಳನ್ನು ನೀಡಿರುತ್ತಾರೆ ಇವರ ಸೇವೆ ಅನನ್ಯ ಎಂದು ಸ್ಮರಿಸಿದರು. ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಮಕ್ಕಳಿಗೆ ಸಮಾಜದ ಸ್ಥಿತಿಗತಿಗಳು ಹಾಗೂ ವೃದ್ಧರು ಮತ್ತು ಅಶಕ್ತರ ಅರಿವು ಅವರ ಕಷ್ಟಗಳ...

ಮಕ್ಕಳಲ್ಲಿ ಶಿಸ್ತು ಬೆಳೆಸುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ

ಇಮೇಜ್
ಶಿವಮೊಗ್ಗ: ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಶಿಸ್ತಿನ ಸಂಸ್ಥೆಯಾಗಿದ್ದು, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸುತ್ತಿರುವ ಸಂಸ್ಥೆಯಾಗಿದೆ ಎಂದು ಜಿಲ್ಲಾಧಿಕಾರಿ   ಹಾಗೂ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ನ  ಜಿಲ್ಲಾ ಸಂಸ್ಥೆಯ ಅಧ್ಯಕ್ಷರು ಗುರುದತ್ ಹೆಗಡೆ ಹೇಳಿದರು. ಜಿಲ್ಲಾಧಿಕಾರಿಗಳ ಆವರಣದಲ್ಲಿ  ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ಧ್ವಜ ಚೀಟಿ ಬಿಡುಗಡೆಗೊಳಿಸಿ ಮಾತನಾಡಿ, ಸಂಸ್ಥೆಯು ಅನೇಕ ರೀತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎತ್ತರಕ್ಕೆ ಬೆಳೆಯುತ್ತಿದ್ದು, ಅದರ ಬೆಳವಣಿಗೆಗೆ ನಾವೆಲ್ಲರೂ ಕೈ ಜೋಡಿಸೋಣ, ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ ಎಂದು ತಿಳಿಸಿದರು. ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ನ ಜಿಲ್ಲಾ ಪ್ರಧಾನ ಆಯುಕ್ತರಾದ ಶಕುಂತಲಾ ಚಂದ್ರಶೇಖರ್ ಮಾತನಾಡುತ್ತಾ  ಸಂಸ್ಥಾಪನಾ ದಿನಾಚರಣೆ ಮಹತ್ವವನ್ನು ತಿಳಿಸುತ್ತ ಸ್ಕೌಟ್ಸ್ ಇತಿಹಾಸದ ಬಗ್ಗೆ ವಿವರಿಸಿದರು. ಭಾರತದಲ್ಲಿ ಸ್ಕೌಟಿಂಗ್ ಗೈಡಿಂಗ್ ಬೆಳೆದು ಬಂದ ದಾರಿ ತಿಳಿಸಿ ಭಾರತಕ್ಕೆ ಸ್ವಾತಂತ್ರ್ಯ ಬರುವ ಮುನ್ನ ನ್ಯಾಷನಲ್ ಸ್ಕೌಟ್ ಅಸೋಸಿಯೇಷನ್, ಹಿಂದೂಸ್ತಾನ ಸ್ಕೌಟ್ಸ್ ಅಸೋಸಿಯೇಷನ್, ಗರ್ಲ್ ಗೈಡ್ ಅಸೋಸಿಯೇಷನ್ ಹೀಗೆ ಅನೇಕ ಸಂಘಟನೆಗಳಿದ್ದು, ಇವೆಲ್ಲವನ್ನು ಒಂದುಗೂಡಿ ಒಂದೇ ಸಂಘಟನೆ ಆಗಬೇಕೆಂದು ನಿರ್ಧರಿಸಿ ಪ್ರತಿಫಲವಾಗಿ 1950 ನವೆಂಬರ್ 7 ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಅಸ್ತಿತ್...

Congrats madam, Alejandra Castillo has been officially announced as the 2026 JCI (Junior Chamber International) World President,

ಇಮೇಜ್
     According to working JCI sources, Castillo was chosen with full support, reflecting the “new era of leadership that can be used.” Her identity has been closely observed in JCI history for many years — she was JCI Treasurer in 2025.      At this time, the significance of the JCI global event has increased, as the 2026 JCI World Conference is scheduled to be held in Clark, Pampanga, Philippines, from November 11–15.      Castillo’s election to the presidency provides opportunities to further promote the spirit of youth, especially in terms of women’s leadership and global leadership in JCI. Her appointment signals a new nurturing of JCI’s vision and social service goals.  - Alejandra Castillo — 2026 JCI World President (Bolivia)  - 2026 JCI World Congress: November 11–15, Clark, Philippines  Greetings from Chandradaya weekly magazine team  - JC Naveen Kumar NV (Naveen Talari)  Managing Editor, Chandrodaya Patr...

ಜೆಸಿಐಗೆ ಹೊಸ ಯುಗ ಆರಂಭವಾಗುತ್ತಿದೆ

ಇಮೇಜ್
       ಜೆಸಿಐ ಮರುಬ್ರಾಂಡಿಂಗ್ ಸಮಿತಿಯ ಅಧ್ಯಕ್ಷರಾಗಿ, ತಿಂಗಳುಗಳ ಚಿಂತನಶೀಲ ಸಂವಾದ, ಸೃಜನಶೀಲ ಪರಿಶೋಧನೆ ಮತ್ತು ಸಹಯೋಗದ ನಂತರ, ಹೊಸ ಜೆಸಿಐ ಲೋಗೋವನ್ನು ಇಂದು ಟುನೀಶಿಯಾದಲ್ಲಿ ನಡೆದ ಸಾಮಾನ್ಯ ಸಭೆಯು ಅಧಿಕೃತವಾಗಿ ಅಂಗೀಕರಿಸಿದೆ ಎಂದು ಹಂಚಿಕೊಳ್ಳಲು ನನಗೆ ತುಂಬಾ ಗೌರವವಾಗಿದೆ. ಈ ಹೊಸ ಗುರುತು ದೃಶ್ಯ ಬದಲಾವಣೆಗಿಂತ ಹೆಚ್ಚಿನದಾಗಿದೆ. ಇದು ನಾವು ಯಾರೆಂಬುದರ ಸಾರವನ್ನು ಪ್ರತಿಬಿಂಬಿಸುತ್ತದೆ : • ಗುರಾಣಿ ನಮ್ಮ ಪರಂಪರೆ ಮತ್ತು ಮೌಲ್ಯಗಳನ್ನು ಗೌರವಿಸುತ್ತದೆ. • ಏರಿಳಿತದ ಪರಿಣಾಮವು ನಮ್ಮ ಪ್ರಭಾವ ಮತ್ತು ವೈಯಕ್ತಿಕ ಅಭಿವೃದ್ಧಿಯನ್ನು ಪ್ರತಿನಿಧಿಸುತ್ತದೆ. • ಜೆಸಿಐ ಎಂಬ ಸಂಕ್ಷಿಪ್ತ ರೂಪವು ನಮ್ಮ ಚಳುವಳಿಯ ಕೇಂದ್ರದಲ್ಲಿ ಹೆಮ್ಮೆಯಿಂದ ನಿಂತಿದೆ. • ಮತ್ತು ನಾಲ್ಕು ಅಂಶಗಳು ನಮ್ಮ ನಾಲ್ಕು ಪ್ರದೇಶಗಳು ಮತ್ತು ಅವಕಾಶದ ನಾಲ್ಕು ಕ್ಷೇತ್ರಗಳನ್ನು ಸಂಕೇತಿಸುತ್ತವೆ.        ಒಟ್ಟಾಗಿ, ಇವು ನಮ್ಮ ಹಂಚಿಕೆಯ ಉದ್ದೇಶದ ಆಧುನಿಕ, ಏಕೀಕೃತ ಲಾಂಛನವನ್ನು ರೂಪಿಸುತ್ತವೆ - ಬದಲಾಗುತ್ತಿರುವ ಜಗತ್ತಿಗೆ ನಾಯಕರನ್ನು ಅಭಿವೃದ್ಧಿಪಡಿಸುವುದು.         ಈ ಮೈಲಿಗಲ್ಲನ್ನು ಅಳವಡಿಸಿಕೊಳ್ಳಲು ಒಟ್ಟಾಗಿ ಬಂದ ಎಲ್ಲಾ ರಾಷ್ಟ್ರೀಯ ಅಧ್ಯಕ್ಷರಿಗೆ ಮತ್ತು ಈ ವಿಕಾಸವನ್ನು ಹೆಮ್ಮೆಯಿಂದ ಸ್ವೀಕರಿಸಿದ್ದಕ್ಕಾಗಿ ವಿಶ್ವಾದ್ಯಂತ ನಮ್ಮ ಸದಸ್ಯರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ...

ಅಲೆಹಾಂದ್ರಾ ಕ್ಯಾಸ್ಟಿಲೋ ಅವರನ್ನು ಅಧಿಕೃತವಾಗಿ 2026ರ ಜೆಸಿಐ (ಜೂನಿಯರ್ ಚೇಂಬರ್ ಇಂಟರ್‌ನ್ಯಾಷನಲ್) ವಿಶ್ವಾದ್ಯಕ್ಷರಾಗಿ ಘೋಷಿಸಲಾಗಿದೆ,

ಇಮೇಜ್
  ಕಾರ್ಯನಿರತ ಜೆಸಿಐ ಮೂಲಗಳ ಪ್ರಕಾರ, ಕ್ಯಾಸ್ಟಿಲೋ ಅವರು ಸಂಪೂರ್ಣ ಬೆಂಬಲದೊಂದಿಗೆ ಆಯ್ಕೆಗೊಂಡಿದ್ದು, “ಬಳಕೆಮಾಡಲು ಸಾಧ್ಯವಿರುವ ಹೊಸ ಆವೃತ್ತಿಯ ನಾಯಕತ್ವ” ಎಂಬ ಸಂಧಿಯನ್ನು ಪ್ರತಿಬಿಂಬಿಸುತ್ತಾರೆ. ಅವರ ಗುರುತನ್ನು ಜೆಸಿಐ ದಿನಚರಿಯಲ್ಲಿ ಬಹುಸಾರವಾಗಿ ಹತ್ತಿರದಿಂದ ಗಮನಿಸಲಾಗಿದೆ — ಅವರು 2025 ರಲ್ಲಿ ಜೆಸಿಐ ಖಜಾಂಚಿಯಾಗಿದ್ದರು.       ಈ ಸಮಯದಲ್ಲಿ, ಜೆಸಿಐ ಜಾಗತಿಕ ಸಮಾರಂಭದ ಮಹತ್ವವು ಹೆಚ್ಚಾಗಿದೆ, ಏಕೆಂದರೆ 2026 ರ ಜೆಸಿಐ ವಿಶ್ವ ಸಮ್ಮೇಳನವನ್ನು ಫಿಲಿಪೈನ್ಸ್‌ನ ಕ್ಲಾರ್ಕ್, ಪಾಂಪಾಂಗಾ ನಗರದಲ್ಲಿ ನವೆಂಬರ್ 11–15 ರ ಮಧ್ಯದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.         ಕ್ಯಾಸ್ಟಿಲೋ ಅವರ ಅಧ್ಯಕ್ಷತೆಯ ಆಯ್ಕೆ, ವಿಶೇಷವಾಗಿ ಜೆಸಿಐ-ಯಲ್ಲಿ ಮಹಿಳಾ ನಾಯಕತ್ವ ಮತ್ತು ಜಾಗತಿಕ ಮುಖಂಡಿಕೆಯ ದೃಷ್ಟಿಯಿಂದ, ಯುವ ಚೇತನಿಯನ್ನು ಮತ್ತಷ್ಟು ಉತ್ತೇಜಿಸಲು ಸಾಧ್ಯತೆಗಳನ್ನು ಒದಗಿಸುತ್ತದೆ. ಇವರ ನೇಮಕವು ಜೆಸಿಐ ದೃಷ್ಟಿ ಮತ್ತು  ಸಾಮಾಜಿಕ ಸೇವಾ ಗುರಿ‌ಗಳಲ್ಲಿ ಹೊಸ ಪೋಷಣೆಯನ್ನು ಸಂಕೇತಿಸುತ್ತದೆ. - ಅಲೆಹಾಂದ್ರಾ ಕ್ಯಾಸ್ಟಿಲೋ — 2026ರ JCI ವಿಶ್ವಾಧ್ಯಕ್ಷ (ಬೊಲಿವಿಯಾ) - 2026 ಜೆಸಿಐ ವಿಶ್ವ ಸಮ್ಮೇಳನ : ನವೆಂಬರ್ 11–15, ಕ್ಲಾರ್ಕ್, ಫಿಲಿಪೈನ್ಸ್ ಚಂದ್ರೋದಯ ಪತ್ರಿಕೆ ಬಳಗದಿಂದ ಶುಭಾಶಯಗಳು - ಜೆಸಿ ನವೀನ್ ಕುಮಾರ್ ಎನ್ ವಿ (ನವೀನ್ ತಲಾರಿ) ವ್ಯವಸ್ಥಾಪಕ ಸಂಪಾದಕ, ಚಂದ್ರೋದಯ...

ಗ್ರಾಮೀಣ ಭಾಗದ ಶಾಲೆಗಳಿಗೆ ಮೂಲಸೌಕರ್ಯ ಅವಶ್ಯಕ

ಇಮೇಜ್
ಶಿವಮೊಗ್ಗ: ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲು ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಬಸವರಾಜ್ ಬಿ ಹೇಳಿದರು. ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಹಿಟ್ಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಕಲುಷಿತ ನೀರು ಕುಡಿಯುವುದನ್ನು ತಪ್ಪಿಸುವ ಉದ್ದೇಶದಿಂದ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನೀರಿನ ಶುದ್ಧೀಕರಣ ಯಂತ್ರವನ್ನು ಕೊಡುಗೆಯಾಗಿ ನೀಡುತ್ತಿದೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಮಕ್ಕಳ ಆರೋಗ್ಯ ರಕ್ಷಣೆಗೆ ರೋಟರಿ ಸಂಸ್ಥೆಯು ಮುಂದಾಗಿದೆ ಎಂದು ತಿಳಿಸಿದರು. ಜೀವಿತ ಅವಧಿಯಲ್ಲಿ ಮನುಷ್ಯ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ನಾವು ಮಾಡಿದ ಒಳ್ಳೆಯ ಕೆಲಸಗಳನ್ನು ಜನರು ಸದಾ ನೆನಪಿಸಿಕೊಳ್ಳುತ್ತಾರೆ. ಸಮಾಜಮುಖಿ ಕಾರ್ಯಗಳಲ್ಲಿ ಎಲ್ಲರೂ ಭಾಗಿಯಾಗಬೇಕು. ರೋಟರಿ ಸಂಸ್ಥೆಯು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವಾಗಿ ವಿಶೇಷವಾಗಿ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದರು. ನೀರಿನ ಯಂತ್ರವನ್ನು ಎನ್.ರಮೇಶ್ ಮತ್ತು ಜೆ.ಪಿ.ಚಂದ್ರು ಕೊಡುಗೆಯಾಗಿ ನೀಡಿದ್ದಾರೆ. ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ರಾಜು  ಸಭೆಯಲ್ಲಿ ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕರು ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ರೋಟರಿ ಕ್ಲಬ್ ವಲಯ ಸೇನಾನಿ ಕಿರಣ್...

ರೋಟರಿ ಪೂರ್ವ ಸಾರಥ್ಯದಲ್ಲಿ ಸಮೃದ್ಧಿ‌ 2025 ಕಾರ್ಯಾಗಾರ

ಇಮೇಜ್
         ಶಿವಮೊಗ್ಗ: ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ಸಾರಥ್ಯದಲ್ಲಿ ನಗರದ ಶಿವಮೊಗ್ಗ ಅರೆಕಾನಟ್ ಮರ್ಚೆಂಟ್ಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನ. 8 ಮತ್ತು  9 ರಂದು ರೋಟರಿ ದತ್ತಿನಿಧಿ ಮತ್ತು ಪೊಲಿಯೋ ಪ್ಲಸ್ ಕುರಿತ *ಸಮೃದ್ಧಿ 2025 ಕಾರ್ಯಾಗಾರ* ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶದ ಅಧ್ಯಕ್ಷ ಚಂದ್ರಹಾಸ್ ಪಿ ರಾಯ್ಕರ್ ಹೇಳಿದರು.       ರೋಟರಿ ಜಿಲ್ಲೆ 3182ರ ವ್ಯಾಪ್ತಿಯ ‌ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಮತ್ತು ಹಾಸನ ಒಳಗೊಂಡು ಸಮೃದ್ಧಿ 2025 ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ನಾಲ್ಕು ಜಿಲ್ಲೆಗಳಿಂದ 700ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಳ್ಳುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.     ನವೆಂಬರ್ 8ರಂದು ಸಂಜೆ 5.30ಕ್ಕೆ ನಿಯೋಜಿತ ಜಿಲ್ಲಾ ಗವರ್ನರ್ ರವಿಶಂಕರ್ ದಾಕೋಜು ಕಾರ್ಯಾಗಾರ ಉದ್ಘಾಟಿಸುವರು. ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ಅಧ್ಯಕ್ಷತೆ ವಹಿಸುವರು. ಮಾಜಿ ಜಿಲ್ಲಾ ಗವರ್ನರ್ ಸಾಂಬಶಿವ ರಾವ್ ಪತಿಬಂದ್ಲ, ರಾಜಾರಾಮ್ ಭಟ್ ಬಿ,  ಡಿ.ಎಸ್.ರವಿ,  ಬಿ.ಎನ್.ರಮೇಶ್, ನಿಯೋಜಿತ ಜಿಲ್ಲಾ ಗವರ್ನರ್ ಬಿ.ಎಂ.ಭಟ್,  ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ವಲಯ  11ರ ಸಹಾಯಕ ‌ಗವರ್ನರ್ ಲಕ್ಷ್ಮಣಗೌಡ ಬಿ, ವಲಯ 10ರ ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ ಮುಖ್ಯ ಅತಿಥಿಗಳಾಗಿ ‌ಪಾಲ್ಗೊಳ್ಳುವರು ಎಂದರು.   ...

ಸರ್ಕಾರಿ ಪತ್ರಿಕಾ ಭವನ ವಿಷಯದಲ್ಲಿ ಧ್ವನಿ ಸಂಘದ ಆಕ್ರೋಶ – ನ. 20ರಂದು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ

ಇಮೇಜ್
ಶಿವಮೊಗ್ಗ: ಸರ್ಕಾರಿ ಪತ್ರಿಕಾ ಭವನದ ಹಕ್ಕು, ನಾಮಫಲಕ ಮತ್ತು ಆಡಳಿತ ಸಂಬಂಧಿಸಿದ ಗೊಂದಲಗಳ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ (ರಿ.), ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ನ.20ರಂದು ಬೆಳಿಗ್ಗೆ 11 ಗಂಟೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ. ಈ ಕುರಿತು ಗುರುವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಜಿ. ನಾಗರಾಜ ಮಾತನಾಡಿ, “ಶಿವಮೊಗ್ಗದ ಆರ್.ಟಿ.ಓ. ರಸ್ತೆಯಲ್ಲಿರುವ ಪತ್ರಿಕಾ ಭವನವು ಸರ್ಕಾರದ ಅನುದಾನ ಮತ್ತು ಜನಪ್ರತಿನಿಧಿಗಳ ನೆರವಿನಿಂದ ನಿರ್ಮಿತವಾದ ಸರ್ಕಾರದ ಪತ್ರಿಕಾ ಭವನವಾಗಿದೆ. ಆದರೆ ಜಿಲ್ಲಾಡಳಿತ ‘ಸರ್ಕಾರಿ ಪತ್ರಿಕಾ ಭವನ’ ಎಂದು ನಾಮಫಲಕ ಅಳವಡಿಸಲು ಹಿಂಜರಿಯುತ್ತಿದ್ದು, ಖಾಸಗಿ ಟ್ರಸ್ಟ್ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ತೋರಿಸುತ್ತಿದೆ,” ಎಂದು ಆರೋಪಿಸಿದರು. ಸರ್ಕಾರದ ಒಡೆತನದ ಕಟ್ಟಡವನ್ನು ಖಾಸಗಿ ಟ್ರಸ್ಟ್ —  ಪ್ರೆಸ್ ಟ್ರಸ್ಟ್ — ತನ್ನ ಆಸ್ತಿಯಂತೆ ವರ್ತಿಸುತ್ತಿರುವುದಾಗಿ ಅವರು ಆರೋಪಿಸಿದರು. “ಟ್ರಸ್ಟ್ ಅಧ್ಯಕ್ಷ ಮತ್ತು ಕಾರ್ಯದರ್ಶಿ ಕಳೆದ ಹಲವು ವರ್ಷಗಳಿಂದ ಪ್ರೆಸ್ ಮೀಟ್ ಮತ್ತು ಪ್ರೆಸ್ ನೋಟುಗಳ ಹೆಸರಿನಲ್ಲಿ ಹಣ ವಸೂಲಿ ಮಾಡಿ ದುರುಪಯೋಗ ಮಾಡಿದ್ದಾರೆ. ಸುಮಾರು 60 ಲಕ್ಷಕ್ಕೂ ಹೆಚ್ಚು ಹಣದ ದುರ್ಬಳಕೆ ನಡೆದಿದ್ದು, ಇ...

ಮನಸ್ಸು, ದೇಹದ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ : ರೋಟರಿ ವಿಜಯ್ ಕುಮಾರ್

ಇಮೇಜ್
ಶಿವಮೊಗ್ಗ : ಮನಸ್ಸು ಮತ್ತು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು.       ಭಾವಸಾರ ವಿಜನ್ ಇಂಡಿಯಾ ವೈಭವ್ ಶಿವಮೊಗ್ಗ ಸಂಸ್ಥೆಯಿಂದ ನಗರದ ರೋಟರಿ ಮಿಡ್ ಟೌನ್ ಬ್ಲಡ್ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಸಭೆ ಕಾರ್ಯಕ್ರಮದಲ್ಲಿ 60ರ ನಂತರ ನಮ್ಮ ಜೀವನಶೈಲಿ ವಿಷಯ ಕುರಿತು ಮಾತನಾಡಿದರು.       60ರ ನಂತರ ಶರೀರದ ಶಕ್ತಿ ಕಡಿಮೆಯಾಗಬಹುದು. ಆದರೆ ಸರಿಯಾದ ಅಭ್ಯಾಸಗಳಿಂದ ನೀವು ಸಂತೋಷವಾಗಿ ಆರೋಗ್ಯವಾಗಿ ಬದುಕಬಹುದು. ಪೋಷಕಾಂಶ ತುಂಬಿದ ಆಹಾರ ಸೇವನೆ ಮಾಡಬೇಕು. ಹಣ್ಣು, ತರಕಾರಿ, ಸಂಪೂರ್ಣ ಧಾನ್ಯ, ಕಾಳು, ಹಾಲು ಸೇವಿಸಬೇಕು. ಸಾಕಷ್ಟು ನೀರು ಕುಡಿಯಬೇಕು ಎಂದು ತಿಳಿಸಿದರು.       ಪ್ರತಿ ದಿನ 30 ನಿಮಿಷ ವಾಕ್ ಅಥವಾ ಯೋಗ ಮಾಡುವುದು ಒಳ್ಳೆಯದು. ಹೃದಯದ ಆರೋಗ್ಯಕ್ಕೆ ಸರಿಯಾದ ವ್ಯಾಯಾಮ ಅಗತ್ಯ. ಪ್ರತಿದಿನ 7–8 ಗಂಟೆ ನಿದ್ರೆ ಮಾಡಬೇಕು. ನಿದ್ರೆ ಸರಿಯಾಗದಿದ್ದರೆ ಧ್ಯಾನ ಅಥವಾ ಲಘು ಪ್ರಾಣಾಯಾಮ ಪ್ರಯತ್ನಿಸಬೇಕು. ಧ್ಯಾನ, ಪಾಠ, ಸಂಗೀತ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ನಿಯಮಿತ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಹೇಳಿದರು.        ಭಾವಸಾರ ವಿಜನ್ ಇಂಡಿಯಾ ಕಾರ್ಯ ಮಂಡಳಿ ಸದಸ್ಯ ಶಾಂತಕುಮಾರ್ ಸಾಕ್ರೆ, ವಿಜಯಕುಮಾರ್ ಬೇದ್ರೆ ಅವರನ್ನು ಸನ...

ಚೌಲಿಹಳ್ಳಿಯ ಯುವಕ ಸಂದೀಪ ಎಲ್. ಅವರಿಗೆ ಕುವೆಂಪು ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ

ಇಮೇಜ್
ಬಡತನ ಅಡ್ಡಿಯಲ್ಲ, ದೃಢ ಸಂಕಲ್ಪವೇ ಯಶಸ್ಸಿನ ಸಿಡಿಲು ಶಿವಮೊಗ್ಗ: ಜೀವನೋಪಾಯಕ್ಕಾಗಿ ದಿನಗೂಲಿ ಕೆಲಸ ಮಾಡುತ್ತಿದ್ದ ಪೋಷಕರ ಕನಸಿಗೆ ಚಿಗುರೊಡೆಸಿದ ಚೌಲಿಹಳ್ಳಿ ಗ್ರಾಮದ ಯುವಕ ಸಂದೀಪ ಎಲ್., ಈಗ ಡಾಕ್ಟರೇಟ್ ಪದವಿಧರರ ಪಟ್ಟಕ್ಕೆ ಸೇರಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲೂಕಿನ ಸರಳ ಕುಟುಂಬದಿಂದ ಬಂದ ಸಂದೀಪ ಅವರು, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟದಿಂದ ಶಿಕ್ಷಣ ವಿಷಯದಲ್ಲಿ ಡಾಕ್ಟರ್ ಆಫ್ ಫಿಲಾಸಫಿ (Ph.D) ಪದವಿಗೆ ಅರ್ಹತೆ ಪಡೆದಿದ್ದಾರೆ. ಕೂಲಿ ಕಾರ್ಮಿಕರಾದ ಶ್ರೀ ಲೋಕೇಶ್ವರಪ್ಪ ಹಾಗೂ ಶ್ರೀಮತಿ ತಿಪ್ಪಮ್ಮ ದಂಪತಿಗಳ ಪುತ್ರನಾದ ಸಂದೀಪ ಅವರು ಬಡತನದ ನಡುವೆಯೂ ಕನಸು ಬಿಟ್ಟುಬಿಡದೆ, ದುಡಿಮೆ, ಕಠಿಣ ಪರಿಶ್ರಮ ಮತ್ತು ಅಚಲ ಅಧ್ಯಯನ ಮನೋಭಾವದ ಮೂಲಕ ಈ ಮಹತ್ವದ ಸಾಧನೆ ಮಾಡಿದ್ದಾರೆ. ಅವರು “ಶಿಕ್ಷಕರ ಶಿಕ್ಷಣ ಸಂಸ್ಥೆಗಳ ಸಾಂಸ್ಥಿಕ ವಾತಾವರಣ, ಪ್ರಶಿಕ್ಷಕರ ವೃತ್ತಿ ನೈತಿಕತೆ ಮತ್ತು ಪ್ರಶಿಕ್ಷಕರ-ಪ್ರಶಿಕ್ಷಣಾರ್ಥಿಗಳ ಶೈಕ್ಷಣಿಕ ಸಂಬಂಧಗಳ ಅಧ್ಯಯನ” ಎಂಬ ಗಂಭೀರ ಅಕಾಡೆಮಿಕ್ ವಿಷಯದ ಮೇಲೆ ಸಂಶೋಧನೆ ನಡೆಸಿ ಪಿಎಚ್.ಡಿ ಪದವಿಗೆ ಅರ್ಹತೆ ಪಡೆದಿದ್ದಾರೆ. ಈ ಸಂಶೋಧನೆಗೆ ಕುವೆಂಪು ವಿಶ್ವವಿದ್ಯಾಲಯದ ಖ್ಯಾತ ಶಿಕ್ಷಣಶಾಸ್ತ್ರ ತಜ್ಞ ಪ್ರೊ. ಜಗನ್ನಾಥ್ ಕೆ. ಡಾಂಗೆ ಅವರು ಮಾರ್ಗದರ್ಶಕರಾಗಿದ್ದರು. “ ವಿದ್ಯೆ ಎಂದರೆ ಸಂಪತ್ತು; ಬಡತನ ಎಂದರೆ ಅಡ್ಡಿ ಅಲ್ಲ ” ಎಂಬ ನಂಬಿಕೆಯನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದ ಸಂದೀಪ ಅವರ ...

ಮಹಾತ್ಮ ಗಾಂಧೀಜಿ ಜೀವನ ಆದರ್ಶಗಳು ಇಂದಿಗೂ ಪ್ರಸ್ತುತ

ಇಮೇಜ್
ಶಿವಮೊಗ್ಗ: ಮಹಾತ್ಮ ಗಾಂಧೀಜಿ ಅವರ ಸರ್ವೋದಯ ತತ್ವಶಾಸ್ತ್ರ ಮತ್ತು ಅದರ ತತ್ವಗಳು ಇಂದಿಗೂ ಪ್ರಸ್ತುತ ಎಂದು ಹಾರನಹಳ್ಳಿಯ ಗ್ರಾಮಾಂತರ ವಿದ್ಯಾಭಿವೃದ್ಧಿ ಸಂಸ್ಥೆಯ ಕಾಲೇಜಿನ ಪ್ರಾಂಶುಪಾಲ ಕೆ.ಬಿ.ಸಂತೋಷ್ ಹೇಳಿದರು.         ಮಹಾತ್ಮ ಗಾಂಧೀಜಿ ಅವರ ಮಾಸ ಪ್ರಯುಕ್ತ ರಾಜ್ಯ ಸರ್ವೋದಯ ಮಂಡಳಿಯಿಂದ ಹಾರನಹಳ್ಳಿ ಗ್ರಾಮಾಂತರ ವಿದ್ಯಾಭಿವೃದ್ಧಿ ಸಂಸ್ಥೆಯ ಪ್ರೌಢಶಾಲೆ ಸಭಾಂಗಣದಲ್ಲಿ ಆಯೋಜಿಸಿದ್ದ ಗಾಂಧಿ ಚಿಂತನೆ  ಕುರಿತು ಜಾಗೃತಿ, ಸಂವಾದ, ಭಾಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.        ಗಾಂಧೀಜಿ ಅವರ ಸರಳತೆ, ಉನ್ನತ ನೈತಿಕ ಆದರ್ಶಗಳು, ಅವರ ವಿನಮ್ರತೆ, ಸಮಗ್ರತೆ ಮತ್ತು ದೂರದೃಷ್ಟಿಯ ನಾಯಕತ್ವಕ್ಕೆ ಹೆಸರುವಾಸಿಯಾಗಿದ್ದು, ಅವರ ಪರಂಪರೆ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಿದೆ ಎಂದು ತಿಳಿಸಿದರು.       ರಾಜ್ಯ ಸರ್ವೋದಯ ಮಂಡಳಿ ರಾಜ್ಯಾಧ್ಯಕ್ಷ ಡಾ. ಎಚ್.ಎಸ್.ಸುರೇಶ್ ಮಾತನಾಡಿ, ಸರ್ವೋದಯ ಎಂದರೆ ಎಲ್ಲರ ಪ್ರಗತಿ. ಸ್ವನಿರ್ಣಯ ಮತ್ತು ಸಮಾನತೆಯನ್ನು ಭಾರತದ ಎಲ್ಲ ಸಮಾಜದ ಎಲ್ಲ ಸ್ಥರವನ್ನು ತಲುಪುವಂತೆ ಮಾಡುವ ಧೇಯ ಹೊಂದಿರುವ ಸಂಸ್ಥೆಯಾಗಿದೆ ಎಂದು ಹೇಳಿದರು.       ಜಿಲ್ಲಾ ಸರ್ವೋದಯ ಮಂಡಳಿ ಅಧ್ಯಕ್ಷ ಮನೋಹರ್ ಮಾತನಾಡಿ, ಜಿಲ್ಲೆಯಲ್ಲಿ ನಮ್ಮ ಸರ್ವೋದಯ ಮಂಡಳಿಯಿಂದ ಗಾಂಧಿ ತತ್ವದ ಸರ್ವೋದಯ ಪ್ರೇರಿತ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊ...

ಮನೋಬಿಂಬ ಚಿತ್ರಕಲಾ ಸ್ಪರ್ಧೆ – 2025 : ಸೃಜನ ಶೀಲತೆಯ ಹೊಸ ರಂಗು

ಇಮೇಜ್
ಶಿವಮೊಗ್ಗ: ಯುವ ಪ್ರತಿಭೆಗಳಿಗೆ ತಮ್ಮ ಕಲಾತ್ಮಕ ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆ ಒದಗಿಸುವ ಉದ್ದೇಶದಿಂದ ವಿವೇಕ್ ಫೌಂಡೇಶನ್, ಜೆಸಿಐ ಶಿವಮೊಗ್ಗ ವಿವೇಕ್ ಇವರ ಸಹಯೋಗದಲ್ಲಿ “ಮನೋಬಿಂಬ ಚಿತ್ರಕಲಾ ಸ್ಪರ್ಧೆ – 2025” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.         ಈ ಸ್ಪರ್ಧೆ ನವೆಂಬರ್ 9, 2025 (ಭಾನುವಾರ) ದಂದು ಬೆಳಿಗ್ಗೆ 9.00 ರಿಂದ 11.00 ಗಂಟೆಯವರೆಗೆ, ಸ್ವಾಮಿ ವಿವೇಕಾನಂದ ಪಾರ್ಕ್, ಎಂಟನೇ ತಿರುವು, ಅಶ್ವಥ್ ನಗರ, ಶಿವಮೊಗ್ಗದಲ್ಲಿ ನಡೆಯಲಿದೆ. ವಯೋಮಾನದ ಪ್ರಕಾರ ವಿವಿಧ ತರಗತಿಗಳ ವಿದ್ಯಾರ್ಥಿಗಳಿಗೆ ವಿಭಿನ್ನ ವಿಷಯಗಳ ಮೇಲೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ: 🎨 ಶಿಶುವಿಹಾರ (ಎಲ್.ಕೆ.ಜಿ./ಯು.ಕೆ.ಜಿ.) – ವಿಷಯ: ಹೂವಿನೊಂದಿಗೆ ಚಿಟ್ಟೆ 🎨 1 ರಿಂದ 4ನೇ ತರಗತಿ – ವಿಷಯ: ನೆಚ್ಚಿನ ಸಾಕು ಪ್ರಾಣಿ 🎨 5 ರಿಂದ 7ನೇ ತರಗತಿ – ವಿಷಯ: ವನ್ಯ ಜೀವಿಗಳು 🎨 8 ರಿಂದ 10ನೇ ತರಗತಿ – ವಿಷಯ: ನನ್ನ ಕಲ್ಪನೆಯ ಉದ್ಯಾನವನ 🎨 ಪಿ.ಯು.ಸಿ. (ಪ್ರಥಮ-ದ್ವಿತೀಯ) – ವಿಷಯ: ಕರ್ನಾಟಕ ಪಶ್ಚಿಮ ಘಟ್ಟ (Lion-Tailed Macaque) 🎨 ಡಿಗ್ರಿ / ಬಿ.ಇಡ್. (ಪ್ರಥಮ ದ್ವಿತೀಯ ತೃತೀಯ) – ವಿಷಯ:  ಸುಂದರ ಪರಿಸರದ ಕರ್ನಾಟಕ ಐತಿಹಾಸಿಕ ಸ್ಥಳ          ಸ್ಪರ್ಧೆಯ ಫಲಿತಾಂಶವನ್ನು ಅದೇ ದಿನ ಮಧ್ಯಾಹ್ನ 12.30ಕ್ಕೆ ಪ್ರಕಟಿಸಲಾಗುತ್ತದೆ. ವಿಜೇತರಿಗೆ ಪ್ರಮಾಣಪತ್ರ ಮತ್ತು ಆಕರ್ಷಕ ಬಹುಮಾನಗಳು ವಿತ...

ಜಿಲ್ಲೆಯ ಎಲ್ಲಾ ಮಾಧ್ಯಮ ಮಿತ್ರರು ಪತ್ರಿಕಾಗೋಷ್ಠಿಗೆ ಹಾಜರಾಗಲು ವಿನಂತಿ

ಇಮೇಜ್
  ಜಿಲ್ಲೆಯ ಎಲ್ಲಾ ಮಾಧ್ಯಮ ಮಿತ್ರರು ಪತ್ರಿಕಾಗೋಷ್ಠಿಗೆ ಹಾಜರಾಗಲು ವಿನಂತಿಸಲಾಗಿದೆ.      ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಶಿವಮೊಗ್ಗ ಘಟಕದ ವತಿಯಿಂದ ದಿನಾಂಕ 06-11-2025 ರಂದು ಬೆಳಿಗ್ಗೆ 11-30 ಕ್ಕೆ  ಮಥುರಾ ಪ್ಯಾರಡೈಸ್ ಹೋಟೆಲ್ನ 3 ನೇ ಅಂತಸ್ತಿನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿದೆ.        ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ)  ಸಂಘದ ಬೆಂಗಳೂರು ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಮತ್ತು ಸಂಘದ ಜಿಲ್ಲಾಧ್ಯಕ್ಷರು ಮಾತನಾಡಲಿದ್ದಾರೆ.           ದಿನಾಂಕ 20-11-2025 ರಂದು ಶಿವಮೊಗ್ಗ RTO ರಸ್ತೆಯಲ್ಲಿ ಇರುವ ಸರ್ಕಾರದ ಪತ್ರಿಕಾಭವನಕ್ಕೆ ಬೀಗ ಹಾಕುವ ಚಳುವಳಿ ಹಮ್ಮಿಕೊಂಡಿದ್ದು, ಹಕ್ಕೋತ್ತಾಯಗಳು,ಬೇಡಿಕೆಯ ಬಗ್ಗೆ ಹಾಗೂ ಪ್ರತಿಭಟನಾ ಧರಣಿಯ ರೂಪುರೇಷೆ  ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದಾರೆ.         ಆಗಾಗಿ  ಜಿಲ್ಲೆಯ ಎಲ್ಲಾ ಪತ್ರಕರ್ತರು ದಯವಿಟ್ಟು ಪತ್ರಿಕಾ ಗೋಷ್ಠಿಗೆ ಹಾಜರಾಗಬೇಕಾಗಿ ವಿನಂತಿಸಲಾಗಿದೆ.         ಈ ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಘಟಕದ ಧ್ವನಿ ಸಂಘದ ಎಲ್ಲಾ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಕಾನೂನು ಸಲಹೆಗಾರರು ಉಪಸ್ಥಿತರಿರುತ್ತಾರೆ. ಡಿ.ಜಿ.ನಾಗ...

ರಾಜ್ಯಾದ್ಯಂತ ಅದ್ದೂರಿ ಕನ್ನಡ ರಾಜ್ಯೋತ್ಸವ

ಇಮೇಜ್
            ಶಿವಮೊಗ್ಗ: ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಕರ್ನಾಟಕ ಏಕೀಕರಣಕ್ಕೆ ಅನೇಕ ಮಹನೀಯರು ಶ್ರಮಿಸಿದ್ದಾರೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಹೇಳಿದರು.       ನಗರದ ಬಾಲಕಿಯರ ಪದವಿಪೂರ್ವ ಕಾಲೇಜು ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಭಾಷೆಗಾಗಿ ನಾವೆಲ್ಲರೂ ಪಣತೊಡಬೇಕಾಗಿದೆ. ಲೇಖಕರು, ಕವಿಗಳು ಸೇರಿದಂತೆ ಹಲವು ಮಹನೀಯರು ಕರ್ನಾಟಕ ಏಕೀಕರಣಕ್ಕೆ ಕಾರಣರಾದರು ಎಂದು ತಿಳಿಸಿದರು.        ಕನ್ನಡಿಗರ ಭಾಷೆ ಚೆಂದ, ಕನ್ನಡಿಗರ ಮನವು ಅಂದ, ಕನ್ನಡಿಗರ ನಾಡು ಚಂದವೋ ಚಂದ. ಕರ್ನಾಟಕ ನಮ್ಮ ಹೆಮ್ಮೆಯ ರಾಜ್ಯ. ಕನ್ನಡ ನಮ್ಮ ಮಾತೃಭಾಷೆ. ಕನ್ನಡಾಂಬೆ ಮಕ್ಕಳಾದ ನಾವು ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಕನ್ನಡಾಂಬೆಗೆ ಗೌರವ ಸಲ್ಲಿಸುವುದು ಸೇರಿ ಕನ್ನಡ ಭಾಷಾಭಿಮಾನ ಮೆರೆಯಬೇಕು ಎಂದರು.       ಕಾಲೇಜಿನಲ್ಲಿ ಕನ್ನಡ ಬಾವುಟದ ಧ್ವಜಾರೋಹಣ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿ ಮಂಜುಳಾ ಪ್ರಮಾಣ ವಚನ ಬೋಧಿಸಿದರು.         ಪ್ರಾಚಾರ್ಯ ಟಿ.ಎಸ್.ಮಹೇಶ್ವರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ...

ಅನ್ನದಾಸೋಹ ಸೇವೆ ಮಾಡಬೇಕು: ಡಾ. ಧನಂಜಯ ಸರ್ಜಿ

ಇಮೇಜ್
  ಶಿವಮೊಗ್ಗ : ಮನುಷ್ಯ ಜೀವನದಲ್ಲಿ ಸದಾ ಚಿಂತೆಯಲ್ಲೇ ಮುಳುಗಿರುತ್ತಾನೆ. ಅದರಿಂದ ಹೊರಗೆ ಬರಬೇಕಾದರೆ ಅನ್ನದಾಸೋಹದಂತಹ ಸೇವೆಯನ್ನು ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ|| ಧನಂಜಯ ಸರ್ಜಿ ಹೇಳಿದ್ದಾರೆ.              ಅವರು ಇಂದು ಮೆಗ್ಗಾನ್ ಬೋಧನಾ ಆಸ್ಪತ್ರೆಯ ಆವರಣದಲ್ಲಿ ನವ್ಯಶ್ರೀ ಈಶ್ವರವನ ಚಾರಿಟೇಬಲ್ ಟ್ರಸ್ಟ್ವತಿಯಿಂದ ರೋಗಿಗಳು ಮತ್ತು ಸಂಬAಧಿಕರಿಗೆ ವಾರದಲ್ಲಿ ಎರಡು ದಿನ ಅನ್ನದಾನ ಮಾಡುತ್ತಿದ್ದು, ಇಂದು ನವ್ಯಶ್ರೀ ಅನ್ನದಾನ-100ರ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.          ಅನ್ನವನ್ನು ಯಾರೂ ಕೂಡ ಚಲ್ಲಿಬಾರದು. ಪ್ರಪಂಚದಲ್ಲಿ ಏಳುಬಿಲಿಯನ್ ಜನರಿದ್ದು, 64 ಕೋಟಿ ಜನ ಹಸಿವಿನಿಂದ ಬಳಲುತ್ತಿದ್ದಾರೆ. ನಮ್ಮ ದೇಶದಲ್ಲಿ ಒಂದು ವರ್ಷಕ್ಕೆ ಒಂದು ಕೋಟಿಗೂ ಹೆಚ್ಚು ಸಮಾರಂಭಗಳು ನಡೆಯುತ್ತಿದ್ದು, ಸುಮಾರು ಶೇ.20ರಷ್ಟು ಆಹಾರ ವ್ಯರ್ಥವಾಗುತ್ತಿದೆ. 7.82 ಕೋಟಿ ಟನ್ ಆಹಾರ ಚಲ್ಲಲಾಗುತ್ತಿದೆ. ಅದರ ಮೌಲ್ಯ ಅಂದಾಜು 1 ಲಕ್ಷ ಕೋಟಿ ರೂ. ಆಗುತ್ತದೆ. ನಮ್ಮ ಸರ್ಕಾರದ ಬಜೆಟ್‌ನ 25ರಷ್ಟು ಆಹಾರ ಪೋಲಾಗುತ್ತಿದ್ದು, ಇದನ್ನು ಉಳಿಸಿದಲ್ಲಿ ಪ್ರತಿನಿತ್ಯ 26 ಕೋಟಿ ಜನರಿಗೆ ಅನ್ನದಾನ ಮಾಡಬಹುದಾಗಿದೆ. ಜೀವನದಲ್ಲಿ ಬೇಕು ಬೇಕು ಎನ್ನುವವರೇ ಬಹಳಮಂದಿ ಇದ್ದಾರೆ. ಬೇಡ ಬೇಡ ಎನ್ನುವವರು ನಮಗೆ ಬೇಕಾಗಿದ್ದಾರೆ. ಭಗವಂತನ ಅಕೌಂಟ್‌ನ...

ಅರಣ್ಯ ಜೇನು ಸಾಕಾಣಿಕೆ ತರಬೇತಿ – ಉಚಿತ ವಸತಿ, ಆಹಾರ ಹಾಗೂ ಸರ್ಕಾರದ ಪ್ರಮಾಣಪತ್ರ

ಇಮೇಜ್
       ಬೆಂಗಳೂರು: ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI), ಬೆಂಗಳೂರು ವತಿಯಿಂದ “ಹಸಿರು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ”ದಡಿ ಅರಣ್ಯ ಜೇನು ಸಾಕಾಣಿಕೆ (Apiculturist - Wild Bee NTFP) ಕುರಿತು 45 ದಿನಗಳ ಉಚಿತ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.         ಈ ತರಬೇತಿಗೆ 18 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಅರ್ಹರು. ಕನಿಷ್ಠ ವಿದ್ಯಾರ್ಹತೆ 7ನೇ ತರಗತಿ ಮತ್ತು ಅದಕ್ಕಿಂತ ಹೆಚ್ಚು ಇರಬೇಕು. ಕೋರ್ಸ್ ಅವಧಿ 45 ದಿನಗಳು (ಒಟ್ಟು 240 ಗಂಟೆಗಳು) ಆಗಿದ್ದು, ಯಾವುದೇ ಕೋರ್ಸ್ ಶುಲ್ಕವಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.           ಅರ್ಹ ಅಭ್ಯರ್ಥಿಗಳನ್ನು ಲೇಖಿತ ಪರೀಕ್ಷೆ ಅಥವಾ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ವಸತಿ ಮತ್ತು ಆಹಾರ ಸೌಲಭ್ಯವನ್ನು ನೀಡಲಾಗುತ್ತದೆ.         ತರಬೇತಿ ಪೂರ್ಣಗೊಳಿಸಿದವರಿಗೆ ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಪ್ರಮಾಣಪತ್ರ ನೀಡಲಾಗುವುದು.         ತರಬೇತಿ ಡಿಸೆಂಬರ್ 1, 2025 ರಿಂದ ಬೆಂಗಳೂರಿನ JP ನಗರದಲ್ಲಿರುವ EMPRI ಕ್ಯಾಂಪಸ್‌ನಲ್ಲಿ ಆರಂಭವಾಗಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 15, 2025 ಆಗಿದೆ. ಹೆಚ್ಚಿನ ಮಾ...

ಇಂತಹ ತಾಯಂದಿರನ್ನು ಪಡೆದ ಪುತ್ತೂರು ಜನತೆ ಧನ್ಯರು

ಇಮೇಜ್
ಪರ್ಪುಂಜ ಅಪಘಾತ      ಹಸುಗೂಸನ್ನು ಎದೆಗಪ್ಪಿ ಕ್ಕೊಂಡು ಸ್ಕೇನಿಂಗ್ ಮಾಡಿಸಲು ಪುತ್ತೂರು ನಗರದಾದ್ಯಂತ ಸಂಚರಿಸಿದ ಮಾನವೀಯ ಮನಸ್ಸಿನ ಮಹಾತಾಯಿ.       ಮಂಗಳೂರಿನಿಂದ ಸುಳ್ಯ ಬರುತ್ತಿದ್ದ ನಾನು ಸಂಪ್ಯ ದಾಟಿ ಮುಂದೆ ಬರುತ್ತಿದ್ದಂತೆ ಭೀಕರ ಅಪಘಾತದ ಮಾಹಿತಿ ಬಂತು,ತಕ್ಷಣ ನಾನು AIKMCC ಅಂಬುಲನ್ಸ್ ನೊಂದಿಗೆ ಮೆಡ್ ಲ್ಯಾನ್ಡ್ ಆಸ್ಪತ್ರೆಯತ್ತ ಧಾವಿಸಿ ಬಂದೆ,ಹಲವರು ತೀವ್ರ ಗಾಯಗೊಂಡಿದ್ದರು,ಅವರಲ್ಲಿ ಇಬ್ಬರನ್ನು ಮಂಗಳೂರು ಶಿಫ್ಟ್ ಮಾಡಿದೆವು ಉಳಿದವರ ಆರೋಗ್ಯ ವಿಚಾರಿಸುತ್ತಾ ಆಸ್ಪತ್ರೆಯ ತೀವ್ರ ನಿಘಾ ಘಟಕದ ಒಳಗಿದ್ದಾಗ ಮಹಿಳೆಯೊಬ್ಬರು ಅಂದಾಜು ಮೂರು ತಿಂಗಳ ಮಗುವೊಂದನ್ನು ಎದೆಗೆ ಅಪ್ಪಿ ಹಿಡಿದು ಓಡೋಡಿ ಬಂದು ನನ್ನ ಅಂಬುಲನ್ಸ್ ನಲ್ಲಿ ಕುಳಿತು ಸರಕಾರಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದರು,ಕೆಲವೇ ನಿಮಿಷಗಳಲ್ಲಿ ಸರಕಾರಿ ಆಸ್ಪತ್ರೆಗೆ ತಲುಪಿದೆವು,ಅಲ್ಲಿ ಪರಿಚಯದ ಡಾ,ಕರುಣಾಕರ್ ಸರ್ ಕೂಡಾ ಇದ್ದರು.         ಆ ಮಹಿಳೆ ಮಗುವಿಗೆ ಬೇಕಾದ ಹಾಲು ಹಾಗೂ ಫೀಡಿಂಗ್ ಬಾಟಲ್ ಕೂಡಾ ಆಸ್ಪತ್ರೆಗೆ ತರಿಸಿಕೊಂಡು ಮಗುವಿಗೆ ಹಾಲುಣಿಸಿದಳು ವೈದ್ಯರ ಸಲಹೆಯಂತೆ ಮಗುವಿನ ತಲೆ ಸ್ಕ್ಯಾನಿಂಗ್ ಮಾಡಬೇಕೆಂದು ತಕ್ಷಣ ಸಿಟಿ ಆಸ್ಪತ್ರೆಗೆ ಹೋಗಲು ನನ್ನಲ್ಲಿ ತಿಳಿಸಿದರು.         ಸಿಟಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ ,  ಸ್ಕ್ಯಾನ್ ಮಾಡಲು ಸಾಧ್ಯವಿಲ್ಲ ಎಂದಾಗ, ಆ ಮಗುವನ್...

70ನೇ ಕನ್ನಡ ರಾಜ್ಯೋತ್ಸವ

ಇಮೇಜ್
  ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ 70ನೇ ಕನ್ನಡ ರಾಜ್ಯೋತ್ಸವವನ್ನು ಮೆಗನ್ ಆಸ್ಪತ್ರೆ ಮುಂಬಾಗದ ಶಾಶ್ವತ ದ್ವಜ ಸ್ಥಂಭದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾನೂನು ಸಲಹೆಗಾರರಾದ ಅನಿಲ್ ಕುಮಾರ್ ಟಿ  ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸುವುದರ ಮುಖಾಂತರ ಧ್ವಜಾರೋಹಣ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕವಾಗಿ ಸಿಹಿ ವಿತರಿಸಲಾಯಿತು ಹಾಗೂ ವಿದ್ಯಾನಗರ ದಲ್ಲಿರುವ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ಹಣ್ಣು ಹಂಪಲುಗಳನ್ನು ರಾಜ್ಯೋತ್ಸವದ ಪ್ರಯುಕ್ತ ವಿತರಿಸಲಾಯಿತು  ಈ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು ಈ ಕಾರ್ಯಕ್ರಮದಲ್ಲಿ  ಜಿಲ್ಲಾ ಅಧ್ಯಕ್ಷರಾದ ಕಿರಣ್ ಕುಮಾರ್ ಎಚ್ ಎಸ್ ಜಿಲ್ಲಾ ಕಾರ್ಯಾಧ್ಯಕ್ಷರಾದ ಉಮೇಶ್ ಗದ್ದೆ ಮನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಜನಾರ್ಧನ್ ಜಿಲ್ಲಾ ಉಪಾಧ್ಯಕ್ಷರಾದ ವಿಜಯ್ ಕುಮಾರ್ ಹಾಗೂ ಜೈ ಕೃಷ್ಣ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೇಶವ ಜಿಲ್ಲಾ ಖಜಂಚಿ ಗಣೇಶ್ ನಗರಾಧ್ಯಕ್ಷರಾದ ಜೀವನ್ ಡಿ ಪ್ರಚಾರ ಸಮಿತಿ ಅಧ್ಯಕ್ಷರಾದ ಎನ್, ಮಾಲತೇಶ್ ನಾಗರಾಜ್ ಮಹಮ್ಮದ್ ಶಫಿ ಪ್ರವೀಣ್ ಕುಮಾರ್ ಪ್ರದೀಪ್ ನವೀನ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾದ ಕವಿತಾ ಸಿ ಉಪಾಧ್ಯಕ್ಷರಾದ ಪದ್ಮ ಹಾಗೂ ಮಾಲತಿ ಪ್ರಧಾನ ಕಾರ್ಯದರ್ಶಿಯಾದ ಆರತಿ ತಿವಾರಿ  ಮಹಿಳಾ ಘಟಕದ ಘಟಕದ ಪದಾಧಿಕಾರಿಗಳು ಜಿಲ್ಲ...

ಗಾಂಧೀಜಿಯವರ ಆದರ್ಶ ಇಂದು ಮರೆಯಾಗುತ್ತಿರುವುದು ದುರಂತ : ಕರ್ನಾಟಕ ಸಂಘದ ಪೂರ್ವಾಧ್ಯಕ್ಷ ಎಂ.ಎನ್.ಸುಂದರರಾಜ್

ಇಮೇಜ್
   ಇಂದಿನ ಕಾಲಮಾನದಲ್ಲಿ ಮಹಾತ್ಮ ಗಾಂಧಿಯವರ ಸಾಮಾಜಿಕ ಕಲ್ಪನೆ ಆರ್ಥಿಕ ಚಿಂತನೆ ಮತ್ತು ರಾಜಕೀಯ ಪರಿಶುದ್ಧತೆ ಇವೆಲ್ಲವೂ ಎಲ್ಲರಿಗೂ ಮಾರ್ಗದರ್ಶಿ ಅವರ ತತ್ವಗಳನ್ನು ಪಾಲಿಸಿದರೆ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಮತ್ತು ಆರ್ಥಿಕ ಬೆಳವಣಿಗೆ ಸಾಧ್ಯವಾಗುತ್ತದೆ ಆದರೆ ಇಂದಿನ ಜನಾಂಗ ಅದರಲ್ಲೂ ಮುಖ್ಯವಾಗಿ ಯುವಕರು ಗಾಂಧೀಜಿಯವರ ಆದರ್ಶಗಳನ್ನು ಅಲಕ್ಷಿಸಿರುವುದು ಒಂದು ದುರಂತವಾಗಿದೆ ಎಂದು ಕರ್ನಾಟಕ ಸಂಘದ ಪೂರ್ವಾಧ್ಯಕ್ಷ ಎಂ.ಎನ್.ಸುಂದರರಾಜ್ ತಿಳಿಸಿದ್ದಾರೆ        ಅವರು ಮುಂದುವರೆದು ಸ್ವತಂತ್ರ ಸಂಗ್ರಾಮದಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಮಹಾತ್ಮ ಗಾಂಧಿಯವರು ದೇಶಕ್ಕಾಗಿ ಸರ್ವವನ್ನು ತ್ಯಾಗ ಮಾಡಿ ಸರಳ ಜೀವನ ನಡೆಸಿ ಬೇರೆಯವರಿಗೆ ಮಾರ್ಗದರ್ಶಿಯಾಗಿದ್ದಾರೆ ಇದನ್ನು ನಾವು ಯಾರು ಮರೆಯಬಾರದು ಎಂದು ತಿಳಿಸಿದರು. ಅವರು ಬಸವೇಶ್ವರ ಕಾಲೇಜಿನಲ್ಲಿ ಏರ್ಪಡಿಸಿದ್ದ ಗಾಂಧಿ ಚಿಂತನೆ ಮತ್ತು ಮಕ್ಕಳಿಗೆ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.        ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಸರ್ವೋದಯ ಮಂಡಳಿ ರಾಜ್ಯಾಧ್ಯಕ್ಷರಾದ ಡಾ!!  ಹೆಚ್ಎಸ್ ಸುರೇಶ್ ನೆರವೇರಿಸಿ ಗಾಂಧೀಜಿಯವರ ಮೌಲ್ಯಗಳು ಹಾಗೂ ಜೀವನದ ಯಶೋಗಾಥೆ ಮತ್ತು ಅವರ ತ್ಯಾಗ ಬಲಿದಾನ ದೇಶಪ್ರೇಮಾ ಇಂದಿನ ಮಕ್ಕಳಿಗೆ ಮಾರ್ಗದರ್ಶನವಾಗಬೇಕು ಎಂದು ತಿಳಿಸಿದರು.       ...