ಬಯಲಿಗೆ ಬಂದ ಶಾಸನ ಸಂಪತ್ತು

 


   ಸೊರಬ ತಾಲ್ಲೂಕಿನ ಮಾವಲಿಯ ವೀರಗಲ್ಲುಗಳು ಕರುನಾಡಿನ ಸಾಂಸ್ಕೃತಿಕ ಹಾಗೂ ಸಾಹಿತ್ಯ ವಲಯಕ್ಕೆ ನೀಡಿದ ಕೊಡುಗೆ ನಿಜಕ್ಕೂ ಸ್ಮರಣನೀಯವಾದದ್ದು. ಆದರೆ ಅಲ್ಲಿಯ ಆ ಶಾಸನ ಸಂಪತ್ತನ್ನು ಕಣ್ಣಿನಿಂದ ನೋಡಿ ಆನಂದಿಸಲು ಇತ್ತೀಚಿನ ಕನ್ನಡಾಭಿಮಾನಿಗಳಿಗೆ ಸಾಧ್ಯವಾಗಿರಲಿಲ್ಲ. ಕಾರಣ ಅವುಗಳ ಸುತ್ತಲೂ ಗಿಡಗಂಟೆಗಳು ಬೆಳೆದು ಅಲ್ಲಿಗೆ ತಲುಪಲು ಅಸಾಧ್ಯವಾಗಿತ್ತು. ಇತ್ತೀಚಿಗೆ ಅವುಗಳ ಸಂರಕ್ಷಣೆಯ ಕುರಿತು ಮುಖ್ಯಮಂತ್ರಿ ಕಛೇರಿಯಿಂದ ಪ್ರಾರಂಭವಾಗಿ ಪುರಾತತ್ವ ಇಲಾಖೆ, CS, EO ಮತ್ತು PDO ವರೆಗೂ ಮಾಹಿತಿ ವಿನಿಮಯ ನಡೆದಿತ್ತು. ಆಗ ತುಂಬು ಮಳೆಗಾಲವಿತ್ತು. 

       ಈಗ ಶಿವಮೊಗ್ಗ ಜಿಲ್ಲೆಯ ಮಾನ್ಯ ಜಿಲ್ಲಾಪಂಚಾಯತ್ ಕಾರ್ಯನಿರ್ವಹಾಣಾ ಅಧಿಕಾರಿಗಳ   ಯೋಜನೆಯಾದ "ನಮ್ಮಊರು- ನಮ್ಮಹೆಮ್ಮೆ" -ಕಾರ್ಯಕ್ರಮ. ಇದು  ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಯ ಗ್ರಂಥಪಾಲಕರು ಮತ್ತು ಅಲ್ಲಿನ ವಿದ್ಯಾರ್ಥಿಗಳ  ತಂಡಗಳು ಪ್ರತಿಗ್ರಾಮದ ಐತಿಹಾಸಿಕ ಸಾಂಸ್ಕೃತಿಕ ಹಾಗೂ ಪ್ರಸ್ತುತ ಆರ್ಥಿಕ ಸಮೃದ್ಧತೆಯ ಕುರಿತಾದ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸಿ ಕೃತಿ ರಚಿಸುವ ಅಧ್ಭುತ  ಕಾರ್ಯಕ್ರಮವಾಗಿದೆ. ಇದರಿಂದಾಗಿ ಪ್ರತಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಇತಿಹಾಸದ ಆಕರಗಳ ಹುಡುಕಾಟ, ಮಾಹಿತಿ ಸಂಗ್ರಹಣೆ ಮತ್ತು ಸಂರಕ್ಷಣೆಯ ಕಾರ್ಯಗಳು ಭಾರದಿಂದ ಸಾಗಿವೆ. 


        ನಮ್ಮ ಊರು ನಮ್ಮ ಹೆಮ್ಮೆ ಕಾರ್ಯಕ್ರಮದಡಿ ಸೊರಬ ತಾಲ್ಲೂಕಿನ ಮಾವಲಿ ಗ್ರಾಮಪಂಚಾಯಿತಿಯ ಗ್ರಂಥಪಾಲಕರಾದ ಶ್ರೀ ಬೋಜರಾಜಣ್ಣನವರ ಕಾರ್ಯ ನಿಜಕ್ಕೂ ಮೆಚ್ಚುವಂತಹದು. ಅವರಿಗೆ ಉತ್ಸಾಹದಾಯಕ ಆಪ್ತತೆ ನೀಡುತ್ತಿರುವ PDO ರವರೂ ಕಾರಣರಾಗಿದ್ದಾರೆ. ಅಧ್ಯಯನಕ್ಕೆಂದು ಇಡೀ ಪರಿಸರವನ್ನು ಸಂಪೂರ್ಣ ಸ್ವಚ್ಚಗೊಳಿಸಲಾಗಿದೆ.  ತಾಲ್ಲೂಕಿನ EO ರವರೂ ಸಹ ಅಷ್ಟೇ ಆಸಕ್ತಿಯಿಂದ ಸ್ಥಳಕ್ಕೆ ಆಗಮಿಸಿ ಮಾವಲಿಯ ಐತಿಹಾಸಿಕತೆಯನ್ನು ಸತತ ಎರಡು ಗಂಟೆ ಆಲಿಸಿ, ಅದರ ಮಹತ್ವವನ್ನು ಸ್ಥಳೀಯರಿಗೆ ತಾವೇ ವಿವರಿಸಿದರು. ಎಲ್ಲಾ ಶಾಸನ ಸಂಪತ್ತುಗಳನ್ನು ರಕ್ಷಿಸಲು ಸ್ಥಳದಲ್ಲೇ ಕ್ರಿಯಾಯೋಜನೆಯ ಚರ್ಚಿ ನಡೆಯಿತು. ಈ ಶಾಸನಗಳಿರುವ ಸ್ಥಳವು ಗ್ರಾಮದ ಮುಖಂಡರೊಬ್ಬರ ಖಾಸಗಿ ಜಮೀನಾಗಿದ್ದು ಅವರೂ ಸಹ ಖುದ್ದಾಗಿ ಇತಿಹಾಸದ ಮಹತ್ವ ಅರಿತು ಅವುಗಳ ಸಂರಕ್ಷಣೆಗೆ ತುಂಬು ಮನಸ್ತಿನಿಂದ ಸಮ್ಮತಿಸಿದ್ದು ತುಂಬಾ ಸಂತೋಷ ತಂದಿತ್ತು.  


       ಈ ಜಾಗೃತಿಗೆ ಕಾರಣರಾದ ಸ್ವಾಮಿನಾಥನ್ ಹಾಗೂ ರಾಜ್ಯ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ CS ಶಿವಮೊಗ್ಗ, ಸೊರಬ ತಾ EO ಮತ್ತು ಗ್ರಾ.ಪಂ PDO ಮತ್ತು ಗ್ರಂಥಪಾಲಕರಾದ ಬೋಜಣ್ಣ ಇವರುಗಳಿಗೆ ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾದ ಮಕ್ಕಳು ಮತ್ತು ಸ್ಥಳೀಯರೆಲ್ಲರಿಗೂ ಅನಂತ ಧನ್ಯವಾದಗಳು.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ