ಒಂದುವರೆ ಕೋಟಿ ವ್ಯವಹಾರದಲ್ಲಿ ದೋಖಾ, 11 ಜನರ ವಿರುದ್ಧ ದೂರು : ಜಾತಿ ನಿಂದನೆ, ಜೀವ ಬೆದರಿಕೆ
ಒಂದುವರೆ ಕೋಟಿ ಹಣದ ವಿಚಾರದಲ್ಲಿ ಮಹಿಳೆಯೋರ್ವರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ, ಜಾತಿ ನಿಂದನೆ ಮತ್ತು ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಬೆದರಿಕೆ ಹಾಕಲಾಗಿದ್ದು, ಮಂದಾರ ಶಾಲೆಯ ಮಾಲಕಿ ಸೇರಿದಂತೆ 11 ಜನರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಣದ ವ್ಯವಹಾರವನ್ನ ಬಗೆಹರಿಸಿಕೊಳ್ಳಲು ಶಾಲೆಯ ಮಾಲೀಕರು, ಮತ್ತೊಬ್ಬ ಸಮಾಜ ಸೇವಕಿ ವೆಂಕಟೇಶ ನಗರದಲ್ಲಿರುವ ಮನೆಗೆ ಕರೆದಿದ್ದರು. ಮನೆಗೆ ಹೋದ ಸಮಾಜ ಸೇವಕಿ ಮತ್ತು ಅವರ ಕಡೆಯವರಿಗೆ ಜಾತಿ ನಿಂದನೆ ಮಾಡಿ ಪೆಟ್ರೋಲ್ ಸುರಿದು ಹತ್ಯೆ ನಡೆಸುವ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ನೀಡಲಾಗಿದೆ.
ಮಾಹಿತಿ ಪ್ರಕಾರ ಅನುಪಿನಕಟ್ಟೆಯಲ್ಲಿರುವ ಖಾಸಗಿ ಶಾಲೆ ಅಭಿವೃದ್ಧಿ ವಿಚಾರದಲ್ಲಿ ನಡೆದ ವ್ಯವಹಾರ ಎರಡೂ ಕಡೆ ಸರಿಬಾರದ ಹಿನ್ನಲೆಯಲ್ಲಿ ಹಣದ ವಿಚಾರದಲ್ಲಿ ಜಟಾಪಟಿ ನಡೆಯುತ್ತಿದೆ. ಶಾಲೆ ಅಭಿವೃದ್ಧಿಯ ವಿಚಾರದಲ್ಲಿ ಕೋಟ್ಯಾಂತರ ರೂ ಹಣ ವ್ಯಯ ಮಾಡಲಾಗಿದೆ ಎಂದು ಒಂದಿಷ್ಟು ಜನ ಹೇಳುತ್ತಿದ್ದಾರೆ. ಆದರೆ ಶಾಲೆಯ ಮಾಲೀಕರು, ನಾನು ಹಣ ಕರ್ಚು ಮಾಡಲು ಹೇಳಿಲ್ಲ ಎಂಬುದು ಅವರ ವಾದವಾಗಿದೆ. ವ್ಯವಹಾರ ಸರಿಬಾರದ ಕಾರಣ ಈಗ ಶಾಲೆಯ ಮಾಲೀಕರ ವಿರುದ್ಧ ಜಾತಿ ನಿಂದನೆ, ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಜೀವ ಬೆದರಿಕೆ ದೂರು ದಾಖಲಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ