ಚಿಕ್ಕ ರಂಗ ನಾಯಕ ನೀರುಗಂಟಿ ಆತ್ಮಹತ್ಯೆ : ಕಾರಣ ಸುಮಾರು ತಿಂಗಳಿನಿಂದ ವೇತನ ನೀಡದೇ ಇರುವುದು
ವಾಲ್ಮೀಕಿ ಸಮಾಜವನ್ನು ಹತ್ತಿಕ್ಕುವ ಹಾಗೂ ತುಳಿಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ನಾನಾ ಕಾರಣಗಳಿಂದ ವಾಲ್ಮೀಕಿ ಸಮಾಜದ ರಾಜಕಾರಣಿ , ಅಧಿಕಾರಿಗಳನ್ನು, ನೌಕರರನ್ನ ಬಲಿ ತೆಗೆದುಕೊಳ್ಳುತ್ತಿದೆ.
ಚಿಕ್ಕ ರಂಗನಾಯಕ ತಂದೆ ರಂಗನಾಯ್ಕ ಈ ವ್ಯಕ್ತಿಯು ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲೂಕಿನ ಸಂತೆಮರಳಿ ಹೋಬಳಿಯ ಹೊಂಗನೂರು ಗ್ರಾಮದ ನಿವಾಸಿಯಾಗಿದ್ದು ಹಾಗೂ ಹುಂಗನೂರು ಪಂಚಾಯತಿಯಲ್ಲಿ ವಾಟರ್ ಮ್ಯಾನ್ ಆಗಿ ಕೆಲಸ ಮಾಡ್ತಾ ಇದ್ದು, ಪಂಚಾಯ್ತಿಯ ಸಂಬಳದಿಂದ ತನ್ನ ಸಂಸಾರವನ್ನು ನಡೆಸುತಿದ್ದರು ಸದರಿ ವ್ಯಕ್ತಿಗೆ ಪಂಚಾಯಿತಿಯಿಂದ ತಿಂಗಳ ವೇತನವನ್ನು ಕೊಡದೆ ತಿಂಗಳಾನುಗಟ್ಟಲೆಯಿಂದ ಅವರ ವೇತನವನ್ನು ಕಾಯ್ದಿರಿಸಿಕೊಂಡು, ಅವರ ಜೀವನ ನಿರ್ವಹಣೆಗೂ ತೊಂದರೆಯನ್ನು ಮಾಡಿರುತ್ತಾರೆ ಮತ್ತು ಈ ಘಟನೆಯು ಮನ ಕಲಕುವ ಘಟನೆ ಆಗಿರುತ್ತದೆ.

ರಾಜ್ಯ ಸರ್ಕಾರದ ನಿರ್ಲಕ್ಷಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದೆ ಕೂಡಲೇ ಆತ್ಮಹತ್ಯೆಗೆ ಕಾರಣರಾದ ವ್ಯಕ್ತಿಗಳನ್ನ ಬಂಧಿಸಿ ಮತ್ತು ಅವರ ಹುದ್ದೆಯಿಂದ ಅಮಾನತ್ತುಗೊಳಿಸಬೇಕೆಂದು ವಾಲ್ಮೀಕಿ ಸಮುದಾಯ ಆಗ್ರಹಿಸುತ್ತದೆ , ಆತ್ಮಹತ್ಯೆಗೆ ಶರಣಾದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ