ಬರೆಯುತ್ತಾರೆ ಗಾರಾ.ಶ್ರೀನಿವಾಸ್ ಜೆಸಿಐ ಸೆನೇಟರ್. ವಿನೀತ್ ಆರ್ ಹಾಗೂ ಜೆಸಿ ಅನಿಷಾ ಕಾತರಕಿ ಅವರುಗಳಿಗೆ ಬೆಂಬಲಿಸುತ್ತೇನೆ ಯಾಕೆ ಗೊತ್ತೇ..?!
ಬರೆಯುತ್ತಾರೆ ಗಾರಾ.ಶ್ರೀನಿವಾಸ್
ಜೆಸಿಐ ಸೆನೇಟರ್. ವಿನೀತ್ ಆರ್ ಹಾಗೂ ಜೆಸಿ ಅನಿಷಾ ಕಾತರಕಿ ಅವರುಗಳಿಗೆ ಬೆಂಬಲಿಸುತ್ತೇನೆ ಯಾಕೆ ಗೊತ್ತೇ..?!
ಕ್ಷಮಿಸಿ ಹೀಗೊಂದು ತಳಸ್ಪರ್ಶಿ ವಾಸ್ತವ ಕುರಿತು ನಮ್ಮಲ್ಲಿಯೇ ನಾವು ಅವಲೋಕನ ಮಾಡಿಕೊಳ್ಳಬೇಕಾದದ್ದು ಬಲು ಜರೂರತ್ತಿದೆ, ನಾವುಗಳು ಜೆಸಿಯಾಗಿ ಜೆಸಿಐ ಸಂವಿಧಾನವನ್ನು ನಿಜವಾಗಿಯೂ ಅನುಸರಿಸುತ್ತಿದ್ದೇವಾ..? ತರಬೇತಿಯೇ ಜೀವಾಳ ಎನ್ನುವ ಬೇಸ್ ಸ್ಟೆಪ್‌ಗಳನ್ನು ಆಸ್ವಾದಿಸಿಕೊಂಡು ಮಾನವ ಜೀವನಗಳ ವಿಕಸಿತ ವಿಸ್ತೃತಕ್ಕೆ ನಾವುಗಳು ಮುಂದಾಗಿದ್ದೇವಾ..? ಅಥವಾ ವೈಯಕ್ತಿಕವಾಗಿ ವ್ಯಕ್ತಿತ್ವ ವಿಕಸನ ಹೊಂದಿ ಮೇರೆತ್ತರದಿ ಇದ್ದೇವಾ..?! ಜೆಸಿ ವಾಣಿಗಳಂತೆಯೇ ಜಾತಿ, ಧರ್ಮ, ರಾಜಕೀಯ ಪಕ್ಷಗಳ ಸಂಕೋಲೆಗಳ ಸಾಂಗತ್ಯದಿಂದ ದೂರ ಉಳಿದುಕೊಂಡಿದ್ದೇವಾ..? ಇಂತಿವುಗಳ ಪ್ರಶ್ನಾರ್ಥಕ ಚಿಹ್ನೆಗಳು ನಿಮ್ಮ ಮುಂದಡಿ ಮೊಹರೊತ್ತಿದ್ದೇನೆ, ಸಾಧ್ಯವಾದರೆ ನೀವುಗಳೇ ಉತ್ತರವನ್ನು ಕಂಡುಕೊಂಡು ಫಲಿತಾಂಶದ ಶೇಕಡವಾರು ಲೆಕ್ಕಚಾರಗಳನ್ನು ಹಾಕಿಕೊಳ್ಳಿ ಎನ್ನುವುದು ಈ ಸಧ್ಯದ ಅಂಬೋಣ,
ನೋಡಿ ನನಗ್ಯಾವ ಕೇಮಿಲ್ಲದೆ ಇಲ್ಲಿ ಉಲ್ಲೇಖಿಸಲಾಗುತ್ತಿಲ್ಲ, ಅಥವಾ ಯಾವ ಅತ್ಯುನ್ನತ ಶಾಸನವಾದ ನಾಯಕರಂತೆ ಅನುಕರಣೀಯವಾಗಿ ವರ್ತಿಸುತ್ತಿಲ್ಲ, ಜೆಸಿ ಸದಸ್ಯತ್ವ ಎಂದೊಡೆ ಎಲ್ಲರೊಳಂದಾಗುವ ಜ್ಞಾನದ ಚಿಲುಮೆ ಅಂದುಕೊಂಡಿದ್ದೆ, ಜಗದ ಭೂಪಟವನ್ನು ಪರಿಚಯಿಸುವ ಹಾಗೂ ಅವರವರ ಮನಸಿನ ಏಕತೆಯ ಸಾಮರ್ಥ್ಯದೊಂದಿಗೆ ಚಲನೆಗೊಳ್ಳುವ ಪಥ ಎಂದುಕೊಂಡಿದ್ದೆ, ಪ್ರತಿಯೊಬ್ಬರಲ್ಲಿನ ರಚನಾತ್ಮಕತೆಗೆ ವಿಶ್ವ ವೇದಿಕೆಗೆ ನನ್ನನ್ನು ಕರೆದುಕೊಂಡು ಬಂದಿದ್ದಾರೆ ಎಂದು ಭಾವಿಸಿದ್ದೆ, ಇದೆಂದಿಗೂ ಹುಸಿಗೊಳ್ಳದ ಗುರಿಗಳಿವೆ, ಆದರೆ ಜೆಸಿಐ ವಾರ ಮುಗಿದ ತರುವಾಯ ಶುರುವಾಗುವ ಜೋನ್ಕಾನ್ ಹಬ್ಬದ ಮೊದಲೇ ಕೆಲ ಜೆಸಿಗಳ ಅಪ್ರಬುದ್ದತೆ, ಪ್ರತ್ಯೇಕತಾ ಗುಂಪುಗಾರಿಕೆಗಳು, ಇಂತಹವರೇ ವಲಯ ಅಧ್ಯಕ್ಷರಾಗಬೇಕು, ವಲಯ ಉಪಾಧ್ಯಕ್ಷರಾಗಬೇಕು ಎನ್ನುವ ಹಪಾಹಪಿತನ ನೋಡಿದ್ದೇನೆ, ಯಾವ ಸಂಕೋಲೆಗಳನ್ನು ಕಡಿದು ಮನುಷ್ಯ ಸಾಂಗತ್ಯವನ್ನು ಬಯಸಬೇಕಿತ್ತೋ..? ಅದನ್ನು ಬಯಸದೆ ವ್ಯಕ್ತಿ ವಿಕೃತತನವಾದಗಳಿದು ಪಕ್ಕಾ ಪೊಲೀಟಿಕಲ್ ವಾಮಮಾರ್ಗಗಳನ್ನು ಬಿಗಿದಪ್ಪಿಕೊಂಡು ಮೂಲ ಜೆಸಿಐ ಮೌಲ್ಯಗಳನ್ನು ಬಲತ್ಕರಿಸಲು ನಿಂದುಬಿಡುವ ಮಾನಸೀಕತೆಗಳು ಬದಲಾಗಲಿ, ಇಲ್ಲವಾದೊಡೆ ಸಮಾಜಕ್ಕೆ ನೀವೇನು ವಿಕಸಿತ ಮನುಷ್ಯರಲ್ಲ ಎಂದೇ ಬಿಂಬಿತವಾಗಿ ಬಿಡುತ್ತಿರಾ..?! ಎಂದು ಬರಹದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಕ ಅಭಿವ್ಯಕ್ತಿಸುತ್ತಿದ್ದೇನೆ.
ಹೌದು ಕರ್ನಾಟಕದಲ್ಲಿ ಎಷ್ಟು ಜೋನ್‌ಗಳಿವೆ, ಪ್ರತಿ ಜೋನ್‌ಗಳಲ್ಲಿ ಎಷ್ಟು ಲೋ ಗಳಿವೆ ಎನ್ನುವುದು ಬಹುತೇಕ ಜೆಸಿಗಳಿಗೆ ಗೊತ್ತಿಲ್ಲ, ಇಂತಹದೊಂದು ಕನಿಷ್ಠ ಮಾಹಿತಿಗಳನ್ನು ತಲುಪಿಸಲಾಗದ ಬ್ಯುಸಿನಲ್ಲಿ ಎಲ್ಲರೂ ಇದ್ದೇವೆ, ಜೆಸಿಐ ನ ಮಧ್ಯವಾರ್ಷಿಕ ( ಮಿಡ್ಕಾನ್ ) ನಲ್ಲಿಯೇ ಕೆಲ ಹಿರಿಯ ತಲೆಮಾರಿನಂತಿರುವ ಅಥವಾ ಜೆಸಿಐ ಸಂವಿಧಾನ ಬರೆದ ನಾವೇ ಲೇಖಕರು, ಜೆಸಿಐನ Young Men's Progressive Civic Association (YMPCA) Founder ನಂತೆ ವರ್ತಿಸುವ ಇಂತಿವರುಗಳು ಈ ಮೊದಲೆ ಕಮಿಟ್ಮೆಂಟ್ ಮಾಡಿಕೊಂಡು ಬಿಟ್ಟಿದ್ದಾರಂತೆ, ಯಾರಾದರು ವಲಯ ಅಧ್ಯಕ್ಷರಾಗಬೇಕು, ಉಪಾಧ್ಯಕ್ಷರಾಗಬೇಕು ಎಂದರೆ ಇಲ್ಲಿ ಮುಂಚಿತವಾಗಿ ತಿಳಿಸಬೇಕು, ಅಥವಾ ಅನುಮತಿಯ ಅರ್ಜಿ ನೇಣಿನ ಕುಣಿಕೆ ತರಹದಿ ಅವರ ಮುಂದಡಿ ತೂಗಿಸಿ ತರ್ಕಿಸಬೇಕು, ಅದಾಗ ಅವರುಗಳು ಹೇಳುವಂತೆ ಇದ್ದಿರಬೇಕು ಇಲ್ಲವಾದಲ್ಲಿ ಅವರುಗಳೇ ಸರಿಯಿಲ್ಲ ಎಂದು ಈ ಮೊದಲೇ ಸರಿಯಿಲ್ಲ ಎಂದು ವಾಚಮಗೋಚರವಾಗಿ ನಿಂದನೆಗಳ ಪಟ್ಟಿ ಕಟ್ಟಿದ್ದರೋ ಅಂತಹವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅವಕಾಶವಾದಿಗಳಂತೆ ತಿರುವಿಕೊಂಡು ಬಿಡುತ್ತಾರೆ,
ಇಂತಹದೊಂದು ವ್ಯಕ್ತಿತ್ವದ ಗಾಳಿಪಟವನ್ನು ತೂರಿ ಬಿಡುವುದನ್ನು ನೋಡಿದ್ದೇನೆ, ೨೦೧೯ ರಿಂದ ಪ್ರಸ್ತುತ ದಿನಮಾನದ ಜೆಸಿಐ-೨೪ರ ವಲಯ ಚುನಾವಣೆಯನ್ನು ದರ್ಶಿಸಿದ್ದೇನೆ ಇದರ ಅನುಭವವಿದೆ, ಇರಲಿ ಏನೇ ಹೇಳಿದರೂ ಸರಿ ನಾವುಗಳು ಹೀಗೆ ಎನ್ನುವ ಮಾನಸೀಕತೆಗಳು ಮುಂದೊಮ್ಮೆ ನಶಿಸಿ ಹೋಗುತ್ತದೆ ಇದು ಸ್ವಾಭಾವಿಕ, ಇಂತಿವುಗಳ ಮಾತುಗಳೊಂದಿಗೆ ಶಿವಮೊಗ್ಗದಲ್ಲಿ ನಡೆಯುವ ಜೋನ್ಕಾನ್-೨೦೨೫ ರ ಚುನಾವಣೆಯಲ್ಲಿ ಸ್ಪರ್ಧಿಸಿರುವ ಮೂವರು ಜೆಸಿ ಕಟ್ಟಾಳುಗಳು ಎಲ್ಲರು ಸಮರ್ಥರೇ ಆದರೂ ನಾವುಗಳನ್ನು ಯಾರನ್ನು ಬೆಂಬಲಿಸಬೇಕು..? ಎನ್ನುವ ತರ್ಕಗಳ ನಡುವೆಯೇ ನೀವುಗಳು ಇವರನ್ನು ಬೆಂಬಲಿಸಬೇಕು, ಅವರನ್ನು ಬೆಂಬಲಿಸಬೇಕು ಎಂದು ದೇವರಾಣೆಗಳನ್ನು ಹಾಕಿಸಿಕೊಳ್ಳುವುದು, ಸಾಲದಕ್ಕೆ ಶಕ್ತಿದೇವತೆಗಳ ಪೋಟೋಗಳನ್ನು ಮುಟ್ಟಿ ಹೇಳಿ ಎನ್ನುವುದು, ವಯಸ್ಸು ೪೦ರ ಗಡಿ ದಾಟಿರುವ ಲೋಗಳ ಎಸಿಡಿಗಳನ್ನು ಇಂತಹವರಿಗೆ ಕೊಡಿ, ನಿಮ್ಮ ಲೋ ಪ್ರಗತಿಗಾಗಿ ಒಂದಷ್ಟು ಫೇಮೇಂಟ್ ಮಾಡುತ್ತೇವೆ, ಎಂದು ಹೇಳುವ ತರೀಖಾಗಳು ವಿಕಸನದ ಮನಸ್ಥಿತಿಗಳೇ ಎನ್ನುವುದು ಸಾವಿರ ಭಾರಿ ಪ್ರಶ್ನಿಸಿಕೊಳ್ಳುವಂತಾಗಿದೆ,
ಇದಾಗಬಾರದು ನೋಡಿ, ಮೂರು ಜೆಸಿಗಳ ಸ್ಪರ್ಧಾಕಾಂಕ್ಷಿಗಳಿಗೆ ಹೇಳುವುದಿಷ್ಟೆ, ನೀವುಗಳು ಜೆಸಿಐ ಮೌಲ್ಯಗಳಂತೆಯೇ ನಡೆದುಕೊಳ್ಳಿರಿ, ನಾವು ಬೆಂಬಲಿಸುವ ನಾಯಕ ಜೋನ್-೨೪ರ ವಲಯ ಅಧ್ಯಕ್ಷರಾಗಬೇಕು, ಉಪಾಧ್ಯಕ್ಷರಾಗಬೇಕು ಎನ್ನುವುದಿರುತ್ತದೆ, ಇದೇ ಕಾರಣಕ್ಕೆ ಮನಸ್ಥಿತಿಗಳು ಎಕ್ಕುಟ್ಟಿ ಹೋಗದಂತೆ ತಡೆಯಬೇಕಾದ ಟಾಸ್ಕ್ ಕೂಡ ನಿಮ್ಮೊಂದಿಗೆ ಇದೆ ಇದು ನನ್ನ ಮನವಿಯಾಗಿದೆ.
ಈ ಬಹಿರಂಗ ಅಭಿಪ್ರಾಯದ ಕೊನೆ ಸಾಲಿಗೆ ಬಂದು ನಿಂತಿದ್ದೇನೆ, ನಾನಿಲ್ಲಿ ಯಾಕೆ ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಜೆಸಿಐ ಸೆನೇಟರ್. ವಿನೀತ್ ಆರ್ ಅವರನ್ನು ನಿಶ್ಚಲ ಮನಸಿನೊಂದಿಗೆ ಬೆಂಬಲಿಸಲೇಬೇಕು ಎನ್ನುವುದು ಓರ್ವ ಸಾಮಾನ್ಯ ಜೆಸಿಯಾಗಿ ಇನ್ನೂ ಕ್ರೀಯಾಶೀಲನಾಗಿಯೇ ಇದ್ದು ಈ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಿದ್ದೇನೆ, ಮೊದಲ ಸಾಲಿನಲ್ಲಿಯೇ ನಾನು ಕ್ಷಮಿಸಿ ಎಂದು ಆರಂಭಿಸಿರುವ ಸಾಲು ಇಲ್ಲಿಗೆ ವರ್ಗಾಯಿಸುತ್ತಿದ್ದೇನೆ, ನನಗಿಲ್ಲಿ ಮತದಾನ ಮಾಡುವ ಹಕ್ಕಿಲ್ಲ, ಎಲ್ಲಾ ಲೋ ಅಧ್ಯಕ್ಷರುಗಳದ್ದು ಆಗಿದೆ, ನನ್ನದೊಂದು ಮನವಿ ಏನೆಂದರೆ ನೀವು ಮತದಾನ ಮಾಡಿ ಆದರೆ ಸಾರ್ವತ್ರಿಕವಾದ ಹಕ್ಕಿನ ಪರಭಾರೆ ಮಾಡಿಕೊಳ್ಳದಿರಿ ಎನ್ನುವುದಷ್ಟೆ ವಿನಮ್ರ ಅಭಿಪ್ರಾಯವಾಗಿದೆ, ಇನ್ನೂ ಜೆಸಿಐ ಸೆನೇಟರ್. ವಿನೀತ್ ಆರ್ ಯಾಕೆ ಬೆಂಬಲಿಸುತ್ತಿದ್ದೇನೆ ಎನ್ನುವುದಕ್ಕೆ ಸಕಾರಣಗಳಿವೆ, ಯಾವ ಮನುಷ್ಯತ್ವ ವಾದಗಳನ್ನು ನಂಬಿದವನ್ನು ಇಷ್ಟೊಂದು ಬರಪೂರತೆಯಲ್ಲಿ ಅಲ್ಲಗಳಿಯಲಾರ..! ಅಂತಹದೊಂದು ಅಲ್ಲಗಳಿಯುವ ಅವಸರದಡಿ ಈತನೊರ್ವ ಶಿವಮೊಗ್ಗಕ್ಕೆ ಬರುವುದೇ ಗೋಲಿ ಬಜ್ಜಿ ತಿನ್ನುವುದಕ್ಕೆ, ಆತನಲ್ಲಿ ಯಾವ ಕ್ಯಾಲಿಬರ್‌ಗಳಿಲ್ಲ, ವಿವೇಚನೆಗಳಿಲ್ಲ, ಅರ್ಹತೆಗಳಿಲ್ಲ ಎಂದು ಸಾರಸಗಟಾಗಿ ಚರ್ಚಿಸುತ್ತಿರುವುದು ಕೇಳಿದ್ದೇನೆ ಅಲ್ಲದೆ, ಆತ ಎದುರಾಗಿ ಬಂದರೂ ಓರ್ವ ಜೆಸಿ ಎಂದು ಅರಿಯದೆ ಮಾತಾಡಿಸುವ ಅರ್ಹತೆಯನ್ನು ಕಳೆದುಕೊಂಡಿದ್ದಾನೆ ಎನ್ನುವಷ್ಟರ ಮಟ್ಟಿಗೆ ಅಸಹ್ಯಗತಿಯಲ್ಲಿ ಅಪಮಾನಿಸುವುದು ಸಮಂಜಸವಾದುದ್ದಲ್ಲ, ನೋಡಿ ಬಹಳ ಹಿಂದೆ ಅನಾದಿ ಕಾಲದ ಕನ್ನಡದ ಕವಿ ಪಂಪ ಹೇಳಿದಂತೆ ಮನುಷ್ಯ ಜಾತಿ ತಾನೋಂದೇ ವಲಂ ಎನ್ನುವ ಘೋಷವಾಕ್ಯವನ್ನು ಸರಿಗಟ್ಟುವ ಜೀವಪರ ನಿಲುವುಗಳಲ್ಲಿದ್ದರೂ ಸಹ ಎಲ್ಲಾ ಮೌಲ್ಯಗಳ ಮಾರಣ ಹೋಮದಂತೆ ಮಾಡಿಕೊಳ್ಳುವ ಕೆಲವರ ಅಟ್ಟಹಾಸಗಳ ಮಾನಸೀಕತೆಗಳಿಗೆ ಇದೇ ವರ್ಷ ಪಾಠವಾಗಲಿ ಎನ್ನುವುದು ಮಾತಾಗಿದೆ,
ಯಾರನ್ನು ಅಪಮಾನಕ್ಕೆ ಗುರಿ ಮಾಡುತ್ತಾರೋ..? ಯಾರನ್ನು ಬಲ ಬಲದಿ ವಾಮಮಾರ್ಗದಿ ತುಳಿಯಲು ಹಪಾಹಪಿಸುತ್ತಾರೋ..? ಮತದಾನದ ಹಕ್ಕಿನ ಚಲಾವಣೆಗೈಯುವ ಮೊದಲೇ ಸೋತು ಹೋಗುತ್ತಾನೆ ಎಂದು ಚಪ್ಪಾಳೆ ಹೊಡೆದು ಪಾನಮತ್ತಿನ ಮೇಜಿನ ಮೇಲೆ ಗುದ್ದಿ ಸಂತೋಷದಿ ಸಂಭ್ರಮಿಸುತ್ತಾರೋ..? ಅತೀ ಕೆಟ್ಟದಾಗಿ ಯಾವ ಸ್ಪರ್ಧಿಯನ್ನು ವಾಚಮಗೋಚರವಾಗಿ ಬಣ್ಣಿಸಲ್ಪಡುತ್ತಾರೋ..? ಅಂತಹ ಅಪಮಾನಗಳ ಹೊತ್ತು ಹುಸಿ ನಗೆಯ ಬಿತ್ತಿ ಸೋತರೇನು..? ಗೆದ್ದರೇನಂತೆ ಯಾರ ಹಂಗುಗಳನ್ನು ಕ್ಯಾರಿ ಮಾಡಿಕೊಳ್ಳದೆ, ಜೆಸಿಐ ತನಗೊಂದು ಅವಕಾಶ ನೀಡಿದೆ, ಗೆದ್ದರೆ ಬದಲಾವಣೆ ತರುತ್ತೇನೆ, ಸೋತರೆ ಗೆದ್ದವರಿಗೆ ಅಭಿನಂದಿಸಿ ಜೆಸಿಐ ಕೆಲಸದಲ್ಲಿ ನಿರತನಾಗುತ್ತೇನೆ ಎನ್ನುವ ಜೆಸಿಐ ಸೆನೇಟರ್. ವಿನೀತ್ ಆರ್ ಪರವಾಗಿ ನಿಲ್ಲುವ ಮನಷ್ಯವಾದವಷ್ಟೆ, ಹೀಗಾಗಿ ಸೋಲು-ಗೆಲುವುಗಳ ಪರಮಾರ್ಶೆಗಳ ತರ್ಕವಿಲ್ಲದೆ, ಜೋನ್ಕಾನ್‌ನಲ್ಲಿ ಇಂತಿವರ ಚುನಾವಣೆಯ ಕರಪತ್ರ ಹಿಡಿಯುತ್ತೇನೆ, ಇದೇ ರೀತಿಯಲ್ಲಿಯೇ ದೂಡಿರುವ ವೇದಿಕೆಯಲ್ಲಿ ಜೆಸಿ.ಅನಿಷಾ ಕಾತರಕಿಯನ್ನು ಸೋಲಿಸಬೇಕು ಎಂದು ಹವಣಿಸುವ ಹಾಗೂ ಬಹಿರಂಗವಾಗಿ ಅಭಿಪ್ರಾಯಿಸುವವರ ವಿರುದ್ದವಾಗಿ ಜೆಸಿ.ಅನಿಷಾ ಕಾತರಕಿ ಅವರ ಉಪಾಧ್ಯಕ್ಷೀಯ ಕರಪತ್ರ ಹಿಡಿದು ಮತಯಾಚಿಸುತ್ತೇನೆ ಎಂದು ಜೆಸಿಐ ಮೌಲ್ಯಗಳಿಗೆ ಅನುಗುಣವಾಗಿ ಉವಾಚಿಸುತ್ತೇನೆ.
- ಜೆಸಿ ಗಾರಾ ಶ್ರೀನಿವಾಸ್

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ