ರಮೇಶ್ ಕತ್ತಿ ವಿರುದ್ಧ ಶಿವಮೊಗ್ಗ ಜಿಲ್ಲಾ ವಾಲ್ಮೀಕಿ ಮುಖಂಡರಿಂದ ದೂರು
ಮಾಜಿ ಸಂಸದ ಬೆಲ್ಲದ ಬಾಗೇವಾಡಿಯ ರಮೇಶ ಕತ್ತಿ ತಂದೆ ವಿಶ್ವನಾಥ ಕತ್ತಿ, ಲಿಂಗಾಯತ ಜಾತಿ ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ತನ್ನ ಬೆಂಬಲಿಗರೊಂದಿಗೆ ಮಾತನಾಡುತ್ತಾ ವಾಲ್ಮೀಕಿ ಬೇಡನಾಯಕ ಜನಾಂಗವನ್ನು " ಬೇಡರ ಜಾತಿಯ ಜೊತೆ ಅವ್ಯಾಚ್ಯ ಪದ ಬಳಕೆ" ಆ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ವಾಲ್ಮೀಕಿ ಸಮಾಜಕ್ಕೆ ಅವಮಾನಿಸಿದ್ದಾನೇ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದೆ. ಆದರಿಂದ ದೇಶದಾದ್ಯಂತ ವಾಲ್ಮೀಕಿ ನಾಯಕ ಸಮುದಾಯದ ಜನರ ಮನಸ್ಸಿಗೆ ತೀವ್ರ ನೋವು ಉಂಟಾಗಿದೆ. ಅ ವಿಚಾರಕ್ಕಾಗಿ ಇಂದು ಶಿವಮೊಗ್ಗ ಜಿಲ್ಲಾ ಎಸ್‌ಪಿ ಮಿಥನ್ ಕುಮಾರ್ ರವರಿಗೆ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷರಾದ ಶ್ರೀಧರ್.ಕೆ.ಆರ್, ಉಪಾಧ್ಯಕ್ಷರಾದ N.T ಲೋಕಪ್ಪ, ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷರಾದ ಎಂ.ಎಚ್.ಶೇಖರಪ್ಪ ಚೋರಡಿ ಗ್ರಾಮ ಪಂಚಾಯಿತಿ ಸದಸ್ಯರಾದ ರಾಜೇಶ್ ಚೋರಡಿ. ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಹನುಮಂತಾಪುರ ಎಂ.ಚಂದ್ರಪ್ಪ ಹಾಗೂ ವಾಲ್ಮೀಕಿ ನಾಯಕ ಸಮಾಜದ ಮುಖಂಡರುಗಳು ಇಂದು ಶಿವಮೊಗ್ಗ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಎಸ್.ಪಿ.ಮಿಥುನ್ ಕುಮಾರ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಲಾಯಿತು. ತದನಂತರ ಮಾತನಾಡಿದ ಎಸ್‌ಪಿ ಸಾಹೇಬರು ಕಾನೂನು ರಿತ್ಯಾ ಕ್ರಮ ಜರುಗಿಸುವ ಭರವಸೆ ನೀಡಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ