ಮಾನವೀಯ ಮೌಲ್ಯ ಅಳವಡಿಸಿಕೊಳ್ಳುವುದು ಅವಶ್ಯ
ಶಿವಮೊಗ್ಗ: ಮಾನವೀಯ ಮೌಲ್ಯಗಳು ವ್ಯಕ್ತಿಗೆ ಶಾಂತಿ ಮತ್ತು ತೃಪ್ತಿದಾಯಕ ಜೀವನ ನಡೆಸಲು ಸಹಕಾರ ಒದಗಿಸುತ್ತದೆ. ಜೀವನದಲ್ಲಿ ಪ್ರತಿಯೊಬ್ಬರೂ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಲೇಖಕ ಡಾ. ರಾಜೇಂದ್ರ ಬುರುಡಿಕಟ್ಟಿ ಹೇಳಿದರು.
ಗೋಪಾಲಗೌಡ ಬಡಾವಣೆಯಲ್ಲಿ ಏರ್ಪಡಿಸಿದ್ದ ಫ್ರೆಂಡ್ ಸೆಂಟರ್ 59ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಸಹಾನುಭೂತಿ, ಪ್ರಾಮಾಣಿಕತೆ, ನ್ಯಾಯ, ಸಮಾನತೆ, ಕರುಣೆ ಮತ್ತು ಸಮಾಜದ ಒಳಿತಿಗಾಗಿ ಜೀವನದಲ್ಲಿ ಮಾನವೀಯ ಮೌಲ್ಯಗಳು ಮುಖ್ಯವಾಗಿದೆ. ಎಲ್ಲರ ಅಭಿಪ್ರಾಯಗಳನ್ನು ಗೌರವಿಸುವುದು ಮತ್ತು ಸ್ವೀಕರಿಸುವುದು. ಇತರರಿಗೆ ಸಹಾಯ ಮಾಡಲು ಮುಂದಾಗುವುದು. ಒಟ್ಟಾಗಿ ಕೆಲಸ ಮಾಡುವುದು. ಸಾಮರಸ್ಯದಿಂದ ಬದುಕಲು ಪ್ರಯತ್ನಿಸುವುದು ಅಗತ್ಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನೂತನ ಕಾರ್ಯಕಾರಿ ಮಂಡಳಿಯ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಅತ್ಯುತ್ತಮ ನೂತನ ಸದಸ್ಯರಿಗೆ ಮತ್ತು ಅತ್ಯುತ್ತಮ ಸಹಕಾರಿ ಪ್ರಶಸ್ತಿ ತೆಗೆದುಕೊಂಡವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಎಸ್ ಎಸ್ ಎಲ್ ಸಿ ಯಲ್ಲಿ ಹೆಚ್ಚಿನ ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಫ್ರೆಂಡ್ಸ್ ಸೆಂಟರ್ ಏಳಿಗೆಗಾಗಿ ಶ್ರಮಿಸಿದ ಎಲ್ಲ ಪೂರ್ವಧ್ಯಕ್ಷರುಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
ಫ್ರೆಂಡ್ ಸೆಂಟರ್ ಅಧ್ಯಕ್ಷ ಧನರಾಜ್, ಫ್ರೆಂಡ್ಸ್ ಸೆಂಟರ್ ಪೂರ್ವಧ್ಯಕ್ಷ ನಾಗರಾಜ್ ವಿ, ಲೋಕೇಶ್, ವೆಂಕಟೇಶ್ ಮೂರ್ತಿ, ಜಿ.ವಿಜಯಕುಮಾರ್, ಮಹೇಶ್ವರಪ್ಪ, ರವೀಂದ್ರನಾಥ್ ಐತಾಳ್, ಮಲ್ಲಿಕಾರ್ಜುನ ಕಾನೂರ್, ಸ್ವಪ್ನ ಬದ್ರಿನಾಥ್, ಭಾಗ್ಯ ರಮೇಶ್ ಭಟ್ , ಸ್ಮಿತಾ ನವೀನ್, ಜಗನ್ನಾಥ್, ಪಂಚಾಕ್ಷರಯ್ಯ ಹಿರೇಮಠ್, ರಾಜೇಂದ್ರ ಪಿ, ಮೋಹನ್ ಕುಮಾರ್ ಇದ್ದರು. ಸೃಜನ್ ಚಂದ್ರಶೇಖರ್ ಪ್ರಾರ್ಥಿಸಿದರು. ಸತ್ಯನಾರಾಯಣ ಜಿ ಸ್ವಾಗತಿಸಿದರು. ಕಾರ್ಯದರ್ಶಿ ರಮೇಶ್ ಬಾಬು ವಂದಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ