ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ನಿಕುಂಜ ಹೆಚ್ ಪಿ ಇವನು ಕಂಚಿನ ಪದಕ
ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯಿಂದ ಬೆಳಗಾಂನಲ್ಲಿ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ನಿಕುಂಜ ಹೆಚ್ ಪಿ ಇವನು ಕಂಚಿನ ಪದಕವನ್ನು ಪಡೆದಿರುತ್ತಾರೆ.
ಶಿವಮೊಗ್ಗ ನಗರದ ವಕೀಲರಾದ ಪ್ರವೀಣ್ ಕುಮಾರ್ ಎಚ್ ಬಿ ಮತ್ತು ಪವಿತ್ರ ಇವರ ಸುಪುತ್ರನಾಗಿರುತ್ತಾನೆ.
ಶಿವಮೊಗ್ಗದ ಸರ್ ಎಂ ವಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ಯನ್ನು ವ್ಯಾಸಂಗ ಮಾಡುತ್ತಿದ್ದಾನೆ.
ನಮ್ಮ ಶಿವಮೊಗ್ಗ ಸ್ಕೇಟಿಂಗ್ ಅಕಾಡೆಮಿಯ ಎಂ ರವಿ ಇವರ ಪ್ರಶಿಕ್ಷಣಾರ್ಥಿಯಾಗಿದ್ದು ವಿಶ್ವಾಸ್ ಮತ್ತು ಆತೀಶ್ ಇವರ ಮಾರ್ಗದರ್ಶನದಲ್ಲಿ ಈ ಉತ್ತಮ ಪ್ರದರ್ಶನವನ್ನು ನೀಡಿರುತ್ತಾನೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ