ಅರಣ್ಯ ಜೇನು ಸಾಕಾಣಿಕೆ ತರಬೇತಿ – ಉಚಿತ ವಸತಿ, ಆಹಾರ ಹಾಗೂ ಸರ್ಕಾರದ ಪ್ರಮಾಣಪತ್ರ

   

   ಬೆಂಗಳೂರು: ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI), ಬೆಂಗಳೂರು ವತಿಯಿಂದ “ಹಸಿರು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ”ದಡಿ ಅರಣ್ಯ ಜೇನು ಸಾಕಾಣಿಕೆ (Apiculturist - Wild Bee NTFP) ಕುರಿತು 45 ದಿನಗಳ ಉಚಿತ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

        ಈ ತರಬೇತಿಗೆ 18 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಅರ್ಹರು. ಕನಿಷ್ಠ ವಿದ್ಯಾರ್ಹತೆ 7ನೇ ತರಗತಿ ಮತ್ತು ಅದಕ್ಕಿಂತ ಹೆಚ್ಚು ಇರಬೇಕು. ಕೋರ್ಸ್ ಅವಧಿ 45 ದಿನಗಳು (ಒಟ್ಟು 240 ಗಂಟೆಗಳು) ಆಗಿದ್ದು, ಯಾವುದೇ ಕೋರ್ಸ್ ಶುಲ್ಕವಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.

          ಅರ್ಹ ಅಭ್ಯರ್ಥಿಗಳನ್ನು ಲೇಖಿತ ಪರೀಕ್ಷೆ ಅಥವಾ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ವಸತಿ ಮತ್ತು ಆಹಾರ ಸೌಲಭ್ಯವನ್ನು ನೀಡಲಾಗುತ್ತದೆ.

        ತರಬೇತಿ ಪೂರ್ಣಗೊಳಿಸಿದವರಿಗೆ ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಪ್ರಮಾಣಪತ್ರ ನೀಡಲಾಗುವುದು.

        ತರಬೇತಿ ಡಿಸೆಂಬರ್ 1, 2025 ರಿಂದ ಬೆಂಗಳೂರಿನ JP ನಗರದಲ್ಲಿರುವ EMPRI ಕ್ಯಾಂಪಸ್‌ನಲ್ಲಿ ಆರಂಭವಾಗಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 15, 2025 ಆಗಿದೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗಾಗಿ ಅಭ್ಯರ್ಥಿಗಳು QR ಕೋಡ್ ಸ್ಕ್ಯಾನ್ ಮಾಡಬಹುದು ಅಥವಾ empri.envis@gmail.com ಗೆ ಸಂಪರ್ಕಿಸಬಹುದು.
ದೂರವಾಣಿ: 080-2649 0747 / 8050381680

👉 ಟಿಪ್ಪಣಿ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ದಿನಾಂಕವನ್ನು ನಂತರ ಪ್ರಕಟಿಸಲಾಗುತ್ತದೆ.

🌿 ಪರಿಸರ ಸ್ನೇಹಿ ಉದ್ಯೋಗಕ್ಕೆ ಅವಕಾಶ – ಪ್ರಕೃತಿಯ ಜೊತೆಗೆ ಜೀವನೋಪಾಯ!

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ