ಜಿಲ್ಲೆಯ ಎಲ್ಲಾ ಮಾಧ್ಯಮ ಮಿತ್ರರು ಪತ್ರಿಕಾಗೋಷ್ಠಿಗೆ ಹಾಜರಾಗಲು ವಿನಂತಿ
ಜಿಲ್ಲೆಯ ಎಲ್ಲಾ ಮಾಧ್ಯಮ ಮಿತ್ರರು ಪತ್ರಿಕಾಗೋಷ್ಠಿಗೆ ಹಾಜರಾಗಲು ವಿನಂತಿಸಲಾಗಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಶಿವಮೊಗ್ಗ ಘಟಕದ ವತಿಯಿಂದ ದಿನಾಂಕ 06-11-2025 ರಂದು ಬೆಳಿಗ್ಗೆ 11-30 ಕ್ಕೆ ಮಥುರಾ ಪ್ಯಾರಡೈಸ್ ಹೋಟೆಲ್ನ 3 ನೇ ಅಂತಸ್ತಿನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಸಂಘದ ಬೆಂಗಳೂರು ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಮತ್ತು ಸಂಘದ ಜಿಲ್ಲಾಧ್ಯಕ್ಷರು ಮಾತನಾಡಲಿದ್ದಾರೆ.
ದಿನಾಂಕ 20-11-2025 ರಂದು ಶಿವಮೊಗ್ಗ RTO ರಸ್ತೆಯಲ್ಲಿ ಇರುವ ಸರ್ಕಾರದ ಪತ್ರಿಕಾಭವನಕ್ಕೆ ಬೀಗ ಹಾಕುವ ಚಳುವಳಿ ಹಮ್ಮಿಕೊಂಡಿದ್ದು, ಹಕ್ಕೋತ್ತಾಯಗಳು,ಬೇಡಿಕೆಯ ಬಗ್ಗೆ ಹಾಗೂ ಪ್ರತಿಭಟನಾ ಧರಣಿಯ ರೂಪುರೇಷೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದಾರೆ.
ಆಗಾಗಿ ಜಿಲ್ಲೆಯ ಎಲ್ಲಾ ಪತ್ರಕರ್ತರು ದಯವಿಟ್ಟು ಪತ್ರಿಕಾ ಗೋಷ್ಠಿಗೆ ಹಾಜರಾಗಬೇಕಾಗಿ ವಿನಂತಿಸಲಾಗಿದೆ.
ಈ ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಘಟಕದ ಧ್ವನಿ ಸಂಘದ ಎಲ್ಲಾ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಕಾನೂನು ಸಲಹೆಗಾರರು ಉಪಸ್ಥಿತರಿರುತ್ತಾರೆ.
ಡಿ.ಜಿ.ನಾಗರಾಜ್
ಜಿಲ್ಲಾಧ್ಯಕ್ಷರು
KWJV,ಶಿವಮೊಗ್ಗ
ಮೊ.9449063043
ಸತೀಶ್ ಗೌಡ.ಕೆ.ಎಂ
ಪ್ರಧಾನ ಕಾರ್ಯದರ್ಶಿ
KWJV ಶಿವಮೊಗ್ಗ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ