ಮನೋಬಿಂಬ ಚಿತ್ರಕಲಾ ಸ್ಪರ್ಧೆ – 2025 : ಸೃಜನ ಶೀಲತೆಯ ಹೊಸ ರಂಗು


ಶಿವಮೊಗ್ಗ: ಯುವ ಪ್ರತಿಭೆಗಳಿಗೆ ತಮ್ಮ ಕಲಾತ್ಮಕ ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆ ಒದಗಿಸುವ ಉದ್ದೇಶದಿಂದ ವಿವೇಕ್ ಫೌಂಡೇಶನ್, ಜೆಸಿಐ ಶಿವಮೊಗ್ಗ ವಿವೇಕ್ ಇವರ ಸಹಯೋಗದಲ್ಲಿ “ಮನೋಬಿಂಬ ಚಿತ್ರಕಲಾ ಸ್ಪರ್ಧೆ – 2025” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

        ಈ ಸ್ಪರ್ಧೆ ನವೆಂಬರ್ 9, 2025 (ಭಾನುವಾರ) ದಂದು ಬೆಳಿಗ್ಗೆ 9.00 ರಿಂದ 11.00 ಗಂಟೆಯವರೆಗೆ, ಸ್ವಾಮಿ ವಿವೇಕಾನಂದ ಪಾರ್ಕ್, ಎಂಟನೇ ತಿರುವು, ಅಶ್ವಥ್ ನಗರ, ಶಿವಮೊಗ್ಗದಲ್ಲಿ ನಡೆಯಲಿದೆ.

ವಯೋಮಾನದ ಪ್ರಕಾರ ವಿವಿಧ ತರಗತಿಗಳ ವಿದ್ಯಾರ್ಥಿಗಳಿಗೆ ವಿಭಿನ್ನ ವಿಷಯಗಳ ಮೇಲೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ:

🎨 ಶಿಶುವಿಹಾರ (ಎಲ್.ಕೆ.ಜಿ./ಯು.ಕೆ.ಜಿ.) – ವಿಷಯ: ಹೂವಿನೊಂದಿಗೆ ಚಿಟ್ಟೆ

🎨 1 ರಿಂದ 4ನೇ ತರಗತಿ – ವಿಷಯ: ನೆಚ್ಚಿನ ಸಾಕು ಪ್ರಾಣಿ

🎨 5 ರಿಂದ 7ನೇ ತರಗತಿ – ವಿಷಯ: ವನ್ಯ ಜೀವಿಗಳು

🎨 8 ರಿಂದ 10ನೇ ತರಗತಿ – ವಿಷಯ: ನನ್ನ ಕಲ್ಪನೆಯ ಉದ್ಯಾನವನ

🎨 ಪಿ.ಯು.ಸಿ. (ಪ್ರಥಮ-ದ್ವಿತೀಯ) – ವಿಷಯ: ಕರ್ನಾಟಕ ಪಶ್ಚಿಮ ಘಟ್ಟ (Lion-Tailed Macaque)

🎨 ಡಿಗ್ರಿ / ಬಿ.ಇಡ್. (ಪ್ರಥಮ ದ್ವಿತೀಯ ತೃತೀಯ) – ವಿಷಯ:  ಸುಂದರ ಪರಿಸರದ ಕರ್ನಾಟಕ ಐತಿಹಾಸಿಕ ಸ್ಥಳ

         ಸ್ಪರ್ಧೆಯ ಫಲಿತಾಂಶವನ್ನು ಅದೇ ದಿನ ಮಧ್ಯಾಹ್ನ 12.30ಕ್ಕೆ ಪ್ರಕಟಿಸಲಾಗುತ್ತದೆ. ವಿಜೇತರಿಗೆ ಪ್ರಮಾಣಪತ್ರ ಮತ್ತು ಆಕರ್ಷಕ ಬಹುಮಾನಗಳು ವಿತರಿಸಲಾಗುತ್ತದೆ.

📱 ನೋಂದಣಿಗೆ ಕ್ಯೂಆರ್ ಕೋಡ್ ಸೌಲಭ್ಯವಿದ್ದು, ಹೆಚ್ಚಿನ ಮಾಹಿತಿಗೆ 63621 49080 / 94485 31014 ಸಂಪರ್ಕಿಸಬಹುದು.

        ಸಂಘಟಕರು : “ಪ್ರತಿ ತರಗತಿಯ ಮೊದಲ, ದ್ವಿತೀಯ ಹಾಗೂ ತೃತೀಯ ಸ್ಥಾನ ವಿಜೇತರಿಗೆ ವಿಶೇಷ ಬಹುಮಾನ ನೀಡಲಾಗುವುದು. ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುತ್ತದೆ. ಕಲೆಯ ಪ್ರೋತ್ಸಾಹವೇ ನಮ್ಮ ಉದ್ದೇಶ.”

       🎨 ವಿವೇಕ್ ಫೌಂಡೇಶನ್, ಜೆಸಿಐ ಶಿವಮೊಗ್ಗ ವಿವೇಕ್ , ಶಿವಮೊಗ್ಗ ಮೃಗಾಲಯ, ಸರ್ಜಿ ಫೌಂಡೇಶನ್ ಹಾಗೂ ಇತರ ಸಂಸ್ಥೆಗಳು, ಮತ್ತು ವಿವಿಧ ಶಾಲಾ ಸಂಸ್ಥೆಗಳ ಸಹಯೋಗದಲ್ಲಿ ಈ ಸಾಂಸ್ಕೃತಿಕ ಹಾಗೂ ಸೃಜನಾತ್ಮಕ ಕಾರ್ಯಕ್ರಮ ನಡೆಯಲಿದೆ.

        ಈ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಕಲಾತ್ಮಕ ಚೈತನ್ಯ ಬೆಳೆಸುವ ಪ್ರಯತ್ನವನ್ನು ಮೆಚ್ಚಿ, ಶಾಲೆಗಳು, ಪೋಷಕರು ಹಾಗೂ ಸಾರ್ವಜನಿಕರು ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲು ಸಂಘಟಕರು ಮನವಿ ಮಾಡಿದ್ದಾರೆ.

🖌️ ವರದಿ: ಚಂದ್ರೋದಯ ಪತ್ರಿಕೆ, ಶಿವಮೊಗ್ಗ

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ