ಶಬರಿಮಲೆ‌ ಯಾತ್ರೆಯಿಂದ ಸಕಲ ಇಷ್ಟಾರ್ಥ ಸಿದ್ಧಿ


ಶಿವಮೊಗ್ಗ: ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಭಕ್ತರನ್ನು ಹೊಂದಿರುವ ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ಪ್ರತಿ ವರ್ಷ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಭಕ್ತರು ಶಬರಿಮಲೆ ಯಾತ್ರೆ ಸಂದರ್ಭದಲ್ಲಿ ಸ್ವಚ್ಛತೆ

 ಕಾಪಾಡಿಕೊಳ್ಳುವುದರ ಜೊತೆಗೆ ಆರೋಗ್ಯದ ಬಗ್ಗೆಯೂ ಸಹ ಕಾಳಜಿ ವಹಿಸಬೇಕು ಎಂದು ಗುರುಸ್ವಾಮಿ ಪಿ.ಹರೀಶ್ ಮೊದಲಿಯಾರ್ ಹೇಳಿದರು.

38 ಬಾರಿ ಶಬರಿಮಲೆ ಯಾತ್ರೆ ಕೈಗೊಂಡು ಯಶಸ್ವಿಯಾಗಿ ಪೂರೈಸಿ 28 ಜನರ ತಂಡದೊಂದಿಗೆ ಶಬರಿಮಲೆ ಯಾತ್ರೆಗೆ ರಾಮಣ್ಣ ಶ್ರೇಷ್ಠಿ ಪಾರ್ಕ್  ಸಾರ್ವಜನಿಕ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಯಾತ್ರಾರ್ಥಿಗಳಿಗೆ ಶುಭ ಹಾರೈಸಿ, ನಿರಂತರವಾಗಿ ಭಕ್ತರು ಯಾತ್ರೆ  ಕೈಗೊಳ್ಳಬೇಕು ಎಂದು ತಿಳಿಸಿದರು.

50ಕ್ಕೂ ಹೆಚ್ಚು ಬಾರಿ ಶಬರಿಮಲೆ ಯಾತ್ರೆ ಯಶಸ್ವಿಯಾಗಿ ಪೂರೈಸಿದ ಮಣ್ಣುನಾಡರ್,  ಬಿ ಪೂಸ್ವಾಮಿ,  ಪಿ ಹರೀಶ್ ಅವರನ್ನು  ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಸನ್ಮಾನಿಸಿದರು.

ಜಿ.ವಿಜಯಕುಮಾರ್ ಮಾತನಾಡಿ, ಶಬರಿಮಲೆ ಯಾತ್ರೆಯಿಂದ ಮನಸ್ಸಿಗೆ ಶಾಂತಿ ನೆಮ್ಮದಿ, ನಮ್ಮ ಬೇಡಿಕೆಗಳು  ಇಷ್ಟಾರ್ಥಗಳು ಸಿದ್ಧಿಯಾಗುವುದರ ಜೊತೆಗೆ ವೃತವನ್ನು ಮಾಡುವುದರಿಂದ ಸರ್ವರಿಗೂ ಒಳಿತಾಗುತ್ತದೆ. ಆಧ್ಯಾತ್ಮಿಕ ಹಾದಿಯಲ್ಲಿ ಸಾಗಲು ಈ ಯಾತ್ರೆಯೂ ಬಹಳ ಉಪಯುಕ್ತ ಎಂದರು.

ಶಬರಿಮಲೆ ಯಾತ್ರೆಯಲ್ಲಿ ಪ್ರಮುಖರಾದ  ಸೇಲ್ವರಾಜ್ ಸುರೇಶ್, ಆದರ್ಶ,  ಪಿ ಬದ್ರಿನಾಥ್,  ಮಲ್ಲಿಕಾರ್ಜುನ ಕಾನೂರ್, ಸೆಂತಿಲ್ ವೇಲನ್, ಕೆ.ಸಿ.ಸುರೇಶ, ಎಮ್. ರಾಜು, ಹೆಚ್.ಸಿ.ಶಿವಮೂರ್ತಿ, ಕೆ.ಸೆಲ್ವರಾಜ್, ಎಸ್. ಆರ್.ಆದರ್ಶ್ ಮತ್ತಿತರರು ಇದ್ದರು.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ