ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯ ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಒಳ ಮೀಸಲಾತಿ ಕುರಿತು ಜಾಗೃತಿ ಸಭೆ
ದಿನಾಂಕ 16/04/2025 ರಂದು ಒಳಮೀಸಲಾತಿಗೆ ಆಗ್ರಹಿಸಿ ಕ್ರಾಂತಿಕಾರಿ ರಥಯಾತ್ರೆಯು ಇಂದು ಶಿವಮೊಗ್ಗ ನಗರಕ್ಕೆ ಆಗಮಿಸಿದ್ದು ಹೊಸಮನೆ ಬಡಾವಣೆಯ ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಒಳ ಮೀಸಲಾತಿ ಕುರಿತು ಜಾಗೃತಿ ಸಭೆ ನಡೆಸಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಭಾಸ್ಕರ್ ಪ್ರಸಾದ್ ರವರು ನಾಗಮೋಹನ್ ದಾಸ್ ಆಯೋಗಕ್ಕೆ ಮಾಹಿತಿ ಒದಗಿಸಲು ಜಾತಿ ಗಣತಿಗೆ ಸಮೀಕ್ಷೆಗೆ ಬಂದಾಗ ಮಾದಿಗ ಎಂದೇ ಬರೆಸಿ ಎಂದು ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಯುವಕರ ಸೇವಾ ಸಮಿತಿ ಅಧ್ಯಕ್ಷರಾದ ಸತೀಶ್ ಕೆ.ಉಪಾಧ್ಯಕ್ಷರಾದ ರಾಮ್ ಕುಮಾರ್ ಆರ್ ಜಿಲ್ಲಾ ಆದಿಜಾಂಬವ ಸಂಘದ ಅಧ್ಯಕ್ಷರಾದ ಎ ಕೆ ಅಣ್ಣಪ್ಪ ಮುಖಂಡರಾದ ಶಿವಲಿಂಗಪ್ಪ ಹಾಗೂ ಒಳಮೀಸಲಾತಿ ಹೋರಾಟಗಾರರಾದ ಪ್ರಭುರಾಜ್,ಸುರೇಶ್ ಮಳಲಿಯಪ್ಪ ಹಾಗೂ ಕೆಪಿಸಿ ಪ.ಜಾತಿ ಹಾಗೂ ಪ.ವರ್ಗದ ನೌಕರ ಸಂಘದ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷರಾದ ಹೆಚ್ ಆರ್ ಮಲ್ಲಿಕಾರ್ಜುನ ಸ್ವಾಮಿ.ಮುಖಂಡರಾದ ಗೋಪಾಲಕೃಷ್ಣ ,ಸುನಿಲ್ ಎನ್.ಅನುಪ್ ವಿ.ಮಧುಸೂಧನ್.ರವಿ.ಶಿವು ಪ್ರಸಾದ್.ನಾಗರಾಜ್. ಕಿಶೋರ್ ಕುಮಾರ್ ಜಿ.ಕಿರಣ ಎಂ ಎ.ನರೇಶ್.ಎನ್ ರಾಮಕೃಷ್ಣ.ಅನಿಲ್.ಆರ್.ಯೋಗೇಶ್ ಆರ್. ಶಿವು. ಹೇಮಂತ್.ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು ಕ್ರಾಂತಿಕಾರಿ ರಥಯಾತ್ರೆಯ ಹೋರಾಟಗಾರಿಗೆ ಸನ್ಮಾನ ಮಾಡಿ ಶುಭ ಹಾರೈಸಿದರು.ಪ್ರಾಧ್ಯಾಪಕರಾದ ರಘು ಮಲ್ಲಣ್ಣ ನವರು ಪ್ರಾಸ್ತಾವಿಕ ಮಾತನಾಡಿದರು. ವಕೀಲರಾದ ನಿರಂಜನ್ ಮೂರ್ತಿ ಆರ್ ಕೆ ಸ್ವಾಗತ ಭಾಷಣಮಾಡಿ ಕಾರ್ಯಕ್ರಮ ನಿರೂಪಿಸಿದರು.
*******



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ