ನಗರದ ಹೋಟೆಲ್ ರಾಯಲ್ ಆರ್ಕಿಡ್ ನಲ್ಲಿ ವಲಯ 24, ಜೆಸಿಐ ಭಾರತದ ಭಾಷಣ ಕಲೆ (ಸ್ಪೀಚ್ ಕ್ರಾಫ್ಟ್) ತರಬೇತಿ ಕಾರ್ಯಗಾರ ಆಯೋಜನೆ

 


ದಿನಾಂಕ 18-04-2025 ಶುಕ್ರವಾರ ನಗರದ ಹೋಟೆಲ್ ರಾಯಲ್ ಆರ್ಕಿಡ್ ನಲ್ಲಿ ವಲಯ 24, ಜೆಸಿಐ ಭಾರತದ ಭಾಷಣ ಕಲೆ (ಸ್ಪೀಚ್ ಕ್ರಾಫ್ಟ್) ತರಬೇತಿ ಕಾರ್ಯಗಾರವನ್ನು ಜೆಸಿಐ ಶಿವಮೊಗ್ಗ ಚಿರಂತನ ಘಟಕದ ಅಧ್ಯಕ್ಷರಾದ ಜೆಸಿ ರುದ್ರೇಶ್ ಕೋರಿ ಹಾಗೂ ಪದಾಧಿಕಾರಿಗಳು ಆಯೋಜಿಸಿರುತ್ತದೆ.

ಈ ತರಬೇತಿ ಕಾರ್ಯಗಾರವನ್ನು ವಲಯ ಅಧ್ಯಕ್ಷರಾದ ಜೆಸಿ ಗೌರೀಶ್ ಭಾರ್ಗವ್ ಉದ್ಘಾಟಿಸಲಿದ್ದಾರೆ. 

ಮುಖ್ಯ ತರಬೇತುದಾರರಾಗಿ ರಾಷ್ಟ್ರೀಯ ತರಬೇತುದಾರ ಜೆಸಿ ಸುಧಾಕರ್ ಕಾರ್ಕಳ, ಸಹ ತರಬೇತುದಾರರಾಗಿ ಜೆಸಿ ಮಂಜುನಾಥ್ ಬಳ್ಳುಳ್ಳಿ, ಜೆಸಿ ನರೇಶ್ ಬಿ ಆಗಮಿಸುತ್ತಿದ್ದಾರೆ. ವಿಶೇಷವೆಂದರೆ ಈ ಮೂರು ಜನ ಪ್ರಮಾಣಿಕರಿಸಿದ (ಸರ್ಟಿಫೈಡ್) ರಾಷ್ಟ್ರೀಯ ತರಬೇತುದರಾಗಿರುತ್ತಾರೆ. 

ಈ ತರಬೇತಿ ಕಾರ್ಯಗಾರಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಅಭ್ಯರ್ಥಿಗಳು ಬರುತ್ತಿದ್ದು. ಎಲ್ಲರೂ ಜೆಸಿಐ ನ ಸದಸ್ಯರಾಗಿದ್ದು ಎರಡು ವರ್ಷ ನಿರಂತರ ಸದಸ್ಯತ್ವ ಹೊಂದಿದ್ದು, ಪರಿಣಾಮಕಾರಿ ಸಾರ್ವಜನಿಕ ಭಾಷಣ (ಎಫೆಕ್ಟಿವ್ ಪಬ್ಲಿಕ್ ಸ್ಪೀಕಿಂಗ್) ಮತ್ತು ಅಧ್ಯಕ್ಷಸ್ಥಾನ ಮತ್ತು ಸಂಸದೀಯ ಕಾರ್ಯವಿಧಾನ ( ಚರ್ಮನ್ ಶಿಪ್ ಅಂಡ್ ಪಾರ್ಲಿಮೆಂಟರಿ ಪ್ರೊಸೀಜರ್) ಈ ಎರಡು ತರಬೇತಿಯಲ್ಲಿ ಉತ್ತೀರ್ಣರಾಗಿ ಪ್ರಾಮಾಣಿಕರಿಸಬೇಕಾಗಿರುತ್ತದೆ. ಜೆಸಿಐ ವಲಯ ತರಬೇತಿದಾರರಾಗಲು ಬಾಷಣ ಕಲೆ (ಸ್ಪೀಚ್ ಕ್ರಾಫ್ಟ್) ಕಡ್ಡಾಯವಾಗಿ ತರಬೇತಿ ಪಡೆದಿರಬೇಕಾಗಿರುತ್ತದೆ.

ಈ ಕಾರ್ಯಕ್ರಮ ವಲಯ ಮಟ್ಟದ ತರಬೇತಿ ಕಾರ್ಯಕ್ರಮವಾಗಿದ್ದು, ಕೇವಲ 30 ಜನ ಜೆಸಿಐ ಸದಸ್ಯರಿಗೆ ಮಾತ್ರ ಅವಕಾಶವಿರುತ್ತದೆ. ಎರಡು ವರೆ ದಿನದ ತರಬೇತಿ ಕಾರ್ಯಗಾರ ಇದಾಗಿರುತ್ತದೆ. ಶುಕ್ರವಾರ ಮಧ್ಯಾನದಿಂದ ಶುರುವಾಗಿ ಭಾನುವಾರ ಸಂಜೆ ಮುಕ್ತಾಯಗೊಳ್ಳುತ್ತದೆ. 

ಜೆ ಸಿ ಐ ವ್ಯಕ್ತಿ ವಿಕಾಸನದ ಸಂಸ್ಥೆಯಾಗಿದ್ದು, ತರಬೇತಿ ಕಾರ್ಯಕ್ರಮಗಳು ಮುಖ್ಯ ಉದ್ದೇಶವಾಗಿದೆ. ದೇಶಕ್ಕಾಗಿ ನಾಯಕತ್ವ ಗುಣವಿರುವ ಯುವಕರನ್ನು ಸಿದ್ಧಪಡಿಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಉಪಸ್ಥಿತಿ ವಲಯ ಅಧ್ಯಕ್ಷರಾದ ಜೆ ಸಿ ಗೌರಿಶ್ ಭಾರ್ಗವ್, ವಲಯ ಉಪಾಧ್ಯಕ್ಷ ಜೆಸಿ ಪ್ರಮೋದ್ ಶಾಸ್ತ್ರಿ, ವಲಯ ನಿರ್ದೇಶಕ ನಾಗರಾಜ್ ಎ  ಕೆ,  ವಲಯ ಸಂಯೋಜಕರು ಜೆ ಸಿ ನವೀನ್ ಕುಮಾರ್ ಎನ್ ವಿ. ಜೆಸಿಐ ಶಿವಮೊಗ್ಗ ಚಿರಂತನ ಆಥಿತ್ಯ ಘಟಕದ ಅಧ್ಯಕ್ಷ ಜೆಸಿ ರುದ್ರೇಶ್ ಕೋರಿ, ಪೂರ್ವ ಅಧ್ಯಕ್ಷರು ಜೆಸಿ ಡಾಕ್ಟರ್ ನಾಗರಾಜ್, ಕಾರ್ಯದರ್ಶಿ ವೈಷ್ಣವಿ, ಮತ್ತು ಜೆಸಿ ಪ್ರಜ್ವಲ್ ಉಪಸ್ಥಿತರಿದ್ದರು.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ