ಭವ್ಯೋನ್ನತಿ" ಬೆಳವಣಿಗೆ ಮತ್ತು ಅಭಿವೃದ್ಧಿ ಸಮ್ಮೇಳನ : ಜೆಸಿಐ ಭಾರತ
. ಜೆಸಿಐ ಭಾರತ ವಲಯ 24ರ ವಲಯ ಮಟ್ಟದ ಕಾರ್ಯಕ್ರಮ, ಬೆಳವಣಿಗೆ ಮತ್ತು ಅಭಿವೃದ್ಧಿ ಸಮ್ಮೇಳನ (ಗ್ರೌತ್ ಅಂಡ್ ಡೆವಲಪ್ಮೆಂಟ್ ಕಾನ್ಫರೆನ್ಸ್ ) ನಗರದ ಅಡಿಕೆ ಮಂಡಿ ಕ್ಲಬ್ ನಲ್ಲಿ ಆತಿಥ್ಯ ಘಟಕ ಜೆಸಿಐ ಹೊಸನಗರ ಡೈಮಂಡ್ ಶನಿವಾರ 3ನೇ ತಾರೀಖು ಮೇ ತಿಂಗಳ ಶಿವಮೊಗ್ಗದ ಅಡಿಕೆ ಮಂಡಿ ಕ್ಲಬ್ ನಲ್ಲಿ ಆಯೋಜಿಸುತ್ತಿದೆ.
ಕಾರ್ಯಕ್ರಮದ ವಿಶೇಷ , ಮುಖ್ಯ ಆಕರ್ಷಣೆ ಜೆಫ್ಎಸ್ ರವಿಶಂಕರ್ ಅವರು. ಜೆಸಿಐ ಭಾರತದ ಆಡಳಿತ ಮಂಡಳಿಯ ಛೇರ್ಮನ್. ಜೆಸಿಐ ಭಾರತದಲ್ಲಿ ಸಾಕಷ್ಟು ನಾಯಕರನ್ನು ಸಿದ್ಧಪಡಿಸಿರುತ್ತಾರೆ. ಜೆಸಿಐ ಭಾರತದ ಭೀಷ್ಮ ಎಂದರೆ ತಪ್ಪಾಗಲಾರದು.
ಬೆಳವಣಿಗೆ ಮತ್ತು ಅಭಿವೃದ್ಧಿ ಎಂದರೆ, ಘಟಕಗಳಲ್ಲಿ ಸದಸ್ಯರ ನೋಂದಣಿ ಹೆಚ್ಚಿಸಿಕೊಳ್ಳುವುದು. ಜೆಸಿಗಳಿಂದ ನಾನ್ ಜಿಸಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಅನುದಾನ ಕ್ರೂಡಿಕರ್ಣ ಮಾಡುವುದು. ಈ ಅನುದಾನವನ್ನು ನೇರವಾಗಿ ಜೆಸಿಐ ಭಾರತದ ಕಛೇರಿಯ ಖಾತೆಗೆ ಹಾಕಿ, ಅಲ್ಲಿಂದ ವಿದ್ಯಾರ್ಥಿಗಳ ಖಾತೆಗೆ ವಿದ್ಯಾರ್ಥಿವೇತನ ರೂಪದಲ್ಲಿ ಅನುದಾನ ಬಳಕೆಯಾಗುತ್ತದೆ.
ಒಂದು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆಯುವುದು ಬೆಳವಣಿಗೆಯಾಗಿದೆ, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಒದಗಿಸುವುದು ಜೆಸಿಐ ಭಾರತದ ಅಭಿವೃದ್ಧಿಯಾಗಿದೆ. ಹೆನ್ರಿ ಗಿಸೆನ್‌ಬಿಯರ್ ಜೆಸಿಐ ನ ಸಂಸ್ಥಾಪಕರು ಇವರ ಹೆಸರಿನಲ್ಲಿ ವಿದ್ಯಾರ್ಥಿ ವೇತನವನ್ನು ಒದಗಿಸಲಾಗುತ್ತದೆ. 2024ರಲ್ಲಿ 2508 ಭಾರತದಲ್ಲಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಒದಗಿಸಲಾಗಿದೆ ಇದರಲ್ಲಿ ನಮ್ಮ ಕರ್ನಾಟಕದ ಅದರಲ್ಲೂ ಶಿವಮೊಗ್ಗದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆದಿರುತ್ತಾರೆ. ಉದ್ಯೋಗಿಗಳು, ಸ್ನೇಹಿತರು, ಯಾರು ಬೇಕಾದರೂ ಅನುದಾನ ನೀಡಬಹುದು, ಅವರು ನೀಡುವ ಅನುದಾನ ವಿದ್ಯಾರ್ಥಿ ವೇತನವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯ ಅಭಿವೃದ್ಧಿಗೆ ಬಳಕೆಯಾಗುತ್ತದೆ.
ಈ ಸಂದರ್ಭವನ್ನು ಘಟಕಗಳ ಅಧ್ಯಕ್ಷರು, ಸದಸ್ಯರುಗಳ, ವಲಯ ಮಂಡಳಿ ಜೊತೆ ಸಂಭ್ರಮಿಸಲು, ಈ ಬೆಳವಣಿಗೆ ಮತ್ತು ಅಭಿವೃದ್ಧಿ ಸಮ್ಮೇಳನ ಆತಿಥ್ಯ ಘಟಕದ ಮೂಲಕ ಆಯೋಜಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಅಧ್ಯಕ್ಷರು ಸದಸ್ಯರು , ವಲಯ ಮಂಡಳಿ, ಜೆಸಿಐ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ನೀಡಿ, ಕಾರ್ಯಕ್ರಮದ ಯಶಸ್ವಿಗೆ ಕಾರಣರಾಗಬೇಕಾಗಿ ಪತ್ರಿಕ ಸಭೆಯ ಮೂಲಕ ಎಲ್ಲರನ್ನು ಆಹ್ವಾನಿಸುತ್ತಿದ್ದೇನೆ.
- ಜೆಸಿಐ ಸೆನೆಟರ್ ಸಿಎ ಗೌರೀಶ್ ಭಾರ್ಗವ್ ವಲಯ ಅಧ್ಯಕ್ಷರು, ವಲಯ 24 ಜೆಸಿಐ ಭಾರತ,
ಉಪಸ್ಥಿತಿ ಜೆಸಿ ಪ್ರಮೋದ್ ಶಾಸ್ತ್ರಿ ವಲಯ ಉಪಾಧ್ಯಕ್ಷರು, ಜೆಸಿ ವಿನಾಯಕ್ ಕರಬಾ ಆತಿಥ್ಯ ಘಟಕದ ಅಧ್ಯಕ್ಷ, ಜೆಸಿ ಮಧುಸೂದನ್ ವಲಯ ಉಪಾಧ್ಯಕ್ಷ, ಜೆಸಿ ಸುದರ್ಶನ್ ವಲಯ ಉಪಾಧ್ಯಕ್ಷ, ಜೆಸಿ ನವೀನ್ ತಲಾರಿ ವಲಯ ಸಂಯೋಜಕರು.
.jpg)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ