KPTCL DEA ವೃತ್ತ ಸಮಿತಿ, ಶಿವಮೊಗ್ಗ ವತಿಯಿಂದ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ರವರ 164 ನೇ ಜನ್ಮ ದಿನಾಚರಣೆ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಡಿಪ್ಲೊಮಾ ಇಂಜಿನಿಯರ್ಸ್ ಅಸೋಸಿಯೇಶನ್ (KPTCL DEA)ವೃತ್ತ ಸಮಿತಿ, ಶಿವಮೊಗ್ಗ ವತಿಯಿಂದ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ರವರ 164 ನೇ ಜನ್ಮ ದಿನಾಚರಣೆಯನ್ನು ಶಿವಮೊಗ್ಗ ನಗರದ ಕರ್ನಾಟಕ ಸಂಘದ ಬಳಿ ಇರುವ ಸರ್ ಎಂ ವಿಶ್ವೇಶ್ವರಯ್ಯ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಟಿಸಿಎಲ್/ಮೆಸ್ಕಾಂ ನ DEA ನ ಉಪಾಧ್ಯಕ್ಷರಾದ ಶ್ರೀ ಎಂ ನವೀನ್ ಕುಮಾರ್, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಸತೀಶ್, ಶ್ರೀ ರವಿ ಎ ಎಸ್ ಮತ್ತು ಶಿವಮೊಗ್ಗ ವೃತ್ತ ಸಮಿತಿಯ ಉಪಾಧ್ಯಕ್ಷರಾದ ಶ್ರೀ ರವಿಕುಮಾರ್ ಡಿ ಬಿ, ಕಾರ್ಯದರ್ಶಿ ಶ್ರೀ ನಂಜುಂಡ ಕೆ ಸಿ, ಖಜಾಂಚಿಯವರಾದ ಶ್ರೀ ಸಂತೋಷ್ ಕುಮಾರ್, ನಿರ್ದೇಶಕರಾದ ಜಗದೀಶ್ ಹಾಗೂ ಶಿವಮೊಗ್ಗ ವೃತ್ತದ ಎಲ್ಲಾ ಡಿಪ್ಲೊಮಾ ಇಂಜಿನಿಯರ್ ಸದಸ್ಯರುಗಳು ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ