ಜೆಸಿಐ ಸಪ್ತಾಹ 6ನೇ ದಿನದ ಕಾರ್ಯಕ್ರಮ

ನಗರದ ಆರ್ ಎಂ ಎಲ್ ನಗರ, ಆಲ್ ಮೊಹಮ್ಮದ್ ಬಿಎಡ್ ಕಾಲೇಜು ನಲ್ಲಿ  ಜೆಸಿಐ ಶಿವಮೊಗ್ಗ ಶಾಶ್ವತಿ ಘಟಕ ದಿಂದ ಆಯೋಜನೆ ಮಾಡಲಾಗಿತ್ತು. ಜೆಸಿಐ ವೀಕ್ 2025ರ ಆರುನೇ ದಿನದ ಅಂಗವಾಗಿ, “Global Record Challenge” ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಭಾಗವಾಗಿ, ಇನ್ವೆಟ್ ಫೋಕಸ್ ಅಡಿಯಲ್ಲಿ 18ರಿಂದ 40 ವರ್ಷದೊಳಗಿನ ಯುವಕರಿಗೆ ಜೆಸಿಐ ಸಂಸ್ಥೆಯ ಪರಿಚಯ ನೀಡಲಾಯಿತು. ನಾಯಕತ್ವ ಹಾಗೂ ವ್ಯಕ್ತಿತ್ವ ವಿಕಾಸದ ಅವಕಾಶಗಳ ಬಗ್ಗೆ ಮಾಹಿತಿ ನೀಡಿ, ಯುವಕರಲ್ಲಿ ಜಾಗೃತಿ ಮೂಡಿಸಲಾಯಿತು.

ಕಾಲೇಜು ವಿದ್ಯಾರ್ಥಿಗಳಿಗೆ ಜೆಸಿಐ ಸಂಸ್ಥೆಯ ಮೌಲ್ಯಗಳು, ಚಟುವಟಿಕೆಗಳು ಹಾಗೂ ಸದಸ್ಯತ್ವದ ಲಾಭಗಳ ಕುರಿತು ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳ ಮಾಹಿತಿಗಳನ್ನು ಸಂಗ್ರಹಿಸಿ, ಭವಿಷ್ಯದಲ್ಲಿ ಅವರನ್ನು ಜೆಸಿಐ ಕುಟುಂಬಕ್ಕೆ ಸೇರಿಸಿಕೊಳ್ಳುವ ಪ್ರೇರಣೆ ನೀಡಲಾಯಿತು.

ವಿಶೇಷ ಧನ್ಯವಾದಗಳು:

ಆಲ್ ಮೊಹಮ್ಮದ್ ಬಿಎಡ್ ಕಾಲೇಜಿನ ಪ್ರಾಂಶುಪಾಲರಾದ ಮೋಹನ್ ಸರ್ ಮತ್ತು ಆಡಳಿತ ಮಂಡಳಿಗೆ, ಜೆಸಿಐ ಶಿವಮೊಗ್ಗ ಶಾಸ್ವತಿ ಸಂಸ್ಥೆಯ ಅಧ್ಯಕ್ಷರಾದ ಜೆಸಿ ಶಿಲ್ಪ ಸತೀಶ್   ಕಾರ್ಯಕ್ರಮದ ಬೆಂಬಲಕ್ಕಾಗಿ ಧನ್ಯವಾದಗಳನ್ನೂ ಪತ್ರಿಕೆ ಮೂಲಕ ತಿಳಿಸಿರುತ್ತಾರೆ.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ