ಬರೆಯುತ್ತಾರೆ ಗಾರಾ.ಶ್ರೀನಿವಾಸ್ " ನೀವೊಬ್ಬರು ಕಾಮನ್ ಜೇಸಿಯಷ್ಟೆ "

ಬರೆಯುತ್ತಾರೆ ಗಾರಾ.ಶ್ರೀನಿವಾಸ್

" ನೀವೊಬ್ಬರು ಕಾಮನ್ ಜೇಸಿಯಷ್ಟೆ "

ಇಲ್ಯಾರು ಪ್ರಬುದ್ದರಲ್ಲ, ಅಪ್ರಬುದ್ದರೂ ಅಲ್ಲ,

ಹೆನ್ರಿಗೀಸನ್ ಬಿಯರ್ ಅಂತೂ ನೀವ್ಯಾರಲ್ಲ, 

ಸಂವಿಧಾನ ನೀವು ಖಂಡಿತವಾಗಿ ರಚಿಸಿದ್ದಲ್ಲ,

ಮಿಸೌರಿನಲ್ಲಿ ಜನ್ಮಿಸಿದ ಜ್ಞಾನದ ಪಥವಿದು,


ನಿಮ್ಮನೆ ಹಿತ್ತಲ ಇಕ್ಕೆಲದೊಳು ಹುಟ್ಟಿದ ಕಳೆಯಲ್ಲ,

ಜಾತಿ, ಮತ, ಪಂಥ, ತೊಳೆದ ನಾಯಕತ್ವದ ದೀವಿಗೆ,

ಭಾಷೆಗಳು ಅಮುಖ್ಯ, ಸಮುದಾಯಗಳ ಸೇವೆಯೇ ಮುಖ್ಯ,

ಇದೊಂದು ಜೆಸಿಐ ಚಳುವಳಿ, ಪ್ರತಿ ಜೆಸಿಗದು ಬಳುವಳಿ,


ಇಲ್ಯಾಕೆ ಗ್ರೂಪಿಸಂ, ಕ್ಯಾಸ್ಟಿಸಂ, ಪಾಲಿಟಿಕ್ಸ್ ಇಸಂಗಳು,

ಮೊದಲು ವಿದ್ಯಾರ್ಥಿಗಳಾಗಿ, ಕಲಿತು ಕಲೆತು ಕಲಿಸಿ,

ಲಭಿಸಿದ ಜೆಸಿಐ ಅರ್ಹತಾ ಟ್ರೈನಿಂಗ್ ಸರ್ಟಿಫಿಕೇಟ್ ಗಳು 

ಮ್ಯೂಸಿಯಂ ಪ್ರದರ್ಶನಕ್ಕಿಟ್ಟ ಸ್ತಂಭಿತ ಸ್ಲೇಟುಗಳಲ್ಲ,

ಇಲ್ಲಿವರೆಗೂ ಲೆಕ್ಕವಿಟ್ಟರೆ ಕಾರ್ಪೋರೆಟ್ ಟ್ರೈನರ್ ಆಗ್ಲಿಲ್ಲ,

ಇಲ್ಲಿ ಅರ್ಹತೆ ಗಿಟ್ಟಿಸಿಕೊಂಡವರು ಅಲ್ಯಾಕೆ ಕಳ್ಕೊಂಡ್ರು,

ಎಲ್ಲಾ ಕಲಿತವರೆಂದು ಬೀಗದೆ ನೊಗ ಕಟ್ಟಿದ ಎತ್ತುಗಳಾಗಿ,

ಜೋನ್ಕಾನ್ ಎಲೆಕ್ಷನ್ ಒಂದು ಟಾಸ್ಕ್  ಎಂದೇ ಭಾವಿಸಿ,

ಒಟ್ಟು ಸಮಾಜದ ಸಮಾಜಮುಖಿಯೊಳು ಸಾಧಿಸದವರು,

ಜೆಸಿಐನೊಳು ಅಧಿಕಾರವಿಡಿದು ಶಾಸನಗೈಯಲಾರರು..?!

ಇಂದಾದರೂ ....

ಕಾಮನ್ ಜೆಸಿಗಳಿಗೆ ಜಗದ ಭೂಪಟವ ಪರಿಚಯಿಸಿ,

ಯಾವುದೇ ಅಧಿಕಾರದಂದಣವಿಲ್ಲದೆ ಚಲಿಸುವ ನೈಜತೆ  ತಿಳಿಸಿ,

ಅವರೊಳಗಿನ ಜ್ಞಾನ, ರಚನಾತ್ಮಕತೆ, ವಹಿವಾಟುವಿನ ವಿಸ್ತೃತತೆ,

ಜೆಸಿಗಳಿಗೆ ಗೊತ್ತೇನು..?! ಅದರ‌ ಕೊಂಡಿ ಇದಾಗಬಲ್ಲದೆಂದು ಹೇಳಿದ್ದರೇನು..?!

ಆರೋಪಗಳ, ಪ್ರತ್ಯಾರೋಪಗಳು, ಒಳ ಕಂದಕ ಕುಣಿಗಳು,

All are Equal ಕುರಿತಾಗಿ ಹೇಳುವ quality ಗಳಿಲ್ಲವೇನು,

ಯಾವ ವಾಮಮಾರ್ಗಗಳು ಯಾರನ್ಮೂ ಸೋಲಿಸಲಾಗದು, ನೀವೇನು ಜೆಸಿಐ ಕಟ್ಟಿದ ಸಂಸ್ಥಾಪಕರಲ್ಲ, ಸಂವಿಧಾನ ರಚಿಸಿದ ಮಹಿಮರಲ್ಲ, ನೀವೊಬ್ಬರು ಕಾಮನ್ ಜೆಸಿಯಷ್ಟೆ, ಜೆಸಿಯಷ್ಟೆ.

         - ಜೆಸಿ ಗಾರಾ ಶ್ರೀನಿವಾಸ್ 

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ