ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಸಿಗೆ ಶಿಬಿರ ಸಹಕಾರಿ
ಶಿವಮೊಗ್ಗ: ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಲು ಬೇಸಿಗೆ ಶಿಬಿರ ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಸಾಗರ ಘಟಕದ ಸತೀಶ್‌ಕುಮಾರ್ ಹೇಳಿದರು.
ಸಾಗರ ತಾಲೂಕಿನ ಹೆಗ್ಗೋಡು ಸಮೀಪದ ನಂದಿಗೋಡಿನಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ಮೊಬೈಲ್, ಟಿವಿಗೆ ದಾಸರಾಗಿರುವ ಮಕ್ಕಳನ್ನು ಹೊರ ತರುವುದು ಕಷ್ಟ. ಆದರೆ ಐದು ದಿನ ಮಕ್ಕಳಿಗೆ ಸಾಹಸ ಕ್ರೀಡೆ, ಈಜು, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮಕ್ಕಳ ಸರ್ವೋತ್ತಮ ಅಭಿವೃದ್ದಿಗೆ ಪೂರಕವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ತಿಳಿಸಿದರು.
ಮಕ್ಕಳು ತಂದೆ ತಾಯಿಯಿಂದ ದೂರವಾಗಿ ಪರಿಚಯವೇ ಇಲ್ಲದವರೊಂದಿಗೆ ಸಂತೋಷದಿಂದ ಕಾಲ ಕಳೆಯುವ ಅವಕಾಶ ಮಾಡಿಕೊಟ್ಟೆವು. ಅದರ ಸದುಪಯೋಗ ಚೆನ್ನಾಗಿ ಆಗಿದೆ. ಆರು ದಿನ ಮಕ್ಕಳನ್ನು ಉತ್ತಮವಾಗಿ ನೋಡಿಕೊಳ್ಳಲು ಎಲ್ಲರ ಸದಸ್ಯರ ಸಹಕಾರ ಕಾರಣ ಎಂದು ಹೇಳಿದರು.
ರಾಜ್ಯ ಘಟಕದ ಚೇರ್ಮನ್ ಸುದರ್ಶನ್ ಪೈ ಮಾತನಾಡಿ, ಯೂತ್ ಹಾಸ್ಟೆಲ್ಸ್ ಎಲ್ಲ ತರಹದ ಸಮಾಜಮುಖಿ ಕಾರ್ಯಕ್ರಮಗಳನ್ನು ದೇಶಾದ್ಯಂತ ನೆರವೇರಿಸುತ್ತಿದೆ. ಮಕ್ಕಳ ಬೀಸಿಗೆ ಶಿಬಿರ ಯಶಸ್ವಿಯಾಗಿ ನೆರವೇರಿಸಿದ ಸಾಗರ ಘಟಕದ ಎಲ್ಲಾ ಸದಸ್ಯರಿಗೂ ಅಭಿನಂದನೆ ಎಂದು ತಿಳಿಸಿದರು.
ರಾಷ್ಟ್ರೀಯ ಉಪಾಧ್ಯಕ್ಷ ರವಿಕುಮಾರ್, ಪುರುಷೋತ್ತಮ್, ರಾಜ್ಯ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್, ಜಯರಾಮ್ ಪೂಜಾರಿ, ಎಸ್.ಎಸ್.ವಾಗೇಶ್, ಸುವರ್ಣ, ಮಲ್ಲಿಕಾರ್ಜುನ ಕಾನೂರ್, ರಾಜು ಅವರು ಭಾಗವಹಿಸಿದ ಮಕ್ಕಳಿಗೆ ನೆನಪಿನ ಕಾಣಿಕೆ ವಿತರಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ