ಇಂದಿನ ಒತ್ತಡದ ಬದುಕಿಗೆ ಆರೋಗ್ಯಪೂರ್ಣ ನಿತ್ಯ ಧ್ಯಾನದ ಅವಶ್ಯಕತೆ.... ಶ್ರೀ ಎಸ್ ಎಸ್ ಜ್ಯೋತಿಪ್ರಕಾಶ್

 


ಇಲ್ಲಿನ   ವಿನೋಬನಗರ -ಕಾಶಿಪುರದ ಕಲ್ಲಳ್ಳಿ  ಶ್ರೀ ಶಿವಗಂಗಾ ಯೋಗ ಕೇಂದ್ರದ  ಪಿರಮಿಡ್ ನಲ್ಲಿ ಶ್ರೀ ಹಾಲಯ್ಯ ವಿರಕ್ತ ಮಠ ರವರ ನೇತೃತ್ವದಲ್ಲಿ ಜರುಗಿದ ಧ್ಯಾನ ಕಾರ್ಯಕ್ರಮದಲ್ಲಿ  ರಾಘವ ಶಾಖೆಯ ಯೋಗ ಅಭ್ಯಾಸಿಗಳೊಂದಿಗೆ ಭಾಗವಹಿಸಿ ಯೋಗ ಕೇಂದ್ರದ ಟ್ರಸ್ಟಿ ಎಸ್.ಎಸ್. ಜ್ಯೋತಿಪ್ರಕಾಶ್ ರವರು ಮಾತನಾಡಿದರು 

ಅನುಭವ ಪಡೆದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ ಪ್ರಸ್ತುತ ಸನ್ನಿವೇಶದಲ್ಲಿ ಪ್ರತಿಯೊಬ್ಬರಿಗೂ  ಧ್ಯಾನ ಮತ್ತು ಯೋಗದ ಅವಶ್ಯಕತೆ ಇದೆ. ಮಕ್ಕಳು ವಿದ್ಯಾರ್ಥಿಗಳು ವೃತ್ತಿಪರರು ವ್ಯಾಪಾರಸ್ಥರು ಕೈಗಾರಿಕೋದ್ಯಮಿಗಳು ತಮ್ಮ ಕೆಲಸ ಕಾರ್ಯದ ಜೊತೆಗೆ ಆರೋಗ್ಯವನ್ನು  ಕಾಪಾಡಿಕೊಂಡು ತಮ್ಮ ಕ್ಷೇತ್ರದಲ್ಲಿ  ಯಶಸ್ವಿಯಾಗಲು ಮನಸು ಶಾಂತಿಯಿಂದ  ಉಲ್ಲಾಸದಿಂದ ಇರುವುದು ಬಹು ಮುಖ್ಯ. ದಿನನಿತ್ಯವೂ ಧ್ಯಾನ ಯೋಗ ದಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಲು ಸ್ವಲ್ಪ ಸಮಯ ಮೀಸಲಾಗಿಡಬೇಕು ಮತ್ತು ಮಕ್ಕಳಿರುವಾಗಲೇ ಈ ಅಭ್ಯಾಸವನ್ನು ರೂಡಿಸುವುದು ಪೋಷಕರ ಕರ್ತವ್ಯ ಎಂದರು 

ಶ್ರೀ ಹಾಲಯ್ಯ ವಿರಕ್ತಮಠ ರವರುಮಾತನಾಡುತ್ತಾ ನೂರಕ್ಕೂ ಹೆಚ್ಚು ಧ್ಯಾನ ಪದ್ಧತಿಗಳಿವೆ, ಆನಪಾನಸತಿ ಧ್ಯಾನದ ಸರಳ ವಿಧಾನವನ್ನು ತಿಳಿಸಿ, ಯೋಗಾಚಾರ್ಯ ಶ್ರೀ ಸಿ. ವಿ.ರುದ್ರಾರಾರಾಧ್ಯರ  ನೇತೃತ್ವದಲ್ಲಿ ನಿರ್ಮಾಣವಾಗಿರುವ ಪಿರಮಿಡ್ ಧ್ಯಾನಕ್ಕೆ ಪೂರಕವಾಗಿದೆ ಎಂದು ತಿಳಿಸಿದರು.

 ಇದೆ ಸಂದರ್ಭದಲ್ಲಿ ಯೋಗ ಶಿಬಿರದಲ್ಲಿ ಜಿ ವಿಜಯಕುಮಾರ್. ಯೋಗ ಶಿಕ್ಷಕರಾದ ವಿಜಯ ಕೃಷ್ಣ. ಎಚ್ ಕೆ ಹರೀಶ್. ದೀಪಕ್. ಸುಜಾತಾ ಮಧುಕೇಶ್ವರ್. ಗಾಯಿತ್ರಿ. ಶ್ರೀನಿವಾಸ್. ಕಾಟನ್ ಜಗದೀಶ್. ಆನಂದ್. ಸುಬ್ರಮಣಿ. ನರಸೋಜಿ ರಾವ್. ಶಂಕರ್ ಹಾಗೂ ಶಿವಗಂಗಾ ಯುವ ಕೇಂದ್ರದ ಯೋಗ ಶಿಬಿರಾರ್ಥಿಗಳು ಉಪಸ್ಥಿತರಿದರು  ಶಿಬಿರಾರ್ಥಿಗಳಿಂದ ಒಂದು ಗಂಟೆಗೂ ಹೆಚ್ಚು ಕಾಲ ಧ್ಯಾನ ಮಾಡಲಾಯಿತು

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ