ರೋಟರಿ ಕ್ಲಬ್ ಶಿವಮೊಗ್ಗ ಮಿಡ್ ಟೌನ್ ಗೆ ಪಬ್ಲಿಕ್ ಇಮೇಜ್ ಪ್ರಶಸ್ತಿ
ಶಿವಮೊಗ್ಗ: ಹಾಸನದಲ್ಲಿ ಆಯೋಜಿಸಿದ್ದ ರೋಟರಿ ಜಿಲ್ಲೆ3182ರ ಸ್ಪಂದನಾ ಜಿಲ್ಲಾ ಸಮ್ಮೇಳನದಲ್ಲಿ ರೋಟರಿ ಕ್ಲಬ್ ಆಫ್ ಶಿವಮೊಗ್ಗ ಮಿಡ್‌ಟೌನ್ ಸಂಸ್ಥೆಗೆ ಪಬ್ಲಿಕ್ ಇಮೇಜ್ ಪ್ರಶಸ್ತಿ ಲಭಿಸಿದೆ. 84 ಕ್ಲಬ್‌ಗಳ ಪೈಕಿ ರೋಟರಿ ಕ್ಲಬ್ ಆಫ್ ಶಿವಮೊಗ್ಗ ಮಿಡ್‌ಟೌನ್ ಗೌರವಾನ್ವಿತ ಪ್ರಶಸ್ತಿ ಪಡೆದುಕೊಂಡಿದೆ.
ಕ್ಲಬ್‌ನಲ್ಲಿ ಒಟ್ಟು 181 ಯೋಜನೆಗಳು ನಡೆದಿದ್ದು, ಅವುಗಳಲ್ಲಿ 113 ಪಬ್ಲಿಕ್ ಇಮೇಜ್ ಯೋಜನೆಗಳಾಗಿವೆ. ರೋಟರಿ ಕ್ಲಬ್ ಆಫ್ ಶಿವಮೊಗ್ಗ ಮಿಡ್‌ಟೌನ್ ಅಧ್ಯಕ್ಷ ಹರ್ಷ ಕಾಮತ್ ಮಾತನಾಡಿ, ರೋಟರಿ ಸಂಸ್ಥೆ ವತಿಯಿಂದ ಸಲ್ಲಿಸಿದ ಮನುಕುಲದ ಮಾನವೀಯ ಸೇವೆಗಳಿಗೆ ಸಂದ ಪ್ರಶಸ್ತಿ ಇದಾಗಿದೆ ಎಂದು ಹೇಳಿದರು.
ಸ್ನೇಹ, ಸೇವೆ ಹಾಗೂ ಪರಸ್ಪರ ಪ್ರೀತಿ, ಓಡನಾಟಗಳಿಗಾಗಿ ರೋಟರಿ ಸಂಸ್ಥೆ ಸ್ಥಾಪಿತವಾಗಿದ್ದು, ಈವರೆಗೂ ಪ್ರಪಂಚದಲ್ಲಿ ಸಾಕಷ್ಟು ವಿಶೇಷ ಸೇವಾ ಕಾರ್ಯಗಳನ್ನು ಮಾಡುವುದರ ಮುಖಾಂತರ ಮುಂಚೂಣಿಯಲ್ಲಿದೆ. ರೋಟರಿ ಕ್ಲಬ್ ಮಿಡ್‌ಟೌನ್ ಸಂಸ್ಥೆ ಹಲವಾರು ಚಟುವಟಿಕೆಗಳ ಮೂಲಕ ವಿಶೇಷವಾಗಿ ತನ್ನದೇ ಆದ ಛಾಪು ಮೂಡಿಸಿದೆ. ನಮ್ಮ ಕ್ಲಬ್‌ನ ಎಲ್ಲ ಸದಸ್ಯರ ಸಹಕಾರದಿಂದ ಪ್ರಶಸ್ತಿ ಲಭಿಸಿದೆ. ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಈ ಪ್ರಶಸ್ತಿಗಳನ್ನು ರೋಟರಿ ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ಅವರು ಹಾಗೂ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ವಿತರಿಸಿದರು. ಮೇನಕಾ ಜಗದೀಶ್, ಉಜ್ವಲಾ ರವಿ, ರಾಜೇಂದ್ರ ಕುಮಾರ್, ನಿಯೋಜಿತ ಅಧ್ಯಕ್ಷ ಡಾ. ಶ್ರೀಧರ್, ಪವಿತ್ರಾ ಕಾಮತ್, ವಿಶ್ವನಾಥ್, ವೀಣಾ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಶಶಿಕಾಂತ್ ನಾಡಿಗ್, ಇನ್ನರ್‌ವ್ಹೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್, ಜೀನತ್, ಮನೋಜ್, ಜಗದೀಶ್, ಸಂಗೀತಾ ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ