'301 ವೀಣಾ ನಾದ ಝೇಂಕಾರ'

       



ಶಿವಮೊಗ್ಗದ ಶ್ರೀ ಸರಸ್ವತಿ ಸಂಗೀತ ವಿದ್ಯಾಲಯದ ರಜತ ಮಹೋತ್ಸವದ ಅಂಗವಾಗಿ, ಸುಶ್ರಾವ್ಯ ಸಂಗೀತ ವಿದ್ಯಾಲಯ ಹಾಗೂ ಶ್ರೀ ಸಾಯಿಶಕ್ತಿ ಸಂಗೀತ ವಿದ್ಯಾಲಯಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ 'ವೀಣಾ ತ್ರಿಶತೋತ್ಸವ' ಕಾರ್ಯಕ್ರಮವನ್ನು ಮೈಸೂರು ರಾಜವಂಶಸ್ಥರು ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೊಂದಿಗೆ ಉದ್ಘಾಟಿಸಲಾಯಿತು.

     ಒಂದೇ ವೇದಿಕೆಯಲ್ಲಿ '301 ವೀಣಾ ನಾದ ಝೇಂಕಾರ' (301 Veena Nada Jhankara) ಮೊಳಗಿದ್ದು ನಿಜಕ್ಕೂ ರೋಮಾಂಚನಕಾರಿ ಮತ್ತು ಕಿವಿಗೆ ಇಂಪಾದ ಅನುಭವವಾಗಿತ್ತು. ನಮ್ಮ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಉಳಿಸಿ, ಬೆಳೆಸುತ್ತಿರುವ ಈ ಸಂಸ್ಥೆಗಳ ಕಾರ್ಯ ಶ್ಲಾಘನೀಯ.

      ಈ ಸಂದರ್ಭದಲ್ಲಿ ಶ್ರೀ ಡಿ. ಎಸ್. ಅರುಣ್ ವಿಧಾನ ಪರಿಷತ್ ಸದಸ್ಯರು, ಡಾ. ಧನಂಜಯ್ ಸರ್ಜಿ ವಿಧಾನ ಪರಿಷತ್ ಸದಸ್ಯರು, ಶಿವಮೊಗ್ಗ ನಗರದ ಶಾಸಕರಾದ ಎಸ್. ಏನ್ ಚೆನ್ನಬಸಪ್ಪ, ಶ್ರೀ ಕೆ. ಬಿ. ಪ್ರಸನ್ನ ಕುಮಾರ್ ಮಾಜಿ ಶಾಸಕರು, ಶ್ರೀಮತಿ ರೇವತಿ ಕಾಮತ್, ಶ್ರೀ ಉಮೇಶ್ ಹಾಲಾಡಿ ಸೇರಿದಂತೆ ವೇದಿಕೆ ಮೇಲೆ ಗಣ್ಯರು ಉಪಸ್ಥಿತರಿದರು.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ