ಆನಾಪಾನಸತಿ ಧ್ಯಾನ ಪದ್ಧತಿಯು ಸರಳ ಮತ್ತು ಪರಿಣಾಮಕಾರಿ

 


  ಧ್ಯಾನಗಳಲ್ಲಿ ಸರಳವಾಗಿ ಪರಿಣಾಮಕಾರಿ ಆಗಿರುವುದು ಆನಾಪಾನಸತಿ ಧ್ಯಾನ ಪದ್ಧತಿ ಎಂದು ಧ್ಯಾನ ತರಬೇತಿದಾರ ಡಾ. ಅಯ್ಯಪ್ಪ ಪಿಂಡಿ ಹೇಳಿದರು.

ರಾಜೇಂದ್ರ ನಗರದ ರೋಟರಿ ಶಾಲೆ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ವಯಸ್ಸಿನ, ಸಮಯದ ಯಾವುದೇ ನಿರ್ಬಂಧ ಇಲ್ಲದೆ ಎಲ್ಲಾ ಕಾಲಗಳಲ್ಲಿಯೂ ಮಾಡಲು ಸಾಧ್ಯ. ಒಮ್ಮೆ ಉಚಿತವಾಗಿ ಕಲಿತು ಜೀವಮಾನಪೂರ್ತಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕೇವಲ ಶ್ವಾಸ ಗಮನಿಸುವ ಮೂಲಕ ಮನಸ್ಸನ್ನು ಶಾಂತವಾಗಿ ಇರಿಸಲು ಹಾಗೂ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ನೆಮ್ಮದಿಯ ಜೀವನವನ್ನು ನಡೆಸಲು ಸಹಕಾರಿಯಾಗುತ್ತದೆ ಎಂದರು.

ಪ್ರಸ್ತುತ ಜೀವನಶೈಲಿ ಜನರ ಮಾನಸಿಕ ಸ್ವಾಸ್ಥ್ಯವನ್ನು ಕೆಡಿಸಿ ರೋಗಗಳಿಗೆ ಕಾರಣವಾಗಿದೆ. ಕಡಿಮೆ ವಯಸ್ಸಿನಲ್ಲೇ ಅನಾರೋಗ್ಯ ಎದುರಿಸುತ್ತಿದ್ದಾರೆ. ಜನರ, ಸಮಾಜದ ಹಾಗೂ ಪ್ರಪಂಚದ ಆರೋಗ್ಯಕ್ಕಾಗಿ ನಾವೆಲ್ಲರೂ ಧ್ಯಾನಯುಕ್ತ ಜೀವನ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ದೊಡ್ಡವೀರಪ್ಪ ಮಾತನಾಡಿ, ಪೊಲಿಯೋ ರೋಗ ನಿರ್ಮೂಲನೆ ಮಾಡುವ ಉದ್ದೇಶದಿಂದ ಪಲ್ಸ್ ಪೊಲಿಯೋ ಲಸಿಕಾ ಅಭಿಯಾನ ನಡೆಸಲಾಗುತ್ತಿದೆ. ಈ ಕಾರ್ಯದಲ್ಲಿ ರೋಟರಿ ಸಂಸ್ಥೆಯ ಪಾತ್ರ ಮಹತ್ತರವಾಗಿದೆ ಎಂದರು.

      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ  ನೆಪ್ಚೂನ್ ಕಿಶೋರ್ ಮಾತನಾಡಿ, ರೋಟರಿ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವ ಜತೆಯಲ್ಲಿ ಆರೋಗ್ಯ ಅರಿವು ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಹೇಳಿದರು.

       ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಡಾ. ಧನಂಜಯ ರಾಂಪುರ, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ನಿಯೋಜಿತ ಜಿಲ್ಲಾ ಗವರ್ನರ್ ವಸಂತ ಹೋಬಳಿದಾರ್, ಚಂದ್ರಹಾಸ್ ಪಿ ರಾಯ್ಕರ್, ವಿನಾಯಕ ಹೆಗಡೆ, ಗಣೇಶ್, ಅರುಣ್ ದೀಕ್ಷಿತ್, ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ