ನಗರದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ
ಶಿವಮೊಗ್ಗ: ನಗರದ ಆರ್‌ಟಿಓ ಕಚೇರಿ ರಸ್ತೆಯ ಕಲಾ ತರಬೇತಿ ಸಂಸ್ಥೆಯಲ್ಲಿ ಸ್ಥಳೀಯ ಎನ್‌ಜಿಓಗಳ ಪದಾಧಿಕಾರಿಗಳು, ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಸರಳ ಮತ್ತು ಸಾರ್ಥಕವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಳೆಯುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡಿ, ಹೆಚ್ಚಿನ ಸಂಖ್ಯೆಯಲ್ಲಿ ಜನಸೇವಾ ಸಂಸ್ಥೆಗಳು ಬೆಳೆದುಬರಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು. ನಗರದಲ್ಲಿನ ಸ್ವಚ್ಛತೆ, ಆರೋಗ್ಯ ಹಾಗೂ ಪರಿಸರ ಸಂರಕ್ಷಣೆ ಕ್ಷೇತ್ರಗಳಲ್ಲಿ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಸದಸ್ಯರು ಚರ್ಚಿಸಿದರು.
ಯುವಜನರಲ್ಲಿ ಹೆಚ್ಚುತ್ತಿರುವ ನಶೆ ಪ್ರವೃತ್ತಿಯನ್ನು ತಡೆಗಟ್ಟುವ ಬಗ್ಗೆ ತೀವ್ರ ಕಾಳಜಿ ವ್ಯಕ್ತಪಡಿಸಲಾಯಿತು. “ನಶೆ ಮುಕ್ತ ಯುವಜನ ನಿರ್ಮಾಣಕ್ಕಾಗಿ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳು, ವಿಸ್ತೃತ ಪ್ರಚಾರ, ಶಾಲಾ–ಕಾಲೇಜು ಮಟ್ಟದ ಚಟುವಟಿಕೆಗಳು ಅಗತ್ಯ” ಎಂದು ಸಭೆಯಲ್ಲಿ ಮನವಿ ಮುಂದಿಡಲಾಯಿತು.
ಈ ಸಂದರ್ಭದಲ್ಲಿ ಕೆ.ಸಿ. ಬಸವರಾಜ್ (ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ), ನಟರಾಜ್ (ಕಲಾ ಸಂಸ್ಥೆ), ಇಂದೂಧರ್ (ಮಾನಸ ಸಂಸ್ಥೆ), ಈಶ್ವರಪ್ಪ (ಸ್ಥಳೀಯ ಸಂಸ್ಥೆ), ಹನುಮಂತಯ್ಯ (ಆಸರೆ ಸಂಸ್ಥೆ), ಮಂಜುನಾಥ್ (ನೇಸರ ಸಂಸ್ಥೆ), ಸವಿತಾ (ಪೂಜಾ ಚಾರಿಟೇಬಲ್ ಟ್ರಸ್ಟ್), ನವೀನ್ ತಲಾರಿ (ಭೂಮಿ ಸಂಸ್ಥೆ–ಶಿವಮೊಗ್ಗ) ಸೇರಿದಂತೆ ಅನೇಕ ಎನ್‌ಜಿಓಗಳ ಪ್ರತಿನಿಧಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ