ಜೆಸಿಐ ಕಂಪ್ಲಿ ಸೋನಾದಿಂದ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಗೆ ಚಾಲನೆ
ಕಂಪ್ಲಿ.ಮಾ.27:ಪುರಸಭೆ ಮುಂಭಾಗದಲ್ಲಿ ಜೆಸಿಐ ಕಂಪ್ಲಿ ಸೋನಾದಿಂದ ಗುರುವಾರ ಬೇಸಿಗೆಯ ಕುಡಿವ ನೀರಿನ ಅರವಟ್ಟಿಗೆ ಆರಂಭಗೊಂಡಿತು.
ಪೊಲೀಸ್ ಉಪನಿರೀಕ್ಷಕ ಅವಿನಾಶ್ ಕಾಂಬಳೆ ಸಾರ್ವಜನಿಕರಿಗೆ ಮಜ್ಜಿಗೆ ವಿತರಿಸುವ ಮೂಲಕ ನೀರಿನ ಅರವಟ್ಟಿಗೆಗೆ ಚಾಲನೆ ನೀಡಿ, ನೀರು ಅಮೂಲ್ಯವಾಗಿದ್ದು ವ್ಯರ್ಥಮಾಡಬಾರದು. ಶುದ್ಧ ಕುಡಿಯುವ ನೀರನ್ನು ಜನರಿಗೆ ನೀಡುವಲ್ಲಿ ಮುತುವರ್ಜಿವಹಿಸಬೇಕು ಎಂದರು.
ಜೆಸಿಐ ಕಂಪ್ಲಿಸೋನಾದ ಅಧ್ಯಕ್ಷ ಬಿ.ರಸೂಲ್ ಮಾತನಾಡಿ, ಬೇಸಿಗೆ ಬಿಸಿಲಿನ ಪ್ರಖರತೆ ಹೆಚ್ಚುತ್ತಿದ್ದು ದಾರಿಹೋಕರ ಅನುಕೂಲಕ್ಕಾಗಿ ನೀರಿನ ಅರವಟ್ಟಿಗೆ ಆರಂಭಿಸಿದೆ. ಸಾರ್ವಜನಿಕರು ಬೇಸಿಗೆಯಲ್ಲಿ ಬಾಯಾರಿಕೆ ಆಗದಿದ್ದರೂ ಪದೇ ಪದೇ ನೀರು ಅಥವಾ ಹಣ್ಣಿನ ರಸಗಳನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕಿದೆ. ಬೇಸಿಗೆಯಲ್ಲಿ ಮೈಬೆವರಿದಷ್ಟು ಒಳ್ಳೆಯದು. ಆದಷ್ಟು ನೈಸರ್ಗಿಕ ಜ್ಯೂಸ್‌ಗಳನ್ನು ಹೆಚ್ಚಾಗಿ ಸೇವಿಸಿ. ಕಲ್ಲಂಗಡಿ,ಕರಬೂಜ,ಕಿತ್ತಳೆ,ದ್ರಾಕ್ಷಿ, ಅನಾನಾಸ್, ಸೌತೆಕಾಯಿ,ಎಳನೀರು ಸವಿಯುವುದು, ಮನೆಯಲ್ಲಿಯೇ ಸಿದ್ದಪ ಡಿಸಿದ ನಿಂಬೆಹಣ್ಣಿನ ಶರಬತ್ತು. ಮಜ್ಜಿಗೆ ಸೇರಿದಂತೆ ಹಣ್ಣಿನ ಪಾನೀಯಗಳಿಗೆ ಚಿಟಿಕೆ ಉಪ್ಪಿನೊಂದಿಗೆ ಸೇವಿಸುವುದು ಉತ್ತಮ.ಮಾರ್ಚ್,ಏಪ್ರಿಲ್,ಮೇ ತಿಂಗಳ
ಅಂತ್ಯದವರೆಗೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ಪ್ರತಿಯೊಬ್ಬರು 20 ನಿಮಿಷಕ್ಕೊಮ್ಮೆ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು ನೀರಿನ ಅರವಟ್ಟಿಗೆ ಜನತೆ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಪೂರ್ವಾಧ್ಯಕ್ಷರಾದ ಬಿ.ನಿರಂಜನಗುಪ್ತ, ರಾಕೇಶ್ ಬಾಗ್ರೇಚಾ, ಡಿ.ಮಂಜೇಶ್, ಆರ್.ಶಾಂತಿಲಾಲ್ ಬಾಲಾರ್,ಇಂದ್ರಜಿತ್‍ಸಿಂಗ್, ಪದಾಧಿಕಾರಿಗಳಾದ ಅಕ್ಕಿಜಿಲಾನ್, ಇಸ್ಮಾಯಿಲ್, ಬಿ.ಎಚ್.ಎಂ.ಅಮರನಾಥಶಾಸ್ತ್ರಿ, ಪ್ರಮುಖರಾದ ಜಿ.ಸುಧಾಕರ, ಬಸವರಾಜ, ರಮೇಶ್ ಪುರಸಭೆ ಜೆಇ ಮೇಘನಾ, ಮಹಮ್ಮದ್ ಗೌಸ್,ನಾಗರಾಜ ಇತರರಿದ್ದರು.




ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ