"ಜೆಸಿ ಸಿಂಚನಾಗೆ ಎನ್ ಎಸ್ ಎಸ್ ರಾಜ್ಯ ಪ್ರಶಸ್ತಿ "




"ಜೆಸಿ ಸಿಂಚನಾಗೆ ಎನ್ ಎಸ್ ಎಸ್ ರಾಜ್ಯ ಪ್ರಶಸ್ತಿ "


ನಗರದ ಹುಲಿ ಮತ್ತು ಸಿಂಹಧಾಮದಲ್ಲಿ ಶಿಕ್ಷಣಾಧಿಕಾರಿಗಳಾಗಿ ಕಾರ್ಯವಹಿಸುತ್ತಿರುವ ಕುಮಾರಿ ಜೆಸಿ ಸಿಂಚನರವರಿಗೆ ಎನ್ ಎಸ್ ಎಸ್ ರಾಜ್ಯ ಪ್ರಶಸ್ತಿ " ಲಭಿಸಿದೆ ,ರಾಜ್ಯ ಸರ್ಕಾರ,ರಾಜ್ಯ ಎನ್ಎಸ್ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ರಾಜಭವನದಲ್ಲಿ ಆಯೋಜಿಸಿದ್ದ ರಾಜ್ಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು 2022-23 ಸಾಲಿನ ಎನ್ ಎಸ್ ಎಸ್ ಅತ್ಯುತ್ತಮ ಸ್ವಯಂ ಸೇವಕಿ ರಾಜ್ಯ ಪ್ರಶಸ್ತಿಯನ್ನು ಜೆಸಿ ಸಿಂಚನಾರಿಗೆ ನೀಡಿ ಗೌರವಿಸಿರುತ್ತಾರೆ.. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯರಾದ ಡಾ. ಕೆ. ಗೋವಿಂದರಾಜು, ಮಾನ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ರಂದೀಪ್ ಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಚೇತನ್‌ ಆರ್‌, ರಾಜ್ಯ ಎನ್‌ಎಸ್‌ಎಸ್‌ ಅಧಿಕಾರಿಗಳಾದ ಡಾ. ಪ್ರತಾಪ್‌ ಲಿಂಗಯ್ಯ ಮತ್ತು ಎನ್‌ಎಸ್‌ಎಸ್‌ ಪ್ರಾದೇಶಿಕ ನಿರ್ದೇಶಕರಾದ ಕಾರ್ತಿಗೇಯನ್‌ ಡಿ. ಮಾನ್ಯ ಯುವ ಅಧಿಕಾರಿಗಳಾದ ಸಂತೋಷ್ ಇವರು ಸೇರಿದಂತೆ ಗಣ್ಯರ ಉಪಸ್ಥಿತಿಯಲ್ಲಿ ಪ್ರದಾನ ಮಾಡಲಾಗಿದೆ. ಜೆಸಿ ಸಿಂಚನಾರಿಗೆ  ಅವರಿಗೆ ಚಂದ್ರೋದಯ ಪತ್ರಿಕೆ ಬಳಗದಿಂದ, ಅಲ್ ಜೆಸಿಸ್ ಆಫ್ ಶಿವಮೊಗ್ಗ ದಿಂದ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ