ಜೆಸಿಐ ಭಾರತ ವಲಯ 24 ರಿಂದ ಅಧ್ಯಕ್ಷತೆ ಮತ್ತು ಸಂಸದೀಯ ವಿಧಾನ ತರಬೇತಿ


ಅಧ್ಯಕ್ಷತೆ ಮತ್ತು ಸಂಸದೀಯ ವಿಧಾನ , ವಲಯ ಮಟ್ಟದ ತರಬೇತಿಯನ್ನು ಜೆಸಿಐ ಭಾರತ ವಲಯ 24 ಆಯೋಜಿಸಿದ್ದು. ಜೆಸಿಐ ಶಿವಮೊಗ್ಗ ಶರಾವತಿ ಆತಿಥ್ಯ ವಯಿಸುತ್ತಿದೆ. 

ರಾಷ್ಟೀಯ ತರಬೇತುದಾರ ಜೆಸಿಐ ರಾಘವೇಂದ್ರ ಹೊಳ್ಳ, ಸಹ ತರಬೇತುದಾರ ಜೆಸಿ ಮಲ್ಲಿಕಾರ್ಜುನ್ ಅವರು , ವಲಯ ಉಪಾಧ್ಯಕ್ಷ ಜೆಸಿ ತ್ಯಾಗರಾಜನ್ ಅವರ ಅಧ್ಯಕ್ಷತೆಯಲ್ಲಿ ಜೆಸಿಐ ಭಾರತ ವಲಯ 24ರ ಅಧ್ಯಕ್ಷರಾದ ಜೆಸಿಐ ಸೆನೆಟರ್ ಸಿಎ ಗೌರೀಶ್ ಭಾರ್ಗವ ಅವರ ಮಾರ್ಗದರ್ಶನದಲ್ಲಿ, ವಲಯ ನಿರ್ದೇಶಕಿ ತರಬೇತಿ ವಿಭಾಗ ಜೆಸಿ ರಾಜೇಶ್ವರಿ ಹರಿಹರ ಹಾಗೂ ಜೆಸಿಐ ಶಿವಮೊಗ್ಗ ಶರಾವತಿಯ ಅಧ್ಯಕ್ಷರಾದ ಜೆಸಿ ವಿನೋದ್ ಅವರ ಉಪಸ್ಥಿತಿಯಲ್ಲಿ, ತರಬೇತಿ ಕಾರ್ಯಕ್ರಮ ಆಯೋಜಿಸಿದ್ದು. 

ರಾಜ್ಯದ ಬೇರೆ ಬೇರೆ ಊರುಗಳಿಂದ ನೂರಾರು ಸಂಖ್ಯೆಯಲ್ಲಿ ಜೆಸಿಐ ಸದಸ್ಯರು ಆಗಮಿಸುತ್ತಿದ್ದು, ಒಂದು ದಿನದ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆಯಲಿದ್ದಾರೆ. ಈ ತರಬೇತಿಯನ್ನು ಶಿವಮೊಗ್ಗ ನಗರದ ಹೋಟೆಲ್ ರಾಯಲ್ ಆರ್ಕಿಡ್ ನಲ್ಲಿ ಆಯೋಜಿಸಲಾಗಿದೆ. ಭಾರತದ ಯಶಸ್ವಿ ನಾಯಕರಿಗೆ ಈ ತರಬೇತಿ ಅತ್ಯಂತ ಅಮೂಲ್ಯವಾದ ತರಬೇತಿಯಾಗಿದೆ. ಅಧ್ಯಕ್ಷತೆ ಮತ್ತು ಸಂಸದೀಯ ವಿಧಾನ ಪ್ರತಿಯೊಂದು ಸಂಘ ಸಂಸ್ಥೆಯಲ್ಲೂ ಗ್ರಾಮ ಪಂಚಾಯಿತಿಯಿಂದ ಲೋಕಸಭೆಯ ವರೆಗೂ ತಿಳಿಯುವುದು ಕಲಿಯುವುದು ಅವಶ್ಯಕವಾಗಿದೆ. ಜೆಸಿಐ ಭಾರತ ವಲಯ 24 ರ ಅಧ್ಯಕ್ಷರಾದ ಜೆಸಿಐ ಸೆನೆಟರ್ ಸಿಎ ಗೌರೀಶ್ ಭಾರ್ಗವ ಅವರು ತಿಳಿಸಿರುತ್ತಾರೆ .

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ