ಶೆಟ್ಟಿಹಳ್ಳಿ - ಚಿತ್ರಶೆಟ್ಟಿಹಳ್ಳಿ ಗ್ರಾಮಗಳಿಗೆ ಮೂಲಭೂತ ಸೌಕರ್ಯ ವ್ಯವಸ್ಥೆಗಾಗಿ: ಜೆಸಿಐ ನಿಂದ ಮಾನವಿ

     


 ಶಿವಮೊಗ್ಗ ಜಿಲ್ಲೆ,  ಶಿವಮೊಗ್ಗ ತಾಲ್ಲೂಕ್, ಪುರದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ, ಶೆಟ್ಟಿಹಳ್ಳಿ - ಚಿತ್ರಶೆಟ್ಟಿಹಳ್ಳಿ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.

     1961-1962 ಸಮಯದಲ್ಲಿ ಶರಾವತಿ ಮುಳುಗಡೆಯಿಂದ ಬಂದಂತಹ ಶರಾವತಿ ಮುಳುಗಡೆ ಸಂತ್ರಸ್ತರು, ಪ್ರಸ್ತುತ ಮೇಲಿನ ವಿಳಾಸದ ಗ್ರಾಮಸ್ಥರು. 

    ತುರ್ತು ಸಂದರ್ಭದಲ್ಲಿ ಈ ಗ್ರಾಮಕ್ಕೆ ಒಂದು ತುರ್ತು ವಾಹನದ ಅವಶ್ಯಕತೆ ಇದ್ದು, ಒಂದೇ ವಾಹನ ವಿವಿಧ ಕ್ಷೇತ್ರಗಳ ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ರೀತಿ. ಒಂದು ತುರ್ತು ವಾಹನದ 24*7 ಗಂಟೆಗಳ ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ವಾಹನ ಸೌಲಭ್ಯ ತಕ್ಷಣ ವ್ಯವಸ್ಥೆ ಮಾಡಿ.

     ಉದಾಹರಣೆಗೆ ಬೆಳ್ಳಗೆ ಸಂಜೆ ಸಾರಿಗೆ ರೂಪದಲ್ಲಿ, ಆರೋಗ್ಯದ ಸಮಸ್ಯೆ ಅಥವಾ ಅವಘಡ ಸಂಭವಿಸಿ ಜೀವಕ್ಕೆ ಹಾನಿಯಾಗುವ ಸಂದರ್ಬದಲ್ಲಿ ಅಬುಲೆನ್ಸ್ ರೂಪದಲ್ಲಿ, ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ದಳದ ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸುವಂತ, ಒಂದು ಟೆಂಪೋ ಟ್ರಾವೆಲರ್ ವಾಹನವನ್ನು ಅದರ ಚಾಲಕರನ್ನು ತಕ್ಷಣ ನೀಡಿ.

ಶರಾವತಿ ಮುಳುಗಡೆ ಸಂತ್ರಸ್ತರು ಆರು ದಶಕಗಳಿಂದ ಎದುರಿಸುತ್ತಿರುವ , ಮೂಲ ಸೌಕರ್ಯಗಳ ಕೊರತೆಯನ್ನು ತಕ್ಷಣಕ್ಕೆ ನೀಗಿಸಿ ಎಂದು ಜೆಸಿಐ ಶಿವಮೊಗ್ಗ ಶಾಶ್ವತಿ ಅಧ್ಯಕ್ಷರು ಮತ್ತು ತಂಡ ಜಿಲ್ಲಾಧಿಕಾರಿ ಮಾನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಜೆಸಿ ಶಿಲ್ಪ ಸತೀಶ್, ಸಂಸ್ಥಾಪಕ ಅಧ್ಯಕ್ಷರಾದ ಜೆಸಿ ಶಾಂತ ಸುರೇಂದ್ರ ಹಾಗೂ ಎಲ್ಲಾ ಪದಾಧಿಕಾರಿಗಳು ಉಪಸ್ಥಿತಿಯಿದ್ದರು.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ