ಜೆಸಿಐ ನಮ್ಮ ಸವಣೂರು ಘಟಕದ ವತಿಯಿಂದ ೩೦ ವಿಧವಾ ಸಹೋದರಿಯರಿಗೆ ಒಂದು ತಿಂಗಳದ ಉಚಿತ ತರಬೇತಿ ಕಾರ್ಯಾಗಾರ
ಸವಣೂರ: ಮಹಿಳೆಯರಲ್ಲಿ ವಿಧವಾ ಸಹೋದರಿಯರನ್ನು ಆಯ್ಕೆಗೊಳಿಸಿ ಆರ್ಥಿಕತೆ ಹೆಚ್ಚಿಸುವ ಗೃಹ ಉದ್ಯೋಗ ಸೃಷ್ಠಿಸುವಂತಹ ಆರಿವರ್ಕ್ (ಮಗ್ಗಮ್) ತರಬೇತಿಯನ್ನು ಉಚಿತವಾಗಿ ನೀಡುತ್ತಿರುವದು ಶ್ಲಾಘನೀಯ ಕಾರ್ಯವಾಗಿದೆ ಎಂದು ಉಪ ವಿಬಾಗಾಧಿಕಾರಿ ಶುಭಂ ಶುಕ್ಲಾ ತಿಳಿಸಿದರು.ಜೆಸಿಐ ನಮ್ಮ ಸವಣೂರು ಘಟಕದ ವತಿಯಿಂದ ಪಟ್ಟಣದ ಹಾವಣಗಿ ಪ್ಲಾಟ್‌ನಲ್ಲಿರುವ ಪ್ರಜ್ವಲ್ ಸಭಾ ಭವನದಲ್ಲಿ ಕಾಬೀಲ್ ಯೋಜನೆಯಡಿ ೩೦ ವಿಧವಾ ಸಹೋದರಿಯರಿಗೆ ಮಂಗಳವಾರ ಏರ್ಪಡಿಸಿದ್ದ ಒಂದು ತಿಂಗಳದ ಉಚಿತ ಆರಿವರ್ಕ್ (ಮಗ್ಗಮ್) ತರಬೇತಿ ಕಾರ್ಯಗಾರ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕುಟುಂಬ ನಿರ್ವಹಣೆಯೊಂದಿಗೆ ಆರ್ಥಿಕ ಚಿಂತನೆಗೆ ಒಳಗಾಗುತ್ತಿರುವ ವಿಧವಾ ಸಹೋದರರಿಗೆ ಉತ್ತಮ ತರಬೇತಿಯೊಂದಿಗೆ ಅವಕಾಶ ನೀಡುವದು ಅವಶ್ಯವಾಗಿದೆ. ಅಂತಹ ಕಾರ್ಯವನ್ನು ಜೆಸಿಐ ನಮ್ಮ ಸವಣೂರು ಸಂಸ್ಥೆ ಕೈಗೊಳ್ಳುತ್ತಿರುವದು ಸಂತಸ ತಂದಿದೆ ಎಂದರು.
ತಹಸೀಲ್ದಾರ್ ಭರತರಾಜ್ ಕೆ.ಎನ್., ಮಾತನಾಡಿ, ಮಹಿಳೆಯರಲ್ಲಿರುವ ಕಲಾತ್ಮಕ ಚಿಂತನೆಗಳಿಗೆ ಒಂದು ವೇದಿಕೆಯನ್ನು ಕಲ್ಪಿಸುವದು ಅವಶ್ಯವಾಗಿದೆ. ಆರ್ಥಿಕವಾಗಿ ಹಿಂದುಳಿದು ಉನ್ನತ ಮಟ್ಟದ ತರಬೇತಿ ಪಡೆಯಲು ಸಾಧ್ಯವಾಗದವರನ್ನು ಗುರುತ್ತಿಸಿ ಉಚಿತ ತರಬೇತಿಯನ್ನು ನೀಡುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಬಿಜೆಪಿ ಮಂಡಳ ನಿಕಟಪೂರ್ವ ಅಧ್ಯಕ್ಷ ಗಂಗಾಧರ ಬಾಣದ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಶವ ಸಂಸ್ಕಾರ, ಮಕ್ಕಳೊಂದಿಗೆ ಉದ್ಯಾನ ದತ್ತು ಪಡೆದು ನಿರ್ವಹಣೆ ಕೈಗೊಳ್ಳುತ್ತಿರುವ ಜೆಸಿಐ ಸಂಸ್ಥೆ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದರು.
ಜೆಸಿಐ ನಮ್ಮ ಸವಣೂರು ಘಟಕದ ಅಧ್ಯಕ್ಷೆ ಜೆಸಿ ತೇಜಸ್ವಿನಿ ಕೊಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಕಷ್ಟು ಕಷ್ಟದ ಕಾರ್ಯದೊಂದಿಗೆ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ. ಆದ್ದರಿಂದ, ವಿಧವಾ ಸಹೋದರಿಯರು ಸದುಪಯೋಗ ಪಡೆಸಿಕೊಂಡು ಜೀವನದಲ್ಲಿ ಉತ್ತಮ ಆರ್ಥಿಕತೆ ಹೊಂದಲು ಮುಂದಾಗಬೇಕು ಎಂದರು.
ತರಬೇತಿದಾರರಾದ ವೀಣಾ ವೀರನಗೌಡ್ರ ಮಾತನಾಡಿ, ಒಂದು ಬ್ಲೌಸ್‌ಗೆ ಆರಿವರ್ಕ್ (ಮಗ್ಗಮ್) ಕಾರ್ಯ ಕೈಗೊಂಡಲ್ಲಿ ಕಲೆಗೆ ಅನುಗುಣವಾಗಿ ಸುಮಾರು ನಾಲ್ಕು ಸಾವಿರ ಹಣ ಪಡೆಯಬಹುದಾಗಿದೆ. ಪ್ರತ್ಯೇಕವಾಗಿ ತರಬೇತಿ ಸೇರಿದಲ್ಲಿ ತಿಂಗಳಿಗೆ ಸುಮಾರು ೧೫ ಸಾವಿರ ನೀಡಬೇಕಾಗುತ್ತದೆ. ಆದರೆ, ಇಲ್ಲಿ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ ಎಂದರು.
ಸಿಡಿಪಿಒ ಉಮಾ ಕೆ.ಎಸ್., ಮಾತನಾಡಿ, ದೌರ್ಜನ್ಯ ಒಳಗಾಗುವ ಮಹಿಳೆಯರಿಗೆ ಆತ್ಮಸ್ಥೆöÊರ್ಯ ನೀಡುವ ಮೂಲಕ ಗೃಹ ಉದ್ಯೋಗ ತರಬೇತಿ ಅವಶ್ಯವಾಗಿದೆ. ಜೆಸಿಐ ಕಾರ್ಯಕ್ಕೆ ಅವಶ್ಯವಾಗಿರುವ ಸಹಕಾರ ನೀಡಲಾಗುವದು ಎಂದರು.
ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ, ಜೆಸಿಐ ನಮ್ಮ ಸವಣೂರು ಘಟಕದ ಸಂಸ್ಥಾಪಕ ಅಧ್ಯಕ್ಷ ಯೋಗೇಂದ್ರ ಜಂಬಗಿ, ಆರಿವರ್ಕ್ (ಮಗ್ಗಮ್) ತರಬೇತಿ ಯೋಜನಾ ನಿರ್ದೇಶಕಿ ಲಲಿತಾ ಅಪ್ಪಣ್ಣನವರ, ಸೌಹಾರ್ಧ ಬ್ಯಾಂಕ್ ಅಧ್ಯಕ್ಷ ನೂರಅಹ್ಮದ ಸುಂಕದ, ಜೆಸಿಐ ಪದಾಧಿಕಾರಿಗಳಾದ ಪ್ರಕಾಶ ಜಮಾದಾರ, ಬಾಪುಗೌಡ ಕೊಪ್ಪದ, ಶ್ರೀಪಾದಗೌಡ ಪಾಟೀಲ, ಮಧುಕರ ಜಾಲಿಹಾಳ, ಪುಷ್ಪಾ ಬತ್ತಿ, ಬಸನಗೌಡ ಪಾಟೀಲ, ಕೃಷ್ಣ ಭೋವಿ, ಅಕ್ಕನ ಬಳಗದ ಪದಾಧಿಕಾರಿಗಳು ಹಾಗೂ ಇತರರು ಪಾಲ್ಗೊಂಡಿದ್ದರು. ಆನಂದ ಮತ್ತಿಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರ್ವಹಿಸಿದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ