ಅಸ್ಸಾಂ ನ ಕೈಗಾರಿಕ ಸಚಿವ ಬಿಮಲ್ ಬೋರಾ ಮಂಜುನಾಥ್ ಮನೆಗೆ ಭೇಟಿ
ಪೆಹಲ್ಗಾಮ್ ನಲ್ಲಿ ಉಗ್ರರ ಗುಂಡಿಗೆ ಹತ್ಯೆಯಾದ ಶಿವಮೊಗ್ಗದ ವಿಜಯನಗರದಲ್ಲಿರುವ ಮಂಜುನಾಥ್ ಅವರ ಮನೆಗೆ ಅಸ್ಸಾಂ ಬಿಜೆಪಿ ಸರ್ಕಾರದ ಕೈಗಾರಿಕ ಸಚಿವ ಬಿಮಲ್ ಬೋರಾ ಅವರೊಂದಿಗೆ ಅರುಣ್ ಡಿ ಎಸ್ ಭೇಟಿ ನೀಡಿ ಸಾಂತ್ವಾನ ಹೇಳಿದರು.
ಈ ವೇಳೆ ಪತ್ನಿ ಆರ್.ಪಲ್ಲವಿಗೆ ಅಸ್ಸಾಂ ಸರ್ಕಾರ 5 ಲಕ್ಷ ರೂ. ಚೆಕ್ ಮತ್ತು ಸರ್ಕಾರದ ಪತ್ರವನ್ನ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀ.ಜಗದೀಶ್ ಎನ್.ಕೆ ರವರು ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಹರಿಕೃಷ್ಣ ಶ್ರೀ ಮಾಲತೇಶ್ ಅವರು ಹಾಗೂ ಬಿಜೆಪಿ ಜಿಲ್ಲಾ ಖಜಾಂಚಿ ಶ್ರೀ ಎನ್. ಡಿ.ಸತೀಶ್ ಅವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ