40 ವರ್ಷ ಮೇಲ್ಪಟ್ಟ JCI ಸದಸ್ಯರಿಗೆ JAC ಸೇರ್ಪಡೆ ಕಡ್ಡಾಯ; ತಪ್ಪು ಮಾಹಿತಿಯಿಂದ ಸದಸ್ಯರಲ್ಲಿ ಗೊಂದಲ – ಅಧಿಕೃತ ಸುತ್ತೋಲೆ ಸ್ಪಷ್ಟನೆ


 ಶಿವಮೊಗ್ಗ: 40 ವರ್ಷ ವಯಸ್ಸು ಪೂರ್ಣಗೊಳಿಸಿರುವ JCI India ಸಕ್ರಿಯ ಸದಸ್ಯರು (Active Members) ಕಡ್ಡಾಯವಾಗಿ JCI Alumni Club India (JAC) ಗೆ ಸದಸ್ಯತ್ವ ವರ್ಗಾವಣೆ ಮಾಡಿಕೊಳ್ಳಬೇಕು ಎಂದು JCI India ಕಾರ್ಯದರ್ಶಿ ಜನರಲ್ ಬೆನೆಡಿಕ್ಟ್ ಕೆ.ಎಂ. ಹೊರಡಿಸಿರುವ ಅಧಿಕೃತ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲ ಸ್ಥಳೀಯ ಘಟಕಗಳಿಗೆ (Local Organizations) ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

JCI India ನಿಯಮಾವಳಿಗಳ ಪ್ರಕಾರ, ಸಕ್ರಿಯ ಸದಸ್ಯತ್ವದ ಗರಿಷ್ಠ ವಯೋಮಿತಿ 40 ವರ್ಷವಾಗಿದೆ. ಈ ವಯಸ್ಸು ಮೀರಿದ ಸದಸ್ಯರು Active Membership ಮುಂದುವರಿಸಲು ಅವಕಾಶವಿಲ್ಲ. ಆದ್ದರಿಂದ 40 ವರ್ಷ ಮೀರಿರುವ ಸದಸ್ಯರನ್ನು ಅಗತ್ಯ ಶುಲ್ಕ ಹಾಗೂ ನಿಗದಿತ ಪ್ರಕ್ರಿಯೆಯ ಮೂಲಕ JCI Alumni Club India (JAC)ಗೆ ವರ್ಗಾವಣೆ ಮಾಡಬೇಕಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಕೆಲವು ಸ್ಥಳೀಯ ಘಟಕಗಳಲ್ಲಿ ಈ ನಿಯಮದ ಕುರಿತು ಸದಸ್ಯರಿಗೆ ಸಂಪೂರ್ಣ ಮಾಹಿತಿ ತಲುಪದಿರುವುದು ಹಾಗೂ ವಿವಿಧ ರೀತಿಯ ತಪ್ಪು ಮಾಹಿತಿ ಹರಿದಾಡುತ್ತಿರುವ ಕಾರಣ ಅನೇಕ 40 ವರ್ಷ ಮೇಲ್ಪಟ್ಟ ಸದಸ್ಯರಲ್ಲಿ ಗೊಂದಲ ಉಂಟಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕೆಲವು ಸದಸ್ಯರು Active Membership ಮುಂದುವರಿಸಬಹುದು ಎಂಬ ನಂಬಿಕೆಯಲ್ಲಿ ಇದ್ದರೆ, ಇನ್ನೂ ಕೆಲವರಿಗೆ JAC ಸದಸ್ಯತ್ವದ ಪ್ರಯೋಜನಗಳ ಬಗ್ಗೆ ಸರಿಯಾದ ಮಾಹಿತಿ ದೊರೆತಿಲ್ಲ ಎನ್ನಲಾಗಿದೆ.
ಅಧಿಕೃತ ಸುತ್ತೋಲೆಯ ಪ್ರಕಾರ, ಸದಸ್ಯತ್ವದಲ್ಲಿ ಯಾವುದೇ ವ್ಯತ್ಯಯವಾಗದಂತೆ Active Membershipನಿಂದ JACಗೆ ವರ್ಗಾವಣೆಗೊಂಡು ನಿರಂತರವಾಗಿ ಸದಸ್ಯತ್ವವನ್ನು ಮುಂದುವರಿಸಿದ ಸದಸ್ಯರು JCI India Membership Welfare Fund ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗುತ್ತಾರೆ. ನಿಗದಿತ ಎಲ್ಲಾ ಷರತ್ತುಗಳನ್ನು ಪೂರೈಸಿದಲ್ಲಿ 50 ವರ್ಷ ವಯಸ್ಸಿನವರೆಗೆ ಗರಿಷ್ಠ ₹10 ಲಕ್ಷದ ಮರಣ ಪರಿಹಾರ ಸೌಲಭ್ಯ ದೊರೆಯಲಿದೆ.
ಈ ಸೌಲಭ್ಯ ಪಡೆಯಲು ಸದಸ್ಯರು JCI India ಪೋರ್ಟಲ್‌ನಲ್ಲಿ ತಮ್ಮ ಸದಸ್ಯತ್ವದ ವಿವರಗಳನ್ನು ಹಾಗೂ ಆಧಾರ್ ಪರಿಶೀಲನೆಯನ್ನು (Aadhaar Verification) ಪೂರ್ಣಗೊಳಿಸಬೇಕು. ಜೊತೆಗೆ, ₹5,000 ಹಾಗೂ ಅನ್ವಯಿಸುವ GST ಪಾವತಿಸಿ 10 ವರ್ಷಗಳ ಅವಧಿಗೆ ಕಲ್ಯಾಣ ಯೋಜನೆಯ ಹೆಚ್ಚುವರಿ ಲೈಫ್ ಕವರ್ ಪಡೆಯುವ ಅವಕಾಶವೂ ಕಲ್ಪಿಸಲಾಗಿದೆ.
ಯೋಜನೆಯ ನಿಯಮಗಳ ಪ್ರಕಾರ, ಸದಸ್ಯರು 50 ವರ್ಷ ವಯೋಮಿತಿಯೊಳಗಿರಬೇಕು. ಸಹಜ ಮರಣ, ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಸಂಭವಿಸುವ ಮರಣ ಹಾಗೂ ಅಪಘಾತ ಮರಣಗಳಿಗೆ ಯೋಜನೆಯ ವ್ಯಾಪ್ತಿ ಅನ್ವಯವಾಗುತ್ತದೆ. ಆತ್ಮಹತ್ಯೆ ಪ್ರಕರಣಗಳಿಗೆ ಈ ಯೋಜನೆಯಡಿ ಯಾವುದೇ ಪರಿಹಾರ ಲಭ್ಯವಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
40 ವರ್ಷ ಮೇಲ್ಪಟ್ಟ ಸದಸ್ಯರು ಇನ್ನೂ Active Membershipನಲ್ಲಿ ಮುಂದುವರಿದಿದ್ದರೆ, JAC ಸದಸ್ಯತ್ವಕ್ಕೆ ನವೀಕರಿಸಿಕೊಳ್ಳಲು JCI India ಪ್ರತ್ಯೇಕ ಆನ್‌ಲೈನ್ ವ್ಯವಸ್ಥೆಯನ್ನೂ ಕಲ್ಪಿಸಿದೆ.
ಈ ಹಿನ್ನೆಲೆಯಲ್ಲಿ ಸದಸ್ಯರು ವದಂತಿಗಳು ಅಥವಾ ಅನಧಿಕೃತ ಮಾಹಿತಿಯನ್ನು ನಂಬದೆ, ತಮ್ಮ ಸ್ಥಳೀಯ JCI ಘಟಕದ ಅಧ್ಯಕ್ಷರು, ಕಾರ್ಯದರ್ಶಿಗಳು ಅಥವಾ JCI India/JAC ಅಧಿಕಾರಿಗಳಿಂದ ಅಧಿಕೃತ ಮಾಹಿತಿಯನ್ನು ಪಡೆದು ತಮ್ಮ ಸದಸ್ಯತ್ವವನ್ನು ನಿಯಮಾನುಸಾರ ವರ್ಗಾವಣೆ ಮಾಡಿಕೊಳ್ಳುವಂತೆ ಮನವಿ ಮಾಡಲಾಗಿದೆ. ಸದಸ್ಯತ್ವದಲ್ಲಿ ವ್ಯತ್ಯಯ ಉಂಟಾದಲ್ಲಿ ಭವಿಷ್ಯದಲ್ಲಿ ಕಲ್ಯಾಣ ಯೋಜನೆಯ ಸೌಲಭ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸದಸ್ಯರು ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ