JCI ಶಿವಮೊಗ್ಗ ವಿವೇಕ್‌ನಿಂದ ಇಂದು ಮೆಗಾ ರಕ್ತದಾನ ಶಿಬಿರ


 ಶಿವಮೊಗ್ಗ, ಜೂನ್ 30: ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆಯು ಇಂದು (ಜೂನ್ 30) ನಗರದ ಹೋಟೆಲ್ ಶುಭಂ ಮುಂಭಾಗದಲ್ಲಿ ಬೃಹತ್ ಮೆಗಾ ರಕ್ತದಾನ ಶಿಬಿರವನ್ನು ಆಯೋಜಿಸಿದೆ.

"Be a Hero – Donate Blood, Save Lives" ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುತ್ತಿರುವ ಈ ಶಿಬಿರವು ಜೀವ ಉಳಿಸುವ ಮಹತ್ವದ ಸಾಮಾಜಿಕ ಸೇವಾ ಕಾರ್ಯಕ್ರಮವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವಂತೆ ಸಂಘಟಕರು ಮನವಿ ಮಾಡಿದ್ದಾರೆ.

ಈ ಶಿಬಿರವನ್ನು ಹೋಟೆಲ್ ಶುಭಂ, ಸ್ಟೈಲ್ ಡ್ಯಾನ್ಸ್ ಸ್ಟುಡಿಯೋ ಹಾಗೂ ಸಂಜೀವಿನಿ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ. ಪೃಥ್ವಿ ಭಾಗವಹಿಸಲಿದ್ದು, ಜೆಸಿಐ ಸೇನ್ ಗಣೇಶ್ ಪೈ (ZVP – Region C, Zone 24), ಜೆಎಫ್‌ಎಂ ಶಿಲ್ಪಾ ಸತೀಶ್ (ZC Need Blood – Zone 24) ಹಾಗೂ ಜೆಸಿ ವಿಜಯಲಕ್ಷ್ಮಿ ಕಡಂಬ (ಅಧ್ಯಕ್ಷೆ, JCI ಶಿವಮೊಗ್ಗ ವಿವೇಕ್) ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಪ್ರಾಜೆಕ್ಟ್ ಡೈರೆಕ್ಟರ್ ಜೆಸಿ ಜಯಕುಮಾರ್ ಆಗಿದ್ದು, ರಕ್ತದಾನ ಶಿಬಿರದ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆರೋಗ್ಯವಂತ ವ್ಯಕ್ತಿಯೊಬ್ಬರು ನೀಡುವ ಒಂದು ಯೂನಿಟ್ ರಕ್ತವು ಹಲವರ ಜೀವ ಉಳಿಸಲು ನೆರವಾಗುತ್ತದೆ. ಆದ್ದರಿಂದ ಅರ್ಹ ನಾಗರಿಕರು ಈ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಗೆ ಕೈಜೋಡಿಸುವಂತೆ ಸಂಘಟಕರು ಕರೆ ನೀಡಿದ್ದಾರೆ.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ