ಜೆಸಿಐ ಶಿವಮೊಗ್ಗ ಸಹ್ಯಾದ್ರಿಯಿಂದ ‘ನಾನು ಒಬ್ಬ ಜ್ಞಾನಿ’ ತರಬೇತಿ ಕಾರ್ಯಕ್ರಮ
ಶಿವಮೊಗ್ಗ, ಜೂನ್ 25: ಜೆಸಿಐ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ ಯುವಜನರು, ಉದ್ಯೋಗಿಗಳು ಹಾಗೂ ಸಾರ್ವಜನಿಕರ ವ್ಯಕ್ತಿತ್ವ ವಿಕಸನ ಮತ್ತು ವೃತ್ತಿ ಕೌಶಲ್ಯ ಅಭಿವೃದ್ಧಿಗೆ ನೆರವಾಗುವ ಉದ್ದೇಶದಿಂದ “ನಾನು ಒಬ್ಬ ಜ್ಞಾನಿ” ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಜೂನ್ 26ರಂದು (ಶುಕ್ರವಾರ) ನಗರದ ಖಾಸಗಿ ಹೋಟೆಲ್ ನಲ್ಲಿ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ತರಬೇತುದಾರರು ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಮತ್ತು ಅದರ ಬಳಕೆ, ವ್ಯವಹಾರ ಅಭಿವೃದ್ಧಿಯಲ್ಲಿ ಪ್ರಚಾರ ಮತ್ತು ಸಾರ್ವಜನಿಕ ಸಂಪರ್ಕ (PR) ನಿರ್ವಹಣೆ ಹಾಗೂ ಪರಿಣಾಮಕಾರಿ ಸಾರ್ವಜನಿಕ ಭಾಷಣ (Effective Public Speaking) ಕುರಿತಂತೆ ವಿಶೇಷ ತರಬೇತಿ ನೀಡಲಾಗುತ್ತದೆ.
ರಾಷ್ಟ್ರೀಯ ತರಬೇತುದಾರರಾದ ಜೆಸಿ ಕಾರ್ತಿಕ್ ಆರ್. ಸೋನೆಗರ್, ಜೆಸಿ ಕೃಷಾ ಶಾಹಾ ಹಾಗೂ ಜೆಸಿಐ ವಲಯ-24ರ ತರಬೇತುದಾರೆ ಜೆಸಿ ಲಲಿತಾ ಭರತ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿ ಶುಲ್ಕ ರೂ.250 ನಿಗದಿಪಡಿಸಲಾಗಿದ್ದು, ಸೀಮಿತ ಸಂಖ್ಯೆಯ ಆಸನಗಳು ಮಾತ್ರ ಲಭ್ಯವಿವೆ ಎಂದು ಆಯೋಜಕರು ತಿಳಿಸಿದ್ದಾರೆ. ಆಸಕ್ತರು ಜೆಸಿಐ ಮತ್ತು ಯುವ ಜನತೆಗೆ ಪೂರ್ವ ನೋಂದಣಿ ಮಾಡಿಕೊಳ್ಳುವಂತೆ ಮನವಿ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 94497 08967 ಹಾಗೂ 88616 20791 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ